ಬೆಳ್ತಂಗಡಿ: ಯುವಕನೊಬ್ಬನನ್ನು ಕಾರಿನಲ್ಲಿ ಬಂದ ತಂಡ ಬಲವಂತವಾಗಿ ಶಾಲೆಯೊಂದಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ ಘಟನೆ ಅಳದಂಗಡಿಯ ಕೆದ್ದು ಶಾಲೆ ಬಳಿ ನಡೆದಿದೆ. ಲಾಯಿಲ ಅಂಕಾಜೆ ನಿವಾಸಿ ನಿಶೇತ್ (23) ಹಲ್ಲೆಗೆ ಒಳಗಾದ ಯುವಕ. ಈತನನ್ನುಬೊಲೆರೋ ವಾಹನಲ್ಲಿ ಬಂದ ಸುಮಾರು 8 ಮಂದಿಯ ತಂಡ ಬಲವಂತವಾಗಿ ಎಳೆದೊಯ್ದು ಮಾರಣಾಂತಿಕ ಹಲ್ಲೆ ಮಾಡಿ, ಮೊಬೈಲ್ ಫೋನ್ ಮತ್ತು ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ದೂರು ದಾಖಲಾಗಿದೆ. ಯುವತಿಯ ವಿಚಾರಕ್ಕೆ ಈ ಹಲ್ಲೆ ನಡೆದಿದೆ ಎಂದು ಹೇಳಲಾಗಿದೆ. ಘಟನೆ ಬಗ್ಗೆ ವೇಣೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಐದು ಮಂದಿಯನ್ನು ಬಂಧಿಸಿದ್ದಾರೆ
Author: main-admin
ಮಂಗಳೂರು: ಈಜಲು ಹೋದ ಯುವಕನೋರ್ವ ಕಲ್ಲಿನ ಕೋರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ಮಲ್ಲೂರು ಸಮೀಪದ ಉಳಾಯಿಬೆಟ್ಟು ಬದ್ರಿಯ ನಗರದಲ್ಲಿ ನಡೆದಿದೆ. ಜೋಕಟ್ಟೆ ನಿವಾಸಿ ಆದಂ ಎಂಬವರ ಪುತ್ರ ಮುಹಮ್ಮದ್ ಶಿಯಾಝ್ (19) ಮೃತಪಟ್ಟ ದುರ್ದೈವಿ ಯುವಕ. ರವಿವಾರ ಬೆಳಗ್ಗೆ ಶಿಯಾಝ್ ಉಳಾಯಿಬೆಟ್ಟುವಿನ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದರು. ಅಲ್ಲಿದ್ದ ಅವರು ಸಂಜೆಯ ವೇಳೆ ತಮ್ಮ ಸ್ನೇಹಿತರೊಂದಿಗೆ ಬದ್ರಿಯಾ ನಗರದ ಪೆರ್ಮುಂಕಿ ಕಾಯರ ಪದವಿನಲ್ಲಿರುವ ಕಲ್ಲಿನ ಕೋರೆಗೆ ಈಜಲು ತೆರಳಿದ್ದಾರೆ. ಆದರೆ ಕೋರೆಯ ಆಳ ತಿಳಿಯದೆ ಈಜಲು ಮುಂದಾಗಿದ್ದು, ಈ ವೇಳೆ ಕೋರೆಯಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಮಧುಮೇಹ ಹಾಗೂ ರಕ್ತದೊತ್ತಡ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಜನರು ವಿವಿಧ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಇದೀಗ ಹೊಸದೊಂದು ಅಧ್ಯಯನ ವರದಿ ಬಹಿರಂಗವಾಗಿದ್ದು, ಗ್ರೀನ್ ಟೀ ಕುಡಿಯುವುದರಿಂದ ಮಧುಮೇಹ ಕಡಿಮೆ ಮಾಡಲು ಸಹ ಪ್ರಯೋಜನಕಾರಿಯಾಗಿದೆ ಎಂಬ ಅಂಶ ಗಮನಾರ್ಹವಾಗಿದೆ. ಟೈಪ್ 2 ಡಯಾಬಿಟಿಸ್ ಜಾಗತಿಕ ಸಾರ್ವಜನಿಕ ಆರೋಗ್ಯ ಸವಾಲಾಗಿದೆ ಮತ್ತು 2045 ರ ವೇಳೆಗೆ 693 ಮಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಅಂದಾಜಿಸಲಾಗಿದೆ. ಇದು ಹೃದಯಾಘಾತ, ಪಾರ್ಶ್ವವಾಯು, ಕುರುಡುತನ, ಮೂತ್ರಪಿಂಡ ವೈಫಲ್ಯ ಮತ್ತಿತರ ಪ್ರತಿಕೂಲ ಆರೋಗ್ಯ ಪರಿಣಾಮ ಬೀರುವುದು. ನ್ಯೂಟ್ರಿಷನ್ ಮತ್ತು ಮೆಟಾಬಾಲಿಸಮ್ ಜರ್ನಲ್ ನಲ್ಲಿ ಪ್ರಕಟವಾದ 27 ಪ್ರಯೋಗಗಳ ಮೆಟಾ- ವಿಶ್ಲೇಷಣೆಯ ಆಧಾರದ ಮೇಲೆ ಅಧ್ಯಯನವು ಗ್ರೀನ್ ಟೀ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಸಾಂದ್ರತೆಯ ಮೇಲೆ ಅನುಕೂಲಕರ ಪರಿಣಾಮವನ್ನು ಬೀರುತ್ತದೆ ಎಂದು ತೋರಿಸಿದೆ. ಚೀನಾದ ಹುವಾಜಾಂಗ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ತಂಡವು ಅಧ್ಯಯನಕ್ಕೆ ಒಳಪಟ್ಟ 2,194 ಮಂದಿಯ ಮಾಹಿತಿ ಮುಂದಿಟ್ಟುಕೊಂಡು ಫಲಿತಾಂಶಗಳನ್ನು ಪರಿಶೀಲಿಸಿದೆ. ಪೂಲ್ ಮಾಡಿದ ಫಲಿತಾಂಶಗಳು ಹಸಿರು…
ಮೂಡಿಗೆರೆ: ಪುತ್ತೂರು ಮೂಲದ ಕಾರು ಮೂಡಿಗೆರೆಯಲ್ಲಿ ಅಪಘಾತವಾದ ಬಗ್ಗೆ ವದಿಯಾಗಿದೆ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದ ಪ್ರವಾಸಿಗರ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕೊಟ್ಟಿಗೆಹಾರ ಮತ್ತು ಬಣಕಲ್ ಹೆದ್ದಾರಿಯ ಹೆಬ್ಬರಿಗೆ ಬಳಿ ನಡೆದಿದೆ. ಪುತ್ತೂರಿನ ನಿವಾಸಿಗಳು ಪ್ರವಾಸಕ್ಕೆಂದು ಆಗಮಿಸಿದ್ದರು ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಕಾರಿನಲಿದ್ದ ಆರು ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು: ವಾರದಲ್ಲಿ ಮೂರು ದಿನ ಮಂಗಳೂರು -ಬೆಂಗಳೂರು ವಿಶೇಷ ರಾತ್ರಿ ರೈಲು ಸೇವೆ ಆರಂಭಿಸಲಾಗುವುದು. ಜುಲೈ 27 ರಿಂದ ಆಗಸ್ಟ್ 31 ರವರೆಗೆ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಮಂಗಳೂರಿನಿಂದ ಬೆಂಗಳೂರು ನಗರಕ್ಕೆ ರೈಲು ಸಂಚರಿಸಲಿದೆ. ಜುಲೈ 26 ರಿಂದ ಆಗಸ್ಟ್ 30ರವರೆಗೆ ಪ್ರತಿ ಭಾನುವಾರ, ಮಂಗಳವಾರ, ಗುರುವಾರ ಬೆಂಗಳೂರಿನಿಂದ ಮಂಗಳೂರಿಗೆ ರೈಲು ಸಂಚರಿಸಲಿದೆ. ಭಾರಿ ಮಳೆಯ ಕಾರಣ ಬೆಂಗಳೂರು -ಮಂಗಳೂರು ಹೆದ್ದಾರಿ ಸಂಚಾರ ದುಸ್ತರವಾಗಿರುವ ಹಿನ್ನೆಲೆಯಲ್ಲಿ ರೈಲು ಸಂಚಾರಕ್ಕೆ ಬೇಡಿಕೆ ಬಂದಿದೆ. ಪ್ರಯಾಣಿಕರ ದಟ್ಟಣೆ ನಿರ್ವಹಿಸಲು ಅನುಕೂಲವಾಗುವಂತೆ, ಮಂಗಳೂರು ಸೆಂಟ್ರಲ್ ಮತ್ತು ಬೆಂಗಳೂರು ಸಿಟಿ ಜಂಕ್ಷನ್ ನಡುವೆ ಮೈಸೂರು ಮಾರ್ಗದಲ್ಲಿ ಜನವರಿ 26ರಿಂದ ಆಗಸ್ಟ್ 31ರವರೆಗೆ ವಾರದಲ್ಲಿ ಮೂರು ದಿನ ವಿಶೇಷ ರಾತ್ರಿ ರೈಲು ಸೇವೆಗೆ ರೈಲ್ವೆ ಮಂಡಳಿಯಿಂದ ಅನುಮೋದನೆ ನೀಡಲಾಗಿದೆ. ಭಾರಿ ಮಳೆ ಮತ್ತು ಭೂಕುಸಿತದ ಕಾರಣ ರಸ್ತೆ ಸಂಚಾರಕ್ಕೆ ತೊಂದರೆಯಾಗಿರುವುದರಿಂದ ಹೆಚ್ಚುವರಿ ರೈಲು ಒದಗಿಸಲು ಪಶ್ಚಿಮ ಕರಾವಳಿ ರೈಲು ಯಾತ್ರಾ ಅಭಿವೃದ್ಧಿ ಸಮಿತಿ ಸಂಸದ ನಳಿನ್ ಕುಮಾರ್ ಕಟೀಲ್…
ಮಂಗಳೂರು: ನಗರ ಹೊರವಲಯದ ಪಣಂಬೂರಿನಲ್ಲಿರುವ MCF ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆಯಾದ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರವೂರಿನ ಅಣೆಕಟ್ಟು ಬಳಿ ಆತನ ಸ್ಕೂಟರ್ ಪತ್ತೆಯಾಗಿದೆ. ನಾಪತ್ತೆಯಾದವನನ್ನು ಆದಿತ್ಯ ವಿ ಅಲಗೂರು(27) ಎಂದು ಗುರುತಿಸಲಾಗಿದೆ. ಘಟನೆ ವಿವರ ಆದಿತ್ಯ ವಿ ಅಲಗೂರು ಮೂಲತ: ಯಾದಗಿರಿಯವನಾಗಿದ್ದು, ಪಣಂಬೂರಿನಲ್ಲಿರುವ MCF ಫ್ಯಾಕ್ಟರಿಯಲ್ಲಿ ಪ್ರೊಡಕ್ಷನ್ ಡಿಪಾರ್ಟ್‌ಮೆಂಟ್‌ನಲ್ಲಿ ಉದ್ಯೋಗಿಯಾಗಿದ್ದನು. ಜು.16 ರಂದು ಕೆಲಸಕ್ಕೆ ಹೋದ ಈತ ರಾತ್ರಿ 7.20 ರ ಸುಮಾರಿಗೆ ಮನೆಗೆ ಬರಲು ಸ್ವಲ್ಪ ತಡವಾಗುತ್ತದೆಂದು ಮನೆಯವರಿಗೆ ತಿಳಿಸಿದ್ದನು. ಅದಾದ ನಂತರ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದಾಗ ಆತನ ಸ್ಕೂಟರ್ ಮಂಗಳೂರು ಹೊರವಲಯದ ಮರವೂರು ಆಣೆಕಟ್ಟಿನಲ್ಲಿ ಪತ್ತೆಯಾಗಿದ್ದು, ವ್ಯಕ್ತಿ ಪತ್ತೆಯಾಗಿಲ್ಲ.
ಬಜ್ಪೆ:ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 9 ವರ್ಷಗಳ ಬಳಿಕ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೌಶದ್ ಬಂಧಿತ ಆರೋಪಿ.ಈತ 2013ರ ಮಾ. 22ರಂದು ಮಹಿಳೆಯ ಚೂಡಿದಾರದ ಶಾಲನ್ನು ಎಳೆದು ಮಾನಭಂಗವನ್ನುಂಟು ಮಾಡಿದ್ದು, ಬಳಿಕ ಕೋರ್ಟಿನಿಂದ ಕೇಸ್ ಅನ್ನು ಹಿಂದಕ್ಕೆ ತೆಗೆಯಲು ಕೊಲೆ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ.ಈತವಿಳಾಸ ಬದಲಿಸಿ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ವಾಸ ಮಾಡಿಕೊಂಡಿದ್ದ ಎನ್ನುವುದು ತಿಳಿದು ಬಂದಿದ್ದು, ಇದೀಗ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಿಟ್ಲ: ಆಟೋ ರಿಕ್ಷಾಕ್ಕೆ ಹಿಂದಿನಿಂದ ಬಂದ ಲಾರಿವೊಂದು ಡಿಕ್ಕಿ ಹೊಡೆದ ಘಟನೆ ಇಂದು ಮಾಣಿ ಸಮೀಪದ ಸೂರಿಕುಮೇರು ರಾಜ್ ಕಮಲ್ ಸಭಾಭವನ ಬಳಿ ನಡೆದಿದೆ. ಮಂಗಳೂರು ಮೂಲದ ಆಟೋ ರಿಕ್ಷಾವೊಂದು ಮಾಣಿಯಿಂದ ಕಲ್ಲಡ್ಕ ಕಡೆಗೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಿಂದಾಗಿ ಆಟೋ ರಿಕ್ಷಾ ಚಾಲಕ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಕೆಲ ಕಾಲ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತವಾಗಿತ್ತು.
ಬಂಟ್ವಾಳ; ಬಿಸಿಎಂ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಹೊಡೆದಾಡಿಕೊಂಡ ಘಟನೆ ವಾಮದಪದವಿನಲ್ಲಿರುವ ಬಿಸಿಎಂ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ಅದೇ ವಿದ್ಯಾರ್ಥಿ ನಿಲಯದ ಪದವಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ. ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ವಾಮದಪದವು ಕಾಲೇಜಿನ ಪ್ರಾಂಶುಪಾಲರು ದೂರು ನೀಡಿದ್ದಾರೆ. ವಿದ್ಯಾರ್ಥಿ ನಿಲಯದಲ್ಲಿ ವಾಮದಪದವು ಪದವಿ ಪೂರ್ವ ಕಾಲೇಜಿನ 14 ವಿದ್ಯಾರ್ಥಿಗಳು ವಾಸವಿದ್ದರು.ಇವರಿಗೆ ಪದವಿ ವಿದ್ಯಾರ್ಥಿಗಳಾದ ಶರತ್ ಎಸ್, ಅಭಿಷೇಕ್, ಸುದೀಪ್, ರಾಕೇಶ್ ಹಾಗೂ ಸಂಗಡಿಗರು ಸೇರಿ ಬೆಲ್ಟ್, ವಿಕೆಟ್ ಗಳಿಂದ ಹಲ್ಲೆ ಮಾಡಿದ್ದಾರೆಂದು ದೂರು ದಾಖಲಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡ ವಿದ್ಯಾರ್ಥಿಗಳಿಗೆ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ.
ಮಂಗಳೂರು: ಮಂಗಳೂರು ಹೊರವಲಯದ ಮಳಲಿ ಪೇಟೆ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆ. 1ರಂದು ಆದೇಶ ನೀಡಲಿದೆ. ಮಸೀದಿ ಕಟ್ಟಡದಲ್ಲಿ ದೇವಸ್ಥಾನ ಹೋಲುವ ರಚನೆ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಕೋರ್ಟ್ ಕಮಿಷನರ್ ಮೂಲಕ ಸಮೀಕ್ಷೆ ನಡೆಸುವಂತೆ ಹಿಂದೂ ಸಂಘಟನೆ ಪರ ವಕೀಲರು ಮನವಿ ಮಾಡಿದ್ದರು. ಇದಕ್ಕೆ ಮಸೀದಿ ಪರ ವಕೀಲರು ಆಕ್ಷೇಪಿಸಿದ್ದರು. ವಕ್ಫ್ ಬೋರ್ಡ್ ಅಧೀನದಲ್ಲಿ ಇರುವುದರಿಂದ ಸರ್ವೇ ನಡೆಸಲು ಅವಕಾಶ ನೀಡದೆ ನವೀಕರಣ ಕಾಮಗಾರಿ ಮುಂದುವರಿಸಲು ಅವಕಾಶ ನೀಡಬೇಕು ಎಂದು ವಾದ ಮಂಡಿಸಿದ್ದರು. ಸಿವಿಲ್ ನ್ಯಾಯಾಲಯ ತೀರ್ಪು ಪ್ರಕಟಿಸದಂತೆ ಸ್ಥಳೀಯರಾದ ಮನೋಜ್ ಕುಮಾರ್, ಧನಂಜಯ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದ್ದ ಆದೇಶದ ಪ್ರತಿಯನ್ನು ಮಸೀದಿ ಪರ ವಕೀಲರು ಸಿವಿಲ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಆದೇಶದ ಪ್ರತಿ ಸ್ವೀಕರಿಸಿದ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯವು ತೀರ್ಪನ್ನು ಆ. 1ಕ್ಕೆ ನಿಗದಿಗೊಳಿಸಿದೆ.