Author: main-admin

ಬೆಂಗಳೂರು : ಭಾರತದ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. 5 ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ನರೇಂದ್ರ ಮೋದಿ ಒಂದು ದಿನ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಅನಾವರಣ ಮಾಡಲಿದ್ದಾರೆ ಹಾಗೂ ಥೀಮ್ ಪಾರ್ಕ್‌ಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಕರ್ನಾಟಕ ಸರ್ಕಾರ, ಕರ್ನಾಟಕದ ಬಿಜೆಪಿ ಘಟಕ ಮೋದಿ ಆಗಮನಕ್ಕೆ ಸಿದ್ಧತೆಗಳನ್ನು ನಡೆಸುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಆರ್. ಲತಾ ಅಧಿಕಾರಿಗಳ ಜೊತೆ ನರೇಂದ್ರ ಮೋದಿ ಕಾರ್ಯಕ್ರಮದ ಕುರಿತು ಸಭೆ ನಡೆಸಿದರು. ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಪರಸ್ಪರ ಸಮನ್ವಯದೊಂದಿಗೆ ನಿರ್ವಹಿಸಬೇಕು ಎಂದು ಸೂಚಿಸಿದರು. ಈ ಕಾರ್ಯಕ್ರಮವು ಅತ್ಯಂತ ಮಹತ್ವದ್ದಾಗಿದ್ದು,ಸರ್ಕಾರದ ಉನ್ನತ ಮಟ್ಟದಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಜಿಲ್ಲಾಡಳಿತದ ವಿವಿಧ ಇಲಾಖೆಗಳ ಅಧಿಕಾರಿಗಳು ತಮಗೆ ವಹಿಸಿದ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಪರಸ್ಪರ ಸಮನ್ವಯದೊಂದಿಗೆ, ಯಾವುದೇ ಲೋಪಗಳಿಗೆ ಅವಕಾಶ ನೀಡದಂತೆ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದರು. ಕಾರ್ಯಕ್ರಮಕ್ಕೆ…

Read More

ನವೆಂಬರ್ 8 ಇಂದು ಚಂದ್ರಗ್ರಹಣವು ಸಂಭವಿಸಲಿದ್ದು, ಇದು ಈ ವರ್ಷದ ಕೊನೆಯ ಚಂದ್ರಗ್ರಹಣವಾಗಿದೆ. ಉತ್ತರ ಅಮೇರಿಕಾದ ಪಶ್ಚಿಮ ಭಾಗ, ಪೂರ್ವ ರಷ್ಯಾ, ಜಪಾನ್ ಮತ್ತು ನ್ಯೂಜಿಲ್ಯಾಂಡ್ ಗಳಲ್ಲಿ ಪೂರ್ಣ ಪ್ರಮಾಣದ ಚಂದ್ರಗ್ರಹಣವು ಗೋಚರಿಸಲಿದೆ ಮತ್ತು ಭಾರತದ ಪೂರ್ವ ಭಾಗದಲ್ಲಿನ ಅಗರ್ತಲಾ, ಭುವನೇಶ್ವರ್, ಡಾರ್ಜಿಲಿಂಗ್, ಗುವಾಹಟಿ, ಪೋರ್ಟ್ ಬ್ಲೇರ್ ಮುಂತಾದ ಪ್ರದೇಶಗಳಲ್ಲಿಯೂ ಪೂರ್ಣ ಪ್ರಮಾಣದ ಚಂದ್ರಗ್ರಹಣವು ಗೋಚರಿಸಲಿದೆ ಎಂದು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಶಿಕ್ಷಣ ಸಹಾಯಕರು ತಿಳಿಸಿದ್ದಾರೆ. ಇಂದು ಸಂಭವಿಸಲಿದ್ದು, ರಾಜ್ಯದ ಹಲವು ದೇವಸ್ಥಾನಗಳು ಇಂದು ಬಂದ್ ಆಗಲಿವೆ. ಇಂದು ಮಧ್ಯಾಹ್ನ 1 ಗಂಟೆಯಿಂದ ಚಾಮುಂಡೇಶ್ವರಿಯ ದರ್ಶನಕ್ಕೆ ಅವಕಾಶ ಇರುವುದಿಲ್ಲ, ಚಂದ್ರ ಗ್ರಹಣದ ಸ್ಪರ್ಶ ಕಾಲ ಹಾಗೂ ಮೋಕ್ಷ ಕಾಲಗಳಲ್ಲಿ ವಿಶೇಷ ಪೂಜೆಗಳು ನಡೆಯಲಿದೆ. ಚಂದ್ರ ಗ್ರಹಣದ ನಂತರ ದೇವಾಲಯದ ಗರ್ಭ ಗುಡಿಯ ಸ್ವಚ್ಛತೆ, ಗ್ರಹಣದ ನಂತರ ನಡೆಯುವ ಅಭಿಷೇಕ ಮತ್ತು ಮಹಾ ಮಂಗಳಾರತಿ ಹಿನ್ನೆಲೆಯಲ್ಲಿ ಭಕ್ತರ ಭೇಟಿಯನ್ನು ನಿರ್ಬಂಧಿಸಲಾಗಿದೆ ಎಂದು ಚಾಮುಂಡಿ ಬೆಟ್ಟದ ಕಾರ್ಯನಿರ್ವಹಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಧರ್ಮಸ್ಥಳದಲ್ಲೂ ದೇವರ…

Read More

ಮಂಗಳೂರು :ಸೆಂಟ್ರಲ್ ಮಾರ್ಕೆಟ್ ನಲ್ಲಿ ನಿರ್ಮಾಣವಾಗಲಿರುವ ನೂತನ ಕಟ್ಟದಲಲ್ಲಿ ಭೀಪ್ ಸ್ಟಾಲ್ ಗಳಿದ್ದರೆ ನಾನು ಮಾರುಕಟ್ಟೆ ನಿರ್ಮಾಣಕ್ಕೆ ಭೂಮಿಪೂಜೆಯನ್ನೇ ಮಾಡುವುದಿಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಬೀಫ್ ಸ್ಟಾಲ್ ಕುರಿತು ಇಂದು ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದ ಶಾಸಕ ಕಾಮತ್, ಈ ಹಿಂದಿನ ಮಾರುಕಟ್ಟೆಯ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನವಾಗಿ 114 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ನೂತನವಾಗಿ ನಿರ್ಮಿಸುವ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್ ಗಳಿಗೆ ಅವಕಾಶ ನೀಡುವುದಿಲ್ಲ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನ ಜಾರಿಗೊಳಿಸಿದ ಬಳಿಕ ಗೋಹಂತಕರ ಆಸ್ತಿ ಜಪ್ತಿ, ಕಠಿಣ ಕಾನೂನು ಕ್ರಮಗಳ ಮೂಲಕ ಗೋಹಂತಕರಿಗೆ ಸ್ಪಷ್ಟ ಸಂದೇಶ ನೀಡಲಾಗಿದೆ ಎಂದು ಹೇಳಿದರು. ನೂತನ ಮಾರುಕಟ್ಟೆ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಿದ್ದ‌ ಸಂದರ್ಭದಲ್ಲಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಾಗಿರಲಿಲ್ಲ. ಸದ್ಯ ಗೋಹತ್ಯೆ ನಿಷೇಧ ಕಾನೂನು ಜಾರಿಗೊಂಡಿದ್ದು ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್ ಗಳಿಗೆ ಅನುಮತಿ ನೀಡಲಾಗುವುದಿಲ್ಲ. ಹಿಂದೆ…

Read More

ಬೆಂಗಳೂರು: ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿ ವಯೋಮಿತಿಯಲ್ಲಿ ಎರಡು ವರ್ಷ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು 2022-23ನೇ ಸಾಲಿನ ನೇಮಕಾತಿಗೂ ಕೂಡಾ ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಿದೆ. ಆದೇಶದ ಪ್ರಕಾರ ವಯಸ್ಸು 25ರಿಂದ 27ವರ್ಷಕ್ಕೆ ಎಸ್‌ಸಿ ಎಸ್‌ಟಿ ಮತ್ತು ಹಿಂದುಳಿದ ವರ್ಗಕ್ಕೆ 27ರಿಂದ 29ಕ್ಕೆ ಹಾಗೂ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 30ರಿಂದ 32ಕ್ಕೆ ಏರಿಕೆ ಆಗಲಿದೆ. ಅಭ್ಯರ್ಥಿಗಳು ವಯಸ್ಸಿನ ಕಾರಣಕ್ಕೆ ಅರ್ಜಿ ಸಲ್ಲಿಸುವ ಅವಕಾಶದಿಂದ ವಂಚಿತರಾಗಿದ್ದರು. ಹೀಗಾಗಿ ವಯೋಮಿತಿ ಹೆಚ್ಚಳಕ್ಕೆ ಸಾಕಷ್ಟು ಮನವಿ ಬಂದಿತ್ತು. ಈಗ ಅದನ್ನು ಪರಿಗಣಿಸಿ ಹೊಸ ಆದೇಶವನ್ನು ಹೊರಡಿಸಲಾಗಿದೆ.

Read More

ನವದೆಹಲಿ: ಸೂರ್ಯ ಗ್ರಹಣ (ಸೂರ್ಯಗ್ರಹಣ) ನಂತರ ನಾಳೆ ಚಂದ್ರ ಗ್ರಹಣ ಸಂಭವಿಸಲಿದೆ.ಚಂದ್ರೋದಯದ ಸಮಯದಲ್ಲಿ, ಗ್ರಹಣವು ದೇಶದ ಎಲ್ಲಾ ಭಾಗಗಳಿಂದ ಗೋಚರಿಸುತ್ತದೆ. ಚಂದ್ರೋದಯಕ್ಕೆ ಮುಂಚಿತವಾಗಿ ಈ ವಿದ್ಯಮಾನವು ಪ್ರಗತಿಯಲ್ಲಿರುವುದರಿಂದ, ಚಂದ್ರಗ್ರಹಣದ ಭಾಗಶಃ ಮತ್ತು ಒಟ್ಟು ಹಂತಗಳ ಪ್ರಾರಂಭವು ಭಾರತದ ಯಾವುದೇ ಭಾಗದಿಂದ ಗೋಚರಿಸುವುದಿಲ್ಲ. ಚಂದ್ರಗ್ರಹಣದ ಒಟ್ಟು ಮತ್ತು ಭಾಗಶಃ ಹಂತಗಳು ದೇಶದ ಪೂರ್ವ ಭಾಗಗಳಲ್ಲಿ ಕೊನೆಗೊಳ್ಳುತ್ತವೆ. ಕೋಲ್ಕತಾದ ಸ್ಥಾನೀಯ ಖಗೋಳಶಾಸ್ತ್ರ ಕೇಂದ್ರ ಮತ್ತು ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಭಾಗಶಃ ಹಂತದ ಅಂತ್ಯವು ದೇಶದ ಉಳಿದ ಭಾಗಗಳಿಂದ ಮಾತ್ರ ಗೋಚರಿಸುತ್ತದೆ. ಈ ಚಂದ್ರಗ್ರಹಣವು ದಕ್ಷಿಣ ಮತ್ತು ಉತ್ತರ ಅಮೆರಿಕ, ಆಸ್ಟ್ರೇಲಿಯಾ, ಏಷ್ಯಾ, ಉತ್ತರ ಅಟ್ಲಾಂಟಿಕ್ ಸಾಗರ ಮತ್ತು ಪೆಸಿಫಿಕ್ ಸಾಗರದಲ್ಲಿ ಗೋಚರಿಸುತ್ತದೆ.ಗ್ರಹಣವು ಭಾರತೀಯ ಕಾಲಮಾನ 14:39 ಕ್ಕೆ ಪ್ರಾರಂಭವಾಗುತ್ತದೆ. ಸಂಪೂರ್ಣ ಗ್ರಹಣವು ಭಾರತೀಯ ಕಾಲಮಾನ 15:46 ಕ್ಕೆ ಪ್ರಾರಂಭವಾಗುತ್ತದೆ. ಒಟ್ಟು ಮೊತ್ತವು ಭಾರತೀಯ ಕಾಲಮಾನ 17 ಘಂಟೆ 12 ಮೀ ಕ್ಕೆ ಕೊನೆಗೊಳ್ಳುತ್ತದೆ, ಮತ್ತು ಭಾಗಶಃ ಹಂತವು 18 ಘಂಟೆ 19 ಮೀ…

Read More

ನವದೆಹಲಿ: ಹಿಂದುಳಿದ ವರ್ಗದವರಿಗೆ ( backward classes ) ಶಿಕ್ಷಣ ಮತ್ತು ಉದ್ಯೋಗದಲ್ಲಿ ಆರ್ಥಿಕವಾಗಿ ( EWS) ಶೇ.10ರಷ್ಟು ಮೀಸಲಾತಿ ಕಲ್ಪಿಸುವ ಕುರಿತಂತೆ ಸಂವಿಧಾನದ 103ನೇ ತಿದ್ದುಪಡಿಯ ಸಾಂವಿಧಾನಿಕ ಮಾನ್ಯತೆ ಕುರಿತು ಸುಪ್ರೀಂ ಕೋರ್ಟ್ ನೀಂದ ( Supreme Court ) ಮಹತ್ವದ ತೀರ್ಪು ಇಂದು ಪ್ರಕಟವಾಗಲಿದೆ. ಹೀಗಾಗಿ ಎಲ್ಲರ ಚಿತ್ತ, ಇಂದಿನ ಸುಪ್ರೀಂ ಕೋರ್ಟ್ ತೀರ್ಪಿನತ್ತ ನೆಟ್ಟಿದೆ. ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಯು.ಯು ಲಲಿತ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಸೆಪ್ಟೆಂಬರ್ 27ರಂದು ಈ ಸಂಬಂಧ ಸಲ್ಲಿಕೆಯಾಗಿದ್ದಂತ ಅರ್ಜಿಗಳ ವಿಚಾರಣೆ ನಡೆಸಿತ್ತು. ಈ ಬಳಿಕ ತನ್ನ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಸುಪ್ರೀಂ ಕೋರ್ಟ್ ನ್ಯಾಯಪೀಠದ ಮುಂದೆ ಹಿಂದುಳಿದ ವರ್ಗದವರಿಗೆ ಮೀಸಲು ಕಲ್ಪಿಸುವ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿದೆ. ಸಂವಿಧಾನದ 103ನೇ ತಿದ್ದುಪಡಿಯನ್ನು ಅಸಿಂಧುಗೊಳಿಸಬೇಕೆಂದು ಒಂದು ವರ್ಗ ವಾದ ಮಾಡಿಸಿತ್ತು. ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರವು ಶೇ.50:50ರ ಮೀಸಲಿಗೆ ಧಕ್ಕೆ ಬಾರದ ರೀತಿಯಲ್ಲಿ EWSಗೆ ಮೀಸಲು ಕಲ್ಪಿಸಲಾಗಿದೆ…

Read More

ಬೆಂಗಳೂರು: ಮಂಗಳೂರು‌ ನಿವಾಸಿ ಬೆಂಗಳೂರಿನ ಕುಣಿಗಲ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆರೆಸ್ಸೆಸ್ ಮತ್ತು ಬಿಜೆಪಿಯಲ್ಲಿ ಸಕ್ರಿಯರಾಗಿದ್ದ ಬಜ್ಪೆಯ ಭಾಸ್ಕರದಾಸ್ ಎಕ್ಕಾರು (65) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರು-ಮಂಗಳೂರು ರಾ.ಹೆ.ಯ ಕುಣಿಗಲ್ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ಭಾಸ್ಕರದಾಸ್ ಗಂಭೀರವಾಗಿ ಗಾಯಗೊಂಡಿದ್ದರು.ತಕ್ಷಣ ಅವರನ್ನು ಬೆಂಗಳೂರಿನ ಅಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು‌ ಮೃತಪಟ್ಟಿದ್ದಾರೆ. ಇವರು‌ ಬಿಜೆಪಿಯ ಸಕ್ರಿಯ ಕಾರ್ಯಕರ್ತ ಹಾಗೂ ಆರೆಸೆಸ್ಸ್ ಕರ್ನಾಟಕ ದಕ್ಷಿಣ ಪ್ರಾಂತದ ಧರ್ಮ ಜಾಗರಣಾ ಸಮನ್ವಯ ಪರಿಯೋಜನಾ ಪ್ರಮುಖ್ ಆಗಿ ಕೆಲಸ ಮಾಡಿದ್ದರು.

Read More

ಬೆಂಗಳೂರು : ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, ರಾಜ್ಯದ ವಿವಿಧ ಪೊಲೀಸ್ ಠಾಣೆಗಳ 10 ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವರ್ಗಾವಣೆಗೊಂಡ 10 ಪೊಲೀಸ್ ಇನ್ಸ್ ಪೆಕ್ಟರ್ ಗಳ ಪಟ್ಟಿ ಸೋಮೇಗೌಡ .ಪಿ.ಪಿ., ಮೂಡಿಗೆರೆ ಸರ್ಕಲ್, ಚಿಕ್ಕಮಗಳೂರು ಶರಣಪ್ಪ ಗೌಡ ಬಿ ಗೌಡರ್, ಹೆಸ್ಕಾಂ ಜಾಗೃತ ದಳ, ವಿಜಯಪುರ ಶ್ರೀನಿವಾಸ್ .ಸಿ. ಮೇಟಿ, ಹೊಸಪೇಟೆ ಸಂಚಾರಿ ಪೊಲೀಸ್ ಠಾಣೆ, ವಿಜಯನಗರ ರವಿ ಪ್ರಕಾಶ್ .ಆರ್., ಕೆ. ಪಿ. ಅಗ್ರಹಾರ ಪೊಲೀಸ್ ಠಾಣೆ, ಬೆಂಗಳೂರು ರಾಮಕೃಷ್ಣ ರೆಡ್ಡಿ .ಎಂ. ಬಿ., ಚಿಕ್ಕಜಾಲ ಪೊಲೀಸ್ ಠಾಣೆ, ಬೆಂಗಳೂರು ಗಿರೀಶ್ .ಎಂ. ಎಲ್., ಮೈಕೋ ಲೇಔಟ್ ಪೊಲೀಸ್ ಠಾಣೆ, ಬೆಂಗಳೂರು ಸುನೀಲ್ ಕುಮಾರ್ .ಬಿ., ಮಾಸ್ತಿ ಪೊಲೀಸ್ ಠಾಣೆ, ಕೋಲಾರ 8.ಕವಿತ ಜಿ. ಎಂ., ಸಿಸಿಬಿ, ಬೆಂಗಳೂರು 9.ಸತೀಶ್ ಕುಮಾರ್, ಹರಿಹರ ಸರ್ಕಲ್, ದಾವಣಗೆರೆ ಕುಮಾರಸ್ವಾಮಿ .ಎಸ್. ಪಿ., ವಿಧಾನಸೌಧ ಪೊಲೀಸ್ ಠಾಣೆ, ಬೆಂಗಳೂರು

Read More

ಮಂಗಳೂರು: ಲಾರಿ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ದಾರುಣವಾಗಿ ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ನಡೆದಿದೆ. ಜಪ್ಪಿನಮೊಗರು ತಂದೊಳಿಗೆ ನಿವಾಸಿ ಗಂಗಾಧರ (45) ಕೊಣಾಜೆ ಸಮೀಪದ ಪಜೀರ್ ನಿವಾಸಿ ನೇತ್ರಾವತಿ(48) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ನೇತ್ರಾವತಿಯ ಪುತ್ರಿ ಮೋಕ್ಷ (4) ಹಾಗೂ ನೇತ್ರಾವತಿಯ ಅಕ್ಕನ ಮಗ ಜ್ಞಾನೇಶ್ (6) ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಂಪ್‌ ವೆಲ್‌ನಿಂದ ತೊಕ್ಕೊಟ್ಟು ಕಡೆಗೆ ಹೋಗುತ್ತಿದ್ದ ಸ್ಕೂಟರ್‌ ಕಲ್ಲಾಪು ಬಳಿ ತಲುಪಿದಾಗ ಇಲ್ಲಿನ ಖಾಸಗಿ ಮಾರುಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಲಾರಿ ಬಂದಿದ್ದು, ಈ ವೇಳೆ ಈ ಅಪಘಾತ ಸಂಭವಿಸಿದೆ. ಅಪಘಾತದ ಪರಿಣಾಮ ಸ್ಕೂಟರ್‌ ನಲ್ಲಿದ್ದ ನಾಲ್ವರು ರಸ್ತೆಗೆ ಎಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಗಂಗಾಧರ ಮತ್ತು ನೇತ್ರಾವತಿ ಮೃತಪಟ್ಟಿದ್ದಾರೆ. ಆರೋಪಿ ಲಾರಿ ಚಾಲಕ ಹನೀಫ್ ವಿರುದ್ಧ ಮಂಗಳೂರು ಸಂಚಾರ ದಕ್ಷಿಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Read More

ಆಹಾರದಲ್ಲಿ ಕಾಳುಗಳಿದ್ದರೆ ರುಚಿ ಹೆಚ್ಚಾಗುತ್ತದೆ. ಹಸಿ ಕಾಳುಗಳು ಎಲ್ಲಾ ಕಾಲದಲ್ಲೂ ಸಿಗುವುದಿಲ್ಲ. ಒಣ ಕಾಳುಗಳನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಅಂತಹ ಕಾಳುಗಳಲ್ಲಿ ಒಂದಾದ ಹೆಸರುಕಾಳು ಉಸುಳಿ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: ಹೆಸರುಕಾಳು -500 ಗ್ರಾಂ, ಹಸಿಮೆಣಸಿನ ಕಾಯಿ -4, ಉಪ್ಪು -2 ಚಮಚ, ಕೊಬ್ಬರಿ ತುರಿ -100 ಗ್ರಾಂ, ಕರಿಬೇವು -4 ಎಲೆ, ಸಾಸಿವೆ -1 ಚಮಚ, ಎಣ್ಣೆ -2 ಚಮಚ. ತಯಾರಿಸುವ ವಿಧಾನ: ಹೆಸರುಕಾಳುಗಳನ್ನು 4 -5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿರಿ. ನಂತರ ಕುಕ್ಕರ್ ನಲ್ಲಿಟ್ಟು ಬೇಯಿಸಿ. ಮೆಣಸಿನ ಕಾಯಿ ಕರಿಬೇವನ್ನು ಸಣ್ಣಗೆ ಹೆಚ್ಚಿಕೊಳ್ಳಿರಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಒಲೆಯ ಮೇಲೆ ಇಟ್ಟು ಕಾಯಿಸಿರಿ. ಸಾಸಿವೆ ಒಗ್ಗರಣೆ ಮಾಡಿ ಮೆಣಸಿನ ಕಾಯಿ, ಕರಿಬೇವು ಹಾಕಿ ಕರಿಯಿರಿ. ನಂತರ ಬೇಯಿಸಿಕೊಂಡ ಕಾಳು, ಕೊಬ್ಬರಿ ತುರಿ, ಉಪ್ಪು ಹಾಕಿ ಕಲೆಸಿರಿ. 2 ನಿಮಿಷವಾದ ನಂತರ ಬಾಣಲೆಯನ್ನು ಒಲೆಯಿಂದ ಕೆಳಗೆ ಇಳಿಸಿ ಹೆಸರುಕಾಳು ಉಸುಳಿಯನ್ನು ತಟ್ಟೆಗೆ ಹಾಕಿಕೊಂಡು ತಿನ್ನಿರಿ.

Read More