Author: main-admin

ಉಡುಪಿ: ಜಿಲ್ಲೆಯ ಹೂಡೆ, ಕುಂದಾಪುರ, ಗಂಗೊಳ್ಳಿ ಸೇರಿದಂತೆ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿರುವ ಪೊಲೀಸರು ಹಲವು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ. ಪಿಎಫ್​ಐನ ಸ್ಥಳೀಯ ಮುಖಂಡರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ. ಹೂಡೆಯಲ್ಲಿ ಪಿಎಫ್​ಐ ಮುಖಂಡ ಇಲ್ಯಾಸ್ ಹೂಡೆಯನ್ನು ಮಲ್ಪೆ ಪೊಲೀಸರು, ಕುಂದಾಪುರದ ಆಶಿಕ್ ಕೋಟೇಶ್ವರ ಕುಂದಾಪುರ ಪೊಲೀಸರು, ಗಂಗೊಳ್ಳಿಯಲ್ಲಿ ಪಿಎಫ್​ಐ ಕಾರ್ಯಕರ್ತ ರಜಾಬ್ ಮತ್ತು ಬೈಂದೂರಿನಲ್ಲಿ ಪಿಎಫ್​ಐ ಕಾರ್ಯಕರ್ತ ಕಲಿಲ್ ಸೈಯದ್‌ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.

Read More

ಬೆಳ್ತಂಗಡಿ: ಉಜಿರೆಗ ಅಜ್ಜರಕಾಡು ಮೈದಾನದ ಸಮೀಪ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಅಪರಿಚಿತ ವ್ಯಕ್ತಿಯ ಮೃತದೇಹ ಮಲಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸ್ಥಳೀಯರು ಪರಿಶೀಲನೆ ನಡೆಸಿದಾಗ ಆತ ಮೃತಪಟ್ಟಿರುವುದು ಕಂಡು ಬಂದಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಯಾವುದೋ ಅನಾರೋಗ್ಯದಿಂದ ಅಥವಾ ಇನ್ಯಾವುದೇ ಕಾರಣದಿಂದ ವ್ಯಕ್ತಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಮೃತ ವ್ಯಕ್ತಿಯ ವಿಳಾಸದ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

Read More

ಮಂಗಳೂರು: ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟ್‌ನಲ್ಲಿ ದೈವಾರಾಧನೆ ವಿಚಾರದಲ್ಲಿ ಅನುಚಿತವಾಗಿ ಬರೆಯಲಾಗಿದ್ದು, ಇದನ್ನು ತುಳುವಿನ ಟ್ರೋಲ್ ಪೇಜ್‌ನವರು ಟ್ರೋಲ್ ಮಾಡಿದ್ದರು. ಇದು ಗಮನಕ್ಕೆ ಬರುತ್ತಿದ್ದಂತೆ ಪ್ರವಾಸೋದ್ಯಮ ಇಲಾಖೆಯು ವೆಬ್‌ಸೈಟ್‌ನಲ್ಲಿನ ‘ಭೂತ ಕೋಲ’ ಪೇಜ್ ಅನ್ನು ಡಿಲಿಟ್ ಮಾಡಿದೆ. ಭೂತದ ಕೊಳ/ ಭೂತಾರಾಧನೆ ಎಂಬ ತಲೆಬರಹದಲ್ಲಿರುವ ದೈವಾರಾಧನೆ ವಿಚಾರ ವಿಚಾರ ಟ್ರೋಲ್ ಆಗಿದೆ. ಇಲ್ಲಿ ಭೂತದ ಕೋಲ ಎಂಬ ಪದವು ಭೂತದ ಕೊಳ ಎಂದಾಗಿದೆ‌. ಅಲ್ಲದೆ ಭೂತಾರಾಧನೆಯನ್ನು ದೆವ್ವದ ಆರಾಧನೆ ಎಂದು ಬರೆಯಲಾಗಿದೆ. ಭೂತಗಳನ್ನು ಪ್ರತಿನಿಧಿಸುವ ವಿಗ್ರಹಗಳನ್ನು ಮೆರವಣಿಗೆಯಲ್ಲಿ ಡ್ರಮ್‌ಗಳನ್ನು ಬಾರಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವ ಮೂಲಕ ಮೆರವಣಿಗೆ ಮಾಡುತ್ತಾರೆ. ಕತ್ತಿ ಮತ್ತು ಗಂಟೆಗಳೊಂದಿಗೆ ಕುಣಿಯುತ್ತ ನರ್ತಕಿ ತಾನು ಪ್ರತಿನಿಧಿಸುವ ದೆವ್ವದ ಅನುಕರಣೆಯಲ್ಲಿ ಸುತ್ತುತ್ತಾನೆ‌. ಉದ್ರಕ್ತವಾಗಿ ಮೇಲಕ್ಕೆ ಕೆಳಕ್ಕೆ ಹೆಜ್ಜೆ ಹಾಕುತ್ತಾನೆ ಎಂದು ಆಕ್ಷೇಪಾರ್ಹವಾಗಿ ಬರೆಯಲಾಗಿದೆ. ತುಳುವಿನ ಟ್ರೋಲ್ ಪೇಜ್ @Tuluvas speaks ಕರ್ನಾಟಕ ಸರಕಾರದಿಂದ ತುಳುವರ ದೈವಕ್ಕೆ ಅವಮಾನ ಎಂದು ಈ ಬರಹದ ಪೇಜ್ ಅನ್ನು ಪೋಸ್ಟ್ ಮಾಡಿ ಟ್ರೋಲ್…

Read More

ಸುಳ್ಯ;ಬೈಕ್ ಗೆ ಆಟೋ ರಿಕ್ಷ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ವಿದ್ಯಾರ್ಥಿ ಮೃತಪಟ್ಟ ಘಟನೆ ಸುಳ್ಯದಲ್ಲಿ ನಡದಿದೆ. ಚೆಂಬು ಗ್ರಾಮದ ಕುದುರೆಪಾಯ ನಿವಾಸಿ ತೇಜೇಶ್ವರ ಎಂಬವರ ಪುತ್ರ ಪ್ರತೀಕ್ (19)ಮೃತಪಟ್ಟ ವಿದ್ಯಾರ್ಥಿ.ಬೇಕರಿಯಲ್ಲಿ ಕೆಲಸ ಮಾಡತ್ತಿರುವ ತೇಜಸ್‌ ಎಂಬ ಯುವಕನ ಜೊತೆ ಇಂದು ಬೆಳಗ್ಗೆ ಕಲ್ಲುಗುಂಡಿಯಿಂದ ಬೈಕ್‌ನಲ್ಲಿ ಪ್ರತೀಕ್ ಸುಳ್ಯದ ಕಡೆಗೆ ಬರುತ್ತಿದ್ದರು.ಈ ವೇಳೆ ಪರಿವಾರಕಾನ ತಿರುವಿನಲ್ಲಿ ಆಟೋರಿಕ್ಷಾವೊಂದು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕ್‌ ಸವಾರರಿಬ್ಬರೂ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.ಆದರೆ ಆ ವೇಳೆಗಾಗಲೇ ಪ್ರತೀಕ್ ಮೃತಪಟ್ಟರು. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ತೇಜಸ್‌ ಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Read More

ಮಲ್ಪೆ: ಮಲ್ಪೆ ಸಮೀಪದ ಹೂಡೆ ಬೀಚ್‌ನಲ್ಲಿ ನಿನ್ನೆ (ಭಾನುವಾರ) ಸಂಜೆ ನೀರಿಗೆ ಇಳಿದಿದ್ದ ಮಣಿಪಾಲದ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿದ್ದರು. ನಿನ್ನೆ ಇಬ್ಬರ ಮೃತದೇಹ ಪತ್ತೆಯಾಗಿದ್ದು, ಇಂದು ಬೆಳಿಗ್ಗೆ ಮತ್ತೋರ್ವನ ಶವವು ಪತ್ತೆಯಾಗಿದೆ. ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ಎಂಐಟಿಯ 15 ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳು ಕೂಡೆ ಬೀಚ್‌ನಲ್ಲಿ ವಿಹಾರಕ್ಕೆಂದು ನಿನ್ನೆ ಸಂಜೆ ಬೀಚ್‌ಗೆ ತೆರಳಿದ್ದಾಗ ಮೂವರು ನೀರಿನಲ್ಲಿ ಮುಳುಗಿದ್ದರು. ಈ ಪೈಕಿ ನಿನ್ನೆ ತೀವ್ರ ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಆಗಲೇ ಮೃತಪಟ್ಟಿದ್ದರು. ಬೆಂಗಳೂರಿನ ಷಣ್ಮುಖ (19), ನಿಶಾಂತ್ (19) ಮತ್ತು ಹೈದರಾಬಾದ್‌ನ ಶ್ರೀಕರ (19) ಮೃತ ವಿದ್ಯಾರ್ಥಿಗಳಾಗಿದ್ದಾರೆ. ಶ್ರೀಕರ ಅವರ ಮೃತದೇಹ ಶೋಧ ನಡೆಸಲು‌ ಹಾಗೂ ಮತ್ತಿಬ್ಬರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸಾಗಿಸಲು ಎಂದಿನಂತೆ ಅಸಪದ್ಭಾಂಧವ ಈಶ್ವರ್ ಮಲ್ಪೆ ಸಕಾಲದಲ್ಲಿ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಮೂವರು ಸಹಪಾಠಿಗಳ ಸಾವಿನಿಂದಾಗಿ ಮಣಿಪಾಲ ಕಾಲೇಜಿನಲ್ಲಿ ಸೂತಕದ ಛಾಯೆ ಆವರಿಸಿದೆ.

Read More

ಮಂಗಳೂರು: ರೈಲಿನಡಿಗೆ ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ನಗರದ ಎಕ್ಕೂರು ಜಪ್ಪು ಬಪ್ಪಲ್ ಸಮೀಪ ಭಾನುವಾರ ಮುಂಜಾನೆ ನಡೆದಿದೆ. ಜಪ್ಪಿನಮೊಗರು ತಂದೊಳಿಗೆ ನಿವಾಸಿ ವಿಶ್ವನಾಥ್ ಎಂಬಾವರ ಪುತ್ರ ಧೀರಜ್( 32) ಎಂಬಾತ ಮೃತ ಯುವಕ. ಸದ್ಯ ಜಪ್ಪುವಿನಲ್ಲಿ ಪತ್ನಿಯೊಂದಿಗೆ ವಾಸವಿದ್ದು, ಕಳೆದ 10 ತಿಂಗಳ ಹಿಂದೆಯಷ್ಟೇ ಕುತ್ತಾರಿನ ಯುವತಿಯನ್ನು ವಿವಾಹವಾಗಿದ್ದರು. ಧೀರಜ್ ಅವರು ಬೆಳಗ್ಗೆ 6.50ಕ್ಕೆ ಮನೆಯಿಂದ ಹೊರಟು ಬಂದಿದ್ದು, ಸುಮಾರು 7 ಗಂಟೆಯ ವೇಳೆಗೆ ಘಟನೆ ಸಂಭವಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ರೈಲಿನಡಿಗೆ ಬಿದ್ದು ಮೃತಪಟ್ಟಿದ್ದಾರೆ. ಮುಂಜಾವಿನ ವೇಳೆ ತಿಂಡಿ ತರುತ್ತೇನೆ ಎಂದು ಮನೆಯಿಂದ ಹೊರಟಿದ್ದರು ಎನ್ನಲಾಗಿದೆ. ಧೀರಜ್ ಅವರು ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.ಮಂಗಳೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಬೆಂಗಳೂರು: ನನಗೆ ಯಾರೂ ಲಂಚ ಕೊಡಬೇಕಾಗಿಲ್ಲ, ನಾನು ಭ್ರಷ್ಟ ಅಧಿಕಾರಿಯಾಗಲಾರೆ ಎಂಬ ಶೀರ್ಷಿಕೆಯ ನಾಮಫಲಕವನ್ನು ಅಳವಡಿಸಲು ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಮೂಲಕ ಪೇ ಸಿಎಂ ಪೋಸ್ಟರ್ ಕಾಂಗ್ರೆಸ್ ಅಭಿಯಾನಕ್ಕೆ ರಾಜ್ಯ ಸರ್ಕಾರದಿಂದ ಟಕ್ಕರ್ ಕೊಡಲಾಗಿದೆ. ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಅಳವಡಿಸಲು ಅದೇಶ ಮತ್ತು ಸುತ್ತೋಲೆ ಹೊರಡಿಸಲಾಗಿದೆ. ರಾಜ್ಯ ಸರ್ಕಾರದ ವಿರುದ್ಧ ಸರಣಿ ಭ್ರಷ್ಟಾಚಾರ ಆರೋಪ ಹಿನ್ನಲೆಯಲ್ಲಿ ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ರಿಂದ ಮಹತ್ವದ ಆದೇಶ ಮಾಡಲಾಗಿದೆ. ಅಕ್ಟೋಬರ್ 2ರಿಂದ 20ರವರೆಗೆ ಭ್ರಷ್ಟಾಚಾರ ನಿರ್ಮೂಲನೆ ಅಭಿಯಾನ ಹಮ್ಮಿಕೊಂಡಿರುವ ರಾಜ್ಯ ಸರ್ಕಾರ ತನ್ನ ಮೇಲಿನ ಆರೋಪಮುಕ್ತವಾಗಲು ಹೊರಟಿದೆ. ಈ ಅಭಿಯಾನ ವರ್ಷವಿಡಿ ನಡೆಯಲಿ ಎಂಬ ಬಗ್ಗೆ ಜನ ಆಗ್ರಹ ವ್ಯಕ್ತವಾಗುತ್ತಿದೆ. ಎಲ್ಲಾ ಕಡೆ ಲಂಚದ ಅವತಾರ ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಲಂಚದ ಅವತಾರ ಹೆಚ್ಚಾಗಿದೆ. ಯಾವುದೇ ಒಂದು ಕೆಲಸ ಆಗಲು ಲಂಚ ಕೊಡಲೇಬೇಕು ಎಂಬ ಸ್ಥಿತಿ ಇದೆ. ಗುತ್ತಿಗೆ, ಸರ್ಕಾರಿ ಪ್ರಾಜೆಕ್ಟ್ ಅಲ್ಲೂ ಕಮಿಷನ್…

Read More

ಪಾಲಕ್ ಹೆಸರು ಕೇಳ್ತಿದ್ದಂತೆ ತಲೆಯಲ್ಲಿ ಪಾಲಕ್ ಬಳಸಿ ಮಾಡುವ ಒಂದೆರಡು ಡಿಶ್ ಹೆಸರು ಮಾತ್ರ ನೆನಪಾಗುತ್ತೆ. ಪಾಲಕ್ ಪನ್ನೀರ್, ಕಾರ್ನ್ ಪಾಲಕ್ ಹೀಗೆ. ಆದ್ರೆ ಪಾಲಕ್ ಹಾಗೂ ಗೋಬಿ ಸೇರಿಸಿ ಹೊಸ ತಿಂಡಿ ಮಾಡಬಹುದು. ಪಾಲಕ್ ಗೋಬಿ ಮಾಡಲು ಬೇಕಾಗುವ ಪದಾರ್ಥ: ಒಂದು ಬೌಲ್ ಪಾಲಕ್ , 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 1/2 ಚಮಚ ಗರಂ ಮಸಾಲಾ, 1/2 ಚಮಚ ಕೆಂಪು ಮೆಣಸಿನ ಪುಡಿ. 4-5 ಗೋಡಂಬಿ, 2 ಚಮಚ ಕ್ರೀಂ, 1 ಬೌಲ್ ಕರಿದ ಗೋಬಿ, ½ ಬೌಲ್ ಕರಿದ ಈರುಳ್ಳಿ, ಉಪ್ಪು ರುಚಿಗೆ ತಕ್ಕಷ್ಟು. ಎಣ್ಣೆ ಸ್ವಲ್ಪ. ಪಾಲಕ್ ಗೋಬಿ ಮಾಡುವ ವಿಧಾನ: ಮೊದಲು ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಕತ್ತರಿಸಿರುವ ಪಾಲಕ್, ಗರಂ ಮಸಾಲೆ ಪುಡಿ, ಮೆಣಸಿನ ಪುಡಿ ಹಾಗೂ ಗೋಡಂಬಿಯನ್ನು ಹಾಕಿ ಫ್ರೈ ಮಾಡಿ. ನಂತ್ರ ಕ್ರೀಂ ಹಾಗೂ ಅರ್ಧ ಫ್ರೈ ಆಗಿರುವ ಗೋಬಿ, ಈರುಳ್ಳಿ ಹಾಕಿ 2 ನಿಮಿಷ…

Read More

ನೆಲ್ಯಾಡಿ: ಇಂದು ಮುಂಜಾನೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಲಾವತ್ತಡ್ಕ ಎಂಬಲ್ಲಿ ಕೆ ಎಸ್ ಆರ್ ಟಿ ಸಿ ಬಸ್ಸು ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದೆ. ಧರ್ಮಸ್ಥಳದಿಂದ ಕೋಲಾರಕ್ಕೆ ಪ್ರಯಾಣಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಹಾಸನದಿಂದ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಸೇರಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಗಾಯಗೊಂಡ ಪ್ರಯಾಣಿಕರನ್ನು ನೆಲ್ಯಾಡಿ ಅಶ್ವಿನಿ ಆಂಬುಲೆನ್ಸ್ ನಲ್ಲಿ ನೆಲ್ಯಾಡಿಯ ಆಸ್ಪತ್ರೆಗೆ ಸಾಗಿಸಲಾಗಿದೆ. ನೆಲ್ಯಾಡಿ ಹೊರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

Read More

ಪಂಜಾಬ್‌: ಸರ್ಕಾರಿ ಆಸ್ಪತ್ರೆಯೊಂದು ರೋಗಿಗಳಿಗೆ ಎಕ್ಸ್-ರೇ ಯ ಹಾರ್ಡ್‌ ಕಾಪಿ ಕೊಡದೇ ಅದರ ಫೋಟೋವನ್ನು ಮೊಬೈಲ್ ಫೋನ್‌ನಲ್ಲೇ ಕ್ಲಿಕ್ಕಿಸಿ ಕೊಟ್ಟಿರುವ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ವರದಿಗಳ ಪ್ರಕಾರ, ಪಂಜಾಬ್‌ನ ಪಟಿಯಾಲಾ ನಗರದ ಆಸ್ಪತ್ರೆಯ ಸರ್ಕಾರಿ ನೌಕರರು ʻಸ್ಮಾರ್ಟ್‌ಫೋನ್ ಹೊಂದಿರುವವರು ಮಾತ್ರ ಎಕ್ಸ್-ರೇಗಾಗಿ ಬರಬೇಕು. ಎಕ್ಸ್-ರೇ ಸ್ಕ್ಯಾನಿಂಗ್ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ತನ್ನಿʼ ಎಂದು ಪ್ರಕಟಣೆ ಮಾಡಿದ್ದರು ಎನ್ನಲಾಗಿದೆ. ಸಿಎಂ ಭಗವಂತ್ ಮಾನ್ ಅವರು ಪಂಜಾಬ್‌ನ ನಾಗರಿಕರಿಗೆ ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸಲು ಹಾತೊರೆಯುತ್ತಿದ್ದರೆ, ಇತ್ತ ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಹಾರ್ಡ್ ಕಾಪಿ ವರದಿ ನೀಡುವ ಬದಲು ಸ್ಮಾರ್ಟ್‌ಫೋನ್‌ಗಳಲ್ಲಿ ಎಕ್ಸ್-ರೇಗಳ ಚಿತ್ರಗಳನ್ನು ಕ್ಲಿಕ್ಕಿಸಿ ಕೊಡುವ ಮೂಲಕ ವಿಲಕ್ಷಣವಾಗಿ ವರ್ತಿಸುತ್ತಿವೆ. ಆಸ್ಪತ್ರೆಯಲ್ಲಿ ಎಕ್ಸ್-ರೇ ಫಿಲ್ಮ್ ಖಾಲಿಯಾದಾಗ ಅವರು ಸಾಮಾನ್ಯವಾಗಿ ಈ ಘೋಷಣೆ ಮಾಡುತ್ತಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿಕೊಂಡಿದ್ದಾರೆ. ಈ ವಿಲಕ್ಷಣ ವರ್ತನೆಯು ಬಡ ರೋಗಿಗಳ ಮೇಲೆ ಪರಿಣಾಮ ಬೀರಿದೆ. ಸ್ವಂತ ಸೆಲ್ ಫೋನ್‌ ಹೊಂದಿರದ ಬಡ ರೋಗಿಗಳನ್ನು ವಿಚಾರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. 53…

Read More