Author: main-admin

ಮಂಗಳೂರು: ಕೇರಳದ ಕಣ್ಣೂರು ಜಿಲ್ಲೆಯ ಕೆಳಕಂ ಪಂಚಾಯತ್ ವ್ಯಾಪ್ತಿಯ ಮಲಯಂಪಾಡಿ ಎಸ್ ತಿರುವಿನಲ್ಲಿ ಶುಕ್ರವಾರ ಮುಂಜಾನೆ ರಂಗಭೂಮಿ ಕಲಾವಿದರು ಸಂಚರಿಸುತ್ತಿದ್ದ ಮಿನಿ ಬನ್ನೊಂದು ರಬ್ಬರ್ ತೋಟಕ್ಕೆ ಮಗುಚಿ ಬಿದ್ದು ಇಬ್ಬರು ನಟಿಯರು ಸಾವಿಗೀಡಾಗಿ, 12 ಮಂದಿ ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಿದೆ. ಬಸ್‌ನ ಮುಂಭಾಗದಲ್ಲಿ ಕುಳಿತಿದ್ದ ಕಾಯಂಕುಳಂ ನಿವಾಸಿ ಅಂಜಲಿ (32) ಮತ್ತು ಕರುನಾಗಪಳ್ಳಿ ನಿವಾಸಿ ಜೆಸ್ಸಿ ಮೋಹನ್ (58) ಸಾವಿಗೀಡಾದರು. ಕೇಳಕಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗೂಗಲ್ ಮ್ಯಾಪ್ ನೋಡಿಕೊಂಡು ಚಾಲಕ ಮಿನಿ ಬಸ್ ಚಲಾಯಿಸಿದ್ದಾರೆ. ಸಣ್ಣವಾಹನಗಳಿಗೆ ಮಾತ್ರ ಸುಗಮವಾಗಿ ಸಂಚರಿಸಲು ಸಾಧ್ಯವಿರುವ ಏರಿಳಿತದಿಂದ ಕೂಡಿದ ಈ ರಸ್ತೆಯಲ್ಲಿ ಸಾಗಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

Read More

ಮಂಗಳೂರು : ಖಾಸಗಿ ಬೀಚ್ ರೆಸಾರ್ಟ್ ನ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವನಪ್ಪಿದ ಘಟನೆ ಮಂಗಳೂರು ಹೊರವಲಯದ ಸೋಮೇಶ್ವರ ಉಚ್ಚಿಲದ ವಾಝ್ಕೊ ಬೀಚ್ ರೆಸಾರ್ಟ್ ಈಜುಕೊಳದಲ್ಲಿ ನಡೆದಿದೆ. ಮೃತರನ್ನು ಮೈಸೂರು ಕುರುಬಾರಹಳ್ಳಿ ನಾಲ್ಕನೇ ಕ್ರಾಸ್ ನಿವಾಸಿ ನಿಶಿತ ಎಂ.ಡಿ. (21), ಮೈಸೂರು ರಾಮಾನುಜ ರಸ್ತೆ, ಕೆ.ಆರ್ ಮೊಹಲ್ಲಾ ನಿವಾಸಿ ಪಾರ್ವತಿ ಎಸ್ (20), ಮೈಸೂರು ವಿಜಯ ನಗರ ದೇವರಾಜ ಮೊಹಲ್ಲ ನಿವಾಸಿ ಕೀರ್ತನ ಎನ್(21) ಎಂದು ಗುರುತಿಸಲಾಗಿದೆ. ಮೂವರು ಗೆಳೆತಿಯರು ನಿನ್ನೆ ಬೆಳಗ್ಗೆ ಬೀಚ್ ರೆಸಾರ್ಟ್ ಗೆ ಆಗಮಿಸಿ ಕೊಠಡಿ ಪಡೆದಿದ್ದರು. ಇಂದು ಬೆಳಿಗ್ಗೆ 8.30ರ ಸುಮಾರಿಗೆ ಸ್ವಿಮ್ಮಿಂಗ್ ಫೂಲ್ ನಲ್ಲಿ ಈಜಲು ತೆರಳಿದ್ದರು, ಮೂವರೇ ಪೂಲ್ ನಲ್ಲಿ ಆಟವಾಡುತ್ತಿದ್ದ ವೇಳೆ ನಡೆದ ಘಟನೆ. ಸ್ವಿಮ್ಮಿಂಗ್ ಫೂಲ್ ನಲ್ಲಿ ಒಂದು ಬದಿ ಆರು ಅಡಿಯಷ್ಟು ಆಳವಿತ್ತು, ಈ ವೇಳೆ ಆಯಾತಪ್ಪಿ ಓರ್ವ ಯುವತಿ ಮುಳುಗಿರುವ ಸಾಧ್ಯತೆ ಇದೆ. ರ ಕ್ಷಣೆಗೆ ಮುಂದಾಗಿದ ಮತ್ತೊಬ್ಬಾಕೆಯೂ ಮುಳುಗಿದ್ದ ಕಾರಣ ಮೂರನೇ ಯುವತಿಯೂ ನೀರಿಗೆ…

Read More

ಉಡುಪಿ: ಅತೀ‌ ವೇಗವಾಗಿ ಬಂದ ಥಾರ್ ಜೀಪ್ ವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರನೋರ್ವ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಾಪು ತಾಲೂಕಿನ ಬೆಳಪು ಮಿಲಿಟ್ರಿ ಕಾಲೋನಿ ಎಂಬಲ್ಲಿ ನಡೆದಿದೆ. ಮೃತರನ್ನು ಬೆಳಪು ನಿವಾಸಿ ಮಹಮ್ಮದ್ ಹುಸೇನ್ (39) ಎಂದು ಗುರುತಿಸಲಾಗಿದೆ. ಕಾಂಗ್ರೆಸ್ ಮುಖಂಡ, ಸಹಕಾರಿ ಧುರೀಣ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರ ಪುತ್ರ ಪ್ರಜ್ವಲ್ ಶೆಟ್ಟಿ ಎಂಬಾತ ನ.11ರಂದು ಮುಂಜಾನೆ 5 ಗಂಟೆಗೆ ಹಿಟ್ ಆಯಂಡ್ ರನ್ ನಡೆಸಿ ಪರಾರಿಯಾಗಿದ್ದನು. ಜೀಪ್ ಡಿಕ್ಕಿ ಹೊಡೆದ ತೀವ್ರತೆಗೆ ಮಹಮ್ಮದ್ ಹುಸೇನ್ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣ ನಡೆದ ಬೆನ್ನಲ್ಲೇ ಪ್ರಜ್ವಲ್ ಶೆಟ್ಟಿ ತಲೆಮರೆಸಿಕೊಂಡಿದ್ದನು. ಇದೀಗ ಆರೋಪಿಯನ್ನ ಶಿರ್ವ ಪೊಲೀಸರು ಬಂಧಿಸಿದ್ದಾರೆ. ಶಿರ್ವ ಪೊಲೀಸರು ಹಿಟ್ ಆಯಂಡ್ ರನ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Read More

ಶಬರಿಮಲೆ ಯಾತ್ರಿರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೈಋತ್ಯ ರೈಲ್ವೆ ಹುಬ್ಬಳ್ಳಿ-ಕೊಟ್ಟಾಯಂ ನಡುವೆ ವಿಶೇಷ ರೈಲು ಸೇವೆ ಪ್ರಾರಂಭಿಸಲಿದೆ. ನವೆಂಬರ್ 19 ರಿಂದ ಜನವರಿ 15ರವರೆಗೆ ಈ ರೈಲು ಸಂಚರಿಸಲಿದೆ ಇದರ ಜೊತೆಗೆ ವಾರಕ್ಕೊಮ್ಮೆ ಹೆಚ್ಚುವರಿ ರೈಲು ಸಹ ಸಂಚರಿಸಲಿದೆ. ಹುಬ್ಬಳ್ಳಿ ಹಾಗೂ ಕೇರಳದ ಕೊಟ್ಟಾಯಂ ನಿಲ್ದಾಣಗಳ ನಡುವೆ ಒಂಬತ್ತು ಟ್ರಿಪ್ ವಿಶೇಷ ಎಕ್ಸ್​​ಪ್ರೆಸ್ ರೈಲು ಸೇವೆ ಒದಗಿಸಲು ನೈಋತ್ಯ ರೈಲ್ವೆ ನಿರ್ಧರಿಸಿದೆ.ರೈಲು ಸಂಖ್ಯೆ 07371 ಎಸ್​ಎಸ್​ಎಸ್​ ಹುಬ್ಬಳ್ಳಿ-ಕೊಟ್ಟಾಯಂ ವಿಶೇಷ ಎಕ್ಸ್​ಪ್ರೆಸ್​ ರೈಲು ನವೆಂಬರ್​ 19 ರಿಂದ 2025ರ ಜನವರಿ 14ರವರೆಗೆ ಸಂಚರಿಸಲಿದೆ.ರೈಲು ಸಂಖ್ಯೆ 07372 ಎಸ್​ಎಸ್​ಎಸ್​ ಹುಬ್ಬಳ್ಳಿ-ಕೊಟ್ಟಾಯಂ ವಿಶೇಷ ಎಕ್ಸ್​ಪ್ರೆಸ್​ ರೈಲು ನವೆಂಬರ್​ 20 ರಿಂದ 2025ರ ಜನವರಿ 15ರವರೆಗೆ ಸಂಚರಿಸಲಿದೆ.2 ಎಸಿ ಟು ಟೈರ್ ​, 2 ಎಸಿ ತ್ರಿ ಟೈಯರ್​, 6 ಸ್ಲೀಪರ್​ ಕ್ಲಾಸ್​, 6 ಜನರಲ್​ ಸೆಕೆಂಡ್​ ಕ್ಲಾಸ್​ ಮತ್ತು 2 ಎಸ್​ಎಲ್​ಆರ್​ಡಿ ಸೇರಿದಂತೆ 18 ಬೋಗಿಗಳನ್ನು ಹೊಂದಿರಲಿದೆ. ಇನ್ನು ಹೆಚ್ಚುವರಿಯಾಗಿ ಹುಬ್ಬಳ್ಳಿ-ಕೊಟ್ಟಾಯಂ ನಡುವೆ ವಾರಕ್ಕೋಮ್ಮೆ ಒಂದು…

Read More

ಮಂಗಳೂರು: ಮಳಲಿ ಮಸೀದಿಯ ಜಮೀನಿನ ವಿವಾದಕ್ಕೆ ಸಂಬಂಧಿಸಿ ವಿಹಿಂಪ ಪರವಾಗಿ ಸಲ್ಲಿಸಿದ ಅರ್ಜಿಯೊಂದನ್ನು ಮಂಗಳೂರಿನ ಸಹಾಯಕ ಆಯುಕ್ತರ ನ್ಯಾಯಾಲಯ ತಿರಸ್ಕರಿಸಿದೆ. ಈ ಹಿಂದೆ ಮಸೀದಿ ಇರುವ ಜಾಗದ ಆರ್‌ಟಿಸಿಯ ಕಾಲಂ 9ರಲ್ಲಿ ಕಂದಾಯ ಭೂಮಿ ಎಂದು ಉಲ್ಲೇಖೀಸಲಾಗಿತ್ತು. ಆದರೆ ಇತ್ತೀಚೆಗೆ ರಾಜ್ಯದ ಹಲವೆಡೆ ಉಂಟಾಗಿರುವ ವಕ್ಫ್ ವಿವಾದ ಹಿನ್ನೆಲೆಯಲ್ಲಿ ಅನುಮಾನ ವ್ಯಕ್ತವಾಗಿ ಮಳಲಿ ಮಸೀದಿ ಬಗ್ಗೆಯೂ ಅರ್ಜಿ ಸಲ್ಲಿಸಲಾಗಿತ್ತು. ಈ ಹಿಂದಿನ ದಾಖಲೆ ಬದಲಾಯಿಸಬಾರದು. ಈ ಬಗ್ಗೆ ಸಿವಿಲ್‌ ನ್ಯಾಯಾಲಯದಲ್ಲಿರುವ ವ್ಯಾಜ್ಯ ತೀರ್ಮಾನ ಆಗುವವರೆಗೂ ಯಾವುದೇ ಪ್ರಕ್ರಿಯೆ ನಡೆಸಬಾರದು ಎಂದು ವಿಹಿಂಪ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ನಾವು ಸಲ್ಲಿಸಿರುವ ಅರ್ಜಿಯನ್ನು ಸಹಾಯಕ ಆಯುಕ್ತರು ತಿರಸ್ಕರಿಸಿದ್ದಾರೆ. ಹಾಗಾಗಿ ನಾವು ಹೈಕೋರ್ಟ್‌ ಮೆಟ್ಟಿಲೇರಿದ್ದೇವೆ ಎಂದು ವಿಹಿಂಪ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ತಿಳಿಸಿದ್ದಾರೆ.

Read More

ಬೈಂದೂರು: ಮೀನು ಸಾಗಿಸುವ ಇನ್ಸುಲೇಟರ್ ವಾಹನವೊಂದು ಪಲ್ಟಿಯಾಗಿ ಅದರ ಒಳಗೆ ಮೀನು ಬಾಕ್ಸ್‌ಗಳ ಜೊತೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಘಟನೆ ಶಿರೂರು ಕರಿಕಟ್ಟೆ ಬಳಿ ಪತ್ತೆಯಾಗಿದೆ. ವಾಹನದಲ್ಲಿ ಮೀನಿನ ಬದಲು ಜಾನುವಾರುಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದ್ದು ಆರೋಪಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ರಾತ್ರಿ ಹೊತ್ತು ಮಿನಿ ಇನ್ಸುಲೇಟರ್ ವಾಹನದೊಳಗೆ ಮೀನು ತುಂಬಿರುವ ಟ್ರೇಗಳನ್ನು ಇರಿಸಿಕೊಂಡು ಮದ್ಯದಲ್ಲಿ ಎತ್ತುಗಳನ್ನು ಸಾಗಿಸಲಾಗುತ್ತಿತ್ತು. ವಾಹನವು ಭಟ್ಕಳದಿಂದ ಬೈಂದೂರು ಕಡೆಗೆ ಸಾಗುತ್ತಿದ್ದಾಗ ಕರಿಕಟ್ಟೆ ದುರ್ಗಾಂಬಿಕಾ ಹಾಲ್‌ ಹತ್ತಿರ ಅತಿ ಪಲ್ಟಿಯಾಗಿದೆ. ಕೂಡಲೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಪುತ್ತೂರು: ಏಳು ತಿಂಗಳ ಹಿಂದೆ ನಾಪತ್ತೆಯಾಗಿರುವ ವ್ಯಕ್ತಿ ಇನ್ನೂ ಪತ್ತೆಯಾಗಿಲ್ಲ. ಕೆದಂಬಾಡಿ ಗ್ರಾಮದ ಬಾರಿಕೆ ನಿವಾಸಿ ಸಂಕಪ್ಪ ಪೂಜಾರಿ ಅವರ ಪುತ್ರ ದಿವಾಕರ (37) ನಾಪತ್ತೆಯಾಗಿರುವ ವ್ಯಕ್ತಿ. ಅವಿವಾಹಿತರಾಗಿರುವ ಅವರು ಕೂಲಿ ಕಾರ್ಮಿಕರಾಗಿದ್ದು ಎ.27ರಂದು ಬೆಳಗ್ಗೆ 6ಕ್ಕೆ ಮನೆಯಿಂದ ಹೊರ ಹೋಗಿದ್ದರು.ಕಾಣೆಯಾದ ಸಂದರ್ಭದಲ್ಲಿ ಕರೆ ಮಾಡಿದ್ದ ಅವರು, ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದು ತಿಳಿಸಿದ್ದು ಬಳಿಕ ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಈ ನಡುವೆ ಸಂಪ್ಯ ಪೊಲೀಸರ 15 ಮಂದಿಯ ತಂಡ ಕಾಡಿನಲ್ಲಿ ಹುಡುಕಾಟವನ್ನೂ ನಡೆಸಿದ್ದರು.ದಿವಾಕರ ಅವರ ಗುರುತು ಪತ್ತೆಯಾದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ನಿರೀಕ್ಷಕರು, ಜಿಲ್ಲಾ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ ಗ್ರಾಮಾಂತರ ಪೊಲೀಸ್‌ ಠಾಣೆ ಪ್ರಕಟನೆ ತಿಳಿಸಿದೆ.

Read More

ಮಂಗಳೂರು: ಪಾರ್ಟ್‌ಟೈಮ್ ಜಾಬ್ ಆಫರ್ ನೀಡಿ ವ್ಯಕ್ತಿಯೊಬ್ಬರಿಂದ ಹಂತಹಂತವಾಗಿ 28,18,065 ರೂ ವಂಚನೆಗೈದ ಐವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಫಿರ್ಯಾದಿದಾರರ ವಾಟ್ಸ್ಆ್ಯಪ್‌ಗೆ ಜುಲೈ 21ರಂದು ಪಾರ್ಟ್‌ಟೈಮ್ ಜಾಬ್ ಆಫರ್ ಬಂದಿತ್ತು. ಅದರಲ್ಲಿ ಬಂದ ವೀಡಿಯೋದ ಸ್ಕ್ರೀನ್ ಶಾಟ್ ತೆಗೆದು ಹಾಕುವಂತೆ ಸೂಚಿಸಿದ್ದಂತೆ ಅವರು ಕಳುಹಿಸಿದ್ದರು. ಆ ತಕ್ಷಣ ಅವರ ಬ್ಯಾಂಕ್ ಖಾತೆಗೆ 130 ರೂ ಕ್ರೆಡಿಟ್ ಆಗಿದೆ. ಬಳಿಕ ಹಾಕಿರುವ ವೀಡಿಯೋ ತಪ್ಪಾಗಿದೆ ಎಂದು ಸೂಚನೆ ನೀಡಿದ ಪಾರ್ಟ್‌ಟೈಮ್ ಜಾಬ್ ಆಫರ್ ನೀಡಿದವರು ಟೆಲಿಗ್ರಾಂ ಲಿಂಕ್ ಅನ್ನು ಕಳುಹಿಸಿದ್ದಾರೆ. ಅದನ್ನು ಓಪನ್ ಮಾಡಿದಾಗ 1000 ರೂ ಹಾಕುವಂತೆ ಸೂಚಿಸಿದ್ದಾರೆ‌. ಬಳಿಕ ಹಂತಹಂತವಾಗಿ ಹಣ ಹಾಕಲು ಸೂಚಿಸುತ್ತಾ 28,18,065 ರೂ ಹಣವನ್ನು ತಮ್ಮ ಖಾತೆಗೆ ಹಾಕಲು ಹಾಕಿಸಿಕೊಂಡಿದ್ದಾರೆ‌. ತನಿಖೆ ಆರಂಭಿಸಿದ ಪೊಲೀಸರು ವರ್ಗಾವಣೆ ಆಗಿರುವ ಬ್ಯಾಂಕ್ ಖಾತೆ, ಇತರ ಹಣದ ಮಾಹಿತಿ ಆಧಾರದಲ್ಲಿ ಮೈಸೂರು ಉದಯಗಿರಿ ಮೂಲದ ನಾಲ್ವರು, ಬೆಂಗಳೂರು ನೀಲಸಂದ್ರದ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ಮಾಡಿದಾಗ ಶೋಯೇಬ್ ಎಂಬಾತ…

Read More

ಮಂಗಳೂರು: ಪೊಲೀಸರ ಕೈಗೆ ಸಿಗದೆ ಕೋಟಿಗಟ್ಟಲೆ ಹಣವನ್ನು ಲೂಟಿ ಮಾಡುತ್ತಿರುವ ಸೈಬರ್ ವಂಚಕರೂ ಇದೀಗ ಪೊಲೀಸ್ ಬಲೆಗೆ ಬೀಳಲಾರಂಭಿಸಿದ್ದಾರೆ. ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಮೂವರು ಅರೆಸ್ಟ್ ಆಗಿದ್ದಾರೆ. ಸಿಬಿಐ ಅಧಇಕಾರಿ ಎಂದು ಹೆದರಿಸಿ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 68 ಲಕ್ಷ ಹಣವನ್ನು ಸುಲಿಗೆ ಮಾಡಿದ್ದ ಆರೋಪಿ ಕೇರಳದ ಎರ್ನಾಕುಲಂ ಜಿಲ್ಲೆಯ ಆಲುವಾ ತಾಲೂಕಿನ ನಿಸಾರ್ ಎಂಬಾತನನ್ನು ಬಂಧಿಸಲಾಗಿದೆ. ಅದಲ್ಲದೆ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಅಧಿಕ ಲಾಭಾಂಶ ಕೊಡುವುದಾಗಿ ನಂಬಿಸಿ ಸುಮಾರು 90 ಲಕ್ಷ ರೂ. ಹಣವನ್ನು ವಂಚನೆ ಮಾಡಿರುವ ಆರೋಪಿಗಳಾದ ಕೇರಳದ ಕೋಝಿಕೋಡ್‌ನ ಸಾಹಿಲ್ ಕೆ.ಪಿ ಮತ್ತು ನಶಾತ್ ಆರ್. ಎಂಬವರನ್ನು ಬಂಧಿಸಲಾಗಿದೆ. ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ರಾಘವೇಂದ್ರ ಬೈಂದೂರು, ಎಸ್ಸೈ ಮಲ್ಲಿಕಾರ್ಜುನ ಬಿರಾದಾರ ಸಿಬ್ಬಂದಿಗಳಾದ ರಾಮಣ್ಣ ಶೆಟ್ಟಿ, ಭುವನೇಶ್ವರಿ, ರಾಜಪ್ಪಕಾಶಿಬಾಯಿ, ಪ್ರವೀಣ್ ಎನ್., ಮಾಲತೇಶ ಪಾಲ್ಗೊಂಡಿದ್ದರು.

Read More

ಬೆಂಗಳೂರು: ಎಲ್ಲಾ ವರ್ಗದ ವಾಹನಗಳಿಗೆ ಅತೀ ಸುರಕ್ಷಿತ ನೋಂದಣಿ ಫಲಕ ಅಳವಡಿಸಲು ನಿಗದಿಪಡಿಸಿರುವ ಕಾಲಮಿತಿಯನ್ನು ನವೆಂಬರ್ 30ರವರೆಗೆ ವಿಸ್ತರಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಕಳೆದ 2019ರ ಏಪ್ರಿಲ್ ಒಂದಕ್ಕಿಂತ ಪೂರ್ವದಲ್ಲಿ ನೋಂದಣಿಯಾಗಿರುವ ಎಲ್ಲಾ ವರ್ಗದ ವಾಹನಗಳಿಗೆ ಅತೀ ಸುರಕ್ಷಿತ ನೋಂದಣಿ ಫಲಕ ಅಳವಡಿಸಬೇಕಾಗಿದೆ. ಈಗಾಗಲೇ ಈ ನೋಂದಣಿ ಫಲಕ ಅಳವಡಿಕೆಗೆ ನಿಗದಿಪಡಿಸಿದ್ದ ಅಂತಿಮ ಗಡುವನ್ನು ಸಾರಿಗೆ ಇಲಾಖೆ ಸುಮಾರು ನಾಲ್ಕು ಬಾರಿ ವಿಸ್ತರಣೆ ಮಾಡಿದೆ.

Read More