ಮಂಗಳೂರು: ನಗರ ಹೊರವಲಯದ ಅಡ್ಯಾರ್ ಪರಿಸರದಲ್ಲಿ ಜಾನುವಾರು ಅಕ್ರಮ ಸಾಗಾಟದ ತಂಡದ ಸದಸ್ಯರ ಕೊಲೆಗೆ ಸಂಚು ರೂಪಿಸಿದ ಇಬ್ಬರು ಕುಖ್ಯಾತ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಫರಂಗಿಪೇಟೆ ಸಮೀಪದ ಅಮೆಮಾರ್‌ನ ತಸ್ಲೀಮ್ ಯಾನೆ ಗರುಡ ತಸ್ಲೀಮ್ (34) ಮತ್ತು ಹೈದರಾಲಿ ಯಾನೆ ಹೈದು (26) ಬಂಧಿತ ಆರೋಪಿಗಳಾಗಿದ್ದಾರೆ. ಫರಂಗಿಪೇಟೆ ಪರಿಸರದಲ್ಲಿ ಅಕ್ರಮ ಜಾನುವಾರು ಸಾಗಾಟದ ಎರಡು ತಂಡಗಳ ನಡುವೆ ವಿಷಯದಲ್ಲಿ ಗಲಾಟೆ ನಡೆಯುತ್ತಿತ್ತು. ಕೊಲೆ, ಕೊಲೆಯತ್ನ, ಜಾನುವಾರು ಕಳ್ಳತನ ಹಾಗೂ ಇತರ ಪ್ರಕರಣದಲ್ಲಿ ಆರೋಪಿಗಳ ತಂಡ ಭಾಗಿಯಾಗಿತ್ತು. ಅಕ್ರಮ ಜಾನುವಾರು ಸಾಗಾಟ ವಿಚಾರವಾಗಿದ್ದರಿಂದ ಈ ವಿಚಾರವು ಠಾಣೆಯಲ್ಲಿ ದೂರು ದಾಖಲಾಗಿರಲಿಲ್ಲ. ಈ ನಡುವೆ ಮಂಗಳೂರು ನಗರದ ಅಡ್ಯಾರ್ ಪರಿಸರದಲ್ಲಿ ತಲವಾರುಗಳೊಂದಿಗೆ ತಸ್ಲಿಂ ಹಾಗೂ ಆತನ ಸಹಚರರು ಇನ್ನೊಂದು ತಂಡದ ಕೊಲೆಗೆ ಸಂಚು ರೂಪಿಸಿ ಮಾರಕಾಯುಧಗಳಾದ ತಲವಾರುಗಳೊಂದಿಗೆ ಹೊಂಚು ಹಾಕುತ್ತಿದ್ದ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಈ ಕೃತ್ಯದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ತಲೆಮರೆಸಿ…
Author: main-admin
ವಿಟ್ಲ: ಶಾಲಾ ವಿದ್ಯಾರ್ಥಿನಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪದಲ್ಲಿ ಯುವಕನ ವಿರುದ್ದ ವಿಟ್ಲ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ. ಪೆರುವಾಯಿ ಮೂಲದ ಯುವಕನೋರ್ವ ಕೇಪು ಗ್ರಾಮದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಹಲವು ದಿನಗಳಿಂದ ಹಿಂಬಾಲಿಸುತ್ತಿದ್ದು, ಮೊಬೈಲ್ ನಂಬರ್ ನೀಡುವಂತೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಶಾಲೆ ಸಮೀಪ ಬಂದು ಬಾಲಕಿಯನ್ನು ಬೈಕ್ ನಲ್ಲಿ ಕೂರುವಂತೆ ಹೇಳಿದ್ದು, ಈ ಎಲ್ಲಾ ವಿಚಾರವನ್ನು ಬೇರೆ ಕಡೆ ಹೇಳಬಾರದೆಂದು ಬೆದರಿಸಿದ್ದಾನೆ. ಇದರಿಂದ ಭಯಗೊಂಡ ಬಾಲಕಿ ಶಾಲೆಯ ಶಿಕ್ಷಕರಲ್ಲಿ ತಿಳಿಸಿದ್ದು, ಅವರು ಪೋಷಕರಿಗೆ ಮಾಹಿತಿ ತಿಳಿಸಿದ್ದು, ಈ ಹಿನ್ನಲೆಯಲ್ಲಿ ಠಾಣೆಗೆ ದೂರು ನೀಡಿದ್ದಾರೆ.
ದಕ್ಷಿಣಕನ್ನಡ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಿರುವುದನ್ನು ಕಂಡಿಸಿ ಸೆ. 29ರ ಇಂದು ಕನ್ನಡ ಪರ ಸಂಘಟನೆಗಳು ಮತ್ತು ವಿವಿಧ ರಾಜಕೀಯ ಪಕ್ಷಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾಹಿತಿ ನೀಡಿದ್ದಾರೆ. ಇನ್ನು ಖಾಸಗಿ ಬಸ್ ಮಾಲೀಕರ ಸಂಘದ ಮಾಜಿ ಅಧ್ಯಕ್ಷ ದಿಲ್ ರಾಜ್ ಆಳ್ವ ಹೇಳಿಕೆ ನೀಡಿದ್ದು, ಬಂದ್ ಗೆ ಯಾವುದೇ ರೀತಿಯ ಸಹಕಾರ ನೀಡಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಇಂದು ಕಾವೇರಿ ಕಿಚ್ಚಿಗೆ ದಕ್ಷಿಣ ಕನ್ನಡದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ಜನಜೀವನ ಇದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆ ಎಂದಿನಂತೆ ಸೇವೆಯಿದೆ. ಮಂಗಳೂರಿನಿಂದ ಬೆಂಗಳೂರಿಗೆ ಬಸ್ ಗಳು ಹೊರಟಿವೆ. ಎಂದಿನಂತೆ ಎಲ್ಲಾ ಬಸ್ ಗಳನ್ನು ಕೆಎಸ್ಆರ್ಟಿಸಿ ಆಪರೇಟ್ ಮಾಡಿದೆ. ಎತ್ತಿನಹೊಳೆ ಹೋರಾಟಕ್ಕೆ ನಮ್ಮ ಜಿಲ್ಲೆಯವರಿಗೆ ಯಾರು ಬೆಂಬಲ ನೀಡಲಿಲ್ಲ. ತುಳು ಭಾಷೆಯನ್ನ ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿಸುವ ಹೋರಾಟಕ್ಕೂ ಬೆಂಬಲ ನೀಡಲಿಲ್ಲ.…
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ನಿನ್ನೆ ಸಂಜೆಯಿಂದ ವ್ಯಾಪಕ ಮಳೆಯಾಗ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ಐದು ದಿನ ಭಾರಿ ಮಳೆ ಆಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ. ಸೆ. 28ರಂದು ಉತ್ತರ ಒಳನಾಡಿನ ಬೀದರ್, ಬೆಳಗಾವಿ, ಮಳೆಯಾಗುವ ಸಾಧ್ಯತೆ ಇದೆ.ರಾಜ್ಯಾದ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ದೊರೆತಿದೆ
ಕಾವೇರಿ ನದಿ ನೀರಿನ ಹೋರಾಟ ನಾಳೆ ನಡೆಯಲಿರುವ ಕರ್ನಾಟಕ ಬಂದ್‌ಗೆ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬೆಂಬಲ ವ್ಯಕ್ತವಾಗಿದ್ದು, ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಜನರು ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಲಿದ್ದಾರೆ. ಸಾಮಾನ್ಯವಾಗಿ ಈ ಹಿಂದಿನ ಅನೇಕ ದಶಕಗಳ ಬೆಳವಣಿಗೆಗಳನ್ನು ಗಮನಿಸಿದಾಗ ಕರ್ನಾಟಕದ ನೆಲ ಜಲ ಪರ ಹೋರಾಟಗಳಿಗೆ ಕರಾವಳಿ ಭಾಗದಲ್ಲಿ ಬೆಂಬಲ ವ್ಯಕ್ತವಾಗೋದು ಕಡಿಮೆ. ಕಾವೇರಿ ಪರ ಹೋರಾಟ, ಕನ್ನಡ ಪರ ಹೋರಾಟ, ಮೇಕೆದಾಟು, ಸೇರಿದಂತೆ ನೆಲ ಜಲ ಭಾಷೆಗೆ ಸಂಬಂಧಿಸಿದ ಕರ್ನಾಟಕದ ಹೋರಾಟಗಳಿಗೆ ಕರಾವಳಿ ಭಾಗ ಅರ್ಥಾತ್ ತುಳುನಾಡಿನಲ್ಲಿ ಬೆಂಬಲ ವ್ಯಕ್ತವಾಗೋದಿಲ್ಲ. ಅದರ ಜೊತೆಗೆ ತುಳುನಾಡು ಪರ ಹೋರಾಟಗಳಿಗೂ ಕೂಡ ಕರಾವಳಿ ಹೊರತುಪಡಿಸಿ ಇತರ ಭಾಗದಲ್ಲಿ ಬೆಂಬಲ ವ್ಯಕ್ತವಾಗೋದು ಕಡಿಮೆ. ಉದಾಃ ತುಳು ಭಾಷೆ, ಎತ್ತಿನಹೊಳೆ ಹೋರಾಟ, ಕಂಬಳ ಸೇರಿದಂತೆ ಇತರ ಹೋರಾಟಗಳಿಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಬಿಟ್ಟರೆ ಕರ್ನಾಟಕದ ಬೇರೆ ಭಾಗದಿಂದ ಹೇಳಿಕೊಳ್ಳುವಂತಹ ಮಟ್ಟಿಗೆ ಬೆಂಬಲ ವ್ಯಕ್ತವಾದ ಉದಾಹರಣೆ ಇಲ್ಲ. ಇದೀಗ ಈ ಬಾರಿಯ…
ಗಾಂಧಿನಗರ: ಅಪರಾಧವೆಸಗಿ ಜೈಲು ಸೇರಿದ ವ್ಯಕ್ತಿಗಳು ಜಾಮೀನಿಗಾಗಿ ಕಾತರಿಸುವುದು ಸಾಮಾನ್ಯ. ಜಾಮೀನು ಸಿಕ್ಕ ತಕ್ಷಣ ತಾತ್ಕಾಲಿಕವಾಗಿ ಬಿಡುಗಡೆ ಭಾಗ್ಯ ಪಡೆಯುತ್ತಾರೆ. ಆದರೆ ಗುಜರಾತ್‌ನಲ್ಲಿ ಪ್ರಕರಣವೊಂದರಲ್ಲಿ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಗೆ ಜಾಮೀನು ಸಿಕ್ಕಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂರು ವರ್ಷಗಳವರೆಗೆ ಜೈಲಿನಲ್ಲೇ ಕಳೆದ ಘಟನೆ ವರದಿಯಾಗಿದೆ. ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದರೂ, ಇ-ಮೇಲ್‌ನಲ್ಲಿ ಬಂದಿರುವ ಆದೇಶದ ಪ್ರತಿಯನ್ನು ಅಧಿಕಾರಿಗಳು ತೆರೆಯದ ಕಾರಣ ಆರೋಪಿ ಮೂರು ವರ್ಷ ಜೈಲಿನಲ್ಲಿ ಕಳೆಯಬೇಕಾಯಿತು. ನ್ಯಾಯಾಲಯ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. ಅಧಿಕಾರಗಳ ನಿರ್ಲಕ್ಷ್ಯದಿಂದ ವಿನಾಕಾರಣ ಜೈಲಿನಲ್ಲಿ ಕೊಳೆಯುವಂತಾದ ಆರೋಪಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಲಾಗಿದೆ. ಗುಜರಾತ್ ಮೂಲದ ಚಂದನ್‌ಜಿತ್ ಠಾಕೂರ್ (27) ಎಂಬ ವ್ಯಕ್ತಿ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಜೈಲು ಸೇರಿದ್ದ. 2020ರ ಸೆ 29ರಂದು ಗುಜರಾತ್ ಹೈಕೋರ್ಟ್ ಶಿಕ್ಷೆಯನ್ನು ಅಮಾನತುಗೊಳಿಸಿತಲ್ಲದೆ, ಆತನಿಗೆ ಜಾಮೀನು ಮಂಜೂರು ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ರಿಜಿಸ್ಟ್ರಾರ್ ಕಚೇರಿಯಿಂದ ಆದೇಶ ಪ್ರತಿ ಜೈಲು ಅಧಿಕಾರಿಗಳಿಗೆ ಇ-ಮೇಲ್…
ಬೆಂಗಳೂರು : ನಾಳೆ ಅಖಂಡ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾರ್ವಜನಿಕರಿಗೆ ಅಗತ್ಯವಿರುವ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳು ಬಂದ್ ಅಗಲಿವೆ. ಯಾವ ಯಾವ ಸೇವೆಗಳು ಇರಲಿದ್ದು, ಯಾವ ಸೇವೆಗಳು ಬಂದ್ ಆಗುವುದರ ಮಾಹಿತಿ ಇಲ್ಲಿದೆ. ನಾಳೆ ಅಖಂಡ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕರ ಸಂಘ ಬೆಂಬಲ ಸೂಚಿಸಿದ್ದರಿಂದ ಎಲ್ಲ ಹೋಟೆಲ್ ಗಳು ಬಂದ್ ಇರಲಿವೆ, ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ನಾಳಿನ ಬಂದ್ ಗೆ ಬೆಂಬಲ ನೀಡಿರುವುದರಿಂದ ಚಿತ್ರಮಂದಿರಗಳು ಬಂದ್ ಇರಲಿವೆ. ಶಾಪಿಂಗ್ ಮಾಲ್ಗಳು ಬಂದಾಗಲಿವೆ, ಆಟೋ, ಕ್ಯಾಬ್ ಓಲಾ, ಉಬರ್ಗಳು ಸೇರಿದಂತೆ ಖಾಸಗಿ ಸಾರಿಗೆ ವಾಹನಗಳು ಶುಕ್ರವಾರ ರಸ್ತೆಗೆ ಇಳಿವುದಿಲ್ಲ ಅಲ್ಲದೆ ಬೇಕರಿಗಳು ಸಹ ಕ್ಲೋಸ್ ಆಗಿರಲಿವೆ. ಇನ್ನೂ ಅಗತ್ಯ ಸೇವೆಗಳು ಅಂದರೆ ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್ ಶಾಪ್ ಗಳು, ಅಂಬುಲೆನ್ಸ್ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ನಂದಿನಿ ಹಾಲಿನ ಅಂಗಡಿಗಳು ತೆರೆದಿರುತ್ತವೆ.ಅದರಂತೆ ಶಾಲಾ ಕಾಲೇಜುಗಳು, ಮೆಟ್ರೋ ಸೇವೆಗಳ ಬಗ್ಗೆ, ಬಿಎಂಟಿಸಿ, ಕೆಎಸ್‌ಆರ್ಟಿಸಿ ಸಂಚಾರ…
ಮಂಗಳೂರು: ಜೀವಕಂಟಕವಾಗುತ್ತಿರುವ ಸಿಟಿ ಬಸ್ ಗಳ ಅಟಾಟೋಪಗಳಿಗೆ ಕಡಿವಾಣ ಹಾಕಲು ಬಸ್ ಮಾಲಕರೊಂದಿಗೆ ಸಭೆ ನಡೆಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ ವಾಲ್ ಖಡಕ್ ವಾರ್ನಿಂಗ್ ನೀಡಿದರು. ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬುಧವಾರ ನಡೆದ ಈ ಸಭೆಯಲ್ಲಿ ಆರ್ ಟಿ ಒ ಅಧಿಕಾರಿ, ಮನಪಾ ಇಂಜಿನಿಯರ್, ಎನ್ಎಚ್ಒ ಅಧಿಕಾರಿ, ಸ್ಮಾರ್ಟ್ ಸಿಟಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಿಟಿ ಬಸ್ ಗಳೊಂದಿಗೆ ಸಭೆ ನಡೆಸಲಾಗಿದೆ. ಬಸ್ ಮಾಲಕರೊಂದಿಗೆ ಬಹಳಷ್ಟು ಸಭೆಗಳು ನಡೆದಿದ್ದರೂ, ಇದೇ ಮೊದಲ ಬಾರಿಗೆ ಕಳೆದ ಕೆಲದಿನಗಳಲ್ಲಿ ನಡೆದಿರುವ ಅಪಘಾತಗಳನ್ನು, ಅಡ್ಡಾದಿಡ್ಡಿ ಬಸ್ ಗಳ ಸಂಚಾರ, ನಿರ್ಲಕ್ಷ್ಯದ ಚಾಲನೆಗಳ ಬಗ್ಗೆ ವೀಡಿಯೋ ಮೂಲಕ ಬಸ್ ಮಾಲಕರಿಗೆ ಮನದಟ್ಟು ಮಾಡಲಾಯಿತು. ಇತ್ತೀಚಿಗೆ ನಡೆದ ವಿವಿಧ ಭೀಕರ ಅಪಘಾತಗಳ ವೀಡಿಯೋಗಳನ್ನು ತೋರಿಸಿ ಬಸ್ ಮಾಲೀಕರಿಗೆ ಕಮಿಷನರ್ ಕ್ಲಾಸ್ ತೆಗೆದುಕೊಂಡರು. ಅತಿವೇಗದ ಚಾಲನೆ, ನಿರ್ಲಕ್ಷ್ಯದ ಚಾಲನೆ, ಟೈಮ್ ಕೀಪಿಂಗ್ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆ ಬಗ್ಗೆ ಎಚ್ಚರಿಕೆ ನೀಡಿ, ಬಸ್ ಟೈಮಿಂಗ್ ರೇಷನಲೈಜ್ ಮಾಡುವ…
ಉಡುಪಿ: ಕ್ರೆಡಿಟ್ ಕಾರ್ಡ್ ಆಯಕ್ಟಿವೇಶನ್ ಮಾಡಿ ಕೊಡುವುದಾಗಿ ತಿಳಿಸಿ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂ. ವರ್ಗಾಯಿಸಿಕೊಂಡ ಘಟನೆ ನಡೆದಿದೆ. ಉಡುಪಿಯ ಅಬ್ದುಲ್ ಕರೀಮ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ತಾನು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಆಯಕ್ಟಿವೇಶನ್ ಮಾಡುವುದಾಗಿ ಹೇಳಿ ಡೆಬಿಟ್ ಕಾರ್ಡ್ ಮಾಹಿತಿ ಹಾಗೂ ಒಟಿಪಿ ಪಡೆದು ಅವರ ಎಸ್.ಬಿ. ಖಾತೆಯಿಂದ 49,999 ರೂ.ಗಳನ್ನು ಕ್ರಮವಾಗಿ 10 ಸಲ ವರ್ಗಾವಣೆ ಮಾಡಿ ಒಟ್ಟು 4,99,990 ರೂ.ಗಳನ್ನು ವರ್ಗಾಯಿಸಿಕೊಂಡಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಗಡಿಭಾಗದ ಕಾಸರಗೋಡು ಜಿಲ್ಲಾ ಸಹಾಯಕ ಜಿಲ್ಲಾಧಿಕಾರಿ ಸಂಚರಿಸುತ್ತಿದ್ದ ಬೊಲೆರೊ ವಾಹನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಕಾರಣ ಸಹಾಯಕ ಜಿಲ್ಲಾಧಿಕಾರಿ ಸೇರಿದಂತೆ ಇಬ್ಬರು ಗಾಯಗೊಂಡ ಘಟನೆ ಸೋಮವಾರ ಸಂಜೆ ಚೆಮ್ನಾಡ್‌ನಲ್ಲಿ ನಡೆದಿದೆ. ಸಹಾಯಕ ಜಿಲ್ಲಾಧಿಕಾರಿ ಕೆ.ದಿಲೀಪ್ ಕುಮಾರ್, ಗನ್ ಮ್ಯಾನ್ ರಂಜಿತ್ ಗಾಯಗೊಂಡವರು. ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಜಿಲ್ಲೆಯ ಮೇಲ್ಪರಂಬದಿಂದ ಕಾಸರಗೋಡಿಗೆ ವಾಪಸಾಗುತ್ತಿದ್ದ ವೇಳೆ ಸಂಚರಿಸುತ್ತಿದ್ದ ಬೊಲೆರೊ ವಾಹನ ಒಳ ರಸ್ತೆ ಮೂಲಕ ಇನ್ನೊಂದು ವಾಹನ ಬಂದುದರಿಂದ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ದುರ್ಘಟನೆ ನಡೆದಿದೆ ಎನ್ನಲಾಗಿದೆ. ಪರಿಸರ ವಾಸಿಗಳು ಗಾಯಾಳುಗಳನ್ನು ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲಪಿಸಿದ್ದು, ಪ್ರಾಥಮಿಕ ಚಿಕಿತ್ಸೆ ನೀಡಿ ಗಾಯಾಳುಗಳನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.










