Author: main-admin

ಸುಳ್ಯ : ಇಲ್ಲಿಗೆ ಸಮೀಪದ ಅಡ್ಕಾರು ಎಂಬಲ್ಲಿ ಇಂದು ಬೆಳಗ್ಗೆ ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟ ಘಟನೆ ನಡೆದಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿಗಳಾದ ಕಾರ್ಮಿಕ ಚಂದ್ರಪ್ಪ ರೇಗಪ್ಪ, ಮಾಂತೇಶ್ ಮೃತ ಕಾರ್ಮಿಕರು ಎಂದು ಗುರುತಿಸಲಾಗುದೆ. ಮಡಿಕೇರಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ, ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಚಂದ್ರಪ್ಪ, ರೇಗಪ್ಪ, ವೆಂಕಪ್ಪ, ಮಾಂತೇಶ್ ಎಂಬವರಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಮೂವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಮಿಕರಿಗೆ ಡಿಕ್ಕಿ ಹೊಡೆದ ಕಾರು ಪಕ್ಕದಲ್ಲಿ ನಿಂತಿದ್ದ ಲಾರಿಗೂ ಡಿಕ್ಕಿ ಹೊಡೆಯಿತು. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

Read More

ಬೆಳ್ತಂಗಡಿ : ಯುವಕನೊಬ್ಬ ಮನೆಯ ಬಾತ್ ರೂಂ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಪುದುವೆಟ್ಟು ಕುಬಲ ನಿವಾಸಿ ಸ್ವರಾಜ್ (24) ಎಂದು ಗುರುತಿಸಲಾಗಿದೆ. ಅತ್ಯುತ್ತಮ ಕಬಡ್ಡಿ ಆಟಗಾರರಾಗಿದ್ದ ಇವರು ಉಜಿರೆಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಇಂದು ಪುದುವೆಟ್ಟುವಿನಲ್ಲಿದ್ದ ಅವರ ಹಳೆಮನೆಯ ಸ್ನಾನಗೃಹದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತರು ತಂದೆ, ತಾಯಿ ಹಾಗೂ ಸಹೋದರಿ, ಕುಟುಂಬ ವರ್ಗವನ್ನು ಅಗಲಿದ್ದಾರೆ.

Read More

ಮಂಗಳೂರು: ಖಾಸಗಿ ಬಸ್ ನ ಕಂಡಕ್ಟರ್ ಒಬ್ಬರು ಬಸ್ ನಿಂದ ಬಿದ್ದು ಸಾವನಪ್ಪಿದ ಬೆನ್ನಲ್ಲೇ ಇದೀಗ ಮಂಗಳೂರು ಪೊಲೀಸ್ ಆಯುಕ್ತರು ಎಲ್ಲಾ ಖಾಸಗಿ ಬಸ್ ಗಳಿಗೆ ಬಾಗಿಲು ಆಳವಡಿಸಲು ಸೂಚನೆ ನೀಡಿದ್ದಾರೆ. ನಂತೂರು ಸರ್ಕಲ್ ನಲ್ಲಿ ಖಾಸಗಿ ಬಸ್ ನಿಂದ ಕಂಡಕ್ಟರ್ ಆಯತಪ್ಪಿ ಬಿದ್ದು ಸಾವನಪ್ಪಿದ ಬೆನ್ನಲ್ಲೇ ಈ ಆದೇಶ ಹೊರ ಬಿದ್ದಿದೆ. ಮಂಗಳೂರಿನಲ್ಲಿ ಸಂಚರಿಸುವ ಎಲ್ಲ ಖಾಸಗಿ ಬಸ್‌ಗಳಿಗೆ ಸುರಕ್ಷತಾ ದೃಷ್ಟಿಯಿಂದ ಬಾಗಿಲು ಅಳವಡಿಸಬೇಕು. ನಿರ್ವಾಹಕರು ಸಹಿತ ಯಾರು ಕೂಡ ಬಾಗಿಲಿನಲ್ಲಿ ನಿಲ್ಲಬಾರದು. ಟೈಮ್ ಕೀಪಿಂಗ್‌ ಗಿಂತ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪೊಲೀಸ್‌ ಆಯುಕ್ತ ಕುಲದೀಪ್‌ ಕುಮಾರ್ ಜೈನ್ ಬಸ್ ಮಾಲೀಕರಿಗೆ ಸೂಚನೆ ನೀಡಿದ್ದಾರೆ.

Read More

ಮೂಡುಬಿದಿರೆ: ಬಾವಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.31ರ ಗುರುವಾರ ಮುಂಜಾನೆ ಇಲ್ಲಿನ ಬೆಳುವಾಯಿ ಎಂಬಲ್ಲಿ ನಡೆದಿದೆ. ಬೆಳುವಾಯಿ ಬರಕಲ ಗುತ್ತು ಮನೆಯ ರಾಮಣ್ಣ ಅವರ ಪುತ್ರ ಸಂತೋಷ್ ಪೂಜಾರಿ (42) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸಂತೋಷ್ ಇಂದು ಮುಂಜಾನೆ ತಮ್ಮ ಪಕ್ಕದ ಮನೆಯಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮನೆಗೆ ಆಧಾರ ಸ್ತಂಭವಾಗಿದ್ದ ಇವರು ಮೂಡುಬಿದಿರೆಯಲ್ಲಿ 88 ಎಲೆಕ್ಟ್ರೋ ವರ್ಲ್ಡ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇವರು ಹೆಂಡತಿ ಮತ್ತು ಸಣ್ಣ ವಯಸ್ಸಿನ ಇಬ್ಬರು ಅವಳಿ ಪುತ್ರಿಯರನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಗನ್ ಮ್ಯಾನ್ ನಿಂದ ಮತ್ತೊಬ್ಬ ಗನ್ ಮ್ಯಾನ್ ಮೇಲೆ ಫೈರಿಂಗ್ ನಡೆಸಿರುವ ಘಟನೆ ಜಯನಗರದ ನಾಲ್ಕನೇ ಬ್ಲಾಕ್ನ ಪಿಜಿ ಒಂದರಲ್ಲಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಗನ್ ಮ್ಯಾನ್ ಪ್ರಶಾಂತ್ ಸ್ನೇಹಿತನ ಮೇಲೆ ಫೈರಿಂಗ್ ಮಾಡಿದ್ದಾರೆ.ಅವರ ಸ್ನೇಹಿತ ಕೂಡ ಗನ್ ಮ್ಯಾನ್ ಆಗಿದ್ದು, ಅನೀಲ್ ಅನ್ನುವವರು ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿದ್ದಾರೆ. ಪ್ರಶಾಂತ್ ನಿರ್ಮಾಪಕ ಉಮಾಪತಿ ಗೌಡ ಅವರ ಸಹೋದರನ ಗನ್ ಮ್ಯಾನ್ ಎಂದು ಹೇಳಲಾಗುತ್ತಿದೆ. ಆಗಸ್ಟ್ 27ರ ರಾತ್ರಿ 12 ಗಂಟೆಯಲ್ಲಿ ಪಿಜಿಯಲ್ಲಿ ಘಟನೆ ನಡೆದಿದೆ. ಪಿಜಿಯಲ್ಲಿ ಪ್ರಶಾಂತ್ ಹಾಗೂ ಅನಿಲ್ ಎಣ್ಣೆ ಪಾರ್ಟಿ ಮಾಡಿದ್ದಾರೆ. ಈ ವೇಳೆ ಗನ್ ಮ್ಯಾನ್ ಪ್ರಶಾಂತಗೆ ಪತ್ನಿ ಫೋನ್ ಕರೆ ಮಾಡಿದ್ದಾರೆ. ಫೋನ್ನಲ್ಲಿ ಪತ್ನಿ ಜೊತೆ ಜೋರಾಗಿ ಪ್ರಶಾಂತ್ ಮಾತನಾಡುತ್ತಿದ್ದರು, ಸ್ವಲ್ಪ ನಿಧಾನವಾಗಿ ಮಾತಾಡು ಎಂದಿದ್ದಕ್ಕೆ ಪ್ರಶಾಂತ್ ಅನಿಲ್ ಎನ್ನುವವರ ಮೇಲೆ ಫೈರಿಂಗ್ ಮಾಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಪಿಸ್ತೂಲ್ನಿಂದ ಪ್ರಶಾಂತ್ ಫೈರಿಂಗ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.ಈ ಘಟನೆ ಕುರಿತಂತೆ…

Read More

ಸುರತ್ಕಲ್:‌ ರಸ್ತೆ ಬದಿಯಲ್ಲಿ ಚರಂಡಿ ಮಾಡುತ್ತಿದ್ದ ವೇಳೆ ಕಾಂಪೌಂಡ್‌ ಕುಸಿದು ಓರ್ವ ಮೃತಪಟ್ಟು, ಇನ್ನೋರ್ವ ಗಾಯಗೊಂಡಿರುವ ಘಟನೆ ಕೃಷ್ಣಾಪುರದ ಕೆಇಬಿ ಬಳಿ ಬುಧವಾರ ನಡೆದಿದೆ. ಮೃತರು ಬಜ್ಪೆ ಕರಂಬಾರು ನಿವಾಸಿ ಹನೀಫ್ ಎಂದು ತಿಳಿದು ಬಂದಿದ್ದು, ಮಣಿ ಎಂಬವರು ಗಾಯಗೊಂಡಿದ್ದಾರೆ. ಕೃಷ್ಣಾಪುರ ನಿವಾಸಿ ಶರೀಫ್‌ ಎಂಬವರು ರಸ್ತೆ ಬದಿ ಚರಂಡಿ ನಿರ್ಮಾಣದ ಗುತ್ತಿಗೆ ಪಡೆದುಕೊಂಡು ಕೆಲಸ ಮಾಡಿಸುತ್ತಿದ್ದರು ಎಂದು ತಿಳಿದುಬಂದಿದೆ. ಹನೀಫ್ ಮತ್ತು ಮಣಿ ಅವರು ಚರಂಡಿ ಅಗೆಯುತ್ತಿದ್ದ‌ ವೇಳೆ ಏಕಾಏಕಿ ಪಕ್ಕದಲ್ಲಿದ್ದ ಕಾಂಪೌಂಡ್ ಗೋಡೆ ಕುಸಿದು ಕೆಲಸಗಾರರ ಮೇಲೆ ಬಿದ್ದಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲಾಗಲೇ ಹನೀಫ್ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ. ಮಣಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಮುಕ್ಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಹನೀಫ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

Read More

ಬಂಟ್ವಾಳ: ಯುವತಿಯೋರ್ವಳು ಮಲಗಿದ್ದಲ್ಲೇ ಮೃತಪಟ್ಟ ಘಟನೆ ವಗ್ಗ ಸಮೀಪದ ಮದ್ವ ಎಂಬಲ್ಲಿ ನಡೆದಿದೆ. ಕಾವಳಮೂಡುರು ಗ್ರಾಮದ ಪುಳಿಮಜಲು ನಿವಾಸಿ ರಾಜ ಅವರ ಪುತ್ರಿ. ಮಿತ್ರ ಶೆಟ್ಟಿ (23) ಮೃತಪಟ್ಟ ಯುವತಿ. ಊಟ ಮಾಡಿ ಮಲಗಿದ ಯುವತಿ ಬೆಳಿಗ್ಗೆ ನೋಡುವಾಗ ಮೃತಪಟ್ಟ ಬಗ್ಗೆ ವರದಿಯಾಗಿದೆ. ಸಾವಿಗೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲ. ತಂದೆ ಮತ್ತು ಅಣ್ಣ ಇಬ್ಬರು ಬೆಂಗಳೂರಿನಲ್ಲಿ ಕೆಲಸದಲ್ಲಿರುವ ಕಾರಣ ತಾಯಿ ಮತ್ತು ಮಗಳು ಪ್ರಸ್ತುತ ಕಾವಳಪಡೂರು ಗ್ರಾಮದ ಮದ್ವ ಕಂಬಲಡ್ಡ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದರು. ರಾತ್ರಿ ಊಟ ಮಾಡಿ ಒಟ್ಟಿಗೆ ಮಲಗಿದ್ದವಳು ಬೆಳಿಗ್ಗೆ ಎದ್ದು ನೋಡುವಾಗ ಎದ್ದೇಳುವುದಿಲ್ಲ ಮಾತನಾಡುವುದಿಲ್ಲ ಎಂದು ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿದಾಗ ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಬಳಿಕ ಮೃತದೇಹವನ್ನು ದೇರಳಕಟ್ಟೆ ಕೆ‌ಎಸ್.ಹೆಗ್ಡೆ ಯಲ್ಲಿ ಮರಣೋತ್ತರ ಪರೀಕ್ಷೆ ಗಾಗಿ ಕೊಂಡೋಯ್ಯಲಾಗಿದೆ. ಆರಂಭದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಹೇಳಲಾಗುತ್ತಿತ್ತು. ಆದರೆ ಬ್ರೈನ್ ಎಮರೇಜ್ ನಿಂದಲೂ ಸಾವು ಆಗಿರಬಹುದು ಎಂಬ ಸಂಶಯವಿದ್ದು, ವೈದ್ಯರು ಮರಣೋತ್ತರ ಪರೀಕ್ಷೆಯ ವರದಿಯನ್ನು ನೀಡಿದ ಬಳಿಕ ಸಾವಿನ…

Read More

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಮಳೆಯ ರಜೆ ಸರಿದೂಗಿಸಲು ಸೆಪ್ಟೆಂಬರ್ ಮೊದಲ ವಾರದಿಂದ ಮುಂದಿನ 14 ಶನಿವಾರಗಳ ಕಾಲ ಇಡೀ ದಿನ ಶಾಲೆ ನಡೆಸುವಂತೆ ದ.ಕ.ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಸೂಚನೆ ನೀಡಿದ್ದಾರೆ. ಜುಲೈ ತಿಂಗಳಿನಲ್ಲಿ ಅತ್ಯಧಿಕ ಮಳೆ ಸುರಿದಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಗಳಿಗೆ ಜಿಲ್ಲಾಧಿಕಾರಿಯವರ ಆದೇಶದಂತೆ 7 ದಿವಸಗಳ ರಜೆ ನೀಡಲಾಗಿತ್ತು. ಈ ದಿನಗಳಿಂದ ವಿದ್ಯಾರ್ಥಿಗಳಿಗೆ ಆದ ತರಗತಿಯ ನಷ್ಟವನ್ನು ಭರ್ತಿ ಮಾಡಲು ಸಪ್ಟೆಂಬರ್ ಮೊದಲ ವಾರದಿಂದ ಆರಂಭಿಸಿ ಒಟ್ಟು 11 ಶನಿವಾರಗಳಂದು ಇಡೀ ದಿನ ಶಾಲೆಗಳನ್ನು ನಡೆಸುವಂತೆ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಉಪನಿರ್ದೇಶಕರು ಸೂಚಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ವಹಿಸುವಂತೆ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ.

Read More

ಮಂಗಳೂರು: ಚಾಲನೆಯಲ್ಲಿದ್ದ ಬಸ್ ನ ಮುಂಭಾಗದ ಬಾಗಿಲಿನಲ್ಲಿದ್ದ ಸಿಟಿ ಬಸ್ ನಿರ್ವಾಹಕನೋರ್ವನು ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈರಯ್ಯ(23) ಮೃತಪಟ್ಟ ಸಿಟಿ ಬಸ್ ನಿರ್ವಾಹಕ. ಮಂಗಳವಾರ ಮಧ್ಯಾಹ್ನದ ವೇಳೆಗೆ ಇವರ ಸಿಟಿ ಬಸ್ ಪದುವಾದಿಂದ ಶಿವಭಾಗ್ ಕಡೆ ಸಂಚರಿಸುತ್ತಿತ್ತು. ಈ ಸಂದರ್ಭ ನಂತೂರು ವೃತ್ತದ ಬಳಿ ಬಸ್ ಬಂದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಈರಯ್ಯ ಬಸ್ಸಿನ ಮುಂಬಾಗಿಲ ಬಳಿ ನಿಂತಿದ್ದರು. ಈ ವೇಳೆ ಈರಯ್ಯ ಏಕಾಏಕಿ ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

Read More

ಉಳ್ಳಾಲ : ಮಂಗಳೂರು ಪೊಲೀಸ್ ಕಮಿಷನರೇಟ್‌ ನ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಯುವಕನೋರ್ವನ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾದ ಕುಖ್ಯಾತ ಆರೋಪಿಯನ್ನು ಮಂಗಳೂರು ನಗರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಮೀರ್ ಹಂಝ @ ಸಮೀರ್ ಹಂಝ @ ದಾಸ್ (39) ಬಂಧಿತ ಆರೋಪಿಯಾಗಿದ್ದಾನೆ. ಘಟನೆಯ ವಿವರ : 12-08-2023 ರಂದು ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನೆತ್ತಿಲಪದವು ನಿವಾಸಿ ಮನ್ಸೂರ್ ಎಂಬವರಲ್ಲಿ ಮನೆ ಬಾಡಿಗೆ ವಿಚಾರದಲ್ಲಿ ಆರೋಪಿ ನಮೀರ್ ಹಂಸ ಎಂಬಾತನು ಗಲಾಟೆ ಮಾಡಿಕೊಂಡು ಏಕಾಎಕಿ ತನ್ನಲ್ಲಿದ್ದ ತಲವಾರಿನಿಂದ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ್ದು ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿ ನಮೀರ್ ಹಂಸನು ಕೃತ್ಯ ನಡೆಸಿದ ನಂತರ ತಲೆಮರೆಸಿಕೊಂಡಿದ್ದನು. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಹಂಸನನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಕೊಣಾಜೆ ಪೊಲೀಸ್ ಠಾಣೆಗೆ…

Read More