ಮಂಗಳೂರು: ದಮ್ಮಾಮ್ ನಿಂದ ಆಗಮಿಸಿದ ಪ್ರಯಾಣಿಕರಿಂದ 58,78,880 ರೂ ಮೌಲ್ಯದ 812 ಗ್ರಾಂ ಚಿನ್ನವನ್ನು ಗುರುವಾರ, ಏಪ್ರಿಲ್ 11 ರಂದು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಮಂಗಳೂರು ನಗರದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ವಾಡಿಕೆಯ ಮೆಟಲ್ ಡಿಟೆಕ್ಟರ್ ಪರೀಕ್ಷೆಯ ಸಮಯದಲ್ಲಿ, ಪ್ರಯಾಣಿಕರ ಸೊಂಟದಿಂದ ಬೀಪ್ ಹೊರಹೊಮ್ಮಿತು. ಹೆಚ್ಚಿನ ತಪಾಸಣೆಯ ನಂತರ, ಅಧಿಕಾರಿಗಳು ಪ್ರಯಾಣಿಕರ ಗುದನಾಳದಲ್ಲಿ ಮೂರು ಸುತ್ತಿನ ಆಕಾರದ ವಸ್ತುಗಳೊಳಗೆ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಬಚ್ಚಿಟ್ಟಿಕೊಂಡಿದ್ದರು. ತಪಾಸಣೆ ವೇಳೆ 812 ಗ್ರಾಂ 24-ಕ್ಯಾರೆಟ್ ಚಿನ್ನಪತ್ತೆಯಾಗಿದೆ. ಮುಂದಿನ ವಿಚಾರಣೆಗಾಗಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
Author: main-admin
ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಶಂಕಿತ ಆರೋಪಿಗನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇಬ್ಬರು ಶಂಕಿತ ಆರೋಪಿಗನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಹಲವರನ್ನು ವಶಕ್ಕೆ ಪಡೆದ ಎನ್‌ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಮಾಜ್ ಮುನೀರ್ ಕೃತ್ಯ ಧೃಡವಾಗಿದ್ದು, ಈತನೇ ಪ್ರಕರಣದ ಎ 1 ಆರೋಪಿಯಾಗಿದ್ದಾನೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಮಾರ್ಚ್ 1 ರಂದು ಬೆಂಗಳೂರಿನ ವೈಟ್ ಫೀಲ್ಡ್ ಪ್ರದೇಶದಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ಒಂಬತ್ತು ಜನರು ಗಾಯಗೊಂಡಿದ್ದು, ಒಂದು ವಾರದ ನಂತರ ಮಾರ್ಚ್ 9 ರ ಶನಿವಾರ ಬೆಳಗ್ಗೆ 6 ಗಂಟೆಯಿಂದ ಬೆಂಗಳೂರಿನ ಕೆಫೆ ಆರಂಭವಾಗಿತ್ತು.
ಮಂಗಳೂರು: ನಗರದ ಅಡ್ಯಾರ್ ನಲ್ಲಿರುವ ಬೊಂಡ ಫ್ಯಾಕ್ಟರಿಯ ಎಳನೀರು ಸೇವಿಸಿ ಇದುವರೆಗೆ 137 ಮಂದಿ ಎಳನೀರು ಕುಡಿದಿರುವುದರಿಂದ ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಎಳನೀರು ಮತ್ತು ಇತರ ಆಹಾರೋತ್ಪಗಳನ್ನು ಮಾರಾಟ ಮಾಡದಂತೆ ನೋಟೀಸ್ ಜಾರಿಗೊಳಿಸಲಾಗಿದೆ. ಇತ್ತೀಚೆಗೆ ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಸೇವಿಸಿ 137 ಮಂದಿ ಅಸ್ವಸ್ಥರಾಗಿದ್ದಾರೆ. ಹೊರರೋಗಿಗಳಾಗಿ 84 ಮಂದಿ ಒಳರೋಗಿಗಳಾಗಿ 53 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 23 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಲ್ಲಿರುವ ಎಲ್ಲರ ಆರೋಗ್ಯವು ಸ್ಥಿರವಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಗುರುವಾರ ಆಹಾರ ಸುರಕ್ಷತೆಯ ಜಿಲ್ಲಾ ಅಂಕಿತ ಅಧಿಕಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ತಂಡ ಮತ್ತೆ ಬೊಂಡ ಫ್ಯಾಕ್ಟರಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದೆ. ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ತಾತ್ಕಾಲಿಕವಾಗಿ ಹಾಗೂ ಮುಂದಿನ ಆದೇಶದವರೆಗೆ ಎಳನೀರು ಮತ್ತು ಇತರೆ ಆಹಾರೋತ್ಪಗಳನ್ನು ಮಾರಾಟ ಮಾಡದಂತೆ ನೋಟೀಸ್ ಜಾರಿಗೊಳಿಸಿದೆ. ಅಲ್ಲದೆ ಸದ್ಯ ಫ್ಯಾಕ್ಟರಿಯನ್ನು ಬಂದ್ ಮಾಡಿಸಿದೆ.
ಉಡುಪಿ : ಬಸ್ ಟೈಮಿಂಗ್ ವಿಚಾರವಾಗಿ ಎರಡು ಬಸ್ ನಿರ್ವಾಹಕರ ನಡುವೆ ಹೊಡೆದಾಟ ನಡೆದ ಘಟನೆ ಕುಂದಾಪುರ – ಮಂಗಳೂರು ನಡುವೆ ಸಂಚರಿಸುವ ಎರಡು ಬಸ್ ಗಳ ನಿರ್ವಾಹಕರ ನಡುವೆ ನಡೆದಿದೆ. ಚಪ್ಪಲಿ ಎತ್ತಿ ಲೇಡಿ ಕಂಡಕ್ಟರ್ ಮತ್ತೋರ್ವ ಬಸ್ ನಿರ್ವಾಹಕ ನೊಂದಿಗೆ ಜಗಳವಾಡಿದ್ದಾರೆ. ಭಾರತಿ ಬಸ್ ನ ಲೇಡಿ ಕಂಡಕ್ಟರ್ ರೇಖಾ, ದುರ್ಗಾಪ್ರಸಾದ್ ಬಸ್ಸಿನ ಕಂಡಕ್ಟರ್ ರಾಘವೇಂದ್ರ ಸಂತೆಕಟ್ಟೆಯಲ್ಲಿ ಬಸ್ ನಿಲ್ಲಿಸಿದ್ದಾಗ ದುರ್ಗಾಪ್ರಸಾದ್ ಬಸ್ ನೊಳಗೆ ಬಂದು ಜಗಳವಾಡಿದ ರೇಖಾ ಪರಸ್ಪರ ಇಬ್ಬರು ಅವ್ಯಾಚ್ಯ ಶಬ್ದಗಳ ಬಳಸಿ ಪ್ರಯಾಣೀಕರ ಎದುರೇ ಕೈ ಕೈ ಮಿಲಾಯಿಸಿದ್ದಾರೆ. ಸದ್ಯ ಕಂಡಕ್ಟರ್ ಗಳು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಉಡುಪಿಯ ಪ್ರಥಮ ಮಹಿಳಾ ಬಸ್ ಕಂಡಕ್ಟರ್ ಆಗಿ ಹೆಸರು ಮಾಡಿದ್ದ ರೇಖಾ ಕಳೆದ ಹಲವು ವರ್ಷಗಳಿಂದ ಉಡುಪಿ- ಕುಂದಾಪುರ ನಡುವೆ ಸಂಚರಿಸುವ ಭಾರತಿ ಮೋಟಾರ್ಸ್ ಬಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪುಣೆ: ಮಂಗಳಮುಖಿಯರು ಅಥವಾ ತೃತೀಯ ಲಿಂಗಿಯರು ಟ್ರಾಫಿಕ್, ಬಸ್ ಹಾಗೂ ರೈಲಿನಲ್ಲಿ ಬಂದು ಪ್ರಯಾಣಿಕರಿಂದ ಹಣ ಕೇಳುವುದು ಸಾಮಾನ್ಯವಾಗಿದೆ. ಯಾರೂ ಕೆಲಸ ಕೊಡುವುದಿಲ್ಲ ಅಂತಾ ಬದುಕಲು ಬೇರೆ ದಾರಿ ಇಲ್ಲದೆ ಹಣ ಕೇಳುತ್ತಾರೆ. ಕೆಲವೊಮ್ಮೆ ಹಣ ಕೊಡದಿದ್ದರೆ ಅಸಭ್ಯವಾಗಿಯೂ ವರ್ತಿಸುವ ಮೂಲಕ ಟೀಕೆಗು ಗುರಿಯಾಗುತ್ತಾರೆ. ಟ್ರಾಫಿಕ್ಗಳಲ್ಲಂತೂ ಹಣಕ್ಕೆ ಬೇಡಿಕೆ ಇಡುವ ಇವರು, ಹಣ ಕೊಡದಿದ್ದಾಗ ಕೆಟ್ಟ ಪದಗಳಿಂದ ನಿಂದಿಸುತ್ತಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರದ ಪುಣೆ ಪೊಲೀಸರು ತೃತೀಯ ಲಿಂಗಿಗಳು ಭಿಕ್ಷೆ ಬೇಡುವುದನ್ನು ಬ್ಯಾನ್ ಮಾಡಿದ್ದಾರೆ. ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಅವರು ಟ್ರಾಫಿಕ್ ಜಂಕ್ಷನ್‌ಗಳಲ್ಲಿ ತೃತೀಯಲಿಂಗಿಗಳು ಜಮಾಯಿಸಿ, ಪ್ರಯಾಣಿಕರಿಂದ ಬಲವಂತವಾಗಿ ಹಣಕ್ಕಾಗಿ ಒತ್ತಾಯಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಸಿಆರ್‌ಪಿಸಿಯ ಸೆಕ್ಷನ್ 144 ರ ಅಡಿಯಲ್ಲಿ ಪೊಲೀಸರು ಸ್ವೀಕರಿಸಿದ ಹಲವಾರು ದೂರುಗಳಿಗೆ ಪ್ರತಿಕ್ರಿಯೆಯಾಗಿ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಅಮಿತೇಶ್ ಕುಮಾರ್ ಹೇಳಿದ್ದಾರೆ. ನಾವು ಸಿಆರ್ಪಿಸಿ ಸೆಕ್ಷನ್ 144ರ ಅಡಿಯಲ್ಲಿ ತೃತೀಯಲಿಂಗಿ ವ್ಯಕ್ತಿಗಳು ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಜಮಾಯಿಸುವುದನ್ನು ಮತ್ತು ವಾಹನ…
ಉಡುಪಿ: ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಆರೋಪಿ ಪ್ರವೀಣ್ ಚೌಗುಲೆಯನ್ನು ವೀಡಿಯೋ ಕಾನ್ಸರೆನ್ಸ್ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ಈ ಪ್ರಕರಣವನ್ನು ಉಡುಪಿ ಸೆಷನ್ಸ್ ಕೋರ್ಟ್ ನಿಂದ ಬೆಂಗಳೂರಿನ ಸೆಷನ್ಸ್ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಆರೋಪಿ ಪರ ವಕೀಲರು ಮೆಮೋ ಸಲ್ಲಿಕೆ ಮಾಡಿದ್ದರೂ ನ್ಯಾಯಪೀಠ ಅಂಗೀಕರಿಸಿಲ್ಲ. ಸಾಕ್ಷಿಗಳಿಗೆ ಸಮನ್ಸ್ ನೀಡಿ, ಮುಂದಿನ ವಿಚಾರಣೆಯು ಜೂನ್ 13ರಿಂದ 15ರ ಅವಧಿಯಲ್ಲಿ ನಡೆಯಲಿದೆ. ಮೊದಲನೇ ದಿನ ಒಬ್ಬರು ಹಾಗೂ ಉಳಿದ ದಿನಗಳಲ್ಲಿ ತಲಾ ಇಬ್ಬರಂತೆ ಮೂರು ದಿನಗಳ ಕಾಲ 5 ಮಂದಿ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗುವುದು.
ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಈಗಾಗಲೇ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ. ಒಂದು ವೇಳೆ ನಿಮಗೆ ಈ ಯೋಜನೆಯ ಹಣ ದೊರೆಯದೆ ಇದ್ದರೆ ಮೊದಲು ನೀವು ಇಕೆವೈಸಿ ಮಾಡಿಸಿ. ನಂತರ ಸೂಕ್ತ ದಾಖಲೆಗಳನ್ನು ನಿಮ್ಮ ಬ್ಯಾಂಕ್ ಗೆ ನೀಡಿ. ಈಗಾಗಲೇ ಈ ಯೋಜನೆಯಡಿ ಮಹಿಳೆಯರು ಪ್ರತಿ ತಿಂಗಳು 2000 ರೂಪಾಯಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಮಂಗಳೂರು : ಅಡ್ಯಾರ್ ನಲ್ಲಿರುವ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥೆ ಬೊಂಡಾ ಪ್ಯಾಕ್ಟರಿಯಲ್ಲಿ ಎಳನೀರು ಕುಡಿದು ತುಂಬೆ ಪರಿಸರದ ನಿವಾಸಿಗಳು ಅಸ್ವಸ್ಥರಾದ ಘಟನೆ ನಡೆದಿದ್ದು, ಇದೀಗ ಬೊಂಡಾ ಪ್ಯಾಕ್ಟರಿಗೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಎಳನೀರು ಸ್ಯಾಂಪಲ್ ನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಎಪ್ರಿಲ್ 8 ರಂದು ಅಡ್ಯಾರ್ ನಲ್ಲಿರುವ ಲ್ಯಾಂಡ್ಸ್ ಫ್ಲೆವರ್ ಸಂಸ್ಥೆಯ ಬೊಂಡ ಫ್ಯಾಕ್ಟರಿ ಎಂಬ ಎಳನೀರು ಮತ್ತು ನ್ಯಾಚುರಲ್ ಐಸ್ ಕ್ರೀಮ್ ಮಾರಾಟ ಮಾಡುವ ಸಂಸ್ಥೆಯಿಂದ ಅಡ್ಯಾರ್ ಕಣ್ಣೂರು ಮತ್ತು ತುಂಬೆ ಪರಿಸರದ ನಿವಾಸಿಗಳು ಎಳನೀರನ್ನು ಲೀಟರ್ ಲೆಕ್ಕದಲ್ಲಿ ಖರೀದಿಸಿ ಕುಡಿದ ಕಾರಣ ದಿನಾಂಕ 9.4.2024 ರಂದು ಬೆಳಗ್ಗೆಯಿಂದ ಸಂಜೆಯ ತನಕ ವಾಂತಿ ಮತ್ತು ಭೇದಿಯಿಂದ ಬಳಲಿರುತ್ತಾರೆ. ಇದರಿಂದ ಉತ್ಪಾದನೆಯಾಗುವ ಎಳನೀರನ್ನು ಸಾರ್ವಜನಿಕರಿಗೆ ಲೀಟರ್ ಗೆ 40 ರೂಪಾಯಿಯಂತೆ ಸೋಮವಾರ ಸಂಜೆ ಈ ಎಳನೀರನ್ನು ಕುಡಿದ ಅಡ್ಯಾರು ಮತ್ತು ಕಣ್ಣೂರ್ ಸುತ್ತಮುತ್ತಲಿನ ಸಾರ್ವಜನಿಕರು ಮಂಗಳವಾರದಿಂದ ವಾಂತಿಬೇದಿಯಿಂದ ಬಳಲಿದ್ದು ಸ್ಥಳೀಯ ವೈದ್ಯರುಗಳಲ್ಲಿ ಪರೀಕ್ಷಿಸಿ ಔಷಧೋಪಚಾರ ಪಡೆದು ಗುಣಮುಖರಾಗದೆ ಮೂರು ಮಂದಿ ಪಲ್ನೀರ್…
ಮಂಗಳೂರು : ಸರ್ಕಾರಿ ಅಧಿಕಾರಿಯೋರ್ವರಿಗೆ ಲೋಕಾಯುಕ್ತ ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಲಂಚದ ಬೇಡಿಕೆ ಇಟ್ಟು ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಕಂದಾಯ ಅಧಿಕಾರಿ ಪುರುಷೋತ್ತಮ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಂಗಳೂರು : ನಗರದ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಏಪ್ರಿಲ್14ರಂದು ಆಯೋಜನೆಗೊಳ್ಳಲಿರುವ ಪ್ರಧಾನಿ ಮೋದಿಯವರ ಸಮಾವೇಶ ಕೊನೆಯ ಕ್ಷಣದಲ್ಲಿ ರದ್ದಾಗಿದೆ. ಸಮಾವೇಶದ ಬದಲು ಬರೀ ರೋಡ್ ಶೋ ನಡೆಸಲಾಗುತ್ತದೆ. ಸಮಾವೇಶಕ್ಕೆ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಇಂದು ಚಪ್ಪರ ಮುಹೂರ್ತವೂ ನಡೆದಿತ್ತು. ಜರ್ಮನ್ ಪೆಂಡಾಲ್ ಹಾಕಲು ಸಿದ್ಧತೆಯೂ ನಡೆದಿತ್ತು. ಆದರೆ, ಕೆಲವೊಂದು ಕಾರಣಗಳಿಂದ ಸಮಾವೇಶ ರದ್ದುಗೊಂಡಿದೆ. ಇದೀಗ ಸಮಾವೇಶದ ಬದಲು ರೋಡ್ ಶೋ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ. ಏಪ್ರಿಲ್ 14ರಂದು ಸಂಜೆ ವೇಳೆಗೆ ಮೋದಿ ರೋಡ್ ಶೋ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಇನ್ನಷ್ಟೇ ರೋಡ್ ಶೋ ರೂಟ್ ಮ್ಯಾಪ್ ಸಿದ್ಧಪಡಿಸಬೇಕಿದೆ.










