ಬೆಂಗಳೂರು: ಎಲ್ಲಾ ವರ್ಗದ ವಾಹನಗಳಿಗೆ ಅತೀ ಸುರಕ್ಷಿತ ನೋಂದಣಿ ಫಲಕ ಅಳವಡಿಸಲು ನಿಗದಿಪಡಿಸಿರುವ ಕಾಲಮಿತಿಯನ್ನು ನವೆಂಬರ್ 30ರವರೆಗೆ ವಿಸ್ತರಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಕಳೆದ 2019ರ ಏಪ್ರಿಲ್ ಒಂದಕ್ಕಿಂತ ಪೂರ್ವದಲ್ಲಿ ನೋಂದಣಿಯಾಗಿರುವ ಎಲ್ಲಾ ವರ್ಗದ ವಾಹನಗಳಿಗೆ ಅತೀ ಸುರಕ್ಷಿತ ನೋಂದಣಿ ಫಲಕ ಅಳವಡಿಸಬೇಕಾಗಿದೆ. ಈಗಾಗಲೇ ಈ ನೋಂದಣಿ ಫಲಕ ಅಳವಡಿಕೆಗೆ ನಿಗದಿಪಡಿಸಿದ್ದ ಅಂತಿಮ ಗಡುವನ್ನು ಸಾರಿಗೆ ಇಲಾಖೆ ಸುಮಾರು ನಾಲ್ಕು ಬಾರಿ ವಿಸ್ತರಣೆ ಮಾಡಿದೆ.
Author: main-admin
ಕಾರ್ಕಳ:ಅಣ್ಣನ ತಿಥಿಗೆ ಪೂರ್ವ ಸಿದ್ಧತೆ ಮಾಡುತ್ತಿದ್ದ ವೇಳೆ ತಂಗಿ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ನಿಟ್ಟೆ ಪರಪ್ಪಾಡಿ ಎಂಬಲ್ಲಿ ನಡೆದಿದೆ. ಮೃತಪಟ್ಟ ಮಹಿಳೆ ಲಲಿತಾ ಬೋಂಡ್ರ ಎಂದು ಗುರುತಿಸಲಾಗಿದೆ. ನಿಟ್ಟೆ ಪರಪ್ಪಾಡಿಯ ರಾಘು ಬೋಂಡ್ರ ಎಂಬವರು ಕೆಲ ದಿನಳ ಹಿಂದೆ ಮೃತಪಟ್ಟಿದ್ದರು. ಅಣ್ಣನ ತಿಥಿಯ ಪೂರ್ವ ಸಿದ್ಧತೆಗಾಗಿ ಬಂದಿದ್ದ ತಂಗಿ ಲಲಿತಾ ಬೋಂಡ್ರ ಅವರು ಗುರುವಾರ ರಾತ್ರಿ ಅಡುಗೆ ಪಾತ್ರೆಗಳನ್ನು ತೊಳೆಯುತ್ತಿದ್ದರು. ಅದೇ ಸಂದರ್ಭದಲ್ಲಿ ಮನೆ ಹೊರಾಂಗಣದಲ್ಲಿ ಅಳವಡಿಸಲಾಗಿದ್ದ ಶಾಮಿಯಾನದ ಕಬ್ಬಿಣದ ಕಂಬವನ್ನು ಹಿಡಿಯುತ್ತಿದ್ದಂತೆ ಅವರು ವಿದ್ಯುತ್ ಅಘಾತಕ್ಕೊಳಗಾಗಿ ಘಟನಾ ಸ್ಥಳದಲ್ಲಿ ಕುಸಿದು ಬಿದ್ದು ದಾರುಣ ಅಂತ್ಯ ಕಂಡಿದ್ದಾರೆ. ಶಾಮೀಯನ ಅಳವಡಿಸಿದಾಗ ಅದರ ಕಬ್ಬಣದ ಕಂಬಕ್ಕೆ ಟ್ಯೂಬ್ ಲೈಟ್ ಅಳವಡಿಸಲಾಗಿ ಅದರ ಮೂಲ ವಿದ್ಯುತ್ ಸೋರಿಕೆಯಾಗಿ ಈ ಘಟನೆ ಸಂಭವಿಸಿಎಬಹುದೆಂಬ ಮಾಹಿತಿ ತಿಳಿದು ಬಂದಿದೆ.
ಬೆಂಗಳೂರು : 7 ಜನ ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಶುಕ್ರವಾರ ಆದೇಶಿಸಿದೆ. ಶಾಂತನು ಸಿನ್ಹಾ – ಡಿಐಜಿಪಿ ಸಿಐಡಿ ಜಿ.ಸಂಗೀತಾ – ಎಸ್.ಪಿ, ಸಿಐಡಿ ಅಬ್ದುಲ್ ಅಹದ್ – ನಿರ್ದೇಶಕರು, ಬಿಎಂಟಿಸಿ (ಭದ್ರತಾ & ವಿಚಕ್ಷಣೆ) ಲಕ್ಷ್ಮಣ್ ನಿಂಬರ್ಗಿ – ಎಸ್.ಪಿ, ವಿಜಯಪುರ ಚೆನ್ನಬಸವಣ್ಣ ಲಂಗೋಟಿ – ನಿರ್ದೇಶಕರು, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು ಪೃಥ್ವಿಕ್ ಶಂಕರ್ – ಎಸ್.ಪಿ, ಯಾದಗಿರಿ ಶಿವಾಂಶು ರಜಪೂತ್ – ಎಸ್.ಪಿ – ರಾಜ್ಯ ಅಪರಾಧ ದಾಖಲೆಗಳ ವಿಭಾಗ
ಬೆಂಗಳೂರು : ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರ ನಿಯಂತ್ರಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸ್ವಚ್ಛ ಅಬಕಾರಿ ಅಭಿಯಾನದಡಿ ನ. 20ರಂದು ರಾಜ್ಯಾದ್ಯಂತ ಮದ್ಯ ಮಾರಾಟ ಬಂದ್ಗೆ ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಶನ್ ಕರ್ನಾಟಕ ಕರೆ ನೀಡಿದೆ. ಗುರುವಾರ ಸುದ್ದಿಗೋಷ್ಠಿ ಯಲ್ಲಿ ಈ ವಿಷಯ ತಿಳಿಸಿದ ಅಸೋಶಿ ಯೇಶನ್ ಪ್ರಧಾನ ಕಾರ್ಯದರ್ಶಿ ಬಿ. ಗೋವಿಂದರಾಜ್ ಹೆಗ್ಡೆ, ಅಬಕಾರಿ ಇಲಾಖೆ ಯನ್ನು ಆರ್ಥಿಕ ಸಚಿವರೇನಿರ್ವಹಿಸಬೇಕು. ಈ ಬಗ್ಗೆ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಬೇಕು. ವ್ಯಾಪಾರಿಗಳು ಪರವಾನಗಿ ಪಡೆಯುವಾಗ ಹಾಗೂ ಮರು ನೋಂದಣಿ ಮಾಡಿಕೊಳ್ಳುವಾಗ ಅಧಿಕಾರಿಗಳು ಲಂಚ ಕೇಳುತ್ತಿರುವ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಅಬಕಾರಿ ಕಾಯ್ದೆಯ ಕಲಂ 29 ಪುನರ್ ವಿಮರ್ಶಿಸಿ, ತಿದ್ದುಪಡಿ ಮಾಡಬೇಕು. ಚಿಲ್ಲರೆ ಲದೆ ಮಾರಾಟದ ಮೇಲೆ ಮದ್ಯ ಕನಿಷ್ಠ ಶೇ 20 ರಷ್ಟು ಲಾಭಾಂಶ ನೀಡಬೇಕು. ನಕಲಿ ಮದ್ಯ ತಯಾರಕರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮದ್ಯದ ಪಾರ್ಸಲ್ಗೆ ಸಂಬಂಧಿಸಿದಂತೆ ಕಾನೂನು…
ವಿಟ್ಲ : ಇಲ್ಲಿನ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ದಾಂಧಲೆ ನಡೆಸಿದ ಆರೋಪದಲ್ಲಿ ಇಬ್ಬರ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೀರಕಂಬ ಗ್ರಾಮದ ನಿವಾಸಿ ಹರೀಶ್ ರೈ ಕಲ್ಮಲೆ, ಧನಂಜಯ ವಿರುದ್ಧ ಪ್ರಕರಣ ದಾಖಲಾಗಿದೆ. ವೀರಕಂಬ ಗ್ರಾಮದ ನೆಕ್ಕಿಲಾರು ನಿವಾಸಿ ಶೇಖ್ ಸುಬಾನ್ ಅವರ 94ಸಿ ಮನೆ ನಿವೇಶನದ ಮಂಜೂರಾತಿಗೆ ಸಂಬಂಧಿಸಿ ಮಾತುಕತೆ ನಡೆಸಲು ಆರ್.ಐ.ಕಚೇರಿಗೆ ಇವರಿಬ್ಬರೂ ರಾಜಕಾರಣಿಯೊಂದಿಗೆ ಆಗಮಿಸಿದ್ದರು. ಈ ಸಂಬಂಧ ಮಾತಿಗೆ ಮಾತು ಬೆಳೆದು ದಾಂಧಲೆ ನಡೆಸಿದ್ದು, ಆರೋಪಿಗಳ ವಿರುದ್ಧ ಅವಾಚ್ಯವಾಗಿ ನಿಂದಿನೆ, ಜೀವ ಬೆದರಿಕೆ ಹಾಕಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹೊರಿಸಲಾಗಿದೆ. ಕಚೇರಿಯ ಮೇಜಿನ ಮೇಲಿದ್ದ ಗಾಜನ್ನು ಒಡೆದ ಕಾರಣ 7 ಸಾ. ರೂ. ನಷ್ಟ ಉಂಟಾಗಿರುವುದಾಗಿ ಕಂದಾಯ ನಿರೀಕ್ಷಕ ಎ. ಪ್ರಶಾಂತ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.
ಕಾರ್ಕಳ: ಬೋಳ ಗ್ರಾಮದ ಎರಡು ಮನೆಗಳಲ್ಲಿ ಗೋವಾ ರಾಜ್ಯದ ಭಾರಿ ಪ್ರಮಾಣದಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಮದ್ಯದ ಬಾಕ್ಸ್ ಗಳನ್ನು ಅಬಕಾರಿ ಇಲಾಖೆ ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿರುವ ಘಟನೆ ಇಂದು ನಡೆದಿದೆ. ಅಬಕಾರಿ ಉಪ ಆಯುಕ್ತೆ ಬಿಂದು ಅವರ ನೇತೃತ್ವದಲ್ಲಿ ಬೋಳದ ಅವಿನಾಶ್ ಮಲ್ಲಿ ಎಂಬುವವರ ಎರಡು ಮನೆಗೆ ದಾಳಿ ನಡೆಸಿದ್ದು, ದುಬಾರಿ ಮೌಲ್ಯದ ಮದ್ಯದ ಬಾಟಲಿಗಳು ಬಾಕ್ಸ್ಗಳು ಕೂಡ ಪತ್ತೆಯಾಗಿದೆ. 200 ಕ್ಕೂ ಅಧಿಕ ಬಾಕ್ಸ್ ಗಳನ್ನು ವಶಕ್ಕೆ ಪಡೆದಿದ್ದು, ಇವು ನಕಲಿ ಮದ್ಯವೋ, ಅಸಲಿ ಮದ್ಯವೋ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. ಗ್ರಾಮೀಣ ಭಾಗದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮದ್ಯ ದಾಸ್ತಾನು ಮಾಡಿರುವ ಬಗ್ಗೆ ಅಧಿಕಾರಿಗಳು ದಂಗಾಗಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಪರಿಶೀಲನೆ ನಡೆಯುತ್ತಿದ್ದು, ತನಿಖೆ ನಡೆಸಲಾಗುತ್ತಿದೆ. ಶೀಘ್ರ ವಿವರವಾದ ಮಾಹಿತಿ ನೀಡಲಾಗುವುದು ಎಂದು ಅಬಕಾರಿ ಡಿಸಿ ಬಿಂದು ತಿಳಿಸಿದ್ದಾರೆ.
ಮಲ್ಪೆ : ಡ್ರಗ್ಸ್ ಪಾರ್ಸೆಲ್ ಕಳುಹಿಸಿರುವುದಾಗಿ ಬೆದರಿಸಿ ವ್ಯಕ್ತಿಯೊಬ್ಬರಿಂದ 20.ಲಕ್ಷ ರೂ. ಖಾತೆಗೆ ವರ್ಗಾಯಿಸಿ ವಂಚನೆ ಎಸಗಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ.7ರಂದು ಅಪರಿಚಿತ ವ್ಯಕ್ತಿ ಕೋರಿಯರ್ ಕಂಪನಿಯಿಂದ ಕರೆ ಮಾಡಿರುವುದಾಗಿ ಹೇಳಿ, ನೀವು ಕಳಿಸಿರುವ ಪಾರ್ಸೆಲ್ನಲ್ಲಿ ಬಟ್ಟೆ, ಪಾಸ್ಪೋರ್ಟ್, ಡೆಬಿಟ್ ಕಾರ್ಡ್, ಲ್ಯಾಪ್ಟಾಪ್, ಎಂಡಿಎಂಎ ಡ್ರಗ್ಸ್ ಇದ್ದು ಆ ಪಾರ್ಸೆಲ್ ಮುಂಬೈಯ ಎನ್ ಸಿಬಿ ಅವರ ಬಳಿ ಇದೆ. ನೀವು ಅರ್ಮನ್ ಅಲಿಗೆ ಪಾರ್ಸೆಲ್ ಕಳುಹಿಸಿರುವುದಾಗಿ ತಿಳಿಸಿದರು. ಇದಕ್ಕೆ ಪೊಲೀಸ್ ಕ್ಲಿಯರೆನ್ಸ್ ಪಡೆಯಲು ವಿಡಿಯೋ ಕಾಲ್ ಗೆ ಬರುವಂತೆ ತಿಳಿಸಿದರು. ಎಲ್ಲಾ ದಾಖಲೆಗಳನ್ನು ಪರಿಶೀಲಿಸುವುದಾಗಿ ತಿಳಿಸಿ , ವ್ಯಕ್ತಿಯ ಬ್ಯಾಂಕ್ ನ ಖಾತೆಯ ಅಪ್ಲಿಕೇಶನ್ ಲಾಗಿನ್ ಆಗಲು ಸೂಚಿಸಿ ಪರ್ಸನಲ್ ಲೋನ್ ಸೆಕ್ಷನ್ನಲ್ಲಿ 20 ಲಕ್ಷ ವಂಚನೆಯ ಹಣ ಇದ್ದು 20 ಲಕ್ಷ ಹಣವನ್ನು ತಮ್ಮ ಖಾತೆಗೆ ಜಮಾವಣೆ ಮಾಡಿಕೊಳ್ಳುವಂತೆ ಸೂಚಿಸಿದರು. ಅದನ್ನು ನಂಬಿ 20 ಲಕ್ಷ ರೂ. ಹಣವನ್ನು ವರ್ಗಾವಣೆ ಮಾಡಿ ವಂಚನೆಗೆ ಒಳಗಾಗಿರುವುದಾಗಿ…
ಮಂಗಳೂರು: ನಗರದ ಕಾಲೇಜೊಂದರ ಅಪ್ರಾಪ್ತ ವಿದ್ಯಾರ್ಥಿ ಮೇಲೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾರೆಂದು ಆರೋಪ ಎದುರಿಸುತ್ತಿದ್ದ ಕಾಲೇಜಿನ ಉಪನ್ಯಾಸಕರನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ತ್ವರಿತ ಗತಿ ವಿಶೇಷ ನ್ಯಾಯಾಲಯ (ಪೊಕ್ಸೊ) ದೋಷಮುಕ್ತ ಗೊಳಿಸಿದೆ. ‘ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳು ನೃತ್ಯ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಉಪನ್ಯಾಸಕ ಕಾರ್ತಿಕ್ ನೋಟ್ಸ್ ನೋಡುವ ನೆಪದಲ್ಲಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯನ್ನು ಕರೆಸಿಕೊಂಡಿದ್ದರು. ಬಳಿಕ ದೈಹಿಕ ಶಿಕ್ಷಣ ಕೊಠಡಿಗೆ ಕರೆದೊಯ್ದು ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ನೀಡುವುದಾಗಿ ಆಮಿಷವೊಡ್ಡಿದ್ದಾರೆ. ಅಲ್ಲಿ ಬಟ್ಟೆಯನ್ನು ಕಳಚಿ ಅಸ್ವಾಭಾವಿಕವಾಗಿ ಲೈಂಗಿಕ ಕ್ರಿಯೆ ನಡೆಸಿದ್ದರು. ಬಳಿಕವೂ ಹಲವು ಬಾರಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದರು’ ಎಂದು ಆರೋಪಿಸಿ ಅಪ್ರಾಪ್ತ ವಿದ್ಯಾರ್ಥಿ ದೂರು ನೀಡಿದ್ದ. ಈ ಬಗ್ಗೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಸಹಾಯಕ ಪೊಲೀಸ್ ಆಯುಕ್ತ ಪಿ. ಎ. ಹೆಗಡೆ ಮತ್ತು ಎಸ್.ಮಹೇಶ್ ಕುಮಾರ್ ದೋಷರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣವನ್ನು ಕೈಗೆತ್ತಿಕೊಂಡ ನ್ಯಾಯಾಲಯ…
ಮಲ್ಪೆ : ಮಧ್ಯರಾತ್ರಿ ಮಲ್ಪೆ ಹನುಮಾನ್ ನಗರ ಪ್ರದೇಶದಲ್ಲಿ ಅರೆಬೆತ್ತಲೆಯಾಗಿ ಯುವಕನೊಬ್ಬ ಎಲ್ಲರ ಮನೆಯ ಬಾಗಿಲು ತಟ್ಟಿ ಓಡುತ್ತಿದ್ದ ಯುವಕನನ್ನು ಸ್ಥಳೀಯ ನಿವಾಸಿಗಳು ಮಲ್ಪೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಮಲ್ಪೆ ಪೊಲೀಸರ ಅವನ ಮೇಲೆ ತನಿಖೆಯನ್ನು ಕೂಡ ನಡೆಸದೆ ಬಿಟ್ಟು ಕಳಿಸಿದ್ದಾರೆ ಎನ್ನುವುದು ಸ್ಥಳೀಯರ ಸಂಶಯಕ್ಕೆ ಎಡೆ ಮಾಡಿದೆ. ಹಿಂದೆ ಹಲವಾರು ಬಾರಿ ಕೂಡ ಇಂಥ ಪ್ರಕರಣಗಳು ನಡೆದಿದ್ದು ಈಗ ಮತ್ತೆ ಪುನಃ ಘಟನೆ ಮರುಕಳಿಸಿದಾಗ ಎಚ್ಚೆತ್ತು ಸಾರ್ವಜನಿಕರು ಆರೋಪಿಯನ್ನು ಹಿಡಿದು ಪೊಲೀಸ ಠಾಣೆಗೆ ಒಪ್ಪಿಸಿದ್ದಾರೆ. ಸ್ಥಳೀಯರನ್ನು ಎರಡು ಗಂಟೆಗಳ ಕಾಲ ಠಾಣೆಯಲ್ಲಿ ಕಾಯಿಸಿ ಇವರನ್ನು ರೈಲ್ವೆ ನಿಲ್ದಾಣಕ್ಕೆ ಬಿಟ್ಟು ಬನ್ನಿ ಎನ್ನುವಂತ ಬೇಜವಾಬ್ದಾರಿ ಹೇಳಿಕೆಗಳನ್ನು ಪೊಲೀಸರು ನೀಡಿದ್ದು ಪೊಲೀಸರ ಮೇಲೆ ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಇತ್ತೀಚಿಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ನಡೆದ ಲಾಕಪ್ ಡೆತ್ ಪ್ರಕರಣದ ನಂತರ ಇಂಥ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ರಾತ್ರಿ ವೇಳೆಯಲ್ಲಿ ಠಾಣೆಯಲ್ಲಿ ಕುರಿಸಲು ಭಯಪಡುತ್ತಿದ್ದಾರೆ ಎನ್ನಲಾಗಿದೆ. ಮಲ್ಪೆ ಪರಿಸರದಲ್ಲಿ ಮೀನುಗಾರಿಕಾ ಬೋಟ್ನಲ್ಲಿ ಕಾರ್ಯನಿರ್ವ…
ಮಂಗಳೂರು: ನಗರದ ಕಾಲೇಜಿನಲ್ಲಿ ಕುಸಿದು ಬಿದ್ದು ತೀವ್ರ ಅಸ್ವಸ್ಥರಾಗಿದ್ದ ಉಪನ್ಯಾಸಕಿ ಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರು ನಗರದ ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕಿ, ಬಜಪೆ ನಿವಾಸಿ ಗ್ಲೋರಿಯಾ ರೋಡ್ರಿಗಸ್(23) ಎಂದು ತಿಳಿಯಲಾಗಿದೆ. ಫುಡ್ ಅಲರ್ಜಿ ಕಾರಣ ಗ್ಲೋರಿಯಾ ಕಳೆದ ಶುಕ್ರವಾರ ಮಧ್ಯಾಹ್ನ ಊಟ ಸೇವಿಸಿದ ಬಳಿಕ ಕಾಲೇಜಿನಲ್ಲಿ ಏಕಾಏಕಿ ಕುಸಿದುಬಿದ್ದಿದ್ದರು. ಅವರನ್ನು ಕೂಡಲೇ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ನಡುವೆ ಅವರ ಮೆದುಳು ನಿಷ್ಕ್ರಿಯವಾಗಿರುವುದಾಗಿ ನುರಿತ ವೈದ್ಯರ ತಂಡ ತಿಳಿಸಿದ್ದರು. ಅನಾಫಿಲ್ಯಾಕ್ಟಿಕ್ ರಿಯಾಕ್ಷನ್ ಗ್ಲೋರಿಯಾ ಅವರಿಗೆ ಫುಡ್ ಅಲರ್ಜಿ(ಅನಾಫಿಲ್ಯಾಕ್ಟಿಕ್ ರಿಯಾಕ್ಷನ್) ಸಮಸ್ಯೆ ಇತ್ತು. ಇದರಿಂದಾಗಿ ಈ ಹಿಂದೆಯೂ ಸ್ವಲ್ಪ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆ ಉಂಟಾಗಿ ಬಳಿಕ ಚೇತರಿಸಿಕೊಂಡಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಗ್ಲೋರಿಯಾ ತಂದೆ, ತಾಯಿ, ಸಹೋದರನನ್ನು ಅಗಲಿದ್ದಾರೆ. ಗ್ಲೋರಿಯಾ ರೋಡ್ರಿಗಸ್ ಅವರ ದೇಹದ ಅಂಗಾಂಗವನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಕಣ್ಣು, ಹೃದಯ, ಚರ್ಮ, ಯಕೃತ್, ಎರಡು ಕಿಡ್ನಿ, ಶ್ವಾಸಕೋಶವನ್ನು ದಾನ ಮಾಡಲಾಗಿದೆ. ಯಕೃತ್(ಲಿವರ್)…