ಬಂಟ್ವಾಳ: ಕಟ್ಟಡವೊಂದರ ತಳಭಾಗದಲ್ಲಿ ಅಕ್ರಮವಾಗಿ ಮಟ್ಕಾ ಚೀಟಿ ವ್ಯವಹಾರ ನಡೆಸುತ್ತಿದ್ದ ವೇಳೆ ಬಂಟ್ವಾಳ ಉಪ-ವಿಭಾಗ ಬಂಟ್ವಾಳರವರು ಹಾಗೂ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದು ಕೃತ್ಯದಲ್ಲಿ ತೊಡಗಿಸಿದ್ದ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಘಟನೆ ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದಲ್ಲಿ ನಡೆದಿದೆ. ಆರೋಪಿಗಳನ್ನು ಪಾವೂರು ಪೊಸ್ಟ್, ಮಂಜೇಶ್ವರ ,ಕೇರಳ ಸಜೀತ್ .ಕೆ (38), ಉಚ್ಚೀಲ್, ಕಾಪಿತಾನಿಯೋ ಶಾಲೆ , ಮಂಗಳೂರು, ವೀಶಾಲ್ ಸಿ.ಉಚ್ಚಿಲ್ (35), ಮಹಾಲಿಂಗೆಶ್ವರ ಬಳಿ ಬಡ್ಡಹಿತ್ತಲು, ಮಂಜೇಶ್ವರ, ಕೇರಳ ಸುನೀಲ್ ಕುಮಾರ್ (39) ಎಂದು ಗುರುತಿಸಲಾಗಿದೆ. ಬಂಟ್ವಾಳ ತಾಲೂಕು ಬಿ ಮೂಡ ಗ್ರಾಮದ ಪದ್ಮಕಾಂಪ್ಲೆಕ್ಸ್ ಕಟ್ಟಡದ ತಳಭಾಗದಲ್ಲಿ ಮಧ್ಯಾಹ್ನದ ವೇಳೆ ಅಕ್ರಮವಾಗಿ ಮಟ್ಕಾ ಚೀಟಿ ವ್ಯವಹಾರ ನಡೆಸುತ್ತಿದ್ದ ವೇಳೆ ವಿಜಯ್ ಪ್ರಸಾದ್ DYSP ಬಂಟ್ವಾಳ ಉಪ-ವಿಭಾಗ ಬಂಟ್ವಾಳರವರು ಹಾಗೂ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಕೃತ್ಯದಲ್ಲಿ ತೊಡಗಿಸಿದ್ದ ಮೂವರನ್ನು ವಶಕ್ಕೆ ಪಡೆದಿದ್ದು, ಕೃತ್ಯಕ್ಕೆ ಬಳಸಿದ ವಿವಿಧ ಮುಖ ಬೆಲೆಯ ನೋಟುಗಳನ್ನು, ಕ್ಯಾಲ್ಕುಲೇಟರ್, ಪೆನ್ನುಗಳು, ಪುಸ್ತಕಗಳು, ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ…
Author: main-admin
ಬಂಟ್ವಾಳ: ಕೊಡಗು ಮೂಲದ ವ್ಯಕ್ತಿಯೊಬ್ಬರು ಬಿ.ಸಿ. ರೋಡಿನಿಂದ ನರಿಕೊಂಬುವಿಗೆ ಹೋಗಲು ವಾಹನಕ್ಕೆ ಕಾಯುತ್ತಿದ್ದ ಸಂದರ್ಭ ಕಾರಿನಲ್ಲಿ ಬಂದ ತಂಡವೊಂದು ಡ್ರಾಪ್ ಕೊಡುವ ನೆಪದಲ್ಲಿ ಹಲ್ಲೆ ನಡೆಸಿ ನಗದು ಹಾಗೂ ಚಿನ್ನದ ಸರ ದರೋಡೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೊಡಗಿನ ವೀರಾಜಪೇಟೆ ನಿವಾಸಿ ಎಂ. ಗಂಗಾಧರ ಅವರು ದರೋಡೆಗೊಳಗಾದವರು. ಅವರು ಆ. 9ರಂದು ವಿರಾಜಪೇಟೆಯಿಂದ ಬಿ.ಸಿ. ರೋಡಿಗೆ ಬಂದು ನರಿಕೊಂಬುನಲ್ಲಿರುವ ಅಣ್ಣನ ಮನೆಗೆ ತೆರಳುವುದಕ್ಕೆ ರಾತ್ರಿ ಯಾವುದಾದರೂ ವಾಹನ ಸಿಗುತ್ತದೆಯೋ ಎಂದು ಕಾಯುತ್ತಿದ್ದರು. ಈ ವೇಳೆ ಬಿಳಿ ಬಣ್ಣದ ಕಾರೊಂದು ಅವರ ಬಳಿ ಬಂದು ನಿಂತಿದ್ದು, ಅದರಲ್ಲಿದ್ದ ಅಪರಿಚಿತರು ತಾವು ಪಾಣೆಮಂಗಳೂರು ಕಡೆಗೆ ತೆರಳುತ್ತಿದ್ದು ಅಲ್ಲಿವರೆಗೆ ಬರುವಂತೆ ತಿಳಿಸಿದ್ದಾರೆ. ಹಾಗಾಗಿ ಅವರು ಹಿಂದಿನ ಸೀಟಿನಲ್ಲಿ ಕುಳಿತಿದ್ದಾರೆ. ಕಾರು ಸ್ವಲ್ಪ ಮುಂದೆ ಚಲಿಸಿದಾಗ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಅಪರಿಚಿತರು ಗಂಗಾಧರ್ ಮೇಲೆ ಹಲ್ಲೆ ನಡೆಸಿ ಅವರ ಬಳಿಯಿದ್ದ 80,000 ರೂ. ಮೌಲ್ಯದ ಚಿನ್ನದ ಸರ ಹಾಗೂ 2 ಸಾವಿರ ರೂ.…
ಕಾಸರಗೋಡು: ರಾಷ್ಟ್ರ ಧ್ವಜವನ್ನು ಸಂಜೆ ಕೆಳಗಿಳಿಸುವಾಗ ವಿದ್ಯುತ್ ಶಾಕ್‌ನಿಂದ ಇಗರ್ಜಿಯ ಫಾದರ್ ಒಬ್ಬರು ಸಾವಿಗೀಡಾಗಿದ್ದಾರೆ. ಪಕ್ಕದಲ್ಲೇ ಇದ್ದ ಮತ್ತೋರ್ವರಿಗೆ ಗಾಯ ವಾಗಿದ್ದು, ಆಸ್ಪತ್ರೆಗೆ ದಾಖಲಿಸಸಲಾಗಿದೆ ಎಂದು ತಿಳಿದು ಬಂದಿದೆ. ಮೃತಪಟ್ಟವರು ಮುಳ್ಳೇರಿಯ ಇನ್‌ಫೆಂಟ್ ಸೈಂಟ್ ಜೀಸಸ್ ಇಗರ್ಜಿಯ ಫಾದರ್ ಶಿನ್ಸ್ (30) ಎಂದು ತಿಳಿಯಲಾಗಿದೆ. ಆ. 15ರಂದು ಸ್ವಾತಂತ್ರ್ಯೋತ್ಸವ ಆಚರಣೆಯಲ್ಲಿ ಆರೋಹಣ ಮಾಡಿದ್ದ ರಾಷ್ಟ್ರ ಧ್ವಜವನ್ನು ಸಂಜೆ ಆರು ಗಂಟೆಗೆ ಕೆಳಗಿಳಿಸುವಾಗ ಘಟನೆ ನಡೆದಿದೆ. ಗುರುವಾರ ಸಂಜೆ 6 ಗಂಟೆಗೆ ಮುಳ್ಳೇರಿಯದ ಇಗರ್ಜಿಗೆ ತಲುಪಿ ರಾಷ್ಟ್ರ ಧ್ವಜವನ್ನು ಕೆಳಗಿಳಿಸುತ್ತಿದ್ದಾಗ ರಾಷ್ಟ್ರ ಧ್ವಜಾರೋಹಣಗೈದ ಕಬ್ಬಿಣದ ದಂಡಕ್ಕೆ ಸಿಲುಕಿಕೊಂಡ ಧ್ವಜವನ್ನು ತೆಗೆಯಲು ಕಂಬವನ್ನು ಮೇಲಕ್ಕೆತ್ತಿದ್ದಾಗ ಹೈಟೆನ್ಶನ್ ತಂತಿಗೆ ಸ್ಪರ್ಶಿಸಿ ವಿದ್ಯುತ್ ಶಾಕ್ ಆಯಿತು. ಮತ್ತೋರ್ವ ಫಾದರ್ ಸೈಬಿನ್ ಜೋಸೆಫ್ ಅವರಿಗೂ ವಿದ್ಯುತ್ ಶಾಕ್ ತಗಲಿದೆ. ಇಬ್ಬರನ್ನು ಆಸ್ಪತ್ರೆಗೆ ಸಾಗಿಸಿದರೂ, ಫಾದರ್ ಶಿನ್ಸ್ ಸಾವಿಗೀಡಾದರು ಎಂದು ಎನ್ನಲಾಗಿದೆ.
ಬೆಂಗಳೂರು : ಇಂದು ದೇಶಾದ್ಯಂತ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಉತ್ತಮವಾಗಿ ಸೇವೆ ಸಲ್ಲಿಸಿದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಸಿಎಂ ಪದಕ ನೀಡಲಾಗುತ್ತದೆ. ಅದರಂತೆ ರಾಜ್ಯದ 126 ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ 2023 ನೇ ಸಾಲಿನ ಮುಖ್ಯಮಂತ್ರಿ ಪದಕ ನೀಡಲಾಗಿದ್ದು, ಆದರೆ ಇದರಲ್ಲಿ ಅಮಾನತುಗೊಂಡ ಹೆಡ್ ಕಾನ್ಸ್ಟೆಬಲ್‌ಗೆ ಸಿಎಂ ಪದಕ ವಿತರಣೆ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಹೌದು ಇದರಲ್ಲಿ ಅಮಾನತುಗೊಂಡಿರುವ ಮೈಸೂರು ಸಿಸಿಬಿ ಘಟಕದ ಹೆಡ್ ಕಾನ್ಸಟೇಬಲ್ ಸಲೀಂ ಪಾಷಾಗೆ ಸಿಎಂ ಪದಕ ನೀಡಿದ್ದು, ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಕಳುವು ಹಾಗೂ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸಂಬಂಧಿಕರ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಆರೋಪ ಸಾಭೀತಾದ ಹಿನ್ನೆಲೆ ಕಳೆದ ತಿಂಗಳಷ್ಟೇ ಹೆಡ್ ಕಾನ್ಸ್ಟೇಬಲ್ ಸಲೀಂ ಪಾಷಾ ಎಂಬುವವರನ್ನು ಅಮಾನತುಗೊಳಿಸಲಾಗಿತ್ತು. ಮೇಟಗಳ್ಳಿ ಹಾಗೂ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳುವು ಹಾಗೂ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸಂಬಂಧಿಕರ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಆರೋಪ ಕೇಳಿಬಂದಿತ್ತು.…
ವಿಟ್ಲ: ಬಂಟ್ವಾಳ ತಾಲೂಕು ಪುಣಚ ಗ್ರಾಮದ ಗುರ್ಮೆ ಎಂಬಲ್ಲಿರುವ ಗಣೇಶ್ ಗೌಡ ಎಂಬವರ ಮನೆಯ ಬಳಿಯ ಕಟ್ಟಡದಲ್ಲಿ ದುರಸ್ತಿಗಾಗಿ ಇರಿಸಿದ್ದ ಅಂದಾಜು 1 ಲಕ್ಷ 81 ಸಾವಿರ ರೂ ಮೌಲ್ಯದ ಒಟ್ಟು 16 ಬೋರ್‌ವೆಲ್ ಪಂಪುಗಳ ಕಳ್ಳತನ ಮಾಡಿದ್ಧ ಆರೋಪಿಯ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. https://youtu.be/zSqdn5efZys?si=TFX-tIY7gh2uoy_w ಬುಧವಾರ ಪೊಲೀಸರ ವಿಶೇಷ ತಂಡವು ಪ್ರಕರಣಕ್ಕೆ ಸಂಬಂಧಿಸಿ ಕಡಬ ತಾಲೂಕಿನ ಪೆರಬೆ, ಕೋಚಕಟ್ಟೆ ನಿವಾಸಿ ಆರೋಪಿ ಮಹಮ್ಮದ್ ಶಾಕೀರ್ ನನ್ನು ಬಂಧಿಸಿದೆ . ವಿಟ್ಲ ಠಾಣೆಯಲ್ಲಿ ದಾಖಲಾದ ಪ್ರಕರಣದ ಅನ್ವಯ ಪತ್ತೆಗಾಗಿ ವಿಶೇಷ ತಂಡ ರಚಿಸಿತ್ತು ಬಂಧನದ ವೇಳೆ ಆರೋಪಿಯಿಂದ 1 ಲಕ್ಷ 81 ಸಾವಿರ ರೂ ಮೌಲ್ಯದ 16 ಬೋರ್ ವೆಲ್ ಪಂಪ್ ಗಳು ಹಾಗೂ ಕಳವಿಗೆ ಉಪಯೋಗಿಸಿದ 2ಲಕ್ಷ ಮೌಲ್ಯದ ವಾಹನವಶಪಡಿಸಿಕೊಳ್ಳಲಾಗಿದೆ ಸ್ವಾಧೀನ ಪಡಿಸಿದ ಸೊತ್ತುಗಳ ಒಟ್ಟು ಮೌಲ್ಯವು 3,81,000 ರೂ ಆಗಬಹುದು ಎಂದು ಅಂದಾಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿ ಪತ್ತೆಯ ಕಾರ್ಯಾಚರಣೆಯಲ್ಲಿ ಬಂಟ್ವಾಳ ಉಪವಿಭಾಗದ…
ಮಂಗಳೂರು: ವಿದೇಶದಲ್ಲಿರುವ ಸೈಬರ್ ವಂಚಕರಿಗಾಗಿ ಸಿಮ್‌ಕಾರ್ಡ್‌ಗಳನ್ನು ಸಂಗ್ರಹಿಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಮಂಗಳೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಏರ್ಟೆಲ್ ಕಂಪೆನಿಯ 86 ಸಿಮ್ ಕಾರ್ಡ್‌ಗಳು, 2 ಮೊಬೈಲ್ ಫೊನ್‌ಗಳು,, ಸ್ವಿಫ್ಟ್ ಕಾರು ಸಹಿತ 5,49,300 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. https://youtu.be/zSqdn5efZys?si=TFX-tIY7gh2uoy_w ಬೆಳ್ತಂಗಡಿಯ ಶಮದ್ ಮಹಮ್ಮದ್ ಸಮರ್ (26) ಮತ್ತು ಮಹಮ್ಮದ್ ಅಜೀಂ (19) ಬಂಧಿತ ಆರೋಪಿಗಳು. ಶಮದ್ ನಗರದ ಕಾಲೇಜೊಂದರ ಬಿಬಿಎ ವಿದ್ಯಾರ್ಥಿಯಾಗಿದ್ದು, ನಗರದಲ್ಲೇ ಬಾಡಿಗೆ ಮನೆಯಲ್ಲಿದ್ದರು. ಇವರು ಬೆಳ್ತಂಗಡಿಯ ಮುಸ್ತಾಫ ಮತ್ತು ಮಡಂತ್ಯಾರ್ನ ಸಾಜೀದ್ನ ಸೂಚನೆಯಂತೆ ತಮ್ಮ ಗೆಳೆಯರು,ಪರಿಚಿತರಿಗೆ ಸ್ವಲ್ಪ ಹಣ ನೀಡಿ ಪುಸಲಾಯಿಸಿ ಅವರಿಂದ ಸಿಮ್ಕಾರ್ಡ್‌ಗಳನ್ನು ಪಡೆದುಕೊಳ್ಳುತ್ತಿದ್ದರು.ಆರೋಪಿಗಳು ಕಳೆದ ಜನವರಿ ಯಿಂದಲೇ ಈ ದಂಧೆ ನಡೆಸುತ್ತಿದ್ದು, ಇದುವರೆಗೆ 400ರಿಂದ 500 ಸಿಮ್ ಗಳನ್ನು ಸಂಗ್ರಹಿಸಿಕೊಟ್ಟಿದ್ದಾರೆ. ತನ್ನ ಗೆಳೆಯರು, ಪರಿಚಿತರಿಗೆ 200ರಿಂದ 300 ರೂ. ನೀಡಿ ಸಿಮ್ ಕಾರ್ಡ್‌ಗಳನ್ನು ಖರೀದಿಸಿ ಅದನ್ನು ಮುಸ್ತಾಫ ಮತ್ತು ಸಾಜೀದ್ಗೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಧರ್ಮಸ್ಥಳ ಪೊಲೀಸರು ಕಳೆದ ಫೆಬ್ರವರಿಯಲ್ಲಿ ಐವರನ್ನು ಬಂಧಿಸಿ ಅವರಿಂದ…
ಮಂಗಳೂರು : ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಪ್ರಧಾನ ಮಾಡುವ ವಿಶಿಷ್ಟ ಸೇವಾ ಪದಕಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಕಚೇರಿಯ ಸಿ.ಸಿ.ಆರ್.ಬಿ ಘಟಕದಲ್ಲಿ ಎಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರವೀಶ್ ಎಸ್ ನಾಯಕ್ ಆಯ್ಕೆಯಾಗಿದ್ದಾರೆ. https://youtu.be/zSqdn5efZys?si=TFX-tIY7gh2uoy_w ಈ ಹಿಂದೆ ಬಿಜಾಪುರ, ಕಲಬುರ್ಗಿ, ಯಾದಗಿರಿ ಜಿಲ್ಲೆ ಸೇರಿದಂತೆ ಉಡುಪಿಯ ಕರಾವಳಿ ಕಾವಲು ಪಡೆ ಘಟಕ, ಇಮಿಗ್ರೇಷನ್ ಹಾಗೂ ಮಂಗಳೂರು ನಗರ ಉರ್ವ ಮತ್ತು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಸೇವೆ ಸಲ್ಲಿಸಿದ್ದರು. ಆ ಬಳಿಕ ಪದೋನ್ನತಿ ಹೊಂದಿ ಸಿ.ಸಿ.ಆರ್.ಬಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನವದೆಹಲಿ : ದೇಶಾದ್ಯಂತ ಇಂದು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದ್ದು, ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸತತ 11 ನೇ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿದ್ದಾರೆ. https://youtu.be/zSqdn5efZys?si=TFX-tIY7gh2uoy_w ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಿಂದ 78 ನೇ ಸ್ವಾತಂತ್ರ್ಯ ದಿನಾಚರಣೆಗೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸತತ 11 ನೇ ಬಾರಿಗೆ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ನಂತರ ಸತತ ಹನ್ನೊಂದು ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೂರನೇ ಪ್ರಧಾನಿಯಾಗಿದ್ದಾರೆ.
ಕಲಬುರ್ಗಿ : ಸರ್ಕಾರಿ ಶಾಲೆಯೊಂದರಲ್ಲಿ 5ನೇ ತರಗತಿ ಓದುತ್ತಿರುವ 10 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಶಿಕ್ಷಕನೇ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಕಾಮುಕ ಶಿಕ್ಷಕನ ವಿರುದ್ದ ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಧ್ಯಾಹ್ನ ಬಿಸಿಯೂಟ ಮಾಡಿದ ಬಳಿಕ ಬಾಲಕಿ ಶಾಲಾ ಕೋಣೆಗೆ ತೆರಳಿದ್ದಳು. ಶಾಲಾ ಕೋಣೆಯ ಬಾಗಿಲು ಹಾಕಿ ಒಳಗೆ ಬಂದ ಶಿಕ್ಷಕ ಮಲ್ಲಿಕಾರ್ಜುನ, ಬಾಲಕಿಯಿಂದ ಕಿಟಕಿಗಳನ್ನು ಮುಚ್ಚಿಸಿ ಆ ಬಳಿಕ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಚೀರಾಡುತ್ತಿದ್ದಂತೆ ಅಲ್ಲಿಂದ ಓಡಿ ಹೋದ ಎಂದು ಪೊಲೀಸರು ತಿಳಿಸಿದ್ದಾರೆ. ಗಾಬರಿಗೊಂಡ ವಿದ್ಯಾರ್ಥಿನಿ ತನ್ನ ತಂಗಿಯೊಂದಿಗೆ ಮನೆಗೆ ಹೋಗಿ, ಪೋಷಕರಿಗೆ ನಡೆದ ಘಟನೆಯನ್ನು ತಿಳಿಸಿದ್ದಳು. ಪೋಷಕರು ಮುಖ್ಯಶಿಕ್ಷಕರ ಗಮನಕ್ಕೆ ತಂದ ಬಳಿಕ ದೂರು ನೀಡಿದ್ದಾರೆ. ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನವದೆಹಲಿ : ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಸರ್ಕಾರ ಬುಧವಾರ (ಆಗಸ್ಟ್ 14, 2024) ವಿವಿಧ ಕೇಂದ್ರ ಮತ್ತು ರಾಜ್ಯ ಪಡೆಗಳ 1,037 ಪೊಲೀಸ್ ಸಿಬ್ಬಂದಿಗೆ ಸೇವಾ ಪದಕಗಳನ್ನು ಘೋಷಿಸಿದೆ. ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ಮತ್ತು ನಾಗರಿಕ ರಕ್ಷಣೆ (ಎಚ್ಜಿ &ಸಿಡಿ) ಮತ್ತು ಸುಧಾರಣಾ ಸೇವೆಗಳ ಒಟ್ಟು 1037 ಸಿಬ್ಬಂದಿಗೆ 2024 ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಶೌರ್ಯ ಮತ್ತು ಸೇವಾ ಪದಕಗಳನ್ನು ನೀಡಲಾಗಿದೆ. ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪದಕ (ಪಿಎಂಜಿ) ಮತ್ತು ಶೌರ್ಯಕ್ಕಾಗಿ ಪದಕ (ಜಿಎಂ) ಅನ್ನು ಜೀವ ಮತ್ತು ಆಸ್ತಿಯನ್ನು ಉಳಿಸುವಲ್ಲಿ ಅಥವಾ ಅಪರಾಧವನ್ನು ತಡೆಗಟ್ಟುವಲ್ಲಿ ಅಥವಾ ಅಪರಾಧಿಗಳನ್ನು ಬಂಧಿಸುವಲ್ಲಿ ಅನುಕ್ರಮವಾಗಿ ಶೌರ್ಯ ಮತ್ತು ಶೌರ್ಯದ ಗಮನಾರ್ಹ ಕ್ರಿಯೆಯ ಆಧಾರದ ಮೇಲೆ ನೀಡಲಾಗುತ್ತದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ನ 31 ಸಿಬ್ಬಂದಿ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ತಲಾ 17 ಸಿಬ್ಬಂದಿ, ಛತ್ತೀಸ್ಗಢದ 15, ಮಧ್ಯಪ್ರದೇಶದ 12, ಜಾರ್ಖಂಡ್, ಪಂಜಾಬ್, ಕರ್ನಾಟಕದ 20 ಮತ್ತು ತೆಲಂಗಾಣದ ತಲಾ 07 ಸಿಬ್ಬಂದಿ, ಸಿಆರ್ಪಿಎಫ್ನ…