Author: main-admin

ಬೆಂಗಳೂರು : ಕೊನೆಗೂ ಕಾಂಗ್ರೇಸ್ ಗೆ ಸ್ಪೀಕರ್ ಹುದ್ದೆಗೆ ಅಭ್ಯರ್ಥಿಯನ್ನು ಆರಿಸುವಲ್ಲಿ ಯಶಸ್ವಿಯಾಗಿದ್ದು, ಮಾಜಿ ಸಚಿವ ಯು.ಟಿ ಖಾದರ್ ಅವರು ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲಿದ್ದು, ಇಂದು ಅಧಿಕೃತವಾಗಿ ಖಾದರ್ ನಾಮಪತ್ರ ಸಲ್ಲಿಸಿದ್ದಾರೆ. ವಿಧಾನಸಭೆ ಕಾರ್ಯದರ್ಶಿ ಕಚೇರಿಯಲ್ಲಿ ಸ್ಪೀಕರ್ ಸ್ಥಾನಕ್ಕೆ ಶಾಸಕ ಯು.ಟಿ.ಖಾದರ್ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಕೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಜಮೀರ್ ಅಹ್ಮದ್, ಶಾಸಕ ಅಜಯ್ ಸಿಂಗ್ ಉಪಸ್ಥಿತರಿದ್ದರು. ನಿನ್ನೆ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾಜಿ ಸಚಿವ ಆರ್. ವಿ ದೇಶಪಾಂಡೆ ಅವರನ್ನು ಹಂಗಾಮಿ ಸಭಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು. ಹಂಗಾಮಿ ಸ್ಪೀಕರ್ ವಿಶ್ರಾಂತಿ ಹೋದ ಸಂದರ್ಭದಲ್ಲಿ ಪೀಠದಲ್ಲಿ ಸೋಮವಾರ ಕೆಲ ಹೊತ್ತು ಯು.ಟಿ ಖಾದರ್ ಅವರು ಕುಳಿತುಕೊಂಡಿದ್ದರು. ಇದೀಗ ಯು.ಟಿ ಖಾದರ್ ಅವರನ್ನು ಸ್ಪೀಕರ್ ಆಗಿ ನೇಮಕ ಮಾಡಲು ನಿರ್ಧಾರ ಮಾಡಲಾಗಿದೆ.ಯು.ಟಿ‌ ಖಾದರ್ ಅವರು ಮಂಗಳೂರು ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದು, ಮಾಜಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

Read More

ಉಳ್ಳಾಲ: ಉಳ್ಳಾಲ ಠಾಣೆಯಲ್ಲಿ ಸ್ಪೆಷಲ್ ಬ್ರಾಂಚ್ ಕಾನ್ಸ್ ಟೇಬಲ್ ಆಗಿದ್ದ ವಾಸುದೇವ ಚೌಹಾಣ್ ಅವರನ್ನು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಅಮಾನತು ಮಾಡಿದ್ದಾರೆ. ಇತ್ತೀಚೆಗೆ ತಲಪಾಡಿ ಗಡಿಭಾಗದಲ್ಲಿ ಜೂಜಾಟ ನಡೆಸುತ್ತಿದ್ದ ತಂಡವನ್ನು ಎಸಿಪಿ ನೇತೃತ್ವದ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಆದರೆ ಈ ಬಗ್ಗೆ ಉಳ್ಳಾಲ ಎಸ್ ಬಿ ಆಗಿದ್ದ ವಾಸುದೇವ್ ಗೆ ಮಾಹಿತಿಗಳಿದ್ದವು. ಅಲ್ಲದೆ, ಆರೋಪಿಗಳ ಜೊತೆ ವಾಸುದೇವ ಶಾಮೀಲಾಗಿದ್ದ ಎನ್ನುವ ಆರೋಪಗಳಿದ್ದವು ಈ ಬಗ್ಗೆ ಖಚಿತ ಮಾಹಿತಿಗಳನ್ನು ಹೊಂದಿದ್ದ ಎಸಿಪಿ ಧನ್ಯಾ ನಾಯಕ್ ತಲಪಾಡಿ ಗಡಿಭಾಗದ ತಚ್ಚಣಿ ಎಂಬಲ್ಲಿಗೆ ದಾಳಿ ನಡೆಸಿದ್ದರು. ದಾಳಿ ವೇಳೆ, ಪ್ರಮುಖ ಆರೋಪಿಯಾಗಿದ್ದ ತಲಪಾಡಿ ಗ್ರಾಪಂ ಸದಸ್ಯ ಪರಾರಿಯಾಗಿದ್ದ. ಪ್ರಕರಣ ಸಂಬಂಧಿಸಿ ಉಳ್ಳಾಲ ಪೊಲೀಸರು ಬಳಿಕ ಆರೋಪಿಗಳನ್ನು ಬಂಧಿಸಿದ್ದರು. ಆದರೆ ಈ ವೇಳೆ, ಕಾನ್ಸ್ ಟೇಬಲ್ ವಾಸುದೇವ ಆರೋಪಿಗಳಿಗೆ ಮಾಹಿತಿ ನೀಡಿದ್ದ. ಮತ್ತು ಅವರೊಂದಿಗೆ ಕೃತ್ಯದಲ್ಲಿ ಶಾಮೀಲಾಗಿದ್ದ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಎಸಿಪಿ ನೇರವಾಗಿ ಪೊಲೀಸ್ ಕಮಿಷನರಿಗೆ ವರದಿ ಕೊಟ್ಟಿದ್ದರು. ಇಲಾಖಾ ತನಿಖೆ ಬಾಕಿಯಿರಿಸಿ…

Read More

ಬೆಳ್ತಂಗಡಿ,: ಶಾಲಾ ವಾಹನ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ಗುರುವಾಯನಕೆರೆ ಎಂಬಲ್ಲಿ ಸೋಮವಾರ ನಡೆದಿದೆ. ಮೃತರನ್ನು ಕಸಬಾ ನೆಡಿಗುತ್ತು ನಿವಾಸಿ ಯೋಗೀಶ್ ಪೂಜಾರಿ (40) ಎಂದು ಗುರುತಿಸಲಾಗಿದೆ. ಶಾಲಾ ಬಸ್ ಬೆಳ್ತಂಗಡಿಯಿಂದ ಮದಡ್ಕ ಕಡೆಗೆ ಹೋಗುತ್ತಿತ್ತು. ಈ ವೇಳೆ ಬಸ್ ಯೋಗೀಶ್ ಪೂಜಾರಿ ಅವರಿಗೆ ಡಿಕ್ಕಿ ಹೊಡೆದು ಅವರ ಕಾಲಿನ ಮೇಲೆ ಹರಿದಿದೆ. ಗಂಭೀರವಾಗಿ ಗಾಯಗೊಂಡ ಪೂಜಾರಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಇನ್ನು ನಿರ್ಲಕ್ಷ್ಯದ ಚಾಲನೆಗಾಗಿ ಚಾಲಕ ಶಶಿಧರ್ ವಿರುದ್ಧ ಪ್ರಕರಣ ದಾಖಲಾಗಿದೆ.

Read More

ಸುಳ್ಯ ಸಮೀಪದ ಕಲ್ಚರ್ಪೆ – ಪಾಲಡ್ಕ ಬಳಿ ಬೈಕ್ ಅಪಘಾತ ಸಂಭವಿಸಿ ಬೈಕ್ ಸವಾರ ಕೆ.ವಿ.ಜಿ. ಆಯುರ್ವೇದ ಕಾಲೇಜಿನ ವಿದ್ಯಾರ್ಥಿ ಸ್ಥಳದಲ್ಲೆ ಮೃತಪಟ್ಟು ಸಹ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಸುಳ್ಯ ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ, ಸಂಭ್ರಮ್ ಮತ್ತು ಸ್ವರೂಪ್ ಸುಳ್ಯ ಕಡೆಯಿಂದ ಸಂಪಾಜೆ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಪೆರಾಜೆ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಪಿಕಪ್ ವಾಹನವೊಂದು ಇವರ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ನಿಯಂತ್ರಣ ತಪ್ಪಿದ ಬೈಕ್ ಕಾರೊಂದಕ್ಕೆ ಗುದ್ದಿದ ಪರಿಣಾಮವಾಗಿ ಕೆವಿಜಿ ಆಯುರ್ವೇದ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿ ಚಿಕ್ಕಬಳ್ಳಾಪುರ ಮೂಲದ ಸ್ವರೂಪ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಸವಾರ ಸಂಭ್ರಮ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು ಸುಳ್ಯ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

Read More

ಮಂಗಳೂರು: ನಗರದ ಖಾಸಗಿ ನರ್ಸಿಂಗ್ ಕಾಲೇಜಿನ ಹಾಸ್ಟೇಲ್ ನಲ್ಲಿ ಫುಡ್ ಪಾಯ್ಸನ್ ಆಗಿ 30ಕ್ಕೂ ಅಧಿಕ ವಿಧ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ನಡೆದಿದ್ದು, ಕೂಡಲೇ ಅವರನ್ನು ಫಳ್ನೀರಿನ ಅಥೆನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನವರು ಕೇರಳದ ವಿದ್ಯಾರ್ಥಿನಿಯರಾಗಿದ್ದು, ಹಾಸ್ಟೆಲಿನಲ್ಲಿ ನೀರಿನ ಸಮಸ್ಯೆಯಿಂದಾಗಿ ಆಹಾರದಲ್ಲಿ ತೊಂದರೆ ಆಗಿದೆ ಎನ್ನಲಾಗುತ್ತಿದೆ. ಎರಡು ತಿಂಗಳಲ್ಲಿ ಇದು ಎರಡನೇ ಬಾರಿಗೆ ಈ ರೀತಿ ಆಗಿದೆ ಎನ್ನುವ ಮಾಹಿತಿ ವಿದ್ಯಾರ್ಥಿನಿಯರ ಹೆತ್ತವರ ಕಡೆಯಿಂದ ಬಂದಿದೆ. ಕೆಲವು ವಿದ್ಯಾರ್ಥಿನಿಯರಿಗೆ ವಾಂತಿ ಮತ್ತು ಭೇದಿ ಉಂಟಾಗಿದ್ದು, ಹೊಟ್ಟೆ ನೋವಿನಿಂದ ಬಳಲಿದ್ದಾರೆ. ರಾತ್ರಿ ವೇಳೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಬೆಳಗ್ಗಿನ ಹೊತ್ತಿಗೆ ಮರಳಿ ಹಾಸ್ಟೆಲ್ ಗೆ ರವಾನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Read More

ಮಂಗಳೂರು: ನಗರದ ಖಾಸಗಿ ನರ್ಸಿಂಗ್ ಕಾಲೇಜಿನ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹಾಸ್ಟೆಲಿನಲ್ಲಿ ಆಹಾರದಲ್ಲಿ ತೊಂದರೆ ಉಂಟಾಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.  ಹಾಸ್ಟೆಲಿನಲ್ಲಿ ನೀರಿನ ಸಮಸ್ಯೆಯಿಂದಾಗಿ ಆಹಾರದಲ್ಲಿ ತೊಂದರೆ ಆಗಿದೆ ಎನ್ನಲಾಗುತ್ತಿದ್ದು, ಎರಡು ತಿಂಗಳಲ್ಲಿ ಇದು ಎರಡನೇ ಬಾರಿಗೆ ಈ ರೀತಿ ಆಗಿದೆ ಎಂದು ವಿದ್ಯಾರ್ಥಿನಿಯರ ಹೆತ್ತವರು ತಿಳಿಸಿದ್ದಾರೆ.ಇನ್ನು ಕೆಲವು ವಿದ್ಯಾರ್ಥಿನಿಯರಿಗೆ ವಾಂತಿ ಮತ್ತು ಭೇದಿ ಉಂಟಾಗಿದ್ದು, ಹೊಟ್ಟೆ ನೋವಿನಿಂದ ಬಳಲಿದ್ದಾರೆ. ರಾತ್ರಿ ವೇಳೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು, ಬೆಳಗ್ಗಿನ ಹೊತ್ತಿಗೆ ಮರಳಿ ಹಾಸ್ಟೆಲ್ ಗೆ ರವಾನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಯಾವ ಕಾರಣಕ್ಕೆ ಸಮಸ್ಯೆ ಆಗಿದೆ ಎನ್ನುವುದು ತಿಳಿದುಬಂದಿಲ್ಲ. ಪರಿಶೀಲನೆ ಮಾಡುತ್ತ ಇದ್ದೇವೆ. ನಾವು ಜಿಲ್ಲಾ ಘಟಕದಿಂದ ಎಲ್ಲ ಹಾಸ್ಟೆಲ್ ಗಳಿಗೂ ರುಟೀನ್ ಭೇಟಿ ಕೊಡುತ್ತೇವೆ. ತಪಾಸಣೆ ನಡೆಸುತ್ತೇವೆ ಎಂದು ತಿಳಿಸಿರುವುದಾಗಿ ವಿದ್ಯಾರ್ಥಿನಿಯರ ಹೆತ್ತವರು ಹೇಲಿದ್ದಾರೆ.

Read More

ಬಂಟ್ವಾಳ: ಹಳೆಯ ವಿಚಾರವಾಗಿ ಮಾತನಾಡಲು ಕರೆದು ಪರಿಚಿತ ವ್ಯಕ್ತಿ ತಲ್ವಾರ್‌ನಿಂದ ದಾಳಿ ಮಾಡಿದ ಪರಿಣಾಮ ಯುವಕನ ಕೈ ತುಂಡಾಗಿರುವ ಘಟನೆ ಬಂಟ್ವಾಳ ಎಂಬಲ್ಲಿ ನಡೆದಿದೆ. ಶನಿವಾರ ತಡೆರಾತ್ರಿ ನಡೆದಿರುವ ಈ ಘಟನೆಯಲ್ಲಿ ಬಂಟ್ವಾಳದ ಶಿವರಾಜ್ ಎಂಬಾತ ಕೈ ಕಳೆದುಕೊಂಡಿರುವ ಯುವಕನಾಗಿದ್ದು, ಸಂತೋಷನ್ ಎಂಬ ವ್ಯಕ್ತಿ ಕೃತ್ಯವೆಸಗಿರುವ ಆರೋಪ ಕೇಳಿಬಂದಿದೆ. ಪರಿಚಿತನಿಂದ ಬಂಟ್ವಾಳದ ಶಿವರಾಜ್ ಎಂಬಾತನಿಗೆ ನಿನ್ನೆ ರಾತ್ರಿ ಕರೆಯೊಂದು ಬಂದಿದೆ. ನಿನ್ನಲ್ಲಿ ಮಾತನಾಡಲಿಕ್ಕಿದೆ, ಬರ್ತಿಯಾ ಎಂದು ಕೇಳಿದ್ದಾನೆ . ಈಗ ಏನು ಮಾತಾಡ್ಲಿಕ್ಕುಂಟು, ನಾಳೆ ಬರ್ತೇನೆ ಎಂದು ಶಿವರಾಜ್ ಹೇಳಿದ್ದಾನೆ. ಆದರೂ ಬಿಡದ ಪರಿಚಿತ ಸಂತೋಷ್, ಬಂಟ್ವಾಳದ ಅರ್ಬಿಗುಡ್ಡೆ ಬಳಿಯ ಅಂಗಡಿ ಬಳಿ ಬಾ ಎಂದಿದ್ದಾನೆ. ಮನಸ್ಸಿಲ್ಲದ ಮನಸ್ಸಿನಿಂದ ಅಲ್ಲಿಗೆ ಹೋದ ಶಿವರಾಜ್ ಬಳಿ ಯಾವುದೋ ಹಳೇ ವಿಚಾರದ ಕುರಿತು ಪ್ರಸ್ತಾಪಿಸಿದ್ದ ಸಂತೋಷ್‌ಗೆ ಈಗ್ಯಾಕೆ ಅದೆಲ್ಲಾ ಎಂದು ಶಿವರಾಜ್ ಪ್ರಶ್ನಿಸಿದ್ದಾರೆ. ಹೀಗೆ ಮಾತನಾಡುತ್ತಿರಬೇಕಾದರೆ ಕೂಡಲೇ ಸಣ್ಣ ತಲವಾರಿನಿಂದ ಸಂತೋಷ್ ದಾಳಿ ಮಾಡಿದ್ದಾನೆ. ಕೈ ಅಡ್ಡ ಹಿಡಿದ ಕಾರಣ ಶಿವರಾಜ್ ಕೈ ಕಟ್…

Read More

ಕಾರ್ಕಳ: ತೀರ್ಥಯಾತ್ರೆಗೆ ಮುಗಿಸಿ ಊರಿಗೆ ಹಿಂತಿರುಗುತ್ತಿದ್ದ ಪ್ರಯಾಣಿಕರು ಚಲಿಸುತ್ತಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ‌ಹೊಡೆದಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅಂಡಾರು ಎಂಬಲ್ಲಿ ನಡೆದಿದೆ. ಧರ್ಮಸ್ಥಳದಿಂದ ಕಾರವಾರದ ಕಡೆಗೆ ಹೋಗುತ್ತಿದ್ದಾಗ ಬೊಲೋರೋ ಜೀಪು ನಸುಕಿನ ಜಾವ 4 ಗಂಟೆಯ ವೇಳೆಗೆ ಅಂಡಾರಿನಲ್ಲಿ ಮರವೊಂದಕ್ಕೆ‌ ಡಿಕ್ಕಿ ಹೊಡೆದಿದ್ದು, ಅದರಲ್ಲಿ ಇದ್ದ ಆರು ಮಂದಿ ಪ್ರಯಾಣಿಕರು ಗಾಯಗೊಂಡಿದ್ದರು. ಘಟನೆ ಕುರಿತು ಮಾಹಿತಿ ಪಡೆದಿದ್ದ 108 ಆಂಬುಲೆನ್ಸ್ ನ ಸಿಬ್ಬಂದಿಯರು ಗಾಯಾಳುಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರವಿವಾರ ಸುರಿದ ಮಳೆಯಿಂದಾಗಿ ವಾಹನ ನಿಯಂತ್ರಣಕ್ಕೆ ಸಿಗದೇ ಅಪಘಾತಕ್ಕೀಡಾಗಿದೆ ಎಂದು ತಿಳಿದುಬಂದಿದೆ. ಘಟನೆ ಕುರಿತು ಮಾಹಿತಿ ಪಡೆದಿದ್ದ 108 ಆಂಬುಲೆನ್ಸ್ ನ ಸಿಬ್ಬಂದಿ ಪೈಲೆಟ್ ನಾಗರಾಜ್ ಅವರು ಗಾಯಾಳುಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

Read More

ಮಂಗಳೂರು:ದೇಶವನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರು ವಿಮಾನ ದುರಂತಕ್ಕೆ ಇಂದಿಗೆ 13 ವರ್ಷ. 2010ರ ಮೇ22ರ ಬೆಳಗ್ಗೆ 6.20ಕ್ಕೆ ದುಬಾೖಯಿಂದ ಬಂದ ಏರ್‌ ಇಂಡಿಯಾ ವಿಮಾನ ಲ್ಯಾಂಡಿಂಗ್‌ ವೇಳೆ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿ 158 ಮಂದಿ ಮೃತಪಟ್ಟಿದ್ದರು. ದುರಂತದಲ್ಲಿ ಮಡಿದವರ ಹಲವರ ಕುಟುಂಬಕ್ಕೆ ಈಗಲೂ ಪರಿಹಾರ ಧನ ಸಿಗಲಿಲ್ಲ ಎಂಬುದು ಅಷ್ಟೇ ಬೇಸರದ ಸಂಗತಿ.8 ಮಂದಿ ಪವಾಡಸದೃಶವಾಗಿ ಬದುಕುಳಿದಿದ್ದರು. ದುರಂತದಲ್ಲಿ ಮೃತಪಟ್ಟವರಲ್ಲಿ ಹಲವರ ಮೃತದೇಹದ ಗುರುತು ಪತ್ತೆಯಾಗದೆ ಉಳಿದಿದ್ದು, ಅವುಗಳನ್ನು ಕೂಳೂರಿನ ಫಲ್ಗುಣಿ ನದಿ ಕಿನಾರೆಯಲ್ಲಿ ದಫನ ಮಾಡಲಾಗಿತ್ತು. ಅದೇ ಜಾಗದಲ್ಲಿ ಸಂತ್ರಸ್ತರ ಸ್ಮರಣಾರ್ಥ ನಿರ್ಮಿಸಿದ ಪಾರ್ಕ್‌ನಲ್ಲಿ ಜಿಲ್ಲಾಡಳಿತದಿಂದ ಇಂದು ಬೆಳಗ್ಗೆ 9ಕ್ಕೆ ಮಡಿದವರ ಆತ್ಮಕ್ಕೆ ಚಿರಶಾಂತಿ ಕೋರಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ

Read More

ಬೆಂಗಳೂರು: ಭರ್ಜರಿ ಗೆಲುವಿನೊಂದಿಗೆ ಅಧಿಕಾರ ಹಿಡಿದಿರುವ ಕಾಂಗ್ರೆಸ್​​​​​​​​ ಸರ್ಕಾರದ ಮೊದಲ ಅಧಿವೇಶನ ಇಂದಿನಿಂದ 3 ದಿನಗಳ ಕಾಲ ನಡೆಯಲಿದೆ. ಮೊದಲ ಎರಡು ದಿನ ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದೇ 24ರಂದು ಖಾಯಂ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಮುಂದಿನ 5 ವರ್ಷಗಳವರೆಗೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಸರ್ಕಾರದ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಮೊದಲ 2 ದಿನಗಳ ಕಾಲ ಶಾಸಕರ ಪ್ರಮಾಣ ಸ್ವೀಕಾರ ನಡೆಯಲಿದ್ದು, 3ನೇ ದಿನ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಇಂದು ಬೆಳಗ್ಗೆ 10 ಗಂಟೆಗೆ ರಾಜಭವನದಲ್ಲಿ ಪ್ರಮಾಣ ಸ್ವೀಕಾರ ಕಾರ್ಯಕ್ರಮ ನಡೆಯಲಿದ್ದು, ಮೊದಲು ರಾಜ್ಯಪಾಲರು ಹಂಗಾಮಿ ಸಭಾಧ್ಯಕ್ಷರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಸದ್ಯ ಹಂಗಾಮಿ ಸ್ಪೀಕರ್ ಆಗಿ ಕಾಂಗ್ರೆಸ್​ ಹಿರಿಯ ಶಾಸಕ ಆರ್.ವಿ. ದೇಶಪಾಂಡೆಯವರನ್ನ ನೇಮಿಸಲಾಗಿದೆ. 3 ದಿನಗಳ ಸದನದ ಕಾರ್ಯಕಲಾಪಗಳನ್ನು ಆರ್​.ವಿ.ದೇಶಪಾಂಡೆ ನಡೆಸಲಿದ್ದಾರೆ. ಇನ್ನು ಇವತ್ತು ಮತ್ತು ನಾಳೆ ವಿಧಾನಸಭೆ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಎಲ್ಲಾ ಶಾಸಕರಿಗೆ ಹಂಗಾಮಿ ಸ್ಪೀಕರ್​ ಆರ್.ವಿ.…

Read More