ಬಜಪೆ: ಇಲ್ಲಿನ ಪರಿಸರದಲ್ಲಿ ಕೆಂಗಣ್ಣು ಕಾಯಿಲೆ ಸಮಸ್ಯೆ ಮುಂದುವರಿದಿದ್ದು, ಹಲವು ಮನೆ ಗಳಿಗೆ ಹರಡಿದೆ. ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಂಡಿದೆ. ಇದರಿಂದ ಮಿದುಳು ಜ್ವರ ವಿರುದ್ಧ ಲಸಿಕೆಯ ಸರ್ವೇಗೆ ಮನೆ ಮನೆಗೆ ತೆರಳುವ ಆಶಾ ಕಾರ್ಯಕರ್ತೆಯರಿಗೂ ಸಮಸ್ಯೆ ಎದುರಾಗಿದೆ. ಬಜಪೆ ಪ. ಪಂ.ನ ಪಡೀಲ್ ಪ್ರದೇಶದಲ್ಲಿದ್ದ ಕೆಂಗಣ್ಣು ಕಾಯಿಲೆ ಈಗ ಜರಿನಗರದ ಹಲವು ಮನೆಗಳಲ್ಲಿ ಕಾಣಿಸಿ ಕೊಂಡಿದೆ. ಇತರೆಡೆ ಕೆಲವು ಮನೆಗಳಲ್ಲಿ ಕಂಡು ಬಂದಿರುವ ಈ ಸಮಸ್ಯೆ ಇತರ ಗ್ರಾಮಗಳಿಗೆ ಹರಡಿದೆ. ತಿಂಗಳ ಚುಚ್ಚುಮದ್ದಿಗಾಗಿ ಪ್ರಾಥ ಮಿಕ ಆರೋಗ್ಯ ಕೇಂದ್ರಕ್ಕೆ ಕರೆದು ಕೊಂಡು ಬರುವ ಕೆಂಗಣ್ಣು ಸಮಸ್ಯೆ ಇದ್ದ ತಾಯಿ ಹಾಗೂ ಮಕ್ಕಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಒಂದು ವಾರ ಬಿಟ್ಟು ಬರಲು ಸೂಚನೆ ನೀಡಲಾಗಿದೆ. ಕೆಲವೆಡೆ ಮನೆಯ ಎಲ್ಲರಿಗೂ ಕೆಂಗಣ್ಣು ಸಮಸ್ಯೆ ಇದ್ದರೂ ಅವರು ಖರೀದಿಗಾಗಿ ಪೇಟೆಗೆ ಬರುವ ಕಾರಣ ಕೆಂಗಣ್ಣು ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ. ಡಿ.5ರಿಂದ ಮಕ್ಕಳಿಗೆ ಮಿದುಳು ಜ್ವರ ವಿರುದ್ಧ ಲಸಿಕೆ ಕಾರ್ಯಕ್ರಮ ಆರಂಭವಾಗಲಿದೆ.
Author: main-admin
ಪುತ್ತೂರು : ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಸ್ಮರಣಾರ್ಥವಾಗಿ ದಕ್ಷಿಣ ಕನ್ನಡ, ಉಡುಪಿ ಕ್ಷೇತ್ರದ 14 ಮಂದಿ ಹಿಂದುಳಿದ ವರ್ಗಗಳ ಕುಟುಂಬಗಳಿಗೆ ಮನೆ ನಿರ್ಮಿಸಲಾಗುತ್ತಿದೆ. ದುಷ್ಕರ್ಮಿಗಳಿಂದ ಹತ್ಯೆಗೀಡಾದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಕುಟುಂಬದವರಿಗೆ ದಕ್ಷಿಣ ಕನ್ನಡ, ಉಡುಪಿ ಬಿಲ್ಲವ ಪ್ರಮುಖರು 45 ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುತ್ತೇವೆ ಎಂದು ಹೇಳಿದ್ದು, ಇದೀಗ ಅವಕಾಶ ಇಲ್ಲದ ನಿಟ್ಟಿನಲ್ಲಿಇದೇ ಹಣದಿಂದ ಪ್ರವೀಣ್ ನೆಟ್ಟಾರು ಸ್ಮರಣಾರ್ಥ ದಕ್ಷಿಣ ಕನ್ನಡ, ಉಡುಪಿ ವಿಧಾನಸಭೆ ಕ್ಷೇತ್ರದ 14 ಮಂದಿ ಹಿಂದುಳಿದ ವರ್ಗಗಳ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಬಿಲ್ಲವ ಸಮಾಜದ ಮುಖಂಡ ಜಯಂತ ನಡುಬೈಲು ತಿಳಿಸಿದ್ದಾರೆ. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರು ಅವರ ಶ್ರದ್ಧಾಂಜಲಿ ಸಭೆಯಲ್ಲಿಅವರ ಕುಟುಂಬದವರಿಗೆ ಮನೆ ನಿರ್ಮಿಸುವ ಭರವಸೆ ನೀಡಲಾಗಿತ್ತು. ಅಲ್ಲದೆ ಮನೆಯ 3ಡಿ ವಿನ್ಯಾಸದ ಜತೆ ಮನೆ ನಿರ್ಮಾಣಕ್ಕೆ ಏಳು ಲಕ್ಷ ರೂ. ಮುಂಗಡ ಹಣವನ್ನು…
ಮಂಗಳೂರು : ಇಡೀ ದೇಶವೆ ತಿರುಗಿ ನೋಡುವಂತೆ ಮಾಡಿದ ಕಾಂತಾರ ಸಿನೆಮಾ ವಿರುದ್ದ ಇದೀಗ ಆಕ್ರೋಶ ಕೇಳಿ ಬಂದಿದ್ದು, ದೈವಾರಾಧನೆಯಲ್ಲಿ ತೊಡಗಿರುವ ಪರಿಶಿಷ್ಟ ಜಾತಿಗೆ ಸೇರಿದ ಸಮುದಾಯವನ್ನು ಕಾಂತಾರದಲ್ಲಿ ಕೀಳಾಗಿ ತೋರಿಸಲಾಗಿದೆ ಎಂದುಸಮತಾ ಸೈನಿಕ ದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಲಾಕ್ಷ ಆಕ್ಷೇಪ ವ್ಯಕ್ತಪಡಿಸಿದರು. ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂತಾರ ಚಲನಚಿತ್ರದ ಕೆಲವು ದೃಶ್ಯಗಳಲ್ಲಿ ಕೀಳಾಗಿ ಬಿಂಬಿಸಲಾಗಿದೆ. ದೈವಾರಾಧನೆಯನ್ನು ವಿಕೃತಗೊಳಿಸಿ ಹಿಂಸೆಯನ್ನು ಪ್ರಚೋದಿಸಲಾಗಿದೆ ಈ ಹಿನ್ನಲೆ ಈ ಸಿನಿಮಾದಲ್ಲಿರುವ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಬೇಕು. ಅಲ್ಲಿಯವರೆಗೆ ಚಿತ್ರ ಪ್ರದರ್ಶನವನ್ನು ಸ್ಥಗಿತಗೊಳಿಸಬೇಕು’ ಎಂದು ಒತ್ತಾಯಿಸಿದರು. ದೈವಾರಾಧನೆಯಲ್ಲಿ ಮಾನವ ವಿರೋಧಿ ಹಿಂಸೆಗೆ ಅವಕಾಶ ಇಲ್ಲ. ಈ ಚಿತ್ರದ ಕೆಲವು ದೃಶ್ಯಗಳಿಂದ ದೈವನಿಂದನೆ ಆಗಿದೆ. ಆದರೂ ಈ ಸಿನಿಮಾಕ್ಕೆ ಚಲನಚಿತ್ರ ಸೆನ್ಸಾರ್ ಮಂಡಳಿಯು ಯು/ಎ ಪ್ರಮಾಣಪತ್ರವನ್ನು ನೀಡಿದೆ. ಈ ಕ್ರಮ ಸರಿಯಲ್ಲ’ ಎಂದರು. ‘ಅಸ್ಪೃಶ್ಯತಾ ಆಚರಣೆ ಮತ್ತು ಪರಿಶಿಷ್ಟ ಸಮುದಾಯಗಳ ಅವಮಾನ, ದೌರ್ಜನ್ಯಗಳು ಶಿಕ್ಷಾರ್ಹ ಅಪರಾಧ. ಕಾಂತಾರ ಸಿನಿಮಾದಲ್ಲಿ ಇಂತಹ ಕೆಲವು ದೃಶ್ಯಗಳು ಕಂಡು…
ಉಡುಪಿ: ಗೂಡ್ಸ್ ಟೆಂಪೋ ರಿಕ್ಷಾವೊಂದು ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿ ನಗರದ ಶಿರಿಬೀಡು ಎಂಬಲ್ಲಿ ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಗೂಡ್ಸ್ ರಿಕ್ಷಾ ಚಾಲಕ ಸಹಿತ ಇಬ್ಬರನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಕರಾವಳಿ ಬೈಪಾಸ್ ಕಡೆಯಿಂದ ಉಡುಪಿ ಕಡೆಗೆ ಆಗಮಿಸುತ್ತಿದ್ದ ಬಸ್ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಗೂಡ್ಸ್ ಟೆಂಪೋ ರಿಕ್ಷಾ ಡಿಕ್ಕಿ ಹೊಡೆಯಿತೆನ್ನಲಾಗಿದೆ. ಅಪಘಾತದಿಂದ ಟೆಂಪೋ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದೆ ಸ್ಥಳಕ್ಕೆ ಉಡುಪಿ ನಗರ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿದ್ದಾರೆ.
ಬಂಟ್ವಾಳ: ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದ ವಾಮದಪದವು ಎಂಬಲ್ಲಿ ಬುಧವಾರ ರಾತ್ರಿ ನಡೆದಿದೆ. ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಕೌಡೋಡಿ ನಿವಾಸಿ ಕರಿಯ ಎಂಬವರ ಮಗ ಲೋಕೇಶ್ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಕೂಲಿ ಕೆಲಸ ಮಾಡುತ್ತಿದ್ದು ಮದ್ಯ ಸೇವನೆ ಅಭ್ಯಾಸ ಹೊಂದಿದ್ದ. ನಿನ್ನೆ ರಾತ್ರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪುಂಜಾಲಕಟ್ಟೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಡಬಿದಿರೆ: ಮದುಕನೊಬ್ಬ ನೀಡುತ್ತಿದ್ದ ಲೈಂಗಿಕ ಕಿರುಕುಳಕ್ಕೆ ಮನನೊಂದು ವಿಧ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶ್ರೀಧರ ಪುರಾಣಿಕ್‌ನನ್ನು (62) ಎಂದು ಗುರುತಿಸಲಾಗಿದೆ. ಮೂಡಬಿದಿರೆ ಖಾಸಗಿ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಗೆ ಮಂಗಳವಾರ ತರಗತಿಯಲ್ಲಿ ಕಿವಿನೋವು ಕಾಣಿಸಿಕೊಂಡಿತ್ತು. ಹೀಗಾಗಿ, ಕಾಲೇಜಿನ ಪ್ರಾಂಶುಪಾಲರು ಆಕೆಯನ್ನು ಮನೆಗೆ ಕಳುಹಿಸಿದ್ದರು. ವಿದ್ಯಾರ್ಥಿನಿಯನ್ನು ಮನೆಗೆ ತಲುಪಿಸುವಂತೆ ಪರಿಚಿತರಾದ ಕಾಲೇಜಿನ ನಿವೃತ್ತ ಕ್ಲರ್ಕ್ ಶ್ರೀಧರ ಪುರಾಣಿಕ್ ಎಂಬುವರನ್ನು ಜೊತೆಗೆ ಕಳುಹಿಸಿದ್ದರು.ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ವಿದ್ಯಾರ್ಥಿನಿಗೆ ಶ್ರೀಧರ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಇದರಿಂದ ಮಾನಸಿಕವಾಗಿ ನೊಂದ ವಿದ್ಯಾರ್ಥಿನಿ, ತನ್ನ ಆತ್ಮಹತ್ಯೆಗೆ ಶ್ರೀಧರ ಪುರಾಣಿಕ್ ಅವರೇ ಕಾರಣ ಎಂದು ತಿಳಿಸಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಡೆತ್‌ನೋಟ್‌ನಲ್ಲಿ ಬರೆದು ಮನೆಯ ಪಕ್ಕದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ಪಣಂಬೂರು ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಈಗಾಗಲೇ ಆರೋಪಿ ಶ್ರೀಧರ…
ಮಂಗಳೂರು: ನಗರದ ಪಿಡಬ್ಲ್ಯೂಡಿ ಮಾಜಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಎಇ) ಎನ್.ನರಸಿಂಹರಾಜು ಅವರ ಮೇಲಿನ ಅಕ್ರಮ ಆಸ್ತಿ ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾಗಿದೆ. ಮೂರನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯವು ನರಸಿಂಹರಾಜುಗೆ ಮೂರು ವರ್ಷ ಆರು ತಿಂಗಳ ಜೈಲು ಶಿಕ್ಷೆ ಮತ್ತು 25 ಲಕ್ಷ ರೂ ದಂಡ ವಿಧಿಸಿದೆ. ಬೆಂಗಳೂರಿನ ದೇವನಹಳ್ಳಿಯ ಮದ್ದಯ್ಯ ರಸ್ತೆಯ ನಿವಾಸಿ ನರಸಿಂಹರಾಜು ಎಂಬುವರ ವಿರುದ್ಧ 2010ರಲ್ಲಿ ನಗರದ ಲೋಕಾಯುಕ್ತದಲ್ಲಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ ಬಿ ಜಕಾತಿ ಅವರು ನವೆಂಬರ್ 10 ರಂದು ತೀರ್ಪು ಪ್ರಕಟಿಸಿದರು. ಆರೋಪಿಯು ದಂಡವನ್ನು ಪಾವತಿಸಲು ವಿಫಲವಾದರೆ, ಅವರು ಆರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಡಿವೈಎಸ್ಪಿ ಸದಾನಂದ ಎಂ ವರ್ಣೇಕರ್ ದೂರುದಾರರು. ಡಿವೈಎಸ್ಪಿ ವಿಟ್ಲದಾಸ್ ಪೈ ತನಿಖೆ ನಡೆಸಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಲೋಕಾಯುಕ್ತ ವಿಶೇಷ ಸರಕಾರಿ ಅಭಿಯೋಜಕ ರವೀಂದ್ರ ಮನ್ನಿಪ್ಪಾಡಿ ವಾದ ಮಂಡಿಸಿದ್ದರು. ಅಪರಾಧಿ…
ಬೆಂಗಳೂರು : 2022-23ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕರ್ತವ್ಯದ ಮೇಲಿರುವಾಗ ಮೃತಪಟ್ಟಲ್ಲಿ ಮೃತರ ಕುಟುಂಬದವರಿಗೆ ವಿಶೇಷ ಗುಂಪು ವಿಮಾ ಮೊತ್ತ ರೂ.20.00 ಲಕ್ಷಗಳನ್ನು ವಿಮಾ ಕಂಪನಿಯ ಮೂಲಕ ಪಡೆಯಲು ರಾಜ್ಯ ಸರ್ಕಾರ ಮಂಜೂರಾತಿ ಆದೇಶ ಹೊರಡಿಸಿದೆ. ಸರ್ಕಾರದ ಆದೇಶದಲ್ಲಿ 2022-23ನೇ ಸಾಲಿನಲ್ಲಿ ಪೊಲೀಸ್ ಇಲಾಖೆಯ ಅನುಯಾಯಿ (FOLLOWER) ಪೊಲೀಸ್ ಪೇದೆ (PC) ಮುಖ್ಯ ಪೇದೆ (H.C), ಸಹಾಯಕ ಪೊಲೀಸ್ ಸಬ್-ಇನ್ಸ್ಪೆಕ್ಟರ್ (ASI), ಪೊಲೀಸ್ ಸಬ್-ಇನ್ಸ್ಪೆಕ್ಟರ್ (PSI), ಪೊಲೀಸ್ ಇನ್ಸಪೆಕ್ಟರ್ (PI), ಹುದ್ದೆಯವರಿಗೆ ಒಟ್ಟು 93,013 ಅಧಿಕಾರಿ ಮತ್ತು ಸಿಬ್ಬಂದಿಗಳು ಕರ್ತವ್ಯದ ಮೇಲಿರುವಾಗ (24X7) ಆಕಸ್ಮಿಕ/ಅಪಘಾತದಲ್ಲಿ ಮೃತಪಟ್ಟಲ್ಲಿ ಮೃತರ ಕುಟುಂಬದವರಿಗೆ ವಿಶೇಷ ಗುಂಪು ವಿಮಾ ಮೊತ್ತ ರೂ.20.00 ಲಕ್ಷಗಳನ್ನು ವಿಮಾ ಕಂಪನಿಯ ಮೂಲಕ ಪಡೆಯಲು ಮಂಜೂರಾತಿ ಆದೇಶ ಹೊರಡಿಸಿದೆ. ಅಧಿಕಾರಿಗಳು ಮೃತರ ಕುಟುಂಬದವರಿಗೆ (ಕಾನೂನುಬದ್ಧ ವಾರಸುದಾರರಿಗೆ) ವಿಮಾ ಪರಿಹಾರ ಮೊತ್ತ ರೂ.20.00 ಲಕ್ಷಗಳನ್ನು ಮಂಜೂರು ಮಾಡುವ ಸಂಬಂಧ, ವಿವರವಾದ ವರದಿಯೊಂದಿಗೆ 15 ದಿನಗಳ ಒಳಗೆ ಕೈಂ ಫಾರಂ ಅನ್ನು…
ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದಡಿಯಲ್ಲಿ ಬಸ್ ಕ್ಲೀನರ್ ನನ್ನು ಉಳ್ಳಾಲ ಠಾಣಾ ಪೊಲೀಸರು ಗುರುವಾರ ಬೆಳಗ್ಗೆ ಬಂಧಿಸಿದ್ದಾರೆ. ಬಸ್ ಕ್ಲೀನರ್ ಮುಹಮ್ಮದ್ ಇಮ್ರಾನ್(26) ಬಂಧಿತ ಆರೋಪಿ. ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕರ್ತವ್ಯದಲ್ಲಿರುವ ವೈದ್ಯೆಯೊಬ್ಬರು ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಬಸ್ ಗುರುವಾರ ಮುಂಜಾನೆ ಉಳ್ಳಾಲ ಠಾಣಾ ವ್ಯಾಪ್ತಿಗೆ ತಲುಪಿದಾಗ ಬಸ್ ಕ್ಲೀನರ್ ಮುಹಮ್ಮದ್ ಇಮ್ರಾನ್ ತಾನು ಧರಿಸಿದ್ದ ಪ್ಯಾಂಟ್ ನ ಜಿಪ್ ತೆಗೆದು ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ವೈದ್ಯೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಉಳ್ಳಾಲ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪುತ್ತೂರು : ಪುತ್ತೂರಿನ ವಸತಿ ಶಾಲೆಯೊಂದರಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದಾರೆ. ಇಬ್ಬರೂ 10ನೇ ತರಗತಿಯಲ್ಲಿ ಓದುತ್ತಿದ್ದ ಮೈಸೂರಿನವರಾದ ತಿಪ್ಪೇಶ್ ಮತ್ತು ಅಭೀಷೆಕ್ ನವೆಂಬರ್ 7ರ ಸಂಜೆಯಿಂದ ನಾಪತ್ತೆಯಾಗಿದ್ದಾರೆ.ಶಾಲೆ ಮುಗಿಸಿದ ಇಬ್ಬರೂ ಮತ್ತೆ ತಮ್ಮ ಹಾಸ್ಟೆಲ್‌ಗೆ ಬಾರದೆ ನಾಪತ್ತೆಯಾಗಿದ್ದು, ಈ ಬಗ್ಗೆ ಶಾಲಾ ಆಡಳಿತ ಸಮಿತಿ ಪೊಲೀಸರಿಗೆ ದೂರು ನೀಡಿದೆ.