ಉಡುಪಿಯ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪಿನಕೋಟೆ ಮಾಬುಕಳದ ಮಿಲನ ರೆಸಿಡೆನ್ಸಿ ಫ್ಲ್ಯಾಟ್‌ನಲ್ಲಿ ಮೂರು ವರ್ಷಗಳ ಹಿಂದೆ ನಡೆದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ನಾಲ್ಕನೇ ಆರೋಪಿಯನ್ನು ಬ್ರಹ್ಮಾವರ ಪೊಲೀಸರು ಉತ್ತರ ಪ್ರದೇಶದ ಲಕ್ನೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಉತ್ತರ ಪ್ರದೇಶದ ಗೋರಖ್ ಪುರ ನಿವಾಸಿ ಧರ್ಮೇಂದ್ರ ಕುಮಾರ್ ಸುಹಾನಿ (40) ಬಂಧಿತ ಆರೋಪಿ. ಈ ಹಿಂದೆ ಪ್ರಕರಣದ ಆರೋಪಿಗಳಾದ ವಿಶಾಲ ಗಾಣಿಗರ ಪತಿ ರಾಮಕೃಷ್ಣ ಗಾಣಿಗ ಹಾಗೂ ಸುಪಾರಿ ಕಿಲ್ಲರ್‌ಗಳಾದ ಗೋರಖ್ ಪುರದ ಸ್ವಾಮಿನಾಥನ್ ನಿಶಾದ್ ಮತ್ತು ರೋಹಿತ್ ರಾಣಾ ಪ್ರತಾಪ್ ನಿಶಾದ್ ಅವರನ್ನು ಬಂಧಿಸಲಾಗಿತ್ತು. ಧರ್ಮೇಂದ್ರ ಕುಮಾರ್, ಪ್ರಕರಣದ ಪ್ರಮುಖ ಆರೋಪಿ ರಾಮಕೃಷ್ಣ ಗಾಣಿಗ ಹಾಗೂ ಸುಪಾರಿ ಕಿಲ್ಲರ್ ಸ್ವಾಮಿನಾಥನ್ ನಿಶಾದ್‌ನಿಗೂ ಪರಿಚಯ ಮಾಡಿಸಿ ಕೊಲೆಗೆ ಸಹಕರಿಸಿದ್ದನು. ಈತನು ಪ್ರಕರಣ ದಾಖಲಾದ ವಿಚಾರ ತಿಳಿದು, 3 ವರ್ಷಗಳಿಂದ ದುಬೈಯಲ್ಲಿ ತಲೆಮರೆಸಿಕೊಂಡಿದ್ದನು. ಧರ್ಮೇಂದ್ರ ಫೆ.2ರಂದು ದುಬೈಯಿಂದ ಲಕ್ನೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಭಾರತಕ್ಕೆ ಬರುತ್ತಿರುವ…
Author: main-admin
ಬಂಟ್ವಾಳ : ಹಲ್ಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಮಾರು 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸಜೀಪ ಮುನ್ನೂರು ಗ್ರಾಮದ ನಂದಾವರ ನಿವಾಸಿ ಇಲಿಯಾಸ್ ಯಾನೆ ಇಲ್ಯಾಸ್ (50) ಬಂಧಿತ ಆರೋಪಿ. ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಪ್ರಕರಣದ ಆರೋಪಿಯಾಗಿದ್ದು, ಈತನ ಮೇಲೆ ಕಲಂ 341 , 504, 324,506 ಜೊತೆಗೆ 34 ಐಪಿಸಿ ಯಡಿಲ್ಲಿ ಪ್ರಕರಣ ದಾಖಲಾಗಿದ್ದು, ಸುಮಾರು 8 ವರ್ಷಗಳಿಂದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಈತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಾಲಿವುಡ್ ನಟಿ ಪೂನಂ ಪಾಂಡೆ ಸಾವಿನ ಸುದ್ದಿ ಅವರ ಅಭಿಮಾನಿಗಳ ಶಾಕ್ ಕೊಟ್ಟಿದ್ದಂತೂ ನಿಜ. ಆದರೆ ನಟಿಯ ಸತ್ತಿಲ್ಲ, ಬದುಕಿದ್ದಾಳೆ. ಹೌದು. ಈ ವಿಚಾರವನ್ನು ಸ್ವತಃ ಪೂನಂ ಪಾಂಡೆ ಹೇಳಿಕೊಂಡಿದ್ದಾರೆ. ತಾನು ಅಭಿಮಾನಿಗಳಿ ಶಾಕ್ ಕೊಡಲು ಹೀಗೆ ಮಾಡಿದೆ ನನ್ನನ್ನು ಕ್ಷಮಿಸಿ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಕ್ಷಮೆ ಕೇಳಿದ್ದಾಳೆ. ವಿಡಿಯೋದಲ್ಲಿ ನಟಿ ಹೇಳಿದ್ದೇನು?: ‘ಕ್ಷಮಿಸಿ, ನನ್ನ ಸಾವಿನಿಂದ ಬೇಸರದಲ್ಲಿದ್ದವರಿಗೆ ನಾನು ಕ್ಷಮೆ ಕೇಳುತ್ತೇನೆ. ನಾನು ಹಾಗೆ ಮಾಡಿದ್ದು ನಿಮಗೆಲ್ಲರಿಗೂ ಶಾಕ್ ಕೊಡುವುದಕ್ಕೆ ಮಾತ್ರ. ನಾನು ನನ್ನ ಸಾವನ್ನು ನಾನು ಫೇಕ್ ಮಾಡಿದೆ. ನನ್ನ ಉದ್ದೇಶ ನಿಮ್ಮೆಲ್ಲರನ್ನು ಶಾಕ್ ಮಾಡುವುದು ಮಾತ್ರ. ಗಂಭೀರವಾಗಿರುವ ವಿಚಾರದ ಬಗ್ಗೆ ಎಲ್ಲರಿಗೂ ಶಾಕ್ ಕೊಡಲು ಹೀಗೆ ಮಾಡಿದೆ. ನಾವು ಸೈಲೆಂಟಾಗಿ ಜೀವ ತೆಗೆಯುವ ಸರ್ವಿಕಲ್ ಕ್ಯಾನ್ಸರ್ ಬಗ್ಗೆ ಸಾಕಷ್ಟು ಮಾತನಾಡುತ್ತಿಲ್ಲ ಅಲ್ಲವೇ? ಆದರೆ ನನ್ನ ಸಾವು ಸರ್ವಿಕಲ್ ಕ್ಯಾನ್ಸರ್ ಬಗ್ಗೆ ನಿಮ್ಮನ್ನು ಚರ್ಚಿಸುವಂತೆ ಮಾಡಿದೆ’ ಎಂದು ಪೂನಂ ಪಾಂಡೆ ಹೇಳಿದ್ದಾರೆ. ಸರ್ವಿಕಲ್…
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ದೇವಾಲಯಗಳ ನಾಡು ಎಂದರೂ ತಪ್ಪಾಗದು. ಇಲ್ಲಿನ ಒಂದೊಂದು ಪುರಾತನ ದೇವಾಲಯಗಳು ಒಂದೊಂದು ಇತಿಹಾಸ ಹೊಂದಿದೆ. ಧಾರ್ಮಿಕ ಕ್ಷೇತ್ರದ ಭೇಟಿಗೆ ಬರುವ ಜನರಿಗೆ ಇಲ್ಲಿನ ಎಲ್ಲಾ ಪ್ರವಾಸೋದ್ಯಮ ತಾಣಗಳ ಪರಿಚಯವಾದರೆ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ ಉತ್ತಮವಾಗಿ ಬೆಳೆಯಬಹುದು ಎಂಬ ದೂರದೃಷ್ಟಿಯಿಂದ ಟಿವಿ ವಿಕ್ರಮದ ಸಂಸ್ಥಾಪಕರು ಹಾಗೂ ಪೋಸ್ಟ್‌ಕಾರ್ಡ್ ಮಾಧ್ಯಮದ ಮುಖ್ಯಸ್ಥರಾದ ಮಹೇಶ್ ವಿಕ್ರಮ್ ಹೆಗ್ಡೆಯವರು ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಮಹೇಶ್ ವಿಕ್ರಮ್ ಹೆಗ್ಡೆ ಯವರನ್ನು ಟ್ವಿಟರ್ ನಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಫಾಲೋ ಮಾಡುತ್ತಿದ್ದು, ಈ ಹಿಂದೆ ವಿಕ್ರಮ್ ಹೆಗ್ಡೆಯವರ ಒಂದು ಟ್ವೀಟ್‌ಗೆ ಸ್ವತಃ ಮೋದಿಯವರು ಪ್ರತಿಕ್ರಿಯೆ ಕೂಡ ನೀಡಿದ್ದರು. ಇದು ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ದೊಡ್ಡ ಸುದ್ಧಿ ಕೂಡ ಮಾಡಿತ್ತು. ಇದೀಗ ಮತ್ತೆ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಯ ಬಗ್ಗೆ ಪ್ರಧಾನಿಗಳ ಗಮನ ಸೆಳೆಯುವ ಪ್ರಯತ್ನ ಮಾಡಿರುವ ವಿಕ್ರಮ್ ಹೆಗ್ಡೆಯವರ ಪೋಸ್ಟ್‌ಗೆ ಭಾರೀ…
ಉಡುಪಿ : ಅಕ್ರಮವಾಗಿ ವೇಶ್ಯಾವಾಟಿಕೆ ದಂಧೆ ಸಂಬಂಧಿಸಿ ಮೂವರನ್ನು ಮಣಿಪಾಲ ಠಾಣೆಯ ಪೊಲೀಸರು ವಶಕ್ಕೆ ಪಡೆದ ಘಟನೆ ಫೆ.1 ರಂದು ನಡೆದಿದೆ. ಓರ್ವ ವ್ಯಕ್ತಿ ಮಹಿಳೆಯರನ್ನು ಪುಸಲಾಯಿಸಿ ಕರೆ ತಂದು ಅಕ್ರಮ ವೇಶ್ಯಾವಾಟಿಕೆಗೆ ಕಳುಹಿಸಿಕೊಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಸದ್ರಿ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ದಾಳಿ ನಡೆಸಿ ಆರೋಪಿ ಪವನ್ ಎಂಬವನನ್ನು ವಶಕ್ಕೆ ಪಡೆದಿದ್ದಾರೆ.ಆರೋಪಿ ಪವನ್ ಹೇಳಿಕೆಯಂತೆ ಉಡುಪಿ ತಾಲೂಕು ಬೊಮ್ಮರಬೆಟ್ಟು ಮನೆಗೆ ದಾಳಿ ನಡೆಸಿ ಆರೋಪಿ ಚೇತನ್ ಸಿ.ಬಿ. ಮತ್ತು ಆರೋಪಿ ಪಂಜು ಎಂಬವರನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಅಸಘಂಟಿತ ವಲಯದ ಕಾರ್ಮಿಕರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಇ-ಶ್ರಮ್ ವಯೋಮಿತಿ 70 ಕ್ಕೆ ವರ್ಷ ಏರಿಕೆಗೆ ನಿರ್ಧರಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸಚಿವ ಸಂತೋಷ್ ಲಾಡ್, ಇ-ಶ್ರಮ್ ಯೋಜನೆಯಲ್ಲಿ ಹೆಸರು ನೋಂದಾಯಿಸುವ ಅಸಂಘಟಿತ ಕಾರ್ಮಿಕರ ವಯೋಮಿತಿಯನ್ನು ೫೯ ವರ್ಷದಿಂದ 70 ವರ್ಷಕ್ಕೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ. ಸಾರಿಗೆ ವ್ಯಾಪ್ತಿಗೆ ಬರುವ ಆಟೊ ಚಾಲಕರು, ಟೈರ್ ಅಂಗಡಿಯವರು, ಮೆಕ್ಯಾನಿಕ್, ಗ್ಯಾರೇಜ್ ಮಾಲೀಕರು ಸೇರಿದಂತೆ ಸುಮಾರು 40 ಲಕ್ಷ ಮಂದಿ ಅಸಂಘಟಿತ ಕಾರ್ಮಿಕರನ್ನು ‘ಇ-ಶ್ರಮ್’ ಯೋಜನೆಯಡಿ ತರಲು ಚಿಂತಸಲಾಗಿದೆ ಎಂದು ಹೇಳಿದ್ದಾರೆ.
ಕೆಲವೊಂದು ಸಂದರ್ಭಗಳಲ್ಲಿ ಪೊಲೀಸರೇ ಅನಾಗರಿಕರಾಗಿ ನಡೆದುಕೊಳ್ಳುವುದು ವಿಪರ್ಯಾಸ. ಮಹಿಳಾ ಸಹೋದ್ಯೋಗಿ ಮೇಲೆ ಹಲ್ಲೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕದ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಅವರನ್ನು ತಮಿಳನಾಡಿನ ಈರೋಡ್ ಜಿಲ್ಲೆಯ ಗೋಬಿ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಗೋಬಿ ಪೊಲೀಸ್ ಠಾಣೆಯಲ್ಲಿ ಐಪಿಎಸ್ ಅಧಿಕಾರಿ ವಿರುದ್ಧ ಜಿಲ್ಲೆಯ ಮಹಿಳಾ ಪೊಲೀಸ್ ಒಬ್ಬರು ದೂರು ದಾಖಲು ಮಾಡಿದ್ದರಿಂದ ಐಪಿಎಸ್ ಅಧಿಕಾರಿಯನ್ನು ತಮಿಳುನಾಡು ಪೊಲೀಸರು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕರ್ನಾಟಕದ ಅರುಣ್ ರಂಗರಾಜನ್ ಬಂಧಿತ ಅಧಿಕಾರಿ ಎಂದು ಹೇಳಲಾಗುತ್ತಿದ್ದು, ದೂರು ನೀಡಿದ ಮಹಿಳೆ ಚಿಂಚೋಳಿ ತಾಲೂಕಿನ ಪೊಲೀಸ್ ಠಾಣೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಕೆಲವು ದಿನಗಳ ಹಿಂದೆ ಈ ಮಹಿಳೆ ಜತೆ ಐಪಿಎಸ್ ಅಧಿಕಾರಿ ಅರುಣ ರಂಗರಾಜನ್ ತಮಿ ಳುನಾಡಿನ ತಿರುಚ್ಚಿಗೆ ತೆರಳಿದ್ದರು. ಈ ವೇಳೆ ಅವರಿಬ್ಬರ ಮಧ್ಯೆ ಜಗಳವಾಗಿದೆ. ಸ್ಥಳೀಯ ಪೊಲೀಸರು ರಾಜಿ ಮಾಡಿ ಕಳಿಸಿದ್ದರು. ಕಲಬುರಗಿ ಮಹಿಳಾ ಪೊಲೀಸ್ ದೂರು ಬಳಿಕ…
ಮುಂಬೈ: ಮುಂಬೈ ಪೊಲೀಸ್ಅಧಿಕಾರಿ ಎನ್‌ಕೌಂಟರ್ ಸ್ಪೆಷಲಿಸ್ಟ್ ಖ್ಯಾತಿಯ ದಯಾ ನಾಯಕ್ ಅವರಿಗೆ ಸೀನಿಯರ್ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಮುಂಭಡ್ತಿ ನೀಡಲಾಗಿದೆ. ಭೂಗತ ಜಗತ್ತಿಗೆ ಸಿಂಹಸ್ವಪ್ನರಾಗಿದ್ದ ದಯಾ ನಾಯಕ್ ಅವರು ಪ್ರಸ್ತುತ ಮುಂಬೈಯ ಬಾಂದ್ರಾ ಕ್ರೈಂ ಬ್ರಾಂಚ್‌ನಲ್ಲಿ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇದೀಗ ಮುಂಬೈ ಕ್ರೈಂ ಬ್ರಾಂಚ್ ಸೀನಿಯರ್ ಇನ್ಸ್‌ಪೆಕ್ಟರ್ ಆಗಿ ಅಧಿಕಾರ ವಹಿಸಿದ್ದಾರೆ.ಕಾರ್ಕಳ ಸಮೀಪದ ಎಣ್ಣೆಹೊಳೆಯವರಾದ ದಯಾ ನಾಯಕ್ 1995ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು 2004ರ ವೇಳೆಗೆ ಮುಂಬೈ ಭೂಗತ ಲೋಕದ 85ಕ್ಕೂ ಹೆಚ್ಚು ಪಾತಕಿಗಳನ್ನು ಎನ್ ಕೌಂಟರಿನಲ್ಲಿ ಫಿನಿಶ್ ಮಾಡಿದ್ದರು. ಈ ಮೂಲಕ ಮುಂಬೈ ಜನತೆ, ಪ್ರಮುಖವಾಗಿ ಉದ್ಯಮಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದರು. ಮೂರು ವರ್ಷಗಳ ಕಾಲ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳದಲ್ಲಿ ಕರ್ತವ್ಯ ಸಲ್ಲಿಸಿದ್ದ ಅವರು ಸಮಾಜ ವಿರೋಧಿ ಕೃತ್ಯವೆಸಗುವವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು. ಡ್ರಗ್ಸ್‌ಗೆ ಪ್ರಕರಣಗಳಿಗೆ ಕಡಿವಾಣ ಹಾಕಿದ್ದರು.
ಉಳ್ಳಾಲ : ಉಳ್ಳಾಲದಿಂದ ಮೀನುಗಾರಿಕೆಗೆ ತೆರಳಿ ವಾಪಾಸ್ಸಾಗುತ್ತಿದ್ದ ಟ್ರ್ರಾಲ್ ಬೋಟೊಂದು ಶುಕ್ರವಾರ ನಸುಕಿನ ಜಾವ ಸಮುದ್ರದ ಮಧ್ಯದಲ್ಲಿದ್ದ ಕಲ್ಲಿಗೆ ಬಡಿದು ಮುಳುಗಿದ್ದು,ಅಲ್ಲೇ ಮೀನುಗಾರಿಕೆ ನಡೆಸುತ್ತಿದ್ದ ಎರಡು ಬೋಟ್‍ನ ಮೀನುಗಾರರು ಮುಳುಗುತ್ತಿದ್ದ ಬೋಟ್‍ನಲ್ಲಿದ್ದ ಐವರನ್ನು ರಕ್ಷಿಸಿದ್ದಾರೆ. ಮುಳುಗಡೆಯಾಗಿರುವ ಬೋಟ್‍ನಲ್ಲಿ ಮೀನು, ಬಲೆ ಸಮುದ್ರ ಪಾಲಾಗಿದ್ದು ಬೋಟ್‍ಗೂ ಹಾನಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಉಳ್ಳಾಲ ನಿವಾಸಿ ನಯನಾ ಪಿ.ಸುವರ್ಣ ಅವರಿಗೆ ಸೇರಿದ`ನವಾಮಿ – ಶಿವಾನಿ’ ಬೋಟ್ ದುರಂತಕ್ಕೀಡಾಗಿದ್ದು, ಬೋಟ್ ಚಲಾಯಿಸುತ್ತಿದ್ದ ನಯನಾ ಅವರ ಪತಿ ಪ್ರವೀಣ್ ಸುವರ್ಣ,ಉತ್ತರ ಪ್ರದೇಶದ ಮೀನುಗಾರರಾದ ಸಮರ ಬಹದ್ದೂರ್, ರಾಮ್ ಮನೋಜ್, ರೋಹಿತ್, ಪ್ರಕಾಶ್, ವಾಸು ಅವರಲ್ಲಿ ಮೂವರನ್ನು ನಾಡದೋಣಿಯಲ್ಲಿ ಆಗಮಿಸಿದ ರಾಮ ಸುವರ್ಣ ಮತ್ತು ಯತೀಶ್ ಸುವರ್ಣ ರಕ್ಷಿಸಿದರೆ, ಉಳಿದ ಇಬ್ಬರನ್ನು ಮತ್ತು ಬೋಟನ್ನು ಪ್ರಕಾಶ್ ಖಾರ್ವಿ ಮಾಲಕತ್ವದ ದುರ್ಗಾ ಲಕ್ಷ್ಮಿ ಮತ್ತು ಮನೋಜ್ ಖಾರ್ವಿ ಮಾಲಕತ್ವದ ಶ್ರೀಗೌರಿ ಬೋಟ್‍ನ ಮೀನುಗಾರರು ರಕ್ಷಿಸಿದ್ದಾರೆ. ಗುರುವಾರ ಸಂಜೆ ಪ್ರವೀಣ್ ಸುವರ್ಣ ಸೇರಿದಂತೆ ಉತ್ತರ ಪ್ರದೇಶದ ಐವರು ಮೀನುಗಾರರು ಮೀನುಗಾರಿಕೆಗೆ…
ಮುಂಬಯಿ: ಮಾಡೆಲ್ ಮತ್ತು ನಟಿ ಪೂನಂ ಪಾಂಡೆ ಫೆಬ್ರವರಿ 2 ರಂದು ಗರ್ಭಕಂಠದ ಕ್ಯಾನ್ಸರ್ನೊಂದಿಗೆ ಹೋರಾಡಿದ ನಂತರ ನಿಧನರಾದರು ಎಂದು ಅವರ ತಂಡ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. “ಈ ಮುಂಜಾನೆ ನಮಗೆ ಕಠಿಣವಾಗಿದೆ. ನಮ್ಮ ಪ್ರೀತಿಯ ಪೂನಂ ಅವರನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ಕಳೆದುಕೊಂಡಿದ್ದೇವೆ ಎಂದು ನಿಮಗೆ ತಿಳಿಸಲು ತುಂಬಾ ದುಃಖವಾಗಿದೆ. ಅವಳೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಂದು ಜೀವಂತ ರೂಪವೂ ಶುದ್ಧ ಪ್ರೀತಿ ಮತ್ತು ದಯೆಯಿಂದ ಭೇಟಿಯಾಯಿತು” ಎಂದು ಪೂನಂ ಅವರ ಅಧಿಕೃತ Instagram ಖಾತೆಯಲ್ಲಿ ಬರೆಯಲಾಗಿದೆ. “ಈ ದುಃಖದ ಸಮಯದಲ್ಲಿ, ನಾವು ಹಂಚಿಕೊಂಡ ಎಲ್ಲದಕ್ಕೂ ನಾವು ಅವಳನ್ನು ಪ್ರೀತಿಯಿಂದ ನೆನಪಿಸಿಕೊಳ್ಳುವಾಗ ನಾವು ಖಾಸಗಿತನಕ್ಕಾಗಿ ವಿನಂತಿಸುತ್ತೇವೆ” ಎಂದು ಅದು ಸೇರಿಸಿದೆ.









