Author: main-admin

ಬೆಂಗಳೂರು: ಐಎ ಎಸ್ ಹಾಗೂ ಐಪಿಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಯುವಕನೊಬ್ಬ ಉದ್ಯಮಿಯನ್ನು ಕಿಡ್ನ್ಯಾಪ್ ಮಾಡಿ ಸಿಕ್ಕಿ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಉದ್ಯಮಿ ಚೇತನ್ ಷಾ ಎಂಬುವವರನ್ನು ಕಿಡ್ನ್ಯಾಪ್ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಸಚಿನ್ ಹಾಗೂ ಗೌರಿ ಶಂಕರ್ ಬಂಧಿತ ಆರೋಪಿಗಳು. ಉದ್ಯಮಿ ಚೇತನ್ ಷಾ, ತನ್ನ ಮಗಳಿಗೆ ಬಿಬಿಎ ಸೀಟ್ ಕೊಡಿಸಲು ಓಡಾಡುತ್ತಿದ್ದರು. ಈ ವೇಳೆ ಸಚಿನ್ ಎಂಬಾತ ಚೇತನ್ ಷಾ ಸಂಪರ್ಕಕ್ಕೆ ಬಂದಿದ್ದ. ತಾನು ಬಿವಿಎ ಸೀಟ್ ಕೊಡಿಸುವುದಾಗಿ ಹೇಳಿ ಹಣ ಕೇಳಿದ್ದ. ಇದೇ ವೇಳೆ ಚೇತನ್ ಷಾ ಅವರ ಮಗಳಿಗೆ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಕಾಲೇಜು ನಿಯಮದಂತೆ ಸೀಟ್ ಸಿಕ್ಕಿತ್ತು. ಆದರೆ ಸಚಿನ್ ಆ ಸೀಟ್ ತಾನು ಕೊಡಿಸಿದ್ದು ಹಣ ನೀಡುವಂತೆ ಡಿಮ್ಯಾಂಡ್ ಮಾಡಿದ್ದ. ಹಣ ನೀಡಲು ಚೇತನ್ ಷಾ ನಿರಾಕರಿಸಿದ್ದರು. ಇದರಿಂದ ಉದ್ಯಮಿ ಚೇತನ್ ಷಾ ಕಿಡ್ನ್ಯಾಪ್ ಗೆ ಸಚಿನ್ ಸಂಚು ರೂಪಿಸಿ, ತನ್ನ…

Read More

ಕುಂದಾಪುರ: ಎಟಿಎಂ ಕೇಂದ್ರದಿಂದ ಹಣ ತೆಗೆಯುಲು ಸಹಾಯ ಮಾಡುವ ನೆಪದಲ್ಲಿ ಗ್ರಾಹಕರ ಕಣ್ಣು ತಪ್ಪಿಸಿ ಅವರ ಎಟಿಎಂ ಕಾರ್ಡ್ ಬಳಸಿ ಹಣ ಎಗರಿಸುತ್ತಿದ್ದ ಇಬ್ಬರು ಹರಿಯಾಣ ಮೂಲದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಮೂರು ಪ್ರಕರಣಗಳು ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ದೂರು ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರ ತಂಡ ಹರಿಯಾಣ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಹರಿಯಾಣ ರಾಜ್ಯ ಬರ್ಸಿ ಜಟಾನ್‌ನ ಸಂದೀಪ್ (36), ಹರಿಯಾಣ ಔರಂಗನಗರದ ರವಿ (27) ಬಂಧಿತ ಆರೋಪಿಗಳಾಗಿದ್ದು ಇವರಿಂದ 21 ಸಾವಿರ ನಗದು, 217 ಎಟಿಎಂ ಕಾರ್ಡ್, ಪಿಒಎಸ್ ಯಂತ್ರ, 2 ಮೊಬೈಲ್ ಹಾಗೂ ಒಂದು ಮೋಟಾರ್ ಸೈಕಲ್‌ನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಮೇಲೆ ವಿವಿಧ ರಾಜ್ಯಗಳಲ್ಲಿ 20ಕ್ಕೂ ಅಧಿಕ ಪ್ರಕರಣ ದಾಖಲಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ.ಇವರು ಶಿರೂರು ಭಾಗದ ಎರಡು ಎಟಿಎಂ ಹಾಗೂ ಬೈಂದೂರಿನ ಒಂದು ಎಟಿಎಂ ಕೇಂದ್ರದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ನೈಜ ಗ್ರಾಹಕರಿಗೆ ಹಣ ವಿಥ್ ಡ್ರಾ ಮಾಡಲು…

Read More

ಬೆಳ್ತಂಗಡಿ : ಪದವಿ ವಿಧ್ಯಾರ್ಥಿಯೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮಡಂತ್ಯಾರು ಎಂಬಲ್ಲಿ ನಡೆದಿದೆ. ಮಡಂತ್ಯಾರು ಮಾರಿಗುಡಿ ಹೊಸಮನೆ ನಿವಾಸಿ ಪ್ರಶಾಂತ್ ಬಾಳಿಗ ಎಂಬವರ ಪುತ್ರ ಪ್ರತೀಕ್ ಬಾಳಿಗ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ಪ್ರಥಮ ಬಿಎ ವಿದ್ಯಾರ್ಥಿಯಾಗಿದ್ದು, ಪ್ರಥಮ ಸೆಮಿಸ್ಟರ್ ಪರೀಕ್ಷೆ ಬರೆಯುತ್ತಿದ್ದು ಗುರುವಾರ ಪರೀಕ್ಷೆ ಇಲ್ಲದ ಕಾರಣ ಮನೆಯಲ್ಲೇ ಇದ್ದ ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು : ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳಗಳ ಬಯಲಾಟದ ಸಂದರ್ಭದಲ್ಲಿ ಶಬ್ದಮಾಲಿನ್ಯ ನಿಯಮಾವಳಿ, ರಾಜ್ಯ ಹೈಕೋರ್ಟ್‌ ಆದೇಶದ ಅಂಶಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಎಲ್ಲಾ ನಿಯಮಗಳ ಅನುಸರಣೆಯು ದೇವಸ್ಥಾನ ಆಡಳಿತ ಮಂಡಳಿಯ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಯವರ 15-11-2022ರ ಆದೇಶದಲ್ಲಿ ಯಕ್ಷಗಾನವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ 10 ಗಂಟೆಯಿಂದ ರಾತ್ರಿ 12.30ರವರೆಗೆ ವಿಸ್ತರಿಸಲಾಗಿತ್ತು. ಆದರೆ ಈ ಅದೇಶವನ್ನು ಪ್ರಶ್ನಿಸಿ ಕೃಷ್ಣಕುಮಾರ್‌ ಎಂಬವರು ಹೈಕೋರ್ಟ್‌ ಮೊರೆಹೋಗಿದ್ದರು. ಆ ಕುರಿತ ಹೈಕೋರ್ಟ್‌ ನ 28-11-2023 ಆದೇಶದಲ್ಲಿ ಯಕ್ಷಗಾನ ಮೇಳದ ಪ್ರದರ್ಶನ ಅವಧಿ ಬಗ್ಗೆ ಅರ್ಜಿದಾರರು ಸೂಕ್ತ ಪ್ರಸ್ತಾವನೆ ವಹಿಸಿ ಜಿಲ್ಲಾಧಿಕಾರಿ ಅಗತ್ಯ ಕ್ರಮ ವಹಿಸಬೇಕು ಎಂದು ಆದೇಶಿಸಿದ್ದರೂ ಯಾವುದೇ ಪ್ರಸ್ತಾವನೆ ಸಲ್ಲಿಸಿಲ್ಲ. ಅಲ್ಲದೆ ಕೋವಿಡ್‌ 19ರ ನಿರ್ದಿಷ್ಟ ನಿಬಂಧನೆ ಅಥವಾ ಕೋವಿಡ್‌ 19ರ ಪೂರ್ವ ಪದ್ಧತಿ ಯಾವುದು ಎಂಬುದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದೂ ಆದೇಶದಲ್ಲಿ ಪ್ರಸ್ತಾಪಿಸಲಾಗಿದೆ. ಇದೇ ಜನವರಿ…

Read More

SSLC’ ವಿದ್ಯಾರ್ಥಿನಿಯರ ಜೊತೆ ಶಾಲೆಯ ಮುಖ್ಯ ಶಿಕ್ಷಕ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿಬಂದಿದ್ದು, ಇದೀಗ ಅಮಾನತು ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಅನಪುರ ಶಾಲೆಯ ಮುಖ್ಯೋಪಾಧ್ಯಾಯನನ್ನು ಅಮಾನತು ಮಾಡಲಾಗಿದೆ. 10ನೇ ತರಗತಿ ವಿದ್ಯಾರ್ಥಿನಿಯರ ಜತೆ ಅನುಚಿತ ವರ್ತನೆ ಆರೋಪ ಮೇಲೆ ಶಾಲೆಯ ಮುಖ್ಯ ಶಿಕ್ಷಕ ಹನುಮೇಗೌಡ ಅವರನ್ನ ಅಮಾನತು ಮಾಡಿ ಯಾದಗಿರಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೊರಡಿಸಿದ್ದಾರೆ. ಶಿಕ್ಷಕನ ಅನುಚಿತ ವರ್ತನೆಗೆ ಬೇಸತ್ತು ವಿದ್ಯಾರ್ಥಿನಿಯರು ತಮ್ಮ ಪೋಷಕರ ಬಳಿ ಹೇಳಿಕೊಂಡಿದ್ದರು . ಪೋಷಕರು ಹಾಗೂ ಮಕ್ಕಳ ದೂರಿನ ಮೇರೆಗೆ ಹನುಮೇಗೌಡ ಅವರನ್ನ ಅಮಾನತು ಮಾಡಿ ಯಾದಗಿರಿ ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ಹೊರಡಿಸಿದ್ದಾರೆ.

Read More

ಬಂಟ್ವಾಳ: ಬಿಸಿರೋಡಿನ ಬಸ್ ನಿಲ್ದಾಣದಲ್ಲಿ ನಿರಂತರವಾಗಿ ಪಿಕ್ ಪಾಕೆಟ್ ನಡೆಯುತ್ತಿದ್ದು, ಮಹಿಳೆಯೋರ್ವರ ಬ್ಯಾಗ್ ನಿಂದ 4 ಸಾವಿರ ರೂ. ನಗದು ಕಳವು ಮಾಡಿದ ಘಟನೆ ಡಿ.೧೦ ರಂದು ನಡೆದಿದೆ. ಪ್ರೇಮ ಅವರು ಬೊಳಿಯಾರಿನಿಂದ ಧರ್ಮಸ್ಥಳ ಕಡೆಗೆ ಹೊರಟಿದ್ದರು. ಬೋಳಿಯಾರಿನಿಂದ ಬಿಸಿರೋಡಿಗೆ ಬಂದಿಳಿದು ಬಳಿಕ ಕೈಯಲ್ಲಿ ಮಗುವನ್ನು ಹಿಡಿದುಕೊಂಡುಧರ್ಮಸ್ಥಳ ಬಸ್ ಗೆ ಹತ್ತುವ ವೇಳೆ ಬ್ಯಾಗ್ ನಿಂದ ಹಣವನ್ನು ಕಳವು ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಇನ್ನು ಈ ಬಗ್ಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಿ.ಸಿ.ಕ್ಯಾಮರಾ ಇಲ್ಲ:ಕಳೆದ ವಾರ ಈ ಬಗ್ಗೆ ವಿಸ್ತ್ರತವಾದ ವರದಿ ಮಾಡಲಾಗಿದೆಯಾದರೂ ಪೋಲಿಸ್ ಇಲಾಖೆ ಮಾತ್ರ ಯಾವುದೇ ಸ್ಪಂದನೆ ನೀಡಿಲ್ಲ, ಕಳ್ಳತನ, ಪಿಕ್ ಪಾಕೆಟ್ ನಿತ್ಯ ನಡೆಯುತ್ತಿದೆ.ಕಳ್ಳತನದ ಬಗ್ಗೆ ಪೋಲೀಸರು ಸೂಕ್ತವಾದ ತನಿಖೆ ನಡೆಸದೆ ದೂಳು ಹಿಡಿಯುವಾಗೆ ಮಾಡಿದ್ದು ಕಳ್ಳರಿಗೆ ಮತ್ತೆ ಮತ್ತೆ ಕಳವು ಮಾಡುವುದಕ್ಕೆ ಅನುಕೂಲವಾಗುವಂತೆ ಮಾಡಿದೆ.ಕಳ್ಳತನದ ಬಗ್ಗೆ ಮಾಹಿತಿ ಪಡೆಯಲು ಬಸ್ ನಿಲ್ದಾಣದಲ್ಲಿ ಪೋಲೀಸ್ ಇಲಾಖೆಯ ಸಿ.ಸಿ.ಕ್ಯಾಮರಾ ಇಲ್ಲವಂತೆ, ಈ ಬಗ್ಗೆ ಪೋಲೀಸರೇ ದೂರು…

Read More

ಬಂಟ್ವಾಳ: ನಾಲ್ವರು ಮುಸುಕುಧಾರಿಗಳು ಮನೆಯೊಂದರಲ್ಲಿ ತಾಯಿ ಮಗಳಿಗೆ ಚೂರಿ ತೋರಿಸಿ ಲಕ್ಷಾಂತರ ರೂ ನಗನಗದನ್ನು ದೋಚಿ ಪರಾರಿಯಾದ ಘಟನೆ ವಗ್ಗದಲ್ಲಿ ನಡೆದಿದೆ. ವಗ್ಗ ಸಮೀಪದ ಅಂಚಿಕಟ್ಟೆ ಸಾಲುಮರ ತಿಮ್ಮಕ್ಕನ ಟ್ರೀ ಪಾರ್ಕ್ ಮುಂಭಾಗದಲ್ಲಿರುವ ಪ್ಲೋರಿನ್ ಪಿಂಟೋ ಅವರ ಹೊಸ ಮನೆಯಿಂದ ದರೋಡೆ ಮಾಡಲಾಗಿದೆ. ಮನೆಯಲ್ಲಿ ತಾಯಿ ಪ್ಲೋರಿನಾ ಪಿಂಟೊ ಮಗಳು ಮರಿನಾ ಪಿಂಟೋ ಇಬ್ಬರು ಮಾತ್ರ ಇದ್ದು ಗಂಡಸರಿಲ್ಲದ ಮನೆಯಿಂದ ದರೋಡೆ ನಡೆಸಲಾಗಿದೆ. ಗೊದ್ರೇಜ್ ನಲ್ಲಿರಿಸಲಾಗಿದ್ದ ಸುಮಾರು 2.90 ಲಕ್ಷ ರೂಮೌಲ್ಯದ ವಿವಿಧ ಚಿನ್ನಾಭರಣಗಳು, 30 ಸಾವಿರ ನಗದು ಹಾಗೂ ಒಂದು ಮೊಬೈಲ್ ಪೋನ್ ಒಟ್ಟು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ನಗನಗದು ದೋಚಿದ್ದಾರೆ. ಇಂದು ಬೆಳಿಗ್ಗೆ ಸುಮಾರು 6.30 ರ ಸಮಯದಲ್ಲಿ ಬೆಲ್ ಹಾಕಿದಾಗ ಬಾಗಿಲು ತೆಗದು ನೋಡಿದಾಗ ನಾಲ್ವರು ಮುಸುಕುದಾರಿಗಳು ಮನೆಯೊಳಗೆ ನುಗ್ಗಿದ್ದಾರೆ. ಬಳಿಕ ಮನೆಯಲ್ಲಿರುವ ನಗನಗದು ಕೊಡುವಂತೆ ಬೆದರಿಸಿದ್ದಾರೆ. ಬೆದರಿಕೆಗೆ ಬಗ್ಗದಾಗ ನಾಲ್ವರು ಕೈಯಲ್ಲಿ ಚೂರಿ ತೋರಿಸಿ ಕೊಲೆ ಬೆದರಿಕೆ ಒಡ್ಡಿದಾಗ ಗೊದ್ರೇಜ್ ನ ಬೀಗದ ಕೀ…

Read More

ಮಂಗಳೂರು : ನಗರದ ಕಾರ್ ಸ್ಟ್ರೀಟ್‌ನ ಕ್ರಾಸ್ ರಸ್ತೆಯಲ್ಲಿರುವ ಪ್ರಗತಿ ಜ್ಯುವೆಲ್ಲರ್ಸ್‌ಗೆ ಗ್ರಾಹಕರ ಸೋಗಿನಲ್ಲಿ ಬಂದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲದ ಮಂಜನಾಡಿಯ ಊರುಮನೆ ನಿವಾಸಿ ಮಹಮ್ಮದ್ ಸಿನಾನ್(25), ನಾಟೆಕಲ್ ನಿವಾಸಿ‌ ಹೈದರ್ ಆಲಿ ಆಸಿಲ್(20), ನಾಟೆಕಲ್‌ನ ಅಸೈಗೋಳಿ ನಿವಾಸಿ‌ ಮೊಹಮ್ಮದ್ ತಸ್ವೀರ್(34) ಬಂಧಿತ ಆರೋಪಿಗಳು. ಜ್ಯುವೆಲ್ಲರಿ ಶಾಪ್‌ನ ಸಿಬ್ಬಂದಿ ಗಮನ ಬೇರೆಡೆಗೆ ಸೆಳೆದು 97.11 ಗ್ರಾಂ ತೂಕದ 6,00,000 ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ಪ್ರಗತಿ ಜ್ಯುವೆಲ್ಲರ್ಸ್ ಮಾಲೀಕ ವಿನೋದ್ ಶೇಟ್ ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ, ಮಂಗಳೂರು ಕೇಂದ್ರ ಮಾರುಕಟ್ಟೆ ಪರಿಸರದಲ್ಲಿ ಆರೋಪಿಗಳನ್ನು ಬಂಧಿಸಿ 6,00,000 ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿರುವ ಸ್ಕೂಟರ್, 2 ಮೊಬೈಲ್‌ ಫೋನ್ ಗಳು ವಶಪಡಿಸಿಕೊಂಡಿದ್ದಾರೆ.

Read More

ಮಂಗಳೂರು : ಪೊಲೀಸ್ ಮೇಲೆಯೇ ದಾಳಿಗೆತ್ನಿಸಿ ಗುಂಡೇಟು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟೋರಿಯಸ್ ರೌಡಿ ಆಕಾಶಭವನ ಶರಣ್ (37)ಗೆ ಆಶ್ರಯ ನೀಡಿರುವ ಆರೋಪದಲ್ಲಿ 7 ಮಂದಿಯ ವಿರುದ್ಧ ವಿವಿಧ ಠಾಣೆಗಳಲ್ಲಿ 5 ಪ್ರಕರಣ ದಾಖಲಾಗಿದೆ. ಸುಮಾರು 21ಕ್ಕಿಂತಲೂ ಅಧಿಕ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆಕಾಶಭವನ ಶರಣ್ ಪತ್ತೆಗೆ ಸಿಸಿಬಿ ಪೊಲೀಸರು 20 ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರು‌. ಈ ವೇಳೆ ತಲೆಮರೆಸಿಕೊಳ್ಳಲು ವಿವಿಧ ಕಡೆಗಳಲ್ಲಿ ಆತನಿಗೆ ಹಲವರು ಸಹಾಯ ಮಾಡಿದ್ದಾರೆ. ಈ ಬಗ್ಗೆ ಮಾಹಿತಿ ಕಲೆ ಹಾಕಿರುವ ಪೊಲೀಸರು ಆಶ್ರಯ ನೀಡಿದ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೋಡಿಕಲ್‌ ನಿವಾಸಿ ಶೀಲಾ, ಉಡುಪಿ ಸಂತೆಕಟ್ಟೆ ನಿವಾಸಿ ಶರತ್ ಭಂಡಾರಿ ಹಾಗೂ ಆತನ ಪತ್ನಿ ಮಯೂರಿ ಭಂಡಾರಿ, ಧನಂಜಯ ಹಾಗೂ ಚೇತನ್ ಬುಳ್ಳ ಎಂಬವರ ವಿರುದ್ಧ ಕಾವೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅದೇ ರೀತಿ ಶಿವ ಕರ್ಬಿಂಸ್ಥಾನ ಎಂಬಾತನ ವಿರುದ್ಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ, ಶಾನು ಶೆಟ್ಟಿ ಎಂಬಾತನ…

Read More

ಜಿಲ್ಲಾಧಿಕಾರಿ ಕಚೇರಿಯಲ್ಲೇ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ಪಟ್ಟಣದ ನಿವಾಸಿ ಕುಮಾರ್ ಕಲ್ಲಪ್ಪ ಕೊಪ್ಪದ್ ಎಂಬ ವ್ಯಕ್ತಿ ವಾಟರ್ ಬಾಟಲಿನಲ್ಲಿ ವಿಷ ತೆಗೆದುಕೊಂಡು ಬಂದಿದ್ದನು. ಕಚೇರಿಯಲ್ಲಿ ಜಿಲ್ಲಾಧಿಕಾರಿಗಳು ಇಲ್ಲದ ವೇಳೆ ಈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ಸದ್ಯ ಆತನ ಸ್ಥಿತಿ ಗಂಭೀರವಾಗಿದ್ದು, ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More