ಶಂಕರನಾರಾಯಣ: ಜಾಗದ ತಕಾರಿಗೆ ಸಂಬಂಧಿಸಿ ತಮ್ಮ ಮೇಲೆ ಕಾರು ಹಾಯಿಸಿ ಕೊಲೆಗೆ ಯತ್ನಿಸಿರುವುದಾಗಿ ವ್ಯಕ್ತಿಯೊಬ್ಬರು ನಾಲ್ವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಕುಂದಾಪುರದ ಸಿದ್ದಾಪುರ ಗ್ರಾಮದ ಬಾಳೆಬೇರು ನಿವಾಸಿ ಸುಧರ್ಶನ್ ಶೆಟ್ಟಿ ದೂರು ನೀಡಿದ ವ್ಯಕ್ತಿ. ರಾಜರಾಮ ಶೆಟ್ಟಿ, ರಘುರಾಮ ಶೆಟ್ಟಿ, ಶ್ರೀಧರ ಶೆಟ್ಟಿ ಮಂಗನಸಾಲು, ಬಿ.ಪ್ರಕಾಶ್ಚಂದ್ರ ಶೆಟ್ಟಿ ಇವರೊಂದಿಗೆ ಸಿದ್ದಾಪುರ ಗ್ರಾಮದಲ್ಲಿ ಜಾಗದ ವಿಚಾರದಲ್ಲಿ ತಕರಾರು ಇದ್ದು, ಈ ಜಾಗದ ತಕರಾರು ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ. ನ್ಯಾಯಾಲಯವು ಕುಂದಾಪುರ ತಹಶೀಲ್ದಾರರಿಗೆ ತಕರಾರು ಇರುವ ಜಾಗವನ್ನು ಸೆ.21 ರಂದು ಸರ್ವೇ ಮಾಡಿ ವರದಿ ನೀಡುವಂತೆ ಆದೇಶ ಮಾಡಿದೆ. ಈ ಜಾಗದ ತಕರಾರಿನ ಬಗ್ಗೆ ಸುಧರ್ಶನ್ ಶೆಟ್ಟಿ ಯವರು ಹೆಚ್ಚಾಗಿ ಓಡಾಡುತ್ತಿದ್ದರು. ಇದರಿಂದ ತಮಗೆ ತೊಂದರೆ ಆಗಬಹುದು ಎಂದು ಆರೋಪಿಗಳು, ಸೆ.18 ರಂದು ಸುದರ್ಶನ್ ಶೆಟ್ಟಿ ಅವರು ತಮ್ಮ ಸ್ಕೂಟಿಯಲ್ಲಿ ಬಾಳೆಬೇರು ಎಂಬಲ್ಲಿ ಮನೆಯ ಸಮೀಪ ನಿಲ್ಲಿಸಿಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಕಾರಿನಲ್ಲಿ ಬಂದ ಆರೋಪಿಗಳು ಇವರ ಸ್ಕೂಟಿಯ ಮೇಲೆ ಕಾರು ಹಾಯಿಸಿದ್ದು, ಇದರಿಂದ…
Author: main-admin
ಸುಳ್ಯ : ಸರ್ಕಾರಿ ಬಸ್ಸೊಂದರಿಂದ ಬಿದ್ದು ಗಾಯಗೊಂಡ ಮುಸ್ಲಿಂ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ ಹಿಂದು ಜಾಗರಣ ವೇದಿಕೆ (ಹಿಂ.ಜಾ.ವೇ) ಕಾರ್ಯಕರ್ತನ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಕೋಮು ಸೂಕ್ಷ್ಮ ಪ್ರದೇಶವಾಗಿರುವ ಸುಳ್ಯದ ಸಮೀಪ ಈ ಮಾನವೀಯ ಘಟನೆ ನಡೆದಿದೆ. ಬೆಳ್ಳಾರೆಯಿಂದ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಿಂದ ಮಹಿಳೆ ಬಿದ್ದು ಕಾಲಿಗೆ ಗಂಭೀರ ಗಾಯಗೊಂಡ ಘಟನೆ ಇಂದು ಸೋಣಂಗೇರಿಯಲ್ಲಿ ನಡೆದಿದೆ. ದುಗಲಡ್ಕದ ಕೊಳಂಜಿಕೋಡಿಯ ಅಬ್ದುಲ್ಲ ಎಂಬವರ ಪತ್ನಿ 60 ವರ್ಷದ ಮೈಮುನಾ ಎಂಬ ಮಹಿಳೆ ಬೆಳ್ಳಾರೆಯಿಂದ ಸುಳ್ಯಕ್ಕೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಬಂದು ಸೋಣಂಗೇರಿಯಲ್ಲಿ ಇಳಿಯಲಿದ್ದರು, ಆದರೆ ಬಸ್ ನಿಲ್ಲುವ ಮೊದಲೇ ಮಹಿಳೆ ಇಳಿದ ಕಾರಣ ಬಸ್ ನಿಂದ ಬಿದ್ದಿದ್ದು ಬಸ್ಸಿನ ಹಿಂದಿನ ಚಕ್ರ ಅವರ ಕಾಲಿನ ಮೇಲೆ ಹರಿದು ಕಾಲಿಗೆ ಗಂಭೀರ ಗಾಯವಾಗಿದೆ. ತಕ್ಷಣ ಹಿಂಜಾವೇ ಕಾರ್ಯಕರ್ತ ಸಂತೋಷ್ ಕೊಡಿಯಾಲ ಮತ್ತಿತರರು ಸೇರಿ ಗಾಯಗೊಂಡ ಮಹಿಖೆಯನ್ನು ತಮ್ಮ ವಾಹನದಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ…
ಉಡುಪಿ: ಮೀನಿನ ಟೆಂಪೋ ಒಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಉಡುಪಿಯ ಪಡುಬಿದ್ರಿ ರಾಷ್ಟ್ರಿಯ ಹೆದ್ದಾರಿ 66ರ ಪೆಟ್ರೋಲ್ ಪಂಪ್ ಬಳಿ ನಡೆದಿದೆ. ಮಲ್ಪೆಯಿಂದ ಮಂಗಳೂರು ಕಡೆ ಗೊಬ್ಬರದ ಮೀನನ್ನು ಹೇರಿಕೊಂಡು ಸಾಗುತ್ತಿದ್ದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಮಗುಚಿ ಬಿದ್ದಿದೆ. ಟೆಂಪೋ ಚಾಲಕನಿಗೆ ಸಣ್ಣ ಪ್ರಮಾಣದ ಗಾಯವಾಗಿದೆ. ಹೆಜಮಾಡಿ ಟೋಲ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಹೆದ್ದಾರಿಯಿಂದ ವಾಹನವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಆನುವು ಮಾಡಿದ್ದಾರೆ. ಸ್ಥಳಕ್ಕೆ ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೈಂದೂರು: ತಾಲೂಕಿನ ತ್ರಾಸಿ ಗ್ರಾಮದ ಮೋವಾಡಿ ಗಾಣದಮಕ್ಕಿ ಕ್ರಾಸ್ ಬಳಿ ಕಾರಿನಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯನ್ನು ಸಾಗಿಸುತ್ತಿದ್ದ ಇಬ್ಬರನ್ನು ಆಹಾರ ನಿರೀಕ್ಷಕರ ತಂಡ ಬಂಧಿಸಿದೆ. ಅಶ್ರಫ್ ಬ್ಯಾರಿ ಹಾಗೂ ರಜಬ್ ಬಂಧಿತ ಆರೋಪಿಗಳು. ಇವರು ನಾಡ ಕಡೆಯಿಂದ ತ್ರಾಸಿ ಕಡೆಗೆ ಕಾರಿನಲ್ಲಿ ಅಕ್ರಮವಾಗಿ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಕುಂದಾಪುರ ಆಹಾರ ನಿರೀಕ್ಷಕ ಸುರೇಶ್ ಎಚ್.ಎಸ್. ನೇತೃತ್ವದ ತಂಡ ದಾಳಿ ನಡೆಸಿದೆ. ಕಾರಿನಲ್ಲಿದ್ದ 15,400ರೂ. ಮೌಲ್ಯದ ಒಟ್ಟು 14 ಚೀಲಗಳಲ್ಲಿ ತುಂಬಿದ್ದ 700 ಕೆ.ಜಿ ಬೆಳ್ತಿಗೆ ಅಕ್ಕಿ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಅಕ್ಕಿಯನ್ನು ಜನರಿಂದ ಖರೀದಿಸಿ ಹೆಚ್ಚಿನ ಬೆಲೆಗೆ ಅಂಗಡಿ ಮಾರಾಟ ಮಾಡಲು ಸಾಗಿಸುತ್ತಿದ್ದರೆನ್ನಲಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರ (ಉತ್ತರ ಕನ್ನಡ): ಮೀನುಗಾರಿಕೆಗೆ ತೆರಳಿದ್ದ ಬೋಟ್ ಸಮುದ್ರದಲ್ಲಿ ಮುಳುಗಡೆಯಾಗಿರುವ ಘಟನೆ ಕಾರವಾರ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ನಡೆದಿದೆ. ಬೈತಖೋಲ್ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ವಾಮನ್ ಹರಿಕಂತ್ರ ಎನ್ನುವವರ ಮಾಲಿಕತ್ವದ ಬೋಟ್ ನಲ್ಲಿ ರಂಧ್ರ ಉಂಟಾಗಿ ನೀರು ತುಂಬಿದೆ. ಇದರಿಂದಾಗಿ ಬೋಟ್ ಮುಳುಗಲು ಪ್ರಾರಂಭಿಸಿತ್ತು. ಬೋಟ್‌ನಲ್ಲಿ 30 ಮೀನುಗಾರರಿದ್ದು, ಸಮೀಪದಲ್ಲಿದ್ದ ಮತ್ತೊಂದು ಬೋಟಿನ ಸಹಾಯದಿಂದ ಮೀನುಗಾರರನ್ನ ರಕ್ಷಣೆ ಮಾಡಲಾಗಿದೆ. 30 ಟನ್ ಮೀನುಗಳನ್ನು ಶಿಕಾರಿ ಮಾಡಿ ಬರುವಾಗ ಘಟನೆ ಸಂಭವಿಸಿದ್ದು, ಭಾರವಾದ ಕಾರಣ ಬೋಟಿನಲ್ಲಿದ್ದ ಮೀನನ್ನ ಸಮುದ್ರಕ್ಕೆ ಎಸೆದು ಬಳಿಕ ಬೋಟನ್‌ನ ಬೈತಖೋಲ್ ಬಂದರಿಗೆ ಎಳೆದು ತರಲಾಗಿದೆ. ಆದರೆ ಬಂದರಿನಲ್ಲಿ ನಿಲ್ಲಿಸಿಟ್ಟ ಬಳಿಕವೂ ಬೋಟ್ ಮುಳುಗಿದ್ದು, ಸುಮಾರು 50 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಮಂಗಳೂರು: ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡ ಹಿನ್ನಲೆಯಲ್ಲಿ ಆತನ ಅಂಗಾಂಗಗಳನ್ನು ದಾನ ಮಾಡಿ ಕುಟುಂಬಸ್ಥರು ಸಾವಿನಲ್ಲೂ ಸಾರ್ಥಕತೆ ಮೆರೆದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದೆ. ಯಶರಾಜ್ (16) ಮೃತ ದುರ್ದೈವಿ. ಚಲಿಸುತ್ತಿದ್ದ ಸಿಟಿ ಬಸ್ ನಿಂದ ಎಸೆಯಲ್ಪಟ್ಟು ಯಶರಾಜ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಪಕಾರಿಯಾಗದೇ ವಿದ್ಯಾರ್ಥಿಯ ಮೆದುಳು ನಿಷ್ಕ್ರಿಯಗೊಂಡಿತ್ತು. ಮೃತ ಬಾಲಕ ಯಶರಾಜ್, ಉಳ್ಳಾಲ ಮಾಸ್ತಿಕಟ್ಟೆ ಬೈದರಪಾಲು ನಿವಾಸಿ ತ್ಯಾಗರಾಜ್ ಮತ್ತು ಮಮತಾ ಕರ್ಕೇರ ದಂಪತಿಯ ಪುತ್ರನಾಗಿದ್ದು, ಯಶರಾಜ್ ನಗರದ ಎಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ದರ್ಜೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದ. ಸೆಪ್ಟೆಂಬರ್ 7 ರಂದು ಬೆಳಗ್ಗೆ ಯಶರಾಜ್ ಮಾಸ್ತಿಕಟ್ಟೆಯಿಂದ ಸಿಟಿ ಬಸ್ನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗ ಅಡಂ ಕುದ್ರುವಿನಲ್ಲಿ ಬಸ್ ನಿಂದ ಹೊರಗೆ ಎಸೆಯಲ್ಪಟ್ಟಿದ್ದ. ಹೀಗಾಗಿ ವಿದ್ಯಾರ್ಥಿ ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದರಿಂದ ಯಶರಾಜ್ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಯಶರಾಜ್ ಮೆದಳು ನಿಷ್ಕ್ರಿಯ ಗೊಂಡಿತ್ತು. ದುಃಖದ ಮಡುವಿನಲ್ಲಿದ್ದ ಕುಟುಂಬಸ್ಥರು…
ಮಂಗಳೂರು: ನಗರದ ಉಳ್ಳಾಲ ವ್ಯಾಪ್ತಿಯಲ್ಲಿ ಮೀನು ವ್ಯಾಪಾರದ ಹಣದ ವಿಚಾರದಲ್ಲಿ ನಡೆದ ಹಲ್ಲೆ ಪ್ರಕರಣದ ಕುರಿತು ಮಂಗಳೂರು ನಗರದ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿಕೆ ನೀಡಿದ್ದಾರೆ. ಈ ಕೇಸಲ್ಲಿ ಬಂಧಿಸಲ್ಪಟ್ಟ ಬಜಾಲ್ ನಿವಾಸಿ ತಲ್ಲತ್ ಯಾನೆ ತಲ್ಹತ್, ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ದಾನ, ಧರ್ಮ, ರಕ್ತದಾನ ಮೂಲಕ ಸಮಾಜ ಸೇವೆ ಸಭ್ಯತೆರಂತೆ ವರ್ತಿಸಿದರೆ ಪ್ರಯೋಜನವಿಲ್ಲ ಎಂದರು. ಬಜಾಲ್ ನಿವಾಸಿ ತಲ್ಹತ್ ವಿರುದ್ಧ ಕೊಲೆ, ಕೊಲೆ ಯತ್ನ ಸೇರಿದಂತೆ ನಗರ ಪೊಲೀಸ್ ಕಮಿನಷರೇಟ್ ವ್ಯಾಪ್ತಿಯಲ್ಲಿ 30ಕ್ಕೂ ಅಧಿಕ ಪ್ರಕರಣಗಳಿವೆ. ಆರೋಪಿ ವಿರುದ್ಧ ಕಂಕನಾಡಿ, ಉಳ್ಳಾಲ, ಕೋಣಾಜೆ, ಬರ್ಕೆ ಠಾಣಾ ವ್ಯಾಪ್ತಿಯಲ್ಲಿ ಕೇಸು ದಾಖಲಾಗಿದೆ. ಈತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲೂ ಕೊಲೆ ಪ್ರಕರಣ ದಾಖಲಾಗಿದೆ ಎಂದರು. ಆರೋಪಿ ತಲ್ಹತ್ ನಗರದ ಅಡ್ಯಾರ್, ಕಣ್ಣೂರು, ಬಜಾಲ್, ಬಂದರ್, ಉಳ್ಳಾಲ, ದೇರಳಕಟ್ಟೆ, ಫರಂಗಿಪೇಟೆ ವ್ಯಾಪ್ತಿಯಲ್ಲಿ 60ಕ್ಕೂ ಅಧಿಕ ಮಂದಿಯ ಯುವಕರ ಗ್ಯಾಂಗ್ ಕಟ್ಟಿಕೊಂಡು ಕ್ರಿಮಿನಲ್ ಕೃತ್ಯದಲ್ಲಿ ತೊಡಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈತನ ಸಹಚರರ ಮೇಲೂ…
ಬೆಂಗಳೂರು: ಕೋಮುಗಲಭೆಯಲ್ಲಿ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳು ಮೊದಲೆರಡು ಸ್ಥಾನ ಪಡೆದಿದೆ ಎಂದು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ವರದಿಲ್ಲಿ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇನ್ನು ರೌಡಿಸಂನಲ್ಲಿ ಉಡುಪಿ, ಕೋಲಾರ ಅಗ್ರಸ್ಥಾನ ಪಡೆದಿದ್ದು, ಕಳೆದ ಐದು ವರ್ಷಗಳಲ್ಲಿ ಪ್ರಕರಣ ಆಧರಿಸಿ ಈ ವರದಿಯನ್ನ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಒಟ್ಟು 242 ಕೋಮುಗಲಭೆ ಕೇಸ್ ದಾಖಲಾಗಿದ್ದು, ಇದರಲ್ಲಿ ದಕ್ಷಿಣ ಕನ್ನಡ 57, ಶಿವಮೊಗ್ಗ 48 ಕೇಸ್ ದಾಖಲಾಗಿದೆ. ಅದರಂತೆ ಬಾಗಲಕೋಟೆ 28, ದಾವಣಗೆರೆ 18, ಹಾವೇರಿ 18 ಕೋಮುಗಲಭೆ ಪ್ರಕರಣಗಳು ನಡೆದಿವೆ. ಇನ್ನೂ ರೌಡಿಸಂನಲ್ಲಿ ಒಟ್ಟು 1431 ಪ್ರಕರಣಗಳು ದಾಖಲಾಗಿದ್ದು, ಇದ್ರಲ್ಲಿ ಉಡುಪಿ 421, ಕೋಲಾರ 165, ದಕ್ಷಿಣಕನ್ನಡ 152, ಬೆಂಗಳೂರು ನಗರ 80, ಕಲಬುರಗಿ 97, ಶಿವಮೊಗ್ಗದಲ್ಲಿ 158 ಕೇಸ್ ದಾಖಲಾವೆ. ಮೂರು ವರ್ಷದಲ್ಲಿ 4 ಮತೀಯ ಕೊಲೆ ಆಗಿದ್ದು, ಗಲಭೆಯಲ್ಲಿ 280 ಪೊಲೀಸರಿಗೆ ದೈಹಿಕ ಹಾನಿಯಾಗಿದೆ ಎಂದು ವರದಿ ತಿಳಿಸಿದೆ.
ಬೆಂಗಳೂರು: ಬಡ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 75 ಯೂನಿಟ್ ಉಚಿತ ವಿದ್ಯುತ್ ವಿತರಣೆಯ ಯೋಜನೆಯನ್ನು ಹಿಂಪಡೆದಿಲ್ಲ. ಇನ್ನಷ್ಟು ಸರಳೀಕರಣ ಮಾಡಿ ಇದೇ ತಿಂಗಳಿನಿಂದ ಹಣ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕರ್ನಾಟಕ ಭೋವಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಸ್ಮಾ ದೇವಿ ಮಂದಿರದ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಉದ್ಘಾಟನೆ ಹಾಗೂ 43ನೇ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಬಿಸಿಲು, ಗಾಳಿ, ಮಳೆ ಎನ್ನದೇ ಬಹಳ ಕಠಿಣ ಪರಿಶ್ರಮದಿಂದ ದುಡಿಯುವುದು ಈ ಭೋವಿ ಸಮಾಜದ ಮೂಲ ಗುಣ. ಭೋವಿ ಸಮಾಜದೊಂದಿಗೆ ನಮ್ಮದು 30 ವರ್ಷದ ಸಂಬಂಧವಿದೆ. ನಮ್ಮ ತಂದೆಯವರೊಂದಿಗೆ ಈ ಸಮಾಜ ಅನೋನ್ಯವಾಗಿತ್ತು. ಹುಬ್ಬಳ್ಳಿಯಲ್ಲಿ ಜಿ.ಎಸ್ ಬಿಳಗಿಯವರು, ಶಿವಮೊಗ್ಗದಲ್ಲಿ ಜಿ. ಬಸವಣ್ಣಪ್ಪ ಮಂತ್ರಿಯಾಗಿದ್ದರು. ಇವರು ನಮ್ಮ ತಂದೆಯವರೊಂದಿಗೆ ಅತ್ಯಂತ ನಿಕಟ ಒಡನಾಟ ಹೊಂದಿದ್ದರು ಎಂದು ಸ್ಮರಿಸಿದರು. ಬೆಂಗಳೂರಿನಲ್ಲಿ ಇಬ್ಬರು ಈ ಸಮಾಜದಿಂದ ಶಾಸಕರಾಗಿರುವುದು ಹೆಮ್ಮೆಯ ವಿಚಾರ. ಅರವಿಂದ ಲಿಂಬಾವಳಿ ಮತ್ತು ರಘು ಅವರು ನಿರಂತರವಾಗಿ…
ಚಿನ್ನವನ್ನು ಪಾಲಿಶ್ ಮಾಡುವ ನೆಪದಲ್ಲಿ ಕಳ್ಳತನಕ್ಕೆ ಸಂಚು ರೂಪಿಸುತ್ತಿದ್ದ ಸಂಶಯದ ಮೇರೆಗೆ ಬಿಹಾರ ಮೂಲದ ಇಬ್ಬರ ವಿರುದ್ದ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳೀಯ ನಿವಾಸಿ ಕಿಶೋರ್ ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸೆ.17 ರಂದು ಸಂಜೆ ವೇಳೆ ಕಿಶೋರ್ ಅವರ ಮನೆಯ ಬಳಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದಿದ್ದು, ಹಿಂದಿಯಲ್ಲಿ ಮಾತನಾಡುತ್ತಾ ನಿಮ್ಮಲ್ಲಿ ಚಿನ್ನವಿದ್ದರೆ ಕೊಡಿ ಅದನ್ನು ಪಾಲಿಶ್ ಮಾಡಿ ಕೊಡುತ್ತೇವೆ ಎಂದು ಹೇಳಿದ್ದಾರೆ. ಅದಕ್ಕೆ ಕಿಶೋರ್ ಅವರು ನೀವು ಯಾವ ರೀತಿಯಲ್ಲಿ ಚಿನ್ನಪಾಲಿಶ್ ಮಾಡುತ್ತೀರಿ ಎಂದು ಕೇಳಿದಾಗ ಅವರು ತಮ್ಮಲ್ಲಿದ್ದ ಬ್ಯಾಗ್ ನಲ್ಲಿದ್ದ ದ್ರಾವಣ ಇತರ ಸಲಕರಣೆಗಳನ್ನು ತೆರೆದು ತೋರಿಸಿ ಇವುಗಳಿಂದ ಚಿನ್ನ ಪಾಲೀಶ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ವೇಳೆ ಅವರ ಮೇಲೆ ಸ್ವಲ್ಪ ಸಂಶಯ ಬಂದು ಅವರ ಹೆಸರು ಕೇಳಿದಾಗ ಅವರಲ್ಲಿ ಓರ್ವನ ಹೆಸರು ಆನಂದ ಕಿಶೋರ್ ಮೆಹ್ತಾ ಹಾಗೂ ಮತ್ತೋರ್ವ ನ ಹೆಸರು ಮನೋಜ್ ಯಾದವ್ ಎಂದು ಹೇಳಿದ್ದು, ಬಿಹಾರದಿಂದ…