Author: main-admin

ಬೆಳ್ತಂಗಡಿಯ ಚಾರ್ಮಾಡಿಯಲ್ಲಿ ನೈತಿಕ ಪೊಲೀಸ್ ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ದಿನೇಶ್, ಸಚಿನ್, ನಿತೇಶ್ ತೋಟಂತಾಡಿ, ಅವಿನಾಶ್ ಯಾನೆ ರಾಹುಲ್ ಬಂಧಿತ ಆರೋಪಿಗಳು. ಕಕ್ಕಿಂಜೆ ನಿವಾಸಿ ಮೊಹಮ್ಮದ್ ಜಾಹೀರ್ ಎಂಬುವರ ಮೇಲೆ ಹಲ್ಲೆ ನಡೆಸಿದ ಬಗ್ಗೆ ಆರೋಪಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಸೋಮವಾರ ಊರಿಗೆ ಬಸ್ ಲ್ಲಿ ಬರುತ್ತಿದ್ದ ವೇಳೆ ಪರಿಚಯದ ಯುವತಿಯೊಂದಿಗೆ ಮೊಹಮ್ಮದ್ ಜಾಹೀರ್ ಮಾತನಾಡಿದ್ದ. ಯುವತಿ ಬೆಳ್ತಂಗಡಿಯಲ್ಲಿ ಇಳಿದು ಮನೆಗೆ ತೆರಳಿದ್ದು, ಜಾಹೀರ್ ಯುವತಿಯೊಂದಿಗೆ ಮಾತನಾಡಿದ ವಿಚಾರ ತಿಳಿದ ಯುವಕರ ತಂಡ ಬಸ್ ನಿಂದ ಆತನನ್ನು ಕೆಳಗೆ ಇಳಿಸಿ ಹಲ್ಲೆ ಮಾಡಿದೆ ಎಂದು ಆರೋಪಿಸಲಾಗಿದೆ. ಜಾಹೀರ್ ಬೆಳ್ತಂಗಡಿ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Read More

ಚೆನ್ನೈ: ದಾರುಣ ಘಟನೆಯೊಂದರಲ್ಲಿ ಐವರು ಇಂದು ಚೆನ್ನೈನ ದೇವಸ್ಥಾನದ ಬಳಿಯ ಸಾರ್ವಜನಿಕ ಕಲ್ಯಾಣಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಂಗನಲ್ಲೂರಿನ ಧರ್ಮಲಿಂಗೇಶ್ವರ ದೇವಸ್ಥಾನದ ಭಕ್ತರು ಪಂಗುನಿ ಆಚರಣೆಯ ಅಂಗವಾಗಿ ಧಾರ್ಮಿಕ ಕ್ರಿಯೆಗಳಿಗಾಗಿ ತೊಟ್ಟಿಯಲ್ಲಿ ಜಮಾಯಿಸಿದಾಗ ಬೆಳಿಗ್ಗೆ 10.30 ರ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ. ‘ಮೊದಲಿಗೆ ಒಬ್ಬರು ಜಾರಿಬಿದ್ದರು, ಮತ್ತು ನಂತರ ಅವರನ್ನು ರಕ್ಷಿಸಲು ಪ್ರಯತ್ನಿಸಿದವರೂ ನೀರಿನಲ್ಲಿ ಮುಳುಗಿದರು. ಪ್ರೋಟೋಕಾಲ್ಗಳನ್ನು ಅನುಸರಿಸಲಾಗಿದೆಯೇ ಎಂಬುದರ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ’ ಎಂದು ಚೆನ್ನೈ ಪೊಲೀಸ್ ಕಮಿಷನರ್ ಶಂಕರ್ ಜಿವಾಲ್ ಹೇಳಿದ್ದಾರೆ. ಪೊಲೀಸರ ಪ್ರಕಾರ, ಎಲ್ಲಾ ಐದು ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ ಅಂತ ತಿಳಿಸಿದ್ದಾರೆ. ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ಟ್ಯಾಂಕ್‌ನಲ್ಲಿ ತಮ್ಮ ಶೋಧ ಕಾರ್ಯಾಚರಣೆಯನ್ನು ಮುಂದುವರೆಸುತ್ತಿವೆ ಎಂದು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಡಿಜಿಪಿ ಅಭಾಷ್ ಕುಮಾರ್ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ನೀರಿನಲ್ಲಿ ಮುಳುಗಿದ ಐವರೂ ಚೆನ್ನೈನ ಮೂರು ವಿಭಿನ್ನ ಪ್ರದೇಶಗಳಿಗೆ ಸೇರಿದವರು ಎನ್ನಲಾಗಿದೆ.

Read More

ಉಡುಪಿ: ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬ0ದಿಸಿದ0ತೆ, ಜಿಲ್ಲೆಯಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆಯು ಜಾರಿಯಲಿದ್ದು, ಈ ಅವಧಿಯಲ್ಲಿ ಪತ್ರಿಕೆಗಳು, ದೃಶ್ಯ ಮಾಧ್ಯಮಗಳು, ಕೇಬಲ್ ಟಿವಿ, ಪೇಸ್‌ಬುಕ್ ವಾಟ್ಸಾಪ್ ಸೇರಿದಂತೆ ಎಲ್ಲಾ ರೀತಿಯ ಸೋಷಿಯಲ್ ಮೀಡಿಯಾಗಳಲ್ಲಿ , ಯಾವುದೇ ರಾಜಕೀಯ ಪಕ್ಷ ಅಥವಾ ಚುನಾವಣಾ ಅಭ್ಯರ್ಥಿಯ ಪರವಾಗಿ ಜಾಹೀರಾತುಗಳನ್ನು ಪ್ರಕಟಿಸಲು ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ(ಎಂಸಿಎಂಸಿ) ಇಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಎಂಸಿಎ0ಸಿ ಯಿಂದ ಪೂರ್ವಾನುಮತಿ ಪಡೆಯದೇ ಜಾಹೀರಾತು ಪ್ರಸಾರ ಮಾಡುತ್ತಿರುವುದನ್ನು ಪರಿಶೀಲಿಸಲು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಮೊದಲನೇ ಮಹಡಿಯಲ್ಲಿ ಪ್ರತ್ಯೇಕ ಕಚೇರಿಯನ್ನು ತೆರೆದಿದ್ದು, ಇಲ್ಲಿ 24*7 ಜಾಹೀರಾತುಗಳನ್ನು ಪರಿಶೀಲಿಸಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಪ್ರಸಾರವಾಗುವ ಎಲ್ಲಾ ಸ್ಥಳೀಯ ಟಿವಿ ಚಾನೆಲ್ ಗಳಲ್ಲಿನ ಕಾರ್ಯಕ್ರಮಗಳನ್ನು ನಿರಂತರವಾಗಿ ವೀಕ್ಷಿಸಲು 3 ಪಾಳಿಯಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿದ್ದು, 8 ಟಿವಿ ಪರದೆಗಳ ಮೂಲಕ ಸದ್ರಿ ಚಾನೆಲ್ ಗಳಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಕಾರ್ಯಕ್ರಮಗಳನ್ನು ವೀಕ್ಷಿಸಿ ಅದರಲ್ಲಿ ಬರುವ ಎಲ್ಲಾ ರೀತಿಯ ಕಾರ್ಯಕ್ರಮಗಳ…

Read More

ಬೆಂಗಳೂರು: 18 ವರ್ಷದೊಳಗಿನ ಅಪ್ರಾಪ್ತರಿಗೆ ಪ್ರೀತಿ ಮಾಡಲು ಅನುಮತಿ ಇರಬಹುದೇನೋ ಆದರೆ ದೈಹಿಕ ಸಂಪರ್ಕ ಬೆಳೆಸಲು ಅಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಆರೋಪಿಗೆ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಪೋಕ್ಸೊ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ಶಿಕ್ಷಾರ್ಹವಾದ ಪೋಕ್ಸೊ ಕಾಯ್ದೆಯ ಸೆಕ್ಷನ್ 3 ರ ವ್ಯಾಪ್ತಿಯನ್ನು ಪರಿಗಣಿಸುವಾಗ ಅರ್ಜಿದಾರರು ಮತ್ತು ಸಂತ್ರಸ್ತ ಹುಡುಗಿಯ ನಡುವೆ ನಡೆದಿದೆ ಎಂದು ಹೇಳಲಾದ ಲೈಂಗಿಕ ದೌರ್ಜನ್ಯಕ್ಕೆ ಸಂತ್ರಸ್ತ ಬಾಲಕಿಯ ಒಪ್ಪಿಗೆ ಮುಖ್ಯವಲ್ಲ ಎಂದು ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರ ನ್ಯಾಯಪೀಠ ಹೇಳಿದೆ. ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಬುಜ್ಜಿ ಅಲಿಯಾಸ್ ಬಾಬು (23) ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿರುವ ಹೈಕೋರ್ಟ್, ಸಂತ್ರಸ್ತೆಯ ಸ್ವಯಂಕೃತ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಜಾಮೀನು ಕೋರಿದ ಆರೋಪಿಯ ಮನವಿಯನ್ನು ನ್ಯಾಯಪೀಠ ತಿರಸ್ಕರಿಸಿದೆ. ಪೋಕ್ಸೋ ಕಾಯ್ದೆ ಪ್ರಕಾರ 18 ವರ್ಷ ಒಳಗಿನವರು ಅಪ್ರಾಪ್ತರೆಂದು ಪರಿಗಣಿಸಲ್ಪಡುತ್ತಾರೆ. ಈ ಪ್ರಕರಣದ ಸಂತ್ರಸ್ತೆ 18…

Read More

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯಲು ನಾನಾ ತಂತ್ರಗಳನ್ನು ಹೆಣೆಯಲಾಗುತ್ತಿದೆ. ಇದೇ ವೇಳೆ ಜೆಡಿಎಸ್ ವತಿಯಿಂದ ಆಯೋಜಿಸಲಾದ ಎನ್ನಲಾಗುತ್ತಿರುವ ಪ್ರವಾಸಿ ಬಸ್ಸುಗಳನ್ನು ಸೀಝ್ ಮಾಡಿದ ಘಟನೆ ನಡೆದಿದೆ. ಮತದಾರರಿಗೆ ಮತ್ತು ಮುಖಂಡರಿಗೆ ಧರ್ಮಸ್ಥಳ ಸೇರಿದಂತೆ ಸುತ್ತಮುತ್ತಲ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಭಾಗ್ಯವನ್ನು ಕಲ್ಪಿಸಲಾಗಿತ್ತು. ಈಗ ಪ್ರವಾಸ ಮುಗಿಸಿ ವಾಪಸಾಗುವಾಗ ನಾಲ್ಕು ಬಸ್‌ ಅನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದು ಜಪ್ತಿ ಮಾಡಿದ್ದಾರೆ. ಧರ್ಮಸ್ಥಳ ಪ್ರವಾಸ ಮುಗಿಸಿ ವಾಪಸ್ ಆಗುತ್ತಿದ್ದ ಬಸ್‌ಗಳನ್ನು ಮಧುಗಿರಿ ತಾಲೂಕಿನ ಗಿಡದಾಗಲಹಳ್ಳಿ ಸಮೀಪ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಒಟ್ಟು ನಾಲ್ಕು ಬಸ್‌ಗಳನ್ನು ಜಪ್ತಿ ಮಾಡಿದ್ದಾರೆ. ಮಧುಗಿರಿ ಜೆಡಿಎಸ್ ಅಭ್ಯರ್ಥಿ ವೀರಭದ್ರಯ್ಯ ಪ್ರವಾಸ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ಸಂಬಂಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿತ್ತು

Read More

ಮಂಗಳೂರು : ಮಂಗಳೂರು ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ 4 ಮಂದಿ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಆರು ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಮಂಗಳೂರು ನಗರದ ಗೂಡ್ಸ್ ಶೆಡ್ ಪರಿಸರದಲ್ಲಿ ನಂಬರ್‌ ಪ್ಲೇಟ್ ಇಲ್ಲದ ದ್ವಿಚಕ್ರ ವಾಹನಗಳನ್ನು ಗಿರಾಕಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿಎ ಹೆಗಡೆ ರವರ ನೇತ್ರತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕಸಬ ಬೆಂಗರೆಯ ಮೊಹಮ್ಮದ್ ಸಿನಾನ್ (19), ಮೊಹಮ್ಮದ್ ಸಾಹಿಲ್ ಬೆಂಗ್ರೆ (22).ಉಳ್ಳಾಲ ನ್ಯೂ ತೋಟ ಹೌಸ್ ನ ಫೈಜಲ್ ತೋಟ ಫೈಸಲ್,ಬಂಟ್ವಾಳದ ನಂದಾವರದ ಮೊಹಮ್ಮದ್ ಸಾಹಿಲ್(18) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ ವಶಪಡಿಸಿಕೊಂಡ ದ್ವಿ ಚಕ್ರವಾಹನಗಳ ಒಟ್ಟು ಮೌಲ್ಯ 2,15,000 ಆಗಿದ್ದು ಮುಂದಿನ ಕ್ರಮಕ್ಕಾಗಿ ಆರೋಪಿಗಳನ್ನು ಉಳ್ಳಾಲ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ.

Read More

ಪುತ್ತೂರು:ನೆರೆಮನೆಯ ವಿವಾಹಿತ ಮಹಿಳೆಯೊಂದಿಗಿನ ತನ್ನ ಅಕ್ರಮ‌ ಸಂಬಂಧ ತಿಳಿಯಿತೆಂದು ಮರ್ಯಾದೆಗೆ ಅಂಜಿ ವಿವಾಹಿತ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಟ್ಟಣಿಗೆ ಮೂಡ್ನೂರು ಗ್ರಾಮದ ವಜ್ರಮೂಲೆ ಎಂಬಲ್ಲಿ ನಡೆದಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ವಜ್ರಮೂಲೆ ದಿ. ಕೊರಗರವರ ಪುತ್ರ ಶೀನಪ್ಪ(50)ಆತ್ಮಹತ್ಯೆ ಮಾಡಿಕೊಂಡವರು. ಶೀನಪ್ಪ ಅವರು ಏ.2ರಂದು ಮಧ್ಯಾಹ್ನ ಮದ್ಯ ಸೇವನೆ ಮಾಡಿ ಮನೆಯಲ್ಲಿ ಸಣ್ಣ ಪುಟ್ಟ ಜಗಳ ಮಾಡಿದ್ದರು. ಶೀನಪ್ಪ ಪತ್ನಿಗೆ ಹಲ್ಲೆ ಮಾಡುವುದನ್ನು 3 ಜನ ಮಕ್ಕಳು ಓಡಿಕೊಂಡು ಬಂದು ತಡೆದಿದ್ದಾರೆ. ಬಳಿಕ ಅವರು ಕೋಪಗೊಂಡು ಬೈಕ್ ಹತ್ತಿ ಪೇಟೆಗೆ ಹೋಗಿದ್ದರು.ಅವರಿಗೆ ತನ್ನ ಪಕ್ಕದ‌ ಮನೆಯ ಮಹಿಳೆಯ ಜೊತೆ ತನಗಿರುವ ಅಕ್ರಮ‌ ಸಂಬಂಧ ಪತ್ನಿಗೆ ಗೊತ್ತಾಗಿರುವುದು ತಿಳಿದಿತ್ತು. ನಂತರ ಶೀನಪ್ಪ ಅವರು ಮೋಟಾರು ಸೈಕಲ್‌ ಮನೆಯ ಬಳಿ ನಿಲ್ಲಿಸಿ ರಾತ್ರಿ 8.30ಕ್ಕೆ ಹೋಗಿದ್ದಾರೆ. ಬಳಿಕ ತೋಟದ ಪಕ್ಕದಲ್ಲಿರುವ ಮಾವಿನ ಮರದ ಬಳಿ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ಮೃತರ ಪತ್ನಿ ಹೇಳಿದ್ದಾರೆ. ಗಂಡ ಹಾಗೂ ನೆರೆ ಮನೆಯ…

Read More

ಉಳ್ಳಾಲ: ಕರ್ಕಷ ಹಾರ್ನ್ ಬಳಸುತ್ತಿದ್ದ ವಾಹನಗಳನ್ನು ತಡೆದ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಮೂರು ದಿನಗಳಲ್ಲಿ ಒಟ್ಟು 130 ವಾಹನಗಳ ಹಾರ್ನ್ ತೆಗೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಠಾಣಾಧಿಕಾರಿ ರಮೇಶ್ ಹಾನಾಪುರ ನೇತೃತ್ವದ ಪೊಲೀಸರ ತಂಡ ತಲಪಾಡಿಯಲ್ಲಿ ತಪಾಸಣೆ ನಡೆಸಿ ಕ್ರಮಕೈಗೊಂಡಿದ್ದಾರೆ. ಟ್ರಕ್ ಗಳಲ್ಲಿ ಕಾನೂನು ಉಲ್ಲಂಘಿಸಿ ಕರ್ಕಶವಾದ ಹಾರ್ನ್ ಬಳಕೆ ಮಾಡುತ್ತಿರುವ ಕುರಿತು ಸಾರ್ವಜನಿಕ ವಲಯದಿಂದ ದೂರುಗಳು ಬಂದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ. ಮಾ.31 ರಿಂದ ಎ.3 ರವರೆಗೆ ತಪಾಸಣೆ ನಡೆಸಿದ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ.

Read More

ಉಪ್ಪಿನಂಗಡಿ; ಬಟ್ಟೆ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಉಪ್ಪಿನಂಗಡಿಯ ವಿವಾ ಫ್ಯಾಶನ್ ಗೆ ಬೆಂಕಿ ಬಿದ್ದು ಅಗ್ನಿ ಅವಘಡ ಸಂಭವಿಸಿದೆ ಎನ್ನಲಾಗಿದೆ.ಘಟನೆಯಲ್ಲಿ ಬಟ್ಟೆಗಳು ಬೆಂಕಿಗೆ ಆಹುತಿಯಾಗಿರುವ ಬಗ್ಗೆ ಮಾಹಿತಿ ಇದೆ. ಸ್ಥಳದಲ್ಲಿ ಬೆಂಕಿ‌ ನಂದಿಸುವ ಕಾರ್ಯ ನಡೆಯುತ್ತಿದೆ.ಬಹುಮಡಿ ಕಟ್ಟಡದ ಒಂದು ಮತ್ತು ಎರಡನೇ ಹಂತಸ್ತಿನಲ್ಲಿ ಬಟ್ಟೆ ಅಂಗಡಿ ಇದೆ.‌ಬೆಳಿಗ್ಗೆ ಮಳಿಗೆಯಿಂದ ಹೊಗೆ ಬರುವುದು ಕಂಡು ಜನರು ಮಾಹಿತಿ ನೀಡಿದ್ದಾರೆ.

Read More

ಮಂಗಳೂರು : ಖದೀಮ ಕಳ್ಳನೋರ್ವನು ನಗರದ ದಕ್ಕೆಯಲ್ಲಿ ಮೀನು ವ್ಯಾಪಾರಿಯ 1.50 ಲಕ್ಷ ರೂ. ಕಸಿದು ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪಾಂಡೇಶ್ವರ ಪೊಲೀಸರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಬೆಳ್ಳಂಬೆಳಗ್ಗೆ ಸುಮಾರು 6:45ಕ್ಕೆ ವ್ಯಾಪಾರಿ ಮೀನು ಖರೀದಿಗೆಂದು ದಕ್ಕೆಯ ಕಡೆಗೆ ತೆರಳುತ್ತಿದ್ದರು‌. ಈ ವೇಳೆ ಅವರಲ್ಲಿ ಮೀನು ಖರೀದಿಗೆಂದು ಇಟ್ಟಿದ್ದ 1.50 ಲಕ್ಷ ರೂ. ಹಣವಿತ್ತು. ಆದರೆ, ಕಳ್ಳನೋರ್ವನು ಈ ಬ್ಯಾಗ್‌ನ್ನೇ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ಕಳ್ಳನ ಪತ್ತೆಗೆ ಹುಡುಕಾಟ ನಡೆಸುತ್ತಿದ್ದಾರೆ.

Read More