ಮಂಗಳೂರು: ನಗರದ ಬಂಗ್ರ ಕೂಳೂರು ಗ್ರಾಮದ ಪಡ್ಡೋಡಿ ಯಲ್ಲಿ 2018ರಲ್ಲಿ ನಡೆದ ಕೊಲೆ ಯತ್ನ ಪ್ರಕರಣದ ಆರೋಪಿಗಳಾದ ಮೆಕ್ರಿ ಡಿಸೋಜ ಮತ್ತು ಲ್ಯಾನ್ಸಿ ಡಿಸೋಜ ಅವರನ್ನು ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ. ಖುಲಾಸೆಗೊಳಿಸಿದ್ದಾರೆ. 2018ರ ನ.5ರಂದು ಪಡ್ಡೋಡಿ ಕಡೆಗೆ ಹೋಗುವ ರಸ್ತೆಯಲ್ಲಿ ಅತೀ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದ ಲಾರಿಯನ್ನು ಪ್ರವೀಣ್ ಡಿಸೋಜ ಎಂಬವರು ನಿಲ್ಲಿಸಿ ಅದರ ಚಾಲಕನಲ್ಲಿ ನಿಧಾನವಾಗಿ ಹೋಗುವಂತೆ ತಿಳಿಸಿದರು. ಈ ವಿಷಯನ್ನು ಲಾರಿ ಚಾಲಕ ಅದರ ಮಾಲಕರಾದ ಎಡ್ವರ್ಡ್ ಮೆಕ್ರಿ ಡಿಸೋಜ ಮತ್ತು ಲ್ಯಾನ್ಸಿ ಡಿಸೋಜ ಅವರಿಗೆ ತಿಳಿಸಿದ್ದ ಇದರಿಂದ ಕೋಪಗೊಂಡ ಇಬ್ಬರು ರಾತ್ರಿ ಸ್ಕೂಟರ್‌ನಲ್ಲಿ ಆಗಮಿಸಿ ಪ್ರವೀಣ್ ಡಿಸೋಜ ರವರಿಗೆ ಬೈದು ಕೊಲೆ ಮಾಡುವ ಉದ್ದೇಶದಿಂದ ಸ್ಫೋಟರ್‌ನಲ್ಲಿದ್ದ ಬಿಯರ್ ಬಾಟಲಿಗಳಿಂದ ಹಲ್ಲೆ ನಡೆಸಿ ಮಾರಣಾಂತಿಕ ಗಾಯವನ್ನುಂಟು ಮಾಡಿ ಕೊಲೆಗೆ ಯತ್ನಿಸಿದ್ದರೆಂದು ಆರೋಪಿಸಲಾಗಿತ್ತು. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳ ಮೇಲಿನ ಆರೋಪವನ್ನು ಸಾಬೀತುಪಡಿಸುವಲ್ಲಿ…
Author: main-admin
ಬೆಂಗಳೂರು: ವನ್ಯಜೀವಿ ವಸ್ತುಗಳನ್ನು ಇಟ್ಟಿಕೊಳ್ಳೋದು, ಬಳಕೆ ಮಾಡೋದು ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅನುಸಾರ ಅಪರಾಧವಾಗಿದೆ. ಒಂದು ವೇಳೆ ಇಟ್ಟುಕೊಂಡು ಸಿಕ್ಕಿಬಿದ್ರೇ ನಿಮಗೆ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ ಆದಂತೆ ಜೈಲಿ ಶಿಕ್ಷೆ ಫಿಕ್ಸ್. ಹೌದು ಈ ಕುರಿತಂತೆ ರಾಜ್ಯ ಸರ್ಕಾರದಿಂದ ಇಂದು ಎಲ್ಲಾ ಪತ್ರಿಕೆಗಳಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಈ ಕಾಯ್ದೆಯಂತೆ ವನ್ಯಜೀವಿಗಳನ್ನು ಬೇಟೆ ಆಡೋದು, ಸ್ವಾಧೀನ ಪಡಿಸಿಕೊಳ್ಳೋದು, ಇಟ್ಟುಕೊಳ್ಳೋದು ಸೇರಿದಂತೆ ಖರೀದಿಸಿಸೋದು, ಸಾಗಾಣೆ ಮಾಡೋದು ಅಲ್ಲದೇ ಮಾಂಸ ಮಾರಾಟ, ಭಕ್ಷಣೆ ಕೂಡ ಅಪರಾಧವೆಂದು ತಿಳಿಸಿದೆ. ಇದಷ್ಟೇ ಅಲ್ಲದೇ ವನ್ಯಜೀವಿಗಳ ವಸ್ತುಗಳಾದಂತ ಕೊಂಬು, ಚರ್ಮ, ಟ್ರೋಫಿಗಳು, ಹಲ್ಲು, ಗೊರಸು ಅಥವಾ ಇವುಗಳಿಂದ ತಯಾರಾದಂತ ಆಲಂಕಾರಿಕ ವಸ್ತುಗಳ ವ್ಯಾಪಾರ, ಉಡುಗೋರೆ ನೀಡೋದು, ಪಡೆಯೋದು, ಖರೀದಿಸೋದು, ಸಾಗಾಟ ಮಾಡೋದು, ಇನ್ನೊಬ್ಬರಿಗೆ ವರ್ಗಾಯಿಸೋದು ಕೂಡ ಅಪರಾಧ. ಹೀಗೆ ಮಾಡದಂತೆ ಎಚ್ಚರಿಕೆಯನ್ನು ರಾಜ್ಯ ಅರಣ್ಯ ಇಲಾಖೆ ನೀಡಿದೆ. ನೀವು ಒಂದು ವೇಳೆ ಈ ಎಲ್ಲಾ ವನ್ಯಜೀವಿ…
ಬೆಂಗಳೂರು : ಬೆಂಗಳೂರಲ್ಲಿ ಸ್ಫೋಟಕ್ಕೆ ಸಂಚಿಸಿದ ಐವರು ಶಂಕಿತ ಉಗ್ರರ ಪ್ರಕರಣವನ್ನು ಸಿಸಿಬಿಯು ಎನ್‌ಐಎಗೆ ಪ್ರಕರಣವನ್ನು ವರ್ಗಾಯಿಸಿದೆ.ಪ್ರಕರಣ ಸಂಬಂಧ ಎನ್ಐಎ ಅಧಿಕಾರಿಗಳು ಎಫ್ಐಆರ್ (FIR) ದಾಖಲಿಸಿಕೊಂಡಿದ್ದಾರೆ. ಸುಹೇಲ್ ಅಹಮದ್, ಜಾಹೀದ್ ತಬ್ರೇಜ್, ಮುದಾಸೀರ್ ಪಾಷಾ, ಮಹಮ್ಮದ್ ಫೈಜಲ್ ರಬ್ಬಾನಿ ಮತ್ತು ಮಹಮ್ಮದ್ ಉಮರ್ ಬಂಧಿತ ಶಂಕಿತ ಉಗ್ರರು. ಸದ್ಯ ಎನ್ಐಎ ಅಧಿಕಾರಿಗಳು ಸಿಸಿಬಿ ಬಂಧಿಸಿದ್ದ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. ಈ ಐವರು ಶಂಕಿತ ಉಗ್ರರು ಬೆಂಗಳೂರು ನಗರದಲ್ಲಿ ಸರಣಿ ಸ್ಫೋಟಕ್ಕೆ ಸಂಚಿರೂಪಿಸಿದ್ದರು ಅಲ್ಲದೆ ಇವರು ಗ್ರೈನೆಡ್ ಸೇರಿದಂತೆ ಸ್ಫೋಟಕ ವಸ್ತುಗಳನ್ನು ಸಹ ಸಂಗ್ರಹಿಸಿದ್ದರು.ಇದಕ್ಕೆ ಜೈಲಿನಲ್ಲಿ ಇದ್ದುಕೊಂಡೇ ಉಗ್ರ ಜುನೈದ್ ಇವರಿಗೆ ಮಾರ್ಗದರ್ಶನ ನೀಡುತ್ತಿದ್ದ ಎನ್ನಲಾಗುತ್ತಿತ್ತು. ಆರೋಪಿಗಳು ಸುಲ್ತಾನ್ ಪಾಳ್ಯದ ಪ್ರಾರ್ಥನಾ ಸ್ಥಳ ಮತ್ತು ಆರ್.ಟಿ ನಗರದ ಕನಕ ಬಡಾವಣೆಯ ಸೈಯದ್ ಸುಹೇಲ್ ಬಾಡಿಗೆ ಮನೆಯಲ್ಲಿ ಸಭೆ ಸೇರಿ ಉಗ್ರ ಚಟುವಟಿಕೆ ಹಾಗೂ ಸ್ಫೋಟ ನಡೆಸುವುದಕ್ಕೆ ಸಂಬಂಧಿಸಿದಂತೆ ಆರೋಪಿಗಳು ಚರ್ಚೆ ನಡೆಸಿದ್ದರು. ಈ ಮಾಹಿತಿ ತಿಳಿದ ಸಿಸಿಬಿ ಪೊಲೀಸರು,…
ಬೆಳ್ತಂಗಡಿ : ಫೇಸ್ಬುಕ್ ಮೂಲಕ ಪರಿಚಯವಾದ ಮಹಿಳೆಯ ಮಾತು ನಂಬಿ ವ್ಯಕ್ತಿಯೋರ್ವ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡ ಘಟನೆ ಉಜಿರೆ ಸಮೀಪ ಗುರಿಪಳ್ಳದಲ್ಲಿ ಸಂಭವಿಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಸ್ಥಳೀಯ ನಿವಾಸಿ ಸತೀಶ್ ಗೌಡ ಹಣ ಕಳೆದುಕೊಂಡ ವ್ಯಕ್ತಿ. ಇವರು ವಿದೇಶದಲ್ಲಿ ಕೆಲಸ ಮಾಡಿಕೊಂಡಿದ್ದು, ಈ ಸಂದರ್ಭದಲ್ಲಿ ಫೇಸ್‌ಬುಕ್ ಮೂಲಕ ಮಹಿಳೆಯೊಬ್ಬರ ಪರಿಚಯವಾಗಿದ್ದು, ಚಾಟಿಂಗ್ ಮೂಲಕ ಅವರ ವಿಶ್ವಾಸ ಗಳಿಸಿ ವಿವಿಧ ಕಾರಣಗಳನ್ನು ನೀಡಿ ಬೇರೆ ಬೇರೆ ಖಾತೆಗಳಿಗೆ ಒಟ್ಟು 6,96,500 ರೂ. ಹಣ ವರ್ಗಾಯಿಸಿಕೊಂಡು ಬಳಿಕ ವಂಚಿಸಿರುವುದಾಗಿ ದ.ಕ. ಜಿಲ್ಲಾ ಸೈಬರ್ ಕೈಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಉಡುಪಿ: ಕುಂಜಿಬೆಟ್ಟುವಿನಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ, ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ಉತ್ತರಹಳ್ಳಿಯ ಮಂಜುನಾಥ್ ಯಾನೆ ಕಲ್ಕೆರೆ ಮಂಜ (43) ಬಂಧಿತ ಆರೋಪಿ. ಈತ ಅ.8ರಂದು ಕುಂಜಿಬೆಟ್ಟುವಿನ ಅಮ್ಮುಂಜೆ ವಿಠಲ್ದಾಸ್ ನಾಯಕ್ ಅವರ ಮನೆಯ ಬಾಗಿಲು ಮುರಿದು, ಬೆಡ್ ರೂಮ್ ನ ಅಲ್ಮೇರಾದಲ್ಲಿದ್ದ ಸುಮಾರು 66,36,300 ರೂ. ಮೌಲ್ಯದ ಅಂದಾಜು 1882 ಗ್ರಾಂ ತೂಕದ ಚಿನ್ನಾಭರಣ ಹಾಗೂ 6,70,500 ರೂ. ಮೌಲ್ಯದ 7,450 ಗ್ರಾಂ ತೂಕದ ಬೆಳ್ಳಿಯ ಸೊತ್ತುಗಳು ಸಹಿತ ಒಟ್ಟು 73,06,800 ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದನು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗಾಗಿ ಪಿಎಸ್ ಐ ಪುನೀತ್ ಕುಮಾರ್ ಬಿ.ಇ. ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಕಾರ್ಯಾಚರಣೆಗೆ ಇಳಿದ ಪೊಲೀಸರು ಅ.31ರಂದು ಉಡುಪಿ ಬಲಾಯಿಪಾದೆಯ ಜಂಕ್ಷನ್ ಬಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಒಟ್ಟು 31,55,930 ರೂ. ಮೌಲ್ಯದ 530.909…
ಬೆಂಗಳೂರು: 68 ನೇ ಕನ್ನಡ ರಾಜ್ಯೋತ್ಸವ ದಿನದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಶಾಲೆಗೆ ಬಂಪರ್ ಗಿಫ್ಟ್ ಘೋಷಣೆ ಮಾಡಿದ್ದಾರೆ. ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಹಾಗೂ ಕುಡಿಯುವ ನೀರು ನೀಡುವುದಾಗಿ ಘೋಷಿಸಿದ್ದಾರೆ. ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿದ ಮುಖ್ಯಮಂತ್ರಿಗಳು, ರಾಜ್ಯದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದರು. ಕನ್ನಡಿಗರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿಶಾಲಿಗಳನ್ನಾಗಿ ಮಾಡುವ ಜತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ, ಕನ್ನಡ ಶಾಲೆಗಳ ಮೂಲಭೂತ ಸವಲತ್ತುಗಳನ್ನು ಹೆಚ್ಚಿಸಲು ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು. ದೇವರಾಜು ಅರಸು ಅವರು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಹೆಸರಿಟ್ಟು 50 ವರ್ಷಗಳು ತುಂಬಿವೆ. ಈ ದಿನ ನಾವು ಒಂದು ಪ್ರತಿಜ್ಞೆ ಮಾಡೋಣ. ಕನ್ನಡದಲ್ಲೇ ವ್ಯವಹರಿಸುವ ಪ್ರತಿಜ್ಞೆಯನ್ನು ನಾವು ಮಾಡುವ ಮೂಲಕ ನಮ್ಮ ತಾಯ್ನೆಲದ ಋಣ ತೀರಿಸುವ ಕೆಲಸ ಮಾಡೋಣ. ಇಲ್ಲಿ ವಾಸ ಮಾಡುವ ಪ್ರತಿಯೊಬ್ಬರೂ ಕನ್ನಡದ…
ಲಕ್ನೋ: ಗುಂಪೊಂದು ಸಬ್ ಇನ್ಸ್ ಪೆಕ್ಟರ್ ನ್ನು ರಸ್ತೆಯಲ್ಲೇ ಥಳಿಸಿರುವ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಸೋಮವಾರ(ಅ.31 ರಂದು) ನಡೆದಿದೆ. ಯುಪಿ ಪೊಲೀಸ್‌ನ ಸಬ್-ಇನ್ಸ್‌ಪೆಕ್ಟರ್ (ಎಸ್‌ಐ) ರಾಮ್ ಅವತಾರ್ ಅವರಿಗೆ ಗುಂಪೊಂದು ಥಳಿಸಿರುವ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಘಟನೆ ಹಿನ್ನೆಲೆ: ಮಹೋಬಾದ ಪನ್ವಾರಿ ಪ್ರದೇಶದಲ್ಲಿ 13 ವರ್ಷದ ಬಾಲಕ ಬಸ್ಸಿನಡಿ ಸಿಲುಕಿ ಸಾವನ್ನಪ್ಪಿದ್ದ. ಇದಕ್ಕೆ ಸಂಬಂಧಿಸಿ ಮೃತನ ಬಾಲಕನ ಸಂಬಂಧಿಗಳು ಹಾಗೂ ಕೆಲ ಸ್ಥಳೀಯರು ರಸ್ತೆಯಲ್ಲಿ ನಿಂತು ಚಾಲಕನ ವಿರುದ್ಧ ಕ್ರಮಕ್ಕೆ ಹಾಗೂ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆಯ ಕಾರಣದಿಂದ ರಸ್ತೆಯಲ್ಲಿ ಸಂಚಾರ ದಟ್ಟನೆ ಉಂಟಾಗಿತ್ತು. ಇದರಿಂದ ಟ್ರಾಫಿಕ್ ಕ್ಲಿಯರ್ ಮಾಡಲು ಸ್ಥಳಕ್ಕೆ ಸಬ್-ಇನ್ಸ್‌ಪೆಕ್ಟರ್ ರಾಮ್ ಅವತಾರ್ ತನ್ನ ತಂಡದೊಂದಿಗೆ ಆಗಮಿಸಿದ್ದರು. ಈ ವೇಳೆ ಎಸ್ ಐ ಹಾಗೂ ಮೃತ ಬಾಲಕನ ಸಂಬಂಧಿಕರ ನಡುವ ಮಾತಿನ ಚಕಮಕಿ ಉಂಟಾಗಿದ್ದು, ಮೊದಲೇ ಸಿಟ್ಟಾಲಿದ್ದ ಜನ ಸಬ್-ಇನ್ಸ್‌ಪೆಕ್ಟರ್ ರಾಮ್ ಅವತಾರ್ ಅವರ ಮೇಲೆ ಹಲ್ಲೆ ಮಾಡಲು ಶುರು ಮಾಡಿದ್ದಾರೆ. ರಾಮ್…
ನವದೆಹಲಿ : ನವೆಂಬರ್ ತಿಂಗಳ ಮೊದಲ ದಿನವೇ ಜನತೆಗೆ ಬಿಗ್ ಶಾಕ್, ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 103 ರೂ. ಏರಿಕೆ ಮಾಡಲಾಗಿದೆ. ಇಂದು, 19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 103 ರೂ. ಹೆಚ್ಚಿಸಲಾಗಿದೆ. ದೆಹಲಿಯಲ್ಲಿ ಇಂದಿನಿಂದ 19 ಕೆಜಿ ಎಲ್ಪಿಜಿ ಸಿಲಿಂಡರ್ 1833 ರೂ.ಗೆ ಲಭ್ಯವಾಗಲಿದೆ. ಕೋಲ್ಕತ್ತಾದಲ್ಲಿ 1943.00 ರೂ., ಮುಂಬೈನಲ್ಲಿ 1785.50 ರೂ., ಚೆನ್ನೈನಲ್ಲಿ 1999.50 ರೂ. 32 ದಿನಗಳಲ್ಲಿ ಎಲ್ಪಿಜಿ ಸಿಲಿಂಡರ್ ಬೆಲೆ 310 ರೂ. ಅಕ್ಟೋಬರ್ 1 ರಂದು ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು ಸುಮಾರು 209 ರೂ.ಗೆ ಹೆಚ್ಚಿಸಲಾಯಿತು. ಅಂದರೆ, ಒಂದು ತಿಂಗಳಲ್ಲಿ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಗಳ ಬೆಲೆ 310 ರೂ. ಹೆಚ್ಚಳವಾಗಿದೆ. ಕಳೆದ ತಿಂಗಳು ಕೋಲ್ಕತ್ತಾದಲ್ಲಿ ಬೆಲೆ 203.50 ರೂ., ಈ ತಿಂಗಳು 103.50 ರೂ. 31 ದಿನಗಳಲ್ಲಿ ಸಿಲಿಂಡರ್ ಬೆಲೆ 307 ರೂ.ಗಳಷ್ಟು ದುಬಾರಿಯಾಗಿದೆ. ಮುಂಬೈನಲ್ಲಿ ಇಂದು ಅದು 101.50 ರೂ. ಒಂದು ತಿಂಗಳಲ್ಲಿ ಸಿಲಿಂಡರ್…
ಮಂಜೆಶ್ವರ: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಸಂಬಂಧ ಚುನಾವಣಾ ಕರ್ತವ್ಯದಲ್ಲಿದ್ದ ಉಪತಹಶೀಲ್ದಾರ್‌ಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಸಹಿತ ನಾಲ್ವರಿಗೆ ಕಾಸರಗೋಡು ಜ್ಯುಡೀಶಿಯಲ್ ಪ್ರಥಮ ದರ್ಜೆ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ಮತ್ತು 20,000 ರೂ. ದಂಡ ವಿಧಿಸಿ ಆದೇಶ ನೀಡಿದೆ.ಜೊತೆಗೆ ಮೂರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಿದ್ದೂ, ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಲು ನ್ಯಾ. ಅಬ್ದುಲ್ ಬಾಸಿತ್ ಆದೇಶಿಸಿದ್ದಾರೆ. ಬಶೀರ್, ಅಬ್ದುಲ್ ಖಾದರ್ ಮತ್ತು ಅಬ್ದುಲ್ಲಾ ಶಿಕ್ಷೆಗೊಳಗಾದ ಇತರರು. ಪ್ರಕಣವೇನು: ಘಟನೆ ನಡೆದಿರುವುದು 2010ರಲ್ಲಿ. ತಾಂತ್ರಿಕ ಕಾರಣದಿಂದ ಮತದಾರರೋರ್ವರ ಹೆಸರು ಪಟ್ಟಿಗೆ ಸೇರ್ಪಡೆಗೊಳಿಸದೇ ಪೆಂಡಿಂಗ್ ಇಡಲಾಗಿತ್ತು. ಈ ವಿಚಾರವಾಗಿ ಅಂದು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ಎಕೆಎಂ ಅಶ್ರಫ್ ಮತ್ತು ಇತರ ಮೂವರು ಮಂಜೇಶ್ವರ ಬ್ಲಾಕ್ ಪಂಚಾಯತ್ ಕಚೇರಿಯಲ್ಲಿ ಚುನಾವಣಾ ಕರ್ತವ್ಯದಲ್ಲಿ ಇದ್ದ ಉಪ ತಹಶೀಲ್ದಾರ್ ದಾಮೋದರನ್ ಅವರನ್ನು ಪ್ರಶ್ನಿಸಿದ್ದರು. ತಾಂತ್ರಕ ಸಮಸ್ಯೆ ಪರಿಹಾರಗೊಂಡ ಬಳಿಕವಷ್ಟೇ ಮತದಾರರ ಪಟ್ಟಿಗೆ ಹೆಸರು ಸೇರಿಸುತ್ತೇನೆ. ಈ ಕುರಿತಾದ ದಾಖಲೆ ಸಲ್ಲಿಸಿ…
ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ 4 ಅಡಿಕೆ ಕಳ್ಳರನ್ನು ಬಂಧಿಸಿದ್ದು ಕಾವು ಕೊಯ್ಲ ನಿವಾಸಿ ಶ್ರವಣ್ ಕೆ, ಜಯಚಂದ್ರ,ಅಶೋಕ, ಪುನೀತ್ ಬಂಧಿತ ಆರೋಪಿಗಳಾಗಿದ್ದಾರೆ. ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಕೊಯಿಲಾ ಎಂಬಲ್ಲಿರುವ ನವೀನ ಕುಮಾರ ರೈ ರವರ ಹಳೆಯ ಮನೆಯ ಕೊಟ್ಟಿಗೆಯ ಅಟ್ಟದಲ್ಲಿದ್ದ ಎನ್ ಕೆ ಆರ್ ಎಂದು ಮಾರ್ಕ್ ಮಾಡಿರುವ ಸುಮಾರು 23 ಗೋಣಿ ಸುಲಿಯದ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅ ಕ್ರ 105/2023 ಕಲಂ:454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಖಚಿತ ಮಾಹಿತಿ ಮೇರೆಗೆ ಪತ್ತೆ ಹಚ್ಚಿದ್ದು, ಆರೋಪಿಗಳನ್ನು ಬಂದಿಸಿ, ಸುಮಾರು ರೂ 1,55,925/- ಮೌಲ್ಯದ ಅಡಿಕೆ ಹಾಗೂ ಕಳವು ಮಾಡಲು ಉಪಯೋಗಿಸಿದ ಸ್ವಿಪ್ಟ್ ಕಾರು ಮತ್ತು ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ರೂ 4,15,925/- ಆಗಿರುತ್ತದೆ.ಈ ಪ್ರಕರಣವನ್ನು…










