ಉಡುಪಿ: ಮುಂಬೈಯ ಕಸ್ಟಮ್ ಅಧಿಕಾರಿಗಳ ಹೆಸರಿನಲ್ಲಿ ವೈದ್ಯರೊಬ್ಬರಿಗೆ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿಯ ವೈದ್ಯರಾಗಿರುವ ಡಾ.ಅರುಣ್ ಕುಮಾರ್ (53) ಎಂಬವರಿಗೆ ಜು.29ರಂದು ಅಪರಿಚಿತರು ಕಸ್ಟಮ್ಸ್‌ನಿಂದ ಕರೆ ಮಾಡಿ, ನಿಮ್ಮ ಆಧಾರ್ ನಂಬ್ರ ಬಳಸಿ ಬುಕ್ ಆಗಿರುವ ಕೊರಿಯರ್‌ನಲ್ಲಿ 5 ಪಾಸ್‌ಪೋರ್ಟ್, 5 ಎಟಿಎಂ ಕಾರ್ಡ್, 200ಗ್ರಾಂ ಎಂಡಿಎಂಎ ಹಾಗೂ 5000 ಯುಎಸ್ ಡಾಲರ್ ಇದ್ದು, ಕೋರಿಯರ್ ಮುಂಬಯಿ ಕಸ್ಟಮ್ಸ್‌ರವರ ವಶದಲ್ಲಿ ಇರುವುದಾಗಿ ತಿಳಿಸಿದರು. ಅಂತಹ ಬುಕಿಂಗ್ ಮಾಡಿಲ್ಲ ಎಂದು ಅರುಣ್ ಕುಮಾರ್ ನಿರಾಕರಿಸಿದಾಗ, ಕರೆ ಮಾಡಿದವರು ಅವರನ್ನು ಹಾಟ್‌ಲೈನ್ ಮೂಲಕ ಹಿರಿಯ ಅಧಿಕಾರಿಗೆ ಸಂಪರ್ಕಿಸಿದರು. ಹಾಟ್‌ಲೈನ್‌ನಲ್ಲಿದ್ದ ವ್ಯಕ್ತಿ ಪೊಲೀಸ್ ಅಧಿಕಾರಿ ಎಂದು ನಂಬಿಸಿ ಅರುಣ್ ಕುಮಾರ್ ಅವರ ಆಧಾರ್ ಕಾರ್ಡ್ ದುರ್ಬಳಕೆಯ ಬಗ್ಗೆ ದೂರನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು. ನಿಮ್ಮ ಆಧಾರ್ ಕಾರ್ಡ್‌ನ್ನು ಭಯೋತ್ಪಾದಕರು ಸಿಮ್ ಖರೀದಿಸಲು ಬಳಸಿದ್ದು, ಈ ದೂರಿಗೆ ಸಂಬಂಧಿಸಿ ನಿಮ್ಮನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ ತಿಳಿಸಿದ್ದರು. ಜು.29ರಿಂದ…
Author: main-admin
ಉಡುಪಿ: ಮುಂಬೈಯ ಕಸ್ಟಮ್ ಅಧಿಕಾರಿಗಳ ಹೆಸರಿನಲ್ಲಿ ವೈದ್ಯರೊಬ್ಬರಿಗೆ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಡುಪಿಯ ವೈದ್ಯರಾಗಿರುವ ಡಾ.ಅರುಣ್ ಕುಮಾರ್ (53) ಎಂಬವರಿಗೆ ಜು.29ರಂದು ಅಪರಿಚಿತರು ಕಸ್ಟಮ್ಸ್‌ನಿಂದ ಕರೆ ಮಾಡಿ, ನಿಮ್ಮ ಆಧಾರ್ ನಂಬ್ರ ಬಳಸಿ ಬುಕ್ ಆಗಿರುವ ಕೊರಿಯರ್‌ನಲ್ಲಿ 5 ಪಾಸ್‌ಪೋರ್ಟ್, 5 ಎಟಿಎಂ ಕಾರ್ಡ್, 200ಗ್ರಾಂ ಎಂಡಿಎಂಎ ಹಾಗೂ 5000 ಯುಎಸ್ ಡಾಲರ್ ಇದ್ದು, ಕೋರಿಯರ್ ಮುಂಬಯಿ ಕಸ್ಟಮ್ಸ್‌ರವರ ವಶದಲ್ಲಿ ಇರುವುದಾಗಿ ತಿಳಿಸಿದರು. ಅಂತಹ ಬುಕಿಂಗ್ ಮಾಡಿಲ್ಲ ಎಂದು ಅರುಣ್ ಕುಮಾರ್ ನಿರಾಕರಿಸಿದಾಗ, ಕರೆ ಮಾಡಿದವರು ಅವರನ್ನು ಹಾಟ್‌ಲೈನ್ ಮೂಲಕ ಹಿರಿಯ ಅಧಿಕಾರಿಗೆ ಸಂಪರ್ಕಿಸಿದರು. ಹಾಟ್‌ಲೈನ್‌ನಲ್ಲಿದ್ದ ವ್ಯಕ್ತಿ ಪೊಲೀಸ್ ಅಧಿಕಾರಿ ಎಂದು ನಂಬಿಸಿ ಅರುಣ್ ಕುಮಾರ್ ಅವರ ಆಧಾರ್ ಕಾರ್ಡ್ ದುರ್ಬಳಕೆಯ ಬಗ್ಗೆ ದೂರನ್ನು ಸ್ವೀಕರಿಸಲಾಗಿದೆ ಎಂದು ತಿಳಿಸಿದರು. ನಿಮ್ಮ ಆಧಾರ್ ಕಾರ್ಡ್‌ನ್ನು ಭಯೋತ್ಪಾದಕರು ಸಿಮ್ ಖರೀದಿಸಲು ಬಳಸಿದ್ದು, ಈ ದೂರಿಗೆ ಸಂಬಂಧಿಸಿ ನಿಮ್ಮನ್ನು ವರ್ಚುವಲ್ ಆರೆಸ್ಟ್ ಮಾಡುವುದಾಗಿ ತಿಳಿಸಿದ್ದರು. ಜು.29ರಿಂದ…
ಬಂಟ್ವಾಳ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತ್ರತ್ವದಲ್ಲಿ ಬಂಧಿಸಿ,ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಧಿತ ಆರೋಪಿಯನ್ನು ಅಫೀಕ್ ಯಾನೆ ಮಹಮ್ಮದ್ ಅಫೀಕ್ ( 19) ಎಂದು ಗುರುತಿಸಲಾಗಿದೆ. ಅಪ್ರಾಪ್ತ ಬಾಲಕಿಗೆ ಆಮಿಷ ತೋರಿಸಿ ಪಾರ್ಕ್ ಒಂದಕ್ಕೆ ಬರುವಂತೆ ಮಾಡಿ ಅಲ್ಲಿ ಮೂವರು ಆರೋಪಿಗಳು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಈ ಪೈಕಿ ಇಬ್ಬರು ಆರೋಪಿಗಳ ಬಂಧನವಾಗಿದ್ದು ಇನ್ನೋರ್ವ ಪ್ರಮುಖ ಆರೋಪಿ ನಾಪತ್ತೆಯಾಗಿದ್ದ. ಇದೀಗ ನಾಪತ್ತೆಯಾಗಿದ್ದ ಪ್ರಮುಖ ಆರೋಪಿಯಾಗಿದ್ದ ಅಫೀಕ್ ಯಾನೆ ಮಹಮ್ಮದ್ ಅಫೀಕ್ ಎಂಬಾತನ ಬಂಧನವಾಗಿದೆ. ಈ ಪ್ರಕರಣದ ಇನ್ನೆರಡು ಆರೋಪಿಗಳಾದ ಮಹಮ್ಮದ್ ಫೈಝಲ್ ಹಾಗು ಲಿಖೇಶ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ,ಅವರು ಜಾಮೀನು ಮೇಲೆ ಬಿಡುಗಡೆಗೊಂಡಿದ್ದಾರೆ.ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮಹಮ್ಮದ್ ಅಫೀಕ್‌ನ ಬಂಧನಕ್ಕೆ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್ ನೇತ್ರತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿತ್ತು.
ಮಂಗಳೂರು ನಗರದ ಉಳ್ಳಾಲ ಸಮೀಪ ಟಾರ್ಗೆಟ್ ಇಲ್ಯಾಸ್ ಕೊಲೆಗೆ ಪ್ರತಿಕಾರವಾಗಿ ಕೊಲೆಯ ಪ್ರಮುಖ ಆರೋಪಿಯಾಗಿದ್ದ ಕಡಪ್ಪರ ಸಮೀರ್ ಹತ್ಯೆಗೆ ಸಂಬಂಧಿಸಿದಂತೆ ಹಲವರನ್ನು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಿದ ಪೊಲೀಸರಿಗೆ, ಈ ಕೊಲೆಯಲ್ಲಿ ಐವರು ಭಾಗಿಯಾಗಿರುವುದನ್ನು ಖಚಿತಪಡಿಸಿಕೊಂಡಿದ್ದು, ಇಲ್ಯಾಸ್ ಪತ್ನಿಯ ಸಹೋದರ ಮೊಹಮ್ಮದ್ ನೌಷದ್ ಈ ಕೊಲೆಯ ಪ್ರಮುಖ ರೂವಾರಿಯಾಗಿದ್ದು, ಆತನ ತಂಡ ಈ ಕೃತ್ಯ ಎಸಗಿರುವುದು ದೃಢಪಟ್ಟಿದೆ. ಕಡಪ್ಪರ ಸಮೀರ್ ತನ್ನ ತಾಯಿ ಮತ್ತು ಕುಟುಂಬದ ಸದಸ್ಯರೊಂದಿಗೆ ಪಂಪ್‌ವೆಲ್‌ನಲ್ಲಿರುವ ತನ್ನ ಫ್ಲ್ಯಾಟ್‌ಗೆ ತೆರಳುವ ಸಂದರ್ಭದಲ್ಲಿ ಕಲ್ಲಾಪುವಿನ ವಾಣಿಜ್ಯ ಸಂಕೀರ್ಣದ ಬಳಿ ಫೋನ್‌ನಲ್ಲಿ ಮಾತನಾಡುತ್ತಿದ್ದ ಸಮೀರ್‌ನನ್ನು ಕಾರಿನಲ್ಲಿ ಬಂದಿದ್ದ ಅಪರಿಚಿತರ ತಂಡ ತಲವಾರಿನಿಂದ ತಲೆ ಮತ್ತು ಕುತ್ತಿಗೆಗೆ ಕಡಿದು ಪರಾರಿಯಾಗಿತ್ತು.ಇಲ್ಯಾಸ್ ಹತ್ಯೆಗೆ ಪ್ರತಿಕಾರವಾಗಿ ಈ ಕೊಲೆ ನಡೆದಿತ್ತು ಎಂಬ ಪ್ರಾಥಮಿಕ ಮಾಹಿತಿಯಂತೆ ಕಮಿಷನರ್ ಅನುಪಮ ಅಗರವಾಲ್ ನೇತೃತ್ವದ ತಂಡ ಹಲವರನ್ನು ವಶಕ್ಕೆ ತೆಗೆದುಕೊಂಡು ಕೊಲೆ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಕೊಲೆ ಕಣ್ಣಾರೆ ಕಂಡಿದ್ದ ನೌಷಾದ್: ದಾವೂದ್, ಸಮೀರ್ ಕಡಪ್ಪರ ನೇತೃತ್ವದಲ್ಲಿ 2018ರ ಜ. 13ರಂದು…
ಉಡುಪಿ: ಗೃಹೋಪಯೋಗಿ ಮಳಿಗೆಯೊಂದರ ಮ್ಯಾನೇಜರ್‌ಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸೆಕ್ಯುರಿಟಿ ಗಾರ್ಡ್‌ನ್ನು ಉಡುಪಿ ನಗರ ಪೊಲೀಸರು ಬಂಧಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಗೃಹೋಪಯೋಗಿ ಮಳಿಗೆಯ ಸೆಕ್ಯೂರಿಟಿ ಗಾರ್ಡ್, ಪ್ರಸಾದ್ ಹಾಗೂ ಇರಿತಕ್ಕೊಳಗಾದ ಹರ್ಷ ಮಳಿಗೆಯ ಕ್ಲಸ್ಟರ್ ಮ್ಯಾನೇಜರ್ ರೋನ್ಸನ್ ಎವರೆಸ್ಟ್ ಡಿಸೋಜ(36) ಎಂದು ಗುರುತಿಸಲಾಗಿದೆ. ಇರಿತದಿಂದ ತೀವ್ರವಾಗಿ ಗಾಯಗೊಂಡ ರೋನ್ಸನ್ ಎವರೆಸ್ಟ್ ಡಿಸೋಜ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ.9ರಂದು ಕೆಲಸಕ್ಕೆ ಬಂದಿದ್ದ ಪ್ರಸಾದ್, ಮಧ್ಯಾಹ್ನದವರೆಗೆ ಮಾತ್ರ ಕೆಲಸ ಮಾಡಿ ಹೋಗಿದ್ದನು. ಈ ಕುರಿತು ಸೆಕ್ಯೂಟಿರಿ ಗಾರ್ಡ್ ಕಂಪನಿಯ ಮ್ಯಾನೇಜರ್‌ಗೆ ತಿಳಿಸಲಾಗಿತ್ತು. ಆ.10ರಂದು ಪ್ರಸಾದ್ ಕೆಲಸಕ್ಕೆ ಹಾಜರಿದ್ದು, ಸಂಜೆ ವೇಳೆ ರೋನ್ಸನ್ ಡಿಸೋಜ ಅವರನ್ನು ಪ್ರಸಾದ್ ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿಯ ಶೋರೂಂಗೆ ಬರಲು ತಿಳಿಸಿದ್ದನು. ಅದರಂತೆ ಬಂದ ರೋನ್ಸನ್ ಅವರಲ್ಲಿ ನನ್ನನ್ನು ಕೆಲಸದಿಂದ ತೆಗೆಯಬೇಡಿ ಎಂದು ಪ್ರಸಾದ್ ಹೇಳಿದನು. ಅದಕ್ಕೆ ಮರುದಿನ ಅಧಿಕಾರಿಗಳೊಂದಿಗೆ ಮೀಟಿಂಗ್‌ನಲ್ಲಿ ಚರ್ಚಿಸಿ ತಿಳಿಸುತ್ತೇನೆ ಎಂದು ಹೇಳಿದ್ದರು. ಇದರಿಂದ…
ಪುತ್ತೂರು: ಲಾಡ್ಜ್‌ವೊಂದಕ್ಕೆ ಪೊಲೀಸರು ದಾಳಿ ನಡೆಸಿದ ಘಟನೆ ನೆಹರುನಗರದಲ್ಲಿ ನಡೆದಿದೆ. ನೆಹರುನಗರದಲ್ಲಿರುವ ಲಾಡ್ಜ್‌ಗೆ ಪೊಲೀಸರು ದಾಳಿ ನಡೆಸಿದ್ದು, ರಿಸೆಪ್ಶನಿಸ್ಟ್ ಹಾಗೂ ಲೆಡ್ಜರ್ ಪುಸ್ತಕವನ್ನು ವಶಕ್ಕೆ ಪಡೆದಿದ್ದಾರೆ. ಯುವಕ-ಯುವತಿಯಿಂದ ಯಾವುದೇ ದಾಖಲೆಗಳನ್ನು ತೆಗೆದುಕೊಳ್ಳದೆ ರೂಮ್ ನೀಡಲಾಗಿದೆ ಎನ್ನುವ ಆರೋಪದ ಮೇರೆಗೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ತಡ ರಾತ್ರಿ ಇನೋವಾ ಕಾರಿನಲ್ಲಿ ಬಂದ ತಂಡವೊಂದಕ್ಕೆ ರೂಂ ನೀಡಿರುವುದೆ ದಾಳಿಗೆ ಕಾರಣ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಇನೋವಾದಲ್ಲಿ ಬಂದ ವ್ಯಕ್ತಿಗಳ ಬಳಿ ಸರಿಯಾದ ದಾಖಲಾತಿ ಪಡೆದುಕೊಳ್ಳದೆ ರೂಂ ನೀಡಲಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪ ಮಾಡುತ್ತಿದ್ದಾರೆ. ಆ ಇನ್ನೊವಾದಲ್ಲಿ ಅನ್ಯಕೋಮಿನ ಜೋಡಿ ಇತ್ತು ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿವೆ. ಪುತ್ತೂರಿನ ಹೊರವಲಯ ನೆಹರೂ ನಗರದಲ್ಲಿರುವ ಲಾಡ್ಜ್ ವೊಂದಕ್ಕೆ ಮಂಗಳವಾರ ಮಧ್ಯಾಹ್ನ ಪುತ್ತೂರು ನಗರ ಠಾಣೆ ಪೊಲೀಸರು ದಾಳಿ ನಡೆಸಿದರು. ಪುತ್ತೂರಿನ ನೆಹರೂ ನಗರದಲ್ಲಿರುವ ಕೀರ್ತನ ಲಾಡ್ಜ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ…
ಉಳ್ಳಾಲ: ಟಾರ್ಗೆಟ್ ಇಲ್ಯಾಸ್ ಕೊಲೆ ಪ್ರಕರಣದ ಆರೋಪಿ ಉಳ್ಳಾಲದ ನಟೋರಿಯಸ್ ರೌಡಿ ಕಡಪ್ಪರ ಸಮೀರ್ (34) ಎಂಬಾತನನ್ನು ತೊಕ್ಕೊಟ್ಟು ಸಮೀಪದ ಕಲ್ಲಾಪು ಬಳಿ ತಂಡವೊಂದು ಭಾನುವಾರ ರಾತ್ರಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದೆ. ಇದರ ಹಿಂದೆ ಗೋಲ್ಡ್ ಮಾಫಿಯಾ ಶಂಕ ವ್ಯಕ್ತವಾಗಿದ್ದು , ಆ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ. ಪ್ರಕರಣವೊಂದರಲ್ಲಿ ಜೈಲು ಪಾಲಾಗಿದ್ದ ಸಮೀರ್ ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದು ಈತನ ಚಲನವಲನಗಳ ಮೇಲೆ 4-5 ಮಂದಿ ದುಷ್ಕರ್ಮಿಗಳ ತಂಡ ಕಣ್ಣಿಟ್ಟಿತ್ತು. ಬಾನುವಾರ ರಾತ್ರಿ 10.15ರ ವೇಳೆಗೆ ಸಮೀರ್ ತನ್ನ ತಾಯಿ. ಪತ್ನಿ. ಮಕ್ಕಳ ಜತೆ ಕಾರಿನಲ್ಲಿ ಕಲ್ಲಾಪಿನ ಫಾಸ್ಟವುಡ್ ಸೆಂಟರ್‌ವೊಂದಕ್ಕೆ ಬಂದಿದ್ದಾರೆ. ಈ ವೇಳೆ ಮತ್ತೊಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ಅಪಾಯವನ್ನರಿತ ಸಮೀರ್ ತಪ್ಪಿಸಿಕೊಂಡು ರೈಲ್ವೆ ಹಳಿ ಕಡೆಗೆ ಒಡಿದ್ದಾನೆ. ಆದರೆ ದುಷ್ಕರ್ಮಿಗಳು ಬೆನ್ನಟ್ಟಿ ಸಮೀರ್‌ನನ್ನು ಕೊಲೆಗೈದಿದ್ದಾರೆ. ಪೊಲೀಸರು ಕೆಲಹೊತ್ತು ಹುಡುಕಾಡಿದ ಬಳಿಕ ಸಮೀರ್ ಮೃತದೇಹ ಸಿಕ್ಕಿದೆ. ಘಟನಾ ಸ್ಥಳಕ್ಕೆ ದಕ್ಷಿಣ…
ಮೂಡುಬಿದಿರೆ: ದ.ಕ.ಜಿಲ್ಲೆಯ ಮೂಡುಬಿದಿರೆಯ ಖಾಸಗಿ ಕಾಲೇಜೊಂದರ ತರಗತಿಗೆ ಅಕ್ರಮವಾಗಿ ಪ್ರವೇಶಿಸಿರುವ ಯುವಕನೊಬ್ಬ ವಿದ್ಯಾರ್ಥಿನಿಯೊಬ್ಬಳ ಮುಖಕ್ಕೆ ಕತ್ತರಿಯಿಂದ ಚುಚ್ಚಿ ಹಲ್ಲೆಗೈದ ಘಟನೆ ಸೋಮವಾರ ನಡೆದಿದೆ. ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ತುಮಕೂರು ಮೂಲದ ಮಂಜುನಾಥ ಬಂಧಿತ ಆರೋಪಿ. ಆರೋಪಿ ಮತ್ತು ಕತ್ತರಿಯಿಂದ ಇರಿತಕ್ಕೊಳಗಾದ ವಿದ್ಯಾರ್ಥಿನಿ ತುಮಕೂರಿನವರಾಗಿದ್ದರು. ಇಬ್ಬರೂ ಆತ್ಮೀಯರಾಗಿದ್ದರು. ಆದರೆ ಇತ್ತೀಚೆಗೆ ವಿದ್ಯಾರ್ಥಿನಿಯು ಆರೋಪಿ ಮಂಜುನಾಥನ ಮೊಬೈಲ್ ಕರೆಗಳನ್ನು ನಿರ್ಲಕ್ಷಿಸುತ್ತಾ ಬಂದಿದ್ದಳು ಎಂದು ಹೇಳಲಾಗುತ್ತಿದೆ. ಇದರಿಂದ ಹತಾಶೆಗೊಂಡ ಆರೋಪಿ ಮಂಜುನಾಥ ವಿದ್ಯಾರ್ಥಿನಿಯನ್ನು ಹುಡುಕಿಕೊಂಡು ಬಂದಿದ್ದನು. ಅದರಂತೆ ಸೋಮವಾರ ಕಾಲೇಜಿಗೆ ಬಂದಿದ್ದ ಆತ ತರಗತಿಯೊಳಗೆ ಅಕ್ರಮವಾಗಿ ಪ್ರವೇಶಿಸಿ ಕತ್ತರಿಯಿಂದ ಚುಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಡುಬಿದಿರೆ ಠಾಣೆಯಲ್ಲಿ ಆರೋಪಿ ಮಂಜುನಾಥನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು, ಇನ್‌ಸ್ಪೆಕ್ಟರ್ ಸಂದೇಶ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಮಂಗಳೂರು: ನಗರದ ಪಿಜಿಯೊಂದರಿಂದ 2 ಲ್ಯಾಪ್‌ಟಾಪ್‌ಗಳು, ಹಣ ಮತ್ತು ಎಟಿಎಂ ಕಾರ್ಡನ್ನು ಕಳವು ಮಾಡಿರುವ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಯೂರ್ ನಾಯ್ಕ ಮತ್ತು ಚರಣ್ ಎಂಬವರು ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಆ.9ರಂದು ರಾತ್ರಿ ಕಂಪೆನಿಯ ಕೆಲಸ ಮುಗಿಸಿ ಬೇರೆ ಬ್ಯಾಗ್‌ಗಳಲ್ಲಿ 2 ಲ್ಯಾಪ್‌ಟಾಪ್‌ಗಳನ್ನಿಟ್ಟು ಮಲಗಿದ್ದರು. ಮರುದಿನ ಬೆಳಗ್ಗೆ 8 ಗಂಟೆಗೆ ಎದ್ದು ನೋಡಿದಾಗ ಲ್ಯಾಪ್‌ಟಾಪ್‌ಗಳು, 800 ರೂ., ಎಟಿಎಂ ಕಾರ್ಡ್ ಸಹಿತ ಅಂದಾಜು 2,11,500 ರೂ. ಮೌಲ್ಯದ ಸೊತ್ತುಗಳು ಕಳವಾಗಿದ್ದವು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಂಗಳೂರು: “ಆರೋಗ್ಯ ಕ್ಷೇತ್ರದಲ್ಲಿ ತನ್ನ ಉನ್ನತ ಛಾಪನ್ನು ಮೂಡಿಸಿದ ಇಂದಿರಾ ಆಸ್ಪತ್ರೆ ತನ್ನ 25ನೇ ವಾರ್ಷಿಕೋತ್ಸವವನ್ನು ಹೆಮ್ಮೆಯಿಂದ ಆಚರಿಸುತ್ತಿದೆ. 1999ರಲ್ಲಿ ಸ್ಥಾಪನೆಯಾದಾಗಿನಿಂದ ಆಸ್ಪತ್ರೆ ಅತ್ಯುತ್ತಮ ವೈದ್ಯಕೀಯ ಆರೈಕೆಯನ್ನು ನೀಡುವ ಮೂಲಕ ಸಮುದಾಯಕ್ಕೆ ಉನ್ನತ ಯೋಗಕ್ಷೇಮವನ್ನು ನೀಡುವಲ್ಲಿ ನಿರತವಾಗಿದೆ. ಕಳೆದ ಕಾಲು ಶತಮಾನದಲ್ಲಿ, ಇದು ತುರ್ತು ಆರೈಕೆ, ಶಸ್ತ್ರಚಿಕಿತ್ಸೆ, ಡಯಾಲಿಸಿಸ್, ಮೆಟರ್ನಿಟಿ, ಮೆಡಿಸಿನ್, ಫಿಸಿಯೋಥೆರಪಿ ಸೇರಿದಂತೆ ವಿಶಾಲವಾದ ಸೇವೆಗಳನ್ನು ಒದಗಿಸುವ ಅತ್ಯಾಧುನಿಕ ವೈದ್ಯಕೀಯ ಕೇಂದ್ರವಾಗಿ ಬೆಳೆದಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಸಯ್ಯದ್ ನಿಜಾಮುದ್ದಿನ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.ಇಂದಿರಾ ಎಜ್ಯುಕೇಶನಲ್ ಟ್ರಸ್ಟ್ – ನರ್ಸಿಂಗ್, ಅಲೈಡ್ ಆರೋಗ್ಯ ಮತ್ತು ಫಿಸಿಯೋಥೆರಪಿ ಕೋರ್ಸ್‌ಗಳನ್ನು ಒಳಗೊಂಡ ಪ್ರಮುಖ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆದಿದೆ. ಉತ್ತಮ ಆರೋಗ್ಯ ವೃತ್ತಿಪರರನ್ನು ನಿರ್ಮಿಸುವಲ್ಲಿ ತನ್ನ ಬದ್ಧತೆಗೆ ಪ್ರಸಿದ್ಧವಾಗಿದೆ. ಈ ಪ್ರಮುಖ ಮೈಲಿಗಲ್ಲನ್ನು ನೆನಪಿಸಿಕೊಳ್ಳಲು, ಇಂದಿರಾ ಆಸ್ಪತ್ರೆ ತನ್ನ ಗೌರವಾನ್ವಿತ ವೈದ್ಯರು ಮತ್ತು ಸಿಬ್ಬಂದಿಯಕೊಡುಗೆಗಳನ್ನು ಗೌರವಿಸಲು ವಾರ್ಷಿಕೋತ್ಸವ ಸಂಭ್ರಮ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಹೆಚ್ಚುವರಿಯಾಗಿ, ಸಮುದಾಯದ ಆರೋಗ್ಯವನ್ನು ಬೆಂಬಲಿಸಲು ರಕ್ತದಾನ ಶಿಬಿರವನ್ನು…