ಹಾಸನ: ದಂಪತಿಗಳ ನಡುವೆ ವೈಮನಸ್ಸು ಉಂಟಾಗಿ, ಆ ಬಳಿಕ ಕೋರ್ಟ್ ಆವರಣದಲ್ಲಿ ನಡೆದಂತ ಲೋಕ ಅಧಾಲತ್ ನಲ್ಲಿ ಒಟ್ಟಿಗೆ ಜೊತೆಯಾಗಿದ್ದು, ಇಬ್ಬರು ಸಂಸಾರ ಮಾಡುತ್ತೇವೆ ಎಂಬುದಾಗಿ ಪತಿ ಒಪ್ಪಿಕೊಂಡಿದ್ದರು. ಆದ್ರೇ.. ಕೋರ್ಟ್ ಆವರಣದ ಶೌಚಾಲಯದಲ್ಲೇ ಪತ್ನಿಯ ಕತ್ತು ಕೊಯ್ದು, ಮಗುವನ್ನು ಕೊಲ್ಲಲು ಯತ್ನಿಸಿದಂತ ಘಟನೆ ನಡೆದಿತ್ತು. ಇದೀಗ ಪತಿಯಿಂದ ಹತ್ಯೆ ಯತ್ನದಲ್ಲಿ ಗಾಯಗೊಂಡಿದ್ದಂತ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ತಟ್ಟೆಕೆರೆ ಗ್ರಾಮದ ಶಿವಕುಮಾರ್ ಹಾಗೂ ಚೈತ್ರಾ ಕಳೆದ 6 ವರ್ಷಗಳ ಹಿಂದೆ ವಿವಾಹವಾಗಿದ್ದರು. ಕೆಲ ವರ್ಷಗಳಿಂದ ದಂಪತಿಗಳ ನಡುವೆ ವೈಮನಸ್ಸು ಮೂಡಿ, ದೂರಾಗಿದ್ದರು. ಇದೇ ಕಾರಣದಿಂದಾಗಿ ಪತ್ನಿ ಚೈತ್ರಾ ಡೈವೋರ್ಸ್ ಗಾಗಿ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಹೊಳೆನರಸೀಪುರದ ಹಿರಿಯ ಸಿವಿಲ್ ಕೋರ್ಟ್ ನಲ್ಲಿ ನಡೆದಿದ್ದಂತ ಲೋಕ ಅಧಾಲತ್ ನಲ್ಲಿ ಭಾಗವಹಿಸಿದ್ದಂತ ಶಿವಕುಮಾರ್ ಹಾಗೂ ಚೈತ್ರ ಅವರನ್ನು ಒಟ್ಟಿಗೆ ಇರೋದಕ್ಕೆ ಮನವೊಲಿಸಲಾಗಿತ್ತು. ಅಂತಿಮವಾಗಿ ಶಿವಕುಮಾರ್ ಒಟ್ಟಿಗೆ ಇರುತ್ತೇವೆ. ಇನ್ಮುಂದೆ ಪತ್ನಿ ಚೈತ್ರಾಳನ್ನು ಹಾಗೂ ಮಗುವನ್ನು ಚೆನ್ನಾಗಿ…
Author: main-admin
ಉಳ್ಳಾಲ: ಸಂಚಾರಿ ಠಾಣಾ ಎಎಸ್ ಐ ಸಿಟಿ ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿರುವ ಘಟನೆ ತಲಪಾಡಿಯಲ್ಲಿ ಇಂದು ಬೆಳಿಗ್ಗೆ ನಡೆದಿದ್ದು, ಕೃತ್ಯ ಖಂಡಿಸಿ ಬಸ್ ಸಿಬ್ಬಂದಿ ತಲಪಾಡಿ- ಸ್ಟೇಟ್ ಬ್ಯಾಂಕ್ ಚಲಿಸುವ ಬಸ್ ಬಂದ್ ನಡೆಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಉಷಾ ಹೆಸರಿನ ಸಿಟಿ ಬಸ್ ನಿರ್ವಾಹಕ ರಾಜು ಎಂಬಾತನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಜೆಪ್ಪು ಸಂಚಾರಿ ಠಾಣೆಯ ಎಎಸ್‌ಐ ಆಲ್ಬರ್ಟ್ ಲಸ್ರಾದೊ ಇಂದು ಬೆಳಿಗ್ಗೆ ತಲಪಾಡಿ ಬಳಿ ಸಿಟಿ ಬಸ್ಸುಗಳ ವಿರುದ್ಧ ಕೇಸುಗಳನ್ನು ಹಾಕುತ್ತಿದ್ದರು. ಈ ನಡುವೆ ನಿರ್ವಾಹಕನೋರ್ವನಿಗೆ ಹಲ್ಲೆ ನಡೆಸಿದ್ದಾರೆ. ಕೃತ್ಯ ಖಂಡಿಸಿದ ಬಸ್ ಸಿಬ್ಬಂದಿ ಬೆಳಗ್ಗಿನಿಂದ ಮಧ್ಯಾಹ್ನವರೆಗೂ ಬಸ್ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.ಕೆಲ ತಿಂಗಳುಗಳ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದ ಎಎಸ್‌ಐ ಆಲ್ಬರ್ಟ್ ಲಸ್ರಾದೋ ತೊಕ್ಕೊಟ್ಟು ಫ್ಲೈಓವರಿನಡಿ ಕಾರೊಂದರಲ್ಲಿ ಸ್ಟಿಕರ್ ಇರುವುದರ ವಿರುದ್ಧ ದಂಡ ಹಾಕಿದ್ದರು. ಆದರೆ ಕಾರಿನಲ್ಲಿ ಸ್ವಾಮಿ ಕೊರಗಜ್ಜ ಸ್ಟಿಕರ್ ಇದ್ದು, ಇದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಕಾರು ಮಾಲೀಕ ಸೇರಿದಂತೆ ಹಿಂದು ಸಂಘಟನೆ ಕಾರ್ಯಕರ್ತರು ತೊಕ್ಕೊಟ್ಟು ಜಂಕ್ಷನ್ನಿನಲ್ಲೇ ಪ್ರತಿಭಟನೆ…
ಬೆಂಗಳೂರು : ವಿಶ್ವ ಅಂಗಾಂಗ ದಾನ ದಿನಾಚರಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರು ಸ್ವತಃ ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡ ಬಳಿಕ ಮಾತನಾಡಿದ ಸಿಎಂ ಬೊಮ್ಮಾಯಿ, ನಾವು ಸಾವನ್ನಪ್ಪಿದ ಬಳಿಕವೂ ಎಂಟು ಮಂದಿ ಜನರಿಗೆ ಬದುಕು ಕಲ್ಪಿಸಿಕೊಡಲು ಅಂಗಾಂಗ ದಾನದ ಮೂಲಕ ಸಾಧ್ಯ. ಆ ಮೂಲಕ ಸತ್ತ ಮೇಲೆಯೂ ಬದುಕಿರಬಹುದು. ಅಂಗಾಂಗ ದಾನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡಿ ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದರು.ಮಾನವ ಜನ್ಮ ಶ್ರೇಷ್ಠವಾದುದು. ಆ ಶ್ರೇಷ್ಠತೆಯನ್ನು ಉಳಿಸುವ ಕೆಲಸ ನಮ್ಮದಾಗಬೇಕು. ಸಾವಿನ ನಂತರವೂ ಬದುಕಬೇಕೆಂದರೆ ಅಂಗಾಂಗಗಳನ್ನು ದಾನ ಮಾಡಬೇಕು. ಈ ನಿಟ್ಟಿನಲ್ಲಿ ಯುವಜನತೆ ಮಹತ್ವದ ಹೆಜ್ಜೆ ಇಡಬೇಕು ಎಂದು ತಿಳಿಸಿದರು.
ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇದೆ. ಹೀಗಾಗಿ ಇನ್ನೇನು 75ನೇ ಸ್ವಾತಂತ್ರ್ಯ ದಿನಾಚರಣೆ ಹತ್ರ ಬರಲಿದೆ. ಈ ವೇಳೆ ಬೃಹತ್ ಸಭೆ-ಸಮಾರಂಭ ಆಯೋಜಿಸದಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಸ್ವಾತಂತ್ರ್ಯ ದಿನಾಚರಣೆ ಸಭೆ-ಸಮಾರಂಭಗಳಲ್ಲಿ ಹೆಚ್ಚಿನ ಜನಸಂದಣಿಗೆ ಅವಕಾಶ ನೀಡಬೇಡಿ. ಕಾರ್ಯಕ್ರಮಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸೂಚನೆ ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿ ಜಿಲ್ಲೆಯ ಪ್ರಮುಖ ಸ್ಥಳದಲ್ಲಿ ‘ಸ್ವಚ್ಛ ಭಾರತ್’ ಅಭಿಯಾನ ಕೈಗೊಳ್ಳಿ. ತಿಂಗಳ ಅವಧಿಯ ಅಭಿಯಾನ ಕೈಗೊಂಡು, ನಾಗರಿಕರು ಸ್ವಯಂಪ್ರೇರಿತರಾಗಿ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲು ತಿಳಿಸಿದೆ.
ಕೊಯಿಕ್ಕೋಡ್: ಪೊಲೀಸ್ ಠಾಣೆಯ ಒಳಗೆ ಸಬ್ ಇನ್ಸ್ಪೆಕ್ಟರ್ ಒಬ್ಬರು ಕುಸಿದು ಬಿದ್ದು ಸಾವಿಗೀಡಾಗಿರುವ ಘಟನೆ ಕೇರಳದ ಥಾಮರಸ್ಸೆರೆ ಠಾಣೆಯಲ್ಲಿ ನಡೆದಿದೆ. ಸನೋಜ್ (37) ಮೃತ ಸಬ್ ಇನ್ಸ್ಪೆಕ್ಟರ್. ಕರ್ತವ್ಯ ನಿಮಿತ್ತ ಪೊಲೀಸ್ ಠಾಣೆಗೆ ಆಗಮಿಸಿದ ಸನೋಜ್, ಠಾಣೆಯ ಒಳಗೆ ಕಾಲಿಡುತ್ತಿದ್ದಂತೆಯೇ ಎದೆ ನೋವಿನಿಂದಾಗಿ ಎದೆ ಹಿಡಿದುಕೊಂಡು ಕುಸಿದು ಬಿದ್ದರು. ಠಾಣೆಯಲ್ಲಿ ಸಿಬ್ಬಂದಿ ಸನೋಜ್ ಕುಸಿದು ಬಿದ್ದಿದ್ದನ್ನು ನೋಡಿ, ತಕ್ಷಣ ಅವರನ್ನು ಕೊಯಿಕ್ಕೋಡ್ ಮೆಡಿಕಲ್ ಕಾಲೇಜು ಹಾಸ್ಪಿಟಲ್ಗೆ ಚಿಕಿತ್ಸೆಗೆಂದು ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸನೋಜ್ ಕೊನೆಯುಸಿರೆಳೆದಿದ್ದಾರೆ. ಸನೋಜ್ ಸಾವಿನ ಸುದ್ದಿ ಕೇಳಿ ಅವರ ಕುಟುಂಬಕ್ಕೆ ಆಘಾತವಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸಹೋದ್ಯೋಗಿಯೊಬ್ಬರನ್ನು ಕಳೆದುಕೊಂಡ ಸಿಬ್ಬಂದಿ ಸಹ ಕಂಬನಿ ಮಿಡಿದಿದ್ದಾರೆ.
ಮಂಗಳೂರು : ರಕ್ಷಾಬಂಧನ ಕಟ್ಟಿಕೊಂಡು ಬಂದಿದ್ದ ವಿಧ್ಯಾರ್ಥಿಗಳ ಕೈಯಲ್ಲಿರುವ ರಕ್ಷಾ ಬಂಧನವನ್ನುಶಿಕ್ಷಕರು ತುಂಡರಿಸಿ ಹಾಕಿದ ಘಟನೆ ಮಂಗಳೂರಿನ ಕಾಟಿಪಳ್ಳದಲ್ಲಿರುವ ಚರ್ಚ್ ಶಾಲೆಯೊಂದರಲ್ಲಿ ನಡೆದಿದ್ದು, ವಿವಾದಕ್ಕೆ ಕಾರಣವಾಗಿದೆ. ಹಿಂದೂ ಸಮುದಾಯದ ಈ ಆಚರಣೆಗೆ ಅವಮಾನ ಮಾಡಿದ ಚರ್ಚ್ ಶಾಲೆಯ ವಿರುದ್ಧ ಪೋಷಕರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಶಾಲೆಯ ಮುಂದೆ ಜಮಾಯಿಸಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಘಟನೆ ನಡೆದಿತ್ತು. ಹಿಂದೂ ಸಂಘಟನೆಯ ಪ್ರಮುಖರು ಕೂಡ ಶಾಲೆಯ ವರ್ತನೆಯ ಬಗ್ಗೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪೋಷಕರು- ಹಿಂದೂ ಸಮಾಜದ ಪ್ರಮುಖರು ಶಾಲೆಗೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಮಧ್ಯಪ್ರವೇಶಿಸಿದರು. ಶಾಲಾ ಆಡಳಿತ ಮಂಡಳಿ ಘಟನೆಯ ಕುರಿತಂತೆ ಕ್ಷಮೆ ಕೇಳಿದ್ದು, ಪ್ರಕರಣ ಸುಖಾಂತ್ಯವಾಗಿದೆ. ಬಳಿಕ ಶಾಲೆಯಲ್ಲಿ ಶಾಲೆಯ ಪ್ರಾಶುಂ ಪಾಲರು ಮಾತನಾಡಿ ನನಗೆ ಅರಿವಿಲ್ಲದೇ ಈ ಘಟನೆ ಸಂಭವಿಸಿದೆ. ನಮ್ಮ ಶಾಲೆಯಲ್ಲಿ ತಾವುದೇ ತಾರತಮ್ಯವಿಲ್ಲ. ಸಮಾರಸ್ಯತೆಯನ್ನು ಮೂಡಿಸುವ ಕೆಲಸ ಮಾಡುತ್ತೇವೆ. ತಿಳಿಯದೆ ಶಿಕ್ಷಕಿಯೊಬ್ಬರು ಹೀಗೆ ಮಾಡಿರಬೇಕು. ಕೂಡಲೇ ಶಿಕ್ಷಕಿಯಿಂದಲೇ ಕ್ಷಮೇ ಯಾಚಿಸಲು ತಿಳಿಸಿದ್ದಾರೆ. ಬಳಿಕ ಶಿಕ್ಷಕಿ ಪೋಷಕರ ಎದುರೇ…
ಬೆಳ್ತಂಗಡಿ: ಅನ್ಯಕೋಮಿನ ಜೋಡಿಯನ್ನು ಹಿಂದೂ ಕಾರ್ಯಕರ್ತರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬೆಳ್ತಂಗಡಿಯ ಕಾಪಿನಬಾಗಿಲು ಎಂಬಲ್ಲಿ ನಡೆದಿದೆ. ಗದಗ ಮೂಲದ ರಫೀಕ್(21) ಎಂಬಾತ ಹಿಂದೂ ಯುವತಿಯನ್ನು ಧರ್ಮಸ್ಥಳಕ್ಕೆ ಕರೆ ತಂದಿದ್ದು, ಖಾಸಗಿ ಲಾಡ್ಜ್‌ಗೆ ರೂಮ್ ಬುಕ್ಕಿಂಗ್ ಗಾಗಿ ಬಂದಿದ್ದಾರೆ ಎನ್ನಲಾಗಿದೆ. ನವ ವಿವಾಹಿತ ಅನ್ಯಕೋಮಿನ ಜೋಡಿ ಎಂದು ತಿಳಿಯುತ್ತಲೇ ಲಾಡ್ಜ್ ಸಿಬ್ಬಂದಿ ರೂಮ್ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದ್ದು, ತಕ್ಷಣ ಅವರಿಬ್ಬರು ಅಲ್ಲಿಂದ ಬೆಂಗಳೂರು ಕಡೆಗೆ ತೆರಳಲು ಬಸ್ ಹತ್ತಿದ್ದು, ಈ ಬಗ್ಗೆ ವಿಷಯ ತಿಳಿದ ಕಾರ್ಯಕರ್ತರು ಕೊಕ್ಕಡದಲ್ಲಿ ಅಡ್ಡಗಟ್ಟಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ತದನಂತರ ಅನ್ಯಕೋಮಿನ ಜೋಡಿಯನ್ನು ಕಾರ್ಯಕರ್ತರು ನೆಲ್ಯಾಡಿ ಪೊಲೀಸರಿಗೆ ಒಪ್ಪಿಸಿದ್ದು, ಯುವತಿಯು ವಿದ್ಯಾಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು ಎನ್ನಲಾಗುತ್ತಿದೆ. ಜೋಡಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಬೆಳ್ತಂಗಡಿ: ಅನ್ಯ ಕೋಮಿನ ಜೋಡಿಯನ್ನು ತಡೆದು ಹಿಂದೂ ಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಗದಗ ಮೂಲದ ರಫೀಕ್ (21)ಎಂಬಾತ ಗದಗ ಮೂಲದ ಹಿಂದೂ ಯುವತಿಯನ್ನು ಧರ್ಮಸ್ಥಳಕ್ಕೆ ಕರೆ ತಂದಿದ್ದು ಖಾಸಗಿ ಲಾಡ್ಜ್ ಬುಕ್ಕಿಂಗ್ ಗಾಗಿ ಬಂದಿರುತ್ತಾರೆ ಎನ್ನಲಾಗಿದೆ. ಅನ್ಯಮತೀಯ ಜೋಡಿ ಎಂದು ತಿಳಿದ ಕೂಡಲೆ ಲಾಡ್ಜ್ ಸಿಬ್ಬಂದಿಯು, ರೂಮ್ ನೀಡಲು ನಿರಾಕರಿಸಿದ್ದಾರೆ. ಆಗ ಅವರು ತಕ್ಷಣ ಅಲ್ಲಿಂದ ಮರಳಿ ಬೆಂಗಳೂರು ಕಡೆಗೆ ತೆರಳಲು ಬಸ್ ಹತ್ತಿದ್ದರು. ಇದರಿಂದ ಕೊಕ್ಕಡದಲ್ಲಿ ಸುದ್ದಿ ತಿಳಿದ ಹಿಂದೂ ಕಾರ್ಯಕರ್ತರು ಬಸ್ ಅಡ್ಡಗಟ್ಟಿದ್ದಾರೆ ಎಂದು ತಿಳಿದು ಬಂದಿದೆ. ನಂತರ ಜೋಡಿಯನ್ನು ನೆಲ್ಯಾಡಿ ಪೋಲಿಸರಿಗೆ ಒಪ್ಪಿಸಿದ್ದಾರೆ. ಯುವತಿಯು ಒಂದು ವಿದ್ಯಾ ಸಂಸ್ಥೆಯಲ್ಲಿ ಲೆಕ್ಚರ್ ಎಂದು ವಿಚಾರಿಸಿದಾಗ ತಿಳಿದು ಬಂದಿದೆ.
ಉಡುಪಿ : ಈ ಹಿಂದಿನ ವರ್ಷಗಳಲ್ಲಿ ಸ್ವಾತಂತ್ಯೋತ್ಸವದಂದು ನಡೆದಂತೆ ಈ ಬಾರಿಯೂ ರಿಕ್ಷಾ, ಬಸ್, ಟೆಂಪೋ, ಬೈಕ್ ಇತ್ಯಾದಿಗಳಿಗೆ ರಾಷ್ಟ್ರಧ್ವಜ ಕಟ್ಟಿಕೊಂಡು ರ್ಯಾಲಿ ಮಾಡಲು ಅವಕಾಶವಿದೆ. ಆದರೆ ರಾಷ್ಟ್ರಧ್ವಜಕ್ಕೆ ಸ್ವಲ್ಪವೂ ಅವಮಾನ ಆಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೂಚನೆ ನೀಡಿದ್ದಾರೆ. ಈ ವಿಚಾರವಾಗಿ ಮಾಹಿತಿ ನೀಡಿದ ಅವರು, ಹರ್ ಘರ್ ತಿರಂಗಾ ಕಾರ್ಯಕ್ರಮವು ಆ. 13ರಿಂದ 15ರ ವರೆಗೆ ನಡೆಯಲಿದೆ. ಸ್ವಾತಂತ್ರೋತ್ಸವದ ಧ್ವಜಾರೋಹಣವು ಆ. 15ರಂದು ಎಲ್ಲ ಕಡೆಯೂ ನಡೆಯಲಿದೆ. ಸರಕಾರಿ ಕಚೇರಿ, ಶಾಲೆ, ಆಸ್ಪತ್ರೆ ಸಹಿತ ವಿವಿಧ ಕಡೆಗಳಲ್ಲಿ ಸೂರ್ಯೋದಯದ ಅನಂತರ ಧ್ವಜಾರೋಹಣ ನಡೆದು, ಸೂರ್ಯಾಸ್ತದ ಮೊದಲು ಧ್ವಜವನ್ನು ಕೆಳಗೆ ಇಳಿಸಲಾಗುತ್ತದೆ. ಆದರೆ ಈ ವರ್ಷಕ್ಕೆ ಅನ್ವಯವಾಗುವಂತೆ ಮೂರು ದಿನ ಹರ್ ಘರ್ ತಿರಂಗಾ ನಡೆಯುತ್ತಿರುವುದರಿಂದ ಆ. 13ರಿಂದ 15ರ ವರೆಗೆ ಮನೆ, ಕಟ್ಟಡ ಮೊದಲಾದ ಸ್ಥಳಗಳಲ್ಲಿ ರಾತ್ರಿಯೂ ಧ್ವಜಾರೋಹಣ ಇರಲಿದೆ. ಹಾಗೂ ಅಮೃತ ಸರೋವರವಾಗಿ ಅಭಿವೃದ್ಧಿಪಡಿಸಿರುವ ಕೆರೆಯ ಆವರಣಗಳಲ್ಲೂ ಧ್ವಜಾರೋಹಣ ನಡೆಯಲಿದೆ ಎಂದು ಹೇಳಿದರು.…
ಮಂಗಳೂರು:: ಅಪರಿಚಿತ ವಾಹನವೊಂದು ರಾಷ್ಟ್ರೀಯ ಹೆದ್ದಾರಿ 66 ರ ಜೆಪ್ಪಿನಮೊಗರು ಬಳಿ ಹುಲ್ಲುಗಳನ್ನು ಕಟಾವು ನಡೆಸುತ್ತಿದ್ದ ಇಬ್ಬರು ಕಾರ್ಮಿಕರಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಾಳು ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಹಾರ ಜಾಮೂಲ್ ನಿವಾಸಿ ವಿಕ್ಕಿ ಖಾನ್ (23) ಮೃತ ಕಾರ್ಮಿಕ. ಗೋಪಾಲ್ ಪೂಜಾರಿ ಗಾಯಗೊಂಡವರು. ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಹೆದ್ದಾರಿ ಬಳಿಯ ಹುಲ್ಲುಗಳನ್ನು ಕಟಾವು ನಡೆಸುತ್ತಿದ್ದಾಗ, ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ವಾಹನ ಢಿಕ್ಕಿ ಹೊಡೆದಿದೆ. ಪಿಕಪ್ ವಾಹನದ ಮೇಲೆ ಸಂಶಯ ವ್ಯಕ್ತಪಡಿಸಿರುವ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ನಾಗುರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.