Author: main-admin

ಮಂಗಳೂರು : ರಾಜ್ಯದ 40 ಕಡೆ ಭ್ರಷ್ಟ ಅಧಿಕಾರಿಗಳ ಮನೆ ಕಚೇರಿ ಮೇಲೆ ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಅಧಿಕಾರಿಗಳ ನಿದ್ದೆ ಕೆಡಿಸಿದ್ದಾರೆ. ಮಂಗಳೂರಿನಲ್ಲಿ ಮೆಸ್ಕಾಂ ಇಂಜಿನಿಯರ್ ಶಾಂತಕುಮಾರ್ ಅವರ ಮನೆ ಹಾಗೂ ಕಚೇರಿ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಳೆದ ಐದಾರು ವರ್ಷಗಳಿಂದ ಅತ್ತಾವರ ವಿಭಾಗದ ಮೆಸ್ಕಾಂ ಇಇ ಆಗಿ ಕಾರ್ಯನಿರ್ವಹಿಸುತ್ತಿರುವ ಶಾಂತಕುಮಾರ್ ಅವರ ಬೆಂಗಳೂರಿನ ನಿವಾಸದ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Read More

ಮಂಗಳೂರು ನಗರ ಕೇಂದ್ರ ಉಪ ವಿಭಾಗದ ಎಸಿಪಿ ಹಾಗೂ ದ.ಕ. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇನ್‌ಸ್ಪೆಕ್ಟರುಗಳಿಗೆ  ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮಂಗಳೂರು ನಗರ ಕೇಂದ್ರ ಉಪವಿಭಾಗದ ಎಸಿಪಿ ಮಹೇಶ್ ಕುಮಾರ್‌ಗೆ ಮೈಸೂರು ಹಾಗೂ ಲೋಕಾಯುಕ್ತಕ್ಕೆ ವರ್ಗಾ ವಣೆ ಆದೇಶದಲ್ಲಿದ್ದ ಪ್ರತಾಪ್ ಸಿಂಗ್ ತೋರಾಟ್‌ಗೆ ಮಹೇಶ್ ಕುಮಾರ್‌ರಿಂದ ತೆರವಾದ ಸ್ಥಾನಕ್ಕೆ ವರ್ಗಾವಣೆಯಾಗಿದೆ. ಸುಳ್ಯ ವೃತ್ತದ ಮೋಹನ್ ಕೊಠಾರಿ ಅವರನ್ನು ಡಿಸಿಆರ್‌ಇ ಮಂಗಳೂರಿಗೆ, ಮಂಗಳೂರು ಪಶ್ಚಿಮ ಸಂಚಾರ ಠಾಣೆಯಿಂದ ಕೃಷ್ಣಾನಂದ ಜಿ.ನಾಯಕ್ ಅವರನ್ನು ದಕ್ಷಿಣ ಸಂಚಾರ ಠಾಣೆಗೆ, ಸಿಐಡಿಗೆ ವರ್ಗಾವಣೆ ಆದೇಶದಲ್ಲಿರುವ ಬಸಲಿಂಗಯ್ಯ ಜಿ. ಸುಬ್ರಪುರಮಠ್ ಅವರನ್ನು ಬೆಳ್ತಂಗಡಿ ಠಾಣೆಗೆ, ಕೊಣಾಜೆ ಠಾಣೆಯಿಂದ ಮಂಗಳೂರು ನಗರಕ್ಕೆ ವರ್ಗಾವಣೆ ಆದೇಶದಲ್ಲಿ ರುವ ನಾಗೇಶ್ ಎಸ್.ಹಸ್ಲರ್ ಅವರನ್ನು ಬರ್ಕೆ ಠಾಣೆಗೆ, ಪುತ್ತೂರು ನಗರ ಠಾಣೆಯಿಂದ ಸುನಿಲ್ ಕುಮಾರ್ ಎಂ.ಎಸ್. ಅವ ರನ್ನು ಜಿಲ್ಲಾ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

Read More

ಮಂಗಳೂರು: ಸುಡುಮದ್ದು ತಯಾರಿಕಾ ಘಟಕಗಳು ಹಾಗೂ ದಾಸ್ತಾನು ಮತ್ತು ಮಾರಾಟ ಮಳಿಗೆಗಳ ಅಗ್ನಿ ಅನಾಹುತಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಸಲುವಾಗಿ ಸಮಿತಿಗಳನ್ನು ರಚಿಸಲಾಗಿದೆ.ಮಂಗಳೂರು ಹಾಗೂ ಪುತ್ತೂರು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯಲ್ಲಿ ಮಂಗಳೂರು ವಲಯ ಅಗ್ನಿಶಾಮಕ ಅಧಿಕಾರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಸುಡುಮದ್ದು ತಯಾರಿಕಾ ಘಟಕಗಳಿಗೆ ನಿಯೋಜಿತ ಅಧಿಕಾರಿಗಳು ಖುದ್ದು ಸ್ಥಳಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಮತ್ತು ತಯಾರಿಕಾ ಘಟಕಗಳು ಹಾಗೂ ದಾಸ್ತಾನು ಮತ್ತು ಮಾರಾಟ ಮಳಿಗೆಗಳು ಸ್ಪೋಟಕಗಳ ನಿಯಮಗಳು 2008 ರಂತೆ ನಿಯಮಾನುಸಾರ ಕೂಲಂಕುಶವಾಗಿ ಪರಿಶೀಲಿಸಿ ದಾಖಲೆಗಳೊಂದಿಗೆ ಸ್ಪಷ್ಟ ಅಭಿಪ್ರಾಯವನ್ನು ಸ್ಪೋಟಕಗಳ ನಿಯಮಗಳು 2008 ರಂತೆ ಚೆಕ್ ಲಿಸ್ಟ್‍ನೊಂದಿಗೆ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.

Read More

ಬೆಳ್ತಂಗಡಿ : ಪಟಾಕಿ ಸ್ಫೋಟ ಪ್ರಕರಣದಲ್ಲಿ ಸಿಡಿಮದ್ದು ತಯಾರಿಕಾ ಘಟಕದ ಮಾಲೀಕ ವೇಣೂರಿನ ಸೈಯದ್ ಬಶೀರ್(47) ಮತ್ತು ಮುಖ್ಯ ಕೆಲಸಗಾರ ಹಾಸನ ಮೂಲದ ಕಿರಣ್ (24) ಎಂಬುವರನ್ನ ಬಂಧನ ಮಾಡಲಾಗಿದೆ. ಘಟಕಕ್ಕೆ ಜನರನ್ನು ಕರೆಸಿ ಕೆಲಸ ಮಾಡಿಸುತ್ತಿದ್ದ ಕಿರಣ್ ಸೇರಿದಂತೆ ಮಾಲೀಕನನ್ನು ನಿನ್ನೆ ರಾತ್ರಿ ಬಂಧಿಸಿರುವ ವೇಣೂರು ಪೊಲೀಸರು, ಬೆಳ್ತಂಗಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಇಂದು ನ್ಯಾಯಾಲಕ್ಕೆ ಹಾಜರು ಪಡಿಸಲಾಗುತ್ತದೆ.

Read More

ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆಸಿದ್ದು, 218 ಪಿಎಸ್ ಐ ಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಳಕಂಡ ಪಿ.ಎಸ್.ಐ ರವರುಗಳನ್ನು ಆಡಳಿತಾತ್ಮಕ ಕಾರಣಗಳಿಂದ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಸ್ಥಳಗಳಿಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಸಂಬಂಧಪಟ್ಟ ಘಟಕಾಧಿಕಾರಿಗಳು ಮೇಲ್ಕಂಡ ಪಿ.ಎಸ್.ಐ. ರವರನ್ನು ಕೂಡಲೇ ಕರ್ತವ್ಯದಿಂದ ಬಿಡುಗಡೆಗೊಳಿಸಿ, ನಿಯುಕ್ತಿಗೊಳಿಸಿರುವ ಸ್ಥಳದಲ್ಲಿ ಕರ್ತವ್ಯಕ್ಕೆ ವರದಿ ಮಾಡುವಂತೆ ಸೂಚಿಸಿ ಕಳುಹಿಸುವುದು ಹಾಗೂ ಕರ್ತವ್ಯದಿಂದ ಬಿಡುಗಡೆ/ವರದಿ ಮಾಡಿದ ಬಗ್ಗೆ ಪಾಲನಾ ವರದಿಯನ್ನು ಈ ಕಛೇರಿಗೆ ಸಲ್ಲಿಸುವಂತೆ ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.

Read More

ಅಮೆರಿಕಾದ ಜಾರ್ಜೆಯಾದಲ್ಲಿ ಭಾರತೀಯ ವಿದ್ಯಾರ್ಥಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ವಿವೇಕ್ ಸೈನಿ (25) ಮೃತ ವಿದ್ಯಾರ್ಥಿ. ಹರ್ಯಾಣದ ಪಂಚಕುಲ ನಿವಾಸಿ. ವಿದ್ಯಾರ್ಥಿಯ ತಲೆಗೆ ದುಷ್ಕರ್ಮಿಗಳು ಸುತ್ತಿಗೆಯಿಂದ ಹೊಡೆದು 50 ಬಾರಿ ಹೊಡೆದು ಹತ್ಯೆ ಮಾಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹ ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿ ಕೊಂದ ಆರೋಪಿಯನ್ನು ಜೂಲಿಯನ್ ಫಾಕ್ನರ್ ಎಂದು ಗುರುತಿಸಲಾಗಿದೆ. ಆರೋಪಿ ಮಾದಕವಸ್ತುಗಳ ವ್ಯಸನಿಯಾಗಿದ್ದ. ಮೃತ ವಿದ್ಯಾರ್ಥಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕೆಲ ದಿನಗಳಿಂದ ಆರೋಪಿಯ ಪರಿಚಯವಿತ್ತು, ಆರೋಪಿ ಕೆಲ ದಿನಗಳಿಂದ ಉಚಿತವಗಿ ಆಹಾರ ಪಡೆದು ಹೋಗುತ್ತಿದ್ದ. ಜನವರಿ 14ರಂದು ಮತ್ತೆ ಅಂಗಡಿಗೆ ಬಂದಿದ್ದ ಆರೋಪಿ ಉಚಿತವಾಹಿ ವಸ್ತುಗಳನ್ನು ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ವಿದ್ಯಾರ್ಥಿ ನಿರಾಕರಿಸಿದ್ದಾನೆ. ಇದೇ ಕಾರಣಕ್ಕೆ ವಿದ್ಯಾರ್ಥಿಯನ್ನು ಹತ್ಯೆ ಮಡಲು ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

Read More

ಬಿಗ್ ಬಾಸ್-10 ರಲ್ಲಿ ನಟ ಕಾರ್ತಿಕ್ ಬಿಗ್ ಬಾಸ್ ಟ್ರೋಫಿ ಮುಡಿಗೇರಿಸಿಕೊಂಡಿದ್ದು, ಡ್ರೋನ್ ಪ್ರತಾಪ್ ಟ್ರೋಫಿಯಿಂದ ವಂಚಿತರಾಗಿದ್ದಾರೆ. ಡ್ರೋನ್ ಪ್ರತಾಪ್ ಗೆದ್ದೇ ಗೆಲ್ತಾರೆ ಎಂದು ವೋಟ್ ಮಾಡಿದ್ದ ಅಭಿಮಾನಿಗಳಿಗೆ ಶಾಕ್ ಆಗಿದ್ದು, ಪ್ರತಾಪ್ ಬಿಗ್ ಬಾಸ್ ಮೊದಲ ರನ್ನರ್ ಅಪ್ ಆಗಿದ್ದಾರೆ. ಡ್ರೋನ್ ಪ್ರತಾಪ್ ಗೆ ಬಿಗ್ ಬಾಸ್ ಟ್ರೋಫಿ ಕೈ ತಪ್ಪಿದ್ದಕ್ಕೆ ಅಭಿಮಾನಿಯೋರ್ವ ಅರ್ಧ ಮೀಸೆ, ಗಡ್ಡ ಬೋಳಿಸಿಕೊಂಡಿದ್ದಾನೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಡ್ರೋನ್ ಪ್ರತಾಪ್ ಗೆದ್ದೇ ಗೆಲ್ತಾರೆ, ಒಂದು ವೇಳೆ ಗೆಲ್ಲದೇ ಇದ್ದರೆ ನಾನು ಅರ್ಧ ಮೀಸೆ, ಗಡ್ಡ ಬೋಳಿಸಿಕೊಳ್ಳುತ್ತೇನೆ ಎಂದು ಡ್ರೋನ್ ಪ್ರತಾಪ್ ಅಭಿಮಾನಿ ಅಬಿರಾಜ್ ಸವಾಲ್ ಹಾಕಿದ್ದರು. ಆದರೆ ಅಬಿರಾಜ್ ಲೆಕ್ಕಾಚಾರ ಉಲ್ಟಾ ಆಗಿದ್ದು, ಕೊಟ್ಟ ಮಾತಿನಂತೆ ಅರ್ಧ ಮೀಸೆ, ಗಡ್ಡ ಬೋಳಿಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ.

Read More

ಮಲ್ಪೆ: ಶನಿವಾರದಂದು ಕೋಡಿಬೆಂಗ್ರೆಯ ಡೆಲ್ಟಾ ಬೀಚ್ ಎಂಬಲ್ಲಿ ಸಮುದ್ರದ ಅಲೆಯಲ್ಲಿ ಕೊಚ್ಚಿಕೋಗಿದ್ದ ಬೆಂಗಳೂರಿನ ಬ್ಯಾಂಕ್ ಉದ್ಯೋಗಿ ನಿತೀನ್(35) ಎಂಬವರ ಮೃತದೇಹವು ಸಮುದ್ರದಲ್ಲಿ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಇಬ್ಬರು ಸ್ನೇಹಿತರೊಂದಿಗೆ ಪ್ರವಾಸಕ್ಕೆಂದು ಉಡುಪಿಗೆ ಬಂದಿದ್ದ ನಿತಿನ್, ಅಪರಾಹ್ನ 3.30ರ ಸುಮಾರಿಗೆ ಡೆಲ್ವಾ ಬೀಚ್ ನಲ್ಲಿ ನೀರಿಗೆ ಇಳಿದಿದ್ದರು. ಈ ವೇಳೆ ಅಲೆಯ ರಭಸಕ್ಕೆ ಕೊಚ್ಚಿಕೊಂಡು ಹೋದ ನಿತಿನ್ ನಾಪತ್ತೆಯಾಗಿದ್ದರು. ಇವರ ಮೃತದೇಹಕ್ಕಾಗಿ ಎರಡು ದಿನಗಳಿಂದ ಹುಡುಕಾಟ ನಡೆಸಲಾಗುತ್ತಿತ್ತು. ಇದೀಗ ಸಮುದ್ರದಲ್ಲಿ ಇವರ ಮೃತದೇಹ ಪತ್ತೆಯಾಗಿದ್ದು, ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ತೆರಳಿ ಮೃತದೇಹವನ್ನು ತೀರಕ್ಕೆ ತಂದಿದೆ.ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು: ದ.ಕ.ಜಿಲ್ಲೆಯ ಎಲ್ಲಾ ಸುಡುಮದ್ದು ತಯಾರಿಕಾ ಘಟಕಗಳಲ್ಲಿ ಅಗ್ನಿ ಅನಾಹುತಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವ ಹಾಗೂ ತಾತ್ಕಾಲಿಕವಾಗಿ ಪರವಾನಿಗೆ ಅಮಾನುತುಗೊಳಿಸುವ ಆದೇಶವನ್ನು ದಂಡಾಧಿಕಾರಿ ಡಾ. ಆನಂದ್ ಕೆ ಅವರು ಹೊರಡಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ವೇಣೂರು ಗೋಳಿಯಂಗಡಿ ಸಮೀಪದ ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಡ್ಯಾರು ಎಂಬಲ್ಲಿ ಸುಡುಮದ್ದು ತಯಾರಿಕಾ ಘಟಕದಲ್ಲಿ ಭಾನುವಾರ ಸಂಭವಿಸಿದ ಸ್ಫೋಟದಲ್ಲಿ ಮೂವರು ಕಾರ್ಮಿಕರು ಮೃತಪಟ್ಟ ಬೆನ್ನೆಲ್ಲೇ ದಂಡಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ. Explosive Act 1984 ಮತ್ತು Explosive Rules 2008ರ ನಿಯಮಾವಳಿ 107 ರಂತೆ ಸುಡುಮದ್ದು ತಯಾರಿಕಾ ಘಟಕಗಳಿಗೆ ನಮೂನೆ ಎಲ್‌ಇ – 1 ರಲ್ಲಿ ಪರವಾನಿಗೆಗಳನ್ನು ಮಂಜೂರು ಮಾಡಿದ್ದು, ಜಿಲ್ಲೆಯಲ್ಲಿ ಪರವಾನಿಗೆ ಪಡೆದುಕೊಂಡ ಅಧಿಕೃತ ತಯಾರಿಕಾ ಘಟಕಗಳಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ಹಾಗೂ ಸರಕಾರದ ನಿರ್ದೇಶನ ಮತ್ತು ಮಾರ್ಗಸೂಚಿಗಳಂತೆ ಪಟಾಕಿ ವ್ಯವಹಾರ ಮಾಡುತ್ತಿರುವುದನ್ನು ನಿಯಂತ್ರಿಸಲು ಮತ್ತು ಪಟಾಕಿಗಳನ್ನು ತಯಾರಿಕೆ ಮಾಡುವ ಸಂದರ್ಭದಲ್ಲಿ ಅಗ್ನಿ ಅನಾಹುತ ಸಂಭವಿಸುವುದನ್ನು ತಡೆಗಟ್ಟಲು ಸಲುವಾಗಿ ಮರು ಪರಿಶೀಲನೆ ಮಾಡಲು…

Read More

ಬೆಳ್ತಂಗಡಿ ಕುಕ್ಕೇಡಿ ಸ್ಪೋಟ ಪ್ರಕರಣವನ್ನು ಎನ್.ಐ‌.ಎ ಗೆ ವಹಿಸಲು ಹಿಂದೂ ಜಾಗರಣ ವೇದಿಕೆ ಆಗ್ರಹ ಮಾಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಹಿಂಜಾವೇ ಜಿಲ್ಲಾ ಸಂಯೋಜಕ ಮೋಹನ್ ದಾಸ್ ಅವರು ಕುಕ್ಕೇಟಿಯಲ್ಲಿ ಭಾನುವಾರ ನಡೆದ ಸ್ಫೋಟದ ತೀವೃತೆ ಅತೀ ಹೆಚ್ಚಾಗಿತ್ತು. ಕೇವಲ ಪಟಾಕಿ ತಯಾರಿಕಾ ಘಟಕದಲ್ಲಿ ಇಂಥಹ ತೀವೃತೆ ಇರಲು ಸಾಧ್ಯವಿಲ್ಲ ಮತ್ತು ಸ್ಫೋಟದ ತೀವೃತೆ 4 ಕಿಲೋಮೀಟರ್ ವರೆಗೂ ವ್ಯಾಪಿಸಿತ್ತು. ಸ್ಪೋಟಕ್ಕೆ ಸಿಲುಕಿದ ಕಾರ್ಮಿಕರ ಮೃತದೇಹ ಛಿದ್ರ ಛಿದ್ರವಾಗಿದೆ. ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಪೋಟ ಮತ್ತು ಕೇರಳದ ಚರ್ಚ್ ನಲ್ಲಿ ನಡೆದ ಬಾಂಬ್ ಸ್ಪೋಟಕ್ಕೂ ಈ ಘಟನೆಗೂ ಸಾಮ್ಯತೆ ಇರುವ ಸಾಧ್ಯತೆಯಿದೆ ಎಂದು ಶಂಕೆ ವ್ಯಕ್ತಪಡಿಸಿದ ಅವರು ಪ್ರಕರಣದ ಸತ್ಯಾಸತ್ಯತೆಯ ತನಿಖೆಯಾಗಬೇಕು ಮತ್ತು ರಾಷ್ಟ್ರೀಯ ತನಿಖಾ ದಳದಿಂದ ತನಿಖೆ ನಡೆಯಲೇಬೇಕಿದೆ. ಸರಕಾರ ಮತ್ತು ಪೋಲೀಸ್ ಇಲಾಖೆ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Read More