Author: main-admin

ಮಂಗಳೂರು: ನಗರದ ಬೋಳಾರದಲ್ಲಿರುವ ಸಲೂನ್ ಮಾಲಕ ಎಡ್ವಿನ್ ವಿನಯ್ ಕುಮಾರ್ ಗೆ ಚೂರಿಯಿಂದ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳದ ಬರಿಮಾರು ಗ್ರಾಮ ನಿವಾಸಿ ಆನಂದ ಸಪಲ್ಯ(55) ಬಂಧಿತ ಆರೋಪಿ. ಆನಂದ ಸಪಲ್ಯ ಶನಿವಾರ ಸಂಜೆ ವೇಳೆ ಮದ್ಯಸೇವಿಸಿ ಬೋಳಾರದಲ್ಲಿರುವ ಸಲೂನ್ ಗೆ ಬಂದಿದ್ದಾನೆ. ಈ ವೇಳೆ ಆತ ಸಲೂನ್ ಮಾಲಕನ ಎಡ್ವಿನ್ ವಿನಯ್ ಕುಮಾರ್ ಎದೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ಚೂರಿ ಇರಿತದ ಪರಿಣಾಮ ಗಾಯಗೊಂಡ ಎಡ್ವಿನ್ ವಿನಯ್ ಕುಮಾರ್ ಅವರನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಪರಾರಿಯಾಗಿದ್ದ ಆನಂದ ಸಪಲ್ಯನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕಡಬ ಸಮೀಪದ ಪುಳಿಕುಕ್ಕು ಎಂಬಲ್ಲಿ ಕುಮಾರಧಾರಾ ನದಿಯಲ್ಲಿ ಮೊಸಳೆ ಸಾವಿಗೆ ತ್ಯಾಜ್ಯ ಸೇವನೆ ಹಾಗೂ ಪ್ಲಾಸ್ಟಿಕ್‌ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ಮರಣೋತ್ತರ ಪರೀಕ್ಷೆ ವೇಳೆ ಮೊಸಳೆಯ ಹೊಟ್ಟೆಯಲ್ಲಿ 1 ಕೆ.ಜಿ.ಗೂ ಅಧಿಕ ಪ್ಲಾಸ್ಟಿಕ್‌ ಮತ್ತಿತರ ತ್ಯಾಜ್ಯ ಪತ್ತೆಯಾಗಿದೆ. ಪ್ಲಾಸ್ಟಿಕ್‌ನಲ್ಲಿದ್ದ ತ್ಯಾಜ್ಯ ಅಜೀರ್ಣ ವಾದದ್ದು ಮೊಸಳೆಯ ಸಾವಿಗೆ ಕಾರಣವಾಯಿತೇ ಅಥವಾ ಪ್ಲಾಸ್ಟಿಕ್‌ ಕಾರಣವಾಯಿತೇ ಎಂಬುದು ಇನ್ನಷ್ಟು ತನಿಖೆಯಿಂದ ಹೊರಬರಬೇಕಿದೆ. ಇದು ಆತಂಕಕಾರಿ ಯಾಗಿದ್ದು, ಪ್ಲಾಸ್ಟಿಕ್‌ ಹಾಗೂ ತ್ಯಾಜ್ಯ ಸೇವನೆಯಿಂದ ಮೊಸಳೆ ಸತ್ತ ಪ್ರಕರಣ ಇದು ಮೊದಲನೆಯದಾಗಿದೆ. ಕಡಬ-ಪಂಜ ಸಂಪರ್ಕ ರಸ್ತೆಯ ಪಂಜ ವಲಯ ಅರಣ್ಯ ವ್ಯಾಪ್ತಿಯ ಪುಳಿಕುಕ್ಕು ಸೇತುವೆ ಕೆಳಭಾಗದ ಕುಮಾರಧಾರಾ ಹೊಳೆಯ ಕೊಡಿಂಬಾಳ ಗ್ರಾಮದ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಗ್ಗೆ ಮೊಸಳೆಯ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ವೇಳೆ ತ್ಯಾಜ್ಯ ಪತ್ತೆಅರಣ್ಯ ಇಲಾಖೆಯ ಏನೆಕಲ್ಲು ನರ್ಸರಿ ಪ್ರದೇಶದಲ್ಲಿ ಮೊಸಳೆಯ ಮರಣೋತ್ತರ ಪರೀಕ್ಷೆಯನ್ನು ಕಡಬದ ಪಶುವೈದ್ಯಾಧಿಕಾರಿ ಡಾ| ಅಜಿತ್‌ ನಡೆಸಿದರು. ಮೊಸಳೆಯ ಹೊಟ್ಟೆಯಲ್ಲಿ ಪ್ಲಾಸ್ಟಿಕ್‌ ಕವರ್‌ನಲ್ಲಿ ತುಂಬಿದ್ದ ಕೋಳಿ ತ್ಯಾಜ್ಯ, ಮಕ್ಕಳಿಗೆ ಬಳಸುವ…

Read More

ನವದೆಹಲಿ : ಮಕ್ಕಳಿಗೆ ಕುಡಿಸುವ ಬೋರ್ನ್ ವಿಟಾ ಇನ್ನು ಮುಂದೆ ಹೆಲ್ತ್ ಡ್ರಿಂಕ್ಸ್ ವರ್ಗದಿಂದ ತೆಗೆದು ಹಾಕುವಂತೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ-ಕಾಮರ್ಸ್ ಕಂಪನಿಗಳಿಗೆ ಸಲಹೆ ನೀಡಿದೆ. ಪೋರ್ಟಲ್ ಮತ್ತು ಪ್ಲಾಟ್‍ಫಾರ್ಮ್‍ಗಳಲ್ಲಿ ಬೋರ್ನ್‍ವಿಟಾ ಸೇರಿದಂತೆ ಎಲ್ಲಾ ಪಾನೀಯಗಳು ಈ ವರ್ಗದಿಂದ ಕೈಬಿಡುವಂತೆ ಆದೇಶ ನೀಡಲಾಗಿದೆ. ಕಾರಣ ಏನು… ಒಬ್ಬ ಯುಟ್ಯೂಬರ್ ಬೋರ್ನ್ ವೀಟಾದಲ್ಲಿ ಹೆಚ್ಚಿನ ಪ್ರಮಾಣ ಸಕ್ಕರೆ ಅಂಶ ಇರುವ ಬಗ್ಗೆ ವಿಡಿಯೋ ಮಾಡಿದ್ದ, ಅಲ್ಲದೆ ಪ್ರಯೋಗ ಮೂಲಕ ಆತ ಅದನ್ನು ತೋರಿಸಿದ್ದ. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸರಕಾರ ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್‌ನ ತನಿಖೆಯಯಲ್ಲಿ ಬೋರ್ನ್‍ವಿಟಾ ಹೆಚ್ಚಿನ ಸಕ್ಕರೆ ಮಟ್ಟವನ್ನು ಹೊಂದಿದೆ ಎಂದು ತಿಳಿದುಬಂದಿದೆ. ಇದು ಸ್ವೀಕಾರಾರ್ಹ ಮಿತಿಗಳಿಗಿಂತ ಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಂಪನಿಗಳು ಸುರಕ್ಷತಾ ಮಾನದಂಡಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಲು ವಿಫಲವಾಗಿವೆ. ಅಲ್ಲದೇ ಆರೋಗ್ಯಕರ ಪಾನೀಯಗಳು ಎಂದು ಬಿಂಬಿಸುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಎನ್‍ಸಿಪಿಸಿಆರ್, ಭಾರತೀಯ ಆಹಾರ…

Read More

ಮಂಗಳೂರು : ನಾಳೆ ಮಂಗಳೂರಿನಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಸಮಯ ಬದಲಾವಣೆ ಆಗಿದೆ. ನಾಳೆ ರಾತ್ರಿ 7.45ಕ್ಕೆ ಲೇಡಿಹಿಲ್ ನಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಸರ್ಕಲ್ ನಿಂದ ರೋಡ್ ಶೋ ಆರಂಭವಾಗಲಿದೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಸುನಿಲ್ ಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ನಾಳೆ ಸಂಜೆ 7.45 ಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಆರಂಭವಾಗಿ ನವಭಾರತ್ ಸರ್ಕಲ್ ವರೆಗೆ ರೋಡ್ ಶೋವರೆಗೆ ನಡೆಯಲಿದೆ. ವಿಜಯ ಸಂಕಲ್ಪ ರೋಡ್ ಶೋನಲ್ಲಿ ಭಾಗವಹಿಸಲು ಬರುವವರು 6.45 ರಿಂದ 7ರೊಳಗೆ ಬರಬೇಕು ಎಂದು ಹೇಳಿದರು.

Read More

ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬಾಂಬರ್ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಸ್ಫೋಟದ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹಾನನ್ನು ನ್ಯಾಯಾಧೀಶರು 10 ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳ ವಶಕ್ಕೆ ನೀಡಿ ಆದೇಶಿಸಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಗೊಳಿಸಿ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ತಲೆಮರೆಸಿಕೊಂಡಿದ್ದ ಉಗ್ರರನ್ನು ಎನ್​​ಐಎ ಅಧಿಕಾರಿಗಳು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ. ಇಬ್ಬರು ಉಗ್ರರನ್ನು ಎನ್​ಐಎ ಅಧಿಕಾರಿಗಳು ಮಂಡಿವಾಳದ ಎಫ್​ಎಸ್​ಎಲ್​ ಸೆಂಟರ್​ ಬಳಿಯಿರುವ ಇಂಟ್ರಾಗೇಷನ್​​ ಸೆಲ್​ನಲ್ಲಿ ವಿಚಾರಣೆ ನಡೆಸಿದರು. ಬಳಿಕ ಬೆಳಿಗ್ಗೆ 10:30 ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮ ಸಮುಚ್ಚಯದಲ್ಲಿರುವ ನಿವಾಸದಲ್ಲಿ ನ್ಯಾಯಾಧೀಶರ ಮುಂದೆ ಉಗ್ರರನ್ನು ಹಾಜರುಪಡಿಸಿದರು. ಈ ವೇಳೆ ನ್ಯಾಯಾಧೀಶರು 10 ದಿನಗಳ ಕಾಲ ಎನ್​ಐಎ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ. ಕಳೆದ ಮಾರ್ಚ್ 1 ರಂದು ಬೆಂಗಳೂರಿನ ಐಟಿ ಕಾರಿಡಾರ್ ಕುಂದಲ ಹಳ್ಳಿ ಕಾಲೋನಿಯಲ್ಲಿರುವ ದಿ ರಾಮೇಶ್ವರ ಕೆಫೆಗೆ ಗ್ರಾಹಕನೆತ ತೆರಳಿ ಟಿಫನ್ ಬಾಕ್ಸ್ ಬ್ಯಾಗ್ ನಲ್ಲಿ ಬಾಂಬ್ ಇಟ್ಟು ಮುಸಾವೀರ್…

Read More

ಉಪ್ಪಿನಂಗಡಿ : ಕಾರಿನಲ್ಲಿ ಬಂದ ತಂಡವೊಂದು ಯುವಕನಿಗೆ ಚೂರಿ ಇರಿದು ಪರಾರಿಯಾದ ಘಟನೆ ಬಿಳಿಯೂರು ಗ್ರಾಮದ ಕರ್ವೇಲು ಬಳಿ ಎ.12ರಂದು ನಡೆದಿದೆ. ಕರ್ವೇಲು ಜನತಾ ಕಾಲನಿ ನಿವಾಸಿ ಹಕೀಂ (34) ಚೂರಿ ಇರಿತಕ್ಕೆ ಒಳಗಾಗಿ ಗಾಯಗೊಂಡ ಯುವಕ ಹಕೀಂ ಕರ್ವೇಲು ಜಂಕ್ಷನ್ ಬಳಿ ನಿಂತಿದ್ದ ಸಂದರ್ಭ ಅಲ್ಲಿಗೆ ಕಾರಿನಲ್ಲಿ ಬಂದ ತಂಡವೊಂದು ಚೂರಿಯಿಂದ ಇರಿದು ಪರಾರಿಯಾಗಿದ್ದು,ಗಾಯಗೊಂಡ ಹಕೀಂ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು: ಪ್ರಧಾನಿ ನರೇಂದ್ರ ಮೋದಿರವರು ಏಪ್ರೀಲ್ 14‌ ರಂದು ಮಂಗಳೂರಿನ ಲೇಡಿಹಿಲ್ ಬಳಿಯ ಶ್ರೀ ನಾರಾಯಣಗುರು ವೃತ್ತದಿಂದ ನವಭಾರತ ಸರ್ಕಲ್‌ವರೆಗೆ ರೋಡ್ ಶೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಇತರೆ ಜಿಲ್ಲೆಗಳಿಂದ ಸಾರ್ವಜನಿಕರು ಆಗಮಿಸಲಿದ್ದು, ಗೌರವಾನ್ವಿತ ಪ್ರಧಾನಮಂತ್ರಿಗಳ ಭದ್ರತೆಯ ದೃಷ್ಟಿಯಿಂದ ಹಾಗೂ ಸಂಚಾರ ಸುವ್ಯವಸ್ಥೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಹಿತದೃಷ್ಟಿಯಿಂದ ಏಪ್ರೀಲ್ 14‌ ರಂದು ಮಧ್ಯಾಹ್ನ 02-00 ಗಂಟೆಯಿಂದ ಪ್ರಧಾನ ಮಂತ್ರಿಗಳ ಕಾರ್ಯಕ್ರಮ ಮುಗಿಯುವವರೆಗೆ ಮಂಗಳೂರು ನಗರದಲ್ಲಿ ವಾಹನಗಳ ಸಂಚಾರಕ್ಕಾಗಿ ಪರ್ಯಾಣಯ ವ್ಯವಸ್ಥೆಯನ್ನು ಮಾಡಲಾಗಿದ್ದು, ವಾಹನಗಳ ಸಂಚಾರದ/ನಿಲುಗಡೆಯ ನಿಷೇಧಿತ ಸ್ಥಳ ಹಾಗೂ ವಾಹನಗಳ ಪಾರ್ಕಿಂಗ್ ಸ್ಥಳಗಳ ವಿವರಗಳು ಈ ಕೆಳಗಿನಂತಿದೆ. ವಾಹನ ಸಂಚಾರ ನಿಷೇಧಿತ ಮಾರ್ಗಗಳು 1. ಗೌರವಾನ್ವಿತ ಭಾರತದ ಪ್ರಧಾನಮಂತ್ರಿಗಳ ರೋಡ್ ಶೋ ನಡೆಯುವ ಲೇಡಿಹಿಲ್ ಬಳಿಯ ಶ್ರೀ ನಾರಾಯಣಗುರು ವೃತ್ತ – ಲಾಲ್‌ಬಾಗ್ – ಬಲ್ಲಾಳ್‌ಬಾಗ್ – ಕೊಡಿಯಾಲ್ ಗುತ್ತು – ಬಿ.ಜಿ ಸ್ಕೂಲ್ ಜಂಕ್ಷನ್ – ಪಿ.ವಿ.ಎಸ್ – ನವಭಾರತ ವೃತ್ತ –…

Read More

ಮಂಗಳೂರು : ಬೆಂಗಳೂರು-ಮಂಗಳೂರು ಮಧ್ಯೆ ಸಂಚರಿಸುವ ರೈಲಿನ ಎಸಿ ಕೋಚ್ ನಲ್ಲಿ 3.91 ಲಕ್ಷ ರೂ. ಮೌಲ್ಯದ 59.885 ಗ್ರಾಂ ಚಿನ್ನಾಭರಣ ಕಳವಾಗಿರುವ ಬಗ್ಗೆ ರೈಲ್ವೆ ಠಾಣೆಯಲ್ಲಿ ದೂರು ದಾಖಲಾಗಿದೆ. ಮಂಗಳೂರು ನಗರದ ಜಪ್ಪು ನಿವಾಸಿ 74ರ ಹರೆಯದ ವೃದ್ಧೆ, ಆಕೆಯ ಮಗಳು ಹಾಗೂ ಮೊಮ್ಮಕ್ಕಳು ಏಪ್ರಿಲ್ 7ರಂದು ಬೆಂಗಳೂರಿನಿಂದ ಮಂಗಳೂರಿಗೆ ರೈಲಿನಲ್ಲಿ ಬರುತ್ತಿದ್ದರು. ಬಳಿಕ ಏಪ್ರಿಲ್ 8 ರಂದು ಬೆಳಗ್ಗೆ ಮನೆಗೆ ತಲುಪಿದಾಗ ವ್ಯಾನಿಟಿ ಬ್ಯಾಗ್‌ನಲ್ಲಿಟ್ಟಿದ್ದ ಎರಡು ಬಳೆಗಳು, ಸರ ಸೇರಿ ಸುಮಾರು 59.885 ಗ್ರಾಂ ಚಿನ್ನಾಭರಣ ಕಳವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ರೈಲ್ವೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ವರದಿಯಾಗಿದೆ.

Read More

ಹಾಸನದಲ್ಲಿ ಆರ್‌ಎಸ್‌ಎಸ್‌ ಮುಖಂಡ ವಿಜಯ್‌ಕುಮಾರ್ ಮತ್ತು ಸ್ನೇಹಿತರ ಮೇಲೆ ದುಷ್ಕರ್ಮಿಗಳ ಗುಂಪೊಂದು ಶುಕ್ರವಾರ ದಾಳಿ ನಡೆಸಿದೆ ವಿಜಯ್‌ಕುಮಾರ್ ಎಂದಿನಂತೆ ತನ್ನ ಕಚೇರಿಯಲ್ಲಿದ್ದಾಗ  ಏಕಾಏಕಿ ಅಂಗಡಿಗೆ ನುಗ್ಗಿರುವ 50ಕ್ಕೂ ಹೆಚ್ಚು ಜನರಿದ್ದ ದುಷ್ಕರ್ಮಿಗಳ ಗುಂಪು ಗಲಾಟೆ ಮಾಡಿ ಕಚೇರಿಯ ಗಾಜು ಮತ್ತು ಕೆಲವು ಕಂಪ್ಯೂಟರ್ ಉಪಕರಣಗಳನ್ನು ಪುಡಿ ಪುಡಿ ಮಾಡಿದೆ. ಇದೇ ಸಂದರ್ಭ ಕಚೇರಿಯ ಒಳಗೆ ಕುಳಿತಿದ್ದ ವಿಜಯ್ ಕುಮಾರ್ ಮೇಲೂ ಹಲ್ಲೆ ಮಾಡಿದೆ. ಪ್ರೀತಂಗೌಡನ ಬಗ್ಗೆ ಮಾತನಾಡುತ್ತೀಯಾ? ಎಷ್ಟೋ ಧೈರ್ಯ ನಿನಗೆ ಎಂದು ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ತಕ್ಷಣ ವಿಜಯ್ ಕುಮಾರ್ ಸ್ನೇಹಿತರು ಆಗಮಿಸಿ ಹಲ್ಲೆ ಬಿಡಿಸಲು ಮುಂದಾದಾಗ ಅವರುಗಳ ಮೇಲೆಯೂ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ. ನಂತರ ಸ್ಥಳೀಯರು ಆಗಮಿಸಿ ದುಷ್ಕರ್ಮಿಗಳನ್ನು ಹಿಡಿಯಲು ಮುಂದಾದಾಗ ಅಲ್ಲಿಂದ ಎಲ್ಲರೂ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನೆಗೆ ಮೂಲ ಕಾರಣ ಏನು?ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಾದ ಮೇಲೆ ಇತ್ತಿಚೆಗೆ ಸಂಸದರಾದ ಪ್ರಜ್ವಲ್ ರೇವಣ್ಣ ಅವರು ಐನೆಟ್ ವಿಜಯಕುಮಾರ್ ಮನೆಗೆ ಹೋಗಿ ಚರ್ಚೆ ಮಾಡಿದ್ದರು. ಇತ್ತ ಮಾಜಿ ಶಾಸಕರು…

Read More

ಮಂಗಳೂರು: ಬಾವಿಯಿಂದ ನೀರು ಸೇದುವ ವೇಳೆ ಆಯ ತಪ್ಪಿದ ಮಹಿಳೆಯೊಬ್ಬರು ಬಾವಿಗೆ ಬಿದ್ದಿದ್ದು, ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿ ಗುರುವಾರ ರಕ್ಷಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ರಕ್ಷಿಸಲ್ಪಟ್ಟ ಮಹಿಳೆ ಬಿಕ್ಕರ್ನಕಟ್ಟೆ ಸಮೀಪದ ನಿವಾಸಿ ಟ್ರೆಸ್ಸಿ ಡಿಸೋಜಾ (58) ಎಂದು ಗುರುತಿಸಲಾಗಿದೆ. ಸಂಜೆ 5 ಗಂಟೆ ಸುಮಾರಿಗೆ ಟ್ರೆಸ್ಸಿ ಬಾವಿಯಿಂದ ನೀರು ಸೇದುತ್ತಿದ್ದಾಗ ತಲೆ ಸುತ್ತಿ ಬಾವಿಗೆ ಬಿದ್ದಿದ್ದಾರೆ. ಕೂಡಲೇ ಆಕೆಯ ಕುಟುಂಬಸ್ಥರು ಅಗ್ನಿಶಾಮಕ ದಳದ ಸಿಬ್ಬಂದಿಗೆ ವಿಷಯ ತಿಳಿಸಿದ್ದು, ಅವರು ಸ್ಥಳಕ್ಕೆ ಧಾವಿಸಿ ಬಾವಿಯಿಂದ ಮೇಲಕ್ಕೆ ಎತ್ತಿದ್ದಾರೆ. ಬಾವಿಯಲ್ಲಿ ಎಂಟು ಅಡಿಗೂ ಹೆಚ್ಚು ನೀರು ಇತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ನೀಡಿದ ಮಾಹಿತಿಯಂತೆ ಬಾವಿಯಲ್ಲಿದ್ದ ಪಂಪ್‌ಗೆ ಅಳವಡಿಸಿದ್ದ ಹಗ್ಗವನ್ನು ಮಹಿಳೆ ಹಿಡಿದಿದ್ದಾರೆ. ಕಾರ್ಯಾಚರಣೆಯಲ್ಲಿ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಾಜೀವ, ಮುಖ್ಯ ಅಗ್ನಿಶಾಮಕ ದಳದ ಅಧಿಕಾರಿ ಚಂದ್ರಹಾಸ ಸಾಲಿಯಾನ್, ಸಿಬ್ಬಂದಿಗಳಾದ ದಯಾಕರ, ಪುನೀತ್, ಶಿವರಾಜ್, ಪವನ್ ಕುಮಾರ್ ಭಾಗವಹಿಸಿದ್ದರು.

Read More