ಉಳ್ಳಾಲ : ತಲಪಾಡಿ ಗ್ರಾಮದ ತಚ್ಚಣಿಯ ವಿಲೇಜ್ ಬಾರ್ ಬಳಿ ರಸ್ತೆ ಬದಿಯಲ್ಲಿ ಶುಕ್ರವಾರ ಸಂಜೆ ಮೋಟಾರು ಸೈಕಲಿನಲ್ಲಿ ಕುಳಿತು ನಿಷೇಧಿತ ಮಾದಕವಸ್ತು ಎಂಡಿಎಂಎಯನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಯುವಕರ ಕುರಿತಾಗಿ ಖಚಿತ ಮಾಹಿತಿ ಮೇರೆಗೆ ಉಳ್ಳಾಲ ಠಾಣಾ ನಿರೀಕ್ಷಕರ ಮಾರ್ಗದರ್ಶನದಂತೆ ದಾಳಿ ನಡೆಸಿದ ಉಪ ನಿರೀಕ್ಷಕ ಧನ್ ರಾಜ್ ಹಾಗೂ ತಂಡ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ತ್ರಿಶೂರ್ ವಡಂಕಚೇರ್ ನ ಶೇಖ್ ತನ್ಸೀರ್(20)ಹಾಗೂ ವಡೆಗೆರ ಅಂಜೇರಿಯ ಸಾಯಿಕೃಷ್ಣ(19) ಬಂಧಿತ ಆರೋಪಿಗಳು. ಆರೋಪಿಗಳಿಂದ ಸುಮಾರು 2.77ಗ್ರಾಂ ತೂಕದ ಎಂಡಿಎಂಎ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ವಿವೊ ಮೊಬೈಲ್ ಫೋನ್, ಯಮಹಾ ಮೋಟಾರ್ ಸೈಕಲ್ ಸೇರಿದಂತೆ ಸುಮಾರು 50ಸಾವಿರ ರೂ. ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದು ಆರೋಪಿಗಳ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Author: main-admin
ಬಂಟ್ವಾಳ: ರಾಜಕೀಯ ಜಿದ್ದಾಜಿದ್ದಿ ಮತ್ತು ಕೋಮು ಸೂಕ್ಮ್ಮಾ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ಶಿವಕುಮಾರ್ ಮತ್ತು ನಗರ ಠಾಣೆಗೆ ಅನಂತ ಪದ್ಮನಾಭ ಅವರನ್ನು ಪೋಲೀಸ್ ಇನ್ಸ್ ಪೆಕ್ಟರ್ ಆಗಿ ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ. ಬೆಳ್ತಂಗಡಿ ವೃತ್ತ ನಿರೀಕ್ಷಕರಾಗಿದ್ದ ಇವರನ್ನು ಹಲವು ತಿಂಗಳಿನಿಂದ ಖಾಲಿಯಾಗಿದ್ದ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ಪೋಲಿಸ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಿದೆ. ರಫ್ ಎಂಡ್ ಟಫ್ ಅಧಿಕಾರಿಯಾಗಿದ್ದ ಟಿ.ಡಿ.ನಾಗರಾಜ್ ಅವರ ಅವರನ್ನು ಕಾರ್ಕಳಕ್ಕೆ ವರ್ಗಾವಣೆಗೊಂಡ ಬಳಿಕ ಗ್ರಾಮಾಂತರ ಪೋಲೀಸ್ ಠಾಣೆಗೆ ಇನ್ಸ್ ಪೆಕ್ಟರ್ ಇಲ್ಲದೆ ಖಾಲಿಯಾಗಿತ್ತು. ಇವರ ಜೊತೆಗೆ ಬಂಟ್ವಾಳ ನಗರ ಪೋಲೀಸ್ ಠಾಣೆ ಯ ಪೋಲಿಸ್ ಇನ್ಸ್ ಪೆಕ್ಟರ್ ಆಗಿ ಲೋಕಾಯುಕ್ತ ಇನ್ಸ್ ಪೆಕ್ಟರ್ ಆಗಿದ್ದ ಆನಂತಪದ್ಮನಾಭ ಅವರಿಗೆ ಅದೇಶ ನೀಡಿದೆ. ಇವರು ಈ ಹಿಂದೆ ಕದ್ರಿ ಪೋಲಿಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿಯೂ ಕರ್ತವ್ಯ ನಿರ್ವಹಿಸಿದ ಅನುಭವಿಯಾಗಿದ್ದಾರೆ. ಇದೀಗ ವಿವೇಕಾನಂದ ಅವರು ವರ್ಗಾವಣೆ…
ವಿಟ್ಲ: ಆಟೋ ರಿಕ್ಷಾವೊಂದರಲ್ಲಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಗಾಂಜಾ ಸಹಿತ ಆರೋಪಿಯೋರ್ವರನ್ನು ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ ವಿಟ್ಲ ಠಾಣಾ ಪೊಲೀಸರು ಬಂಧಿಸಿರುವ ಘಟನೆ ಸೆ.16 ರಂದು ನಡೆದಿದೆ. ಸುಳ್ಯ ಕಸಬಾ ಗ್ರಾಮ ಸುಳ್ಯ ನಿವಾಸಿಯಾದ ಎನ್ ಎಂ ಮಹಮ್ಮದ್ ಕಲಂದರ್ ಶಾ (36 ವ.) ಬಂಧಿತ ಆರೋಪಿ. ವಿಟ್ಲ ಠಾಣಾ ಪೊಲೀಸರು ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಆ ದಾರಿಯಾಗಿ ಬಂದ ಆಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಆಟೋ ರಿಕ್ಷಾದೊಳಗೆ 6.110 ಕೆ ಜಿ. ಗಾಂಜಾ ಪತ್ತೆಯಾಗಿದೆ. ಕೂಡಲೇ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಂಧಿತ ಆರೋಪಿಯಿಂದ 1,35,000 ರೂಪಾಯಿ ಮೌಲ್ಯದ 6.110 ಕೆ ಜಿ. ಗಾಂಜಾ ಸಹಿತ 1,60,000 ರೂಪಾಯಿ ಮೌಲ್ಯದ ಆಟೋ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿಯ ವಿರುದ್ಧ ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಾಗಿದೆ.
ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಯಾಗಿದೆ. ಬರೋಬ್ಬರಿ 192 ಇನ್ಸ್ ಪೆಕ್ಟರ್ ಗಳ ವರ್ಗಾವಣೆಯಾಗಿದ್ದು,ಇತ್ತೀಚೆಗೆ ನೂರಕ್ಕು ಹೆಚ್ಚು ಟ್ರ್ಯಾನ್ಸ್ಫರ್ ಮಾಡಿ ಸರ್ಕಾರ ಆದೇಶ ಮಾಡಿತ್ತು.ಇದೀಗ ರಾಜ್ಯಾದ್ಯಂತ 192 ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಿ ಆದೇಶ ಮಾಡಿದೆ. ಇದರ ಜೊತೆಗೆ 19 ಡಿವೈಎಸ್ಪಿಗಳ ವರ್ಗಾವಣೆ ಸಹ ವರ್ಗಾವಣೆಯಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಸೋಮವಾರದ ಬದಲಾಗಿ ಮಂಗಳವಾರ ರಜೆ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.ಕರ್ನಾಟಕದಲ್ಲಿ ಗಣೇಶ ಹಬ್ಬದ ಆಚರಣೆಯ ದಿನದ ಬಗ್ಗೆ ಗೊಂದಲಗಳಿದ್ದು, ಹಲವೆಡೆ ಸೋಮವಾರ (ಸೆ.18) ದಂದು ಹಬ್ಬ ಆಚರಿಸುತ್ತಿದ್ದರೆ, ಮತ್ತೆ ಕೆಲವೆಡೆ ಮಂಗಳವಾರ (ಸೆ.19) ದಂದು ಆಚರಿಸಲಾಗುತ್ತಿದೆ. ಹಾಗಾಗಿ ಸರ್ಕಾರ ನಿಗದಿ ಪಡಿಸಿದ ರಜೆಯು ಸೋಮವಾರ ಎಂದಿದೆ.ಇನ್ನು ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಹಬ್ಬ ಆಚರಿಸುವ ಕಾರಣ ಅದೇ ದಿನ ಸರ್ಕಾರಿ ರಜೆ ನೀಡಬೇಕು ಒತ್ತಡ ಹಾಕಲಾಗಿದ್ದು, ಈ ಬಗ್ಗೆ ಜನಪ್ರತಿನಿಧಿಗಳು ಕೂಡಾ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಯವರಿಗೆ ಸೆ.19ರಂದು ರಜೆ ನೀಡಲು ಪತ್ರ ಮೂಲಕ ತಿಳಿಸಿದ್ದರು. ಇದೀಗ ಸರ್ಕಾರದ ಅಧಿಕೃತ ಆದೇಶ ಬಂದಿದೆ.
ಬಂಟ್ವಾಳ:ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಪೊಲೀಸರ ಮಾನವೀಯ ಗುಣಗಳ ದರ್ಶವಾಗಿದ್ದು ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯ ಔಷಧೀಯ ಖರ್ಚಿಗಾಗಿ ಧನ ಸಹಾಯ ಮಾಡಿದ್ದಾರೆ. ಠಾಣೆಯ ಕೆಲಸಕ್ಕಾಗಿ ಬರುತ್ತಿದ್ದ ವನಿತಾ ಎಂಬ ಮಹಿಳೆಗೆ ಬಂಟ್ವಾಳ ಗ್ರಾಮಾಂತರ ಎಸ್.ಐ.ಹರೀಶ್ ನೇತ್ರತ್ವದಲ್ಲಿ ಸುಮಾರು ರೂ. 27,000 ಸಾವಿರ ನಗದು ಹಣವನ್ನು ನೀಡಿದ್ದಾರೆ. ಬಂಟ್ವಾಳ ಪೇಟೆ ನಿವಾಸಿಯಾಗಿರುವ ವನಿತ ಅವರು ತೀರಾ ಬಡತನದ ಕುಟುಂಬದಲ್ಲಿ ಜೀವನ ಮಾಡುವವರು. ಅವರು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಶುಚಿತ್ವದ ಕೆಲಸಕ್ಕಾಗಿ ಬರುತ್ತಿದ್ದರು. ಆದರೆ ಇತ್ತೀಚೆಗೆ ಮನೆಯ ಸಮೀಪ ಬಿದ್ದ ಕೈಯ ಮೂಳೆ ಮುರಿತಕ್ಕೆ ಒಳಗಾಗಿ ಕೆಲಸಕ್ಕೆ ಬರಲು ಅಸಾಧ್ಯವಾಗಿತ್ತು. ತೀರಾ ಬಡತನದಲ್ಲಿರುವ ವನಿತಾ ಅವರಿಗೆ ಕೆಲಸ ಮಾಡಿದರೆ ಮೂರು ಹೊತ್ತು ಊಟ ಎಂಬ ಪರಿಸ್ಥಿತಿ .ಹಾಗಾಗಿ ಕಳೆದ ಕೆಲವು ತಿಂಗಳ ಕಾಲ ದುಡಿಮೆ ಇಲ್ಲದೆ ಕಷ್ಟದ ಸ್ಥಿತಿಯಲ್ಲಿರುವ ವಿಚಾರ ಪೋಲೀಸರ ಗಮನಕ್ಕೆ ಬಂದಿತು. ಇವರ ಕಷ್ಟವನ್ನು ತಿಳಿದ ಬಂಟ್ವಾಳ ಪೋಲೀಸರು ವನಿತಾ ಅವರ ಮನೆಯ ಖರ್ಚಿಗಾಗಿ ಠಾಣೆಯಲ್ಲಿ ಸಿಬ್ಬಂದಿಗಳಿಂದ ಒಟ್ಟುಗೂಡಿಸಿದ ನಗದು…
ಮಂಗಳೂರು: ತಾಯಿ ಮತ್ತು ಮಗಳ ಮೃತದೇಹ ಗಡಿ ಭಾಗದ ಕಾಸರಗೋಡು ಜಿಲ್ಲೆಯ ಉದುಮ ಸಮೀಪದ ಕಳ್ನಾಡ್ ಬಾವಿಯೊಂದರಲ್ಲಿ ಶುಕ್ರವಾರ ಮಧ್ಯಾಹ್ನ ಪತ್ತೆಯಾಗಿದೆ. ಮೃತರನ್ನು ಕಳ್ನಾಡ್ ಅರಮಂಗಾನದ ತಾಜುದ್ದೀನ್ ಎಂಬವರ ಪತ್ನಿ ರುಬೀನಾ (33) ಮತ್ತು ಪುತ್ರಿ ಹನಾನ್ ಮರಿಯಾ (5) ಎಂದು ಗುರುತಿಸಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ ಇಬ್ಬರು ನಾಪತ್ತೆಯಾಗಿದ್ದು, ಹುಡುಕಾಡಿದಾಗ ಮನೆ ಸಮೀಪದ ಬಾವಿಯಲ್ಲಿ ಮೃತದೇಹ ಕಂಡು ಬಂದಿದೆ. ಆತ್ಮಹತ್ಯೆ ಎಂದು ಶಂಕಿಸಲಾಗಿದ್ದು, ಮೇಲ್ಪರಂಬ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ. ಪತಿ ತಾಜುದ್ದೀನ್ ಗಲ್ಫ್ ಉದ್ಯೋಗಿ ಎನ್ನಲಾಗಿದೆ. ಪೊಲೀಸರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದರು. ಮೃತದೇಹಗಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಉದ್ಯಮಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿಯಿಂದ ಕೋಟಿ ಕೋಟಿ ಹಣ ಪಡೆದು ವಂಚಿಸಿರುವ ಪ್ರಕರಣದಲ್ಲಿ ಹೀಗಾಗಲೇ ಸಿಸಿಬಿ ವಿಚಾರಣೆ ಎದುರಿಸುತ್ತಿರುವ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರ ಬಣ್ಣ ಬಗೆದಷ್ಟು ಬಯಲಾಗುತ್ತಿದೆ.ಕಳೆದ ಎಪ್ರಿಲ್ 24 ರಂದು ಚೈತ್ರಾ ಎಂಡ್ ಗ್ಯಾಂಗ್ ಉದ್ಯಮಿ ಮಂಗಮ್ಮನಪಾಳ್ಯದಲ್ಲಿರುವ ಗೋವಿಂದ ಪೂಜಾರಿ ಕಚೇರಿಗೆ ಭೇಟಿ ನೀಡ್ತಾರೆ. ಈ ವೇಳೆ ಹಣ ವಾಪಸ್ ಕೊಡೋ ಬಗ್ಗೆ ಮಾತುಕಥೆ ನಡೆದಿದೆ. ಆ ಮಾತು ಕಥೆಯ ಸಿಸಿಟಿವಿ ವಿಡಿಯೋ ಲಭ್ಯವಾಗಿದೆ. ಈ ವೇಳೆ ಗೋವಿಂದಾ ಬಾಬು ಕಚೇರಿಯಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ಬ್ಯಾಗ್ ನಿಂದ ವಿಷದ ಬಾಟಲ್ ತೆಗೆದು ಈ ವೇಳೆ ಗಗನ್ ಕಡೂರು ನಾಟಕ ಆಡಿದ್ದಾನೆ. ವಿಷ ಕುಡಿದು ಗಗನ್ ಕಡೂರು ಕುಸಿದು ಬೀಳ್ತಾನೆ. ಅಲ್ಲೆ ಇದ್ದಾ ಚೈತ್ರಾ ಕೂಡ ಅಯ್ಯೋ ದೇವ್ರೇ ಎಂದು ನಾಟಕ ಮಾಡ್ತಾಳೆ. ಮೊದಲೇ ಪ್ಲ್ಯಾನ್ ಮಾಡಿಕೊಂಡು ಈ ಟೀಂ ಬಂದಿತ್ತು. ಎಂದು ಹೇಳಲಾಗಿದೆ. ಜೊತೆಗೆ ಚೈತ್ರಾ ಅವರು ಕೂಡ ಜ್ಯೂಸ್ ಕುಡಿದು ವಿಷ…
ಕೊಟ್ಟಿಗೆಹಾರ: ಕಳೆದ ಕೆಲ ದಿನಗಳಿಂದ ನಿರಂತರ ಸುರಿಯುತಿದ್ದ ಮಳೆಯಿಂದ ಚಾರ್ಮಾಡಿ ಘಾಟಿಯಲ್ಲಿ ದಟ್ಟ ಮಂಜು ಆವರಿಸಿಕೊಂಡಿದ್ದು ಪರಿಣಾಮ ಲಾರಿಯೊಂದು ನೂರು ಅಡಿ ಪ್ರಪಾತಕ್ಕೆ ಉರುಳಿಬಿದ್ದ ಘಟನೆ ಚಾರ್ಮಾಡಿ ಘಾಟಿಯ ಸೋಮನಕಾಡು ಬಳಿ ಶುಕ್ರವಾರ ರಾತ್ರಿ ಸಂಭವಿಸಿದೆ. ಶುಕ್ರವಾರ ರಾತ್ರಿ ಪುತ್ತೂರಿನಿಂದ ಚಿತ್ರದುರ್ಗಕ್ಕೆ ನೀರಿನ ಬಾಟಲ್ ತುಂಬಿದ ಲಾರಿ ಚಾರ್ಮಾಡಿ ಘಾಟಿಯಲ್ಲಿ ಆವರಿಸಿದ ದಟ್ಟ ಮಂಜಿನಿಂದ ದಾರಿ ಕಾಣದೆ 100 ಅಡಿ ಪ್ರಪಾತಕ್ಕೆ ಬಿದ್ದಿದೆ ಅದೃಷ್ಟವಶಾತ್ ಲಾರಿ ಚಾಲಕ ಹಾಗೂ ಕ್ಲೀನರ್ ಗೆ ಯಾವುದೇ ಪ್ರಾಣಪಾಯವಿಲ್ಲದೆ ಪಾರಾಗಿದ್ದಾರೆ.
ಮಂಗಳೂರು : ದ.ಕ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಗಣೇಶೋತ್ಸವ ಶಾಂತಿಯುತ ವಾಗಿ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸುವ ನಿಟ್ಟಿನಲ್ಲಿ ಸಕಲ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಂಘಟ ಕರಿಗೆ ನಿರ್ದೇಶನ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಗಣೇಶೋತ್ಸವ ಸಂದರ್ಭ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಅಧಿಕಾರಿಗಳು ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಪಿಒಪಿಯಿಂದ ತಯಾರಿಸಿದ ಗಣೇಶನ ಮೂರ್ತಿಗಳನ್ನು ಯಾವುದೇ ಕಾರಣಕ್ಕೂ ಬಳಸಲು ಅವಕಾಶವಿಲ್ಲ. ಉಳಿದಂತೆ ಶಬ್ದ ಮಾಲಿನ್ಯವಾಗದಂತೆ ಕ್ರಮ ವಹಿಸುವುದು, ಗಣೇಶೋತ್ಸವದ ಸಂದರ್ಭ ಹೆಚ್ಚು ಜನ ಸೇರುವಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ, ಆ್ಯಂಬುಲೆನ್ಸ್ ಗಳು ಸನ್ನದ್ಧವಾಗಿರುವಂತೆ ಹಾಗೂ ವಿಸರ್ಜನೆ ಸಂದರ್ಭ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಗಮನ ಹರಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಈ ಸಂದರ್ಭ ಪ್ರತಿಕ್ರಿಯಿಸಿ, ಜಿಲ್ಲೆ ಯಲ್ಲಿ ಸಾರ್ವಜನಿಕವಾಗಿ ಗರಿಷ್ಠ 6.5 ಅಡಿ ಎತ್ತರದವರೆಗಿನ ಗಣೇಶ ಮೂರ್ತಿಗಳನ್ನು ಪೂಜಿಸಲಾಗುತ್ತಿದ್ದು, ಮಣ್ಣಿನಿಂದಲೇ…










