ಪುತ್ತೂರು ಉಪವಿಭಾಗಾಧಿಕಾರಿ ಹೊರಡಿಸಿದ್ದ ಗಡೀಪಾರು ಆದೇಶಕ್ಕೆ ದೊಡ್ಡ ತಿರುವು ದೊರೆತಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಾದಾತ್ಮಕ ವ್ಯಕ್ತಿ ಮಹೇಶ್ ಶೆಟ್ಟಿ ತಿಮರೋಡಿಗೆ ಗಡಿಪಾರು ಮಾಡಿದ್ದ ಆಡಳಿತದ ಸೆಪ್ಟೆಂಬರ್ 18ರ ಆದೇಶವನ್ನು ಕರ್ನಾಟಕ ಹೈಕೋರ್ಟ್ ಸೋಮವಾರ (ನವೆಂಬರ್ 17) ರದ್ದುಪಡಿಸಿದೆ. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು, ಉಪವಿಭಾಗಾಧಿಕಾರಿಗಳ ಆದೇಶದಲ್ಲಿ ಕಾನೂನುಬದ್ಧ ಕಾರಣಗಳಿರಬೇಕೆಂಬ ಅವಶ್ಯಕತೆ ಪೂರೈಸಲಿಲ್ಲ ಎಂದು ಸ್ಪಷ್ಟಪಡಿಸಿದೆ. ಕೋರ್ಟ್ ಗಮನಿಸಿದಂತೆ, ನಿರ್ದಿಷ್ಟ ಕಾರಣಗಳು, ಸಂಬಂಧಿತ ಕಾನೂನು ಕಲಂಗಳು ಮತ್ತು ಪರ್ಯಾಯ ಆಧಾರಗಳ ಜತೆಗೇ ಗಡಿಪಾರು ಆದೇಶ ಹೊರಡಿಸುವುದು ಕಡ್ಡಾಯ. ಆದರೆ ಸೆಪ್ಟೆಂಬರ್ 18ರ ಆದೇಶದಲ್ಲಿ ಈ ಅಂಶಗಳು ಸಮರ್ಪಕವಾಗಿ ತೋರಿಸಲ್ಪಡಲಿಲ್ಲ ಎಂದು ಸೂಚಿಸಿದೆ. ಈ ಹಿನ್ನೆಲೆಯಲ್ಲಿ, ಪುತ್ತೂರು ಉಪವಿಭಾಗಾಧಿಕಾರಿಗಳಿಗೆ ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ: ಹೊಸದಾಗಿ ವಿಚಾರಣೆ ನಡೆಸಬೇಕು ಹಾಗೂ ಸೂಕ್ತವಾದ ಕಾರಣಗಳು ಮತ್ತು ಸಂಬಂಧಿತ ಸೆಕ್ಷನ್‌ಗಳನ್ನು ಬಳಸಿ ಮತ್ತು 15 ದಿನಗಳೊಳಗೆ ಹೊಸ ಆದೇಶ ಹೊರಡಿಸುವುದು ಕಡ್ಡಾಯ ಎಂದು ತಿಳಿಸಿದೆ ಮಹೇಶ್ ಶೆಟ್ಟಿ ತಿಮರೋಡಿ ಮೇಲಿನ…
Author: main-admin
ಬೆಳ್ತಂಗಡಿ: ಹಳೆಕೋಟೆಯ ವಾಣಿ ಕಾಲೇಜ್ ಮುಂಭಾಗದಲ್ಲಿರುವ ರಾಘವೇಂದ್ರ ಪೂಜಾರಿ ಮಾಲಕತ್ವದ ಸ್ವಸ್ತಿಕ್ ಆಟೋ ಗ್ಯಾರೇಜಿನಲ್ಲಿ ನಿನ್ನೆ (ನ.16) ಅಗ್ನಿ ಅವಘಡ ಸಂಭವಿಸಿದೆ. ಆಟೋದ ಬ್ಯಾಟರಿಯ ದೋಷದಿಂದ ಬೆಂಕಿ ತಗುಲಿ ಆಟೋ ಸಮೇತ ಶಾಪ್‌ನಲ್ಲಿದ್ದ ವಸ್ತುಗಳು ಬೆಂಕಿಗಾಹುತಿಯಾಗಿವೆ. ಮಾರಾಟ ಮಾಡಲು ತಂದಿದ್ದ ಹಳೆ ಆಟೋವನ್ನು ಸಂಜೆ ಶಾಪ್ ಒಳಗಡೆ ಇಟ್ಟು ಬೀಗ ಹಾಕಿ ಕೆಲಸಗಾರರು ಹೋಗಿದ್ದರು. ರಾತ್ರಿ ಸುಮಾರು 8:30ರ ಸಮಯದಲ್ಲಿ ನಿಲ್ಲಿಸಿದ್ದ ಆಟೋದಲ್ಲಿದ್ದ ಬ್ಯಾಟರಿಯ ದೋಷದಿಂದ ಬೆಂಕಿ ತಗುಲಿ ಶಾಪ್ ಸಂಪೂರ್ಣ ಸುಟ್ಟು ಹೋಗಿದೆ. ಸ್ಥಳಕ್ಕೆ ಅಗ್ನಿಶಾಮಕ ಮತ್ತು ಪೊಲೀಸರು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಶಾಪ್‌ನಲ್ಲಿದ್ದ ಹಲವು ವಸ್ತುಗಳು ಸುಟ್ಟು ಕರಕಲಾಗಿವೆ.
ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯೊಬ್ಬನನ್ನು ಕಡಬ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಡಬ ನಿವಾಸಿ ಉಮೇಶ್ ಗೌಡ ಬಂಧಿತ ಆರೋಪಿ. ನ.13ರಂದು ರಾತ್ರಿ ಸಂತ್ರಸ್ತ ಮಹಿಳೆ ಮನೆಯ ಹೊರ ಭಾಗದ ಕೊಟ್ಟಿಗೆಯಲ್ಲಿ ನಿದ್ರಿಸುತ್ತಿದ್ದ ವೇಳೆ ಆರೋಪಿಯು ಅಲ್ಲಿಗೆ ಅಕ್ರಮವಾಗಿ ಪ್ರವೇಶಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿರುವುದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿರುವ ಕಡಬ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಮಂಗಳೂರು: ಬರೋಬ್ಬರಿ 250ಕ್ಕೂ ಅಧಿಕ ಸಿಮ್‌ಗಳನ್ನು ಬಳಸಿಕೊಂಡು 300ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಲಕ್ಷಗಟ್ಟಲೆ ಹಣವನ್ನು ಲಪಟಾಯಿಸಿದ ಆರೋಪಿಗಳನ್ನು ಬಂಧಿಸುವ ಮೂಲಕ ಬೃಹತ್ ಸೈಬರ್ ವಂಚನಾ ರಾಕೆಟ್ ಅನ್ನು ಮಂಗಳೂರಿನ ಸಿ.ಇ.ಎನ್. ಪೊಲೀಸರು ಪತ್ತೆಮಾಡಿದ್ದಾರೆ. ತ್ರಿಪುರಾದ ಧಲಾಯಿ ಎಂಬಲ್ಲಿನ ರಂಗ್ ರುಂಘಾ ರೀಂಗ್ ಎಂಬವರ ಪುತ್ರ ಡಮೆಂಜೋಯ್ ರೀಂಗ್(27) ಹಾಗೂ ಪಣಿಪುರದ ಕಂಗ್ಪೊಕ್ಪಿ ಜಿಲ್ಲೆಯ ಹಮ್ನ್‌ಗ್ಟೆ ರೀಯಲ್ ಕೋಂ @ ಮಂಗ್ಟೆ ಅಮೋಶ್ ಬಂಧಿತ ಆರೋಪಿಗಳು. ಇತ್ತೀಚೆಗೆ ಮಂಗಳೂರು ನಗರ ಸಿ.ಇ.ಎನ್. ಕ್ರೈಂ ಪೊಲೀಸ್ ಠಾಣೆಯಲ್ಲಿ 45/2024 Section 66(c) 66(ಡಿ) ಐಟಿ ಆಕ್ಟ್ ಮತ್ತು ಕಲಂ.೪೨೦ ಐಪಿಸಿ ಅಡಿ ಪ್ರಕಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಯಾರೋ ಅಪಚಿರಿತ ವ್ಯಕ್ತಿ ದೂರುದಾರರಿಗೆ ಕಸ್ಟಮ್ಸ್ ಹೆಸರಿನಲ್ಲಿ ಹಂತ ಹಂತವಾಗಿ ಒಟ್ಟು 7,27,000 ಹಣವನ್ನು ಪಡೆದು ವಂಚನೆ ಮಾಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಕರಣ ತನಿಖೆ ನಡೆಸಿದಾಗ ಬೃಹತ್ ಸೈಬರ್ ವಂಚನಾ ರಾಕೆಟ್ ಬಯಲಾಗಿದೆ. ಈ ಪ್ರಕರಣದಲ್ಲಿ ಹಣ ವರ್ಗಾವಣೆಯಾಗಿರುವ ಬ್ಯಾಂಕ್…
ಬಂಟ್ವಾಳ : ಇಲ್ಲಿನ ಅರಳ ಗ್ರಾಮದಲ್ಲಿ ಕಾರ್ಯಾಚರಿಸುತ್ತಿದ್ದ ಅಕ್ರಮ ಕಸಾಯಿಖಾನೆಗೆ ಪೊಲೀಸರು ಭಾನುವಾರ ದಾಳಿ ಮಾಡಿ ನಾಲ್ಕು ಜಾನುವಾರುಗಳನ್ನು ರಕ್ಷಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಅರಳ ಗ್ರಾಮದ ನಿವಾಸಿ ಮಯ್ಯದ್ದಿ (57) ಬಂಧಿತ ಆರೋಪಿ. ಇತರ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಮನೆಯ ಆವರಣದಲ್ಲಿರುವ ಶೆಡ್ ಬಳಿ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಬಗ್ಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮೂವರು ಮಾಂಸ ಮಾಡುತ್ತಿರುವುದು ಕಂಡುಬಂದಿದೆ. ಶೆಡ್‌ನಲ್ಲಿದ್ದ ಮೂರು ಹಸುಗಳನ್ನು ಮತ್ತು ಒಂದು ಕರುವನ್ನು ರಕ್ಷಿಸಲಾಗಿದೆ. ಸ್ಥಳದಿಂದ ಸುಮಾರು 150 ಕೆ.ಜಿ. ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡ ಆರೋಪಿಗಳ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಮನೆಯ ಶೆಡ್‌ನ್ನೆ ಕಸಾಯಿಖಾನೆಯಾಗಿ ಪರಿವರ್ತಿಸಿಕೊಂಡು ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾಡುತ್ತಿದ್ದರು. ಮಯ್ಯದ್ದಿಯ ಮನೆ ಹಾಗೂ ಶೆಡ್‌ನ ಆವರಣವನ್ನು ಬಂಟ್ವಾಳ…
ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುವ ಕಂಬಳ, ಜಾತ್ರೆ ಯಕ್ಷಗಾನ ಹಾಗೂ ಇನ್ನಿತರ ಧಾರ್ಮಿಕ ಆಚರಣೆಗಳಿಗೆ ಯಾವುದೇ ರೀತಿ ಅಡ್ಡಿಪಡಿಸುವುದಿಲ್ಲ ಎಂದು ಜಿಲ್ಲಾಡಳಿತ ಭರವಸೆ ನೀಡಿದೆ. ಆದರೆ, ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಆಸುಪಾಸಿನ ನಿವಾಸಿಗಳಿಗೆ ಕಿರಿಕಿರಿಯಾಗದಂತೆ ಎಚ್ಚರ ವಹಿಸಬೇಕು ಎಂದೂ ಜಿಲ್ಲಾಡಳಿತ ಸೂಚಿಸಿದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚೆ ನಡೆಯಿತು. ಧ್ವನಿವರ್ಧಕ ಬಳಕೆಯ ನೆಪ ಹೇಳಿ ರಾತ್ರಿ ವೇಳೆ ಕಂಬಳಕ್ಕೆ ಅಡ್ಡಿಪಡಿಸದಂತೆ ಪೊಲೀಸರಿಗೆ ಸೂಚನೆ ನೀಡಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಒತ್ತಾಯಿಸಿದರು. ರಾತ್ರಿ ವೇಳೆ ನಡೆಯುವ ಜಾತ್ರೆಗಳಿಗೂ ಅಡ್ಡಿಪಡಿಸಬಾರದು ಎಂದು ಶಾಸಕಿ ಭಾಗಿರಥಿ ಮುರುಳ್ಯ ಒತ್ತಾಯಿಸಿದರು. ಯಕ್ಷಗಾನಕ್ಕೆ ಅಡ್ಡಿಪಡಿಸಿ ಜನರ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಉಂಟುಮಾಡಬೇಡಿ ಎಂದು ಶಾಸಕ ಡಿ.ವೇದವ್ಯಾಸ ಕಾಮತ್ ಕೋರಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಜಿಲ್ಲಾಡಳಿತವು ಇಂತಹ ಯಾವುದೇ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಿಲ್ಲ ಎಂದು ಸ್ಪಷ್ಟಪಡಿಸಿದರು. ಅಕ್ಕಪಕ್ಕದವರಿಗೆ…
ಒಂದು ವಾರದಲ್ಲಿ ಹಣವನ್ನು ಡಬಲ್ ಮಾಡಿ ಕೊಡುವುದಾಗಿ ಆಮಿಷವೊಡ್ಡಿ ಕೋಟ್ಯಂತರ ರೂ. ವಂಚಿಸಿ ಆಂಧ್ರಪ್ರದೇಶ ಮೂಲದ ದಂಪತಿ ಪರಾರಿಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಆಂಧ್ರಪ್ರದೇಶದ ಅನಂತಪುರ ನಿವಾಸಿಗಳಾದ ಬೊಗ್ಗು ಶ್ರೀರಾಮಲು- ಪುಷ್ಪಾ ವಂಚಿಸಿ ಎಸ್ಕೇಪ್ ಆಗಿರುವ ದಂಪತಿ. ಈ ದಂಪತಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ವಿವಿಧ ಗ್ರಾಮಗಳ ಮಹಿಳೆಯರಿಗೆ ವಂಚಿಸಿ ಪರಾರಿಯಾಗಿದ್ದಾರೆ. ಡಬ್ಲಿಂಗ್ ಆಸೆಗೆ ರೇಣುಕಮ್ಮ ಎಂಬವರು ಜಮೀನು ಮಾರಾಟ ಮಾಡಿ 33 ಲಕ್ಷ ರೂ. ನೀಡಿದ್ದರು. ಅಲ್ಲದೇ ಮೀನಾ 40 ಲಕ್ಷ ರೂ., ಪ್ರಿಯಾಂಕ 50 ಲಕ್ಷ ರೂ. ನೀಡಿದ್ದಾರೆ. ಇನ್ನು ಟಿ ತಿರುಮಲೇಶ್ ಎಂಬವರು 17 ಲಕ್ಷ ರೂ. ನೀಡಿ ಮೋಸ ಹೋಗಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹಣ ಹಾಕಿ, ಡಬಲ್ ಮಾಡುವ ಎಂದು ವಂಚಕ ದಂಪತಿ ನಂಬಿಸಿದ್ದರು. ಅಲ್ಲದೇ ಅವರ ಮನೆಯ ರೂಂನಲ್ಲಿ ಹಣದ ಕಂತೆಗಳನ್ನು ಜೋಡಿಸಿ ವೀಡಿಯೋ ಮಾಡಿ ಕಳಿಸಿ ನಂಬಿಸಿದ್ದರು. ಸದ್ಯ 17 ಲಕ್ಷ ರೂ. ಕಳೆದುಕೊಂಡ ಟಿ. ತಿರುಮಲೇಶ್ ಜಗಳೂರು ಠಾಣೆಗೆ…
ಕಾಸರಗೋಡು: ಇದೊಂದು ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ. ಕರೆಂಟ್ ಬಿಲ್ ಕಟ್ಟದ ಕಾರಣಕ್ಕೆ ವಿದ್ಯುತ್ ನಿಗಮದ ಅಧಿಕಾರಿಗಳು ಮನೆಯ ಕರೆಂಟ್ ಕಟ್ ಮಾಡಿದ್ದಕ್ಕೆ ಸಿಟ್ಟುಕೊಂಡು ಯುವಕನೊಬ್ಬ ತನ್ನ ಮನೆಯ ಸುತ್ತಮುತ್ತಲಿರುವ ಬರೋಬ್ಬರಿ 30 ಟ್ರಾನ್ಸಫಾರ್ಮರ್ ಗಳ ಫ್ಯೂಸ್ ನ್ನು ಕಿತ್ತು ಬಿಸಾಕಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಇದರಿಂದಾಗಿ ಬರೋಬ್ಬರಿ 6 ಸಾವಿರ ಮನೆಗೆ ಕರೆಂಟ್ ಇಲ್ಲದಂತಾಗಿತ್ತು. ಮದ್ದೂರು ಪಂಚಾಯತ್‌ನ ಚೂರಿ ನಿವಾಸಿಯಾದ ಯುವಕನಿಗೆ ಸಾಮಾನ್ಯವಾಗಿ ಎರಡು ತಿಂಗಳಿಗೆ ₹18,000 ರಿಂದ ₹20,000 ಬಿಲ್ ಬರುತ್ತಿತ್ತು. ಆದರೆ ಈ ಬಾರಿ ಬಿಲ್ ₹22,000 ಕ್ಕೆ ತಲುಪಿತು. ವಿದ್ಯುತ್ ನಿಗಮದ ಅಧಿಕಾರಿಗಳು ಬಿಲ್ ಪಾವತಿಸುವಂತೆ ಕೇಳಿಕೊಂಡರು ಆತ ಕಟ್ಟದೆ ಗಲಾಟೆ ಮಾಡಿದ್ದ. ಇದರಿಂದಾಗಿ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಆತನ ಮನೆಯ ಕರೆಂಟ್ ನ್ನು ಕಟ್ ಮಾಡಿದ್ದರು. ಬಳಿಕ ಯುವಕ ಸಂಜೆ ನೆಲ್ಲಿಕ್ಕುನ್ನು ವಿಭಾಗ ಕಚೇರಿಗೆ ಆಗಮಿಸಿ ಅಲ್ಲಿ ಗಲಾಟೆ ಮಾಡಿದ್ದಾನೆ. ಬಳಿಕ ಆತನ ಮಾಡಿದ ಕೆಲಸವನ್ನು ಕೇರಳ ವಿದ್ಯುತ್ ನಿಗಮದ ಯಾವ ಅಧಿಕಾರಿಯೂ ಉಹಿಸಿರಲಿಲ್ಲ.…
ಬಂಟ್ವಾಳ: ಇನ್ನೋವಾ ಕಾರು ಅಪಘಾತಕ್ಕೀಡಾದ ಬಂಟ್ವಾಳದ ನಾರಾಯಣ ಗುರು ವೃತ್ತಕ್ಕೆ ಎಸ್ಪಿ ಡಾ. ಅರುಣ್ ಅವರು ಭೇಟಿ ನೀಡಿದರು. ಈ ವೇಳೆ ಘಟನಾಸ್ಥಳದಲ್ಲಿ ಪರಿಶೀಲನೆ ನಡೆಸಿದ ಎಸ್ಪಿ ಅವರು, ಘಟನೆ ಕುರಿತಂತೆ ಮಾಹಿತಿ ಪಡೆದುಕೊಂಡರು. ಬಳಿಕ ಪೊಲೀಸರಿಗೆ ಸಲಹೆ ಸೂಚನೆಗಳನ್ನು ನೀಡಿದರು. ಇಂದು ಮುಂಜಾನೆ ನಾರಾಯಣ ಗುರು ವೃತ್ತಕ್ಕೆ ಇನ್ನೋವಾ ಕಾರು ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ್ದರು. ನಾಲ್ವರು ಗಂಭೀರ ಗಾಯಗೊಂಡಿದ್ದು, ಮತ್ತಿಬ್ಬರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು.
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಸಿಗ್ನಲ್ ಬಳಿ ಶನಿವಾರ ಬೆಳಗ್ಗೆ ಸಂಭವಿಸಿದ ಸರಣಿ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಪಣಂಬೂರು ಸಿಗ್ನಲ್ ಬಳಿ ಈ ಅಪಘಾತ ಸಂಭವಿಸಿದೆ. ಸಿಗ್ನಲ್ ನಲ್ಲಿ ಸರತಿಯಲ್ಲಿದ್ದ ವೇಳೆ ಎರಡು ಟ್ಯಾಂಕರ್, ಆಟೊ ರಿಕ್ಷಾ ಮತ್ತು ಕಾರು ಅಪಘಾತಕ್ಕೀಡಾಗಿವೆ. ಸಿಗ್ನಲ್ ನಲ್ಲಿ ನಿಂತಿದ್ದ ಟ್ಯಾಂಕರ್ ವೊಂದರ ಹಿಂಭಾಗದಲ್ಲಿ ಕಾರು ಮತ್ತು ಆಟೊ ರಿಕ್ಷಾ ನಿಂತಿತ್ತು. ಈ ವೇಳೆ ಹಿಂದಿನಿಂದ ಬಂದ ಇನ್ನೊಂದು ಟ್ಯಾಂಕರ್ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ರಿಕ್ಷಾ ಎದುರಿನಲ್ಲಿ ನಿಂತಿದ್ದ ಕಾರಿಗೆ ಅಪ್ಪಳಿಸಿ ಬಳಿಕ ಅದರ ಮುಂದೆ ನಿಂತಿದ್ದ ಮತ್ತೊಂದು ಟ್ಯಾಂಕರ್ ಗೆ ಢಿಕ್ಕಿ ಹೊಡೆದಿದೆ. ಈ ವೇಳೆ ಆಟೊ ರಿಕ್ಷಾ ಎರಡು ಟ್ಯಾಂಕರ್ ಗಳ ಮಧ್ಯೆ ಸಿಲುಕಿ ಅಪ್ಪಚ್ಚಿಯಾಗಿದೆ. ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಮತ್ತು ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಡಿ…










