ಕಡಬ: ಮರಳು ಸಾಗಿಸುವ ಟಿಪ್ಪರ್ ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿ ತಾಯಿ ಮತ್ತು ಮಗ ಅದೃಷ್ಟವಶಾತ್ ಪಾರಾದ ಘಟನೆ ನೆಲ್ಯಾಡಿಯ ಗೋಳಿತೊಟ್ಟು ಗ್ರಾಮದ ನೂಜೋಲು ಎಂಬಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ ಉಪ್ಪಿನಂಗಡಿ ಕಡೆಯಿಂದ ನೂಜೋಲು ನಿವಾಸಿ ಕುಶಾಲಪ್ಪ ಹಾಗೂ ಅವರ ತಾಯಿ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಅತಿವೇಗದಲ್ಲಿ ಬಂದ ಮರಳು ಸಾಗಿಸುವ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ ನ ಅಡಿಗೆ ಬಿದ್ದಿದ್ದ ಮಹಿಳೆಯನ್ನು ಎರಡು ಕ್ರೈನ್ ಗಳ ಸಹಾಯದಿಂದ ಟಿಪ್ಪರನ್ನು ಮೇಲೆತ್ತಿ ಮಹಿಳೆಯನ್ನು ಹೊರತೆಗೆಯಲಾಯಿತು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಹಾಗೂ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿದ್ದರು. ಘಟನೆಯಲ್ಲಿ ತಾಯಿ-ಮಗ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Author: main-admin
ಕಡಬ: ಅನಾರೋಗ್ಯ ಪೀಡಿತ ವೃದ್ಧೆಯನ್ನು ಹೊತ್ತುಕೊಂಡು ಸಾಗಾಟ ನಡೆಸಿದ ಪ್ರಕರಣದಲ್ಲಿ ಕಡಬ ಸುದ್ದಿಯಾಗಿತ್ತು. ಇದೀಗ ಅದೇ ಮನೆಯಿಂದ ಅಡಿಕೆಯನ್ನು ಜೀಪಿನಲ್ಲಿ ಸಾಗಿಸಿರುವ ಬಗ್ಗೆ ಆರೋಪಿಸಲಾಗಿದೆ. ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬಳಕ್ಕ ಎಂಬಲ್ಲಿ ರಸ್ತೆ ಸರಿ ಇಲ್ಲದೆ ಕಮಲ ಎಂಬ 70 ವರ್ಷದ ವೃದ್ಧೆಯನ್ನು ಬಡಿಗೆಗೆ ಬಟ್ಟೆ ಕಟ್ಟಿ ಆಸ್ಪತ್ರೆಗೆ ಸಾಗಾಟ ನಡೆಸಿದ್ದರು. ರಸ್ತೆ ಸಂಪರ್ಕ ವ್ಯವಸ್ಥಿತವಾಗಿಲ್ಲ ಎಂಬ ಆರೋಪ ವ್ಯಕ್ತವಾಗಿ ರಾಜ್ಯವಾಪಿ ಸುದಿಯಾಗಿತ್ತು.ಅದರೆ ನಿನ್ನೆ ವೃದ್ಧೆಯ ಮನೆಯಿಂದಲೇ ಅಡಿಕೆಯನ್ನು ಜೀಪಿನಲ್ಲಿ ಸಾಗಾಟ ನಡೆಸಿದ್ದಾರೆಂದು ಕೆಲವರು ತರಾಟೆಗೆ ತೆಗೆದುಕೊಂಡರು. 2-3 ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದರೂ ಅಡಿಕೆ ಸಾಗಾಟಕ್ಕೆ ಟೂ ವೀಲ್ ಜೀಪು ಬಳಿಸಿದ್ದೀರಾ,ಮೊನ್ನೆ ವೃದ್ಧೆಯನ್ನು ಹೊತ್ತುಕೊಂಡು ಸಾಗಿಸುತ್ತಾ ರಸ್ತೆ ಸರಿಯಿಲ್ಲ ಎಂದು ಅಪಪ್ರಚಾರ ನಡೆಸಿದ್ದೀರಾ ಎಂದು ಪ್ರಶ್ನಿಸುತ್ತಿರುವುದು ವಿಡಿಯೋದಲ್ಲಿದೆ. ಇದು ಸ್ಥಳೀಯ ಶಾಸಕರ ಹಾಗೂ ನೂಜಿಬಾಳ್ತಿಲ ಗ್ರಾ.ಪಂ. ಬಗ್ಗೆ ತೇಜೋವಧೆ ನಡೆಸಲು ಮೊನ್ನೆ ನಡೆಸಲಾದ ವ್ಯವಸ್ಥಿತ ಸಂಚು ಎಂದು ಸ್ಥಳೀಯ ಗ್ರಾ.ಪಂ.ಸದಸ್ಯರು ಆರೋಪಿಸಿದ್ದಾರೆ.
ಸುಳ್ಯ : ಬೆಳ್ಳಾರೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ಹತ್ತು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಇದೀಗ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ) ಕೈಗೆತ್ತಿಕೊಂಡಿದೆ. ಎನ್.ಐ.ಎ ತನಿಖೆಗೆ ಸಹಕರಿಸಲು ಒಂದು ತಿಂಗಳವರೆಗೆ ಓಓಡಿ ಮೂಲಕ ಬೆಂಗಳೂರು ಎನ್.ಐ.ಎ ವಿಭಾಗದ ಅಧಿಕಾರಿಗಳ ಜೊತೆ ಪ್ರಕರಣ ಭೇದಿಸಲು ಪ್ರಮುಖ ದಕ್ಷ ಪೊಲೀಸ್ ಅಧಿಕಾರಿಗಳನ್ನು ಎಡಿಜಿಪಿ ಡಾ.ಎಮ್.ಎ.ಸಲೀಂ ಐಪಿಸ್ ಅವರು ಬುಧವಾರ ಆದೇಶ ಹೊರಡಿಸಿದ್ದು ತಕ್ಷಣ ಎನ್.ಐ.ಎ ಬೆಂಗಳೂರು ಕಛೇರಿಗೆ ವರದಿ ಮಾಡಿಕೊಳ್ಳಲು ತಿಳಿಸಿದ್ದಾರೆ. ಎನ್.ಐ.ಎ ಗೆ 9 ಮಂದಿ ಪೊಲೀಸರು ನೇಮಕ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ ಐ ಪ್ರಸನ್ನ , ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ ಐ ಉದಯ ರವಿ, ವೇಣೂರು ಠಾಣೆಯ ಹೆಡ್ ಕಾನ್ಟೇಬಲ್ ಪ್ರವೀಣ್.ಎಮ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಪ್ರವೀಣ್ ರೈ ಮತ್ತು ಆದ್ರಾಮ, ವಿಟ್ಲ ಪೊಲೀಸ್ ಠಾಣೆಯ ಹೆಡ್ ಕಾನ್ಸ್…
ಶಿರೂರು: ರೈಲು ಢಿಕ್ಕಿಯಾಗಿ ಕಾಲೇಜು ವಿದ್ಯಾರ್ಥಿ ಮೃತಪಟ್ಟ ಘಟನೆ ಶಿರೂರು ಗ್ರಾಮದ ನಿರೋಡಿ ಎಂಬಲ್ಲಿ ಗುರುವಾರ ಮದ್ಯಾಹ್ನ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ 17ವರ್ಷ ಪ್ರಾಯದ ಸಂಪತ್ ಪೂಜಾರಿ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು ಹಾಗೂ ಬೈಂದೂರು ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಪುತ್ತೂರು: ಅನ್ಯ ಕೋಮಿನ ಯುವಕ-ಯುವತಿಯರ ಬಗ್ಗೆ ಪೊಲೀಸರಿಗೆ ಹಿಂದೂ ಸಂಘಟನೆ ಮಾಹಿತಿ ನೀಡಿರುವ ಘಟನೆ ಪುತ್ತೂರಿನ ನೆಲ್ಲಿಕಟ್ಟೆ ಬಳಿ ನಡೆದಿದೆ. ನೆಲ್ಲಿಕಟ್ಟೆ ಫಿಜಾ ಹಟ್ ನಲ್ಲಿ ಅನ್ಯಕೋಮಿನ ಯುವಕ ಯುವತಿಯರು ಜೊತೆಗಿದ್ದರು.ಇದನ್ನು ಕಂಡು ಹಿಂದೂ ಸಂಘಟನೆ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಜೊತೆಗಿದ್ದವರಲ್ಲಿ ಹಿಂದೂ,ಮುಸ್ಲಿಂ,ಕ್ರಿಶ್ಚಿಯನ್ ಯುವತಿಯರಿದ್ದರು ಎನ್ನಲಾಗಿದೆ.ಎಲ್ಲರೂ ಸರ್ವಧರ್ಮದವರಾಗಿದ್ದರು.ಆದರೆ ಇದನ್ನು ವಿರೋಧಿಸಿ ಹಿಂದೂ ಸಂಘಟನೆ ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ವರದಿಯಾಗಿದೆ. ಜೊತೆಗಿದ್ದವರು ಸ್ಥಳೀಯರು ಎನ್ನಲಾಗಿದ್ದು, ಸ್ಥಳಕ್ಕೆ ಪೊಲೀಸರು ತೆರಳಿ ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ..
ಬೆಳ್ತಂಗಡಿ: ವಿಷ್ಣುಮೂರ್ತಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿ ಒಡೆದು ಹಣ ದೋಚಿಕೊಂಡು ಹೋದ ಘಟನೆ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರುವಿನಲ್ಲಿ ನಡೆದಿದೆ. ಅಲ್ಲಿನ ಸಿ ಸಿ. ಟಿ ವಿ. ಡಿವಿಆರ್, ಮೋನಿಟರ್ ಸಮೇತ ಹಿಡಿದುಕೊಂಡು ಹೋಗಿದ್ದಾರೆ, ದೇವಾಲಯದ ಅರ್ಚಕರು ಇಂದು ಬೆಳಿಗ್ಗೆ ದೇವಸ್ಥಾನಕ್ಕೆ ಬಂದಾಗ ಬಾಗಿಲಿಗೆ ಬೀಗ ಒಡೆದು ಅರ್ಧ ಬಾಗಿಲು ತೆರೆದಿದ್ದು ಸಂಶಯ ಬಂದು ತಕ್ಷಣ ಆಡಳಿತ ಮಂಡಳಿಯ ಸದಸ್ಯರಿಗೆ ಮಾಹಿತಿ ನೀಡಿದಾಗ ಕಳ್ಳರು ನುಗ್ಗಿದ್ದು ಖಚಿತವಾಗಿದೆ. ತಕ್ಷಣ ವೇಣೂರು ಠಾಣೆಗೆ ಮಾಹಿತಿ ನೀಡಿ ಆರಕ್ಷಕ ಠಾಣೆಯ ಠಾಣಾಧಿಕಾರಿ ಸೌಮ್ಯ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಿಸಿದ್ದಾರೆ.ಬೆರಳಚ್ಚು ತಜ್ಞರು, ಶ್ವಾನದಳ ಬಂದು ಪರಿಶೀಲಿಸಿದೆ, ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಲ್ಲಿ ಠಾಣಾಧಿಕಾರಿ ಸೌಮ್ಯ ಕೆಲವು ಮುಂಜಾಗ್ರತೆಯ ಮಾಹಿತಿ ನೀಡಿ, ಈ ತನಿಖೆಯನ್ನು ಅತ್ಯಂತ ವೇಗವಾಗಿ ಬೇಧಿಸುವುದಾಗಿ ಭರವಸೆ ನೀಡಿದರು. ಈ ಹಿಂದೆಯೂ ಇದೇ ದೇವಸ್ಥಾನದಲ್ಲಿ ಕಳ್ಳತನ ನಡೆದು ದೇವರ ಉತ್ಸವ…
ಬೆಳ್ತಂಗಡಿ: ವ್ಯಕ್ತಿಯೋರ್ವರು ಮನೆ ಸಮೀಪದ ಬಾವಿಯಲ್ಲಿ ಅಕಸ್ಮಿಕವಾಗಿ ಬಿದ್ದಿರುವ ಘಟನೆ ನಿನ್ನೆ ಮದ್ಯಾಹ್ನ ಬೆಳ್ತಂಗಡಿ ತಾಲೂಕಿನ ತೆಂಕಕಾರಂದೂರುವಿನಲ್ಲಿ ನಡೆದಿದೆ. ಗಾಂಧಿನಗರ ಕಾಫಿನಡ್ಕ ತೆಂಕಕಾರಂದೂರು ನಿವಾಸಿ ರಮಾನಂದ(42) ಮೃತ ದುರ್ದೈವಿ. ರಮಾನಂದರು ಮನೆಯಲ್ಲಿ ಇದ್ದರೂ ಕೂಡಾ ಸಂಜೆಯವರೆಗೆ ಮನೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಇದರಿಂದ ಅತಂಕಗೊಂಡ ಮನೆ ಮಂದಿ ಹುಡುಗಾಟ ನಡೆಸಿದೆರೆನ್ನಲಾಗಿದೆ. ರಾತ್ರಿ ವೇಳೆ ರಮಾನಂದರ ಚಪ್ಪಲಿ ಬಾವಿ ಸಮೀಪ ಸಿಕ್ಕಿದರಿಂದ ತಕ್ಷಣ ಗ್ರಾ.ಪಂ.ಅಧ್ಯಕ್ಷ ಹೇಮಂತ ಬೆಳ್ತಂಗಡಿ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಅಗ್ನಿಶಾಮಕದಳ ಬಂದು ಮೃತದೇಹವನ್ನು ಮೇಲಕ್ಕೆತ್ತಲಾಯಿತು. ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಪ್ರಮುಖ ಅಗ್ನಿಶಾಮಕ ದಳದ ಸಿಬ್ಬಂದಿ ಕೃಷ್ಣ.ಪಿ. ನಾಯ್ಕ, ಚಾಲಕ ಲಿಂಗರಾಜ್ ಲಮಾಣಿ, ಉಸ್ಮಾನ್, ಮಹಮ್ಮದ್ ಜಂಬಗಿ, ಅರುಣ್ ಪಾಲ್ಗೊಂಡಿದ್ದರು.
ಕಾಪು: ಮೊಬೈಲ್ ಶಾಪ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಉದ್ಯಾವರ ಸಂಪಿಗೆನಗರ ಮಸೀದಿ ಬಳಿಯ ಯುವತಿಯೋರ್ವಳು ಬೆಳ್ಳಂಬೆಳಗ್ಗೆ ಮನೆಯಿಂದ ನಾಪತ್ತೆಯಾದ ಘಟನೆ ಆ. 23ರಂದು ನಡೆದಿದೆ. ನೇತ್ರಾವತಿ (20) ಕಾಣೆಯಾಗಿರುವ ಯುವತಿ. ಕಳೆದ ಮೂರು ತಿಂಗಳಿನಿಂದ ಉದ್ಯಾವರದ ಮೊಬೈಲ್ ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ನೇತ್ರಾವತಿ ಅವರು ಆ. 22ರಂದು ರಾತ್ರಿ ಊಟ ಮಾಡಿ ಮಲಗಿದ್ದು ಆ. 23 ರಂದು ಬೆಳಗ್ಗೆ 5.30ಕ್ಕೆ ಹಾಲ್‌ನಿಂದ ಎದ್ದು ವಾಶ್ ರೂಂಗೆ ಹೋಗಿದ್ದು, ಅಲ್ಲಿಂದ ಮರಳದೇ ಕಾಣೆಯಾಗಿದ್ದಳು. ಮನೆಯವರೆಲ್ಲರೂ ಸೇರಿ ಅಕ್ಕಪಕ್ಕದವರ ಮನೆಗಳಲ್ಲಿ ಸಂಬಂಧಿಕರ ಮನೆಗಳಲ್ಲಿ ಪರಿಚಯದವರಲ್ಲಿ ವಿಚಾರಿಸಿದ್ದು ಈವರೆಗೂ ಪತ್ತೆಯಾಗಿರುವುದಿಲ್ಲ ಎಂದು ಅವರ ಅಕ್ಕ ವಿಜಯಲಕ್ಷ್ಮೀ ಅವರು ಕಾಪು ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮಣಿಪಾಲ: ಮಣಿಪಾಲದ ಮಣಿಪಾಲ ಅಕಾಡೆಮಿ ಸ್ಕೂಲಿನ ಒಂದನೇ ತರಗತಿ ವಿದ್ಯಾರ್ಥಿನಿ ಮೇಲೆ ಬೀದಿ ನಾಯಿಗಳ ಗುಂಪೊಂದು ಮೈಮೇಲೆ ಎರಗಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಇಂದು ನಡೆದಿದೆ. ಗಾಯಗೊಂಡ ಬಾಲಕಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ನಗರದಲ್ಲಿ ಹೆಚ್ಚಾಗಿದೆ. ಹಿರಿಯ ನಾಗರಿಕರು, ಚಿಕ್ಕಮಕ್ಕಳು, ಶಾಲಾ ವಿದ್ಯಾರ್ಥಿಗಳ ತಿರುಗಾಟಕ್ಕೂ ಭೀತಿ ಎದುರಾಗಿದೆ. ಸಾರ್ವಜನಿಕರ ಮೇಲೆ ದಾಳಿ ನಡೆಸಿರುವ ಪ್ರಕರಣಗಳು ಬಹಳಷ್ಟು ನಡೆದಿವೆ. ಸಮಸ್ಯೆಯ ಮುಕ್ತಿಗಾಗಿ ನಗರಸಭೆ ತಕ್ಷಣ ನಗರದಲ್ಲಿ ನೆಲೆ ಕಂಡಿರುವ ನೂರಾರು ಬೀದಿ ನಾಯಿಗಳನ್ನು ಸೆರೆ ಹಿಡಿದು, ಶ್ವಾನ ಪುರ್ನವಸತಿ ಕೇಂದ್ರಗಳಲ್ಲಿ ದಾಖಲಿಸುವಂತೆ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಅವರು ಆಗ್ರಹಿಸಿದ್ದಾರೆ.
ಮಂಗಳೂರು : ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ (ಎನ್‌ಎಂಪಿಎ) ಸುಮಾರು 1,200 ಕೋ.ರೂ. ವೆಚ್ಚದ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಸಾಗರಮಾಲದ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಸೆ. 2ರಂದು ಮಂಗಳೂರಿಗೆ ಆಗಮಿಸಲಿದ್ದು ಇನ್ನೆರಡುದಿನಗಳಲ್ಲಿ ಕಾರ್ಯ ಕ್ರಮದ ರೂಪರೇಖೆ ಅಂತಿಮಗೊಳ್ಳಲಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಳಗ್ಗೆ ಕೊಚ್ಚಿಯಲ್ಲಿ ಕಾರ್ಯಕ್ರಮದ ಬಳಿಕ ಸಂಜೆ 3.45ಕ್ಕೆ ಮಂಗಳೂರಿಗೆ ಆಗಮಿಸಲಿದ್ದು, ಎನ್‌ಎಂಪಿಎಗೆ ಭೇಟಿ ನೀಡಿ ಅಲ್ಲಿ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ನೆರವೇರಿಸಲಿದ್ದಾರೆ. ಬಳಿಕ ಸಂಜೆ 5 ಗಂಟೆಗೆ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಬಹುತೇಕ ಗೋಲ್ಡ್ ಫಿಂಚ್ ಸಿಟಿಮೈದಾನದಲ್ಲಿ ಸಮಾವೇಶ ನಡೆಯಲಿದೆ ಎಂದರು. ಪ್ರಧಾನಿಯವರ ಜತೆ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ, ಕೇಂದ್ರ ಬಂದರು ಮತ್ತು ನೌಕಾಯಾನ ಸಚಿವ ಸರ್ಬಾನಂದ ಸೋನೊವಾಲಾ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಮುಂತಾದವರು ಆಗಮಿಸುವ ನಿರೀಕ್ಷೆ ಎಂದು ತಿಳಿಸಿದ್ದಾರೆ.