ಕರ್ನಾಟಕ ರಾಜ್ಯದ ಗ್ರಾಮೀಣ ಭಾಗಗಳ ಜನತೆಗೆ ಹೆಚ್ಚಿನ ಅನುಕೂಲ ಒದಗಿಸುವ ನಿಟ್ಟಿನಲ್ಲಿ ನಾಡಕಚೇರಿಗಳಲ್ಲಿ, ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಲಭ್ಯವಿದ್ದ 44 ಸರ್ಕಾರಿ ಸೇವೆಗಳು ಇನ್ನು ಮುಂದೆ ಗ್ರಾಮ ಪಂಚಾಯಿತಿಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲೂ ಲಭ್ಯವಾಗಲಿದೆ. ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೇವೆಗಳ ಜೊತೆಯಲ್ಲಿ ಇನ್ನು ಮುಂದೆ ಸಾರ್ವಜನಿಕರು ಕಂದಾಯ, ಕಾರ್ಮಿಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಇಂಧನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗಳ ಸೇವೆಗಳ ಜೊತೆಗೆ ಆದಾಯ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ ಹಾಗೂ ಆಧಾರ್ ಸೇವೆಗಳ ಸೌಲಭ್ಯವನ್ನು ಬಾಪೂಜಿ ಸೇವಾ ಕೇಂದ್ರಗಳಲ್ಲಿ ರಾಜ್ಯದ ಜನ ಪಡೆಯಬಹುದಾಗಿದೆʼ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ. ʼಬಹುತೇಕ ಸರ್ಕಾರಿ ಸೇವೆಗಳು ಒಂದೇ ಸೂರಿನಡಿ ಲಭ್ಯವಾಗುವುದರಿಂದ ಬೇರೆ ಬೇರೆ ಇಲಾಖೆಗಳ ಸರ್ಕಾರಿ ಕಚೇರಿಗಳಿಗೆ ಹೋಗುವ ಅವಶ್ಯಕತೆ ಕಡಿಮೆಯಾಗಲಿದೆ. ಜನಪರವಾಗಿ ಜನರಿಗೆ ಸುಲಲಿತವಾಗಿ ಸೇವೆಗಳನ್ನು ಒದಗಿಸಲು ನಮ್ಮ ಪ್ರಾಮಾಣಿಕ ಪ್ರಯತ್ನ…
Author: main-admin
ಬೆಳ್ತಂಗಡಿ: ಬೆಳ್ತಂಗಡಿಯ ನೆರಿಯ ಗ್ರಾಮ ಪಂಚಾಯತ್ ನ ದ್ವಿತೀಯ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ಆದೇಶವನ್ನು ಉಲ್ಲಂಘಿಸಿದ ಹಿನ್ನಲೆಯಲ್ಲಿ ನೆರಿಯ ಗ್ರಾಮ ಪಂಚಾಯತ್ ಮೂವರು ಸದಸ್ಯರನ್ನ ಅಮಾನತು ಮಾಡಲಾಗಿದೆ. ಬಿಜೆಪಿ ಪಕ್ಷದ ಜವಾಬ್ದಾರಿಯನ್ನು ಹೊಂದಿರುವ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ವಸಂತಿ ಕಡ್ಡಿಬಾಗಿಲು ಮನೆ( ನೆರಿಯ ಗ್ರಾಮ ಪಂಚಾಯತ್ ಹಾಲಿ ಅಧ್ಯಕ್ಷೆ), ನೆರಿಯ ಗ್ರಾಮದ ಬೂತ್ ಸಮಿತಿ ಅಧ್ಯಕ್ಷರಾದ ಕುಶಾಲ ಕಡ್ಡಿಬಾಗಿಲು ಮನೆ( ಹಾಲಿ ನೆರಿಯ ಗ್ರಾಮ ಪಂಚಾಯತ್ ಸದಸ್ಯೆ), ನೆರಿಯ ಗ್ರಾಮ ಬೂತ್ ಸಮಿತಿ ಅಧ್ಯಕ್ಷರಾದ ಸಚಿನ್ ಅಣಿಯೂರು ಕುಲೆನಾಡಿ ಮನೆ(ಹಾಲಿ ನೆರಿಯ ಗ್ರಾಮ ಪಂಚಾಯತ್ ಸದಸ್ಯ) ಇವರನ್ನು ತಕ್ಷಣದಿಂದ ಅನ್ವಯವಾಗುವಂತೆ ಭಾರತೀಯ ಜನತಾ ಪಾರ್ಟಿಯ ಎಲ್ಲಾ ಹುದ್ದೆ ಹಾಗೂ ಜವಾಬ್ದಾರಿಗಳಿಂದ ಮುಕ್ತಗೊಳಿಸಿರುವುದಾಗಿ ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಪ್ರಕಟಣೆಯಲ್ಲಿ ತಿಳಿಸಿದೆ.
ವಿಟ್ಲ: ಮಾರ್ಬಲ್ ತುಂಬಿಕೊಂಡು ಬಂದ ಲಾರಿ ಪಲ್ಟಿಯಾಗಿ ನಾಲ್ಕು ಜನ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಒಡಿಯೂರು ಸಮೀಪ ನಡೆದಿದೆ. ಲಾರಿ ಪಲ್ಟಿಯಾಗಿ ಕಾರ್ಮಿಕರ ಕೈ-ಕಾಲು ಗಂಭೀರ ಗಾಯಗೊಂಡ ಗಾಯಾಳುಗಳನ್ನು ನಾಲ್ಕು ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಾಯಾಳುಗಳನ್ನು ಉತ್ತರ ಭಾರತದ ಮೂಲದವರು ಎಂದು ಗುರುತಿಸಲಾಗಿದ್ದು, ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲಿನೆ ನಡೆಸುತ್ತಿದ್ದಾರೆ. ಮಾರ್ಬಲ್ ಅನ್ ಲೋಡ್ ಗಾಗಿ ಲಾರಿಯನ್ನು ರಿವರ್ಸ್ ತೆಗೆಯುವ ವೇಳೆ ಬ್ರೇಕ್ ಫೈಲ್ ಆಗಿ ಲಾರಿ ಪಲ್ಟಿಯಾಗಿ ನೀರಿನ ತೊಟ್ಟಿಗೆ ಬಿದ್ದು ಲಾರಿಯಲ್ಲಿದ್ದ ಉತ್ತರ ಭಾರತದ ಮೂಲದ ಕಾರ್ಮಿಕರಿಗೆ ಗಂಭೀರ ಗಾಯವಾಗಿದೆ
ಮಂಗಳೂರು: ಮನೆಯಲ್ಲಿದ್ದ ಇಬ್ಬರು ಹಿರಿಯ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕದ್ರಿ ಕಂಬಳದ ಚಂದ್ರಿಕಾ ಬಡಾವಣೆಯಲ್ಲಿ ನಿನ್ನೆ ಸಂಜೆ ನಡೆದಿದೆ. ಮೃತರನ್ನು ಸುಂದರಿ ಶೆಟ್ಟಿ (80), ಲತಾ ಭಂಡಾರಿ (70) ಎಂದು ಗುರುತಿಸಲಾಗಿದೆ. ಘಟನೆ ವಿವರ ಮೃತ ಲತಾ ಭಂಡಾರಿಯ ಪತಿ ಜಗನ್ನಾಥ್ ಭಂಡಾರಿ ಹಾಗೂ ಅಕ್ಕ ಸುಂದರಿ ಶೆಟ್ಟಿಯ ಜೊತೆ ವಾಸವಾಗಿದ್ದರು. ಎಂದಿನಂತೆ ನಿನ್ನೆಯೂ ಜಗನ್ನಾಥ್ ಭಂಡಾರಿ ಕೆಲಸದ ನಿಮಿತ್ತ ಹೊರ ಹೋಗಿದ್ದರು. ಸಂಜೆ ವೇಳೆ ಮನೆಗೆ ಬಂದಾಗ ಬಾಗಿಲು ಮುಚ್ಚಿಕೊಂಡಿತ್ತು. ಅನುಮಾನಗೊಂಡ ಅವರು ಕಿಟಕಿಯಿಂದ ನೋಡಿದಾಗ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇಬ್ಬರೂ ಒಂದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಅನುಮಾನ ಕಾಡುತ್ತಿದ್ದು, ಪ್ರಾಥಮಿಕ ಮೂಲಗಳ ಪ್ರಕಾರ ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ತೆರಿಗೆ ವಂಚನೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ 10ಕ್ಕೂ ಹೆಚ್ಚು ಉದ್ಯಮಿಗಳ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಉದ್ಯಮಿಗಳಿಗೆ ಶಾಕ್ ನೀಡಿದ್ದಾರೆ. ಉದ್ಯಮಿಗಳ ನಿವಾಸ ಹಾಗೂ ಸಂಸ್ಥೆಗಳು, ಮನೆ, ಕಛೇರಿ, ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಹತ್ತಕ್ಕೂ ಹೆಚ್ಚು ಉದ್ಯಮಿಗಳ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಮನೆ ಕಛೇರಿಯಲ್ಲಿರುವ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.
ಬಂಟ್ವಾಳ: ಕಾರು ಚಾಲಕನೋರ್ವನ ಅಜಾಗರೂಕತೆಯ ಚಾಲನೆಯಿಂದ ಬೈಕ್ ಸವಾರನೊರ್ವನಿಗೆ ಡಿಕ್ಕಿಯಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿಸಿರೋಡಿನ ಕೈಕಂಬ ತಲಪಾಡಿ ಎಂಬಲ್ಲಿ ಅ.2 ರಂದು ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ. ಬೈಕ್ ಸವಾರ ಶಿವಪ್ರಸಾದ್ ಗಾಯಗೊಂಡ ವ್ಯಕ್ತಿಯಾಗಿದ್ದಾರೆ. ಶಿವಪ್ರಸಾದ್ ಮತ್ತು ಸಹಸವಾರ ತಿಲಕ್ ಪ್ರಸಾದ್ ಅವರು ಬಿಸಿರೋಡು ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ವೇಳೆ ಹಿಂಬದಿಯಿಂದ ಬಿಸಿರೋಡು ಕಡೆಯಿಂದ ಬರುತ್ತಿದ್ದ ಕಾರು ಬಿಸಿರೋಡು ತಲಪಾಡಿ ಕೆಎಸ್.ಆರ್.ಟಿ.ಸಿ.ಡಿಪೋ ಎದುರುಗಡೆ ಡಿಕ್ಕಿ ಹೊಡೆದಿದೆ.ಕಾರಿನ ಚಾಲಕ ಜಾಕೀರ್ ಹುಸೈನ್ ಅವರು ಅಜಾಗರೂಕತೆಯಿಂದ ಬಲಬದಿ ಅಂದರೆ ಮತ್ತೆ ವಾಪಸು ಬಿಸಿರೋಡು ಕಡೆಗೆ ಹೋಗುವ ಉದ್ದೇಶದಿಂದ ತಲಪಾಡಿ ಡಿವೈಡರ್ ನಲ್ಲಿ ಬಲಬದಿಗೆ ತಿರುಗಿಸಿದಾಗ ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬೈಕ್ ರಸ್ತೆಗೆ ಪಲ್ಟಿಯಾಗಿದೆ, ಸವಾರ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದು, ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರು : ಮಂಗಳೂರು ನಗರ ಶಶಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಸೋಮನ ಗೌಡ ಚೌದರಿ (31) ಮೃತ ದುರ್ದೈವಿಯಾಗಿದ್ದಾರೆ. ವಯರ್ ಲೆಸ್ ಇನ್ಸ್‌ಪೆಕ್ಟರ್ ವಾಹಕ್ಕೆ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೋಮನ ಗೌಡ ಮೂಲತಾ ಬಿಜಾಪುರ ಜಿಲ್ಲೆಯವರಾಗಿದ್ದಾರೆ. ಇನ್ಸ್‌ಪೆಕ್ಟರ್ ಗೆ ಡೆಂಗ್ಯೂ ಜ್ವರ ಭಾದಿಸಿದ್ದರಿಂದ ನಗರದ ಫಳ್ನಿರ್ ನಲ್ಲಿರುವ ಖಾಸಗಿ ಆಸ್ಪತ್ರೆಗೆ ಮಂಗಳವಾರ ಬೆಳಿಗ್ಗೆ ಕರೆದುಕೊಂಡು ಹೋಗಿದ್ದರು. ಅಧಿಕಾರಿಯನ್ನು ಆಸ್ಪತ್ರೆ ಬಳಿ ಇಳಿಸಿ ವಾಹನ ಪಾರ್ಕ್ ಮಾಡಲು ಹೋದ ಸಂದರ್ಭ ಸೋಮನಗೌಡ ಏಕಾಎಕಿ ಕುಸಿದು ಬಿದ್ದಿದ್ದಾರೆ ಕೂಡಲೇ ಸ್ಥಳೀಯರು ಧಾವಿಸಿ 112 ಗೆ ಕರೆ ಮಾಡಿ ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲು ಕೊಂಡುಹೋಗುವಾಗ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ವಿವಾಹಿತರಾಗಿರುವ ಸೋಮನಗೌಡ ಕಳೆದ 7 ವರ್ಷಗಳಿಂದ ನಗರ ಶಶಸ್ತ್ರ ದಳದಲ್ಲಿ ಸೇವೆ ಸಲಿಸುತ್ತಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಸಿಬಂದಿ ಇತ್ತಿಚಿನ ದಿನಗಳಲ್ಲಿ ಅಕಾಲಿಕಾ ಮರಣಕ್ಕೆ…
ಬೆಳ್ತಂಗಡಿ : ಉಜಿರೆ ಮೀನು ಮಾರುಕಟ್ಟೆಯಲ್ಲಿ ಮೀನು ತರುವ ಟೆಂಪೋ ಕಾರಿಗೆ ಢಿಕ್ಕಿ ಹೊಡೆದ ಕಾರಣಕ್ಕೆ ಟೆಂಪೋ ಚಾಲಕನ ಮೇಲೆ ತಂಡವೊಂದು ಹಲ್ಲೆ ನಡೆಸಿರುವುದಾಗಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಕುವೆಟ್ಟು ಗ್ರಾಮದ ಚಿಲಿಂಬಿ ನಿವಾಸಿ ಶೌಕತ್ ಅಲಿ (24) ಹಲ್ಲೆಗೆ ಒಳಗಾದವರು. ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಶೌಕತ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ನಾನು ಟೆಂಪೊವನ್ನು ಹಿಂದಕ್ಕೆ ತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಕಾರಿಗೆ ತಾಗಿದ್ದು ಇದನ್ನು ಪ್ರಶ್ನಿಸಿ ನಾಗೇಶ, ಪ್ರವೀಣ, ಹರಿ, ವಿನಯ್ ಹಾಗೂ ಇತರರು ತೀವ್ರವಾಗಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಕ್ರೆಡಿಟ್ ಕಾರ್ಡ್‌ನಿಂದ ಅನಧಿಕೃತವಾಗಿ 1.55 ಲಕ್ಷ ರೂ. ಗಳನ್ನು ವರ್ಗಾಯಿಸಿ ವಂಚಿಸಿರುವ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ತಾನು ಐಸಿಐಸಿಐ ಕ್ರೆಡಿಟ್‌ಕಾರ್ಡ್ ಹೊಂದಿದ್ದು, ತನ್ನ ಮೊಬೈಲ್‌ಗೆ ಸೆ.10ರಂದು ಹಲವು ಒಟಿಪಿಗಳ ಸಂದೇಶ ಬಂದಿದ್ದವು. ಅಲ್ಲದೇ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿತ್ತು. ಆದರೆ ತಾನು ಯಾವುದೇ ಕರೆ ಸ್ವೀಕರಿಸದೆ ತನ್ನ ಮೊಬೈಲ್ ನಿಂದ ಐಸಿಐಸಿಐ ಆ್ಯಪ್ ತೆರೆದು ಕ್ರೆಡಿಟ್ ಕಾರ್ಡ್ ಬ್ಲಾಕ್ ಮಾಡಿದ್ದೆ. ಅಲ್ಲದೇ ಐಸಿಐಸಿಐ ಕ್ರೆಡಿಟ್ ಕಾರ್ಡ್ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಕಾರ್ಡ್ ಬ್ಲಾಕ್ ಮಾಡಿರುವ ಬಗ್ಗೆ ಖಚಿತಪಡಿಸಿಕೊಂಡಿದ್ದೆ. ಕಾರ್ಡ್ ಬ್ಲಾಕ್ ಆಗಿರುವ ಬಗ್ಗೆ ಇಮೇಲ್ ಕೂಡ ಬಂದಿತ್ತು. ಮರುದಿನ ರಾತ್ರಿ ಆ್ಯಪ್ ಮೂಲಕ ಕ್ರೆಡಿಟ್ ಕಾರ್ಡ್ ಸ್ಟೇಟಸ್ ನೋಡಿದಾಗ 1,60,401 ರೂ. ಔಟ್ ಸ್ಟಾಂಡಿಂಗ್ ಇರುವುದಾಗಿ ತೋರಿಸಿತು. ಕೂಡಲೇ ಕಸ್ಟಮರ್ ಕೇರ್‌ಗೆ ಕರೆ ಮಾಡಿ ವಿಚಾರಿಸಿದಾಗ ಯಾರೋ ಅಪರಿಚಿತರು ಆನ್‌ಲೈನ್ ಮೂಲಕ ಮೋಸದಿಂದ 1.55 ಲಕ್ಷ ರೂ.ಗಳನ್ನು ಅನಧಿಕೃತವಾಗಿ ವರ್ಗಾವಣೆ ಮಾಡಿದ್ದಾರೆ ಎಂದು…
ಪುತ್ತೂರು: ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುತ್ತಿಗಾರು ಬಳಿ ನಡೆದಿದೆ. ಪ್ರೇಮಾ (55) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಮೃತ ಪ್ರೇಮಾ ಅವರು ಪತಿ ಗುತ್ತಿಗಾರಿನ ವಳಲಂಬೆಯ ಲಕ್ಷ್ಮಣ ಆಚಾರ್ಯ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ತಿಳಿದು ಬಂದಿದೆ.










