ಮಂಗಳೂರು: ಇತ್ತೀಚೆಗೆ ಮಂಗಳೂರಿಗೆ ಬಂದಿದ್ದ ಬೆಂಗಳೂರು ಮೂಲದ ಟೆಕ್ಕಿಯೊಬ್ಬ ಕಾಶ್ಮೀರದ ವೈಷ್ಣೋದೇವಿ ಮಂದಿರಕ್ಕೆ ತೆರಳಲು ಹೆಲಿಕಾಪ್ಟರ್ ಬುಕ್ಕಿಂಗ್ ನೆಪದಲ್ಲಿ ವಂಚನೆಗೊಳಗಾದ ಘಟನೆ ನಡೆದಿದೆ. ಈ ಬಗ್ಗೆ ಮಂಗಳೂರಿನ ಸೈಬರ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮಾ.೩ರಂದು ಬೆಂಗಳೂರಿನ ಟೆಕ್ಕಿ ಮಂಗಳೂರಿಗೆ ಆಗಮಿಸಿದ್ದ ಟೆಕ್ಕಿ ಇಲ್ಲಿ ಸುತ್ತಾಡಿದ್ದರು . ಬಳಿಕ ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇವಸ್ಥಾನಕ್ಕೆ ತೆರಳಲು ನೇರವಾದ ವಿಮಾನ ಸೌಲಭ್ಯ ಇದೆಯೇ ಎಂದು ಗೂಗಲ್ ಸರ್ಚ್ ಮಾಡಿದ್ದಾರೆ. ಈ ವೇಳೆ ವಿಮಾನ ಇಲ್ಲದಿರುವುದು ತಿಳಿದು, ಖಾಸಗಿ ಹೆಲಿಕಾಪ್ಟರ್ ಇದೆಯೇ ಎಂದು ಸರ್ಚ್ ಮಾಡಿದ್ದಾರೆ. ಈ ವೇಳೆ, ಖಾಸಗಿ ಹೆಲಿಕಾಪ್ಟರ್ ಬುಕ್ಕಿಂಗ್ ಮಾಡುವ ವೆಬ್‌ಸೈಟ್ ಒಂದು ಸಿಕ್ಕಿದೆ. ಆದನ್ನು ಸಂಪರ್ಕಿಸಿದಾಗ, ನಿತಿನ್ ಎನ್ನುವ ವ್ಯಕ್ತಿ ಫೋನ್ ಕರೆಗೆ ಸಿಕ್ಕಿದ್ದು, ಆತ ತನ್ನನ್ನು ವೈಷ್ಣೋದೇವಿ ದೇವಸ್ಥಾನದ ಪ್ರತಿನಿಧಿಯೆಂದು ಹೇಳಿಕೊಂಡಿದ್ದ.ಆ ಬಳಿಕ ಹೆಲಿಕಾಪ್ಟರ್ ಬುಕ್ಕಿಂಗ್ ಅಡ್ವಾನ್ಸ್ ಎಂದು 38,060 ರೂ. ಕಳುಹಿಸಿ ಕೊಡಲು ಹೇಳಿದ್ದು, ಅದರಂತೆ ಆತ ಕಳುಹಿಸಿದ್ದ ಕ್ಯೂಆರ್ ಕೋಡ್‌ಗೆ ಹಣ ನೀಡಿದ್ದಾರೆ. ಅನಂತರ ಕರೆ ಮಾಡಿದಾಗ…
Author: main-admin
ಉಡುಪಿ: ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಪೆ ಸೇಂಟ್ ಮೇರಿಸ್ ದ್ವೀಪಕ್ಕೆ ಅಕ್ಟೋಬರ್ 5 ರಂದು ಬುಧವಾರ ದೋಣಿ ಸೇವೆ ಪುನರಾರಂಭವಾಗಿದೆ. ಕಳೆದ ವರ್ಷ ದ್ವೀಪದಲ್ಲಿ ಹಲವು ಅವಘಡಗಳು ಸಂಭವಿಸಿದ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲಾಡಳಿತ ಭದ್ರತೆಗೆ ಹೆಚ್ಚಿನ ಮಹತ್ವ ನೀಡಿದ್ದು, ಹವಾಮಾನ ವೈಪರೀತ್ಯದಿಂದಾಗಿ ದ್ವೀಪದ ಪ್ರವಾಸವನ್ನು ನಿಲ್ಲಿಸಲಾಗಿದೆ ಎಂದು ಡಾ.ಉದಯಕುಮಾರ್ ಶೆಟ್ಟಿ ತಿಳಿಸಿದರು. ಪಾಲಿಥಿನ್ ಚೀಲಗಳಲ್ಲಿ ಆಹಾರ ಪದಾರ್ಥಗಳನ್ನು ಸಾಗಿಸುವುದನ್ನು ಜಿಲ್ಲಾಡಳಿತ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಪ್ರವಾಸಿಗರು ಚಿಕ್ಕ ಮಕ್ಕಳ ಬಳಕೆಗಾಗಿ ಹಾಲಿನ ಬಾಟಲಿಗಳು ಮತ್ತು ಇತರ ವಸ್ತುಗಳನ್ನು ತರಲು ಮಾತ್ರ ಅನುಮತಿಸಲಾಗಿದೆ. ಆಲ್ಕೊಹಾಲ್ ಸೇವನೆ ಮತ್ತು ಧೂಮಪಾನವನ್ನು ಸಹ ನಿಷೇಧಿಸಲಾಗಿದೆ. ಪ್ರವಾಸಿಗರು ಸುರಕ್ಷಿತವಾಗಿ ಚಿತ್ರಗಳನ್ನು ತೆಗೆಯಲು ಏಳು ಸೆಲ್ಫಿ ಪಾಯಿಂಟ್‌ಗಳನ್ನು ರಚಿಸಲಾಗಿದೆ. 5 ಅಪಾಯಕಾರಿ ಸ್ಥಳಗಳಲ್ಲಿ ಬೋರ್ಡ್‌ಗಳು ಮತ್ತು ಎಚ್ಚರಿಕೆಯ ಧ್ವಜಗಳನ್ನು ಅಳವಡಿಸಲಾಗಿದೆ. ದ್ವೀಪದ ಉತ್ತರ ಮತ್ತು ಪೂರ್ವ ಭಾಗದಲ್ಲಿ 110 ಮೀಟರ್ ಉದ್ದ ಮತ್ತು 100 ಮೀಟರ್ ಅಗಲದ ಸುರಕ್ಷಿತ ಈಜು ವಲಯವನ್ನು ರಚಿಸಲಾಗಿದೆ. ಆ ಎರಡು ಪ್ರದೇಶಗಳಲ್ಲಿ ಮಾತ್ರ…
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನದಲ್ಲಿ ಅಕ್ರಮ ಸಾಗಾಟದ 38.53 ಲಕ್ಷ ರೂ. ಮೌಲ್ಯದ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾಸರಗೋಡು ಮೂಲದ ಪ್ರಯಾಣಿಕ ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾನೆ. ಈತನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಈ ಅಕ್ರಮ ಸಾಗಾಟದ ಚಿನ್ನ ಪತ್ತೆಯಾಗಿದೆ. ಈತ ಚಿನ್ನದ ಪೌಡರ್ ಅನ್ನು ಗಮ್ ನಲ್ಲಿ ಬೆರೆಸಿ ಅದನ್ನು ಉಂಡೆ ಮಾಡಿ ಗುದನಾಳದಲ್ಲಿ ಬಚ್ಚಿಟ್ಟ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಈತನಿಂದ 24 ಕ್ಯಾರೆಟ್ ಪರಿಶುದ್ಧತೆಯ 741 ಗ್ರಾಂ ತೂಕದ 38,53,200 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನ ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸಿ ಕಾನೂನು ಕ್ರಮ ಜರುಗಿಸಿದ್ದಾರೆ.
Testing
ಸುರತ್ಕಲ್: ಟೋಲ್ ಗೇಟ್ ತೆರವಿಗಾಗಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಕರೆ ನೀಡಿರುವ ಟೋಲ್ ಗೇಟ್ ಮುತ್ತಿಗೆ ಪ್ರತಿಭಟನೆ ಐತಿಹಾಸಿಕ ಹೋರಾಟವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಗುರುಪುರ ಪ್ರದೇಶದ ಜನತೆ ಶಾಂತಿಯುತವಾಗಿ ನಡೆಯಲಿರುವ ಈ ಮಹತ್ವದ ಹೋರಾಟದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮಾಜಿ ಶಾಸಕ ಮೊಯ್ದಿನ್ ಬಾವಾ ಕರೆ ನೀಡಿದರು.ಅವರು ಕೈಕಂಬ ಪ್ರೀಮಿಯರ್ ಸಭಾಂಗಣದಲ್ಲಿ ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟದ ಯಶಸ್ಸಿಗಾಗಿ ಹಮ್ಮಿಕೊಳ್ಳಲಾಗಿದ್ದ ಗುರುಪುರ ವಲಯ ಮಟ್ಟದ ಸಮಾನ ಮನಸ್ಕ ಸಂಘಟನೆಗಳ ಸಮಾಲೋಚನಾ ಸಭೆ ಹಾಗೂ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ರಸ್ತೆಗೆ ಉರುಳಿ ಬಿದ್ದ ಘಟನೆ ವಿಟ್ಲದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬುಡೋಳಿಯಲ್ಲಿ ನಡೆದಿದೆ. ಬೆಂಗಳೂರು ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಲಾರಿ ಬುಡೋಳಿ ಶಾಲೆಯ ಬಳಿ ಪಲ್ಟಿಯಾಗಿದೆ. ಲಾರಿ ಪಲ್ಟಿಯಾಗುತ್ತಿದ್ದ ಸಂದರ್ಭ ಮಾಣಿಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಟಿಪ್ಪರ್ ಗೆ ಇನ್ನೊಂದು ಲಾರಿ ಡಿಕ್ಕಿ ಹೊಡೆದಿದೆ ಎಂದು ಮಾಹಿತಿ ಲಭಿಸಿದೆ.
ಮಂಗಳೂರು ದಸರಾ ಹಿನ್ನೆಲೆಯಲ್ಲಿ ರಾತ್ರಿಯಿಂದ ನಗರ ಪ್ರದಕ್ಷಿಣೆ ಮಾಡಿದ್ದ ಶೋಭಾಯಾತ್ರೆ ಇಂದು ಬೆಳ್ಳಂಬೆಳಗ್ಗೆ ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ಸಂಪನ್ನಗೊಂಡಿತು. ಮಂಗಳೂರಿನಲ್ಲಿ ಈ ಬಾರಿ ವೈಭವದ ಶೋಭಾಯಾತ್ರೆ ಕಳೆಗಟ್ಟಿತ್ತು. ಶಾರದೆ, ನವದುರ್ಗೆಯರ ಸಹಿತ, ಮಹಾಗಣಪತಿಯ ಮೃಣ್ಮಯ ಮೂರ್ತಿಗಳ ಶೋಭಾಯಾತ್ರೆ ಕುದ್ರೋಳಿ ಕ್ಷೇತ್ರದಿಂದ ರಾತ್ರಿ ಆರಂಭವಾಯ್ತು. ಈ ಸುಂದರ ಮೂರ್ತಿಗಳನ್ನು ಮಂಗಳೂರು ನಗರದಾದ್ಯಂತ ಶೋಭಾಯಾತ್ರೆ ಮೂಲಕ ಕೊಂಡೊಯ್ದು ಇಂದು ಮುಂಜಾನೆ ವೇಳೆಗೆ ಮತ್ತೆ ಕುದ್ರೋಳಿ ಶ್ರೀಕ್ಷೇತ್ರದ ಪುಷ್ಕರಣಿಯಲ್ಲಿ ನಿಮಜ್ಜನ ಮಾಡಲಾಯಿತು. ಈ ಶೋಭಾಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು, ಟ್ಯಾಬ್ಲೊಗಳು, ಸಂಗೀತ ವಾದ್ಯ ಮೇಳಗಳು, ಮಂಗಳವಾದ್ಯಗಳು, ಭಜನಾ ಸಂಕೀರ್ತನಾ ತಂಡಗಳು, ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಕಲಾ ತಂಡಗಳು ಮಂಗಳೂರು ದಸರಾ ವೈಭವದ ಶೋಭಾಯಾತ್ರೆಗೆ ಮೆರುಗು ನೀಡಿದವು. ಶೋಭಾಯಾತ್ರೆ ಸಾಗುವ ದಾರಿ ಉದ್ದಕ್ಕೂ ವಿದ್ಯುತ್ ದೀಪಾಲಂಕೃತದಿಂದ ಕಂಗೊಳಿಸುತ್ತಿತ್ತು. ಈ ಶೋಭಾಯಾತ್ರೆಗೆ ಮಂಗಳೂರು ಮಾತ್ರವಲ್ಲದೇ, ಹೊರ ರಾಜ್ಯ, ಹೊರ ದೇಶಗಳಿಂದಲೂ ಜನರು ಆಗಮಿಸಿದ್ದರು.
ಬಂಟ್ವಾಳ: ಕೋಳಿ ಟಿಕ್ಕ ಪಾರ್ಸೆಲ್ ಪಡೆಯಲು ಟಿಕ್ಕ ಶಾಪ್ ಗೆ ಬಂದಿದ್ದ ಅಪ್ರಾಪ್ತ ಶಾಲಾ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೆ, ಈ ಬಗ್ಗೆ ಮನೆಯವರಿಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ ಘಟನೆ ಕಲ್ಲಡ್ಕದಲ್ಲಿ ನಡೆದಿದೆ. ಕಲ್ಲಡ್ಕ-ವಿಟ್ಲ ರಸ್ತೆಯಲ್ಲಿರುವ ಟಿಕ್ ಪಾಯಿಂಟ್ ಮಾಲಕ ಮಹಮ್ಮದ್ ಆಶ್ರಫ್ ಎಂಬಾತ ಪ್ರಕರಣದ ಆರೋಪಿ. ಕಲ್ಲಡ್ಕದಲ್ಲಿರುವ ಟಿಕ್ಕಪಾಯಿಂಟ್ ಗೆ ಪಾರ್ಸೆಲ್ ತರಲು ರಾತ್ರಿ ಸುಮಾರು 8 ಗಂಟೆಗೆ ಬಂದ ವೇಳೆ ಆರೋಪಿ ಕೃತ್ಯ ಎಸಗಿದ್ದಾನೆ. ಬಾಲಕ ಟಿಕ್ಕ ಪಾರ್ಸೆಲ್ ಕೇಳಿದಾಗ, ಟಿಕ್ಕ ಪಾರ್ಸೆಲ್ ಕೊಂಡುಹೋಗಲು ಪ್ಲಾಸ್ಟಿಕ್ ಚೀಲವನ್ನು ತರುವಂತೆ ಅಂಗಡಿಯ ಒಳಗೆ ಬರುವಂತೆ ಹೇಳಿ, ಆತ ಪ್ಲಾಸ್ಟಿಕ್ ಚೀಲ ತರಲು ಒಳಗೆ ಹೋದ ವೇಳೆ ಆರೋಪಿ ಬಾಲಕನ ಹಿಂಬದಿಯಿಂದ ಹೋಗಿ ಆತನನ್ನು ಹಿಡಿದು ಎತ್ತಿಕೊಂಡು ಅಲ್ಲೇ ಸಮೀಪದ ತೋಟಕ್ಕೆ ಕರೆದುಕೊಂಡು ಹೋಗಿ ಅಲ್ಲಿ ದೌರ್ಜನ್ಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.ಬಾಲಕನ ಮೇಲೆ ಹಲ್ಲೆ ಅತ್ಯಾಚಾರ ನಡೆಸಿದ ಆರೋಪಿ ಘಟನೆ ನಡೆದು ಎರಡು ತಿಂಗಳ ಬಳಿಕ ಮತ್ತೆ ಅತ್ಯಾಚಾರಕ್ಕೆ ಯತ್ನ…
ಮಂಗಳೂರು: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಮಂಗಳೂರು ದಸರಾ ಶೋಭಾಯಾತ್ರೆ ಇಲ್ಲದೆ ಶಾರದಾ ಮಾತೆ, ನವದುರ್ಗೆಯರ ವಿಸರ್ಜನೆಯು ನಡೆದಿತ್ತು. ಈ ಬಾರಿ ಮತ್ತೆ ವೈಭವದ ಶೋಭಾಯಾತ್ರೆಯ ಕಳೆಗಟ್ಟಿದ್ದು, ತಾಯಿ ಶಾರದೆ, ನವದುರ್ಗೆಯರ ಸಹಿತ, ಮಹಾಗಣಪತಿಯ ಮೃಣ್ಮಯ ಮೂರ್ತಿಗಳ ಶೋಭಾಯಾತ್ರೆ. ಈ ಮೃಣ್ಮಯ ಮೂರ್ತಿಗಳನ್ನು ಮಂಗಳೂರು ನಗರದಾದ್ಯಂತ ಶೋಭಾಯಾತ್ರೆಯ ಮೂಲಕ ಕೊಂಡೊಯ್ದು ಮುಂಜಾನೆ ವೇಳೆಗೆ ಕುದ್ರೋಳಿ ಶ್ರೀಕ್ಷೇತ್ರದ ಪುಷ್ಕರಣಿಯಲ್ಲಿ ವಿಸರ್ಜಿಸಲಾಯಿತು. ವಿವಿಧ ಕಲಾ ತಂಡಗಳು, ಟ್ಯಾಬ್ಲೊಗಳು, ಸಂಗೀತ ವಾದ್ಯ ಮೇಳಗಳು, ಮಂಗಳವಾದ್ಯಗಳು, ಭಜನಾ ಸಂಕೀರ್ತನಾ ತಂಡಗಳು, ವಿವಿಧ ಜಿಲ್ಲೆಗಳ ಸಾಂಸ್ಕೃತಿಕ ಕಲಾ ತಂಡಗಳು ವೈಭವದ ಶೋಭಾಯಾತ್ರೆಗೆ ಮೆರುಗು ನೀಡಿದವು. ಶೋಭಾಯಾತ್ರೆ ಸಾಗುವ ದಾರಿಯುದ್ದಕ್ಕೂ ಮಂಗಳೂರು ನಗರದ ರಾಜಬೀದಿಯು ವಿದ್ಯುತ್ ದೀಪಾಲಂಕೃತದಿಂದ ಕಂಗೊಳಿಸುತ್ತಿತ್ತು. ಈ ವೈಭವದ ಶೋಭಾಯಾತ್ರೆಗೆ ಮಂಗಳೂರು ಮಾತ್ರವಲ್ಲದೆ, ಹೊರ ರಾಜ್ಯ, ಹೊರ ದೇಶಗಳಿಂದಲೂ ಬಂದಿರುವ ಸಾವಿರ ಸಾವಿರ ಮಂದಿ ಸಾಕ್ಷಿಯಾದರು.
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶರನ್ನವರಾತ್ರಿ ಅಂಗವಾಗಿ ಕಳೆದ 9 ದಿನಗಳಿಂದ ಪೂಜಿಸಲ್ಪಟ್ಟ ಶಾರದೆ ಹಾಗೂ ನವ ದುರ್ಗೆಯರ ವೈಭವದ ಶೋಭಾ ಯಾತ್ರೆ ಇಂದು ಸಂಜೆ ನಡೆಯಲಿದೆ. ಸಂಜೆ 4 ಗಂಟೆಗೆ ಶಾರದಾ ಮಾತೆಯ ಶೋಭಾ ಯಾತ್ರೆಯು ಶ್ರೀ ಕ್ಷೇತ್ರದಿಂದ ಹೊರಟು ಕ್ಷೇತ್ರದ ಅಭಿವೃದ್ಧಿ ರೂವಾರಿ ಮಾಜಿ ಮಂತ್ರಿ ಬಿ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಕಂಬ್ಳ ರಸ್ತೆ, ಮಣ್ಣಗುಡ್ಡ ರಸ್ತೆಯಾಗಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ, ಲಾಲ್‌ಭಾಗ್, ಬಳ್ಳಾಲ್ ಭಾಗ್, ಪಿವಿಎಸ್ ಸರ್ಕಲ್, ನವಭಾರತ್ ಸರ್ಕಲ್, ಕೆ ಎಸ್ ರಾವ್ ರಸ್ತೆ, ಹಂಪನ್‌ಕಟ್ಟೆ, ವಿವಿ ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟ್ರಮಣ ದೇವಸ್ಥಾನದ ಮುಂಭಾಗದಿಂದ ಕಾರ್ ಸ್ಟ್ರೀಟ್, ಸುಚಿತ್ರಾ ಟಾಕೀಸ್, ಅಳಕೆಯಾಗಿ ಕ್ಷೇತ್ರಕ್ಕೆ ಬಂದು ಕ್ಷೇತ್ರದ ಕೆರೆಯಲ್ಲಿ ಜಲಸ್ತಂಭನಗೊಳ್ಳಲಿದೆ.