Author: main-admin

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ‌.ವಿ. ಅವರ ಮೊಬೈಲ್ ನಂಬರ್ ಹ್ಯಾಕ್ ಆಗಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. 8590710748 ಮೊಬೈಲ್ ನಂಬರ್ ನಿಂದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರ ಹೆಸರು ಹಾಗೂ ಫೋಟೋ ಬಳಸಿ ವಾಟ್ಸ್ ಅಪ್ ಮೂಲಕ ಸಂದೇಶ ಕಳುಹಿಸಿ ಅಪರಿಚಿತರು ಸಹಾಯ ಅಥವಾ ಹಣವನ್ನು ವರ್ಗಾಯಿಸಲು ಕೇಳಬಹುದು.ಆ ನಂಬರ್ ಜಿಲ್ಲಾಧಿಕಾರಿಯವರದ್ದಾಗಿರುವುದಿಲ್ಲ ಆದಕಾರಣ ಯಾರೂ ಕೂಡ ಯಾವುದೇ ರೀತಿಯಲ್ಲಿ ಸಹಾಯ ಅಥವಾ ಹಣವನ್ನು ಆ ನಂಬರ್ ಗೆ ವರ್ಗಾಯಿಸದಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಮನವಿ ಮಾಡಿದ್ದಾರೆ.8590710748 ಈ ನಂಬರ್ ನಿಂದ ಯಾವುದೇ ರೀತಿಯ ಮನವಿ ಬಂದಲ್ಲಿ ಅದನ್ನು ಬ್ಲಾಕ್ ಮಾಡಿ ವರದಿ ಮಾಡುವಂತೆಯೂ ಜಿಲ್ಲಾಧಿಕಾರಿಯವರು ಕೋರಿದ್ದಾರೆ.

Read More

ವಿಟ್ಲ: ಜಾಗದ ವಿಚಾರವಾಗಿ ಹಲವು ಸಮಯದಿಂದ ನಡೆಯುತ್ತಿದ್ದ ಸಹೋದರರ ನಡುವಿನ ಜಗಳ ಕೊಲೆಯ ಮೂಲಕ ಅಂತ್ಯ ಕಂಡ ಘಟನೆ ವಿಟ್ಲಪಡ್ನೂರು ಗ್ರಾಮದ ಕೊಡಂಗೆ ಬನಾರಿಯಲ್ಲಿ ನಡೆದಿದೆ. ಬನಾರಿ ಕೊಡಂಗೆ ನಿವಾಸಿ ಗಣೇಶ್ (53) ಸಾವನ್ನಪ್ಪಿದ್ದು, ಸಹೋದರ ಪದ್ಮನಾಭ (49) ಕೊಲೆಗೈದ ಆರೋಪಿಯಾಗಿದ್ದಾನೆ. ಜಾಗದ ವಿಚಾರವಾಗಿ ಹಾಗೂ ಕುಡಿದು ಮನೆಯಲ್ಲಿ ಆಗಾಗ ಗಲಾಟೆ ಸಂಭವಿಸುತ್ತಿದ್ದು, ಒಂದು ತಿಂಗಳ ಹಿಂದೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಂಗಳವಾರ ರಾತ್ರಿಯೂ ಗಲಾಟೆ ನಡೆದಿದೆ ಎನ್ನಲಾಗಿದ್ದು, ಬುಧವಾರ ವಿಟ್ಲ ಠಾಣೆಗೆ ದೂರು ಬಂದಿದೆ.

Read More

ಉಡುಪಿ : ರಸ್ತೆ ಬದಿ ನಿಂತಿದ್ದ ಅಪ್ಪ ಮಗನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಅಪ್ಪ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಮುಂಭಾಗದಲ್ಲಿ ನಡೆದಿದೆ. ಘಟನೆಯಲ್ಲಿ ಮಗನಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರನ್ನು ಬೆಳಗಾವಿ ಮೂಲದ ಪ್ರಭಾಕರ್ ಕೋತ ಎಂದು ಗುರುತಿಸಲಾಗಿದ್ದು, ಗಾಯಗೊಂಡವರು ಸಮರ್ಥ್ (14) ಎಂಬವರಾಗಿದ್ದಾರೆ. ಮೃತರು ಮಗನನ್ನು ಶಾಲೆಗೆ ಸೇರಿಸುವ ಸಲುವಾಗಿ ಬೆಳಗಾವಿಯಿಂದ ಕಾಪುವಿಗೆ ಬಂದಿದ್ದರು ಎಂದು ತಿಳಿದು ಬಂದಿದೆ. ಉಚ್ಚಿಲದಲ್ಲಿ ಬಸ್ಸಿನಿಂದ ಇಳಿದು ರಸ್ತೆ ಪಕ್ಕದಲ್ಲಿ ನಿಂತಿದ್ದಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಪ್ರಭಾಕರ್ ಮೃತಪಟ್ಟು, ಸಮರ್ಥ್ ಗಂಭೀರ ಗಾಯಗೊಂಡಿದ್ದಾರೆ.

Read More

ವಿಟ್ಲ: ಜಾಗದ ವಿಚಾರವಾಗಿ ಹಲವು ಸಮಯದಿಂದ ನಡೆಯುತ್ತಿದ್ದ ಸಹೋದರರ ನಡುವಿನ ಜಗಳ ಕೊಲೆಯ ಮೂಲಕ ಅಂತ್ಯ ಕಂಡ ಘಟನೆ ವಿಟ್ಲದ ಕೊಡಂಗೆ ಬನಾರಿಯಲ್ಲಿ ನಡೆದಿದೆ. ಬನಾರಿ ಕೊಡಂಗೆ ನಿವಾಸಿ ಗಣೇಶ್ (53) ಸಾವನ್ನಪ್ಪಿದ್ದ ಮೃತ ದುರ್ದೈವಿ. ಪದ್ಮನಾಭ (49) ಕೊಲೆ ಆರೋಪಿ. ಜಾಗದ ವಿಚಾರವಾಗಿ ಮನೆಯಲ್ಲಿ ಸಹೋದರರು ಕುಡಿದು ಆಗಿಂದಾಗ ಗಲಾಟೆ ಸಂಭವಿಸುತ್ತಿತ್ತು. ಒಂದು ತಿಂಗಳ ಹಿಂದೆ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮಂಗಳವಾರ ರಾತ್ರಿಯೂ ಕೂಡಾ ಜೋರಾಗಿ ಕಲಹ ನಡೆದಿದೆ ಎನ್ನುವ ಮಾಹಿತಿ ಲಭಿಸಿದೆ. ಈ ಘಟನೆ ಬಗ್ಗೆ ವಿಟ್ಲ ಠಾಣೆಗೆ ದೂರು ಬಂದಿದೆ.

Read More

ಬೆಂಗಳೂರು : ಬೆಂಗಳೂರಿನ ಸೇಂಟ್ ಜೋಸೆಫ್ ಕಾನ್ವೆಂಟ್ ಹೈ ಪ್ರೈಮರಿ ಶಾಲೆಯಿಂದ ಮೂವರು ಬಾಲಕಿಯರು ನಾಪತ್ತೆಯಾಗಿರುವ ಘಟನೆ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೆಪ್ಟೆಂಬರ್ 6 ರಂದು ಮೂವರು ಬಾಲಕಿಯರು ನಾಪತ್ತೆಯಾಗಿದ್ದು, ಪೋಷಕರು ಪುಲಕೇಶಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಶಕ್ತೇಶ್ವರಿ (15), ವರುಣಿಕಾ (16), ನಂದಿನಿ (15) ನಾಪತ್ತೆಯಾಗಿರುವ ಬಾಲಕಿಯರು, ಮಕ್ಕಳ ಬಗ್ಗೆ ಕೇಳಿದ್ರೆ ಆಡಳಿತ ಮಂಡಳಿಯವರು ಸರಿಯಾಗಿ ಹೇಳುತ್ತಿಲ್ಲ ಎಂದು ಶಾಲಾ ಆಡಳಿತ ಮಂಡಳಿ ವಿರುದ್ಧ ದೂರು ನೀಡಿದ್ದಾರೆ.

Read More

ಕಾರ್ಕಳ: ಪ್ರಗತಿಪರ ಕೃಷಿಕರೋರ್ವರು ತಮ್ಮ ಮನೆಯಲ್ಲಿ ನಾಡಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ದುರ್ಗ ಗ್ರಾಮದ ತೆಳ್ಳಾರಿನಲ್ಲಿ ಇಂದು ಬೆಳಗ್ಗೆ ನಡೆದಿದೆ.ಕಾರ್ಕಳ ಪ್ರಗತಿಪರ ಕೃಷಿಕ ತೆಳ್ಳಾರು ನೀಲೆಬೆಟ್ಟು ಭಾಸ್ಕರ ಹೆಗ್ಡೆ (63 ) ಅವರು ಆತ್ಮಹತ್ಯೆ ಮಾಡಿಕೊಂಡವರು. ಪತ್ನಿ ಚಹಾ ಮಾಡಲೆಂದು ಅಡುಗೆ ಕೋಣೆಗೆ ಹೋಗಿದ್ದಾಗ ಭಾಸ್ಕರ ಹೆಗ್ಡೆಯವರು ಗುಂಡು ಹೊಡೆದುಕೊಂಡಿದ್ದಾರೆ. ಗುಂಡಿನ ಸದ್ದು ಕೇಳಿ ಪತ್ನಿ ಹೊರಗೋಡಿ ಬಂದಾಗ ಕೃತ್ಯ ಎಸಗಿರುವುದು ಗೊತ್ತಾಗಿದೆ. ಆತ್ಮಹತ್ಯೆಗೆ ಆರ್ಥಿಕ ಸಂಕಷ್ಟವೇ ಕಾರಣ ಎನ್ನಲಾಗುತ್ತಿದ್ದು, ಖಚಿತ ಮಾಹಿತಿ ತಿಳಿದು ಬಂದಿಲ್ಲ.ಗ್ರಾಮಾಂತರ ಠಾಣಾಧಿಕಾರಿ ತೇಜಸ್ವಿ, ವೃತ್ತ ನಿರೀಕ್ಷಕ ಸಂಪತ್, ಡಿವೈಎಸ್ಪಿ ವಿನಯಪ್ರಸಾದ್ ಘಟನಾ ಸ್ಥಳಕ್ಕೆ ತೆರಳಿ ಅಗತ್ಯ ಮಾಹಿತಿ ಸಂಗ್ರಹಿಸುತ್ತಿದ್ದಾರೆ.ಮೃತರು ಸಾವಯವ ಕೃಷಿಕರಾಗಿ ಗಮನ ಸೆಳೆದಿದ್ದರು. ತಮ್ಮ ಜಮೀನಿನಲ್ಲಿ ಸಾವಯವ ಕೃಷಿ ಮಾಡಿದ್ದರು. ದುರ್ಗಾ ಪಂಚಾಯತ್ ನ ಸದಸ್ಯರು, ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು.

Read More

ಕಾರ್ಕಳ: ಕಾರ್ಕಳದ ದುರ್ಗಾ ಗ್ರಾಮದ ಕುಕ್ಕಜ ಪಲ್ಕೆ ಎಂಬಲ್ಲಿ ಬೀಸಿದ ಸುಂಟರಗಾಳಿಗೆ ರಿಯಾಜ್ ಎಂಬವರ ಮನೆ ಹಂಚು ಹಾಗೂ ಚಾವಣಿ ಹಾರಿ ಹೋಗಿ ಸುಮಾರು ಐವತ್ತು ಸಾವಿರದಷ್ಟು ನಷ್ಟ ಉಂಟಾಗಿದೆ.ಅದಲ್ಲದೆ ಸಾಕಿದ ಕುರಿಯ ಮೇಲೆ ಚಾವಣಿ ತಗಡು ಬಿದ್ದು ಸುಮಾರು ಏಳು ಸಾವಿರ ರೂಪಾಯಿ ಮೌಲ್ಯದ ಕುರಿ ಸಾವನಪ್ಪಿದೆ. ಅದೇ ರೀತಿ ಜಹೀರ್ ಎಂಬವರ ಮನೆ ಚಾವಣಿ ಹಾರಿ ಹೋಗಿ ಸುಮಾರು 25,000 ನಷ್ಟ ಉಂಟಾಗಿದೆ.ಅಲ್ಲಿ ಸಮೀಪ ಮುನಾವರ್ ಸಾಹೇಬರ ಮನೆ ಚಾವಣಿ ಹಾರಿ ಹೋಗಿ ತೋಟದಲ್ಲಿರುವ ಅಡಿಕೆ ಮರ ತೆಂಗಿನ ಮರ ಸಾಗುವಾನಿ ಮರ ನೆಲಕ್ಕೆ ಉರುಳಿವೆ. ಇವರಿಗೆ ಸುಮಾರು 50,000 ದಷ್ಟು ನಷ್ಟ ಉಂಟಾಗಿದೆ. ಈ ಪರಿಸರದಲ್ಲಿ ಸುಮಾರು 10 ಮನೆಗಳಿಗೆ ತೀವ್ರತರದ ಹಾನಿ ಉಂಟಾಗಿ 10 ವಿದ್ಯುತ್ ಕಂಬಗಳು ನೆಲಕ್ಕೆರುಳಿವೆ ಈಗಾಗಲೇ ಸ್ಥಳೀಯ ಪಂಚಾಯತಿನ ಅಧಿಕಾರಿಗಳು ನಷ್ಟದ ಸಮೀಕ್ಷೆ ನಡೆಸುತ್ತಿದ್ದಾರೆ.

Read More

ಉಡುಪಿ ನಗರದ ರಸ್ತೆಗಳ ಅವ್ಯವಸ್ಥೆ ವಿರುದ್ದ ಸಾಮಾಜಿಕ ಕಾರ್ಯಕರ್ತರೊಬ್ಬರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಹೊಂಡ ಗುಂಡಿಗಳಿರುವ ರಸ್ತೆಯಲ್ಲಿ ಉರುಳು ಸೇವೆ ಮಾಡುವ ಮೂಲಕ ಜನಪ್ರತಿನಿಧಿಗಳ ಗಮನಸೆಳೆಯುವ ಕೆಲಸಕ್ಕೆ ಮುಂದಾಗಿದ್ದಾರೆ. ಉಡುಪಿ ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಇಂದ್ರಾಳಿ ಬ್ರಿಡ್ಜ್ ಬಳಿಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಹೊಂಡ ಗುಂಡಿಗಳಿಂದ ಕೂಡಿದೆ ಈ ಹಿನ್ನಲೆ ರಸ್ತೆಯ ಅವ್ಯವಸ್ಥೆ ಯನ್ನು ಖಂಡಿಸಿ ಇಂದು ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಅವರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಇಂದ್ರಾಳಿ ಬ್ರಿಡ್ಜ್ ನ ಹೊಂಡ ಗುಂಡಿ ರಸ್ತೆಗೆ ಆರತಿ ಎತ್ತಿ, ತೆಂಗಿನಕಾಯಿ ಒಡೆದು ರಸ್ತೆ ಮೇಲೆ ಉರುಳು ಸೇವೆ ಮಾಡುವ ಮೂಲಕ ನಿತ್ಯಾನಂದ ಒಳಕಾಡು ರವರು ವಿಶಿಷ್ಟವಾಗಿ ಪ್ರತಿಭಟಿಸಿದರು. ಈ ಸಂಧರ್ಭದಲ್ಲಿ ಮಾತನಾಡಿದ ನಿತ್ಯಾನಂದ ಒಳಕಾಡು ಅವರು “ಈ ರಸ್ತೆ ಗೆ ಟೆಂಡರ್ ಆಗಿ ಮೂರು ವರ್ಷಗಳಿಂದ ರಸ್ತೆ ಹಾಳಾದರೂ ಯಾರೂ ಪ್ರಶ್ಬೆ ಮಾಡುತ್ತಿಲ್ಲ. ಪ್ರತಿನಿತ್ಯ ಸಾವಿರಾರು ಜನರು ಈ ರಸ್ತೆಯಲ್ಲಿ ಸಂಚಾರ ನಡೆಸುತ್ತಾರೆ. ಸ್ವತಹ ಮುಖ್ಯಮಂತ್ರಿಗಳೇ ಈ ರಸ್ತೆಯಲ್ಲಿ…

Read More

ಮಂಗಳೂರು: ಹಲವಾರು ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ದಕ್ಷಿಣ ಪೊಲೀಸರು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿ ಅರೇನಹಳ್ಳಿ ಪಿರಿಯಾಪಟ್ಟಣದ ಅಸ್ಲಾಂ ಪಾಶ (36 ವರ್ಷ) ಎಂಬವನ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ಪಾಂಡೇಶ್ವರದಲ್ಲಿ ಅ ಕ್ರ ನಂ. 300/1997 ರಲ್ಲಿ ಪ್ರಕರಣ ದ 379.411 ಐಪಿಸಿ ಅಂಬಾಸಿಡರ್ 3 ಕಾರು ಕಳವು ಪ್ರಕರಣ ದಾಖಲಾಗಿದ್ದು,ಸದರಿ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೆ ಇರುವ ಕಾರಣ ಪ್ರಕರಣವನ್ನ 2015 ರಲ್ಲಿ LPC ಮಾಡಲಾಗಿತ್ತು.ಆರೋಪಿಯು ಪೊಲೀಸರ ಕೈಗೆ ಸಿಗದೇ ಸುಮಾರು 20 ವರ್ಷ ತಲೆಮರಿಸಿಕೊಂಡಿದ್ದು ಆತನ ಮೇಲೆ ನ್ಯಾಯಾಲಯವು ದಸ್ತಗಿರಿ LPC ವಾರೆಂಟ್ ಹೊರಡಿಸಲಾಗಿ ಆರೋಪಿಯನ್ನು ಪೊಲೀಸ್ ನಿರೀಕ್ಷಕರ ಮಾರ್ಗದರ್ಶನದಂತೆ ಸೆ.12 ರಂದು ಪತ್ತೆಮಾಡಿ ಹೆಡ್ ಕಾನ್ಸ್ಟೇಬಲ್ ಪುಟ್ಟರಾಮ್ ಹಾಗೂ ಪಿ.ಸಿ ರವಿಕುಮಾರ್ ಎಂಬುವರು ಆರೋಪಿಯನ್ನ ಸೋಮವಾರ ಪಿರಿಯಾಪಟ್ಟಣದಲ್ಲಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯ ಮೇಲೆ ಹುಣಸೂರು, ಪಿರಿಯಾಪಟ್ಟಣ, ಬೆಟ್ಟದಪುರ, ಉದಯಪುರ, ಭದ್ರಾವತಿ ಠಾಣೆ, ಮಂಡ್ಯ…

Read More

ಉಳ್ಳಾಲ: ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ಕಮರಿಗೆ ಉರುಳಿ ಬಿದ್ದ ಪರಿಣಾಮ ವೃದ್ಧ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾನೀರು ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ. ಸೋಮನಾಥ ದೇವಸ್ಥಾನದ ಬಳಿಯ ನಿವಾಸಿ ಆನಂದ್ ಸಫಲ್ಯ(70)ಮೃತ ದುರ್ದೈವಿ. ಸೋಮೇಶ್ವರ ದೇವಸ್ಥಾನದ ಬಳಿಯ ಆಟೋ ಪಾರ್ಕಲ್ಲಿ ರಿಕ್ಷಾ ಚಲಾಯಿಸುತ್ತಿದ್ದ ಆನಂದ್ ಅವರು ನಿನ್ನೆ ರಾತ್ರಿ ಬಾಡಿಗೆಗೆ‌ ತೆರಳಿ ಹಿಂತಿರುಗುತ್ತಿರುವ ವೇಳೆ ಅವಘಡ ನಡೆದಿದೆ.ರಾತ್ರಿ 8.45 ರ ವೇಳೆಗೆ ಪಾನೀರು ಅಸ್ಸಿಸಿ ಶಾಲೆ ಬಳಿ ಆನಂದ್ ಚಲಾಯಿಸುತ್ತಿದ್ದ ಆಟೋ ರಿಕ್ಷಾ ಉರುಳಿ ಕಮರಿಗೆ ಬಿದ್ದಿದೆ. ಆನಂದ್ ಅವರ ತಲೆಗೆ ಆಟೋ ರಿಕ್ಷಾದ ಕಬ್ಬಿಣದ ಸಲಾಕೆಗಳ ಏಟು ತಗುಲಿ ಸಾವು ಸಂಭವಿಸಿರುವುದಾಗಿ ತಿಳಿದು ಬಂದಿದೆ. ಮೃತ ಆನಂದ್ ಅವರು ಪುರಾಣ ಪ್ರಸಿದ್ಧ ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಎರಡು ಬ್ರಹ್ಮ ಕಲಶೋತ್ಸವದಲ್ಲಿ ನೀರಿನ ವ್ಯವಸ್ಥೆಯನ್ನ ಅಚ್ಚು ಕಟ್ಟಾಗಿ ನಿರ್ವಹಿಸಿದ್ದರು.ಅವರು ಪತ್ನಿ,ಪುತ್ರ,ಪುತ್ರಿಯನ್ನ ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ…

Read More