Author: main-admin

ಶಿವಮೊಗ್ಗ: ಕಾರು ಮತ್ತು ಖಾಸಗಿ ಬಸ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಮಂಗಳೂರು ನಿವಾಸಿಯೋರ್ವರು ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ತೀರ್ಥಹಳ್ಳಿ ಹೆದ್ದಾರಿಯ ಸಕ್ರೆಬೈಲು ಸಮೀಪ ನಡೆದಿದೆ ಮಂಗಳೂರು ಕುಪ್ಪೆಪದವು ಕಲ್ಲಾಡಿ ನಿವಾಸಿ ಅಶ್ರಫ್ ಮೃತರು. ಗಾಯಾಳುಗಳು ಕೂಡ ಅದೇ ಗ್ರಾಮದವರು ಎಂದು ಹೇಳಲಾಗಿದೆ. ಕಾರು ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ತೆರಳುತ್ತಿದ್ದಾಗ ತೀರ್ಥಹಳ್ಳಿಯಿಂದ ಬಂದ ಬಸ್ ಅಪಘಾತ ನಡೆದಿದೆ. ಮೃತ ಅಶ್ರಫ್ ಜಮಾಅತೆ ಇಸ್ಲಾಮಿ ಹಿಂದ್ ನ ಸಕ್ರಿಯ ಕಾರ್ಯಕರ್ತರಾಗಿದ್ದರು ಎನ್ನಲಾಗಿದೆ.

Read More

ಕಾರ್ಕಳ : ಈ ವರ್ಷ ಪ್ರತಿಭಾ ಕಾರಂಜಿ ದೊಡ್ಡ ಮಟ್ಟದಲ್ಲಿ ನಡೆಸಲು ಸಿದ್ಧತೆಗಳಾಗುತ್ತಿದ್ದು, ಶಿಕ್ಷಣ ಇಲಾಖೆಯು ಜೂ. 19ರಂದು ಸುತ್ತೋಲೆ ಹೊರಡಿಸಿ ಈ ವರ್ಷದ ಪ್ರತಿಭಾ ಕಾರಂಜಿಯ ದಿನಾಂಕವನ್ನು ಘೋಷಣೆ ಮಾಡಿದೆ. ಆದರೆ ಸುತ್ತೋಲೆಯಲ್ಲಿ ಜಾನಪದ ನೃತ್ಯ ವಿಭಾಗದಲ್ಲಿ ಭೂತದ ಕೋಲಕ್ಕೆ ಅವಕಾಶ ನೀಡಿರುವುದು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ನಿಚ್ಚಳವಾಗಿ ಕಂಡುಬರುತ್ತಿದೆ. ಜುಲೈ ತಿಂಗಳಲ್ಲಿ ಶಾಲಾ ಮಟ್ಟ, ಆಗಸ್ಟ್ ತಿಂಗಳಲ್ಲಿ ಕ್ಲಸ್ಟರ್ ಮಟ್ಟ, ಮುಂದೆ ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದಲ್ಲಿಯೂ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ. ಇದು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ಒಂದು ಉತ್ತಮ ವೇದಿಕೆಯಾಗಿದೆ. ಜಾನಪದ ನೃತ್ಯವು ಸಮೂಹ ವಿಭಾಗವಾಗಿದ್ದು ಅದರಲ್ಲಿ ಬುಡಕಟ್ಟು, ಜಾನಪದ, ಪಾರಂಪರಿಕ ಕಲೆಗಳನ್ನು ಪ್ರದರ್ಶಿಸಬೇಕು ಎಂದು ಇಲಾಖೆ ಆದೇಶದಲ್ಲಿ ತಿಳಿಸಿದೆ. ಅಷ್ಟೇ ಹೇಳಿ ಮುಗಿಸಿದ್ದರೆ ವಿವಾದ ಆಗುತ್ತಿರಲಿಲ್ಲ. ಆದರೆ ಅದೇ ಸುತ್ತೋಲೆಯಲ್ಲಿ ಗೊರವರ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಯಕ್ಷಗಾನ ಇತ್ಯಾದಿ ಉದಾಹರಣೆಗಳನ್ನು ನೀಡಲಾಗಿದೆ. ಕೊನೆಯಲ್ಲಿ ಭೂತದ ಕೋಲ (ಭೂತದ ಕೋಲು ಎಂದು ಆದೇಶದಲ್ಲಿದೆ ?) ಕ್ಕೆ…

Read More

ಮಂಗಳೂರು: ಕರಾವಳಿಯಲ್ಲಿ ಮುಂಗಾರು ಮಳೆ ಆರ್ಭಟ ಮುಂದುವರೆದಿದ್ದು, ಕರಾವಳಿ ಕರ್ನಾಟಕ ಭಾಗದಲ್ಲಿ ನಾಳೆ ಬೆಳಗ್ಗಿನವರೆಗೂ ಭಾರೀ ಮಳೆಯ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಜುಲೈ 5ರ ಬೆಳಗ್ಗೆ 8.30ರವರೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳಾದ ದ.ಕ., ಉಡುಪಿ, ಉತ್ತರ ಕನ್ನಡದಲ್ಲಿ ಜುಲೈ 5ರ ಬೆಳಗ್ಗೆ 8.30ರಿಂದ ಜು. 6ರ 8.30ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಜುಲೈ 8ರವರೆಗೂ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Read More

ಮುಂಬೈ: ಮಹಿಳೆಯೊಬ್ಬಳು ಪ್ರಿಯಕರನನ್ನು ಲೂಟಿ ಮಾಡಿ ಬೆತ್ತಲೆಯಾಗಿ ಹೆದ್ದಾರಿಯಲ್ಲಿ ಬಿಟ್ಟು ಹೋದ ಘಟನೆಯೊಂದು ಮಹಾರಾಷ್ಟ್ರದಲ್ಲಿ ನಡೆದಿದೆ. ಹೀಗೆ ದ್ರೋಹ ಎಸಗಿದ ಮಹಿಳೆಯನ್ನು ಭಾವಿಕಾ ಭೋರ್ (30 ವರ್ಷದ) ಎಂದು ಗುರುತಿಸಲಾಗಿದೆ. ಭಾವಿಕಾ ತನ್ನ ನಾಲ್ವರು ಗೆಳೆಯರೊಂದಿಗೆ ಗೆಳೆದ ಬಾಲಾಜಿ ಶಿವಭಗತ್ ಮೇಲೆ ಹಲ್ಲೆ ನಡೆಸಿದ್ದಾಳೆ. ಬಳಿಕ ಲೂಟಿ ಮಾಡಿ ಮಹಾರಾಷ್ಟ್ರದ ಹೆದ್ದಾರಿಯಲ್ಲಿ ಬೆತ್ತಲೆಯಾಗಿ ಬಿಟ್ಟು ಹೋಗಿದ್ದಾಳೆ. “ಆರೋಪಿಯು ತನ್ನ ಬಟ್ಟೆಗಳನ್ನು ತೆಗೆದ ನಂತರ ತನ್ನ ವಿಡಿಯೋ ಕ್ಲಿಕ್ ಮಾಡಿದ್ದಾಳೆ ಎಂದು ಸಂತ್ರಸ್ತ ಬಾಲಾಜಿ ಶಿವಭಗತ್ ದೂರಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಕೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಉಪ್ಪಿನಂಗಡಿ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ ಎಂಟು ತಿಂಗಳ ಮಗುವಿನ ತಾಯಿ, ತನ್ನ ಮಗುವಿನ ಸಾವಿಗೆ ಪತಿಯೇ ಕಾರಣ ಎಂದು ಶಂಕೆ ವ್ಯಕ್ತಪಡಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. 34 ನೆಕ್ಕಿಲಾಡಿ ಗ್ರಾಮದ ಸಂತ್ಯಡ್ಕ ನಿವಾಸಿಗಳಾದ ಶ್ರೀಧರ ನಾಯ್ಕ ಮತ್ತು ಚಿತ್ರಾ ದಂಪತಿಯ ಪುತ್ರ ಎಂಟು ತಿಂಗಳ ಮಗು ಜೀವಿತ್ ತೀವ್ರ ಜ್ವರದ ಕಾರಣ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜುಲೈ 1 ರಂದು ಮಗು ಸಾವನ್ನಪ್ಪಿದೆ.ಜುಲೈ 2 ರಂದು ಚಿತ್ರಾ ತನ್ನ ಮಗುವಿನ ಮರಣದ ಕುರಿತು ಸಂಶಯ ವ್ಯಕ್ತಪಡಿಸಿ ತನ್ನ ಗಂಡನ ಮೇಲೆ ದೂರು ದಾಖಲಿಸಿದ್ದಾರೆ.ಮೃತ ಮಗು ಜೀವಿತ್‌ನ ತಾಯಿ ಚಿತ್ರಾ ತಮ್ಮ ದೂರಿನಲ್ಲಿ, “ಜ್ವರದಿಂದ ಬಳಲುತ್ತಿದ್ದ ಮಗುವಿನೊಂದಿಗೆ ನಾನು ನನ್ನ ತವರು ಮನೆಗೆ ಹೋಗುತ್ತೇನೆ ಎಂದು ನನ್ನ ಗಂಡನಿಗೆ ಹೇಳಿದಾಗ ಪತಿ ಶ್ರೀಧರ ಕೋಪಗೊಂಡು ಜಗಳವಾಡಿ ನನ್ನನ್ನು ತಳ್ಳಿದ್ದು, ಈ ವೇಳೇ ನಾನು ಮಗುವಿನೊಂದಿಗೆ ಕೆಳಗೆ ಬಿದ್ದೆ. ನಂತರ ಮಗುವಿನ ಜ್ವರ ಹೆಚ್ಚಾಯಿತು.…

Read More

ಕಾಸರಗೋಡು : ಸುರಿಯುತ್ತಿರುವ ಭಾರಿ ಮಳೆಗೆ ಬಾಲಕಿಯೊಬ್ಬಳ ಮೇಲೆ ಮರವೊಂದು ಬಿದ್ದು ಬಾಲಕಿ ಸಾವನಪ್ಪಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಮೃತರನ್ನು ಪುತ್ತಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಆಯಶತ್ ಮಿನ್ಹಾ ಎಂದು ಗುರುತಿಸಲಾಗಿದೆ. ಸಂಜೆ 4 ಗಂಟೆಗೆ ತರಗತಿಗಳು ಮುಗಿದ ಕೂಡಲೇ ಶಾಲೆಯ ಹೊರಗೆ ಈ ಘಟನೆ ನಡೆದಿದೆ. ಆಯಶತ್ ಮಿನ್ಹಾ ಮತ್ತು ಆಕೆಯ ಇಬ್ಬರು ಸ್ನೇಹಿತರು ಶಾಲಾ ಬಸ್‌ಗೆ ನಡೆದುಕೊಂಡು ಹೋಗುತ್ತಿದ್ದಾಗ ಮರದ ಕೊಂಬೆಯೊಂದುಆಕೆಯ ತಲೆಯ ಮೇಲೆ ಬಿದ್ದಿದೆ ಎಂದು ಶಿಕ್ಷಕರೊಬ್ಬರು ತಿಳಿಸಿದ್ದಾರೆ. ಉಳಿದ ಇಬ್ಬರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿಕ್ಷಕರು ಆಕೆಯನ್ನು 15 ಕಿಮೀ ದೂರದ ಕುಂಬಳದ ಸಹಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು. ಆಯಶತ್ ಮಿನ್ಹಾ ತನ್ನ ಪೋಷಕರು ಮತ್ತು ಮೂವರು ಒಡಹುಟ್ಟಿದವರನ್ನು ಅಗಲಿದ್ದಾರೆ ಎಂದು ಶಿಕ್ಷಕರು ತಿಳಿಸಿದ್ದಾರೆ.

Read More

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಜು.4ರ ಮಂಗಳವಾರ ಮಂಗಳೂರು, ಮುಲ್ಕಿ, ಉಳ್ಳಾಲ, ಮೂಡುಬಿದರೆ ಹಾಗೂ ಬಂಟ್ವಾಳ ತಾಲೂಕುಗಳ ಅಂಗನವಾಡಿ ಕೇಂದ್ರ ಸೇರಿದಂತೆ ಶಾಲೆಗಳು‌ ಹಾಗೂ‌ ಕಾಲೇಜುಗಳಿಗೆ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ರಜೆ ಘೋಷಿಸಿದ್ದಾರೆ.

Read More

ಸೋಮವಾರ ಬೆಳಗ್ಗಿನಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಮಂಗಳೂರು ನಗರ ಪ್ರದೇಶದ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ. ಭಾರೀ ಮಳೆಗೆ ಪಂಪ್ ವೆಲ್, ಕೊಟ್ಟಾರ ಚೌಕಿ, ಮಾಲೆಮಾರ್ ಪ್ರದೇಶ ಜಲಾವೃತವಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ಪಂಪ್‌ವೆಲ್ ಮೇಲ್ಸೇತುವೆ ಕೆಳಗೆ ಮೊಣಕಾಲು ಎತ್ತರಕ್ಕೆ ನೀರು ನಿಂತಿದ್ದು ನಗರದ ಕಡೆ ಸಂಚರಿಸುವ ವಾಹನಗಳು ಜಂಕ್ಷನ್‌ನಲ್ಲಿ ಸಿಲುಕಿಕೊಂಡಿವೆ.ನಗರದ ಬಿಜೈನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ದುರಸ್ತಿಗಾಗಿ ಮ್ಯಾನ್ ಹೋಲ್ ಅಗೆದಿಟ್ಟುರುವುದ್ದರಿಂದ ಭಾರೀ ಮಳೆಯಿಂದಾಗಿ ಗಲೀಜು ನೀರಿನ ಜತೆ ಮಳೆ ನೀರು ಸುತ್ತಮುತ್ತಲಿನ ಬ್ಯಾಂಕ್, ಮೆಡಿಕಲ್‌ನೊಳಗೆ ನುಗ್ಗಿ ಅವಾಂತರ ಸೃಷ್ಟಿಯಾಗಿದೆ.ಇಂಡಿಯನ್ ಬ್ಯಾಂಕ್‌ನೊಳಗೆ ನೀರು ನುಗ್ಗಿ ಬ್ಯಾಂಕ್ ಸಿಬ್ಬಂದಿಗಳು ಕಡತಗಳು ಹಾಗೂ ಇನ್ನು ಪಕ್ಕದಲ್ಲಿದ್ದ ಎಟಿಎಂ ಮಷಿನ್‌ನಲ್ಲಿದ್ದ ಹಣವನ್ನು ಕೂಡ ಸ್ಥಳಾಂತರಿಸಿದ್ದಾರೆ.ಪಕ್ಕದಲ್ಲಿದ್ದ ಹೋಟೇಲ್ ಹಾಗೂ ಮೆಡಿಕಲ್‌ಗಳಿಗೂ ಗಲೀಜು ನೀರು ನುಗ್ಗಿ ಸಮಸ್ಯೆಯಾಗಿದೆ.ಕಳೆದ ಹಲವಾರು ದಿನಗಳಿಂದ ಮ್ಯಾನ್ ಹೋಲ್ ದುರಸ್ತಿಯಾಗುತ್ತಿದ್ದು ಇನ್ನು ಕೂಡ ಪೂರ್ಣವಾಗಿಲ್ಲ ಜತೆಗೆ ದಿನನಿತ್ಯ ಈ ಭಾಗದಲ್ಲಿ ಸಂಚರಿಸುವ ಮತ್ತು ವ್ಯಾಪಾರ ವ್ಯವಹಾರ ನಡೆಸುವ ಜನರಿಗೆ ಗಲೀಜು…

Read More

ಮಂಗಳೂರು : ಮಂಗಳೂರು ನಗರದ ಬೀದಿ ನಾಯಿಗಳ ತಾಯಿ ಎಂದೇ ಫೇಮಸ್ ಆಗಿರೋ ರಜನಿ ಶೆಟ್ಟಿ ಬಲ್ಲಾಳ್ಬಾಗ್ ಅವರ ಮೇಲೆ ಪಕ್ಕದ ಮನೆಯ ಮಹಿಳೆ ಹಲ್ಲೆ ನಡೆಸಿದ್ದಾರೆ. ರಜನಿ ಅವರು ಪ್ರತಿನಿತ್ಯ ನೂರಾರು ಬೀದಿ ನಾಯಿಗಳಿಗೆ ಅನ್ನ ಹಾಕಿ ಸಲಹುತ್ತಾ, ಅನಾರೋಗ್ಯಗೊಂಡ ನಾಯಿಗಳಿಗೆ ಮನೆಯಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ರಜನಿ ಅವರ ಪಕ್ಕದ ಮನೆಯ ಮಂಜುಳಾ ಎಂಬುವವರು ಹಲವಾರು ಸಮಯದಿಂದ ಇವರಿಗೆ ಕಿರುಕುಳ ನೀಡುತ್ತಿದ್ದು, ರಜನಿ ಅವರ ನಾಯಿ ಬೆಕ್ಕುಗಳಿಗೆ ಹಲ್ಲೆ ನಡೆಸುವ ಜೊತೆಗೆ ಹಲವಾರು ರೀತಿಯಲ್ಲಿ ತೊಂದರೆ ನೀಡುತ್ತಿದ್ದರು. ಇಂದು ರಜನಿ ಅವರು ಬಟ್ಟೆ ಒಣ ಹಾಕಿದ್ದಾಗ ಬಟ್ಟೆಗಳನ್ನು ಎಸೆದು ಬಳಿಕ ದೊಡ್ಡ ಕಲ್ಲಿನಿಂದ ರಜನಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಕಲ್ಲಿನಿಂದ ಹಲ್ಲೆಗೊಳಗಾದ ರಜನಿ ಅವರ ಕೈಕಾಲುಗಳಿಗೆ ಏಟಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದ್ದು , ಹಲ್ಲೆ ನಡೆಸಿದ ಮಂಜುಳಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಜನಿ ಶೆಟ್ಟಿಯ ಅಭಿಮಾನಿಗಳು ಒತ್ತಾಯಿಸಿದ್ದಾರೆ.

Read More

ರೇವಾ : ಮಧ್ಯಪ್ರದೇಶದ ರೇವಾ ನಗರದ ಸಿಟಿ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರ ಶವವನ್ನು ಆಕೆಯ ಮನೆಯ ಫ್ರೀಜರ್‌ನಿಂದ ಪೊಲೀಸರು ಹೊರತೆಗೆದಿದ್ದಾರೆ. ಈ ಬಗ್ಗೆ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸಿಟಿ ಕೊತ್ವಾಲಿ ಪೊಲೀಸ್ ಠಾಣೆ ಪ್ರಭಾರಿ ವಿಜಯ್ ಸಿಂಗ್ ಮಾತನಾಡಿ, ‘ಸುಮಿತ್ರಿ ಮಿಶ್ರಾ ಅವರ ಶವವನ್ನು ಅವರ ಮನೆಯ ಫ್ರೀಜರ್‌ನಿಂದ ಹೊರತೆಗೆಯಲಾಗಿದೆ. ಪೋಷಕರ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿದ್ದು, ಈ ವಿಷಯ ಬೆಳಕಿಗೆ ಬಂದಿದೆ. ಎರಡು ದಿನಗಳ ಹಿಂದೆ ಪತಿ ಭರತ್ ಮಿಶ್ರಾ ನಮ್ಮ ಮಗಳನ್ನು ಕೊಂದು ಶವವನ್ನು ಫ್ರೀಜರ್‌ನಲ್ಲಿಟ್ಟಿದ್ದಾನೆ ಎಂದು ಮೃತ ಮಹಿಳೆಯ ತಾಯಿಯ ಕಡೆಯವರು ಆರೋಪಿಸಿದರೆ, ಮುಂಬೈನಿಂದ ಮಗ ಬರಲೆಂದು ಶವವನ್ನು ಫ್ರೀಜರ್‌ನಲ್ಲಿ ಇಟ್ಟಿದ್ದೆ ಎಂದು ಮೃತ ಮಹಿಳೆಯ ಪತಿ ಹೇಳಿಕೊಂಡಿದ್ದಾನೆ. ಸದ್ಯ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈಗ ಇಡೀ ಪ್ರಕರಣದ ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರವಷ್ಟೇ ಸಾವಿಗೆ ಕಾರಣ ತಿಳಿಯಲಿದೆ ಎಂದು…

Read More