Author: main-admin

ಮಂಗಳೂರು:ಮಂಗಳೂರು ನಗರದ ಕದ್ರಿ ಜಾರ್ಜ್ ಮಾರ್ಟಿಸ್ ರೋಡ್ ಸಮೀಪದ ಬಾಡಿಗೆ ಮನೆಯಿಂದ ನಗದು ಹಣ ಮತ್ತು ಬೆಳ್ಳಿಯ ಸೊತ್ತುಗಳನ್ನು ಕಳವು ಮಾಡಲಾದ ಘಟನೆ ನಡೆದಿದೆ. ಬಾಡಿಗೆ ಮನೆಯಲ್ಲಿದ್ದವರು ಡಿ. 14ರಂದು ಮೈಸೂರಿಗೆ ತೆರಳಿ ಜ. 16ರಂದು ವಾಪಸ್ ಬಂದಾಗ ಬಾಗಿಲಿನ ಬೀಗ ಮುರಿದಿತ್ತು.ಒಳಗೆ ಹೋಗಿ ನೋಡಿದಾಗ ಕಪಾಟಿನ ಲಾಕರ್‌ ನಲ್ಲಿ 70,000 ರೂ. ನಗದು, ವಾರ್ಡ್ ರೋಬ್ ನ ಸೂಟ್ಕೇಸ್ ನಲ್ಲಿದ್ದ 2 ಬೆಳ್ಳಿಯ ಬಟ್ಟಲು, 1 ಬೆಳ್ಳಿ ಕಲಶ, 1 ಬೆಳ್ಳಿ ಚಮಚ, 1 ಬೆಳ್ಳಿ ಕಪ್, 20 ಬೆಳ್ಳಿ ನಾಣ್ಯಗಳು, ಬೆಳ್ಳಿಸರ, ಬೆಳ್ಳಿಯ ದೀಪ ಸಹಿತ ಸುಮಾರು 56,000 ರೂ. ಮೌಲ್ಯದ ಸೊತ್ತುಗಳನ್ನು ಕಳ್ಳರು ಕಳವು ಮಾಡಿದ್ದಾರೆ. ಈ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು ಮಹಾನಗರಪಾಲಿಕೆಯ ವಿವಿಧ ಪ್ರದೇಶದ ರಸ್ತೆ ಬದಿಗಳಲ್ಲಿ ಕೆಲವೊಂದು ಜಾಹೀರಾತು ಸಂಸ್ಥೆಯವರು ಹಾಗೂ ಖಾಸಗಿ ವ್ಯಕ್ತಿಗಳು ವಾಣಿಜ್ಯ ಉದ್ದೇಶಗಳಿಗಾಗಿ ಹಾಗೂ ಹಾಗೂ ರಾಜಕೀಯ ಮತ್ತು ಧಾರ್ಮಿಕ ಮತ್ತು ಕೆಲವೊಂದು ಖಾಸಗಿ ಸಮಾರಂಭಗಳ ನಿಮಿತ್ತ ಆನಧಿಕೃತ ಬ್ಯಾನರ್ ಕಟೌಟ್, ಬಂಟಿಂಗ್ಸ್, ಮತ್ತು ಪ್ಲೆಕ್ಸ್ ಇತ್ಯಾದಿಗಳನ್ನು ವ್ಯಾಪಕವಾಗಿ ಅಳವಡಿಸುತ್ತಿರುವುದು ಕಂಡುಬಂದಿದೆ. ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿದ್ದು, ಅಪಘಾತ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿರುವುದಲ್ಲದೆ ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸಿದಂತಾಗುತ್ತಿದೆ. ಅಲ್ಲದೇ, ವಿದ್ಯುತ್ ಅವಘಡಗಳು ಉಂಟಾಗಿ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇದೆ. ಕೆಲವೊಂದು ವಿವಾದಾತ್ಮಕ ಮತ್ತು ದ್ವೇಷ ಸಂದೇಶ ಸಾರುವ ಫ್ಲೆಕ್ಸ್‍ಗಳು ಅಳವಡಿಸುತ್ತಿರುವುದರಿಂದ ಶಾಂತಿ ಸುವ್ಯವಸ್ಥೆಗೆ ದಕ್ಕೆಯಾಗಿ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಆದ್ದರಿಂದ ಎಲ್ಲಾ ರೀತಿಯ ಅನಧಿಕೃತ ಬ್ಯಾನರ್, ಕಟೌಟ್, ಬಂಟಿಂಗ್ ಮತ್ತು ಪ್ಲೆಕ್ಸ್ ಇತ್ಯಾದಿಗಳನ್ನು ಅಳವಡಿಸುತ್ತಿರುವುದನ್ನು ಈ ಕೂಡಲೇ ಸ್ಥಗಿತಗೊಳಿಸಬೇಕು. ಮಹಾನಗರಪಾಲಿಕೆ ಆಧೀನದಲ್ಲಿ ಸರ್ಕಾರಿ ಮತ್ತು ಖಾಸಗಿ ಸ್ಥಳಗಳಲ್ಲಿ ಒಟ್ಟು 1084 ಅಧಿಕೃತ ಜಾಹೀರಾತು…

Read More

ಮಂಗಳೂರು:ಸ್ಕೂಟರ್‌ಗೆ  ಕಾರು ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ  ಮರೋಳಿಯಲ್ಲಿ  ಬಳಿ ನಡೆದಿದೆ.ಸ್ಕೂಟರ್ ಸವಾರ ಮುಹಮ್ಮದ್ ಹನೀಫ್ (45) ಗಂಭೀರ ಗಾಯಗೊಂಡಿದ್ದಾರೆ.ಬಜ್ಪೆ ಸಮೀಪದ ಆದ್ಯಪಾಡಿಯ ಮುಹಮ್ಮದ್ ಹನೀಫ್ ತುಂಬೆಯಿಂದ ನಂತೂರು ಕಡೆಗೆ ಪತ್ನಿ ರಮ್ಲತ್ ಜೊತೆಗೆ ಬರುತ್ತಿದ್ದಾಗ ಹಿಂದಿನಿಂದ ಬಂದ ಕಾರು ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.ಇದರಿಂದ ಸ್ಕೂಟರ್ ಮುಂದಿನಿಂದ ಚಲಿಸುತ್ತಿದ್ದ ಇನ್ನೊಂದು ಕಾರಿಗೂ ಬಡಿದಿದೆ ಎನ್ನುವ ಮಾಹಿತಿ ಇದೆ.ತುಂಬೆಯಲ್ಲಿ ನಡೆದ ತನ್ನ ಅಣ್ಣನ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪತ್ನಿಯ ಜೊತೆ ಹಿಂದಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಗಾಯಾಳುವನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕದ್ರಿ ಸಂಚಾರಿ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ

Read More

ಮಂಗಳೂರು : ಜನವರಿ 19, 20 ಮತ್ತು 21 ರಂದು ಮೂರು ದಿನಗಳ ಕಾಲ ಮಂಗಳೂರಿನ ಟಿಎಂಎ ಪೈ ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಮಂಗಳೂರು ಲಿಟ್‌ ಫೆಸ್ಟ್‌ನ ಆರನೇ ಆವೃತ್ತಿಯು ಜರುಗಲಿದೆ. ಒಟ್ಟು 29 ಅವಧಿಗಳನ್ನು ಪ್ರಸ್ತುತ ಉತ್ಸವವು ಹೊಂದಿದೆ. ಎರಡು ವೇದಿಕೆಗಳು ಮತ್ತು ಹರಟೆ ಕಟ್ಟೆ ಇವುಗಳಲ್ಲಿ 60 ಕ್ಕೂ ಅಧಿಕ ಸಾಹಿತಿಗಳು, ವಾಗ್ಮಿಗಳು ಭಾಗವಹಿಸಲಿದ್ದಾರೆ. ಈ ಬಾರಿಯ ʼThe Idea of Bharath’ ಪ್ರಶಸ್ತಿಗೆ ʼವನಿತಾ ಸೇವಾ ಸಮಾಜʼ, ಧಾರವಾಡ ಈ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. 19 ರಂದು ಸಂಜೆ 5 ಕ್ಕೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದ ಲಕ್ಷ್ಮೀಶ ತೋಳ್ಪಾಡಿ, ಹೆಸರಾಂತ ಕಲಾವಿದೆ ರಾಧೆ ಜಗ್ಗಿ, ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಸಂಸ್ಥೆ (ಐಸಿಎಸ್ಎಸ್ಆರ್) ಸದಸ್ಯ ಕಾರ್ಯದರ್ಶಿ ಡಾ. ಧನಂಜಯ ಸಿಂಗ್, ರಕ್ಷಣಾ ಸಚಿವರ ಸಲಹೆಗಾರ ಲೆ. ಜ. ವಿನೋದ ಖಂಡಾರೆ, ನಿಟ್ಟೆ ವಿಶ್ವವಿದ್ಯಾಲಯದ ಡಾ. ವಿನಯ್‌ ಹೆಗ್ಡೆ,…

Read More

ಮಂಗಳೂರು : ನಗರದ ಕಾವೂರಿನಲ್ಲಿ ಕುದುರೆಮುಖ ಕಂಪೆನಿಯ ಉದ್ಯೋಗಿ ಮಂಗಳವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಅಂತ್ಯ ಕಂಡಿದ್ದಾರೆ. ಶೇಖರಪ್ಪ ಮೃತ ದುರ್ದೈವಿಯಾಗಿದ್ದಾರೆ. ಇವರು ಕುದುರೆಮುಖ ಕಂಪೆನಿಯ ಮಂಗಳೂರು ಪೋರ್ಟ್ ಫೆಸಿಲಿಟೀಸ್ ವಿಭಾಗಲ್ಲಿ ಶೇಖರಪ್ಪ ಕಾರ್ಯನಿರ್ವಹಿಸುತ್ತಿದ್ದರು. ಮಂಗಳವಾರ ರಾತ್ರಿ ಸುಮಾರು 11ಗಂಟೆ ಸುಮಾರಿಗೆ ತಮ್ಮ ಕ್ವಾಟರ್ಸ್ ಕಂಪೌಂಡ್ ಗೆ ಹೋಗಲು ಡಿವೈಡರ್ ನಿಂದ ಕ್ರಾಸ್ ಮಾಡಿ ಬೈಕ್ ತಿರುಗಿಸುತ್ತಿದ್ದರು. ಈ ವೇಳೆ ಬೋಂದೆಲ್‌ನಿಂದ ಕಾವೂರು ಕಡೆಗೆ ಬರುತ್ತಿದ್ದ ಕಾರೊಂದು ಭಾರೀ ರಭಸದಿಂದ ಬಂದು ಇವರ ಬೈಕಿಗೆ ಢಿಕ್ಕಿ ಹೊಡೆದಿದೆ. ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಶೇಖರಪ್ಪರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಬೆಳ್ತಂಗಡಿ: ಟೆಲಿಗ್ರಾಮ್ ಆ್ಯಪ್ ಮೂಲಕ ಬಂದ ಮೆಸೇಜ್‌ ನ್ನು ನಂಬಿ ವ್ಯಕ್ತಿಯೊಬ್ಬರು 3.46 ಲಕ್ಷ ರೂ. ಕಳೆದುಕೊಂಡಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತಾಲೂಕಿನ ಓಡಿಲ್ನಾಳ ನಿವಾಸಿ ಸುರೇಶ್ ನಾಯ್ಕ ಎಂಬವರಿಗೆ ಟೆಲಿಗ್ರಾಮ್ ಆ್ಯಪ್ ನಲ್ಲಿ ಹಣ ಹೂಡಿಕೆ ಮಾಡಿ ಕಮಿಷನ್ ಪಡೆಯುವಂತೆ ಲಿಂಕ್ ಮತ್ತು ಮೆಸೇಜ್ ಬಂದಿದೆ. ಇದನ್ನು ನಂಬಿದ ಅವರು ಜ.4ರಿಂದ15ರವರೆಗೆ ಅಪರಿಚಿತ ಖಾತೆಗೆ ಕಮಿಷನ್ ಪಡೆಯುವ ಉದ್ದೇಶದಿಂದ ಒಟ್ಟು 3,46,799 ರೂ. ಗಳನ್ನು ಸಂದಾಯ ಮಾಡಿದ್ದಾರೆ. ಹಣ ಪಡೆದ ಬಳಿಕ ಯಾವುದೇ ಕಮಿಷನ್ ನೀಡದೆ ಕೊಟ್ಟ ಹಣವನ್ನೂ ಹಿಂತಿರುಗಿಸದೆ ವಂಚಿಸಿದ್ದಾರೆ. ಈ ಬಗ್ಗೆ ಅವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More

ಕಡಬ: ನಿವೃತ್ತ ರೈಲ್ವೇ ಉದ್ಯೋಗಿಯೊಬ್ಬರು ರೈಲ್ವೇ ಹಳಿ ಸಮೀಪ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಸಮೀಪ ಕೋಡಿಂಬಾಳದಲ್ಲಿ ನಡೆದಿದೆ. ಕೋಡಿಂಬಾಳ ಗ್ರಾಮದ ಗುಂಡಿಮಜಲು ನಿವಾಸಿ ಮಾಧವ ರೈ (62) ಆತ್ಮಹತ್ಯೆ ಮಾಡಿಕೊಂಡವರು.ಮಾಧವ ರೈ ಅವರ ಮೃತದೇಹ ಕೋಡಿಂಬಾಳದ ರೈಲು ಮಾರ್ಗದ ಸಮೀಪ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.ಮೃತರು ಕೋಡಿಂಬಾಳದ ಅಯ್ಯಪ್ಪ ಭಜನಾ ಮಂದಿರದ ಸೇವಾ ಕಾರ್ಯದಲ್ಲಿಯೂ ಸಕ್ರಿಯವಾಗಿ ತೊಡಗಿಕೊಂಡಿದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಡಬ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರು ಪತ್ನಿ ಹಾಗೂ 6 ಮಂದಿ ಮಕ್ಕಳನ್ನು ಅಗಲಿದ್ದಾರೆ.

Read More

ಮಂಗಳೂರು : ರಾಜ್ಯದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿಯವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ವೀಡಿಯೋ ಮಾಡಿ ವೈರಲ್ ಮಾಡಿರುವ ಆರೋಪಿಯನ್ನು ಸುರತ್ಕಲ್ ಠಾಣೆಯ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮೂಲದ ಪ್ರಸ್ತುತ ಕಳೆದ 12 ವರ್ಷಗಳಿಂದ ಸುರತ್ಕಲ್ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿರುವ ಅನಿಲ್ ಕುಮಾರ್(34) ಬಂಧಿತ ಆರೋಪಿ. ಆರೋಪಿ ಅನಿಲ್ ಕುಮಾರ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿ ನಿಂದಿಸಿ ವೀಡಿಯೋ ಮಾಡಿದ್ದ. ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ. ಈ ಹಿನ್ನೆಲೆಯಲ್ಲಿ ಎನ್ಎಸ್ ಯುಐ ದ.ಕ.ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಅವರು ಈತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಸುರತ್ಕಲ್ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ವೀಡಿಯೋ ಮಾಡಲು ಕಾರಣ: ಆರೋಪಿ ಅನಿಲ್ ಕುಮಾರ್ ತನ್ನ ಹೆಸರನ್ನು…

Read More

ಮಂಗಳೂರು : ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆ ಹೆಡ್‌ಕಾನ್‌ಸ್ಟೆಬಲ್‌ ಮಂಜುನಾಥ ಹೆಗ್ಡೆ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ಮಂಜುನಾಥ್‌ ಅವರನ್ನು ಸಿಸಿಆರ್‌ಬಿ ಘಟಕಕ್ಕೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಅಲ್ಲಿಗೆ ಜನವರಿ 13ರಂದು ವರದಿ ಮಾಡಿಕೊಳ್ಳಬೇಕಿತ್ತು. ಜನವರಿ 13ರಂದು ಮಧ್ಯಾಹ್ನ ಮನೆಯಿಂದ ಹೊರಟ ಅವರ ಮೊಬೈಲ್‌ ನಂತರ ಸ್ವಿಚ್‌ ಆಫ್‌ ಆಗಿದೆ. ‘ಸದ್ಯ ಅವರು ಎಲ್ಲಿದ್ದಾರೆ ಎಂದು ತಿಳಿದಿಲ್ಲ. ಅವರ ಪತ್ತೆಗೆ ಕ್ರಮವಹಿಸಿದ್ದೇವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಹಿಂದೆಯೂ ಒಮ್ಮೆ ಇದೇ ರೀತಿ ನಾಪತ್ತೆ ಯಾಗಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Read More

ಉಳ್ಳಾಲ ಠಾಣಾಗೆ ಡಿವೈಎಫ್ ಐ ಸಂಘಟನೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಜ.16ರ ಮಂಗಳವಾರ ನಡೆದಿದೆ. ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಭಟ್ ವಿರುದ್ಧ ಪ್ರತಿಭಟಿಸಿದ ಡಿವೈಎಫ್ ಐ ಮುಖಂಡರ ಮೇಲೆ ಪ್ರಕರಣ ದಾಖಲು ಮಾಡಿದ ಹಿನ್ನಲೆಯಲ್ಲಿ ಉಳ್ಳಾಲ ಠಾಣಾಗೆ ಡಿವೈಎಫ್ ಐ ಮುತ್ತಿಗೆ ಹಾಕಲು ಯತ್ನಿಸಿದೆ. ಈ ವೇಳೆ ಮುಂಜಾಗ್ರತ ಕ್ರಮವಾಗಿ ಠಾಣೆಗೆ ಬೀಗ ಹಾಕಿ ಪೊಲೀಸರು ಸುರಕ್ಷತೆ ನೀಡಿದ ಘಟನೆಯೂ ನಡೆಯಿತು. ಆರ್ ಎಸ್ಎಸ್ ಹಾಗೂ ಶಾಸಕರ ಚೇಲಾಗಳಂತೆ ಪೊಲೀಸರು ವರ್ತಿಸುತ್ತಿದ್ದಾರೆ ಎಂದು ಡಿವೈಎಫ್ ಐ ಆರೋಪಿಸಿ ಮಾಸ್ತಿಕಟ್ಟೆಯಿಂದ ಉಳ್ಳಾಲ ಠಾಣೆವರೆಗೆ ರ್ಯಾಲಿ ನಡೆಸಿ ಘೋಷಣೆಗಳೊಂದಿಗೆ ಘೋಷಣೆಗಳೊಂದಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು ಮುತ್ತಿಗೆ ಹಾಕಿಲು ಯತ್ನಿಸಿದರು. ಡಿವೈಎಫ್ ಐ ಪ್ರತಿಭಟನೆ ಹಿನ್ನಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪೊಲೀಸರು ಉಳ್ಳಾಲ ಠಾಣೆಯ ಸುತ್ತಮುತ್ತ ನಿಯೋಜಿಸಲಾಗಿತ್ತು, ಯಾಉದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Read More