ಸುಳ್ಯ: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆಯ ಬಳಿಕ ಸಹಜ ಸ್ಥಿತಿಯತ್ತ ಮರಳುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮತ್ತೆ ಉದ್ವಿಗ್ನ ಸ್ಥಿತಿ ತಲೆದೊರುವಂತಹ ಘಟನೆಯೊಂದು ಜರುಗಿದೆ. ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಫೀಕ್ ಎಂಬಾತನ ಸಹೋದರ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವುದಾಗಿ ಆರೋಪ ಕೇಳಿ ಬಂದಿದೆ. ಈ ಹಿನ್ನಲೆಯಲ್ಲಿ ಬೆಳ್ಳಾರೆ ಠಾಣೆ ಮುಂದೆ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿದ ಘಟನೆ ಸೆ 10 ರಂದು ಬೆಳಿಗ್ಗೆ ಬೆಳ್ಳಾರೆಯಲ್ಲಿ ನಡೆದಿದೆ. ಹಿಂದೂ ಸಂಘಟನೆಯ ಕಾರ್ಯಕರ್ತ ಹಾಗೂ ಬೆಳ್ಳಾರೆಯ ಅಮ್ಮು ರೈ ಕಾಂಪ್ಲೆಕ್ಸ್ ನ ಮ್ಯಾನೇಜರ್ ಪ್ರಶಾಂತ್ ರೈವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಶಫೀಕ್ ತಮ್ಮ, ಸಫ್ರಿದ್ ಜೀವ ಬೆದರಿಕೆ ಒಡ್ಡಿರುವುದಾಗಿ ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ. ಈತ ದಿ. ಪ್ರವೀಣ್ ನೆಟ್ಟಾರ್ ಅವರ ಕೋಳಿ ಫಾರ್ಮ್ ನಲ್ಲಿ ಕ್ಲಿನಿಂಗ್ ಕೆಲಸ ಮಾಡುತ್ತಿದ್ದ ಇಬ್ರಾಹಿಂ ಎಂಬವರ ಪುತ್ರ.…
Author: main-admin
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವ್ರು ಸ್ವೀಕರಿಸಿದ ಉಡುಗೊರೆಗಳ ಇ-ಹರಾಜಿನಲ್ಲಿ ಜನರು ವ್ಯಾಪಕವಾಗಿ ಬಿಡ್ ಮಾಡುತ್ತಿದ್ದು, ಸ್ವೀಕರಿಸಿದ ಈ ಮೊತ್ತವನ್ನ ನಮಾಮಿ ಗಂಗೆ ಅಭಿಯಾನಕ್ಕೆ ಬಳಸಲಾಗುವುದು. ಇನ್ನು ಈ ಹರಾಜಿನಲ್ಲಿ ದೇಶದ ವಿವಿಧ ಭಾಗಗಳಿಂದ ಜನರು ಭಾಗವಹಿಸಿದ್ದಾರೆ ಅನ್ನೋದು ವಿಶೇಷ. ಈ ಪೈಕಿ ಉಡುಪಿಯ ಚಾರ್ಟರ್ಡ್ ಅಕೌಂಟೆಂಟ್ ಕೆ. ರಂಗನಾಥ್ ಆಚಾರ್ ಮತ್ತು ರಾಯಪುರದ ಡಾ. ಸಂಜೀವ್ ಜೈನ್ ಅವರು ಮೋದಿಗೆ ನೀಡಿದ ಕೆಲವು ಉಡುಗೊರೆಗಳನ್ನ ಖರೀದಿಸಿದ್ದಾರೆ. ‘ಅವರು 2019 ರಿಂದ ಇ-ಹರಾಜಿನ ಮೂಲಕ ವಿವಿಧ ವಸ್ತುಗಳನ್ನ ಸಂಗ್ರಹಿಸುತ್ತಿದ್ದಾರೆ ಮತ್ತು ಅವರು ಇಲ್ಲಿಯವರೆಗೆ ಖರೀದಿಗಾಗಿ ಸುಮಾರು 3 ಲಕ್ಷ ರೂ.ಗಳನ್ನ ಖರ್ಚು ಮಾಡಿದ್ದಾರೆ. ಅದ್ರಂತೆ, ವಿಷ್ಣುವಿನ ವಿಗ್ರಹವನ್ನ 1.75 ಲಕ್ಷ ರೂ.ಗಳಿಗೆ ಖರೀದಿಸಿದರು’ ಎನ್ನುವ ಮಾಹಿತಿ ಏಜೆನ್ಸಿ ಮೂಲಕ ವ್ಯಕ್ತವಾಗಿದೆ. ಇ-ಹರಾಜಿಗೆ ಕಳೆದ ವರ್ಷ ಅಭೂತಪೂರ್ವ ಬೆಂಬಲ.!ಪ್ರಧಾನಮಂತ್ರಿಗಳು ಸ್ವೀಕರಿಸಿದ ಉಡುಗೊರೆಗಳನ್ನ ದೇಶ ಮತ್ತು ವಿದೇಶಗಳಲ್ಲಿ ಇ-ಹರಾಜು ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಪಡೆದ ಮೊತ್ತವನ್ನ ನದಿಯ ಪುನರುಜ್ಜೀವನಕ್ಕಾಗಿ ನೀಡಲಾಗುತ್ತಿದೆ.…
ನವದೆಹಲಿ: ಬೀದಿ ನಾಯಿಗಳಿಗೆ ಆಹಾರ ನೀಡುವವರನ್ನೇ ಅವುಗಳ ಲಸಿಕೆಗೆ ಜವಾಬ್ದಾರರನ್ನಾಗಿ ಮಾಡಬಹುದು ಮತ್ತು ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡಿದರೆ ಆ ವೆಚ್ಚವನ್ನು ಅವುಗಳಿಗೆ ಊಟ ಹಾಕಿ ಸಲಹಿದವರೇ ಭರಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ ಕುರಿತು ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಜನರ ಸುರಕ್ಷತೆ ಮತ್ತು ಪ್ರಾಣಿಗಳ ಹಕ್ಕುಗಳ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆಕೆ ಮಹೇಶ್ವರಿ ಅವರಿದ್ದ ಪೀಠ, ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿದ್ದು, ನಮ್ಮಲ್ಲಿ ಹೆಚ್ಚಿನವರು ನಾಯಿ ಪ್ರಿಯರು. ನಾನು ಕೂಡ ನಾಯಿಗಳಿಗೆ ಆಹಾರ ನೀಡುತ್ತೇನೆ. ಜನರು ಬಯಸಿದರೆ ಶ್ವಾನಗಳನ್ನು ನೋಡಿಕೊಳ್ಳಲಿ ಆದರೆ ಅವುಗಳನ್ನು ಗುರುತಿಸಬೇಕು, ಚಿಪ್ ಮೂಲಕ ಟ್ರ್ಯಾಕ್ ಮಾಡಬಾರದು ಎಂದಿದ್ದಾರೆ. ಬೀದಿನಾಯಿ ಸಮಸ್ಯೆಯನ್ನು ಪರಿಹರಿಸಲು ತರ್ಕಬದ್ಧ ಪರಿಹಾರವನ್ನು ಕಂಡುಹಿಡಿಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಿದೆ.
ಕಲಬುರಗಿ : ಕಲುಷಿತ ನೀರು ಸೇವಿಸಿ ವಾಂತಿ ಭೇದಿಯಿಂದ ಓರ್ವ ಸಾವನ್ನಪ್ಪಿದ್ದು, 52 ಮಂದಿ ಅಸ್ವಸ್ಥರಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಮಂದೇವಾಲ ಗ್ರಾಮದಲ್ಲಿ ನಡೆದಿದೆ. ಕಲುಷಿತ ನೀರು ಕುಡಿದು ಮಂದೇವಾಲ ಗ್ರಾಮದಲ್ಲಿ ವಾಂತಿಭೇದಿ ಉಲ್ಬಣಗೊಂಡಿದ್ದು, ಓರ್ವ ಸಾವನ್ನಪ್ಪಿದರೆ, ಗ್ರಾಮದ 52 ಜನರು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ವಾಂತಿ ಭೇದಿಯಿಂದ ರಾತ್ರಿ ಗ್ರಾಮದ ತಾಯಪ್ಪ (70) ಮೃತಪಟ್ಟಿದ್ದಾರೆ.
ಕಾಪು: ಖಾಸಗಿ ಬಸ್‌ನ ಟೈರ್ ಸ್ಫೋಟಗೊಂಡ ಪರಿಣಾಮ ಬಸ್‌ನಲ್ಲಿದ್ದ ಪ್ರಯಾಣಿಕರ ಪೈಕಿ ಓರ್ವರ ಕಾಲಿಗೆ ಗಂಭೀರ ಹೊಡೆತ ಬಿದ್ದ ಘಟನೆ ಪಡುಬಿದ್ರಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಗಾಯಾಗೊಂಡ ಪ್ರಯಾಣಿಕ ಧನರಾಜ್, ಕಾರ್ಕಳದಿಂದ ಮಂಗಳೂರು ಕಡೆಗೆ ಹೋಗಲು ಪಡುಬಿದ್ರಿ ಬಸ್ ಬಂದು ನಿಲ್ಲುತ್ತಿದಂತೆ, ಬಸ್ಸಿನ ಬಲ ಬದಿಯ ಹಿಂದಿನ ಟಯರ್ ಭಾರಿ ಸದ್ದಿನೊಂದಿಗೆ ಸ್ಫೋಟಗೊಂಡಿದೆ. ಬಸ್ಸಿನ ಟೈರ್‌ನ ಮೇಲ್ಭಾಗ ಪ್ಲಾಟ್ ಪಾರ್ಮ್ ಛಿಂದಿಯಾಗಿ ಕುಳಿತಿದ್ದ ಪ್ರಯಾಣಿಕನ ಕಾಲಿ ಬಲವಾಗಿ ಹೊಡೆದಿದೆ. ಪರಿಣಾಮ ಪ್ರಯಾಣಿಕ ಗಂಭೀರ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿದೆ.
ಮಂಗಳೂರು: ಕೊಲೆ ಯತ್ನ ನಡೆಸಿದ ಆರೋಪಿಗಳಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ. ಜಾಗದ ತಕರಾರಿನ ದ್ವೇಷದಿಂದ ಮೂಡುಬಿದಿರೆ ತಾಲೂಕು ನಿಡ್ಡೋಡಿ ಗ್ರಾಮದ ಕೊಂಟಡ್ಕದಲ್ಲಿ ವಸಂತರಾಜ ಶೆಟ್ಟಿ ಅವರನ್ನು ಆರೋಪಿಗಳಾದ ಪ್ರಸನ್ನ ಕುಮಾರ್, ಜಯಂತಿ ಸುವರ್ಣ ಮತ್ತು ರಕ್ಷಾ ಸುವರ್ಣ ಕೊಲೆ ಮಾಡಲು ಯತ್ನಿಸಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆ ಕಲಂ 447ರಂತೆ ತಲಾ 500 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಒಂದು ವಾರದ ಸಾದಾ ಸಜೆ, ಕಲಂ 326ರಂತೆ 3 ವರ್ಷ ಸಾದಾ ಸಜೆ ಮತ್ತು ತಲಾ 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 15 ದಿನಗಳ ಸಾದಾ ಸಜೆ ವಿಧಿಸಿದ್ದಾರೆ. ಕಲಂ 504ರಡಿ 6 ತಿಂಗಳ ಸಜೆ ವಿಧಿಸಿದ್ದಾರೆ. ಕಲಂ 307ರಡಿ 3 ವರ್ಷಗಳ ಸಾದಾ ಸಜೆ ಮತ್ತು ತಲಾ 1,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ತಲಾ 1 ತಿಂಗಳು…
ಕಾರ್ಕಳ: ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ನಿಟ್ಟೆ ಗರಡಿಯ ಬಳಿ ಮಾದಕ ವಸ್ತು ಸೇವಿಸಿ ನಶೆಯಲ್ಲಿ ತೇಲಾಡುತ್ತಿದ್ದ ಯುವಕನನ್ನು ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವಕ ಶಹದತ್ (21) ಎಂದು ತಿಳಿದುಬಂದಿದೆ. ಆತ ಕಾಲೇಜೊಂದರ ವಿದ್ಯಾರ್ಥಿ ಎನ್ನಲಾಗಿದ್ದು, ಗಾಂಜಾ ಸೇವನೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದು ಈತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಸೇವನೆ ಮಾಡಿರುವುದು ಖಚಿತವಾಗಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು: ಜಿಲ್ಲೆಯಲ್ಲಿ ಮಕ್ಕಳಿಗೆ ತಿದ್ದಿ ಬುದ್ದಿ ಹೇಳುವ ಶಿಕ್ಷಕರೇ ಈಗ ವಿಕೃತಿ ಮನಸ್ಥಿತಿಯಿಂದ ಮೆರೆಯುತ್ತಿದ್ದಾರೆ. ಶಾಲೆಯ ಶಿಕ್ಷಕರೊಬ್ಬರು ಶಾಲಾ ಸಮವವಸ್ತ್ರದಲ್ಲೇ ಮಗು ಮಲ ವಿಸರ್ಜನೆ ಮಾಡಿದ್ದಕ್ಕೆ ಆಕೆಯ ಮೇಲೆ ಬಿಸಿ ನೀರು ಎರೆಚಿ ವಿಕೃತವಾಗಿ ಮೆರೆದಿದ್ದಾರೆ. ರಾಯಚೂರು ಜಿಲ್ಲೆಯ ಸಂತೆಕೆಲ್ಲೂರು ಗ್ರಾಮದಲ್ಲಿ ಶಾಲಾ ಸಮವವಸ್ತ್ರದಲ್ಲೇ ಮಗು ಮಲ ವಿಸರ್ಜನೆ ಮಾಡಿಕೊಂಡಿದ್ದರು. ಈ ವೇಳೆ ಶಿಕ್ಷಿಕ ಹುಲಿಗೆಪ್ಪ ವಿದ್ಯಾರ್ಥಿನಿ ಮೇಲೆ ಬಿಸಿ ನೀರು ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 2ನೇ ತರಗತಿಯಲ್ಲಿದ್ದ ವಿದ್ಯಾರ್ಥಿಗೆ ಬಿಸಿ ನೀರು ಸುರಿದ್ದಿದ್ದಾರೆ. ಈ ಘಟನೆಯಿಂದ ಶೇ. 4೦ ರಷ್ಟು ಮಗುವಿನ ದೇಹ ಸುಟ್ಟು ಹೋಗಿದೆ. ಕೂಡಲೇ ದೂರು ನೀಡಿದರೆ ಪೊಲೀಸರು ಮಾತ್ರ ಹಿಂದೇಟು ಹಾಕಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಮಂಗಳೂರು:ಮಂಗಳೂರು ಮಹಾನಗರ ಪಾಲಿಕೆಯ 23ನೇ ಮೇಯರ್ ಆಗಿ ಜಯಾನಂದ ಅಂಚನ್ ಹಾಗೂ ಉಪಮೇಯರ್ ಆಗಿ ಪೂರ್ಣಿಮ ಆಯ್ಕೆಯಾಗಿದ್ದಾರೆ. ಮೇಯರ್,ಉಪ ಮೇಯರ್ ಹಾಗೂ 4 ಸ್ಥಾಯಿ ಸಮಿತಿ ಸದಸ್ಯರ ಮಹತ್ವದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದೆ. ಮೇಯರ್ ಮತ್ತೆ ಸಾಮಾನ್ಯ ಅಭ್ಯರ್ಥಿಗೆ ಹಾಗೂ ಉಪ ಮೇಯರ್ ಸ್ಥಾನವು ಹಿಂದುಳಿದ ವರ್ಗ ಮಹಿಳೆಗೆ ಮೀಸಲಾಗಿತ್ತು.ಪಾಲಿಕೆಯ ಒಟ್ಟು 60 ಸ್ಥಾನಗಳ ಪೈಕಿ ಬಿಜೆಪಿ 44 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಮೊದಲ ಅವಧಿಯಲ್ಲಿ ಬಿಜೆಪಿಯ ದಿವಾಕರ್ ಪಾಂಡೇಶ್ವರ ಮೇಯರ್ ಗದ್ದುಗೆಗೇರಿದರೆ,ಎರಡನೇ ಅವಧಿಗೆ ಸಾಮಾನ್ಯ ಮೀಸಲು ನಿಗದಿಯಾದ ಕಾರಣ ಯಾವುದೇ ಜಿದ್ದಾಜಿದ್ದಿ ಇಲ್ಲದೆ ಹಿರಿಯ ಸದಸ್ಯ ಪ್ರೇಮಾನಂದ ಶೆಟ್ಟಿಗೆ ಮೇಯರ್ ಹುದ್ದೆ ಒಲಿದು ಬಂದಿತ್ತು. ಅಭ್ಯರ್ಥಿ ಆಯ್ಕೆಗಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ , ಇಬ್ಬರು ಶಾಸಕರ ನೇತೃತ್ವದಲ್ಲಿ ಪಾಲಿಕೆ ಬಿಜೆಪಿ ಸದಸ್ಯರ ಜತೆಗೆ ಮಹತ್ವದ ಸಭೆ ನಡೆಸಿ ವಿವಿಧ ಮುಖಂಡರು ತೀವ್ರ ಚರ್ಚೆ ನಡೆಸಿದ್ದರು.
ಉಳ್ಳಾಲ: ಸೋಮೇಶ್ವರ ಬೀಚ್ ಬಳಿಯ ಹೋಂ ಸ್ಟೇ ಒಂದಕ್ಕೆ ಬುಧವಾರ ಸಂಜೆ ಕನ್ನ ಹಾಕಿದ್ದ ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಉಳ್ಳಾಲ ಠಾಣೆ ವ್ಯಾಪ್ತಿಯ ಎರಡು ಮನೆಗಳಿಂದ ನಗ, ನಗದು ದೋಚಿದ್ದ ಕಳ್ಳನನ್ನ ಉಳ್ಳಾಲ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಉಳ್ಳಾಲ ಮಾಸ್ತಿಕಟ್ಟೆ ನಿವಾಸಿ ಮೊವಾಝ್ (35) ಬಂಧಿತ . ಆರೋಪಿ ಮೊವಾಝ್ ಕೇರಳದ ಕಣ್ಣೂರಿನ ಪತ್ನಿ ಮನೆಯಲ್ಲೇ ನೆಲೆಸಿದ್ದು ಆಗಾಗ್ಗೆ ಮಂಗಳೂರಿಗೆ ಬಂದು ಕಳ್ಳತನ ನಡೆಸುತ್ತಿದ್ದ ಎನ್ನಲಾಗಿದೆ.ನಿನ್ನೆ ಸಂಜೆ ಸೋಮೇಶ್ವರ ಬಸ್ಸು ತಂಗುದಾಣದ ಬಳಿಯ ಬಾಡಿಗೆ ಮನೆ ನಿವಾಸಿಯಾದ ಪ್ರಶಾಂತ್ ಅವರ ಮನೆ ಹಿಂಬಾಗಿಲ ಚಿಲಕ ಮುರಿದು ಒಳ ನುಗ್ಗಿದ ಮೊವಾಝ್ ಕಪಾಟಿನಲ್ಲಿದ್ದ ಕರಿಮಣಿ ಸರ ಮತ್ತು ಚೈನ್ ಸೇರಿ ಒಟ್ಟು 26 ಗ್ರಾಂ ಚಿನ್ನ ಅಲ್ಲದೆ 3000 ರೂಪಾಯಿ ನಗದು ದೋಚಿದ್ದನು. ಪ್ರಶಾಂತ್ ಅವರು ಪತ್ನಿ , ಮಗನೊಂದಿಗೆ ಉಡುಪಿಗೆ ತೆರಳಿದ್ದ ವೇಳೆ ಪ್ರಕರಣ ನಡೆದಿತ್ತು.ಬುಧವಾರ ಸಂಜೆ 7.15 ರ ವೇಳೆ ಪ್ರಶಾಂತ್ ಅವರು ನೆಲೆಸಿರುವ ಬಾಡಿಗೆ ಮನೆ…