ಮಂಗಳೂರು: ಬೆಂಗಳೂರಿನಲ್ಲಿ N B ಮಾಡೆಲ್ ಮ್ಯಾನೇಜ್ಮೆಂಟ್ ಸಂಸ್ಥೆ ಆಯೋಜಿಸಿದ್ದ ಮಿಸ್ಟರ್, ಮಿಸ್, ಟೀನ್ ಕರ್ನಾಟಕ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಟೀನ್ ವಿಭಾಗದಲ್ಲಿ ಮಂಗಳೂರು ಕಾವೂರಿನ ಕುಮಾರಿ ಈಶಿಕಾ ಶರತ್ ಶೆಟ್ಟಿ ಯವರು ಮೊದಲ ರನ್ನರ್ ಅಪ್ ಕಿರೀಟವನ್ನು ತಮ್ಮ ಮುಡಿಗೆ ಪಡೆದುಕೊಂಡಿದ್ದಾರೆ. ಅದಲ್ಲದೆ ಮಿಸ್ ಟೀನ್ ಟ್ಯಾಲೆಂಟೆಡ್ ಪ್ರಶಸ್ತಿ ಕೂಡ ತಮ್ಮದಾಗಿಸಿಕೊಂಡಿದ್ದಾರೆ.ಕಾವೂರು ನಿವಾಸಿಗಳಾದ ಶರತ್ ಶೆಟ್ಟಿ ಹಾಗೂ ಶ್ವೇತಾ ಶರತ್ ಶೆಟ್ಟಿ ದಂಪತಿಗಳ ಸುಪುತ್ರಿಯಾದ ಈಶಿಕಾ ನಗರದ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಂಗ ನಡೆಸುತ್ತಿದ್ದಾರೆ.
Author: main-admin
ಉಳ್ಳಾಲ : ಮೀನು ಸಾಗಾಟ ಮಾಡುವ ಪಿಕಪ್ ವಾಹನದ ಟಯರ್ ಬ್ಲ್ಯಾಸ್ಟ್ ಆದ ಕಾರಣ ಪಿಕಪ್ ಪಲ್ಟಿಯಾದ ಘಟನೆ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪಿಕಪ್ ವಾಹನ ಪಲ್ಟಿಯಾಗಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಮಲ್ಪೆ ಬಂದರಿನಿಂದ ಉಳ್ಳಾಲ ಆಯಿಲ್ ಮಿಲ್ಗೆ ಮೀನು ಸಾಗಾಟ ನಡೆಸುವ ವಾಹನ, ನೇತ್ರಾವತಿ ಸೇತುವೆ ತಲುಪುತ್ತಿದ್ದಂತೆ ಎದುರುಗಡೆಯ ಟಯರ್ ಸಿಡಿದಿದೆ. ಪರಿಣಾಮ ಒಂದು ದಿಕ್ಕಿನತ್ತ ತೆರಳಿದ ಪಿಕಪ್ ವಾಹನ ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆಯಲ್ಲಿ ಪಿಕಪ್ ವಾಹನ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಇನ್ನು ವಾಹನದಲ್ಲಿದ್ದ ಮೀನುಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಗಣೇಶೋತ್ಸವದ ವೇಳೆ ವ್ಯಕ್ತಿಯೊಬ್ಬ ಬುರ್ಖಾ ಧರಿಸಿ ಡ್ಯಾನ್ಸ್ ಮಾಡಿದ್ದು, ಇದರ ವಿಡಿಯೋ ವೈರಲ್ ಆದ ಬೆನ್ನಲ್ಲೇ ಅವನನ್ನು ಅರೆಸ್ಟ್ ಮಾಡಲಾಗಿದೆ. ತಮಿಳುನಾಡಿನ ವೆಲ್ಲೂರಿನಲ್ಲಿ ಈ ಘಟನೆ ನಡೆದಿದೆ. ಬುರ್ಖಾ ಧರಿಸಿ ವ್ಯಕ್ತಿ ಡಾನ್ಸ್ ವಿವಾದವನ್ನು ಹುಟ್ಟುಹಾಕಿದ ವೈರಲ್ ವೀಡಿಯೊದಲ್ಲಿ ವ್ಯಕ್ತಿಯೊಬ್ಬರು ಬುರ್ಖಾ ಧರಿಸಿ ಡಾನ್ಸ್ ಮಾಡುವುದನ್ನು ರೆಕಾರ್ಡ್ ಮಾಡಲಾಗಿದೆ. ಸೆಪ್ಟೆಂಬರ್ 21 ರಂದು, ಚೆನ್ನೈ ಪೊಲೀಸರು ವೀಡಿಯೊದ ಬಗ್ಗೆ ಹಲವಾರು ಔಪಚಾರಿಕ ದೂರುಗಳನ್ನು ಸ್ವೀಕರಿಸಿದ್ದರು. ತನಿಖೆ ಮುಂದುವರೆದಂತೆ, ಘಟನೆಗೆ ಸಂಬಂಧಿಸಿದಂತೆ ವಿರುತ್ತಂಪಟ್ಟು ನಿವಾಸಿ ಅರುಣ್ ಕುಮಾರ್ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ವಿವಿಧ ಸಮುದಾಯಗಳ ನಡುವೆ ವೈಷಮ್ಯ ಬಿತ್ತಲು ಯತ್ನಿಸಿದ ಆರೋಪ ಎದುರಿಸುತ್ತಿದ್ದರು ಎಂದು ಈ ವೇಳೆ ತಿಳಿದುಬಂದಿದೆ. ಶಾಂತಿ ಕದಡಲು ಅಥವಾ ಸಮುದಾಯಗಳ ನಡುವೆ ಉದ್ವಿಗ್ನತೆಯನ್ನು ಉಂಟುಮಾಡಲು ಯಾರಾದರೂ ಪ್ರಯತ್ನಿಸಿದರೆ ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಪೊಲೀಸ್ ಇಲಾಖೆ ಕಡಖ್ ವಾರ್ನಿಂಗ್ ನೀಡಿದ್ದಾರೆ.
ಪುತ್ತೂರು: ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ಬನ್ನೂರು ಸಮೀಪದ ಸನ್ನಿಧಿ ಲೇಔಟ್ ನಲ್ಲಿ ನಡೆದಿದೆ. ಖಾಸಗಿ ಕಾಲೇಜಿನಲ್ಲಿ ತೃತೀಯ ಬಿಸಿಎ ಓದುತ್ತಿದ್ದ ಕೀರ್ತಿಕಾ (19) ಮೃತ ಯುವತಿ.ಕೀರ್ತಿಕಾ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಮೃತರು ತಂದೆ, ತಾಯಿ, ಸಹೋದರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಬಂಟ್ವಾಳ : ಜಲ್ಲಿಕಲ್ಲು ಸಾಗಾಟದ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಬಂಟ್ವಾಳದ ಪಾಣೆಮಂಗಳೂರು ನೂತನ ಸೇತುವೆಯಲ್ಲಿ ನಡೆದಿದೆ. ಸಜೀಪ ಬೇಂಕ್ಯ ನಿವಾಸಿ ರಾಜ್‌ಕುಮಾರ್ ಮೃತಪಟ್ಟ ದುರ್ದೈವಿ. ರಾಜ್‌ಕುಮಾರ್ ವಾಮದಪದವಿನಿಂದ ಸಜೀಪ ತಮ್ಮ ಮನೆಗೆ ಬರುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿ ಡಿಕ್ಕಿಯಾಗಿದೆ. ರಭಸಕ್ಕೆ ಬೈಕ್ ಸವಾರ ರಾಜ್‌ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪುತ್ತೂರು : ಕಾರೊಂದು ಡಿಕ್ಕಿಹೊಡೆದ ಪರಿಣಾಮ ಶಾಲಾ ಬಾಲಕನೊಬ್ಬ ಸಾವನಪ್ಪಿದ ಘಟನೆ ಕೆಯ್ಯೂರು ಗ್ರಾಮದ ಮಾಡಾವು ಶಾಲೆಯ ಸಮೀಪ ಪುತ್ತೂರು-ಬೆಳ್ಳಾರೆ ರಸ್ತೆಯಲ್ಲಿ ನಡೆದಿದೆ. ಮೃತ ಬಾಲಕನನ್ನು ಮಾಡಾವು ಸಂತೋಷನಗರ ಸಮೀಪದ ಪಾತುಂಜ ನಿವಾಸಿ ಹಾರೀಶ್ ದಾರಿಮಿ ಮತ್ತು ಅಭಿದಾ ದಂಪತಿಯ ಪುತ್ರ ಮುಹಮ್ಮದ್ ಆದಿಲ್ (5) ಎಂದು ಗುರುತಿಸಲಾಗಿದೆ. ಮುಹಮ್ಮದ್ ಆದಿಲ್ ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಯುಕೆಜಿ ಮತ್ತು ಮಾಡಾವು ನುಸ್ರತುಲ್ ಇಸ್ಲಾಂ ಮದ್ರಸದಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿದ್ದ ವಿದ್ಯಾರ್ಥಿ. ಶನಿವಾರ ಮಧ್ಯಾಹ್ನ ಕೆಪಿಎಸ್ ಶಾಲೆಯಿಂದ ಮನೆಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಮುಹಮ್ಮದ್ ಆದಿಲ್ ರಸ್ತೆ ದಾಟುತ್ತಿದ್ದ ವೇಳೆ ಬೆಳ್ಳಾರೆ ಕಡೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಎಕೊ ಕಾರೊಂದು ಮಾಡಾವು ಶಾಲೆಯ ಸಮೀಪ ಡಿಕ್ಕಿ ಹೊಡೆದಿತ್ತು ಎಂದು ಗೊತ್ತಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಬಾಲಕನನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದು ದಾಖಲಿಸಲಾಗಿತ್ತು.
ಬೆಳ್ತಂಗಡಿ: ಮುಂಡಾಜೆಯ ಕಾಪುವಿನಲ್ಲಿರುವ ಅರಣ್ಯ ಇಲಾಖೆಯ ನರ್ಸರಿಗೆ ಕಾಡಾನೆಗಳು ನುಗ್ಗಿ ನರ್ಸರಿ ಗಿಡಗಳಿಗೆ ಅಪಾರ ಪ್ರಮಾಣದ ಹಾನಿ ಉಂಟು ಮಾಡಿರುವ ಘಟನೆ ನಡೆದಿದೆ. ಅರಣ್ಯ ಪ್ರದೇಶದಲ್ಲಿ ನಾಟಿ ಮಾಡಲು ಬೆಳೆಸಲಾಗಿದ್ದ ಹಲಸು, ಬಿದಿರು, ಗಾಳಿ, ಹೆಬ್ಬಲಸು, ಬಲಿಂದ್ರ ಪಾಲೆ ಜಾತಿಯ ಸುಮಾರು 3,200ಕ್ಕಿಂತ ಅಧಿಕ ಗಿಡಗಳನ್ನು ಆನೆಗಳು ತುಳಿದು ಸಂಪೂರ್ಣ ಧ್ವಂಸಗೊಳಿಸಿವೆ.ಇನ್ನು ಒಂದು ಮರಿಯಾನೆ ಸಹಿತ ಎರಡು ಆನೆಗಳು ದಾಳಿ ಇಟ್ಟಿರಬಹುದೆಂದು ಶಂಕಿಸಲಾಗಿದ್ದು, ಕೆಲವು ದಿನಗಳ ಹಿಂದೆ ಧರ್ಮಸ್ಥಳದ ನೇರ್ತನೆಯಲ್ಲಿ ಕಂಡುಬಂದಿದ್ದ ಕಾಡಾನೆಗಳು ಇಲ್ಲಿಯೂ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ಅರಣ್ಯ ಇಲಾಖೆಯ ಈ ನರ್ಸರಿ ರಾಷ್ಟ್ರೀಯ ಹೆದ್ದಾರಿಯಿಂದ 20 ಮೀ. ಅಂತರದಲ್ಲಿದ್ದು, ಆನೆಗಳು ಹೆದ್ದಾರಿ ಬದಿಯು ಸುಳಿದಾಡಿರುವ ಹೆಜ್ಜೆ ಗುರುತುಗಳು ಕಂಡುಬಂದಿವೆ.ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿಗಳು ಭೇಟಿ ನೋಡಿ ಪರಿಶೀಲನೆ ನಡೆಸಿದ್ದಾರೆ.
ಸಾಮಾನ್ಯವಾಗಿ ಜನರು ಮದುವೆಗಳಲ್ಲಿ ಸಂತೋಷದಿಂದ ಗನ್ ಹಿಡಿದು ಫೈರಿಂಗ್ ಮಾಡುತ್ತಾರೆ. ಕೆಲವೊಮ್ಮೆ ದುರದೃಷ್ಟವಶಾತ್ ಘಟನೆಗಳು ಸಂಭವಿಸುತ್ತವೆ. ಅಂತದ್ದೇ ಇಲ್ಲೊಂದು ಒಂದು ದುರ್ಘಟನೆ ಸಂಭವಿಸಿದೆ. ಮದುವೆ ಸಮಾರಂಭದಲ್ಲಿ ಶೇಖ್ ಕೈಯಲ್ಲಿ ಗನ್ ಹಿಡಿದು ಮನಬಂದಂತೆ ಗುಂಡು ಹಾರಿಸುತ್ತಿದ್ದ. ಇದೇ ವೇಳೆ ಬಂದೂಕುಧಾರಿ ಶೇಖ್ ಏಕಾಏಕಿ ಹಾರಿಸಿದ ಗುಂಡು ವರನ ಎದೆಗೆ ತಗುಲಿ ವರನು ಗಾಯಗೊಂಡು ನೀರಿನ ಮೇಲೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವರದಿಯ ಪ್ರಕಾರ, ಕಳೆದ ತಿಂಗಳು ಆಗಸ್ಟ್‌ನಲ್ಲಿ ಜೋರ್ಡಾನ್‌ನ ಮಾನ್ ಗವರ್ನರೇಟ್‌ನಲ್ಲಿ ನಡೆದ ಮದುವೆಯ ಪಾರ್ಟಿಯಲ್ಲಿ ಈ ಘಟನೆ ಸಂಭವಿಸಿದೆ. ಮೃತ ವರನನನ್ನು 20 ವರ್ಷದ ಆತನನ್ನು ಹಮ್ಜಾ ಸತ್ತಾಂ ಹಮೆದ್ ಅಲ್-ಫನಾತ್ಸಾ ಎಂದು ಗುರುತಿಸಲಾಗಿದೆ. ವರನ ಎದೆಗೆ ಗುಂಡು ತಗುಲಿದಾಗ ಸಮಾರಂಭದಲ್ಲಿ ಗೊಂದಲ ಉಂಟಾಯಿತು. ವರನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆತ ಸಾವನ್ನಪ್ಪಿದ್ದಾನೆ ಎಂದು ಘೋಷಿಸಲಾಯಿತು. ಹಮ್ಜಾ ಅವರು ಈಸ್ಟ್ ಅಮ್ಮನ್ ನಿರ್ದೇಶನಾಲಯದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು. ಗುಂಡು ಹಾರಿಸಿದ ಅತಿಥಿಯನ್ನು…
ಮಂಗಳೂರು : ಮಂಗಳೂರು ತಾಲೂಕಿನ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರು ಗ್ರಾಮದ ನಂದ್ಯಾ ಎಂಬಲ್ಲಿ ಗುರುಪುರ ನದಿಯಿಂದ ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಸ್ಥಳಕ್ಕೆ ಶನಿವಾರ ನಸುಕಿನ ವೇಳೆ ಬಜ್ಪೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ಸಂದರ್ಭ ಸ್ಥಳದಲ್ಲಿದ್ದ ಎರಡು ಟಿಪ್ಪರ್ ಲಾರಿಗಳ ಸಹಿತ 15 ದೋಣಿಗಳನ್ನು ವಶಕ್ಕೆ ಪಡೆದಿದ್ದಾರೆ. ಗುರುಪುರ ಫಲ್ಗುಣಿ ನದಿಯ ತಟದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟ ಮಾಡುತ್ತಿರುವ ಕುರಿತು ಬಂದ ಖಚಿತ ಮಾಹಿತಿಯ ಮೇರೆಗೆ ಬಜ್ಪೆ ಪೊಲೀಸರು ಬೆಳಗ್ಗಿನ ಜಾವ 4 ಗಂಟೆಯ ಸುಮಾರಿಗೆ ಈ ಕಾರ್ಯಾಚರಣೆ ಕೈಗೊಂಡಿದ್ದಾರೆ. ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಐಪಿಎಸ್ ಅವರ ಮಾರ್ಗದರ್ಶನದಂತೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಸಿದ್ದಾರ್ಥ ಗೋಯೆಲ್ ಅವರ ನೇತ್ರತ್ವದಲ್ಲಿ ಬಜ್ಪೆ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಕಾರ್ಯಾಚರಣೆಯ ವೇಳೆ ಸ್ಥಳದಲ್ಲಿದ್ದ ಆರೋಪಿಗಳು ಪರಾರಿಯಾಗಿದ್ದು, ಸ್ಥಳದಲ್ಲಿದ್ದ ತಲಾ 5ಲಕ್ಷ ರೂ. ಮೌಲ್ಯದ ಎರಡು ಟಿಪ್ಪರ್ ಲಾರಿಗಳು, ತಲಾ 50 ಸಾವಿರ…
ಬೆಳ್ತಂಗಡಿ : ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಘಟನೆ ಸೋಣಂದೂರಿನಲ್ಲಿ ನಡೆದಿದೆ.ಬೆಳ್ತಂಗಡಿ ತಾಲೂಕಿನ ಸೋಣಂದೂರು ಮುಂಡಾಡಿ ಮನೆ ನಿವಾಸಿ ಪ್ರಶಾಂತ್ ಮೃತ ಯುವಕ. ಅವರು ಸೆ 18ರಂದು ರಾತ್ರಿಯ ವೇಳೆ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದಾರೆ.










