Facebook Twitter Instagram
    Tuesday, June 9
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರ ಕಾರ್ಯಾಚರಣೆ-ನಾಲ್ವರು ಅಡಿಕೆ ಕಳ್ಳರ ಬಂಧನ
    ಇತ್ತೀಚಿನ ಸುದ್ದಿ

    ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರ ಕಾರ್ಯಾಚರಣೆ-ನಾಲ್ವರು ಅಡಿಕೆ ಕಳ್ಳರ ಬಂಧನ

    October 31, 2023
    Share

    ಪುತ್ತೂರು :  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ 4 ಅಡಿಕೆ ಕಳ್ಳರನ್ನು ಬಂಧಿಸಿದ್ದು ಕಾವು ಕೊಯ್ಲ ನಿವಾಸಿ ಶ್ರವಣ್ ಕೆ, ಜಯಚಂದ್ರ,ಅಶೋಕ, ಪುನೀತ್ ಬಂಧಿತ ಆರೋಪಿಗಳಾಗಿದ್ದಾರೆ.

    ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಕೊಯಿಲಾ ಎಂಬಲ್ಲಿರುವ ನವೀನ ಕುಮಾರ ರೈ ರವರ ಹಳೆಯ ಮನೆಯ ಕೊಟ್ಟಿಗೆಯ ಅಟ್ಟದಲ್ಲಿದ್ದ ಎನ್ ಕೆ ಆರ್ ಎಂದು ಮಾರ್ಕ್ ಮಾಡಿರುವ ಸುಮಾರು 23 ಗೋಣಿ ಸುಲಿಯದ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅ ಕ್ರ 105/2023 ಕಲಂ:454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು.

    ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಖಚಿತ ಮಾಹಿತಿ ಮೇರೆಗೆ ಪತ್ತೆ ಹಚ್ಚಿದ್ದು, ಆರೋಪಿಗಳನ್ನು ಬಂದಿಸಿ, ಸುಮಾರು ರೂ 1,55,925/- ಮೌಲ್ಯದ ಅಡಿಕೆ ಹಾಗೂ ಕಳವು ಮಾಡಲು ಉಪಯೋಗಿಸಿದ ಸ್ವಿಪ್ಟ್ ಕಾರು ಮತ್ತು ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಮೌಲ್ಯ ಸುಮಾರು ರೂ 4,15,925/- ಆಗಿರುತ್ತದೆ.
    ಈ ಪ್ರಕರಣವನ್ನು ಬೇದಿಸುವಲ್ಲಿ ದ ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ ಬಿ ರಿಷ್ಯತ್ ಮತ್ತು ದ ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಧರ್ಮಪ್ಪ ಎಮ್ ಎನ್ ರವರ ನಿರ್ದೇಶನದಲ್ಲಿ ಪುತ್ತೂರು ಉಪಾಧೀಕ್ಷಕರಾದ ಡಾ. ಗಾನ ಪಿ. ಕುಮಾರ್ ರವರ ಮಾರ್ಗದರ್ಶನದಲ್ಲಿ , ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ರವಿ.ಬಿ.ಎಸ್, ರವರ ಆದೇಶದಂತೆ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಧನಂಜಯ ಬಿ.ಸಿ ರವರ ನೇತೃತ್ವದಲ್ಲಿ ಎಎಸ್ಐ ಮುರುಗೇಶ್, ಸಿಬ್ಬಂದಿಗಳಾದ ಬಾಲಕೃಷ್ಣ, ಅದ್ರಾಮ, ಪ್ರವೀಣ್ ರೈ, ಹರೀಶ್ ಗೌಡ, ದಯಾನಂದ, ಸುಂದರ್, ವೆಂಕಪ್ಪ, ಸಲೀಂ, ನಾಗೇಶ್ ಕೆ ಸಿ, ಮುನಿಯ ನಾಯ್ಕ, ಕಾರ್ತಿಕ್, ಯುವರಾಜ ನಾಯ್ಕ, ಚಾಲಕರಾದ ಯೋಗೀಶ್ ರವರು ಭಾಗವಹಿಸಿರುತ್ತಾರೆ.

    Post Views: 192

    Related Posts

    ಮಹಿಳಾ ಐಪಿಎಸ್ ಅಧಿಕಾರಿಯ ರಹಸ್ಯ ಎಂಟ್ರಿ; ಪಬ್‌ನ ಕರಾಳ ಮುಖ ಅನಾವರಣ

    June 8, 2026

    ಆಂಬ್ಯುಲೆನ್ಸ್ ಸಿಗದೆ ಹೃದಯಾಘಾತ ರೋಗಿ ಸಾವು; ಕೊಕ್ಕಡ ಆರೋಗ್ಯ ವ್ಯವಸ್ಥೆ ವಿರುದ್ಧ ಆಕ್ರೋಶ

    June 8, 2026

    ಹಠಾತ್ ಹವಾಮಾನ ವೈಪರೀತ್ಯದ ಹೊಡೆತ: ದೆಹಲಿ ಏರ್‌ಪೋರ್ಟ್‌ನಲ್ಲಿ 3 ವಿಮಾನಗಳು ಜಖಂ

    June 8, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.