Facebook Twitter Instagram
    Thursday, July 23
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»Uncategorized»ಮನೆಯ ಕರೆಂಟ್ ಕಟ್ ಮಾಡಿದ್ದಕ್ಕೆ 30 ಟ್ರಾನ್ಸ್‌ಫಾರ್ಮರ್‌ಗಳ ಫ್ಯೂಸ್‌ ತೆಗೆದ ಯುವಕ – 6 ಸಾವಿರ ಮನೆ ಕತ್ತಲಲ್ಲಿ
    Uncategorized

    ಮನೆಯ ಕರೆಂಟ್ ಕಟ್ ಮಾಡಿದ್ದಕ್ಕೆ 30 ಟ್ರಾನ್ಸ್‌ಫಾರ್ಮರ್‌ಗಳ ಫ್ಯೂಸ್‌ ತೆಗೆದ ಯುವಕ – 6 ಸಾವಿರ ಮನೆ ಕತ್ತಲಲ್ಲಿ

    November 16, 2025
    Share

    ಕಾಸರಗೋಡು: ಇದೊಂದು ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ. ಕರೆಂಟ್ ಬಿಲ್ ಕಟ್ಟದ ಕಾರಣಕ್ಕೆ ವಿದ್ಯುತ್ ನಿಗಮದ ಅಧಿಕಾರಿಗಳು ಮನೆಯ ಕರೆಂಟ್ ಕಟ್ ಮಾಡಿದ್ದಕ್ಕೆ ಸಿಟ್ಟುಕೊಂಡು ಯುವಕನೊಬ್ಬ ತನ್ನ ಮನೆಯ ಸುತ್ತಮುತ್ತಲಿರುವ ಬರೋಬ್ಬರಿ 30 ಟ್ರಾನ್ಸಫಾರ್ಮರ್ ಗಳ ಫ್ಯೂಸ್ ನ್ನು ಕಿತ್ತು ಬಿಸಾಕಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಇದರಿಂದಾಗಿ ಬರೋಬ್ಬರಿ 6 ಸಾವಿರ ಮನೆಗೆ ಕರೆಂಟ್ ಇಲ್ಲದಂತಾಗಿತ್ತು.

    ಮದ್ದೂರು ಪಂಚಾಯತ್‌ನ ಚೂರಿ ನಿವಾಸಿಯಾದ ಯುವಕನಿಗೆ ಸಾಮಾನ್ಯವಾಗಿ ಎರಡು ತಿಂಗಳಿಗೆ ₹18,000 ರಿಂದ ₹20,000 ಬಿಲ್ ಬರುತ್ತಿತ್ತು. ಆದರೆ ಈ ಬಾರಿ ಬಿಲ್ ₹22,000 ಕ್ಕೆ ತಲುಪಿತು. ವಿದ್ಯುತ್ ನಿಗಮದ ಅಧಿಕಾರಿಗಳು ಬಿಲ್ ಪಾವತಿಸುವಂತೆ ಕೇಳಿಕೊಂಡರು ಆತ ಕಟ್ಟದೆ ಗಲಾಟೆ ಮಾಡಿದ್ದ. ಇದರಿಂದಾಗಿ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಆತನ ಮನೆಯ ಕರೆಂಟ್ ನ್ನು ಕಟ್ ಮಾಡಿದ್ದರು. ಬಳಿಕ ಯುವಕ ಸಂಜೆ ನೆಲ್ಲಿಕ್ಕುನ್ನು ವಿಭಾಗ ಕಚೇರಿಗೆ ಆಗಮಿಸಿ ಅಲ್ಲಿ ಗಲಾಟೆ ಮಾಡಿದ್ದಾನೆ. ಬಳಿಕ ಆತನ ಮಾಡಿದ ಕೆಲಸವನ್ನು ಕೇರಳ ವಿದ್ಯುತ್ ನಿಗಮದ ಯಾವ ಅಧಿಕಾರಿಯೂ ಉಹಿಸಿರಲಿಲ್ಲ.

    ಗಲಾಟೆ ಮಾಡಿಕೊಂಡು ಸೀದಾ ಹೊರಟ ಯುವಕ ದಾರಿಯಲ್ಲಿ ಸಿಕ್ಕ ಸಿಕ್ಕ ಟ್ರಾನ್ಸಫಾರ್ಮರ್ ಗಳ ಪ್ಯೂಸ್ ನ್ನು ತೆಗೆಯುತ್ತಾ ಹೋಗಿದ್ದಾನೆ. ಒಂದು ಟ್ರಾನ್ಸಪಾರ್ಮರ್ ಗಳನ್ನು ಆರರಿಂದ ಒಂಬತ್ತು ಪ್ಯೂಸ್ ಗಳು ಇರುತ್ತವೆ. ಯುವಕ ಪೊಲೀಸ್ ಠಾಣೆ ಜಂಕ್ಷನ್, ಮದ್ದೂರು ರಸ್ತೆ, ಚೂರಿ, ಉಲ್ಲಿಯತಡ್ಕ, ಚೌಕಿ ಮೂಲಕ ವಾಹನ ಚಲಾಯಿಸಿ, ನಂತರ ರಾಷ್ಟ್ರೀಯ ಹೆದ್ದಾರಿ 66 ಮತ್ತು ಕಾಸರಗೋಡು ಪಟ್ಟಣ ಸೇರಿದಂತೆ ಒಂದರ ನಂತರ ಒಂದರಂತೆ ಟ್ರಾನ್ಸ್‌ಫಾರ್ಮರ್‌ಗಳಿಂದ ಫ್ಯೂಸ್‌ಗಳನ್ನು ತೆಗೆದಿದ್ದಾನೆ. ತೆಗೆದ ಎಲ್ಲಾ ಪ್ಯೂಸ್ ಗಳನ್ನು ರಸ್ತೆಗೆ ಎಸೆದು ಒಡೆದು ಹಾಕಿದ್ದಾನೆ.

    ಒಟ್ಟು ನೆಲ್ಲಿಕ್ಕುನ್ನು ಪರಿಸರದ 24 ಟ್ರಾನ್ಸ್‌ಫಾರ್ಮರ್‌ಗಳು ಮತ್ತು ಕಾಸರಗೋಡು ಪರಿಸರದ ಆರು ಟ್ರಾನ್ಸ್‌ಫಾರ್ಮರ್‌ಗಳನ್ನು ಸೇರಿದಂತೆ ಒಟ್ಟು 30 ಟ್ರಾನ್ಸ್ ಫಾರ್ಮರ್ ಗಳ ಪ್ಯೂಸ್ ಕಿತ್ತಿದ್ದಾನೆ. ಪ್ರತಿ ಟ್ರಾನ್ಸ್‌ಫಾರ್ಮರ್ ಸುಮಾರು 200 ಮನೆಗಳಿಗೆ ಕರೆಂಟ್ ನೀಡುತ್ತದೆ. ಒಟ್ಟಾಗಿ 6,000 ಕ್ಕೂ ಹೆಚ್ಚು ಮನೆಗಳಿಗೆ ಕರೆಂಟ್ ಇಲ್ಲದಂತಾಗಿತ್ತು. ಇದಾದ ಬಳಿಕ ಸಂಜೆ 5 ಗಂಟೆಯಿಂದ ಕೆಎಸ್‌ಇಬಿಗೆ ಕರೆಂಟ್ ಇಲ್ಲ ಎಂದು ಪೋನ್ ಕರೆಗಳು ಬರಲಾರಂಭಿಸಿತು. ಒಂದೇ ಸಮನೆ ಇಷ್ಟೊಂದು ಕರೆಗಳು ಬರಲು ಸಾಧ್ಯವಿಲ್ಲ ಎಂದು ಅಲ್ಲಿದ್ದ ಸಿಬ್ಬಂದಿ ಫೀಡರ್ ಅಥವಾ ಎಚ್‌ಟಿ ಲೈನ್‌ನಲ್ಲಿ ಸಮಸ್ಯೆ ಇದ್ದಾಗ ಮಾತ್ರ ಇಷ್ಟೊಂದು ದೊಡ್ಡ ಪ್ರಮಾಣದ ವಿದ್ಯುತ್ ಕಡಿತ ಸಂಭವಿಸುತ್ತದೆ. ಎರಡೂ ಸರಿಯಾಗಿದ್ದವು, ಆದರೆ 6 ಸಾವಿರಕ್ಕೂ ಅಧಿಕ ಮನೆಯಲ್ಲಿ ಕರೆಂಟ್ ಇರಲಿಲ್ಲ. ಎಷ್ಟೇ ತಲೆಕೆಡಿಸಿಕೊಂಡರು ಸಮಸ್ಯೆ ಎನೆಂದು ಸಿಬ್ಬಂದಿಗಳಿಗೆ ತಿಳಿಯಲಿಲ್ಲ. ಈ ವೇಳೆ ಕರೆ ಮಾಡಿದ ವ್ಯಕ್ತಿಯೊಬ್ಬ ಕಪ್ಪು ಬಣ್ಣದ ಟೀ ಶರ್ಟ್ ಧರಿಸಿದ್ದ ಯುವಕನೊಬ್ಬ ಟ್ರಾನ್ಸ್ ಫಾರ್ಮರ್ ಪ್ಯೂಸ್ ಕಿಳುತ್ತಿದ್ದು, ನೋಡಿದಾಗಿ ಹೇಳಿದ್ದಾನೆ. ಇದರಿಂದಾಗಿ ವಿದ್ಯುತ್ ನಿಗಮದ ಸಿಬ್ಬಂದಿಗೆ ಸಮಸ್ಯೆ ಎಲ್ಲಿ ಎಂದು ತಿಳಿಯಿತು.

    ಕೂಡಲೇ ಕಾರ್ಯ ಪ್ರವೃತ್ತರಾದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಆರೋಪಿ ಯುವಕನನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದಾರೆ. ರಾತ್ರಿ 8 ಗಂಟೆಯ ಹೊತ್ತಿಗೆ, ಕೆಎಸ್‌ಇಬಿ ಎಲ್ಲಾ ಟ್ರಾನ್ಸಫಾರ್ಮರ್ ಗಳ ಪ್ಯೂಸ್ ನ್ನು ಮರುಸ್ಥಾಪಿಸಿ ಸಮಸ್ಯೆಯನ್ನು ಸರಿಮಾಡಿದೆ. ಬಹುತೇಕ ಇತಿಹಾಸದಲ್ಲೇ ಈ ರೀತಿ ಯಾರೂ ಕೂಡ ಮಾಡಿರುವ ಸಾದ್ಯವಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.

    Post Views: 219

    Related Posts

    ನ್ಯಾಯಾಲಯಕ್ಕೆ ಹಾಜರಾಗದೆ ಆರು ವರ್ಷಗಳಿಂದ ಪರಾರಿಯಾಗಿದ್ದ ಆರೋಪಿ ವಶಕ್ಕೆ

    May 16, 2026

    ಕಾಪು: ಸ್ಕೂಟಿಗೆ ಬಸ್ ಡಿಕ್ಕಿ- ಬಾಲಕಿ ಸಾವು

    April 22, 2026

    ಸುಳ್ಯ : ಕಂಬಕ್ಕೆ ಬೈಕ್ ಡಿಕ್ಕಿ- ಮೆಸ್ಕಾಂ ಸಿಬ್ಬಂದಿ ಮೃತ್ಯು

    March 25, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

     ಶಾಸಕ ಬಿಪಿ ಹರೀಶ್ ಗೆ ಮೊಟ್ಟೆ ಎಸೆತ : ಕಮಿಷನರ್ ಗೆ ಬಿಜೆಪಿ ನಾಯಕರಿಂದ ದೂರು ಸಲ್ಲಿಕೆ

    July 22, 2026

    ಫರಂಗಿಪೇಟೆ ಬ್ಯಾಂಕ್‌ ಕಳ್ಳತನ ಯತ್ನ ಪ್ರಕರಣ: ಆರೋಪಿಗಳ ಪತ್ತೆಗೆ ಪ್ರತ್ಯೇಕ ವಿಶೇಷ ತಂಡ

    July 22, 2026

    ಬೆಳ್ತಂಗಡಿ: ಖೋಟಾ ನೋಟು ದಂಧೆ ಪ್ರಕರಣ : ನಾಲ್ವರಿಗೆ ಮತ್ತೆ ಪೊಲೀಸ್ ಕಸ್ಟಡಿ : ಮೂವರಿಗೆ ನ್ಯಾಯಾಂಗ ಬಂಧನ

    July 22, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.