Author: main-admin

ಗಾಜಿಯಾಬಾದ್: ಕಳೆದ ನಾಲ್ಕು ವರ್ಷಗಳಿಂದ ತನ್ನ ಇಬ್ಬರು ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದ ಆರೋಪದ ಮೇಲೆ 40 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಇದಕ್ಕೆ ವಿರೋಧಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 15 ಮತ್ತು 17 ವರ್ಷ ವಯಸ್ಸಿನ ಹುಡುಗಿಯರು ಆಘಾತಕ್ಕೊಳಗಾಗಿದ್ದರು. ಅರೆಮನಸ್ಸಿನಿಂದ ಅವರ ತರಗತಿಗಳಿಗೆ ಹಾಜರಾಗುವುದನ್ನು ಗಮನಿಸಿದ ಶಿಕ್ಷಕರೊಬ್ಬರು ಅಕ್ಕನಿಂದ ಕಾರಣವನ್ನು ತಿಳಿಯಲು ಪ್ರಯತ್ನಿಸಿದರು. ಬಾಲಕಿ ತಮ್ಮ ಕಷ್ಟವನ್ನು ಶಿಕ್ಷಕರ ಬಳಿ ಹೇಳಿಕೊಂಡಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶಾಲೆಯಿಂದ ಹೊರಬಂದ ನಂತರ ಮಕ್ಕಳು ತಾಯಿ ಕೆಲಸದಿಂದ ಹಿಂತಿರುಗುವವರೆಗೆ ಉದ್ಯಾನವನದಲ್ಲಿ ಕುಳಿತುಕೊಳ್ಳುತ್ತಿದ್ದರು ಎಂದು ಸಹೋದರಿಯರು ಶಿಕ್ಷಕರಿಗೆ ತಿಳಿಸಿದರು. ತಮ್ಮ ತಂದೆ ಹಲವು ದಿನಗಳಿಂದ ಕೆಲಸವಿಲ್ಲದೇ ಮನೆಯಲ್ಲೇ ಇದ್ದು, ತಾಯಿ ಮಾತ್ರ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ವೇಳೆ, ತಾಯಿ ಮನೆಯಲ್ಲಿ ಇಲ್ಲದಿದ್ದಾಗ ತಂದೆ ಈ ಕೈತ್ಯವನ್ನೆಸಗಿದ್ದಾನೆ. ಆರೋಪಿಯನ್ನು ಭಾನುವಾರ ಬಂಧಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Read More

ಬಂಟ್ವಾಳ: ಚಾಲಕನ ಅಜಾಗರೂಕತೆಯಿಂದ ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ಎರಡು ಕಾರುಗಳಿಗೆ ಹಿಂಬದಿಯಿಂದ ಡಿಕ್ಕಿಯಾದ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ಬಂಟ್ವಾಳದ ತುಂಬೆ ಎಂಬಲ್ಲಿ ನಡೆದಿದೆ ಮಂಗಳೂರಿನಿಂದ ಪಾಣೆಮಂಗಳೂರು ಕಡೆ ಬರುತ್ತಿದ್ದ ಕಾರೊಂದು ತುಂಬೆ ಸ್ಟೀಲ್ ಅಂಗಡಿಯ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಕಾರಿಗೆ ಡಿಕ್ಕಿ ಸಂಭವಿಸಿದೆ. ಘಟನೆಗೆ ಸ್ಪಷ್ಟವಾದ ಕಾರಣ ಇನ್ನೂ ಕೂಡ ತಿಳಿದು ಬಂದಿಲ್ಲ. ಆದರೆ ಘಟನೆಯಿಂದ ಮೂರು ಕಾರುಗಳು ಜಖಂಗೊಂಡಿದೆಯಾದರೂ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ. ತುಂಬೆಯಲ್ಲಿರುವ ಸ್ಟೀಲ್ ಪ್ಯಾಕ್ಟರಿಯೊಂದಕ್ಕೆ ಬಂದಿರುವ ಗ್ರಾಹಕರು ಹಾಗೂ ಪ್ಯಾಕ್ಟರಿಯ ಮಾಲಕರ ಕಾರಿಗೆ ಹಿಂಬದಿಯಿಂದ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ.ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲಿಸರು ಭೇಟಿ ನೀಡಿದ್ದಾರೆ. ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದರಿಂದ ಕೆಲ ಕಾಲ ಸುಗಮ ವಾಹನ ಸಮಚಾರಕ್ಕೆ ಅಡಚಣೆ ಉಂಟಾಗಿತ್ತು. ಕೂಡಲೇ ಸ್ತಳೀಯ ಪೊಲೀಸರು ತೆರಳಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Read More

ಬಂಟ್ವಾಳ: ಶಾಲಾ ಮಕ್ಕಳು ಬಸ್ ನ ಪುಟ್ ಬೋರ್ಡಿನಲ್ಲಿ ನೇತಾಡಿಕೊಂಡು ಹೋಗುವ ಭಯಾನಕ ವಿಡಿಯೋ ಬಂಟ್ವಾಳದಿಂದ ವೈರಲ್ ಆಗಿದೆ. “ಶಾಲಾಮಕ್ಕಳ ಭವಿಷ್ಯ ಯಾರ ಕೈಯಲ್ಲಿ” ಎಂಬ ತಲೆಬರಹದ ಜೊತೆ ವಿಡಿಯೋ ವೈರಲ್ ಆಗಿದೆ. ಬಿಸಿರೋಡು ವಿಟ್ಲ ಎಂಬ ಬೋರ್ಡ್ ಬಸ್ ನಲ್ಲಿ ಕಂಡು ಬಂದಿದೆ. ಮುಂಭಾಗದಲ್ಲಿ ಮತ್ತು ಹಿಂಭಾಗದ ಎರಡು ಪುಟ್ ಬೋರ್ಡಿನಲ್ಲಿ ಬ್ಯಾಗ್ ಹಾಕಿಕೊಂಡು ವಿದ್ಯಾರ್ಥಿಗಳು ನೇತಾಡುವ ದೃಶ್ಯ ಕಂಡು ಬಂದಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಘಟನೆ ಮಾಸುವ ಮುನ್ನವೇ ಇಂತಹ ವಿಡಿಯೋ ಗಳು ವೈರಲ್ ಆಗಿರುವುದು ಮಕ್ಕಳ ಪೋಷಕರಿಗೆ ಹೆದರಿಕೆ ಉಂಟು ಮಾಡಿದೆ.‌ ಪುಟ್ ಬೋರ್ಡಿನಿಂದ  ಬಸ್ ಕಂಡಕ್ಟರ್ ಓರ್ವ ಕೈ ತಪ್ಪಿ ನೆಲಕ್ಕುರುಳಿ ಮೃತಪಟ್ಟ ವಿಡಿಯೋ ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿತ್ತು. ಅ ಬಳಿಕ ಅಧಿಕಾರಿಗಳು ಎಚ್ಚರಿಕೆ ನೀಡುವ ಕೆಲಸ ಮಾಡಲಾಯಿತಾದರೂ ಗ್ರಾಮೀಣ ಭಾಗದ ಕೆಲವು ಕಡೆಗಳಲ್ಲಿ ಇಂತಹ ಪ್ರಕರಣಗಳು ಕಂಡು ಬರುತ್ತಿರುವುದು ಬೇಸರದ ವಿಚಾರ. ಶಾಲಾ ಮಕ್ಕಳಿಗೆ ಬೆಳಿಗ್ಗೆ ಮತ್ತು ಸಂಜೆ ಅವಧಿಯಲ್ಲಿ ಪ್ರಯಾಣಿಸಲು ಸಾಕಷ್ಟು ಬಸ್ ಗಳಿಲ್ಲದೆ…

Read More

ಕುಂದಾಪುರ: ಭಾನುವಾರ ರಾತ್ರಿ ಕುಂದಾಪುರದಲ್ಲಿ ಚೂರಿ ಇರಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ಖಾರ್ವಿಕೇರಿ ನಿವಾಸಿ ಬನ್ಸ್ ರಾಘು ಅಲಿಯಾಸ್ ರಾಘವೇಂದ್ರ ಶೇರೆಗಾರ್(42) ಸೋಮವಾರ ಬೆಳಿಗ್ಗೆ ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಭಾನುವಾರ ಸಂಜೆ ಸುಮಾರು 7 ಗಂಟೆಗೆ ರಾಘವೇಂದ್ರ ಅವರು ಕಾರಿನಲ್ಲಿ ಕುಂದಾಪುರದ ಚಿಕ್ಕನ್ ಸಾಲ್ ರಸ್ತೆಯ ಅಂಚೆ ಕಚೇರಿ ಸಮೀಪ ಇರುವ ನ್ಯೂ ಡೆಲ್ಲಿ ಬಜಾರ್ ಅಂಗಡಿ ಬಳಿ ಹೋಗುತ್ತಿದ್ದರು. ಈ ವೇಳೆ ಕೆ.ಎ.51 ಎಂಜಿ 9665 ನಂಬರಿನ ವ್ಯಾಗನರ್ ಕಾರಿನಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ತಗಾದೆ ತೆಗೆದು ಚೂರಿಯಿಂದ ರಾಘವೇಂದ್ರ ಅವರ ತೊಡೆಗೆ ಇರಿದು ಪರಾರಿಯಾಗಿದ್ದ. ಗಂಭೀರಗೊಂಡಿದ್ದ ರಾಘು ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸಲದೆ ರಾಘವೇಂದ್ರ ಸಾವನ್ನಪ್ಪಿದ್ದಾರೆ. ಘಟನೆ ನಡೆಯುತ್ತಿದ್ದ ವೇಳೆ ಪ್ರತ್ಯಕ್ಷದರ್ಶಿಯೊಬ್ಬ ಆರೋಪಿಯ ಕಾರು ಮತ್ತು ಕಾರಿನೊಳಗೆ ಕುಳಿತಿದ್ದ ಆರೋಪಿಯ ಫೋಟೋ ಕ್ಲಿಕ್ಕಿಸಿಕೊಂಡಿದ್ದ. ಇದರಿಂದ ಆರೋಪಿಯನ್ನು ತೀರ್ಥಹಳ್ಳಿ ಮೂಲದ ಶಾಫಿ ಎಂದು ಗುರುತಿಸಲಾಗಿದ್ದು, ಕೆಲವು ದಿನಗಳಿಂದ ಕುಂದಾಪುರದ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದ ಎನ್ನಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು…

Read More

ಸುಳ್ಯ: ಆಸ್ತಿ ವಿಚಾರದಲ್ಲಿ ಸಹೋದರರ ನಡುವೆ ಮಾತಿನ ಚಕಮಕಿ ನಡೆದು ಅಣ್ಣ ತಮ್ಮನಿಗೆ ಕತ್ತಿಯಿಂದ ಕಡಿದು ಗಾಯಗೊಳಿಸಿದ ಘಟನೆ ಸುಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜಾವರ ಗ್ರಾಮದ ಮುಳ್ಯ ಅಟ್ಟೂರಿನ ಕುಂಚಡ್ಕ ಎಂಬಲ್ಲಿ ರವಿವಾರ ನಡೆದಿದೆ. ಗಾಯಗೊಂಡವರನ್ನು ರವಿಚಂದ್ರ ಎಂದು ಗುರುತಿಸಲಾಗಿದ್ದು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಆಸ್ತಿ ವಿಚಾರವಾಗಿ ಸಹೋದರರೊಳಗೆ ಮಾತಿಗೆ ಮಾತು ಬೆಳೆಯಿತು. ಈ ವೇಳೆ ಅಣ್ಣ ಲವ ಕುಮಾರ್ ಎಂಬವರು ತಮ್ಮ ರವಿಚಂದ್ರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ವಿಟ್ಲ: ಮಾಣಿ- ಮೈಸೂರು ರಾಜ್ಯ ಹೆದ್ದಾರಿಯ ನೇರಳಕಟ್ಟೆ ಸಮೀಪದ ಪರ್ಲೊಟ್ಟು ಎಂಬಲ್ಲಿ ಆ.2ರ ಸೋಮವಾರ ಮುಂಜಾನೆ ಯುವಕನೋರ್ವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಮೃತನನ್ನು ಸೂರಿಕುಮೇರು ನಿವಾಸಿ, ಅಮೂಲ್ಯ ಆರ್ಟ್ ಗ್ಯಾಲರಿ ಮಾಲಕ, ಎಲ್.ಐ.ಸಿ. ಏಜೆಂಟ್ ನಾರಾಯಣ ಕುಲಾಲ್ ಎಂದು ಗುರುತಿಸಲಾಗಿದೆ. ಸೋಮವಾರ ಮುಂಜಾನೆ 5 ರ ವೇಳೆಗೆ ಪರ್ಲೊಟ್ಟು ಎಂಬಲ್ಲಿನ ಕೆರೆಯ ಬಳಿ ಬೈಕ್, ಮೊಬೈಲ್, ಚಪ್ಪಲಿ ನೋಡಿದ ಸ್ಥಳೀಯರು ಯಾರೋ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂಬ ಸಂಶಯದಿಂದ ವಿಟ್ಲ ಪೊಲೀಸ್ ಠಾಣೆ ಹಾಗೂ ಅಗ್ನಿಶಾಮಕ ದಳದವರಿಗೆ ತಿಳಿಸಿದ್ದಾರೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿದ್ದು, ಕೆರೆಯಲ್ಲಿ ಹುಡುಕಾಟ ನಡೆಸಿ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಇದು ಆತ್ಮಹತ್ಯೆ ಎನ್ನಲಾಗುತ್ತಿದ್ದು ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ.

Read More

ಬೆಂಗಳೂರು:ಈ ವರ್ಷ ನವೆಂಬರ್ 25 ಮತ್ತು 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಗಲು-ರಾತ್ರಿ ಕಂಬಳ ನಡೆಯಲಿದೆ, ಇದು ಕರಾವಳಿ ಕರ್ನಾಟಕದ ಶತಮಾನಗಳ ಹಳೆಯ ಕೃಷಿ ಸಂಪ್ರದಾಯವಾದ ಎಮ್ಮೆ ಓಟದ ಸ್ಪರ್ಧೆಯನ್ನು ನಗರದಲ್ಲಿ ಆಯೋಜಿಸಿರುವುದು ಇದೇ ಮೊದಲು. ಮಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬೆಂಗಳೂರು ಕಂಬಳ ಸಮಿತಿಯ ಸಂಚಾಲಕ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಕೋಣದ ಮಾಲೀಕರೊಂದಿಗೆ ಸಭೆ ನಡೆಸಲಾಗಿದ್ದು, ರಾಜ್ಯದ ದಕ್ಷಿಣ ಕನ್ನಡ ಮತ್ತು ಉಡುಪಿಯಿಂದ 130 ಜೋಡಿ ಎಮ್ಮೆಗಳನ್ನು ತರಲು ನಿರ್ಧರಿಸಲಾಗಿದೆ. ಕೇರಳದ ಕಾಸರಗೋಡಿನವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ನಟರಾದ ರಜನಿಕಾಂತ್ ಮತ್ತು ಐಶ್ವರ್ಯ ರೈ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸುಮಾರು 7-8 ಲಕ್ಷ ಸಂದರ್ಶಕರು ಭೇಟಿ ನೀಡುವ ನಿರೀಕ್ಷೆಯಿದೆ ಎಂದರು. ‘ಈ ಕಾರ್ಯಕ್ರಮಕ್ಕೆ ಸುಮಾರು 6 ಕೋಟಿ ರೂಪಾಯಿ ವೆಚ್ಚವಾಗುವ ಸಾಧ್ಯತೆಯಿದೆ ಮತ್ತು ನಾವು ಸರ್ಕಾರದ ಬೆಂಬಲವನ್ನು ಸಹ ಪಡೆಯುತ್ತೇವೆ. ಸಚಿವರು ಮತ್ತು ಉದ್ಯಮಿಗಳ ಹೆಸರಿನಲ್ಲಿ ರೇಸ್…

Read More

ವಿಟ್ಲ: ಪೇಟೆಯ ಮೂರು ಕಡೆ ಸರಣಿ ಕಳ್ಳತನ ನಡೆದ ಘಟನೆ ನಡೆದಿದೆ. ಬೊಬ್ಬೆಕೇರಿಯ ಕಾವೇರಿ ಬಾರ್, ಮೇಗಿನ ಪೇಟೆಯ ಬಿಗ್ ಬೇಕ್ಸ್ ಬೇಕರಿ ಹಾಗೂ ಮಂಗಳಪದವಿನಲ್ಲಿ‌ ಅಂಗಡಿಯಲ್ಲಿ ಕಳ್ಳತನ ನಡೆದ ಘಟನೆ ಬೆಳಕಿಗೆ ಬಂದಿದೆ. ಕಾವೇರಿ ಬಾರ್‌ನಲ್ಲಿ ಸುಮಾರು 40,000 ರೂ. ನಗದು, ಸ್ಪೀಕರ್, ಮದ್ಯದ ಕೆಲವು ಬಾಟಲ್‌ಗಳನ್ನು ಕೊಂಡೊಯ್ದು ಕಳ್ಳರು, ಸ್ವಲ್ಪ ಮದ್ಯದ ಬಾಟಲಿಗಳನ್ನು ಹೊರಗೆ ಇಟ್ಟು ತೆರಳಿದ್ದಾರೆ. ಮೇಗಿನ ಪೇಟೆಯ ಬಿಗ್ ಬೇಕ್ಸ್ ಬೇಕರಿಯಲ್ಲಿ ಹರಕೆ ಡಬ್ಬಿ, ಚಾಕಲೇಟ್, ಮೊಬೈಲ್, ನಗದು ದೋಚಿದ್ದಾರೆ.

Read More

ಮಂಗಳೂರು: ಅನಧಿಕೃತ ಕೃಷಿ ಕೀಟನಾಶಕಗಳನ್ನು ಮಾರಾಟ ಮಾಡುತ್ತಿದ್ದ ಮುಲ್ಕಿ ಹೋಬಳಿಯ ಕಾರ್ನಾಡು ಗ್ರಾಮ ಸನ್‌ ಕೆಮಿಕಲ್‌ ಕಂಪೆನಿಯ ಮಳಿಗೆ ಮೇಲೆ ಇತ್ತೀಚೆಗೆ ಕೃಷಿ ಜಾರಿದಳದ ಮೈಸೂರು ವಿಭಾಗದ ಉಪ ಕೃಷಿ ನಿರ್ದೇಶಕ ನಾಗರಾಜ್‌ ರೆಡ್ಡಿ, ಮಂಗಳೂರು ತಾಲೂಕು ಹಾಗೂ ಜಾರಿದಳ ಸಹಾಯಕ ಕೃಷಿ ನಿರ್ದೇಶಕ ವೀಣಾ ಕೆ.ಆರ್‌., ಮೈಸೂರು ವಿಭಾಗದ ಕೃಷಿ ಅಧಿಕಾರಿ ದಿವಾಕರ್‌ ಹಾಗೂ ಷಣ್ಮುಖ ನೇತೃತ್ವದ ತಂಡ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ 1.19 ಲಕ್ಷ ರೂ. ಮೌಲ್ಯದ ಕಾಪರ್‌ ಸಲ್ಫೆ„ಡ್‌ ಹಾಗೂ ಮೈಲುತುತ್ತು ಕೀಟನಾಶಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೃಷಿ ಜಾರಿದಳ‌ ಹಾಗೂ ಎಲ್ಲ ತಾಲೂಕಿನ ಗುಣ ನಿಯಂತ್ರಣ ಪರಿವೀಕ್ಷಕರ ದಳವು ಅನಧಿಕೃತವಾಗಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ದಾಸ್ತಾನು ಮತ್ತು ಮಾರಾಟ ಮಾಡುತ್ತಿರುವವರ ಬಗ್ಗೆ ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನಿನ ಕ್ರಮ ಕೈಗೊಳ್ಳಲಿದೆ ಎಂದು ಮಂಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More

ಮಂಗಳೂರು: ಸೋಲಾಪುರದ ಈರುಳ್ಳಿ ವ್ಯಾಪಾರಿಯೋರ್ವ ಮಂಗಳೂರಿನ ವ್ಯಾಪಾರಿಗೆ 75 ಲಕ್ಷ ರೂ. ವಂಚಿಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಮಂಗಳೂರಿನ ಅಬ್ದುಲ್ ರಹಿಮಾನ್ ಬಾವಾ ವಂಚನೆಗೊಳಗಾದವರು. ಅವರಿಗೆ ಕೃಷಿ ಉತ್ಪನ್ನಗಳ ವ್ಯವಹಾರಗಳ ಮೂಲಕ 2021ರಲ್ಲಿ ಮಂಗಳೂರು ಮತ್ತು ಚೆನ್ನೈಯಲ್ಲಿ ಈರುಳ್ಳಿ ವ್ಯಾಪಾರ ಮಾಡುವ ಮಹಾರಾಷ್ಟ್ರ ಸೋಲಾಪುರದ ಕುಂಡಲಿಕ್ ಜುಂಬಾರ್ ಖಂಡಾಗಲೆ ಎಂಬಾತನ ಪರಿಚಯವಾಗಿ ಆತ್ಮೀಯರಾಗಿದ್ದರು. ಅನಂತರ ಕುಂಡಲಿಕ್ ಜುಂಬಾರ್ ಖಂಡಾಗಲೆ ವ್ಯವಹಾರದಲ್ಲಿ ಒಳ್ಳೆಯ ಹೂಡಿಕೆ ಅವಕಾಶ ಇದೆ ಎಂಬುದಾಗಿ ನಂಬಿಸಿ ಅಬ್ದುಲ್ ರಹಿಮಾನ್ ಬಾವಾ ಅವರಿಂದ 75 ಲ.ರೂ.ಗಳನ್ನು ವರ್ಗಾಯಿಸಿಕೊಂಡು ಅನಂತರ ವಾಪಸ್ ನೀಡದೆ ವಂಚಿಸಿದ್ದಾನೆ ಎಂದು ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More