ಶಿವಮೊಗ್ಗ:ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕಾನ್ಸ್ಟೇಬಲ್ಗಳನ್ನು ಅಮಾನತ್ತು ಮಾಡಿ ಶಿವಮೊಗ್ಗ ಗ್ರಾಮಾಂತರ ವೃತ್ತ ನಿರೀಕ್ಷಕ ಅಭಯ ಪ್ರಕಾಶ್ ಆದೇಶಿಸಿದ್ದಾರೆ. ಶಿವಮೊಗ್ಗ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ವರದಿ ಆಧರಿಸಿ ಕಾಶಿನಾಥ್, ರಂಗನಾಥ, ಶಿವರಾಜ್ ಅಮಾನತುಗೊಳಿಸಲಾಗಿದೆ. ಶಿವಮೊಗ್ಗದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 60 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ . ಮುಂಜಾಗ್ರತಾ ಕ್ರಮವಾಗಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.ವಾಹನಗಳನ್ನು ತಪಾಸಣೆ ಮಾಡಲಾಯಿತು. ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಹಬ್ಬ ಆಚರಣೆ ವೇಳೆ ದುಷ್ಕರ್ಮಿಗಳಿಂದ ಕಲ್ಲೆಸೆತ ಉಂಟಾಗಿದ್ದು ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಗುಗುಡ್ಡ ಪ್ರದೇಶದಲ್ಲಿ 144 ಸೆಕ್ಷನ್ ಜಾರಿ ಮಾಡಿ ಶಿವಮೊಗ್ಗ ಜಿಲ್ಲಾಧಿಕಾರಿ ಡಾ. ಸೆಲ್ವಮನಿ ಆದೇಶಿಸಿದ್ದರು. ಯಾರೋ ಕಿಡಿಗೇಡಿಗಳು ಮನೆಗಳು ಮತ್ತು ಪೊಲಿಸರ ಮೇಲೆ ಕಲ್ಲು ಎಸೆದಿದ್ದರು.ಇದರಿಂದ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಶಾಂತಿನಗರದಲ್ಲಿ ಲಘು ಲಾಠಿಚಾರ್ಜ್ ಮಾಡಿದ ವೇಳೆ ಕಿಡಿಗೇಡಿಗಳಿಂದ ಪೊಲೀಸರ ಮೇಲೆ ಕಲ್ಲು ತೂರಾಟ ಕೂಡ ನಡೆದಿದೆ.
Author: main-admin
ಸುಳ್ಯ: ಮನೆಯಲ್ಲಿ ಇನ್ವರ್ಟರ್ ಪ್ಲಗ್ ತೆಗೆಯುವ ವೇಳೆ ವಿದ್ಯುತ್ ಶಾಕ್ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಮ್ಮಾರಿನಿಂದ ವರದಿಯಾಗಿದೆ. ಬೊಮ್ಮಾರು ಬಾಬು ಕುಲಾಲ್ ಎಂಬವರ ಪತ್ನಿ ಲಲಿತಾ(55 ಪ್ರಾಯ) ಎಂಬವರೇ ಮೃತ ಪಟ್ಟ ಮಹಿಳೆಯಾಗಿದ್ದಾರೆ. ಲಲಿತಾರವರು ದಿನಂಪ್ರತಿ ಮಲಗುವ ಸಮಯದಲ್ಲಿ ಇನ್ವರ್ಟರ್ ಗೆ ವಿದ್ಯುತ್ ಸಂಪರ್ಕಿಸುವ ಪ್ಲಗ್ ಅನ್ನು ತೆಗೆದು ಮಲಗುತ್ತಿದ್ದರೆನ್ನಲಾಗಿದೆ. ನಿನ್ನೆ ರಾತ್ರಿಯೂ ಸುಮಾರು 10 ಗಂಟೆಯ ವೇಳೆಗೆ ಪ್ಲಗ್ ತೆಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತದರೂ ಅಷ್ಟಾಗಲೇ ಅವರು ಮೃತಪಟ್ಟರೆಂದು ತಿಳಿದು ಬಂದಿದೆ. ಮೃತರು ಪತಿ, ಇಬ್ಬರು ಪುತ್ರರಾದ ಗೌತಮ್, ಅಖಿಲ್ ಹಾಗೂ ಬಂಧುಗಳನ್ನು ಅಗಲಿದ್ದಾರೆ.
ಉಡುಪಿ: ಗಾಂಜಾ ನಶೆಯಲ್ಲಿದ್ದ ಯುವಕರು ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಉಡುಪಿ ನಗರದ ಸಿಟಿ ಸೆಂಟರ್ ಮಾಲ್ ಬಳಿ ನಡೆದಿದೆ.ನಶೆಯಲ್ಲಿದ್ದ ಯುವಕರು ಮತ್ತು ಆಟೋ ಚಾಲಕನ ನಡುವೆ ವಾಗ್ವಾದ ನಡೆದಿದ್ದು, ಕ್ಷುಲ್ಲಕ ಕಾರಣಕ್ಕೆ ಆಟೋ ಚಾಲಕನನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಉಡುಪಿ ನಗರ ಪೊಲೀಸರು ಭೇಟಿ ನೀಡಿದ್ದಾರೆ.
ಮಂಗಳೂರು: ನವರಾತ್ರಿ ಸಡಗರ ಹಾಗೂ ದಸರಾ ಸಂಭ್ರಮದ ಹಿನ್ನೆಲೆಯಲ್ಲಿ ಶಾಲೆಗಳಿಗೆ ದಸರಾ ರಜೆ ಈಗಾಗಲೇ ಘೋಷಣೆಯಾಗಿದೆ. ಆದರೆ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ವಿದ್ಯಾರ್ಥಿಗಳಿಗೆ ದಸರಾ ರಜೆ ಇನ್ನೂ ಅಂತಿಮವಾಗಿಲ್ಲ. ಶಾಸಕ ವೇದವ್ಯಾಸ ಕಾಮತ್ ಅವರು ಈ ಬಗ್ಗೆ ಸರಕಾರದ ಗಮನಸೆಳೆದಿದ್ದು, ‘ಮಂಗಳೂರು ದಸರಾ ಹಬ್ಬಕ್ಕೆ ಪೂರಕವಾಗುವಂತೆ ಪದವಿ ವಿದ್ಯಾರ್ಥಿಗಳಿಗೆ ರಜೆ ನೀಡುವಂತೆ ಸಂಬಂಧಪಟ್ಟವರನ್ನು ಆಗ್ರಹಿಸುವಂತೆ ಹಲವಾರು ಪೋಷಕರು ಈಗಾಗಲೇ ಮನವಿ ಮಾಡಿದ್ದಾರೆ. ಹೀಗಾಗಿ ಮಂಗಳೂರು ವಿ.ವಿ., ಜಿಲ್ಲಾಡಳಿತ ಹಾಗೂ ಸರಕಾರ ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ. ಹಿಂದಿನಬಿಜೆಪಿಸರಕಾರದ ಅವಧಿಯಲ್ಲಿದಸರಾ ಹಬ್ಬದ ರಜೆಯಲ್ಲಿ ಉಂಟಾಗಿದ್ದ ವ್ಯತ್ಯಾಸವನ್ನು ಸರಕಾರದ ಮಟ್ಟದಲ್ಲಿಯೇ ಮಾರ್ಪಾಡುಗೊಳಿಸುವಲ್ಲಿ ಯಶಸ್ವಿಯಾಗಿದ್ದೆ. ಆದರೆ ಪ್ರಸ್ತುತ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದು ಹಿಂದೂ ಧಾರ್ಮಿಕ ಶ್ರದ್ಧೆ, ಭಾವನೆಗಳಿಗೆ ಬೆಲೆ ನೀಡಬೇಕು. ದಸರಾ ನಾಡಿನ ಅತ್ಯಂತ ಪ್ರಮುಖ ಹಬ್ಬವಾಗಿದ್ದು ಮಂಗಳೂರು ದಸರಾವು ಮೈಸೂರಿನ ಅನಂತರ ಅತ್ಯಂತ ಜನಾಕರ್ಷಣೆ ಗಳಿಸಿದೆ. ಹೀಗಾಗಿ ನವರಾತ್ರಿಯನ್ನು ವಿದ್ಯಾರ್ಥಿಗಳು, ಶಿಕ್ಷಕರು, – – ಪೋಷಕರು, ಸೇರಿದಂತೆ ಎಲ್ಲರೂ…
ಮಂಗಳೂರು: ಜಮೀನಿನ ನಕಲಿ ದಾಖಲು ಪತ್ರಗಳನ್ನು ಸಲ್ಲಿಸಿ ಕೆಎಸ್‌ಎಫ್‌ಇಯ ಮಾಲಕಲ್ಲು ಶಾಖೆಯಿಂದ 70 ಲಕ್ಷ ರೂ. ಸಾಲ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಯೂತ್ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಹೊಸದುರ್ಗ ಚಿತ್ತಾರಿ ಪಿ.ವಿ. ರಸ್ತೆಯ ಕೆ.ವಿ.ಹೌಸ್ ನ ಎಂ. ಇಸ್ಮಾಯಿಲ್(37)ನನ್ನು ಗಡಿ ಭಾಗದ ಕಾಸಗೋಡು ಜಿಲ್ಲೆಯ ರಾಜಪುರಂ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇಸ್ಮಾಯಿಲ್ ಸಹಿತ 8 ಮಂದಿ ವಿರುದ್ಧ ರಾಜಪುರಂ ಪೊಲೀಸರು ಕೇಸು ದಾಖಲಿಸಿದ್ದಾರೆ. ಉಪ್ಪಳ ಗ್ರಾಮದ ಐದು ಎಕ್ರೆ ಜಮೀನಿನ ದಾಖಲು ಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿ ಅದಕ್ಕೆ ಗ್ರಾಮಾಧಿಕಾರಿಯ ಡಿಜಿಟಲ್ ಸಹಿಹಾಕಿ ನೀಡಿ ಕೆಎಸ್‌ಎಫ್‌ಇ ಚಿಟ್ ಫಂಡ್‌ನಿಂದ ಆರೋಪಿಗಳು 70 ಲಕ್ಷರೂ. ಸಾಲ ಪಡೆದು ವಂಚಿಸಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿತ್ತು. ಸಾಲವನ್ನು ಮರುಪಾವತಿಸದೆ ಇದ್ದಾಗ ಆರೋಪಿಗಳು ಸಲ್ಲಿಸಿದ ಭೂದಾಖಲು ಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದು ನಕಲಿ ಎಂಬುದು ತಿಳಿದು ಬಂದಿದೆ ಎಂದು ಕೆಎಸ್‌ಎಫ್‌ಇಯ ಶಾಖಾ ಮೆನೇಜರ್ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಪೊಲೀಸರು ಕೇಸು ದಾಖಲಿಸಿ ಆರೋಪಿಗಳನ್ನು…
ಮಂಗಳೂರು: ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಹೋಮ್ ನರ್ಸ್‌ಗೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್‌ಟಿ ಎಸ್‌ಸಿ-2 ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಶುಕ್ರವಾರ ತೀರ್ಪು ನೀಡಿದೆ. ಹಾವೇರಿ ಜಿಲ್ಲೆಯ ನೆಲೋಗಲ್ ಗ್ರಾಮ ಮೂಲದ ಬೆನಕರಾಜ್ ಲಮಾಣಿ (25) ಶಿಕ್ಷೆಗೊಳಗಾದ ಆರೋಪಿ. ಸುರತ್ಕಲ್ ಪರಿಸರವಾಸಿ ಸಂತ್ರಸ್ತ ಬಾಲಕಿಯ ಅಸೌಖ್ಯದಿಂದಿದ್ದ ಅಜ್ಜನನ್ನು ನೋಡಿಕೊಳ್ಳಲು ಹೋಮ್ ನರ್ಸ್ ಆಗಿದ್ದ ಆರೋಪಿಯನ್ನು ನೇಮಿಸಲಾಗಿತ್ತು. 2022ರ ಜನವರಿಯಲ್ಲಿ ಒಂದು ದಿನ ಬಾಲಕಿಯ ತಾಯಿ ಔಷಧ ತರಲೆಂದು ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆ ಆರೋಪಿ ಬಾಲಕಿ ಮೇಲೆ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್ ಎಸ್.ಎಚ್.ಭಜಂತ್ರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಶುಕ್ರವಾರ ತೀರ್ಪು ನೀಡಿದ್ದಾರೆ. ಆರೋಪಿ ಮೇಲಿನ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 376 ಮತ್ತು…
ಉಳ್ಳಾಲ: ಅಕ್ಟೋಬರ್ 6 ಗಣಿತ ಪರೀಕ್ಷೆಯಲ್ಲಿ ಕಳಪೆ ಫಲಿತಾಂಶ ಪಡೆದಿದ್ದ ಆರನೇ ತರಗತಿಯ ವಿದ್ಯಾರ್ಥಿನಿಯೋರ್ವಳು ಸಹಪಾಠಿಯೊಂದಿಗೆ ಸೇರಿ ಪೇಪರ್ ತಿದ್ದಿದ್ದ ಶಿಕ್ಷಕಿಯ ನೀರಿನ ಬಾಟಲಿಗೆ ಅವಧಿ ಮುಗಿದಿದ್ದ ಮಾತ್ರೆಗಳನ್ನ ಹಾಕಿ ಸೇಡು ತೀರಿಸಿದ್ದರ ಪರಿಣಾಮ ನೀರನ್ನ ಕುಡಿದಿದ್ದ ಇಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡ ಘಟನೆ ಉಳ್ಳಾಲ ತಾಲೂಕಿನ ಖಾಸಗಿ ಶಾಲೆಯೊಂದರಲ್ಲಿ ನಡೆದಿದ್ದು ಘಟನೆಗೆ ಕಾರಣರಾದ ವಿದ್ಯಾರ್ಥಿನಿಯರಿಬ್ಬರಿಗೆ ಟಿ.ಸಿ ನೀಡಲು ಶಾಲಾಡಳಿತ ಮಂಡಳಿ ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಶಾಲಾ ಯುನಿಟ್ ಟೆಸ್ಟ್‌ನ ಗಣಿತ ವಿಷಯದಲ್ಲಿ ಆರನೇ ತರಗತಿ ವಿದ್ಯಾರ್ಥಿನಿಗೆ ಕಡಿಮೆ ಅಂಕ ಬಂದಿತ್ತು. ಪೇಪರ್ ತಿದ್ದಿದ್ದ ಗಣಿತ ಶಿಕ್ಷಕಿ ಸರಿಯಿದ್ದ ಉತ್ತರಕ್ಕೆ ತಪ್ಪು ಹಾಕಿದ್ದಾರೆ ಅನ್ನುವ ಬಾವನೆ ವಿದ್ಯಾರ್ಥಿನಿಯಲ್ಲಿ ಹುಟ್ಟಿತ್ತು. ಶಿಕ್ಷಕಿಯ ವಿರುದ್ಧ ಸೇಡು ತೀರಿಸಲು ತನ್ನ ಸಹಪಾಠಿಯ ಸಹಾಯ ಪಡೆದುಕೊಂಡ ವಿದ್ಯಾರ್ಥಿನಿ ಸ್ಟಾಫ್ ರೂಮ್‌ನಲ್ಲಿ ಯಾರೂ ಇಲ್ಲದ ಸಂದರ್ಭ ಬಳಸಿಕೊಂಡು ತಾನು ತಂದಿದ್ದ ಅವಧಿ ಮೀರಿದ್ದ ಮಾತ್ರೆಗಳನ್ನ ಗಣಿತ ಶಿಕ್ಷಕಿ ಬಳಸುತ್ತಿದ್ದ ನೀರಿನ ಬಾಟಲಿಗೆ ಹಾಕಿದ್ದಾಳೆ. ಗಣಿತ ಶಿಕ್ಷಕಿಯು ಬಾಟಲಿ ನೀರನ್ನು ಕುಡಿದು ಅಸ್ವಸ್ಥಗೊಂಡಿದ್ದು,ಅದೇ…
ಬಂಟ್ವಾಳ: ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ 9 ವರ್ಷ ಹಿಂದಿನ ಆರೋಪಿಯನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರೆ. ಮಂಗಳೂರು ಮಂಜನಾಡಿ ಗ್ರಾಮದ ನಾಟೆಕಲ್ ನಿವಾಸಿ ಅಶ್ರಫ್ ಬಂಧಿತ ಆರೋಪಿ. 2015 ರಲ್ಲಿ ಗಾಂಜಾ ಮಾರಾಟ ಮಾಡಿದ್ದ ಆರೋಪದ ಮೇಲೆ ಬಂಧನವಾಗಿ , ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿ ಅಶ್ರಫ್ ಅ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಇದೀಗ ಖಚಿತ ಮಾಹಿತಿ ಪಡೆದ ಬಂಟ್ವಾಳ ಗ್ರಾಮಾಂತರ ಪೋಲಿಸ್ ಇನ್ಸ್ ಪೆಕ್ಟರ್ ಶಿವಕುಮಾರ್ ಅವರ ನೇತ್ರತ್ವದ ಎಸ್.ಐ.ಹರೀಶ್, ಮತ್ತು ಮೂರ್ತಿ ಎಂ.ಅರ್.ಅವರ ಮಾರ್ಗದರ್ಶನ ದಲ್ಲಿ ಸಿಬ್ಬಂದಿಗಳಾದ ಗಣೇಶ್ ಪ್ರಸಾದ್, ಯೋಗೇಶ್, ವಿಜಯಕುಮಾರ್ ಅವರು ದೇರಳಕಟ್ಟೆಯ ಕುತ್ತಾರು ಎಂಬಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.ಬಳಿಕ ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರೆ.
ಕುಂದಾಪುರ : ಕುಂದಾಪುರದಲ್ಲಿ ನಡೆದ ರಾಘವೇಂದ್ರ ಶೇರುಗಾರ್ ಆಲಿಯಾಸ್ ಬನ್ಸ್ ರಾಘು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಲಾಗಿದ್ದು, ಇಬ್ಬರಿಗೆ ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ. ಬಂಧಿತರನ್ನು ಶಿವಮೊಗ್ಗ ಮೂಲದ ಶಫಿವುಲ್ಲಾ (40) ಹಾಗೂ ಇಮ್ರಾನ್ (43) ಎಂದು ಗುರುತಿಸಲಾಗಿದೆ. ಆರೋಪಿಗಳು ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪದ ಡೆಲ್ಲಿ ಬಜಾರ್ ಬಳಿ ರವಿವಾರ ಸಂಜೆ ಚೂರಿ ಇರಿದು ಕುಂದಾಪುರದ ನಿವಾಸಿ ರಾಘವೇಂದ್ರ ಶೇರುಗಾರ್ (42) ಅಲಿಯಾಸ್ ಬನ್ಸ್ ರಾಘು ಎನ್ನುವರನ್ನು ಚೂರಿ ಇರಿದು ಕೊಲೆಗೆ ಯತ್ನಿಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಬನ್ಸ್ ರಘು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದರು. ರವಿವಾರ ಸಂಜೆ ಕೃತ್ಯ ನಡೆದ ತಕ್ಷಣವೇ ಪೊಲೀಸ್ ಇಲಾಖೆ ಆರೋಪಿ ಬಂಧನಕ್ಕೆ ಕಾರ್ಯಪ್ರವೃತ್ತರಾಗಿದ್ದು ತದನಂತರ ಉಡುಪಿ ಎಸ್ಪಿ ಡಾ. ಅರುಣ್ ಕೆ. ಅವರು ಮೂರು ವಿಶೇಷ ತನಿಖಾ ತಂಡ ರಚಿಸಿದ್ದರು. ಇದೀಗ ಆರೋಪಿಗಳನ್ನು ಬಂಧಿಸಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ…
ಉಡುಪಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದ ಕಳ್ಳನನ್ನು ರೈಲ್ವೆ ಪೊಲೀಸರು ದೂರು ದಾಖಲಾದ ನಾಲ್ಕೇ ತಾಸಿನೊಳಗೆ ಬಂಧಿಸಿದ್ದಾರೆ. ದಿಲ್ಲಿಯ ನಿವಾಸಿ ಸನ್ನಿ ಮಲ್ಹೋತ್ರಾ (30) ಬಂಧಿತ ಆರೋಪಿಯಾಗಿದ್ದಾನೆ. ಮಹಿಳೆಯ ಬ್ಯಾಗಿನಲ್ಲಿ ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳಿದ್ದವು. ಕಳ್ಳನ ಬಳಿ 6,75,000 ರೂ. ಮೌಲ್ಯದ 93.17 ಗ್ರಾಂ ತೂಕದ ನಾಲ್ಕು ಚಿನ್ನದ ಸರಗಳು, 3,700 ರೂ ನಗದು ಮತ್ತು ಎಟಿಎಂ ಕಾರ್ಡ್ ದೊರೆತಿದೆ. ನೇತ್ರಾವತಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕಲ್ಯಾಣಿ ಬಾಲಕೃಷ್ಣನ್ ಎಂಬ ಮಹಿಳೆ ಬುಧವಾರ S7 ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಬ್ಯಾಗ್ ತೋಕೂರು ನಿಲ್ದಾಣದ ಬಳಿ ಕಳ್ಳತನವಾಗಿತ್ತು. ಈ ಕುರಿತು ಅವರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಉಡುಪಿ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಕುಲಿತಿರುವುದು ಕಂಡು ಬಂದಿದೆ. ಅವನನ್ನು ಹಿಡಿದು ವಿಚಾರಣೆ ನಡೆಸಿದಾಗ ಆತನೇ ಕಳ್ಳ ಎಂದು ಖಾತರಿಯಾಗಿದ್ದು ಕದ್ದ ಚಿನ್ನಾಭರಣಗಳೂ ಅವನ ಬಳಿಯಿದ್ದವು. ಮಡಗಾಂವ್‌ಗೆ ಪ್ರಯಾಣಿಸಲು ಟಿಕೆಟ್ ತೆಗೆದಿದ್ದ ಆತ…










