ಉಪ್ಪಿನಂಗಡಿ: ಅಟೋ ರಿಕ್ಷಾದಲ್ಲಿ ಮಾದಕ ವಸ್ತು ಸಾಗಿಸುತ್ತಿದ್ದ ಸಂದರ್ಭ ಆರೋಪಿಗಳನ್ನು ಬಂಧಿಸಿರುವ ಉಪ್ಪಿನಂಗಡಿ ಪೊಲೀಸರು ಅವರಿಂದ ಮಾದಕ ವಸ್ತು ಸಾಗಾಟಕ್ಕೆ ಬಳಸಿದ್ದ ಅಟೋ ರಿಕ್ಷಾ ಹಾಗೂ 9.36 ಗ್ರಾಂ ನಿಷೇಧಿತ ಎಂ.ಡಿ.ಎಂ.ಎ. ಅನ್ನು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ತಾಲೂಕು ಕೆದಿಲ ಗ್ರಾಮ ನಿವಾಸಿ ಮೊಹಮ್ಮದ್ ನಾಸೀರ್ (24 ವ), ಬಂಟ್ವಾಳ ತಾಲೂಕು ಪೆರಾಜೆ ಗ್ರಾಮದ ಏನಾಜೆ ಬುಡೋಳಿ ನಿವಾಸಿ ಮಹಮ್ಮದ್ ಆಸೀಫ್ .ಬಿ(21 ವ) ಹಾಗೂ ಸಿನಾನ್ ಆರೋಪಿಗಳು ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಅವಿನಾಶ್ ಎಚ್. ಮತ್ತು ಸಿಬ್ಬಂದಿ ಆ.9ರಂದು 34 ನೆಕ್ಕಿಲಾಡಿ ಗ್ರಾಮದ ನೆಕ್ಕಿಲಾಡಿ ಜಂಕ್ಷನ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಅಟೋ ರಿಕ್ಷಾವೊಂದು ಬಂದಿದ್ದು, ಇದನ್ನು ತಪಾಸಣೆಗೆ ನಿಲ್ಲಿಸಲು ಸೂಚಿಸಿದಾಗ ಅಟೋ ರಿಕ್ಷಾವನ್ನು ಅಲ್ಲಿ ನಿಲ್ಲಿಸದೇ ಮುಂದಕ್ಕೆ ರಸ್ತೆ ಬದಿ ನಿಲ್ಲಿಸಿ ಅದರಲ್ಲಿದ್ದ ಚಾಲಕ ಹಾಗೂ ಇನ್ನೊಬ್ಬಾತ ಓಡಿ ಪರಾರಿಯಾಗಲು ಯತ್ನಿಸಿದರು. ಆ ಸಂದರ್ಭ ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಟೋ…
Author: main-admin
ಮಂಗಳೂರು: ನಗರದಲ್ಲಿ ಸಂಚಲನ ಮೂಡಿಸಿದ್ದ ಲವ್ ಜಿಹಾದ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕೇರಳದ ನಟೋರಿಯಸ್ ಕ್ರಿಮಿನಲ್ ಇದೀಗ ಹಿಂದೂ ವಿದ್ಯಾರ್ಥಿನಿಯನ್ನು ಮತಾಂತರಗೊಳಿಸಿ ವಿವಾಹವಾಗಿದ್ದಾನೆ ಎಂದು ವಿಚಾರ ಬೆಳಕಿಗೆ ಬಂದಿದೆ. ಕೇರಳದ ಕಾಸರಗೋಡಿನ ವಿದ್ಯಾನಗರ ನಿವಾಸಿ ವಿಸ್ಮಯಾಳನ್ನು ಅಶ್ಪಕ್ ಎಂಬ ನಟೋರಿಯಸ್ ಕ್ರಿಮಿನಲ್ ಪ್ರೀತಿಯ ಬಲೆಗೆ ಬೀಳಿಸಿದ್ದ. ಕೇವಲ ಎರಡೇ ತಿಂಗಳಲ್ಲಿ ಆತ ಪ್ರೀತಿಯ ಖೆಡ್ಡಾಕ್ಕೆ ಬೀಳಿಸಿದ್ದ ಎಂದು ಆರೋಪಿಸಲಾಗಿದೆ. ಮಂಗಳೂರಿನ ಉಳ್ಳಾಲದ ಅತ್ತೆ ಮನೆಯಲ್ಲಿದ್ದುಕೊಂಡು ಬಿಸಿಎ ಶಿಕ್ಷಣ ಪಡೆಯುತ್ತಿದ್ದ ವಿಸ್ಮಯಾಳನ್ನು ಜೂ.6ರಂದು ಅಲ್ಲಿಂದಲೇ ಕರೆದುಕೊಂಡು ಹೋಗಿದ್ದ ಅಶ್ಪಕ್. ಬಳಿಕ ವಿದ್ಯಾನಗರ ಠಾಣೆ ಪೊಲೀಸರು ಆಕೆಯನ್ನು ಪತ್ತೆಹಚ್ಚಿ ಮಂಗಳೂರಿನ ಕೌನ್ಸಿಲಿಂಗ್ ಕೇಂದ್ರದಲ್ಲಿರಿಸಿದ್ದರು. ಆದರೆ ಅಷ್ಪಕ್ ನೊಂದಿಗೆ ತೆರಳುವುದಾಗಿ ಹೇಳಿದ್ದಳು. ವಿಸ್ಮಯಳನ್ನು ಮತಾಂತರ ನಡೆಸಿರುವುದಾಗಿ ಆಕೆಯ ತಂದೆ ಆರೋಪಿಸಿದ್ದರು. ಬಳಿಕ ಮಂಗಳೂರಿನ ವಿಎಚ್‌ಪಿ ನಾಯಕರನ್ನು ಭೇಟಿಯಾಗಿ ವಿಸ್ಮಯಾ ತಂದೆ ಮಗಳನ್ನು ಉಳಿಸಿಕೊಡಿ ಎಂದು ಕಣ್ಣೀರು ಹಾಕಿದ್ದರು. ಕೊನೆಗೂ ಆಕೆ ತಂದೆಯ ಕೈಗೆ ಸಿಗದೇ ಅಶ್ಪಕ್ ನನ್ನು ವಿಸ್ಮಯಾ ಮುಸ್ಲಿಂ ಪದ್ಧತಿ ಪ್ರಕಾರ ವಿವಾಹವಾಗಿದ್ದಾಳೆ.…
ಕುಂದಾಪುರ: ನಗರದ ಚಿಕ್ಕನಸಾಲು ರಸ್ತೆಯಲ್ಲಿ ಜೈ ಹಿಂದ್ ಹೊಟೇಲಿನ ಎದುರುಗಡೆ ಇರುವ ನಾಗರಾಜ ಎಂಬವರಿಗೆ ಸೇರಿದ ಬಾಡಿಗೆ ಕಟ್ಟಡದಲ್ಲಿ ಚಿನ್ನದ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೋರ್ವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುಂದಾಪುರದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿ ಸಂತೋಷ್ ಆಚಾರ್ಯ (45) ಅವಿವಾಹಿತರಾಗಿದ್ದರು ಎಂದು ಗುರುತಿಸಲಾಗಿದೆ. ಸಂತೋಷ ಆಚಾರ್ಯ ಕಳೆದ 25 ವರ್ಷಗಳಿಂದ ಕುಂದಾಪುರ ನಗರದಲ್ಲಿ ಚಿನ್ನದ ಕೆಲಸ ಮಾಡಿಕೊಂಡಿದ್ದರು. ವಾರಕ್ಕೊಮ್ಮೆ ಬ್ರಹ್ಮಾವರ ಬಳಿಯ ಉಪ್ಪೂರಿನಲ್ಲಿರುವ ತನ್ನ ಮನೆಗೆ ಹೋಗಿ ಬರುತ್ತಿದ್ದರು. ನಾಗರ ಪಂಚಮಿಯ ಪ್ರಯುಕ್ತ ಅಣ್ಣ ಮನೆಗೆ ಬರಲಿಲ್ಲವೆಂದು ಸಹೋದರ ಸುರೇಶ್ ಆಚಾರ್ಯರವರು ಫೋನ್ ಮಾಡಿದ್ದು ಫೋನ್ ಸ್ವಿಚ್ ಆಫ್ ಆಗಿತ್ತು. ನಂತರ ಅವರು ಅಣ್ಣನ ಮನೆಗೆ ಸ್ನೇಹಿತರೊಬ್ಬರನ್ನು ಕಳುಹಿಸಿ ವಿಚಾರಿಸಿದಾಗ ಮನೆಯ ಒಳಗಿನಿಂದ ದುರ್ವಾಸನೆ ಬರುತ್ತಿದೆ ಎಂದು ತಿಳಿಸಿದ್ದು ಸಂತೋಷ್ ಆಚಾರ್ಯ ಮೃತಪಟ್ಟಿರುವ ವಿಷಯ ಬೆಳಕಿಗೆ ಬಂದಿದೆ. ಸಂತೋಷ್ ಚಾಪೆಯ ಮೇಲೆ ಮಲಗಿದ್ದ ಸ್ಥಿತಿಯಲ್ಲಿದ್ದರು. ಮನೆಯ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು. ಫ್ಯಾನ್ ತಿರುಗುತ್ತಿತ್ತು. ಮೊಬೈಲ್ ಇಯರ್ ಫೋನ್…
ಉಡುಪಿ: ನಗರದಲ್ಲಿ ಮಗು ಮಾರಾಟ ಘಟನೆಗೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಜು. 19ರಂದು ಆರೋಪಿಗಳಾದ ರಾಬಿಯಾ ಬಾನು ಮತ್ತು ಖಾಲಿದ್ ಸಯ್ಯದ್ ಅವರಿಗೆ ಹೆಣ್ಣು ಮಗು ಜನಿಸಿತ್ತು. ಆದರೆ ಆ ಮಗು ಅವರ ವಶದಲ್ಲಿ ಇಲ್ಲದಿರುವ ಬಗ್ಗೆ ಆ. 6ರಂದು ಪೆರಂಪಳ್ಳಿಯ ಅಂಗನವಾಡಿ ಕಾರ್ಯಕರ್ತೆ ಸರಿತಾ ಡಿ’ಸೋಜಾ ಅವರು ಮಕ್ಕಳ ರಕ್ಷಣ ಘಟಕಕ್ಕೆ ಮಾಹಿತಿ ನೀಡಿದ್ದರು. ಅನಂತರ ಮಕ್ಕಳ ರಕ್ಷಣ ಘಟಕದ ಸಾಮಾಜಿಕ ಕಾರ್ಯಕರ್ತರಾದ ಸುರಕ್ಷಾ, ಯೋಗೀಶ್ ಹಾಗೂ ಸರಿತಾ ಡಿ’ಸೋಜಾ ಅವರು ಪೆರಂಪಳ್ಳಿಯ ಶೀಂಬ್ರ ಭಟ್ರಕೋಡಿಯಲ್ಲಿರುವ ಆರೋಪಿಗಳ ಮನೆಗೆ ಭೇಟಿ ನೀಡಿದ್ದು, ಈ ವೇಳೆ ಮನೆಗೆ ಬೀಗ ಹಾಕಲಾಗಿತ್ತು. ಖಾಲಿದ್‌ಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಬಳಿಕ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ಬಗ್ಗೆ ಸುರಕ್ಷಾ ಅವರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆ.7ರಂದು ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದರು. ವಿಚಾರಣೆ ವೇಳೆ ಆರೋಪಿಗಳು ಮಗುವನ್ನು ಮೂಲ್ಕಿಯ ನಿವಾಸಿ…
ಮಂಗಳೂರು: ವ್ಯಕ್ತಿಯೊಬ್ಬರನ್ನು ಅಪಹರಿಸಿದ ಘಟನೆ ನಗರದಲ್ಲಿ ನಡೆದಿರುವುದು ವರದಿಯಾಗಿದ್ದು, ಈ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇರಳ ಮೂಲದ ಶರತ್ ಬಾಬು (35) ಅಪಹರಣಕ್ಕೊಳಗಾದವರು. ಇವರು ಖಾಸಗಿ ಮೆಡಿಕಲ್, ನರ್ಸಿಂಗ್ ಕಾಲೇಜುಗಳಿಗೆ ಸೀಟು ಕೊಡಿಸುವ ಬ್ರೋಕರ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕಳೆದ ವರ್ಷ ಕೇರಳ ಮೂಲದ ಓರ್ವರಿಂದ 9 ಲಕ್ಷ ರೂ. ಪಡೆದು ಬೆಂಗಳೂರಿನ ನರ್ಸಿಂಗ್ ಕಾಲೇಜಿನಲ್ಲಿ ಸೀಟು ತೆಗೆಸಿಕೊಡುವುದಾಗಿ ತಿಳಿಸಿದ್ದರೆನ್ನಲಾಗಿದೆ. ಆದರೆ ಕಾಲೇಜಿನವರಿಗೆ 2 ಲಕ್ಷ ರೂ. ನೀಡಿ ಉಳಿದ 7 ಲಕ್ಷ ರೂ.ಗಳನ್ನು ತನ್ನಲ್ಲಿಯೇ ಇಟ್ಟುಕೊಂಡಿದ್ದ ಎನ್ನಲಾಗಿದೆ. ಹಾಗಾಗಿ ಆ ಹಣವನ್ನು ವಾಪಸ್ ಕೇಳಿದ್ದು, ಶರತ್ ಬಾಬು ವಾಪಸ್ ಕೊಡದ ಸಿಟ್ಟಿನಲ್ಲಿ ನಗರದ ಪಿವಿಎಸ್ ಬಳಿ ಕಾರಿನಲ್ಲಿ ಬಂದ ಇಬ್ಬರು ಬಲವಂತವಾಗಿ ಅಪಹರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶರತ್ ಬಾಬು ಸಂಪರ್ಕಕ್ಕೆ ಸಿಕ್ಕಿದ್ದಾನೆ. ಹಣದ ವಿಚಾರವಾಗಿಯೇ ಅಪಹರಿಸಿರುವುದಾಗಿ ತಿಳಿದು ಬಂದಿದೆ. ಪ್ರಕರಣದ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಕದ್ರಿ ಪೊಲೀಸರು ತಿಳಿಸಿದ್ದಾರೆ.
ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಕೈ ಗ್ರಾಮದಲ್ಲಿ ನಡೆದಿದೆ. ಚಂಪಾಕಪುರ ನಿವಾಸಿ ವಾಣಿ (32) ಮತ್ತು ಮಕ್ಕಳಾದ ಸಮರ್ಥ (12), ಸಂಪದ (6) ಮೃತರು. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ನಗರ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲು ರವಾನೆ ಮಾಡಲಾಗಿದ್ದು, ಇನ್ನೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಇನ್ನು ಈ ಘಟನೆಯಿಂದ ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನವದೆಹಲಿ: ಪುಣೆ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಮಾಡ್ಯೂಲ್ನ ಪ್ರಮುಖ ಸದಸ್ಯ ರಿಜ್ವಾನ್ ಅಬ್ದುಲ್ ಹಾಜಿ ಅಲಿಯನ್ನು ದೆಹಲಿ ಪೊಲೀಸ್ ವಿಶೇಷ ಸೆಲ್ ಬಂಧಿಸಿದೆ. ಆತನ ತಲೆಗೆ 3 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ದೆಹಲಿಯ ದರಿಯಾಗಂಜ್ ನಿವಾಸಿಯಾಗಿರುವ ಅಲಿ, ಪುಣೆ ಐಸಿಸ್ ಮಾಡ್ಯೂಲ್ನ ಇತರ ಸದಸ್ಯರೊಂದಿಗೆ ದೆಹಲಿ ಮತ್ತು ಮುಂಬೈನ ಹಲವಾರು ಉನ್ನತ ಗುರಿಗಳ ಮೇಲೆ ಬೇಹುಗಾರಿಕೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅವರ ಬಂಧನಕ್ಕೆ ವಾರಂಟ್ ಹೊರಡಿಸಿತ್ತು ಮತ್ತು ಪುಣೆ ಪೊಲೀಸರ ವಶದಿಂದ ತಪ್ಪಿಸಿಕೊಂಡಾಗಿನಿಂದ ಅವರು ಬಂಧನದಿಂದ ತಪ್ಪಿಸಿಕೊಂಡಿದ್ದರು. ಎನ್‌ಐಎ ಸಲ್ಲಿಸಿದ ಪೂರಕ ಚಾರ್ಜ್ಶೀಟ್ನಲ್ಲಿ ಅಲಿ ಮತ್ತು ಇತರ ಮೂವರು ಆರೋಪಿಗಳನ್ನು ಹೆಸರಿಸಲಾಗಿದೆ
ಬಂಟ್ವಾಳ: ಪಾದಚಾರಿ ಮಹಿಳೆಗೆ ಪಿಕಪ್ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಘಟನೆ ವಾಮದಪದವಿನಲ್ಲಿ ನಡೆದಿದೆ. ಪಿಲಿಮೊಗರು ಗ್ರಾಮದ ಜತ್ತನಕೆರೆ ನಿವಾಸಿ ಪುಷ್ಪಾವತಿ ( 70) ಎಂಬವರು ಗಾಯಗೊಂಡ ಮಹಿಳೆ. ಬೆಂಜನಪದವಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸಂಬಂಧಿ ಬಾಲಕನ ಅಂತ್ಯ ಸಂಸ್ಕಾರದ ಕಾರ್ಯ ಮುಗಿಸಿ ವಾಪಸು ಮಗನ ಜೊತೆಗೆ ಬೈಕಿನಲ್ಲಿ ಬರುವ ವೇಳೆ ಮಳೆ ಬಂದ ಕಾರಣ ತಾಯಿಯನ್ನು ಮಗ ಬಸ್ ನಲ್ಲಿ ಕಳುಹಿಸಿದ್ದ ಎಂದು ತಿಳಿದು ಬಂದಿದೆ. ಬಿಸಿರೋಡಿನಿಂದ ಬಸ್ ನಲ್ಲಿ ಬಂದು ವಾಮದಪದವಿನಲ್ಲಿ ಇಳಿದು ಮನೆ ಕಡೆಗೆ ಹೋಗುವ ವೇಳೆ ಪಿಕಪ್ ಇವರಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಇವರು ಡಾಮರು ರಸ್ತೆಗೆ ಎಸೆಯಲ್ಪಟ್ಟು,, ತಲೆಗೆ ಗಂಭೀರವಾದ ಗಾಯವುಂಟಾಗಿದೆ. ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ನಗರದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯಂದು ಉಗ್ರರ ಕರಿನೆರಳಿನ ಮುನ್ಸೂಚನೆ ತಿಳಿದು ಬಂದಿದೆ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಬೆಂಗಳೂರು ನಗರ ಪೊಲೀಸರು ಹೈ ಎಲರ್ಟ್ ಆಗಿದ್ದು, ಹೋಟೆಲ್ ಗಳಲ್ಲಿ ಉಳಿದುಕೊಳ್ಳುವ ಪ್ರವಾಸಿಗರ ಬಗ್ಗೆ ಮಾಹಿತಿ ನೀಡುವಂತೆಯೂ ಸೂಚಿಸಲಾಗಿದೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಅದರಲ್ಲಿ ದಿನಾಂಕ 15-08-2024ರಂ ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಕವಾಯತು ಮತ್ತು ಸಮಾರಂಭಗಳು ನಡೆಯಲಿದೆ ಎಂದಿದ್ದಾರೆ. ಉಗ್ರಗಾಮಿಗಳು ಬೆಂಗಳೂರು ನಗರವನ್ನು ಗುರಿಯಾಗಿಟ್ಟುಕೊಂಡಿರುವ ಹಿನ್ನಲೆಯಲ್ಲಿ ತಾವು ಸಂಘದಲ್ಲಿ ಸದಸ್ಯರಾಗಿರುವ ಹೋಟೆಲ್ ಗಳ ಮಾಲೀಕರಿಗೆ, ಹೋಟೆಲ್ ಗಳ ಮ್ಯಾನೇಜರ್ ಹಾಗೂ ಇತರೆ ನೌಕರರಿಗೆ ಹೋಟೆಲ್ ಗಳಲ್ಲಿ ತಂಗುವ ವಿದೇಶಿಯರು ಮತ್ತು ಸಂಶಯಾಸ್ಪದ ಹಾಗೂ ಅಪರಿಚಿತ ವ್ಯಕ್ತಿಗಳು ಹೋಟೆಲ್ ಗಳಲ್ಲಿ ತಂಗಿದಲ್ಲಿ ಅವರ ಬಗ್ಗೆ ನಿಗಾವಹಿಸಿ, ವಿಶೇಷವೇನಾದರೂ ಕಂಡು ಬಂದಲ್ಲಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಈ ಭದ್ರತಾ ಕಾರ್ಯದಲ್ಲಿ ಪೊಲೀಸರಿಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಬೇಕೆಂದು…
ಕಾಸರಗೋಡು ಜಿಲ್ಲಾ ನ್ಯಾಯಾಲಯ ಸಮುಚ್ಚಯದ ಬೀಗ ಮುರಿದು ಕಳವಿಗೆ ಯತ್ನಿಸಿದ ಆರೋಪಿಯನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ. ಕೋಜಿಕ್ಕೋ ಡ್ ತೋಟಿಲ್ ಪಾಳ ದ ಸನಿಶ್ ಜೋರ್ಜ್ (44) ಬಂಧಿತ ಆರೋಪಿ. ಆಗಸ್ಟ್ ನಾಲ್ಕರಂದು ಮುಂಜಾನೆ ಕೃತ್ಯ ನಡೆದಿತ್ತು. ನ್ಯಾಯಾಲಯದ ಬೀಗ ಮುರಿದು ಒಳನುಗ್ಗಿದ ಈತ ಕಳವಿಗೆತ್ನಿಸಿದ್ದು , ಶಬ್ದ ಕೇಳಿ ಬೊಬ್ಬೆ ಹಾಕಿದಾಗ ಈತ ಪರಾರಿಯಾಗಿದ್ದನು.ಅದೇ ದಿನ ರಾತ್ರಿ ನಾಯಮ್ಮರಮೂಲೆ ಶಾಲೆಯ ಬೀಗ ಮುರಿದು ಒಳನುಗ್ಗಿದ ಈತ ೫೦೦ ರೂ . ನಗದನ್ನು ಕಳವುಗೈದಿದ್ದನು.. ರಾಜ್ಯದ ವಿವಿಧೆಡೆಗಳಲ್ಲಾಗಿ ಹದಿನೈದಕ್ಕೂ ಅಧಿಕ ಸ್ಥಳಗಳಲ್ಲಿ ಕಳವು ನಡೆಸಿದ್ದಾಗಿ ತನಿಖೆಯಿಂದ ತಿಳಿದು ಬಂದಿದೆ. ಹೊಸದುರ್ಗ , ನೀಲೇಶ್ವರ , ಚೋಮಲಾ , ಪಯಂಗಡಿ , ಕೊಯಿಲಾಂಡಿ , ಪಾಲಕ್ಕಾಡ್ ಕಸಬಾ , ಧರ್ಮಡ, ವೆಳ್ಳ೦ಮುಂಡ, ಸುಲ್ತಾನ್ ಬತ್ತೇರಿ , ನಾದಪುರಂ ಮೊದಲಾದ ಠಾಣೆ ಗಳಲ್ಲಿ ಈತನ ವಿರುದ್ಧ ಪ್ರಕರಣಗಳಿವೆ. ಇವುಗಳಲ್ಲಿ ಅಂಚೆ ಕಚೇರಿ , ನ್ಯಾಯಾಲಯದಲ್ಲಿನ ಕಳವು ಒಳಗೊಂಡಿದೆ. ಪೊಲೀಸರು ಸಿ ಸಿ ಟಿ ವಿ…