ಉಡುಪಿ: ಪ್ರಾದೇಶಿಕ ಸಾರಿಗೆ ಪ್ರಾಧಿಕಾರ 2020ರ ಅ.13 ಮತ್ತು 2021ರ ನ.10ರಂದು ವಾಹನ ಪ್ರಯಾಣ ದರ ಪರಿಷ್ಕರಿಸಿ ನಿಗದಿಪಡಿಸಿದ ದರ ಜಾರಿಯಲ್ಲಿದ್ದರೂ ಕೆಲವು ಬಸ್ ಗಳಲ್ಲಿ ಪ್ರಯಾಣಿಕರಿಂದ ಅಧಿಕ ಪ್ರಯಾಣ ದರ ವಸೂಲು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಮಾಜಸೇವಕರಾದ ಶಿವಕುಮಾರ್ ಶೆಟ್ಟಿಗಾರ್ ಹಾಗೂ ಸತೀಶ್ ಪೂಜಾರಿ ಅವರ ನೇತೃತ್ವದಲ್ಲಿ ಶಾಸಕ ಕೆ.ರಘುಪತಿ ಭಟ್ ಅವರಿಗೆ ಮನವಿ ಸಲ್ಲಿಸಲಾಯಿತು. ಸಾರಿಗೆ ಪ್ರಾಧಿಕಾರ ನಿಗದಿಪಡಿಸಿರುವ ದರಕ್ಕಿಂತ ಅಧಿಕ ದರ ವಸೂಲು ಮಾಡಿದವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲು ತಿಳಿಸಲಾಗುವುದು ಎಂದು ಶಾಸಕರು ತಿಳಿಸಿದ್ದಾರೆ.ಒಂದು ವೇಳೆ ಮುಂದಿನ ದಿನಗಳಲ್ಲಿ ಅಧಿಕ ದರ ವಸೂಲಿ ಪ್ರವೃತ್ತಿ ಮುಂದುವರೆಸಿದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಶಿವಕುಮಾರ್ ಶೆಟ್ಡಿಗಾರ್ ಎಚ್ಚರಿಕೆ ನೀಡಿದ್ದಾರೆ.
Author: main-admin
ಮಂಗಳೂರು: ಅಪ್ರಾಪ್ತೆಯನ್ನು ಅತ್ಯಾಚಾರಗೈದಿರುವ ಆರೋಪ ಜಿಲ್ಲಾ ಮತ್ತು ಸತ್ರ ಹಾಗೂ ಎಫ್ ಟಿಎಸ್ ಸಿ – 2 ನ್ಯಾಯಾಲಯದಲ್ಲಿ ಸಾಬೀತಾಗಿರುವ ಹಿನ್ನೆಲೆಯಲ್ಲಿ ಕಾಮುಕ ಯುವಕನಿಗೆ 15 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ತೀರ್ಪು ವಿಧಿಸಲಾಗಿದೆ. ನಗರದ ತೋಡಾರು ಗ್ರಾಮ ನಿವಾಸಿ ಸೀತಾರಾಮ ಶಿಕ್ಷೆಗೊಳಗಾದ ಆರೋಪಿ. ಸೀತಾರಾಮ ತನ್ನ ಸಂಬಂಧಿಯಾಗಿರುವ ಕೊಂಡೆಮೂಲ ಗ್ರಾಮದ ಗಿಡೆಕೆರೆ ನಿವಾಸಿ ಅಪ್ರಾಪ್ತ ಬಾಲಕಿಯನ್ನು 2019ರ ಜನವರಿ 8ರಂದು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಅಲ್ಲಿ ಬಲಾತ್ಕಾರವಾಗಿ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ನಡೆಸಿದ್ದಾನೆ. ಅಲ್ಲದೆ ಕೃತ್ಯದ ವೀಡಿಯೋ ಚಿತ್ರೀಕರಿಸಿ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ. ಈ ವಿಚಾರವನ್ನು ಸಂತ್ರಸ್ತ ಬಾಲಕಿ ಮನೆಯಲ್ಲಿ ಹೇಳಿದ್ದಾಳೆ. ಆದರೆ ಈ ಬಗ್ಗೆ 2019ರ ನವೆಂಬರ್ 11ರಂದು ತಡವಾಗಿ ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣದ ತನಿಖೆ ನಡೆಸಿದ ಬಜ್ಪೆ ಠಾಣಾ ನಿರೀಕ್ಷಕ ಕೆ.ಆರ್.ನಾಯಕ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ಜಿಲ್ಲಾ ಮತ್ತು…
ಉಡುಪಿ: ಮಲ್ಪೆ ಬೀಚ್‌ನಲ್ಲಿ ಮುಳುಗುತ್ತಿದ್ದ ಒಟ್ಟು ಆರು ಮಂದಿ ಪ್ರವಾಸಿಗರನ್ನು ಮಂಗಳವಾರ, ಅಕ್ಟೋಬರ್ 4 ರಂದು ರಕ್ಷಿಸಲಾಗಿದ್ದು, ಆರು ಮಂದಿಯಲ್ಲಿ ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಮತ್ತೊಬ್ಬರು ಚಿಂತಾಜನಕ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಸರಾ ರಜೆ ಇರುವುದರಿಂದ ಮಲ್ಪೆ ಹಾಗೂ ಸುತ್ತಮುತ್ತಲಿನ ಬೀಚ್‌ಗಳಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು, ಮೈಸೂರು ಮೂಲದ ತೋಸಿಭ್ ಮಂಗಳವಾರ ಮಲ್ಪೆ ಬೀಚ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಜೀವರಕ್ಷಕರು ಬಹಳ ಕಷ್ಟಪಟ್ಟು ಅವರನ್ನು ರಕ್ಷಿಸಿದ್ದಾರೆ.ಕುಟುಂಬ ಸಮೇತ ಬೀಚ್‌ಗೆ ಭೇಟಿ ನೀಡಿದ್ದ ತಮಿಳುನಾಡಿನ ಸೇಲಂ ಮೂಲದ ಸೆಂಥಿಲ್ ಮತ್ತು ಬಿಜಿಪುರ ಮೂಲದ ಬಸವರಾಜು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಜೀವರಕ್ಷಕರು ರಕ್ಷಿಸಿದ್ದಾರೆ.ಮತ್ತೊಂದು ಘಟನೆಯಲ್ಲಿ ನವಾಜ್ ಕುಡಿದು ಸಮುದ್ರದಲ್ಲಿ ಈಜುತ್ತಿದ್ದು, ಮಧ್ಯಾಹ್ನ 2:30ರ ಸುಮಾರಿಗೆ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಜೀವರಕ್ಷಕರು ಕೂಡಲೇ ಆತನನ್ನು ರಕ್ಷಿಸಿದ್ದಾರೆ.ತನ್ನ ಸ್ನೇಹಿತರೊಂದಿಗೆ ಈಜುತ್ತಿದ್ದ ಸೋಹಮ್ ಘೋಷ್ ಸಮುದ್ರದ ಅಲೆಯಲ್ಲಿ ಸಿಲುಕಿದ್ದು, ಅವರನ್ನು ಕೂಡ ಸಿಬ್ಬಂದಿಗಳು ರಕ್ಷಿಸಿದ್ದಾರೆ.ಮತ್ತೊಂದು ಘಟನೆಯಲ್ಲಿ ಬೆಂಗಳೂರಿನ ಸಲಾಮ್ ಚೆರ್ರಿ ಮತ್ತು ಮೈಸೂರಿನ ಅಬ್ರಾರ್ ಈಜಲು ಹೋಗಿದ್ದರು,…
ಉಡುಪಿ: ಕಳೆದ 10 ತಿಂಗಳಿನಿಂದ ಮನೆ ಬಿಟ್ಟು ಹೋಗಿರುವ ನನ್ನ ಪತ್ನಿ ಆಶಾ(35) ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾಳೆ. ಮಕ್ಕಳು ಆಕೆ ಇಲ್ಲದೆ ಚಿಂತೆಯಲ್ಲಿದ್ದಾರೆ. ಆಕೆಗೆ ಯಾರೇ ಆಶ್ರಯ ನೀಡಿದ್ದರೂ ತಕ್ಷಣವೇ ನನಗೆ ಮಾಹಿತಿ ನೀಡಬೇಕೆಂದು ಬೆಳಪುವಿನ ಸುಬ್ರಹ್ಮಣ್ಯ(42) ಮನವಿ ಮಾಡಿದ್ದಾರೆ. ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮೆಸ್ತ್ರಿ ಕೆಲಸ ಮಾಡಿಕೊಂಡಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಸಣ್ಣ ಪುಟ್ಟ ವಿಚಾರಕ್ಕಾಗಿ ಮನಸ್ತಾಪಗೊಂಡ ಪತ್ನಿ ಆಶಾ, ಕಳೆದ ಡಿಸೆಂಬರ್‌ನಲ್ಲಿ ಮನೆ ಬಿಟ್ಟು ಹೋಗಿದ್ದಳು. ಇದರಿಂದ ದೊಡ್ಡ ಮಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಬಳಿಕ ಆಕೆ ಠಾಣೆಗೆ ಬಂದು ಹಾಜರಾಗಿದ್ದಳು ಎಂದರು. ಇದೀಗ ಆಕೆ ಮತ್ತೆ ಮನೆ ತೊರೆದು ಹೋಗಿದ್ದಾಳೆ. ಅವಳು ಎಲ್ಲಿಯೋ ಕೆಲಸ ಮಾಡಿಕೊಂಡು ಯಾರದ್ದೋ ಆಶ್ರಯದಲ್ಲಿ ವಾಸವಾಗಿದ್ದಾಳೆ. ಆದುದರಿಂದ ಆಶ್ರಯ ನೀಡಿದವರು ತಕ್ಷಣ ನನಗೆ ಮಾಹಿತಿ ನೀಡಬೇಕು. ಮಕ್ಕಳಿಗೋಸ್ಕರ ಆಕೆ ಮನೆ ವಾಪಾಸ್ಸು ಬರಲಿ ಎಂದು ಅವರು ತಿಳಿಸಿದರು.
ಮಂಗಳೂರು: ವಿಮಾನ ನಿಲ್ಧಾಣದಲ್ಲಿ ದುಬೈನಿಂದ ಬಂದಿಳಿದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ. ಮುಕ್ಕ ನಿವಾಸಿ ಮೊಹಮ್ಮದ್ (65) ಮೃತರು.ಗುರುವಾರ ದುಬೈಗೆ ತೆರಳಿದ್ದ ಮೊಹಮ್ಮದ್ ಕುಟುಂಬಸ್ಥರನ್ನು ಭೇಟಿಯಾಗಿ ಭಾನುವಾರ ವಾಪಾಸ್ಸಾಗಿದ್ದರು.ಮಂಗಳೂರು ವಿಮಾನ ನಿಲ್ದಾಣ ತಲುಪಿ ಅಧಿಕಾರಿಗಳಿಗೆ ಪಾಸ್ ಪೋರ್ಟ್ ನೀಡಿ ನಿಂತಿದ್ದ ವೇಳೆ ದಿಡೀರ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ತಕ್ಷಣ ಅವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ಬಂಟ್ವಾಳ: ನಾವು ಮರಳಿ ಬರುತ್ತೇವೆ ಎಂದು ರಸ್ತೆಯಲ್ಲಿ ಬರೆಯುವ ಮೂಲಕ ಪಿಎಫ್ಐ ಸಂಘಟನೆಯು ಆರ್‌ಎಸ್‌ಎಸ್‌ಗೆ ಬೆದರಿಕೆ ಹಾಕಿರುವ ಘಟನೆ ಬಂಟ್ವಾಳ ತಾಲೂಕಿನ ಪಿಲತಾಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿ ಬೆಳಕಿಗೆ ಬಂದಿದೆ. ಚಡ್ಡಿಗಳೆ ಎಚ್ಚರ ನಾವು ಮರಳಿ ಬರುತ್ತೇವೆ ಎಂದು ರಸ್ತೆಯಲ್ಲಿ ಬರೆದುಕೊಂಡಿದ್ದು, ಸ್ಥಳೀಯರು ಪುಂಜಾಲ್ ಕಟ್ಟೆ ಠಾಣೆಗೆ ಈ ಬಗ್ಗೆ ಮಾಹಿತಿ ನೀಡಿ ತಕ್ಷಣಕ್ಕೆ ಕ್ರಮ ಜರುಗಿಸಿ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸುತ್ತಾರೆ.
ಮಂಗಳೂರು: ನಗರದ ಶ್ರೀ ಗೋಕರ್ಣನಾಧೇಶ್ವರ ದೇವಸ್ಥಾನದಿಂದ ನವದುರ್ಗೆಯರು, ಶಾರದೆ, ಗಣೇಶ ವಿಗ್ರಹ, ವಿವಿಧ ಟ್ಯಾಬ್ಲೋಗಳ ಶೋಭಾಯಾತ್ರೆಗೆ ಅಪಾರ ಜನಸಂಖ್ಯೆ ಸೇರುವ ನಿರೀಕ್ಷೆ ಇರುವುದರಿಂದ ಕಾನೂನು ಸುವ್ಯವಸ್ಥೆ, ವಾಹನಗಳ ಸುಗಮ ಸಂಚಾರ ಹಾಗೂ ಸಾರ್ವಜನಿಕ ಸುರಕ್ಷತೆಯ ದೃಷ್ಠಿಯಿಂದ ಭಾರತೀಯ ಮೋಟಾರು ವಾಹನ ಕಾಯ್ದೆ 1988 ಕಲಂ 115 ಮತ್ತು 116ರಲ್ಲಿ ಪ್ರದತ್ತ ಅಧಿಕಾರವನ್ನು ಚಲಾಯಿಸಿ ಅ.05ರ ಬುಧವಾರ ಮಧ್ಯಾಹ್ನ 2 ಗಂಟೆಯಿಂದ ಅ.06ರ ಗುರುವಾರ ಬೆಳಿಗ್ಗೆ 6 ಗಂಟೆಯವರೆಗೆ ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ. ಕೊಟ್ಟಾರ ಚೌಕಿ ಜಂಕ್ಷನ್ ಮುಖಾಂತರ ನಗರಕ್ಕೆ ಬರುವ ವಾಹನಗಳ ನಗರ ಪ್ರವೇಶವನ್ನು ನಿಷೇಧಿಸಲಾಗಿದೆ ಹಾಗೂ ವಾಹನಗಳು ಕುಂಟಿಕಾನ, ಕೆ.ಪಿ.ಟಿ, ನಂತೂರು ಮಾರ್ಗವಾಗಿ ನಗರ ಪ್ರವೇಶಿಸುವುದು.ನಗರದಿಂದ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಮುಖೇನ ಕೊಟ್ಟಾರ ಚೌಕಿ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ನಗರದಿಂದ ಲಾಲ್ಬಾಗ್ ಮಾರ್ಗವಾಗಿ ಕುಂಟಿಕಾನ ಹಾಗೂ ಕೆ.ಪಿ.ಟಿ ಕಡೆಗೆ ಸಂಚರಿಸುವ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಕೆ.ಎಸ್.ಆರ್ ರಸ್ತೆಯಿಂದ ಎಂ.ಜಿ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಪಿ.ವಿ.ಎಸ್ ಮಾರ್ಗವಾಗಿ…
ಸುಳ್ಯ : ನಿನ್ನೆ ರಾತ್ರಿ ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದ ತಂಬಿನಮಕ್ಕಿ ಬಳಿ ಎರಡು ಬೈಕ್ ಗಳ ನಡುವೆ ಪರಸ್ಪರ ಡಿಕ್ಕಿಯಾಗಿ ಓರ್ವ ಮೃತಪಟ್ಟ ಘಟನೆ ವರದಿಯಾಗಿದೆ. ಮೃತ ವ್ಯಕ್ತಿಯ ಹೆಸರು ನಾರಾಯಣ ಎಂಬುದಾಗಿ ತಿಳಿದು ಬಂದಿದೆ. ಘಟನೆಯಿಂದ ಮತ್ತೋರ್ವ ಸುಜಿತ್ ಎಂಬುವರಿಗೆ ಗಾಯಾಳಾಗಿ ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಉಡುಪಿ: ಗಾಂಜಾ ಪ್ರಕರಣದ ಆರೋಪಿ ಮಹಾರಾಷ್ಟ್ರದ ಅವಿನಾಶ್ ದಿಗಂಬರ್ ಲೋಖಂಡೆ(28) ಎಂಬಾತನಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಶಾಂತವೀರ ಶಿವಪ್ಪ ಆದೇಶಿಸಿದ್ದಾರೆ. ಸೆನ್ ಅಪರಾಧ ಪೊಲೀಸ್ ಠಾಣೆ ಅಂದಿನ ನಿರೀಕ್ಷಕ ಸೀತಾರಾಮ ಅವರು 2019ರ ಜು.24ರಂದು ಇಂದ್ರಾಳಿ ರೈಲ್ವೆ ನಿಲ್ದಾಣ ಬಳಿ ಅವಿನಾಶ್‌ನನ್ನು ಬಂಧಿಸಿ ಆತನಿಂದ 2.20 ಕೆ.ಜಿ. ಗಾಂಜಾ, ಮೊಬೈಲ್ ವಶಕ್ಕೆ ಪಡೆದಿದ್ದರು. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ತನಿಖೆ ನಡೆಸಿದ ಸೆನ್ ಅಪರಾಧ ಪೊಲೀಸ್ ಠಾಣಿ ಉಪನಿರೀಕ್ಷಕ ನಾರಾಯಣ ಅವರು 2020ರ ಮಾ.23ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಸರ್ಕಾರಿ ಅಭಿಯೋಜಕಿ ಶಾಂತಿಬಾಯಿ ವಾದ ಮಂಡಿಸಿದ್ದರು
ಉಡುಪಿ: ಸುಸಜ್ಜಿತ ಮೀನುಗಾರಿಕಾ ಜೆಟ್ಟಿ ಬೇಕು ಅನ್ನೋದು ಉಡುಪಿಯ ಗಂಗೊಳ್ಳಿಯ ಮೀನುಗಾರರ ಬಹುವರ್ಷದ ಬೇಡಿಕೆ. ಮೀನುಗಾರರ ಕನಸಿನ ಜೆಟ್ಟಿಗೆ ಅಂತ ಸರ್ಕಾರದಿಂದ 12 ಕೋಟಿ ಬಿಡುಗಡೆ ಆಗಿ, ಕಾಮಗಾರಿಯೂ ನಡೆಯುತ್ತಿದೆ. ಆದ್ರೆ ಅಧಿಕಾರಿಗಳ ಲಅವೈಜ್ಞಾನಿಕ ಕಾಮಗಾರಿಯಿಂದ ನಿರ್ಮಾಣ ಹಂತದಲ್ಲಿದ್ದ ಜಟ್ಟಿ ನೋಡು ನೋಡುತ್ತಲೇ ಕುಸಿದು ಬಿದ್ದಿದೆ. ಈ ನಡುವೆ ಮೀನುಗಾರ ಜಟ್ಟಿ ನಿರ್ಮಾಣದಲ್ಲೂ ಪರ್ಸೆಂಟೇಜ್ ಹೋಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಜೆಟ್ಟಿ ಕುಸಿತ ಕಂಡು ಮೀನುಗಾರರು ಆಕ್ರೋಶ ಹೊರಹಾಕಿದ್ದಾರೆ. ಹೊಟ್ಟೆಗೆ ಹಿಟ್ಟು ನೀಡುಲು ಸಹಕಾರಿಯಾಗಿದ್ದ ಜಟ್ಟಿ ಕುಸಿದು ಹೋಯಿತಲ್ಲಾ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಜೆಟ್ಟಿ ಅನ್ನೋದು ಮತ್ಸ್ಯ ಬೇಟೆ ಮುಗಿದ ಬಳಿಕ ಮೀನುಗಳನ್ನು ಖಾಲಿ ಮಾಡಲು ಹಾಗೂ ಹಡಗು, ದೋಣಿಗಳು ತಂಗಲು ಇರೋ ಪ್ರದೇಶ.