ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಕಳಪೆ ರಸ್ತೆಗಳನ್ನು ದುರಸ್ಥಿತಿಗೊಳಿಸಿದರ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ಬಳಿಯ ರಸ್ತೆಯನ್ನು ಮೋದಿ ಅವರು ಬೇಸ್ ಕ್ಯಾಂಪಸ್ ಅನ್ನು ಉದ್ಘಾಟಿಸಲು ಭೇಟಿ ನೀಡುವ ಕೆಲವು ದಿನಗಳಷ್ಟೇ ರಸ್ತೆಯನ್ನು ಸರಿ ಮಾಡಿದ್ದರು. ಇದೀಗ ಕಳಪೆ ಕಾಮಗಾರಿಯ ಬಗ್ಗೆ ತನಿಖೆ ನಡೆಸುವಂತೆ, ಹಾಗೂ ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಮೂಲಗಳ ಪ್ರಕಾರ, ನೀರಿನ ಪೈಪ್ ಸೋರಿಕೆಯಿಂದಾಗಿ ರಸ್ತೆ ಕುಸಿದಿದೆ ಎಂದು ತಿಳಿದುಬಂದಿದೆ. ಬೊಮ್ಮಾಯಿ ಅವರ ದೆಹಲಿ ಭೇಟಿಯು ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆಗಳ ಹೊಸ ಊಹಾಪೋಹಗಳಿಗೆ ಕಾರಣವಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಮಂಗಳವಾರ ಮೋದಿ ಅವರ ನಗರಕ್ಕೆ ಭೇಟಿ ನೀಡುವ ಮುನ್ನ ಸುಮಾರು 14 ಕಿ.ಮೀ ರಸ್ತೆಗಳನ್ನು ಸರಿಪಡಿಸಲು ಹಗಲಿರುಳು ಶ್ರಮಿಸಿದ್ದಾರೆ.ಇನ್ನು ಪ್ರಧಾನಿ ನರೇಂದ್ರ ಮೋದಿ…
Author: main-admin
ಮಂಗಳೂರು: ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಶೋ ರೂಂನಲ್ಲಿ ಭಾರಿ ಬೆಂಕಿ ಆಕಸ್ಮಿಕ ಸಂಭವಿಸಿದ ಘಟನೆ ಮಂಗಳೂರು ನಗರದ ನಾಗುರಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ನಾಗುರಿಯಲ್ಲಿರುವ ಪ್ರಶಾಂತ್ ಮಾಲಕತ್ವದ ಓಕಿನವ ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್‌ನಲ್ಲಿ ಇಂದು ಬೆಳಗ್ಗೆ ಏಕಾಏಕಿ ಬೆಂಕಿ ಅವಘಡ ಸಂಭವಿಸಿದೆ. ಈ ವೇಳೆ ಶೋರೂಂನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಹಲವು ವಾಹನಗಳು ಬೆಂಕಿಗಾಹುತಿಯಾಗಿವೆ. ಘಟನೆಯಲ್ಲಿ ಯಾವುದೇ ಸಾವು-ನೋವು ಉಂಟಾಗಿಲ್ಲ. ಸ್ಥಳಕ್ಕೆ ಪಾಂಡೇಶ್ವರ ಅಗ್ನಿಶಾಮಕ ದಳ ಧಾವಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ…ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಮಂಗಳೂರು : ತಂದೆಯೋರ್ವ ತನ್ನ ಮೂವರು ಮಕ್ಕಳು ಹಾಗೂ ಪತ್ನಿಯನ್ನು ಬಾವಿಗೆ ತಳ್ಳಿ ತಾನು ಕೂಡ ಬಾವಿಗೆ ಹಾರಿ ಆತ್ಮಹತ್ಯೆ ಗೆ ಯತ್ನಿಸಿದ ಹೃದಯ ವಿದ್ರಾವಕ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. ರಶ್ಮಿತಾ (13), ಉದಯ (11), ದಕ್ಷಿತ್ (4) ಮೃತಪಟ್ಟ ಮಕ್ಕಳು ಎಂದು ತಿಳಿದು ಬಂದಿದೆ. ಪದ್ಮನೂರು ಶೆಟ್ಟಿಗಾಡು ನಿವಾಸಿ ಹಿತೇಶ್ ಶೆಟ್ಟಿಗಾರ್ ಕೃತ್ಯವೆಸಗಿದಾತ. ಗುರುವಾರ ಬೆಳಿಗ್ಗೆ ಎಂದಿನಂತೆ ಮಕ್ಕಳನ್ನು ಶಾಲೆಗೆ ಕಳುಹಿಸಿ ಕೆಲಸಕ್ಕೆ ಹೋಗಿ ಸಂಜೆ ವಾಪಸಾಗುತ್ತಿದ್ದಾಗ ಮಕ್ಕಳು ಮನೆಯಲ್ಲಿ ಇಲ್ಲದ್ದನ್ನು ಕಂಡು ಸಂಶಯಗೊಂಡ ಪತ್ನಿ ಎಲ್ಲಾ ಕಡೆ ಹುಡುಕಾಟ ನಡೆಸಿದ ಬಳಿಕ ಸಮೀಪದ ಮನೆಯ ಬಾವಿ ಕಡೆ ಹುಡುಕಾಡಿದಾಗ ಬಾವಿಯಲ್ಲಿ ಮಕ್ಕಳು ನೀರಿನಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ. ಬಾವಿಯ ಪಕ್ಕ ನಿಂತು ಸಹಾಯಕ್ಕೆ ಕೂಗುತ್ತಿದ್ದಾಗ ಪತ್ನಿಯನ್ನು ಹಿಂಬಾಲಿಸಿಕೊಂಡು ಬಂದ ಪತಿ ಹಿತೇಶ್, ಪತ್ನಿಯನ್ನೂ ಬಾವಿಗೆ ದೂಡಿ ತಾನೂ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸ್ಥಳೀಯರು ತಕ್ಷಣ ಕಾರ್ಯಾಚರಣೆ ನಡೆಸಿ ಹಿತೇಶ್ ಮತ್ತು…
ತುಂಬೆ ಹೂವು ಶಿವನಿಗೆ ಪ್ರಿಯವಾದ ಹೂವು. ಶಿವರಾತ್ರಿ ದಿನದಂದು ಭಕ್ತರು ಈ ಹೂವನ್ನು ಹುಡುಕಿ ಶಿವನಿಗೆ ಅರ್ಪಿಸುತ್ತಾರೆ. ಈ ಸಣ್ಣ ಗಿಡದಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಇದರ ಬಿಳಿ ಬಣ್ಣದ ಹೂವುಗಳಿಂದ ಹಲವು ಪ್ರಯೋಜನಗಳಿವೆ. ಹೊಟ್ಟೆಯಲ್ಲಿ ಹುಳು ಆಗಿದ್ದರೆ ತುಂಬೆ ಹೂವು ಮತ್ತು ಅದರ ಎಲೆಯ ರಸಕ್ಕೆ ಜೇನುತುಪ್ಪ ಸೇರಿಸಿ ತಿನ್ನುವುದರಿಂದ ಹುಳುಗಳು ನಾಶವಾಗುತ್ತವೆ. ಇನ್ನು ಪದೇ ಪದೇ ಜ್ವರ ಬರುತ್ತಿದ್ದರೆ ತುಂಬೆ ಎಲೆ ರಸಕ್ಕೆ ಕಾಳು ಮೆಣಸಿನ ಪುಡಿ ಹಾಕಿ ಸೇವನೆ ಮಾಡಿದರೆ ಜ್ವರ ಕಡಿಮೆ ಆಗುತ್ತದೆ. ಮನೆಯಲ್ಲಿ ಸೊಳ್ಳೆಗಳ ಕಾಟ ಮತ್ತು ಕೀಟಗಳ ಕಾಟ ಹೆಚ್ಚು ಇದ್ದರೆ ತುಂಬೆ ಗಿಡದ ಎಲೆ ಒಣಗಿಸಿ ಹೊಗೆ ಹಾಕಿದರೆ ಅವು ದೂರ ಹೋಗುತ್ತವೆ. ಮನೆಯ ಅಂಗಳದಲ್ಲಿ ತುಂಬೆ ಗಿಡವನ್ನು ಬೆಳೆಸುವುದರಿಂದ ಕೀಟಗಳ ಬಾಧೆಯನ್ನು ತಪ್ಪಿಸಬಹುದು. ಇನ್ನು ಚರ್ಮದ ತುರಿಕೆ ಮತ್ತು ಅಲರ್ಜಿ ಇದ್ದರೆ ಈ ತುಂಬೆ ಎಲೆಯನ್ನು ಪೇಸ್ಟ್ ಮಾಡಿ ಚರ್ಮದ ಮೇಲೆ ಲೇಪಿಸುವುದರಿಂದ ಚರ್ಮದ ತುರಿಕೆ – ಅಲರ್ಜಿ ಕಡಿಮೆಯಾಗುತ್ತದೆ.
ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಮಾರುತಿ ಓಮ್ನಿ ಕಾರಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ನಡುವಿನ ಡಿವೈಡರ್ ಮೇಲೆ ಪಲ್ಟಿಯಾದ ಘಟನೆ ಕೊಪ್ಪಲಂಗಡಿಯಲ್ಲಿ ನಡೆದಿದೆ. ಡಿವೈಡರ್ ಮೇಲೆ ಉರುಳಿ ಬಿದ್ದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿದ್ದು, ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಪುಟ್ಟ ಬಾಲಕಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ತಾಲೂಕಿನ ಕಲ್ಲಡ್ಕದಲ್ಲಿ ಗುರುವಾರ (ಜೂ.23)ನಡೆದಿದೆ. ಕಲ್ಲಡ್ಕದ ಹನುಮಾನ್ ನಗರ ನಿವಾಸಿ ರವಿ ಆಚಾರ್ಯ ಎಂಬವರ ಪುತ್ರಿ ಆರಾಧ್ಯ ಆಚಾರ್ಯ(6) ಮೃತ ಬಾಲಕಿ. ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಬಾಲಕಿಗೆ ಸ್ಥಳೀಯ ವೈದ್ಯರಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಎರಡು ದಿನಗಳ ಹಿಂದೆ ಜ್ವರ ಏಕಾಏಕಿ ಉಲ್ಬಣಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮೃತಪಟ್ಟಿದ್ದಾಳೆ. ಹೆಚ್ಚಿನ ವಿವರ ಇನ್ನಷ್ಟೇ ತಿಳಿದುಬರಬೇಕಿದೆ. ಆರಾಧ್ಯ ಮಾಣಿಯ ಶಾಲೆಯ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದು, ಬಾಲಕಿಯ ಸಾವಿಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತ ಬಾಲಕಿಯ ಗೌರವಾರ್ಥವಾಗಿ ಶಾಲೆಗೆ ಗುರುವಾರ ರಜೆ ಘೋಷಿಸಿದ್ದಾರೆ.
ಕಡಬ : ಕಡಬದ ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ವಿದ್ಯಾರ್ಥಿಗಳಿಗೆ ಚಿಕನ್ ಪಾಕ್ಸ್ ರೋಗ ಹರಡಿರುವುದರಿಂದ ಜಿಲ್ಲಾ ಮಟ್ಟದ ಆರೋಗ್ಯಾಧಿಕಾರಿಗಳು ಭೇಟಿ ನೀಡಿ, ಶಾಲೆಗೆ ಒಂದು ವಾರಗಳ ಕಾಲ ರಜೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಕೆಲವು ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿದ್ದ ಈ ರೋಗವು ಇದೀಗ 40ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹರಡಿದೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್.ಬಿ, ಕಡಬ ಖಾಸಗಿ ವಿದ್ಯಾಸಂಸ್ಥೆಯ ಸುಮಾರು 40 ರಷ್ಟು ವಿದ್ಯಾರ್ಥಿಗಳಿಗೆ ಚಿಕನ್ ಪಾಕ್ಸ್ ತಗುಲಿರುವ ಮಾಹಿತಿಯನ್ನು ತಾಲೂಕು ಆರೋಗ್ಯಾಧಿಕಾರಿಗಳಿಂದ ಪಡೆದುಕೊಂಡಿದ್ದೇನೆ. ಇದು ಸೂಕ್ಷ್ಮ ವಿಚಾರ ಹಾಗೂ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಇರೋದರಿಂದ ಮುಂಜಾಗ್ರತಾ ಕ್ರಮವಾಗಿ ಒಂದು ವಾರ ಶಾಲೆಗೆ ರಜೆ ನೀಡುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಬಂಟ್ವಾಳ: ಶಿಕ್ಷಣ ಒಂದು ಧರ್ಮದ ತಳಹದಿಯಲ್ಲಿ ಇರಬಾರದು. ಶಿಕ್ಷಣ ಒಂದು ವರ್ಗದ ತಳಹದಿಯಲ್ಲಿದ್ದರೆ, ಅದು ಒಂದು ವರ್ಗದ ಪಾಲಾಗುತ್ತದೆ ಎಂದು ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದ್ದರು ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಉಪನ್ಯಾಸಕ ರುಕ್ಮಯ ಎಂ. ಕಕ್ಕೆಪದವು ಹೇಳಿದರು. ಸಮಾಜ ಪರಿವರ್ತನಾ ವೇದಿಕೆ, ವಗ್ಗ ವಲಯದ ಆಶ್ರಯದಲ್ಲಿ ಬುದ್ಧ ಬಸವ ಅಂಬೇಡ್ಕರ್ ಚಿಂತನೆಯಡಿಯಲ್ಲಿ ಬಹುಜನ ಸಾಹಿತಿ ಸತೀಶ್ ಕಕ್ಕೆಪದವು ರವರ ನಿರ್ದೇಶನದಲ್ಲಿ, ಯುವ ನಾಯಕ ಅರುಣ್ ಮದ್ವರವರ ಸಾರಥ್ಯದಲ್ಲಿ, ಸಮಾಜ ಪರಿವರ್ತನಾ ಚಳುವಳಿಯ ಮುಖಂಡರಾದ ಪಿ.ಚೆನ್ನಪ್ಪರವರ ಅಧ್ಯಕ್ಷತೆಯಲ್ಲಿ ನಡೆದ ವಿಶ್ವ ಜ್ಞಾನಿ ಪರಮಪೂಜ್ಯ ಡಾ.ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ರವರ 131 ನೇ ಹುಟ್ಟುಹಬ್ಬ ಸಂಭ್ರಮೋತ್ಸವ ಹಾಗು ಪರಿಶಿಷ್ಟ ಜಾತಿಯ ಒಂದು ಸಾವಿರ ಬಡ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾವಳಪಡೂರು ಸೇವಾ ಸಹಕಾರಿ ಬ್ಯಾಂಕ್ ನಿ. ವಗ್ಗದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಕಾವಳ ಪಡೂರು ವಗ್ಗ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಜನಿ ಬಾಬು ಮೂಲ್ಯ,…
ಮುಸ್ಲಿಮರ ಪ್ರವಾದಿ ವಿರುದ್ಧ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮ ಅವರು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಕತಾರ್, ಕುವೈತ್ ಮತ್ತು ಇರಾನ್ ಆಡಳಿತಗಳು ಅಲ್ಲಿನ ಭಾರತೀಯ ರಾಯಭಾರಿಗಳನ್ನು ಕರೆಸಿ ತಮ್ಮ ತೀವ್ರ ಆಕ್ಷೇಪಣೆ ವ್ಯಕ್ತಪಡಿಸಿದ್ದು, ಇದರ ಬೆನ್ನಿಗೇ ಗಲ್ಫ್ ಸಹಕಾರ ಮಂಡಳಿ ಕೂಡ ನೂಪುರ್ ಶರ್ಮ ಹೇಳಿಕೆಯನ್ನು ಖಂಡಿಸಿದೆ. ಈ ಘಟನೆಯ ನಂತರ ನೂಪುರ್ ಹೇಳಿಕೆ ಭಾರತದ ನಿಲುವಿಗೆ ವಿರುದ್ಧವಾಗಿದೆ, ಭಾರತದ ಧೋರಣೆಯು ಎಲ್ಲಾ ಧರ್ಮಗಳನ್ನು ಗೌರವಿಸುವ ದೇಶ ಎಂದು ಭಾರತ ಸ್ಪಷ್ಟಪಡಿಸಿದೆ. ಬಿಜೆಪಿ ನಾಯಕ ನೂಪುರ್ ಶರ್ಮಾ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ದೇಶಗಳ ಮುಂದೆ ಭಾರತವು ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದು, ನೂಪುರ್ ಹೇಳಿಕೆ ಭಾರತದ ನಿಲುವಿಗೆ ವಿರುದ್ಧವಾಗಿದೆ, ಭಾರತದ ಧೋರಣೆಯು ಎಲ್ಲಾ ಧರ್ಮಗಳನ್ನು ಗೌರವಿಸುವ ದೇಶ ಎಂದು ಸ್ಪಷ್ಟಪಡಿಸಿದೆ. ವ್ಯಕ್ತಿಗಳು ನೀಡುವ ಪ್ರಚೋದನಕಾರಿ ಹೇಳಿಕೆಗಳನ್ನು ದೇಶದ ನಿಲುವು ಎಂದು ನೋಡಬಾರದು. ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವಂತಹ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮಗಳನ್ನು ಮುಂದುವರಿಸುವುದಾಗಿ ಭಾರತ ಹೇಳಿದೆ. ನೂಪುರ್ ಶರ್ಮಾ…
ಬೆಂಗಳೂರು: ಕರ್ನಾಟಕದ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆಗಿರುವ ದೋಷಗಳ ಬಗ್ಗೆ ಪರಿಷ್ಕರಣ ಸಮಿತಿಯ ರೋಹಿತ್ ಚಕ್ರತೀರ್ಥ ಅವರಿಗೆ ಮನವರಿಕೆ ಮಾಡಿ, ಆ ದೋಷಗಳನ್ನು ಸರಿಪಡಿಸುವಂತೆ ಶಿಕ್ಷಣ ಸಚಿವರಾದ ಬಿ. ಸಿ. ನಾಗೇಶ್ ಅವರಿಗೆ ಮಾಜಿ ಶಿಕ್ಷಣ ಸಚಿವ, ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಮನವಿ ಮಾಡಿದರು. ಪಠ್ಯಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ವಿವಾದ ನಡೆಯುತ್ತಿರುವುದರ ನಡುವೆ ಎನ್.ಮಹೇಶ್ ಅವರು, ಬಿ.ಸಿ.ನಾಗೇಶ್ ಅವರನ್ನು ಭೇಟಿಯಾಗಿ, ಪಠ್ಯಪುಸ್ತಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಹಾಗೂ ಬುದ್ಧ, ರಾಷ್ಟ್ರಕವಿ ಕುವೆಂಪು ಅವರ ಬರೆದಿರುವ ನಾಡಗೀತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ನಡೆಸಿರುವ ಯಡವಟ್ಟಿನ ವಿಚಾರವಾಗಿ ಸಚಿವರ ಜೊತೆಗೆ ಚರ್ಚೆ ನಡೆಸಿದರು. ಈ ವೇಳೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಬಿ.ಸಿ,ನಾಗೇಶ್, ಸಂವಿಧಾನ ಶಿಲ್ಪಿ ಬಗ್ಗೆ ಯಾವುದೇ ಪೂರ್ವಾಗ್ರಹವಿಲ್ಲ, ಸರಿಪಡಿಸಿದ ಮುದ್ರಿಸಿ ಹಂಚುತ್ತೇವೆಎಂದು ಭರವಸೆ ನೀಡಿದ್ದಾರೆ. ಅಂತೆಯೇ ಗೌತಮ ಬುದ್ಧ ಮತ್ತು ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಸಂಬಂಧಿಸಿದ ವಿವಾದವನ್ನೂ ಸಕಾರಾತ್ಮಕ ಅಂತ್ಯ ಕಾಣಿಸುವ ಬಗ್ಗೆ ಭರವಸೆ ನೀಡಿದ್ದಾರೆ. ‘ಸಂವಿಧಾನ ಶಿಲ್ಪಿ’ ಮತ್ತು ‘ಬೌದ್ಧರುದ್ಯಾನ’…