ಮಂಗಳೂರು: ಚಿನ್ನದ ಫೈನಾನ್ಸ್ ಕಂಪನಿಯಲ್ಲಿ ನಕಲಿ ಚಿನ್ನಾಭರಣಗಳನ್ನು ಒತ್ತೆ ಇಟ್ಟು ಸಾಲ ಪಡೆದು ವಂಚನೆ ಮಾಡಿರುವ ದಂಪತಿ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳನ್ನು ಮಂಕಿ ಸ್ಟ್ಯಾಂಡ್ ನಿವಾಸಿಗಳಾದ ಹಸ್ತಿಮಾಲ್ ಫರ್ಮಾರ್ ಮತ್ತು ಆತನ ಪತ್ನಿ ಸಂಗೀತಾ ಎಂದು ಗುರುತಿಸಲಾಗಿದೆ.795 ಗ್ರಾಂ ನಕಲಿ ಚಿನ್ನವನ್ನು ಗಿರವಿ ಇಟ್ಟು ಗೋಲ್ಡ್ ಫೈನಾನ್ಸ್ ಕಂಪನಿಗೆ ವಂಚಿಸಿದ ಆರೋಪ ಈ ದಂಪತಿ ಮೇಲಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಇನ್ನು ಆರೋಪಿಗಳು ನಕಲಿ ಚಿನ್ನವನ್ನು ಒತ್ತೆ ಇಟ್ಟು ಸಾಲದ ರೂಪದಲ್ಲಿ 26,99,910 ರೂ. ತೆಗೆದುಕೊಂಡಿದ್ದು, ಗೋಲ್ಡ್ ಫೈನಾನ್ಸ್ ಕಂಪನಿಯ ತಜ್ಞರು ಅಕ್ಟೋಬರ್ 1 ರಂದು ಚಿನ್ನವನ್ನು ಪರಿಶೀಲಿಸಿದಾಗ, ದಂಪತಿಗಳು ಒತ್ತೆ ಇಟ್ಟಿದ್ದ ಚಿನ್ನವು ನಕಲಿ ಎಂದು ಕಂಡುಬಂದಿದೆ. ನಂತರ ಕಂಪನಿಯು ಆರೋಪಿಗಳಿಗೆ ಸಾಲದ ಮೊತ್ತವನ್ನು ಪಾವತಿಸುವಂತೆ ನೋಟಿಸ್ ಕಳುಹಿಸಿದೆ. ಆದರೆ ದಂಪತಿಗಳು ಇದಕ್ಕೆ ಪ್ರತಿಕ್ರಿಯಿಸದಿದ್ದಾಗ ಕಂಪನಿಯು ದಂಪತಿ ವಿರುದ್ಧ ಮಂಗಳೂರು ದಕ್ಷಿಣ ಪೊಲೀಸರಿಗೆ ವಂಚನೆ ಮತ್ತು ನಂಬಿಕೆ ದ್ರೋಹದ ದೂರು ದಾಖಲಿಸಿದೆ.
Author: main-admin
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಹಿರಿಯ ನೈರ್ಮಲ್ಯ ನಿರೀಕ್ಷಕ ಶಿವಲಿಂಗ ಕೊಂಡಗುಳಿ ವಿರುದ್ದ ದಾಖಲಾದ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿದ ಪ್ರಕರಣ ಸಂಬಂಧಿಸಿ ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ರೂ. ದಂಡ ವಿಧಿಸಿ ಶುಕ್ರವಾರ ಆದೇಶಿಸಿದೆ. ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ 1 ಕೋಟಿ ರೂ. ದಂಡ ವಿಧಿಸಲಾಗಿದ್ದು, ಆರೋಪಿ ದಂಡ ಕಟ್ಟಲು ವಿಫಲನಾದಲ್ಲಿ ಮತ್ತೆ ಒಂದು ವರ್ಷ ಹೆಚ್ಚುವರಿಯಾಗಿ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕೋರ್ಟ್ ತಿಳಿಸಿದೆ. ಕರ್ನಾಟಕ ಲೋಕಾಯುಕ್ತ ಮಂಗಳೂರು ಇದರ ಪೊಲೀಸ್ ಉಪಾಧೀಕ್ಷಕ ಉಮೇಶ್ ಜಿ. ಶೇಟ್ ಅವರು ಪ್ರಕರಣದ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಕರ್ನಾಟಕ ಲೋಕಾಯುಕ್ತ ಮಂಗಳೂರು ಇದರ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಪ್ಪಾಡಿ ಸರ್ಕಾರದ ಪರವಾಗಿ ವಾದಿಸಿದ್ದರು.
ಬಂಟ್ವಾಳ: ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕಳ ಗ್ರಾಮದ ಒಳಬೈಲು ಎಂಬಲ್ಲಿ ನಡೆದಿದೆ. ಇಲ್ಲಿನ ಒಳಬೈಲು ನಿವಾಸಿಯಾಗಿರುವ ಸಿಲ್ವಿಯಾ ಫರ್ನಾಂಡೀಸ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ 25 ಗ್ರಾಂ ಚಿನ್ನವನ್ನು ಕಳವುಗೈದಿದ್ದಾರೆ. ರಾತ್ರಿ ವೇಳೆ ಮನೆಯಲ್ಲಿ ಯಾರು ಇಲ್ಲದ ಬಗ್ಗೆ ಮಾಹಿತಿಯನ್ನು ಖಾತ್ರಿ ಪಡಿಸಿಕೊಂಡ ಕಳ್ಳರು ತಮ್ಮ ಕೈ ಚಳಕ ಮೆರೆದಿದ್ದಾರೆ. ಮನೆಯ ಕಿಟಕಿಯನ್ನು ಮುರಿದು ಒಳ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಸುಮಾರು 1.20 ಲಕ್ಷ ಮೌಲ್ಯದ ಎರಡು ಉಂಗುರ, ಎರಡು ಕಿವಿಯೋಲೆಯನ್ನು ಕಳವು ಮಾಡಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಿಲ್ಲಿಸಿ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇದು ಕೊಲೆಯತ್ನ ಪ್ರಕರಣವಲ್ಲ, ಕಾರ್ ಓವರ್ ಟೇಕ್ ಮಾಡುವ ಭರದಲ್ಲಿ ನಡೆದ ಘಟನೆಯಾಗಿದೆ ಎಂಬ ಸತ್ಯ ಬಯಲಾಗಿದೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ರಿಯಾಜ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಇದು ಕೊಲೆಯತ್ನ ಪ್ರಕರಣವಲ್ಲ. ಓವರ್ ಟೇಕ್ ಮಾಡುವ ಭರದಲ್ಲಿ ಮಾಡಿದಾಗ ನಡೆದ ಘಟನೆಯಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರಿಸುತ್ತೇವೆ ಎಂದು ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ತಿಳಿಸಿದ್ದಾರೆ. ನಿನ್ನೆ ರಾತ್ರಿ ಮಂಗಳೂರಿನ ಫರಂಗಿಪೇಟೆ ಬಳಿಕ ಶಾಸಕರ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ತಲ್ವಾರ್ ಝಳಪಿಸಿ, ಕಾರಿನ ಗಾಜುಗಳನ್ನು ಜಖಂ ಮಾಡಿದ್ದಾರೆ. ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಶಾಸಕ ಹರೀಶ್ ಪೂಂಜಾರ ಕಾರ್ ಚಾಲಕ ನವೀನ್ ಪೊಲೀಸರಿಗೆ ದೂರು ನೀಡಿದ್ದರು.
ಉಡುಪಿ: ಹಿಜಾಬ್ ಪ್ರಕರಣ ಸಂವಿಧಾನಿಕ ಪೀಠಕ್ಕೆ ವರ್ಗಾವಣೆ ಆಗಬಹುದು.ಇಬ್ಬರು ನ್ಯಾಯಮೂರ್ತಿಗಳು ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಸಂವಿಧಾನಿಕ ಪೀಠದಲ್ಲಿ ಹಿಜಬ್ ದೇಶಕ್ಕೆ ಬೇಕೋ ಬೇಡವೋ ಎಂದು ತೀರ್ಮಾನವಾಗುತ್ತದೆ. ಎಲ್ಲಾ ಮಹಿಳೆಯರು ಸ್ವಾತಂತ್ರ್ಯವಾಗಿ ಬದುಕಲು ನ್ಯಾಯಾಲಯ ಅವಕಾಶ ಮಾಡಿಕೊಡಬಹುದು ಎಂದು ಉಡುಪಿಯಲ್ಲಿ ಕೇಂದ್ರ ಸಚಿವೆ ಶೊಭಾ ಕರಂದ್ಲಾಜೆ ಹೇಳಿದ್ದಾರೆ. ಮುಸ್ಲಿಂ ಹೆಣ್ಣು ಮಕ್ಕಳು ಈ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಬೇಕು.ಮನೆಯವರು, ಗಂಡಸರು ಹಿಜಬ್ ಗೆ ಒತ್ತಾಯ ಮಾಡುತ್ತಿದ್ದಾರೆ. ಮುಸ್ಲಿಂ ಮಹಿಳೆಗೆ ಸ್ವಾತಂತ್ರ್ಯ ಸಿಗಬೇಕಾದರೆ ಹಿಜಬ್ ಅವಕಾಶ ಕೊಡಬಾರದು. ನಮ್ಮ ಮುಸ್ಲಿಂ ಹೆಣ್ಣು ಮಕ್ಕಳಿಗೆ ಶಿಕ್ಷಣ ಉದ್ಯೋಗ ಸಿಗುವುದು ಮುಖ್ಯ. ಗಂಡಸರು ಹಾಕುವ ತಾಳಕ್ಕೆ ಕುಣಿದು ಇಚ್ಛೆಗೆ ವಿರುದ್ಧವಾಗಿ ನಡೆದುಕೊಳ್ಳಬೇಡಿ. ಪ್ರಗತಿಶೀಲ ದೇಶಗಳು ಧರ್ಮಗಳಲ್ಲಿ ಇರುವ ತಪ್ಪುಗಳನ್ನು ಗುರುತಿಸಿ ಸರಿ ಮಾಡಬೇಕು. ಇರಾನ್ ನ ಮುಸ್ಲಿಂ ಮಹಿಳೆಯರು ಭಾರತಕ್ಕೆ ಮಾರ್ಗದರ್ಶಕ ಆಗಬೇಕು ಎಂದು ಹೇಳಿದರು.
ಮಂಗಳೂರು: ಹುಷಾರ್ , ಇನ್ನುಂದೆ ನೀವೂಗಳು ಯಾರಿಗಾದ್ರೂ ಚೆಕ್ ಕೊಡ್ತೀರಾ ಜಾಗೃತೆ ವಹಿಸಿ, ನಿಮ್ಮ ಚೆಕ್ ಇಶ್ಯೂ ಮಾಡಿದ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದಿದ್ದರೆ ನಿಮ್ಮ ಇತರ ಬ್ಯಾಂಕ್ ಖಾತೆಗಳಿದ್ದರೆ ಅವುಗಳಿಂದ ಹಣವನ್ನು ವಿತ್ ಡ್ರಾ ಮಾಡಿ ಚೆಕ್ ಸ್ವೀಕಾರ ಮಾಡಿದ ಗ್ರಾಹಕರಿಗೆ ನೀಡಲಾವುದು. ಈ ಈ ವಿಚಾರಗಳ ಕುರಿತು ಶೀಘ್ರದಲ್ಲೇ ಕೇಂದ್ರ ಸರ್ಕಾರ ಕಾನೂನು ಜಾರಿ ಮಾಡಲಿದೆ. ದೇಶದಲ್ಲಿ ಹೆಚ್ಚುತ್ತಿರುವ ಚೆಕ್ ಬೌನ್ಸ್ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಹೊಸ ನಿಯಮಗಳನ್ನು ಜಾರಿ ತರಲು ಕೇಂದ್ರ ಹಣಕಾಸು ಸಚಿವಾಲಯ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ದೇಶದಲ್ಲಿ ಚೆಕ್ ಬೌನ್ಸ್ ಪ್ರಕರಣಗಳ ಸಂಖ್ಯೆ ದಿನದಿಂದಿ ದಿನಕ್ಕೆ ಹೆಚ್ಚುತ್ತಲಿವೆ. ಇದರಿಂದ ನ್ಯಾಯಾಂಗದ ಮೇಲೆ ಹೆಚ್ಚಿನ ಹೊರೆಯಾಗುತ್ತಿದ್ದು, ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಂತಹ ಪ್ರಕರಣಗಳ ಸಂಖ್ಯೆ ಇಳಿಸುವ ನಿಟ್ಟಿನಲ್ಲಿ ಇತ್ತೀಚೆಗಷ್ಟೇ ವಿತ್ತ ಸಚಿವಾಲಯ ಕರೆದಿದ್ದ ಉನ್ನತ ಮಟ್ಟದ ಸಭೆಯಲ್ಲಿ ಹಲವು ಕ್ರಮಗಳ ಕುರಿತು ಸಲಹೆಗಳು ಕೇಳಿಬಂದಿವೆ. ಯಾವುದೇ ಒಬ್ಬ ವ್ಯಕ್ತಿ ನೀಡಿದ ಚೆಕ್ ಬೌನ್ಸ್…
ಮಂಗಳೂರು : ಅಪರಿಚಿತ ಸ್ಕಾರ್ಪಿಯೋ ಕಾರೊಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರ ಕಾರನ್ನು ಹಿಂಬಾಲಿಸಿ, ಅಡ್ಡಗಟ್ಟಿ ಆಯುಧ ತೋರಿಸಿ ಜೀವ ಬೆದರಿಕೆ ಒಡ್ಡಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುದು ಗ್ರಾಮದ ಫರಂಗಿ ಪೇಟೆ ಎಂಬಲ್ಲಿ ಅ 13 ರಂದು ತಡ ರಾತ್ರಿ ನಡೆದಿದ್ದೆ. ಈ ಬಗ್ಗೆ ಹರೀಶ್ ಪೂಂಜಾರವರ ಕಾರು ಚಾಲಕ ನೀಡಿದ ದೂರಿನಂತೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುರುವಾರ ಸಂಜೆ ಬೆಂಗಳೂರಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ, ಹರೀಶ್ ಪೂಂಜಾರವರು ಬೆಳ್ತಂಗಡಿಗೆ ಕಾರಿನಲ್ಲಿ ಹಿಂತಿರುಗಿ ಹೋಗುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಮೊದಲು ಶಾಶಕರ ಕಾರನ್ನು ದುಷ್ಕರ್ಮಿಯು ಬಿಳಿ ಸ್ಕಾರ್ಪಿಯೋ ಕಾರಿನಲ್ಲಿ ಹಿಂಬಾಲಿಸಿದ್ದಾನೆ. ಶಾಶಕರಿದ್ದ ಕಾರು ಫರಂಗಿ ಪೇಟೆಯ ಮೀನು ಮಾರುಕಟ್ಟೆ ಬಳಿ ತಲುಪುತ್ತಲೇ, ದುಷ್ಕರ್ಮಿ ತನ್ನ ಕಾರನ್ನು ಅದಕ್ಕೆ ಅಡ್ಡ ನಿಲ್ಲಿಸಿ ಕಾರಿನಲ್ಲಿದ್ದವರಿಗೆ ಅವಾಚ್ಯ ಶಬ್ದಗಳಿಂದ ಬೈದು ತನ್ನ ಕೈಯಲಿದ್ದ ಆಯುಧವನ್ನು ತೋರಿಸಿ ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ
ಉಡುಪಿ : ಮಂಗಳೂರು – ಉಡುಪಿ ರಾಷ್ಟ್ರೀಯ ಹೆದ್ದಾರಿಯ ಉಚ್ಚಿಲದಲ್ಲಿ ಗುರುವಾರ ರಾತ್ರಿ ಸರಣಿ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಐದು ವಾಹನಗಳು ಜಖಂಗೊಂಡಿದೆ. ಮಂಗಳೂರಿನಿಂದ ಉಡುಪಿ ಕಡೆಗೆ ವೇಗವಾಗಿ ಸಾಗುತ್ತಿದ್ದ ಸ್ಕಾರ್ಪಿಯೋ ವಾಹನ ನಾಲ್ಕು ವಾಹನಗಳಿಗೆ ಢಿಕ್ಕಿ ಹೊಡೆದಿದೆ. ರಾಷ್ಟ್ರೀಯ ಹೆದ್ದಾರಿ 66 ರ ಉಚ್ಚಿಲ ಮಸೀದಿ ಬಳಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಎರಡು ಬೈಕ್, ಕಾರು, ಬೈಕು ಮತ್ತು ಮೀನಿನ ಲಾರಿ ಗಳಿಗೂ ಹಾನಿಯಾಗಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಸ್ಕಾರ್ಪಿಯೋ ಕಾರು ಗುದ್ದಿದ ರಭಸಕ್ಕೆ ಎರ್ಟಿಗಾ ಕಾರು ಹೆದ್ದಾರಿ ವಿಭಾಜಕವನ್ನು ಏರಿ ದಾಟಿ ಹೋಗಿದ್ದು, ಮಂಗಳೂರಿನತ್ತ ತೆರಳುವ ರಾ.ಹೆದ್ದಾರಿಯ ಪಥದತ್ತ ಮುಖ ಮಾಡಿ ನಿಂತಿದೆ. ಸ್ಕೂಟಿ ಸವಾರ ಸ್ಥಳೀಯ ಸೈಕಲ್ ಅಂಗಡಿ ಮಾಲಕ ಸಹಿತ ಕಾರಿನಲ್ಲಿದ್ದ ಕೆಲ ಮಂದಿ ಗಾಯಗೊಂಡಿದ್ದು ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆಯ ಸಂದರ್ಭ ರಾ.ಹೆದ್ದಾರಿಯಲ್ಲಿ ಕೆಲ ಕಾಲ ವಾಹನ ಸಂಚಾರ ವ್ಯತ್ಯಯಗೊಂಡಿತ್ತು. ಸ್ಥಳೀಯರು ಮತ್ತು ಪೋಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.…
ಬಂಟ್ವಾಳ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿರುವ ಜಾನುವಾರುಗಳ ಚರ್ಮಗಂಟು ರೋಗ ಇದೇ ಮೊದಲ ಬಾರಿಗೆ ದ.ಕ.ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದು, ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಒಂದೇ ಮನೆಯ ಮೂರು ದನಗಳಲ್ಲಿ ಶಂಕಿತ ಪ್ರಕರಣ ಪತ್ತೆಯಾಗಿದೆ. ಅದರಲ್ಲಿ ಒಂದು ದನ ಈಗಾಗಲೇ ಮೃತಪಟ್ಟಿದ್ದು, ಎರಡು ದನಗಳು ಚಿಕಿತ್ಸೆಯ ಬಳಿಕ ಬಹುತೇಕ ಗುಣಮುಖವಾಗಿವೆ. ದ.ಕ.ಜಿಲ್ಲಾ ಪಶು ಪಾಲನ ಇಲಾಖೆಯ ಮಾಹಿತಿ ಪ್ರಕಾರ ಬಿಳಿಯೂರಿನ ಮಲ್ಲಡ್ಕದಲ್ಲಿ ಕಾಣಿಸಿಕೊಂಡ ಶಂಕಿತ ಪ್ರಕರಣಕ್ಕೆ ಅ. 8ರಿಂದ ಕೆಎಂಎಫ್ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಒಂದು ದನ ಅ. 11ರಂದು ಮೃತಪಟ್ಟಿದೆ. ಆದರೆ ಉಳಿದ 2 ದನಗಳು ಬಹುತೇಕ ಗುಣಮುಖವಾಗಿವೆ. ದನ ಚರ್ಮಗಂಟು ರೋಗ ದಿಂದ ಸತ್ತಿಲ್ಲ, ಅದಕ್ಕೆ ಬೇರೆ ಕಾಯಿಲೆಯೂ ಇತ್ತು ಎನ್ನಲಾಗಿದೆ. ಈ ಖಾಯಿಲೆಯ ಮುಂಜಾಗ್ರತ ಕ್ರಮವಾಗಿ ಪ್ರಕರಣ ಕಂಡುಬಂದ ಮನೆಯ ಸುತ್ತಲೂ ಸೇರಿದಂತೆ ಗ್ರಾಮದ ಬಹುತೇಕ ಜಾನುವಾರುಗಳಿಗೆ ಎಲ್‌ಎಸ್‌ಡಿ ಲಸಿಕೆ ನೀಡಲಾಗಿದ್ದು, ಜತೆಗೆ ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗಿಂಗ್ ಕಾರ್ಯವನ್ನೂ ಮಾಡಲಾಗಿದೆ. ಜತೆಗೆ ಪ್ರದೇಶದ ಮನೆಗಳಿಗೆ ಮುಂಜಾಗ್ರತ…
ಮಂಗಳೂರು: ನಗರದ ಶರ್ಬತ್ ಕಟ್ಟೆಯ ಫ್ಲ್ಯಾಟ್‌ವೊಂದರ ನಿವಾಸಿ, ಕೆನರಾ ಬ್ಯಾಂಕ್ ಬಿಜೈ ಬ್ರಾಂಚ್‌ನ ಮ್ಯಾನೇಜರ್ ಪದ್ಮಾವತಿ (52) ಎಂಬವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಮೂಲತಃ ಶಕ್ತಿನಗರದ ಪದ್ಮಾವತಿ ಶರ್ಬತ್ ಕಟ್ಟೆಯಲ್ಲಿ ಇತ್ತೀಚೆಗೆ ಪ್ಲ್ಯಾಟ್ ಖರೀದಿಸಿದ್ದು, ಗೃಹಪ್ರವೇಶ ಕಾರ್ಯಕ್ರಮ ಕಳೆದ ಸೋಮವಾರ ನಡೆದಿತ್ತು.