Author: main-admin

ಉಡುಪಿ‌: ಮಣಿಪಾಲದ ಕಟ್ಟಡವೊಂದರ ಹಿಂಭಾಗದ ಖಾಲಿ ಜಾಗದಲ್ಲಿ ರವಿವಾರ ಆಕಸ್ಮಿಕ ಬೆಂಕಿ ದುರಂತ ಸಂಭವಿಸಿದ್ದು, ಅಗ್ನಿಶಾಮಕ ದಳದವರು ಕೂಡಲೇ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಬೆಂಕಿಯ ಕೆನ್ನಾಲಿಗೆಗೆ ಸ್ಥಳದಲ್ಲಿದ್ದ ಕುರುಚಲು ಗಿಡಗಳು ಆಹುತಿಯಾಗಿವೆ. ಮಧ್ಯಾಹ್ನದ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಈ ಖಾಲಿ ಜಾಗದಲ್ಲಿ ಮುಳಿ ಹುಲ್ಲು ಮತ್ತು ಕುರುಚಲು ಗಿಡಗಳು ಮಾತ್ರ ಇದ್ದು, ಅವುಗಳಿಗೆ ಬೆಂಕಿ ತಗುಲಿದ ಪರಿಣಾಮ ಪರಿಸರದಲ್ಲಿ ದಟ್ಟವಾದ ಹೊಗೆ ಆವರಿಸಿತ್ತು. ಬಿಸಿಲಿ‌ನ ತಾಪ ಮತ್ತು ಗಾಳಿಯಿಂದಾಗಿ ಬೆಂಕಿ ಬೇಗನೆ ವ್ಯಾಪಿಸಿತ್ತು.ಮಾಹಿತಿ ಲಭಿಸಿ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದರು.

Read More

ಟ್ರೆಡಿಂಗ್‌ನಿಂದ ಹೆಚ್ಚಿನ ಲಾಭಾಂಶ ಪಡೆಯುವ ಆಸೆಯಿಂದ ಅಪರಿಚಿತರು ಕಳುಹಿಸಿದ ಲಿಂಕ್ ಮೂಲಕ ವ್ಯವಹರಿಸಿದ ವೃದ್ಧರೋರವರು 61,90,000ರೂ. ಹಣವನ್ನು ಕಳೆದುಕೊಂಡಿದ್ದಾರೆ. ಬಿ.ಚಂದ್ರಶೇಖರ ಹೆಗ್ಗೋಡ್ಲು (70) ಎಂಬವರು ವಂಚನೆಗೊಳಗಾದವರು. ಇವರ ಮೊಬೈಲ್‌ಗೆ ಯಾರೋ ಅಪರಿಚತ ವ್ಯಕ್ತಿಗಳು ವಾಟ್ಸಪ್‌ನಲ್ಲಿ ಸಂಪರ್ಕಿಸಿ ಅವರನ್ನು ಮಾತಿನಿಂದ ಮರಳು ಮಾಡಿ ಲಿಂಕ್ ಕಳುಹಿಸಿದ್ದರು. ಇದರ ಮೂಲಕ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಚಂದ್ರಶೇಖರ್, ಆರೋಪಿಗಳು ತಿಳಿಸಿದಂತೆ ವಿವಿಧ ಬ್ಯಾಂಕ್ ಖಾತೆಗಳ ಮೂಲಕ 61.90 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದ್ದರು. ಆದರೆ ಹೇಳಿದ ಅವಧಿಗೆ ಹೂಡಿಕೆ ಮಾಡಿದ ಹಣವಾಗಲೀ, ಲಾಭಾಂಶವಾಗಿ ನೀಡದೇ ಮೋಸ ಮಾಡಿದ್ದು, ಇದೀಗ ಅವರು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Read More

ವಿಟ್ಲ: ಕೋಳಿ ಫಾರ್ಮ್ ಕಟ್ಟಡ ದಿಢೀರ್ ಕುಸಿದು ಬಿದ್ದ ಪರಿಣಾಮ ಲಕ್ಷಾಂತರ ರೂ. ನಷ್ಟ ಉಂಟಾದ ಘಟನೆ ವಿಟ್ಲ ವ್ಯಾಪ್ತಿಯ ಕೊಲ್ನಾಡು ಗ್ರಾಮದ ದೇವಸ್ಯ ಎಂಬಲ್ಲಿ ನಡೆದಿದೆ. ಯಜ್ಞನಾಥ ಶೆಟ್ಟಿ ಮಾಲಕತ್ವದ ಕೋಳಿ ಫಾರ್ಮ್ ಕಟ್ಟಡ ಕುಸಿದು ಬಿದ್ದಿದ್ದು, ಶಬ್ದ ಕೇಳಿಸಿಕೊಂಡ ಮಾಲಕರು ಮತ್ತು ಸ್ಥಳೀಯರು ಸ್ಥಳಕ್ಕೆ ಬರುವಷ್ಟರಲ್ಲಿ ಐದು ಸಾವಿರಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿದೆಯೆನ್ನಲಾಗಿದೆ. ಇದರಿಂದ ಅಪಾರ ನಷ್ಟ ಸಂಭವಿಸಿದೆ ಘಟನಾ ಸ್ಥಳಕ್ಕೆ ಮಾಜಿ ತಾಪಂ ಸದಸ್ಯ ಕುಲ್ಯಾರು ನಾರಾಯಣ ಶೆಟ್ಟಿ, ಕೊಳ್ನಾಡು ಗ್ರಾಪಂ ಉಪಾಧ್ಯಕ್ಷೆ ಅಸ್ಥಾ ಹಸೈನಾರ್, ಮಾಜಿ ಸದಸ್ಯ ಯೂಸುಫ್ ತಾಳಿತ್ತನೂಜಿ, ಸಾಮಾಜಿಕ ಕಾರ್ಯಕರ್ತ ಹಸೈನಾರ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Read More

ಮಂಗಳೂರು: ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಬೆಂಕಿಗೆ ಆಹುತಿಯಾದ ಘಟನೆ ಮಂಗಳೂರು ನಗರ ಹೊರವಲಯದ ಬಜಾಲ್ ಪಲ್ಲಕೆರೆಯಲ್ಲಿ ಶುಕ್ರವಾರ ನಡೆದಿದೆ. ಬಜಾಲ್ ಪಲ್ಲಕೆರೆ ನಿವಾಸಿ ಲಕ್ಷ್ಮೀನಾರಾಯಣ್ ಅವರು ಡೆಕೋರೇಷನ್ ವ್ಯವಹಾರ ನಡೆಸುತ್ತಿದ್ದು, ಡೆಕೋರೆಷನ್ ಗೆ ಬಳಸುವ ವಸ್ತುಗಳನ್ನು ಮನೆಯ ಮುಂಭಾಗದ ಚಪ್ಪರದಲ್ಲಿ ಇರಿಸಿದ್ದರು. ಮನೆಯಲ್ಲಿ ಲಕ್ಷ್ಮೀನಾರಾಯಣ್ ಅವರು ಇಲ್ಲದ ವೇಳೆ ರಾತ್ರಿ 11 ಗಂಟೆ ಸುಮಾರಿಗೆ ಮನೆಗೆ ಬೆಂಕಿ ತಗುಲಿದೆ. ಈ ವೇಳೆ ಮನೆಯಲ್ಲಿ ಅವರ ಪತ್ನಿ ಮಾತ್ರ ಇದ್ದು, ಅವರು ನೋಡುವಷ್ಟರಲ್ಲಿ ಮನೆಯ ಮುಂಭಾಗ ಹಾಗೂ ಅಲ್ಲಿ ಇರಿಸಿದ್ದ ವಸ್ತುಗಳಿಗೆ ಬೆಂಕಿ ತಗುಲಿತ್ತು. ಲಕ್ಷ್ಮೀನಾರಾಯಣ್ ಅವರ ಪತ್ನಿ ಬೊಬ್ಬೆ ಹಾಕುತ್ತಿದ್ದಂತೆ ಅಕ್ಕ-ಪಕ್ಕದ ಮನೆಯವರು ಮನೆಯಲ್ಲಿದ್ದವರನ್ನು ರಕ್ಷಿಸಿದ್ದಾರೆ. ಬಳಿಕ ಸ್ಥಳೀಯರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಪೀಠೋಪಕರಣಗಳು, ಅಲಂಕಾರಿಕ ವಸ್ತುಗಳ ಸೇರಿ ಸುಮಾರು 18ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿ ಆಗಿದೆ ಎಂದು…

Read More

ಬೆಳ್ತಂಗಡಿ : ವೇಗವಾಗಿ ಬಂದ ಚಾಲಕನ ನಿಯಂತ್ರಣ ತಪ್ಪಿದ ಕಾರು, ರಸ್ತೆ ಬದಿ ನಿಂತಿದ್ದ ಮಹಿಳೆ ಡಿಕ್ಕಿ ಹೊಡೆದು, ಮಹಿಳೆ ಗಂಭೀರ ಗಾಯಗೊಂಡ ಘಟನೆ ಗುರುವಾಯನಕೆರೆಯ ಅಯ್ಯಪ್ಪ ನಗರ ಬಳಿ ಸಂಭವಿಸಿದೆ. ಕಾರು ಡಿಕ್ಕಿಯ ರಭಸಕ್ಕೆ ಮಹಿಳೆ ಒಂದಷ್ಟು ದೂರ ನೆಗೆದು ಬಿದ್ದು ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಾಳು ಮಹಿಳೆ ಸ್ಥಳೀಯ ಅಂಜಲಿ ಶೆಣೈ ಎಂದು ಗುರುತಿಸಲಾಗಿದ್ದು ಅಪಘಾತದ ಬಳಿಕ ಕಾರು ಚಾಲಕ ಕಾರು ಸಮೇತ ಪರಾರಿಯಾಗಿದ್ದ ಬಳಿಕ ಬೆಳ್ತಂಗಡಿ ಠಾಣೆಗೆ ಬಂದು ಶರಣಾಗಿದ್ದಾನೆ. ರಸ್ತೆಬದಿಯಲ್ಲಿದ್ದ ಮಾರುತಿ ಒಮಿನಿಗೂ ಕಾರು ಗುದ್ದಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Read More

ಬಂಟ್ವಾಳ: ಬಿಸಿರೋಡಿನ ಹೃಯಭಾಗದ ಹೊಟೇಲ್ ಸಹಿತ ಸರಣಿ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ‌ನಗರ ಠಾಣಾ ಪೋಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ ಎಂದು ತಿಳಿಯಲಾಗಿದೆ. ಬೆಳ್ತಂಗಡಿ ಪಡಂಗಡಿ ನಿವಾಸಿ ಹಮೀದ್ ಯಾನೆ, ಕುಂಜ್ಞಿಮೋನು ಯಾನೆ ಜಾಫರ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ. ಈತ ಕಳೆದ ಎರಡು ವಾರಗಳ ಹಿಂದೆ ಬಿಸಿರೋಡಿನ ಅನಿಯಾ ದರ್ಬಾರ್ ಹಾಗೂ ಇಲ್ಲಿನ‌ ಕೆಲ ಅಂಗಡಿಗಳಿಗೆ ನುಗ್ಗಿ ಲಕ್ಷಾಂತರ ರೂ ನಗದು ಕಳವು ಮಾಡಿದ್ದ ಎನ್ನಲಾಗಿದೆ. ಇಲ್ಲಿನ ಅನಿಯಾ ದರ್ಬಾರ್ ಹೊಟೇಲ್ ನಿಂದ ಲಕ್ಷಾಂತರ ರೂ.ನಗದು ಕಳವು ಮಾಡಿರುವ ಬಗ್ಗೆ ನಗರ ಪೋಲೀಸ್ ಠಾಣೆಗೆ ಮಾಲಕ ದೂರು ನೀಡಿದ್ದರು. ಆರೋಪಿ ಹಮೀದ್ ಕಳವು ಮಾಡುವ ವೇಳೆ ಹೊಟೇಲ್ ಒಳಗಿನ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರ ಆಧಾರದ ಮೇಲೆ ಪೋಲಿಸ್ ತಂಡ ಬಂಧನಕ್ಕೆ ಕಾರ್ಯತಂತ್ರ ಹೆಣೆದಿದ್ದರು.ಹಮೀದ್ ಮಂಗಳೂರಿನಿಂದ ಪ್ರಯಾಣ ಬೆಳೆಸುತ್ತಿದ್ದ ವೇಳೆ ಬಂಟ್ವಾಳದಲ್ಲಿ ಪೋಲಿಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಈತ ಹಲವು ಕಳವು ಪ್ರಕರಣದ ಆರೋಪಿಯಾಗಿದ್ದು,…

Read More

ಚಾರ್ಮಾಡಿ : ಮಂಜು ಕವಿದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪರ್ ಲಾರಿಯೊಂದು 2000 ಅಡಿ ಪ್ರಪಾತಕ್ಕೆ ಬಿದ್ದು ಚಾಲಕ ಅದೃಷ್ಟವಶಾತ್ ಪಾರಾದ ಘಟನೆ ಚಾರ್ಮಾಡಿ ಘಾಟಿಯಲ್ಲಿ ಸೋಮನ ಕಾಡು ಸಮೀಪ ಶುಕ್ರವಾರ ಮಧ್ಯರಾತ್ರಿ ನಡೆದಿದೆ.ಮೂಡಿಗೆರೆಯಿಂದ ಚಾರ್ಮಾಡಿಗೆ ಹೋಗುತ್ತಿದ್ದ ವೇಳೆ ಮಂಜು ಕವಿದ ವಾತಾವರಣವಿದ್ದರಿಂದ ದಾರಿ ಕಾಣದೆ ಟಿಪ್ಪರ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಗೆ ಗುದ್ದಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಉರುಳಿ ಬಿದ್ದ ರಭಸಕ್ಕೆ ಟಿಪ್ಪರ್ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ ಚಾಲಕನಿಗೆ ಸೊಂಟಕ್ಕೆ ತುಂಬಾ ಪೆಟ್ಟಾಗಿದೆ. ತಕ್ಷಣ ಅಂಬುಲೆನ್ಸ್ ಮೂಲಕ ಉಜಿರೆಯ ಧರ್ಮಸ್ಥಳ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Read More

ಪುತ್ತೂರು: ಪ್ರೀತಿಸಿದ ಯುವತಿ ಬೇರೊಬ್ಬನನ್ನು ವಿವಾಹವಾದ ಸಿಟ್ಟಿಗೆ ಪ್ರಿಯಕರ ವರನ ಬೈಕನ್ನೇ ಸುಟ್ಟು ಹಾಕಿರುವ ಘಟನೆ ಉಪ್ಪಿನಂಗಡಿ ಠಾಣೆ ವ್ಯಾಪ್ತಿಯ ನಿನ್ನಿಕಲ್ಲು ಪಾದಾಳ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಉಪ್ಪಿನಂಗಡಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಪೊಲೀಸರು ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸಿದಾಗ, ಈ ವಿಚಾರ ಬಯಲಾಗಿದೆ. ಸದ್ಯ ಪೊಲೀಸರು ಉಪ್ಪಿನಂಗಡಿ ಗ್ರಾಮದ ನಿನ್ನಿಕಲ್ಲು ಪಾದಾಳ ನಿವಾಸಿ ಸಂದೀಪ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ತಾನು ಪ್ರೀತಿಸಿರುವ ಯುವತಿ ಬೇರೊಬ್ಬನನ್ನು ವಿವಾಹವಾಗಿದ್ದಕ್ಕೆ ಪ್ರೇಯಸಿಯ ಪತಿಯ ಬೈಕ್ ಅನ್ನೇ ಸುಟ್ಟು ಹಾಕಿರೋದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ಸಂದೀಪ್ ತನ್ನದೇ ಗ್ರಾಮದ ಯುವತಿಯನ್ನು ಏಕಮುಖವಾಗಿ ಪ್ರೀತಿಸುತ್ತಿದ್ದ. ಆಕೆಗೆ ಜನವರಿ 3ರಂದು ಬೇರೊಬ್ಬ ಯುವಕನೊಂದಿಗೆ ವಿವಾಹವಾಗಿದೆ‌. ಆಕೆಯನ್ನು ಮದುವೆಯಾದ ಯುವಕನ ಮೇಲೆ ಆರೋಪಿಗೆ ಸಿಟ್ಟಿತ್ತು. ಯುವತಿ ಜನವರಿ 6ರಂದು ಪತಿಯೊಂದಿಗೆ ತವರಿಗೆ ಬಂದಿದ್ದಳು. ರಾತ್ರಿ ವೇಳೆ ಮನೆಯ ಸಮೀಪ ಇರಿಸಿದ್ದ ಬೈಕಿಗೆ ಬೆಂಕಿ ಬಿದ್ದಿತ್ತು. ಬೈಕ್ ಹೊತ್ತಿ ಉರಿಯುತ್ತಿದ್ದುದನ್ನು…

Read More

ಉಳ್ಳಾಲ: ವಿದ್ಯಾರ್ಥಿನಿಯನ್ನು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದ ಆರೋಪಿಗೆ ಜಿಲ್ಲಾ 2 ನೇ ಹೆಚ್ಚುವರಿ ನ್ಯಾಯಾಲಯ ಒಟ್ಟು 18 ವರ್ಷ1 ತಿಂಗಳ ಸಜೆ ಹಾಗೂ ಸಂತ್ರಸ್ತೆಗೆ ರೂ. 2 ಲಕ್ಷ ರೂ ನೀಡುವಂತೆ ಆದೇಶ ನೀಡಿದೆ. 2019ರ ಜೂ.28 ರಂದು ದೇರಳಕಟ್ಟೆಯ ಬಗಂಬಿಲ ರಸ್ತೆಯಲ್ಲಿನ ಶಾಂತಿಧಾಮ ಬಳಿ ಆರೋಪಿ ಸುಶಾಂತ್ ಯಾನೆ ಶಾನ್ (31) ಕಾಲೇಜಿನಿಂದ ಬರುತ್ತಿದ್ದ ಸಂತ್ರಸ್ತೆಯನ್ನು ಹಿಂಬಾಲಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದಿದ್ದ. ಶಾಂತಿಧಾಮ ಬಳಿ ಅಡ್ಡಗಟ್ಟಿ ಯುವತಿ ಮುಂದೆ ಹೋಗದಂತೆ ತಡೆಹಿಡಿದು ಆಕೆಯನ್ನು ಅಪ್ಪಿಹಿಡಿದು ಚೂರಿಯಿಂದ ಎದೆ, ಹೊಟ್ಟೆ ಹಾಗೂ ದೇಹದ ವಿವಿದೆಡೆ ಇರಿದು ನಂತರ ಅದೇ ಚೂರಿಯಿಂದ ತನ್ನ ಕುತ್ತಿಗೆಗೆ ಹಾಗೂ ಕೈ ನಾಡಿಗೆ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದನು.ಇನ್ನು ಘಟನೆಯನ್ನು ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಸಿಬ್ಬಂದಿ ಆಸ್ಪತ್ರೆ ಮೇಲಿನ ಭಾಗದಿಂದ ಗಮನಿಸಿ ತಕ್ಷಣ ಆಂಬ್ಯುಲೆನ್ಸ್ ಸಮೇತ ಘಟನಾ ಸ್ಥಳಕ್ಕೆ ಬಂದು ಸಂತ್ರಸ್ತೆಯನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಯನ್ನು ಕೊಡಿಸಿದ್ದರು. ಪ್ರಕರಣದಲ್ಲಿ ದಾದಿಯ ಸೇವೆ ರಾಷ್ಟ್ರಮಟ್ಟದಲ್ಲಿ ಶ್ಲಾಘನೆಗೆ ಒಳಗಾಗತ್ತು.…

Read More

ಮಂಗಳೂರು: ನಗರದಲ್ಲಿ ನಾಪತ್ತೆಯಾಗಿದ್ದ ಕೃಷ್ಣಾಪುರದ ಯುವಕನ ಮೃತದೇಹ ಮಂಜೇಶ್ವರ ಕೊಪ್ಪಳ ನದಿಯಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ಸುರತ್ಕಲ್ ಕೃಷ್ಣಾಪುರದ ಇಹಾಬ್ ಅಬೂಬಕ್ಕರ್ ( 20) ಎಂದು ಗುರುತಿಸಲಾಗಿದೆ. ಮಂಗಳೂರು ಎ.ಜೆ. ವೈದ್ಯಕೀಯ ಕಾಲೇಜು ವಿದ್ಯಾರ್ಥಿ ಯಾಗಿದ್ದ ಈತ ಕೆಲ ದಿನಗಳ ಹಿಂದೆ ಮಂಜೇಶ್ವರ ಪರಿಸರ ದಲ್ಲಿರುವ ಸಂಬಂಧಿಕರ ಮನೆಯಿಂದ ನಾಪತ್ತೆಯಾಗಿದ್ದ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆ ನಡೆಸುತ್ತಿದ್ದ ಪೊಲೀಸರು ಬುಧವಾರ ಸಂಜೆ ಕೊಪ್ಪಳ ನದಿಯಲ್ಲಿ ಯುವಕನ ಮೃತದೇಹ ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ. ಮೃತ ದೇಹದ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಮಂಜೇಶ್ವರ ಠಾಣಾ ಪೊಲೀಸರು ಕರ್ನಾಟಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದ ಮೃತ ದೇಹದ ಗುರುತನ್ನು ಕುಟುಂಬಸ್ಥರು ಪತ್ತೆ ಹಚ್ಚಿದ್ದಾರೆ. ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

Read More