ಮಂಗಳೂರು : ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಲಿ.ಗೆ ಮಂಜುನಾಥ ಖಾರ್ವಿ ಅವರು ನೀಡಿದ ಮೂರು ಚೆಕ್‌ಗಳು ಬೌನ್ಸ್ ಆದ ಹಿನ್ನೆಲೆಯಲ್ಲಿ ಒಟ್ಟು 88 ಲ.ರೂ. ಪಾವತಿಸುವಂತೆ ನ್ಯಾಯಾಲಯದ ತೀರ್ಪಿನಂತೆ ಹಣ ಮರುಪಾವತಿ ಮಾಡಲು ವಿಫಲನಾದ ಮಂಜುನಾಥ್ ಖಾರ್ವಿ ವಿರುದ್ಧ ವಾರಂಟ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸರು ಉಪ್ಪುಂದದ ಮನೆಯಲ್ಲಿ ಬಂಧಿಸಿ 5ನೇ ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಸೆಪ್ಟೆಂಬರ್ 20 ರಂದು ಹಾಜರು ಪಡಿಸಿದ ಸಂದರ್ಭದಲ್ಲಿ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಲಿ. ಸಂಸ್ಥೆಯಿಂದ ಮಂಜುನಾಥ ಖಾರ್ವಿ ಮೀನು ಖರೀದಿ ಮಾಡಿದ್ದರು. ಅಲ್ಲದೆ ಫೆಡರೇಷನ್‌ಗೆ ಮೀನು ಮಾರಾಟವಾದ ಕಮಿಷನ್ ಕೂಡ ಬಾಕಿ ಇರಿಸಿದ್ದರು. ಈ ಮೊತ್ತಕ್ಕೆ ಮೂರು ಚೆಕ್‌ಗಳನ್ನು ಫೆಡರೇಷನ್‌ಗೆ ನೀಡಿದ್ದರು. ಆ ಚೆಕ್‌ಗಳನ್ನು ಬ್ಯಾಂಕ್‌ಗೆ ನೀಡಿದಾಗ ಖಾತೆಯಲ್ಲಿ ಹಣವಿಲ್ಲದೆ ಅಮಾನತುಗೊಂಡಿದ್ದವು. ಇದಕ್ಕೆ ಸಂಬಂಧಿಸಿದ ನೋಟಿಸ್ ನೀಡದರೂ…
Author: main-admin
ಉಡುಪಿ: ಅಕ್ರಮ ಮದ್ಯ ಹಾಗೂ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವನನ್ನು ಉಡುಪಿ ಸೆನ್ ಪೊಲೀಸರು ಮಣಿಪಾಲ ಸಮೀಪದ ಹಯಗ್ರೀವ ನಗರ ಎಂಬಲ್ಲಿ ಬಂಧಿಸಿದ್ದಾರೆ. ಕಾರವಾರದ ಮೆಹಬೂಬ್ ಖಾಜಾ ಹುಸೇನ್ (21) ಬಂಧಿತ ಆರೋಪಿ. ಈತನಿಂದ 16 ಲೀಟರ್ 950 ಮಿ.ಲೀಟರ್ ಗೋವಾ ಮದ್ಯ, 302 ಗ್ರಾಂ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಮತ್ತು ಬುಲೆಟ್‌ನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಇವುಗಳ ಒಟ್ಟು ಮೌಲ್ಯ 1,17,670ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ : ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯೆಯ ಮನೆ ಮೇಲೆ ಸಿಡಿಲು ಬಡಿದ ಘಟನೆ ನಿನ್ನೆ ನಡೆದಿದೆ. ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯೆ ಸುಜಾತ ಸತೀಶ್ ಶಂಭೂರ್ ಇವರ ಮನಗೆ ಸೋಮವಾರದಂದು ಸಿಡಿಲು ಬಡಿದು ಅಪಾರ ನಷ್ಟ ಸಂಭವಿಸಿದೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು, ಪಿಡಿಓ. ಮಾಜಿ ಅಧ್ಯಕ್ಷೆ ಉಪಾಧ್ಯಕ್ಷರು ಪ್ರಮುಖರು ಮನೆಗೆ ಬೇಟಿ ನೀಡಿದ್ದಾರೆ
ಮಂಗಳೂರು: ಕೌನ್ ಬನೇಗಾ ಕರೋಡ್ ಪತಿಯಲ್ಲಿ 25 ಲಕ್ಷ ರೂ. ಗೆದ್ದಿರುವುದಾಗಿ ಹೇಳಿ ಮಹಿಳೆಗೆ 12.93 ಲಕ್ಷ ರೂ. ವಂಚಿಸಲಾಗಿದೆ. ಪುತ್ತೂರು ನಿವಾಸಿ ಝೀನತ್ ಬಾನು ಅವರಿಗೆ 2022ನೇ ಮೇ ತಿಂಗಳಲ್ಲಿ ಅಪರಿಚಿತ ವ್ಯಕ್ತಿ ವಾಟ್ಸಪ್ ಕರೆ ಮಾಡಿ ತಾನು ಕೌನ್ ಬನೇಗಾ ಕರೋಡ್ ಪತಿ ಎಂಬ ಕಾರ್ಯಕ್ರಮದಿಂದ ಕರೆ ಮಾಡುತ್ತಿರುವುದಾಗಿ ಹಾಗೂ 25 ಲಕ್ಷ ರೂ.ಲಾಟರಿ ಗೆದ್ದಿರುವುದಾಗಿ ತಿಳಿಸಿದ್ದಾನೆ. ಅನಂತರ ಆ ಹಣವನ್ನು ಪಡೆಯಲು ತೆರಿಗೆ ಹಾಗೂ ಇನ್ನಿತರ ಶುಲ್ಕಗಳ ಕಾರಣ ಹೇಳಿ 2022 ಮೇ ತಿಂಗಳಿನಿಂದ 2023 ಸೆಪ್ಟಂಬರ್13ರ ವರೆಗಿನ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ 12,93, 200 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ದೂರು ನೀಡಲಾಗಿದೆ.
ಮಂಗಳೂರು ನಗರದಲ್ಲಿ ಕೊಲೆ, ಕೊಲೆಯತ್ನ, ಬೆದರಿಕೆ, ಹಫ್ತಾ ವಸೂಲಿ ಹೀಗೆ ಹತ್ತಾರು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಕುಖ್ಯಾತ ರೌಡಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ನಟೋರಿಯಸ್ ರೌಡಿ ತಲ್ಲತ್ (39) ಎಂದು ಗುರುತಿಸಲಾಗಿದೆ. ಗೋವಾ, ಮುಂಬೈನಲ್ಲಿದ್ದು ಗ್ಯಾಂಗ್ ಕಟ್ಟಿಕೊಂಡು ಅಪರಾಧ ಕೃತ್ಯ ಎಸಗುತ್ತಿದ್ದ ನಟೋರಿಯಸ್ ತಲ್ಲತ್. ಕೊಲೆ, ಕೊಲೆಯತ್ನ, ಬೆದರಿಕೆ, ಹಫ್ತಾ ವಸೂಲಿ ಸೇರಿದಂತೆ ಹತ್ತಾರು ಪ್ರಕರಣಗಳಲ್ಲಿ ಭಾಗಿ ಯಾಗಿದ್ದ. ಇನ್ನು ಇತ ಗ್ಯಾಂಗ್ ಕಟ್ಟಿಕೊಂಡು ಹವಾ ಸೃಷ್ಠಿಸಲು ಯತ್ನಿಸುತ್ತಿದ್ದ. ಇದೀಗ ಮುಂಬೈನಿಂದ ತಲ್ಲತ್, ಊರಿಗೆ ಬಂದಿದ್ದ ಮಾಹಿತಿ ಪಡೆದಿದ್ದ ಸಿಸಿಬಿ ಪೊಲೀಸರು. ನಗರದ ಕೊಟ್ಟಾರ ಎಂಬಲ್ಲಿ ಬಂಧಿಸಿದ್ದಾರೆ.ಇನ್ನು ತಲ್ಲತ್ ವಿರುದ್ಧ ಮಂಗಳೂರು ಗ್ರಾಮಾಂತರ, ಕಂಕನಾಡಿ ನಗರ, ಕೊಣಾಜೆ, ಬರ್ಕೆ ಹಾಗೂ ಮುಂಬೈ ಸೇರಿ ಮುಂತಾದ ಕಡೆ ಇತನ ಮೇಲೆ ಪ್ರಕರಣಗಳು ದಾಖಲಾಗಿದೆ. ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಕೂಡ ಹಲ್ಲೆ ಪ್ರಕರಣ ಸೇರಿದಂತೆ 28 ಪ್ರಕರಣಗಳಲ್ಲಿ ತಲ್ಲತ್ ಭಾಗಿಯಾಗಿರುವ ಆರೋಪ ಕೇಳಿಬಂದಿತ್ತು.
ಅಯೋಧ್ಯೆ: ಅಯೋಧ್ಯೆಯ ರಾಮಮಂದಿರವನ್ನು ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿದ್ದ14 ವರ್ಷದ ಬಾಲಕನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ವರದಿಯ ಪ್ರಕಾರ, ಬರೇಲಿಯ ಫತೇಗಂಜ್ ಪೂರ್ವದ ಇಟೌರಿಯಾ ನಿವಾಸಿಯಾಗಿರುವ 8 ನೇ ತರಗತಿ ವಿದ್ಯಾರ್ಥಿ ಸೆಪ್ಟೆಂಬರ್ 19 ರಂದು ಸಂಜೆ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಸೆಪ್ಟೆಂಬರ್ 21 ರಂದು ರಾಮ ಮಂದಿರವನ್ನು ಸ್ಫೋಟಿಸಲಾಗುವುದು ಎಂದು ಹೇಳಿದ್ದಾನೆ. ಪೊಲೀಸರು ಆತನ ಹೆಸರು ವಿಳಾಸ ಕೇಳಿದಾಗ ಹೆದರಿ ಕರೆ ಡಿಸ್ ಕನೆಕ್ಟ್ ಮಾಡಿ, ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾನೆ. ಲಕ್ನೋ ಪೊಲೀಸರು ಮತ್ತು ಅಯೋಧ್ಯೆ ಪೊಲೀಸರು ಜಂಟಿಯಾಗಿ ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಿ ಬರೇಲಿಯ ಹುಡುಗನನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ವಿದ್ಯಾರ್ಥಿಯು ತನ್ನ ಸ್ನೇಹಿತನೊಂದಿಗೆ ಯೂಟ್ಯೂಬ್‌ನಲ್ಲಿ ರಾಮಮಂದಿರವನ್ನು ಬಾಂಬ್ ಸ್ಫೋಟಿಸುವುದಾಗಿ ಹೇಳಿದ್ದ ವೀಡಿಯೊವನ್ನು ವೀಕ್ಷಿಸಿದ್ದನು ಮತ್ತು ಪೊಲೀಸರಿಗೆ ತಿಳಿಸಲು ಯೋಚಿಸಿದನು ಎಂದು ತಿಳಿದುಬಂದಿದೆ. ಆತನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳೂರು: ಹಲವು ವರ್ಷಗಳಿಂದ ಮುಂಭಡ್ತಿಗೆ ಕಾಯುತ್ತಿದ್ದ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 16 ಪೊಲೀಸ್ ಸಹಾಯಕ ಉಪನೀರೀಕ್ಷಕರಿಗೆ ಪೊಲೀಸ್ ಉಪನಿರೀಕ್ಷಕರಾಗಿ ಮುಂಭಡ್ತಿ ನೀಡಿ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಆದೇಶ ಹೊರಡಿಸಿಸದ್ದಾರೆ. ಪಿಎಸ್ ಐಗಳಾಗಿ ಭಡ್ತಿ ಪಡೆದಿರುವವರನ್ನು ವಿವಿಧ ಠಾಣೆಗಳಿಗೆ ನಿಯೋಜಿಸಲಾಗಿದೆ. ಪಿಎಸ್ ಐ ಭಡ್ತಿಯಾಗಿರುವ ಕಂಕನಾಡಿ ನಗರ ಪೊಲೀಸ್ ಠಾಣೆಯ ನವೀನ ಮೂಡುಬಿದಿರೆಗೆ, ಕಂಕನಾಡಿ ನಗರ ಠಾಣೆಯ ಜನಾರ್ದನ ನಾಯ್ಕ ಸುರತ್ಕಲ್ ಪೊಲೀಸ್ ಠಾಣೆಗೆ, ಸಿಎಸ್‌ಪಿಯ ಆನಂದ ಬಿ. ಉತ್ತರ ಸಂಚಾರ ಠಾಣೆಗೆ, ಗ್ರಾಮಾಂತರ ಠಾಣೆಯ ವಿನೋದ್ ಕೊಣಾಜೆ ಠಾಣೆಗೆ, ಪಣಂಬೂರು ಠಾಣೆಯ ಈಶ್ವರ ಸ್ವಾಮಿ ಕದ್ರಿ ಸಂಚಾರ ಠಾಣೆಗೆ, ಕದ್ರಿ ಠಾಣೆಯ ಶಾಂತಪ್ಪ ಜಿ. ಕಂಕನಾಡಿ ನಗರ ಠಾಣೆಗೆ, ಸಂಚಾರ ಪಶ್ಚಿಮ ಠಾಣೆಯ ಕೃಷ್ಣಪ್ಪ ಮೂಡುಬಿದಿರೆ ಠಾಣೆಗೆ, ಉತ್ತರ ಠಾಣೆಯ ಶಿವಪ್ಪ ಗೌಡ ಅದೇ ಠಾಣೆಗೆ, ಉರ್ವ ಠಾಣೆಯ ಉಲ್ಲಾಸ್ ಪಾಂಡುರಂಗ ಬರ್ಕೆ ಠಾಣೆಗೆ, ಉತ್ತರ ಠಾಣೆಯ ಓಂ ದಾಸ್ ಸೆನ್ ಠಾಣೆಗೆ, ಐಎಸ್‌ಡಿಯ ರವಳೇಂದ್ರ ಗ್ರಾಮಾಂತರ…
ಬೆಂಗಳೂರು: ಸರ್ಕಾರಿ ಸಭೆ ಸಮಾರಂಭಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲಿ ನಿಷೇಧಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ (ಸಿಎಸ್) ಅವರು ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯಾದ್ಯಂತ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವಂತಹ ಯಾವುದೇ ಸಂಸ್ಥೆಗಳ ವತಿಯಿಂದ ಆಯೋಜಿಸುವ ಸಭೆ-ಸಮಾರಂಭಗಳಲ್ಲಿ ಏಕಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲಿನ (Single use packaged water bottles) ನೀರಿನ ಬಳಕೆ/ಸರಬರಾಜು ಮಾಡುವುದನ್ನು ನಿಷೇಧಿಸಿ ಕೆಲ ವರ್ಷಗಳ ಹಿಂದೆಯೇ ಆದೇಶಿಸಲಾಗಿತ್ತು. ಇಂತಹ ಸಭೆ-ಸಮಾರಂಭಗಳಲ್ಲಿ ಕುಡಿಯುವ ನೀರನ್ನು ಸಂದರ್ಭ ಅನುಸಾರ ಶುಚಿತ್ವ ರೀತಿಯಲ್ಲಿ ಗ್ಲಾಸ್, ಸ್ಟೀಲ್ (ಪ್ಲಾಸ್ಟಿಕ್ ಅಲ್ಲದ) ಲೋಟಗಳಲ್ಲಿ ಸರಬರಾಜು ಮಾಡಲು ಕ್ರಮವಹಿಸುವಂತೆ ಸೂಚಿಸಿಲಾಗಿತ್ತು. ಸೂಕ್ತ ಸಾಮೂಹಿಕ ಕುಡಿಯುವ ನೀರು ವಿತರಣಾ ವ್ಯವಸ್ಥೆಯನ್ನು (Common drinking water dispensing system) ಏರ್ಪಡಿಸುವಂತೆ ಸೂಚಿಸಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಅಥವಾ ಸರ್ಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವಂತಹ ಯಾವುದೇ ಸಂಸ್ಥೆಗಳಿಂದ ಆಯೋಜಿಸುವ ಸಭೆ-ಸಮಾರಂಭಗಳಲ್ಲಿ ಮೇಲಿನ…
ಬೆಂಗಳೂರು: ಜನರ ಆರೋಗ್ಯ ಮೇಲೆ ಪರಿಣಾಮ ಬೀರುವಂತ ಹುಕ್ಕಾಬಾರ್ ಗಳನ್ನು ರಾಜ್ಯಾಧ್ಯಂತ ನಿಷೇಧಿಸೋ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಈ ನಿಷೇಧ ಆದೇಶವನ್ನು ಶೀಘ್ರವೇ ಜಾರಿಗೊಳಿಸೋದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಇಂದು ಈ ಕುರಿತಂತೆ ವಿಧಾನಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವ ಬಿ.ನಾಗೇಂದ್ರ ನೇತೃತ್ವದಲ್ಲಿ ಮಹತ್ವದ ಸಭೆಯನ್ನು ನಡೆಸಲಾಯಿತು. ಇಂತಹ ಸಭೆಯಲ್ಲಿ ರಾಜ್ಯಾಧ್ಯಂತ ಹುಕ್ಕಾಬಾರ್ ನಿಷೇಧಿಸೋ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಚಿವ ದಿನೇಶ್ ಗುಂಡೂರಾವ್ ಅವರು, ರಾಜ್ಯದ ಯುವಜನತೆ ಹಾಗೂ ಮಕ್ಕಳ ಮೇಲೆ ದಿನೇ ದಿನೇ ಹುಕ್ಕಾಬಾರ್ ಗಳು ವ್ಯಾಪಕವಾಗಿ ಪರಿಣಾಮ ಬೀರುತ್ತಿದ್ದಾವೆ. ಇಂತಹ ಆರೋಗ್ಯಕ್ಕೆ ಮಾರಕವಾಗುವಂತ ಹುಕ್ಕಾಬಾರ್ ಗಳನ್ನು ರಾಜ್ಯದಲ್ಲಿ ಶಾಶ್ವತವಾಗಿ ಕಡಿವಾಣ ಹಾಕೋ ನಿಟ್ಟಿನಲ್ಲಿ ನಿಷೇಧಿಸೋ ನಿರ್ಧಾರ ನಮ್ಮ ಮುಂದಿರುವ ಏಕೈಕ ಮಾರ್ಗವಾಗಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸೋದಕ್ಕೆ ಅಧಿಕಾರಿಗಳಿಂದ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಲಾಯಿತು ಎಂದು ಅವರು ಹೇಳಿದರು. ರಾಜ್ಯದಲ್ಲಿ…
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಮುಂದಿನ ವರ್ಷದ ಯುಜಿಸಿ ಎನ್ ಇ ಟಿ ಮತ್ತು ಸಿಯುಇಟಿ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಿದೆ. ಈ ಬಗ್ಗೆ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಅಧ್ಯಕ್ಷ ಎಂ.ಜಗದೀಶ್ ಕುಮಾರ್ ಮಾಹಿತಿ ನೀಡಿದ್ದಾರೆ. ಎನ್ಟಿಎ ನಡೆಸಲಿರುವ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. . 2024-25ನೇ ಸಾಲಿನ ಸಿಯುಇಟಿ ಪಿಜಿ ಪರೀಕ್ಷೆ ಮಾರ್ಚ್ 11 ರಿಂದ 28 ರವರೆಗೆ ನಡೆಯಲಿದೆ ಎಂದಿದ್ದಾರೆ. 2024-25ನೇ ಶೈಕ್ಷಣಿಕ ವರ್ಷದ ಸಿಯುಇಟಿ -ಯುಜಿ ಪರೀಕ್ಷೆಯು ಮೇ 15ರಿಂದ 31ರವರೆಗೆ ನಡೆಯಲಿದೆ. ಕೊನೆಯ ಪರೀಕ್ಷೆ ನಡೆದ ನಂತರದ ಮೂರು ವಾರಗಳ ಒಳಗಾಗಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಯುಜಿಸಿ ಮುಖ್ಯಸ್ಥ ಎಂ.ಜಗದೀಶ್ ಕುಮಾರ್ ತಿಳಿಸಿದ್ದಾರೆ. ಸಿಯುಇಟಿ-ಪಿಜಿ ಪರೀಕ್ಷೆಯು ಮಾರ್ಚ್ 11ರಿಂದ 28ರವರೆಗೆ ನಡೆಯಲಿದೆ. ರಾಷ್ಟ್ರೀಯ ಅರ್ಹತಾ ಪರೀಕ್ಷೆಯು ಜೂನ್ 10ರಿಂದ 21ರವರೆಗೆ ನಡೆಯಲಿದೆ ಎಂದು ತಿಳಿಸಿದರು.ಜೂನ್ ತಿಂಗಳಲ್ಲಿ ಈ ಪರೀಕ್ಷೆ 10 ರಿಂದ 21 ರವರೆಗೆ ನಡೆಯಲಿದೆ. ಇದರ ವಿವರಗಳನ್ನು ಅಧಿಕೃತ ವೆಬ್ಸೈಟ್ ugcnet.nta.nic.in ನಲ್ಲಿ ನೋಡಬಹುದು. ಕಾಲೇಜುಗಳು…










