Author: main-admin

ವಿಟ್ಲ: ಕೇರಳಕ್ಕೆ ಅಕ್ರಮವಾಗಿ ಗೋಸಾಗಾಟ ಮಾಡುತ್ತಿದ್ದ ಪಿಕಪ್‌ ಅನ್ನು ಹಿಂ.ಜಾ.ವೇ. ಕಾರ್ಯಕರ್ತರು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಹಿಂದು ಜಾಗರಣ ವೇದಿಕೆ ವಿಟ್ಲ ತಾಲೂಕು ಕಾರ್ಯಕರ್ತರ ಮಿಂಚಿನ ಕಾರ್ಯಾಚರಣೆಯಲ್ಲಿ ವಿಟ್ಲ ಸಮೀಪದ ಪುಣಚ ದೇವಿ ನಗರ ಬಳಿ ಅಕ್ರಮ ಗೋ ಸಾಗಾಟ ಪತ್ತೆಯಾಗಿದೆ. ನಿರಂತರ ಗೋಸಾಗಾಟ ಮಾಡುವ ಮಹೇಶ್ವರ ಪಿಕಪ್ ಹಾಗೂ ಸುಂದರ ಎಂಬಾತ ಪೊಲೀಸ್ ವಶಕ್ಕೆ ನೀಡಲಾಗಿದೆ. ಗೋಸಾಗಾಟಕ್ಕೆ ಪರವಾನಿಗೆ ಮಾಡಿ ಸಾಗಾಟ ಮಾಡುವುದರಲ್ಲಿ ನಿಪುಣನಾಗಿರುವ ಈತ ಒಂದು ವಾರದ ಹಿಂದೆ ಆರ್ಲಪದವಿನಲ್ಲಿ ಸಿಕ್ಕಿಬಿದ್ದಿದ್ದ. ಆದರೆ ಪರವಾನಿಗೆ ತೋರಿಸಿ ಎಸ್ಕೇಪ್ ಆಗಿದ್ದ. ಆದರೆ ಈ ಸಲ ಒಂದು ಪರವಾನಿಗೆಯಲ್ಲಿ ಎರಡು ಗೋಗಳನ್ನು ಒಂದೇ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ ಆಗಿತ್ತು.ಹೀಗಾಗಿ ಇರುವ ಪರವಾನಿಗೆ ಅಕ್ರಮವಾಗಿರುತ್ತದೆ ಎಂದು ಹಿಂ.ಜಾ.ವೇ. ಕಾರ್ಯಕರ್ತರು ಆರೋಪಿಸಿದ್ದಾರೆ. ಸಿಕ್ಕಿಬಿದ್ದಿರುವ ಆರೋಪಿಗೆ ಕುಖ್ಯಾತ ಗೋ ಬ್ರೋಕರ್ ಆಗಿರುವ ಆಗಿರುವ ಹನಿಫ್ ತಿಂಗಳಾಡಿ ಆಪ್ತನಾಗಿದ್ದಾನೆ ಎಂದು ಸಹ ಹೇಳಲಾಗುತ್ತಿದೆ.

Read More

ಬೆಂಗಳೂರು: KSRTC ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ರಾಜ್ಯದ ಎಲ್ಲ ಮಹಿಳೆಯರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡುತ್ತೇವೆ, ಬಿಪಿಎಲ್ ಕಾರ್ಡ್ ಇದ್ರೆ ಮಾತ್ರ ಅಂತ ನಾವು ಗ್ಯಾರಂಟಿಯಲ್ಲಿ ಹೇಳಿರಲಿಲ್ಲ. ಈಗಲೂ ನಾವು ಬಿಪಿಎಲ್ ಕಾರ್ಡ್ ಬೇಕು ಎಂದು ಹೇಳುವುದೇ ಇಲ್ಲ ಎಂದಿದ್ದಾರೆ. ಹೀಗಾಗಿ ಎಲ್ಲಾ ಮಹಿಳೆಯರಿಗೂ ಬಸ್‌ನಲ್ಲಿ ಉಚಿತ ಪ್ರಯಾಣವಿದ್ದು, ಇದಕ್ಕೆ ಯಾವುದೇ ಷರತ್ತುಗಳಿಲ್ಲ ಎಂದಿದ್ದಾರೆ. ಮುಖ್ಯಮಂತ್ರಿಗಳ ಎಲ್ಲ ಕಾರ್ಯದರ್ಶಿಗಳು ಹಾಗೂ ಎಂಡಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಎಲ್ಲ ನಿಗಮಗಳು ಒಂದಷ್ಟು ಗೈಡ್ಲೈನ್ಸ್ ನೀಡಿದ್ದಾರೆ. ಅವೆಲ್ಲವನ್ನೂ ಸಚಿವ ಸಂಪುಟದಲ್ಲಿ ಇಟ್ಟು ತೀರ್ಮಾನ ತೆಗೆದುಕೊಳ್ಳುತ್ತೇವೆ. ನಾಳೆ ಸಿಎಂ ಜೊತೆ ಸಭೆ ಇದೆ ನಂತ್ರ ಹೇಳುತ್ತೇವೆ ಎಂದಿದ್ದಾರೆ. ನಾಲ್ಕು ನಿಗಮಗಳಲ್ಲಿ ನೌಕರರ ಸಂಖ್ಯೆ ಕಡಿಮೆ ಇದೆ. ನೇಮಕಾತಿ ಮಾಡಿಕೊಳ್ಳಬೇಕು. ಬಸ್ಸುಗಳ ಸಂಖ್ಯೆ ಕೂಡ ತುಂಬಾ ಕಡಿಮೆ ಇದೆ ಅದನ್ನು ಹೆಚ್ಚಳ ಮಾಡಬೇಕು. ಇಲ್ಲಾಂದ್ರೆ ಕಾಂಗ್ರೆಸ್ ಶಕ್ತಿ ಯೋಜನೆ ಜಾರಿ ಮಾಡಲು ಕಷ್ಟ ಆಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿಗೆ ಸಭೆಯಲ್ಲಿ ಅಧಿಕಾರಿಗಳು…

Read More

ಕಡಬ: ವಿದೇಶದಲ್ಲಿ ಉದ್ಯೋಗದಲ್ಲಿರುವ ಕಡಬ ತಾಲೂಕಿನ ಕೊಯಿಲ ಗ್ರಾಮದ ಯುವಕನೋರ್ವ ವಿದೇಶದಲ್ಲಿ ತನ್ನ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಯಿಲ ಗ್ರಾಮದ ಸುಣ್ಣಾಡಿ ನಿವಾಸಿ ದಿ.ಮೋನಪ್ಪ ಪೂಜಾರಿಯವರ ಪುತ್ರ ಅವಿವಾಹಿತ ಸಂದೇಶ್ (32 ವರ್ಷ) ಎಂದು ಗುರುತಿಸಲಾಗಿದೆ.ಇವರು ಕೊಲ್ಲಿ ರಾಷ್ಟ್ರದ ಓಮನ್ ದೇಶದ ಮಸ್ಕತ್‌ನಲ್ಲಿ ನೀರಿನ ಕಂಪನಿಯೊಂದರಲ್ಲಿ ಲೈನ್ ಸೇಲ್ ಉದ್ಯೋಗ ಮಾಡುತ್ತಿದ್ದು, ಎಂಟು ತಿಂಗಳ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದರು. ಇವರ ಸಹೋದರ ಸಂತೋಷ್ ಕೂಡಾ ಮಸ್ಕತ್‌ನಲ್ಲೇ ಉದ್ಯೋಗದಲ್ಲಿದ್ದು ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು.ಆತ್ಮಹತ್ಯೆ ಮಾಡಿಕೊಂಡ ಸಂದೇಶ್ ಸಂಬಂಧಿಯಾದ ಕೊಯಿಲ ಗ್ರಾಮದ ಅಂಬಾ ನಿವಾಸಿ ಚರಣ್ ಎಂಬ ಯುವಕ ಕೂಡಾ ಮಸ್ಕತ್‌ನಲ್ಲಿ ಉದ್ಯೋಗದಲ್ಲಿದ್ದು ಇವರು ಇನ್ನೊಂದು ಕೊಠಡಿಯಲ್ಲಿ ವಾಸವಾಗಿದ್ದಾರೆ. ಬೇಗ ಕರ್ತವ್ಯ ಮುಗಿಸಿ ಬಂದ ಸಂದೇಶ್ ಮನೆಯ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Read More

ಬೆಂಗಳೂರು : ರಾಜ್ಯದಲ್ಲಿ ಮುಂಗಾರಿಗೂ ಮುನ್ನವೇ ವರುಣನ ಅಬ್ಬರ ಜೋರಾಗಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಇನ್ನೂ 3 ದಿನ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಾಮರಾಜನಗರ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ರಾಮನಗರ ಜಿಲ್ಲೆಗಳಲ್ಲಿ ಜೂನ್ 2ರವರೆಗೂ ಅಧಿಕ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೇ. 30 ರಿಂದ ಜೂನ್ 1 ರವರೆಗೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಮಂಡ್ಯ, ರಾಮನಗರ, ಚಾಮರಾಜನಗರ ಜಿಲ್ಲೆಗಳಿಗೆ ಮೇ 31 ಹಾಗೂ ಜೂನ್ 1 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ದಕ್ಚಿಣ…

Read More

ಪುತ್ತೂರು: ಬ್ಯಾನರ್ ವಿಚಾರದಲ್ಲಿ‌ ಪೊಲೀಸರಿಂದ ದೌರ್ಜನ್ಯಕ್ಕೊಳಗಾದ ಯುವಕರು ಸೋಮವಾರ ರಾತ್ರಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು. ಇದೇ ಸಂದರ್ಭ ಹರ್ಷ ವ್ಯಕ್ತಪಡಿಸಿದ ಪುರುಷರಕಟ್ಟೆ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕರನ್ನು, ಹಲವು ಮುಖಂಡರು ಬಂದು ಆರೋಗ್ಉ ವಿಚಾರಿಸಿದ್ದರು.

Read More

ಕುಂದಾಪುರ: ಆಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕ ಮೃತಪಟ್ಟ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಾಸಿ ಗ್ರಾಮದ ಆನಗೋಡು ಸಮೀಪದ ತ್ರಾಸಿ-ಮೊವಾಡಿ ರಸ್ತೆಯಲ್ಲಿ ನಡೆದಿದೆ. ಕುಂದಾಪುರದ ನಿವಾಸಿ ಭಾಸ್ಕರ (33) ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟ ದುರ್ದೈವಿ.ಆಟೋ ಚಾಲಕನ ಅಜಾಗೂರಕತೆಯ ಚಾಲನೆಯಿಂದ ಅತೀ ವೇಗವಾಗಿ ಬಂದು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ರಿಕ್ಷಾ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದಿದೆ.ಭಾನುವಾರ ತಡರಾತ್ರಿ ವೇಳೆಗೆ ತ್ರಾಸಿ ಸಮೀಪದ ಮೊವಾಡಿ-ತ್ರಾಸಿ ರಸ್ತೆಯಲ್ಲಿ ಗುರುರಾಜ ಪೂಜಾರಿ ಎಂಬವರ ಆಟೋದಲ್ಲಿ ಸಂಚರಿಸುವ ವೇಳೆ ಘಟನೆ ಸಂಭವಿಸಿದೆ. ಸ್ಥಳೀಯರ ಸಹಕಾರದೊಂದಿಗೆ ಗಂಗೊಳ್ಳಿ ಆಪತ್ಬಾಂಧವ 24*7 ಅಂಬುಲೆನ್ಸ್ ಮೂಲಕ ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆ ಅವರು ಮೃತಪಟ್ಡಿದ್ದಾರೆ ಎಂದು ತಿಳಿದುಬಂದಿದೆ. ರಿಕ್ಷಾ ಚಾಲಕ ಗುರುರಾಜ ಪೂಜಾರಿ ಅವರಿಗೂ ಗಾಯಗಳಾಗಿದ್ದು, ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ರಾಂಚಿ: ಕಳ್ಳನೊಬ್ಬ ಮಹಿಳೆಯ ಕತ್ತಿನಿಂದ ಚಿನ್ನದ ಸರ ಕದ್ದು ಪರಾರಿಯಾಗುವಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಸರ ನುಂಗಿ ಗಂಟಲಲ್ಲಿ ಸಿಲುಕಿ ನರಳಾಡಿದ ಘಟನೆ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದಿದೆ. ಡೊರಾಂಡಾ ಪೊಲೀಸ್ ಠಾಣಾ ವ್ಯಾಪ್ತಿಯ ದುಬಾದಿ ಸೇತುವೆ ಬಳಿ ಸಲ್ಮಾನ್ ಮತ್ತು ಜಾಫರ್ ಎಂಬ ಇಬ್ಬರು ಕಳ್ಳರು ಮಹಿಳೆಯ ಕತ್ತಿನಲ್ಲಿ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ. ಸರ ಕಸಿದುಕೊಂಡ ನಂತರ ಇಬ್ಬರು ದ್ವಿಚಕ್ರವಾಹನದಲ್ಲಿ ಪರಾರಿಯಾಗಿದಾಗ ಕಳ್ಳರನ್ನು ಪೊಲೀಸರು ಬೆನ್ನಟ್ಟಿದ್ದಾರೆ. ಈ ವೇಳೆ ಸಲ್ಮಾನ್ ಸರವನ್ನು ನುಂಗಿದ್ದಾನೆ. ಬಳಿಕ ಸ್ವಲ್ಪ ಹೊತ್ತಿನಲ್ಲೇ ಸಲ್ಮಾನ್ ಮತ್ತು ಜಾಫರ್ನನ್ನು ಬಂಧಿಸಿದ್ದಾರೆ. ಈ ವೇಳೆ ಗಂಟಲಿನ ಕೆಳಭಾಗದಲ್ಲಿ ಚೈನ್ ಸಿಲುಕಿಕೊಂಡು ಎದೆ ನೋವಿನಿಂದ ಸಲ್ಮಾನ್ ನರಳಾಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಕ್ಸ್ ರೇ ಮೂಲಕ ಆರೋಪಿಯ ಎದೆಯಲ್ಲಿ ಸುರುಳಿಯಾಗಿ ಸಿಲುಕಿದ್ದ ಚಿನ್ನದ ಸರವನ್ನು ಪತ್ತೆ ಹಚ್ಚಿದ ವೈದ್ಯರು, ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ. ಸರವನ್ನು ಹಾಜರುಪಡಿಸಿದ್ದಾರೆ. ಅಲ್ಲದೆ ಆರೋಪಿಗೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. 

Read More

ನವದೆಹಲಿ:  ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್​ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರೆಸಿ, ಬ್ರಿಜ್ ಭೂಷಣ್​​ರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಬೇಕು, ಮಂಪರು ಪರೀಕ್ಷೆಗೆ ಒಳಪಡಿಸಬೇಕು,  ಎಂದು  ಕುಸ್ತಿಪಟ್ಟುಗಳು  ಪ್ರತಿಭಟನೆ ನಡೆಸುತ್ತಿರುವುದರಿಂದ ದೆಹಲಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ತಿಂಗಳುಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ಪ್ರತಿಭಟನೆಗೆ ದೆಹಲಿ ಸುತ್ತಲಿನ ರಾಜ್ಯಗಳ ರೈತರು, ವಿವಿಧ ಕ್ಷೇತ್ರದ ಮುಖಂಡರು ಸಾಥ್​ ಕೊಟ್ಟಿದ್ದಾರೆ. ಇನ್ನೂ  ನೂತನ ಸಂಸತ್ ಭವನದ ಉದ್ಘಾಟನೆಯ ದಿನದಂದು  ಪ್ರತಿಭಟನಾಕಾರರೆಲ್ಲ ಸೇರಿ ಮಹಿಳಾ ಸಮ್ಮಾನ್​ ಮಹಾಪಂಚಾಯತ್​ ಹಮ್ಮಿಕೊಂಡಿದ್ದರು. ಅದರ ಭಾಗವಾಗಿ, ರಾಷ್ಟ್ರಧ್ವಜವನ್ನು ಹಿಡಿದು ಹೊಸ ಸಂಸತ್ ಭವನದತ್ತ ಮೆರವಣಿಗೆ ಹೊರಟಿದ್ದರು. ಜಂತರ್​ಮಂತರ್​ ಸುತ್ತ ಪೊಲೀಸರು ಹಾಕಿದ್ದ ಬ್ಯಾರಿಕೇಡ್​ಗಳನ್ನು ಹಾರುವುದನ್ನು  ಕಂಡ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಈ ವಿಚಾರವಾಗಿ  ಕ್ರೀಡಾಪಟ್ಟುಗಳ ವಿರುದ್ಧ ಎಫ್‌ಐಆರ್‌  ದಾಖಲಾದ ನಂತರ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಬ್ರಿಜ್‌ ಭೂಷಣ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲು 7…

Read More

ಬೈಂದೂರು: ನಿರುದ್ಯೋಗದ ಕಾರಣದಿಂದ ಮನನೊಂದ ಯುವತಿ ಡೆತ್‌ ನೋಟ್‌ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಾಲ್ತೊಡು ಗ್ರಾಮದ ಸಿಗೇಅಡಿ ನಿವಾಸಿ ಪ್ರಮೋದಾ ಶೆಟ್ಟಿ ಅವರ ಪುತ್ರಿ ಗೌತಮಿ (22) ಆತ್ಮಹತ್ಯೆ ಮಾಡಿಕೊಂಡವರು. ಎಂ.ಕಾಂ. ಪದವಿ ಪಡೆದಿದ್ದ ಗೌತಮಿಯು ಇತ್ತೀಚೆಗೆ ಬ್ಯಾಂಕ್‌ ಪರೀಕ್ಷೆ ಮತ್ತು ಕಂಪೆನಿಯಲ್ಲಿ ಉದ್ಯೋಗ ಪಡೆಯಲು ಪರೀಕ್ಷೆಗಳನ್ನು ಬರೆದರೂ ಕೂಡ ಆಕೆಗೆ ಉದ್ಯೋಗ ಸಿಗಲ್ಲಿಲ್ಲ ಹೀಗಾಗಿ ಯುವತಿ ಮನನೊಂದು ಮನೆಯ ಮಹಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೇಣಿಗೆ ಶರಣಾಗಿದ್ದ ಗೌತಮಿ ಅವರನ್ನು ಬೈಂದೂರು  ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಆದರೆ ವೈದ್ಯರು ಆಕೆ  ಮೃತಪಟ್ಟಿರುವುದಾಗಿ ಹೇಳಿದ್ದಾರೆ.ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು:ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ಚಾಮರಾಜನಗರ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ರಾಮನಗರ ಜಿಲ್ಲೆಗಳಲ್ಲಿ ಜೂನ್ 2ರವರೆಗೂ ಅಧಿಕ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನುಳಿದಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ, ಮೈಸೂರು, ವಿಜಯನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶವು ರಾಜ್ಯದ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ರಾಯಚೂರಿನಲ್ಲಿ 40.6 ಡಿಗ್ರಿ ಸೆಲ್ಸಿಯಸ್ ಅತ್ಯಧಿಕ ಉಷ್ಣಾಂಶ ದಾಖಲಾಗಿದೆ, ಬೇಲೂರು, ಹುಣಸೂರು, ಕಳಸ, ಶಿರಾಲಿಯಲ್ಲಿ ಮಳೆಯಾಗಿದೆ. ಬೆಂಗಳೂರಿನಲ್ಲಿ ಮಧ್ಯಾಹ್ನದ ಬಳಿಕ ಮೋಡಕವಿದ ವಾತಾವರಣ ನಿರ್ಮಾಣವಾಗಲಿದ್ದು, ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. 

Read More