ಉಡುಪಿ : ಆನ್ಲೈನ್ ನಲ್ಲಿ ಲೋನ್ ಪಡೆದಂತ ವ್ಯಕ್ತಿ ಒಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಮನೆಯಲ್ಲಿ ಸೀಲಿಂಗ್ ಫ್ಯಾನ್ ಗೆ ನೀನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಳ್ಳಿ ಗ್ರಾಮದಲ್ಲಿ ನಡೆದಿದೆ. ಖಾಸಗಿ ಕಂಪನಿಯ ಉದ್ಯೋಗಿ ಶಿವಳ್ಳಿ ಗ್ರಾಮದ ಹುಡ್ಕೋ ಕಾಲೊನಿ ನಿವಾಸಿ ರಾಘವೇಂದ್ರ ಎ. ಶಾನಭಾಗ (49) ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.ರಾಘವೇಂದ್ರ ಅವರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಇತ್ತೀಚಿಗೆ ಆನ್ಲೈನ್ ಮುಖಾಂತರ ಲೋನ್ ಪಡೆದುಕೊಂಡಿದ್ದರು. ಇದರಿಂದ ಅವರಿಗೆ ಪದೇಪದೇ ಕರೆ ಬರುತ್ತಿದ್ದವು ಎನ್ನಲಾಗುತ್ತಿದೆ. ಇದೇ ಕಾರಣಕ್ಕೋ ಅಥವಾ ಬೇರೆ ಇನ್ಯಾವುದೋ ಕಾರಣಕ್ಕೋ ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು.ಶನಿವಾರ ತಾನು ವಾಸವಿದ್ದ ಮನೆಯ ಮಹಡಿಯಲ್ಲಿನ ಹ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಕಳೆದ ತಿಂಗಳು ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ಒಬ್ಬ ತನ್ನ ಸ್ನೇಹಿತನಿಗೆ ಆನ್ಲೈನ್ ಮುಖಾಂತರ ಲೋನ್ ಕೊಡಿಸಿದ್ದ ಇದರಿಂದ ಆತನಿಗೆ ಪದೇಪದೇ ಅವರಿಂದ…
Author: main-admin
ಮಂಗಳೂರು: ಮಾದಕ ವಸ್ತು ‘ಸಿಂಥೆಟಿಕ್ ಡ್ರಗ್ಸ್ ಎಂಡಿಎಂಎ’ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ಸ್ ಪೆಡ್ಲರ್‌ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಕಾಟಿಪಳ್ಳ 2ನೇ ಬ್ಲಾಕ್‌ನ ಶಾಕೀಬ್ ಯಾನೆ ಶಬ್ಬು (33), ಚೊಕ್ಕಬೆಟ್ಟು 8ನೇ ಬ್ಲಾಕ್‌ನ ನಿಸಾರ್ ಹುಸೈನ್ ಯಾನೆ ನಿಚ್ಚು (34) ಬಂಧಿತ ಆರೋಪಿಗಳು. ಇವರಿಂದ ಒಟ್ಟು 52 ಗ್ರಾಂ ತೂಕದ 2,60,000 ರೂ.ಮೌಲ್ಯದ ಎಂಡಿಎಂಎ ಮಾದಕ ವಸ್ತು, ಕಾರು, 2 ಮೊಬೈಲ್ ಫೋನು, ನಗದು 1,800 ರೂ., ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 7,83,300 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಸುರತ್ಕಲ್ ತಡಂಬೈಲ್ ಪರಿಸರದ ಬೀಚ್ ರಸ್ತೆಯಲ್ಲಿ ಕಾರಿನಲ್ಲಿ ಇಬ್ಬರು ಅಕ್ರಮವಾಗಿ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗಡೆ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿದೆ. ಆರೋಪಿಗಳ ಪೈಕಿ ಶಾಕೀಬ್ ಎಂಬಾತನ ವಿರುದ್ಧ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮೂರು…
ಬೆಂಗಳೂರು:ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಅವರು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುಳ್ಳು ಮತ್ತು ಪ್ರಚೋದನಕಾರಿ ಸುದ್ದಿಗಳನ್ನು ಹರಡುವುದನ್ನು ಮೇಲ್ವಿಚಾರಣೆ ಮಾಡಲು ಮತ್ತು ಹೋರಾಡಲು ಮೂರು ಹಂತಗಳಲ್ಲಿ ವಿಶೇಷ ಪೊಲೀಸ್ ತಂಡಗಳನ್ನು ರಚಿಸುವುದಾಗಿ ಘೋಷಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಪೋಸ್ಟ್‌ಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಹರಡುವಿಕೆಯನ್ನು ನಿಯಂತ್ರಿಸಲು ಜಾಗರೂಕ ಮೇಲ್ವಿಚಾರಣೆಯ ಅಗತ್ಯವಿದೆ ಎಂದು ಹೇಳಿದರು. ಮೂರು ವಿಶೇಷ ತಂಡಗಳ ರಚನೆ ಸಾರ್ವಜನಿಕ ಆತಂಕವನ್ನು ಕೆರಳಿಸುವ ಮತ್ತು ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ನಿರ್ದಿಷ್ಟ ವಿಷಯಗಳ ಕುರಿತು ಆಕ್ಷೇಪಾರ್ಹ ಮತ್ತು ತಪ್ಪುದಾರಿಗೆಳೆಯುವ ಪೋಸ್ಟ್‌ಗಳ ಹೆಚ್ಚಳವು ಬೆಂಗಳೂರಿನಲ್ಲಿ ಮೀಸಲಾದ ತಂಡಗಳನ್ನು ಸ್ಥಾಪಿಸಲು ಪ್ರೇರೇಪಿಸಿದೆ. ಈ ತಂಡಗಳು ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತವೆ: ಪೊಲೀಸ್ ಠಾಣೆ ಮಟ್ಟ, ಉಪ ಪೊಲೀಸ್ ಆಯುಕ್ತ (ಡಿಸಿಪಿ) ಕಚೇರಿ ಮಟ್ಟ ಮತ್ತು ಕಮಿಷನರ್ ಕಚೇರಿ ಮಟ್ಟ. ಪ್ರತಿ ಪೊಲೀಸ್ ಠಾಣೆಯು ಇಬ್ಬರು ತಾಂತ್ರಿಕವಾಗಿ ನುರಿತ ಸಿಬ್ಬಂದಿಯನ್ನು ಆಯ್ಕೆ ಮಾಡಿ ನಕಲಿ ಸುದ್ದಿ,…
ಮಂಗಳೂರು : ಸ್ಕೂಟರ್ ಹಾಗೂ ಟಿಪ್ಪರ್ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ SSLC ವಿಧ್ಯಾರ್ಥಿಯೋರ್ವ ಸಾವನಪ್ಪಿದ ಘಟನೆ ಅಡ್ಯಾರ್ ನಲ್ಲಿ ಶನಿವಾರ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಅಡ್ಯಾರ್ ಪದವು ನಿವಾಸಿ ಶರಫುದ್ದೀನ್ (16) ಎಂದು ಗುರುತಿಸಲಾಗಿದೆ. ಈತ ನಗರದ ಮಿಲಾಗ್ರಿಸ್ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಗೆಳೆಯನೊಂದಿಗೆ ಆಕ್ಟಿವಾದಲ್ಲಿ ಸಂಚರಿಸುತ್ತಿದ್ದ ವೇಳೆ ಘಟನೆ ನಡೆದಿದ್ದು, ಢಿಕ್ಕಿ ಹೊಡೆದ ರಭಸಕ್ಕೆ ಹಿಂಬದಿ ಸವಾರನಾಗಿದ್ದ ಶರಫುದ್ದೀನ್ ರಸ್ತೆಗೆಸೆಯಲ್ಪಟ್ಟು ತೀವ್ರ ರಕ್ತಸ್ರಾವವುಂಟಾಗಿತ್ತು ಎನ್ನಲಾಗಿದೆ. ಕೂಡಲೇ ಸ್ಥಳೀಯರು ಶರಫುದ್ದೀನ್ ನನ್ನು ಸಮೀಪದ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇನ್ನೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಉತ್ತರ ಕನ್ನಡ : ಪುಟ್ಟ ಬಾಲಕಿಯೊಬ್ಬಳು ಆಯತಪ್ಪಿ ಬಾವಿಗೆ ಬಿದ್ದ ಘಟನೆ ಕಾರವಾರದ ಹರಿದೇವನಗರದಲ್ಲಿ ನಡೆದಿದೆ.ಮೃತ ಬಾಲಕಿಯನ್ನು 3 ವರ್ಷ ವಯಸ್ಸಿನ ಸ್ತುತಿ. ಬಾಲಕಿ ಆಟವಾಡುತ್ತಾ ಗಣಪತಿ ಮೂರ್ತಿ ಎಂದುಕೊಂಡು ಬಾವಿಗೆ ಮಣ್ಣುಹಾಕಲು ಮುಂದಾಗಿದ್ದಾಳೆ. ಈ ವೇಳೆ ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದು, ಪೊಷಕರು ಹಾಗೂ ಬಡಾವಣೆಯ ನಿವಾಸಿಗಳೆಲ್ಲ ಮಗು ನಾಪತ್ತೆ ಎಂದು ಹುಡುಕಾಡುವಾಗ ಮಗುವಿನ ಮೃತದೇಹ ಪತ್ತೆಯಾಗಿದೆ. ಈ ಕುರಿತು ಕಾರವಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ
ಮಂಗಳೂರು: ಕಬ್ಬಿಣದ ಸೆಂಟ್ರಿಂಗ್ ಶೀಟ್ ಮತ್ತು ಕಬ್ಬಿಣದ ಕಾಲಂ ಬಾಕ್ಸ್ ಗಳನ್ನು ಕದ್ದು ಸಾಗಿಸುತ್ತಿದ್ದ ಪ್ರಕರಣವನ್ನು ಉಳ್ಳಾಲ ಪೊಲೀಸರು ಭೇದಿಸಿದ್ದು, ಒಬ್ಬ ವ್ಯಕ್ತಿಯನ್ನು ಬಂಧಿಸಿ ಒಟ್ಟು 9,75,000 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ. ಮೂಡುಬಿದಿರೆಯ ತೋಡಾರ್ ನಿವಾಸಿ ಇಲಿಯಾಸ್ ಯಾನೆ ಮೊಹಮ್ಮದ್ ಇಲಿಯಾಸ್ (23) ಬಂಧಿತ ಆರೋಪಿ. ಉಳ್ಳಾಲ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಸಂತೋಷ್ ಕುಮಾರ್ ಡಿ. ಅವರು ಇಂದು ಬೆಳಗ್ಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ಪಿಲಿಕೂರು ಭಾಗದಿಂದ ಕೆ.ಸಿ. ರೋಡ್ ಕಡೆಗೆ ಹೋಗುತ್ತಿದ್ದ ರಿಟ್ಸ್ ಕಾರು ಮತ್ತು ಪಿಕಪ್ ವಾಹನವನ್ನು ತಡೆದು ನಿಲ್ಲಿಸಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಕಾರಿನಲ್ಲಿದ್ದ ಹಂಝ ಮತ್ತು ಮೊಹಮ್ಮದ್ ಶಾಹಿಲ್ ಓಡಿ ತಪ್ಪಿಸಿಕೊಂಡಿದ್ದಾರೆ. ಪಿಕಪ್ ವಾಹನದಲ್ಲಿ ಕಬ್ಬಿಣದ 120 ಸೆಂಟ್ರಿಂಗ್ ಶೀಟ್ ಮತ್ತು 3 ಸೆಟ್ ಕಬ್ಬಿಣದ ಕಾಲಂ ಬಾಕ್ಸ್ ಪತ್ತೆಯಾಗಿವೆ. ಸೆಂಟ್ರಿಂಗ್ ಶೀಟ್ ಗಳನ್ನು ಅಗಸ್ಟ್ 7 ರಂದು ರಾತ್ರಿ ಕೊಲ್ಯದ ನಿರ್ಮಾಣ ಹಂತದ ಕಟ್ಟಡದ ಎದುರಿನಿಂದ…
ಮಂಗಳೂರು: ಮಂಗಳೂರು ನಗರದಲ್ಲಿಯೇ ಸುರಕ್ಷೆಗೆ ಹಾಗೂ ಎಲ್ಲಾ ಅನುಕೂಲಗಳಿಗೆ ಹೆಸರಾದ ಪ್ರದೇಶ ಬಿಜೈ. ರೋಹನ್ ಕಾರ್ಪೋರೇಶನ್ ಸಂಸ್ಥೆಯ ಅವರ ಅತಿ ದೊಡ್ಡ ಮತ್ತು ಅತ್ಯಂತ ವಿಶೇಷ ಯೋಜನೆಯಾದ ‘ರೋಹನ್ ಸಿಟಿ’ ಬಿಜೈ ಬೃಹತ್ ಕಟ್ಟಡದ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ಸಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಸಮಾಜದ ಆಯ್ದ ಸೇವಾ ನಿರತ ವ್ಯಕ್ತಿಗಳಿಗಾಗಿ ವಿಶೇಷ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಶಿಕ್ಷಕರು, ಪೊಲೀಸರು, ಯೋಧರು ಮತ್ತು ಪತ್ರಕರ್ತರಿಗೆ ಫ್ಲಾಟ್ ಗಳ ಬೆಲೆಗಳ ಮೇಲೆ ಶೇಕಡಾ10 ರ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು. ಈ ಯೋಜನೆಯು ಸಪ್ಟೆಂಬರ್ 1ರಂದು ಆರಂಭಗೊಂಡು, ಸೀಮಿತ ಅವಧಿಯವರೆಗೆ(ಒಂದು ತಿಂಗಳು) ಮಾತ್ರ ಇರಲಿದೆ. ‘ರೋಹನ್ ಸಿಟಿ’ ಇದುವರೆಗಿನ ರೋಹನ್ ಕಾರ್ಪೊರೇಶನ್ ಇದರ ಅತಿದೊಡ್ಡ ಮತ್ತು ಅತ್ಯಂತ ವಿಶೇಷ ಯೋಜನೆಯಾಗಿದೆ. ಈ ಯೋಜನೆಯು 6 ಲಕ್ಷ ಚದರ ಅಡಿ ವಸತಿ ಪ್ರದೇಶವನ್ನು ಒಳಗೊಂಡಿರುವ ಸಮುಚ್ಚಯವಾಗಿದ್ದು, ಒಟ್ಟು 546 ಅಪಾರ್ಟ್ಮೆಂಟ್‌ಗಳನ್ನು ಒಳಗೊಂಡಿದೆ. ವಸತಿ ಆಯ್ಕೆಗಳು ಡ್ಯುಪ್ಲೆಕ್ಸ್,6 ಬಿಎಚ್‌ಕೆ, 4 ಬಿಎಚ್‌ಕೆ, 1405 ರಿಂದ…
ಬಂಟ್ವಾಳ: ಕೊಲೆ ಯತ್ನ, ದರೋಡೆ, ಕಳ್ಳತನ ಸಹಿತ ವಿವಿಧ ಪ್ರಕರಣಗಳಲ್ಲಿ ಜಿಲ್ಲೆಯ ಬಹುತೇಕ ಎಲ್ಲಾ ಠಾಣೆಗಳಲ್ಲಿ ಆರೋಪಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸ್ ಠಾಣಾ ಎಸ್.ಐ.ರಾಮಕೃಷ್ಣ ನೇತ್ರತ್ವದ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸಜೀಪ ಮುನ್ನೂರು ಗ್ರಾಮದ ಪೆರುವ ನಿವಾಸಿ ಇಬ್ರಾಹಿಂ ಅವರ ಮಗ ಉಮ್ಮರ್ ಫಾರೂಕ್ ಬಂಧಿತ ಆರೋಪಿ. ಸುಮಾರು 17 ಪ್ರಕರಣಗಳಲ್ಲಿ ಉಮ್ಮರ್ ಫಾರೂಕ್ ಆರೋಪಿಯಾಗಿದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಈತ ಬಂಟ್ವಾಳ ನಗರ, ಗ್ರಾಮಾಂತರ, ಉಪ್ಪಿನಂಗಡಿ, ಬಜಪೆ,ಕೋಣಾಜೆ,ಬರ್ಕೆ,ವಿಟ್ಲ,ಕಡಬ ಹೀಗೆ ಜಿಲ್ಲೆಯ ಬಹುತೇಕ ಎಲ್ಲಾ ಠಾಣೆಗಳಲ್ಲಿ ಈತನ ವಿರುದ್ದ ಒಂದಲ್ಲ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.
ಮಂಗಳೂರು: ಮಂಗಳೂರು ಹೊರವಲಯದ ಅಡ್ಯಾರ್ ಬಳಿಯ ಫ್ಲಾಟ್ ನಲ್ಲಿ ಖಾಸಗಿ ಕಾಲೇಜು ವಿದ್ಯಾರ್ಥಿಯ ಮೇಲೆ ಸ್ವಧರ್ಮೀಯ ಯುವಕರಿಂದಲೇ ನೈತಿಕ ಪೊಲೀಸ್ ಗಿರಿ ಘಟನೆ ನಡೆದಿದೆ. ಮಂಗಳೂರಿನ ಬಲ್ಮಠ ಬಳಿಯ ಖಾಸಗಿ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿಗಳು ನಗರದ ಅಲೋಶಿಯಸ್ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಹುಡುಗಿ ವಿಚಾರಕ್ಕೆ ಮುಸ್ಲಿಂ ವಿದ್ಯಾರ್ಥಿಯನ್ನು ಕಿಡ್ನಾಪ್ ಮಾಡಿ ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಗಾಂಜಾ ನಶೆಯಲ್ಲಿದ್ದ ಅನಾನ್ ಮತ್ತು ತಬೀಶ್ ಹಾಗೂ ತಂಡದಿಂದ ಯುವಕನ ಮೇಲೆ ದಾಳಿ ನಡೆದಿದ್ದು, ವಿದ್ಯಾರ್ಥಿಯನ್ನು ಖಾಸಗಿ ಫ್ಲಾಟ್ ನಲ್ಲಿ ಕೂಡಿ ಹಾಕಿ ಮನ ಬಂದಂತೆ ಥಳಿಸಿದ್ದಾರೆ. ಹಲ್ಲೆಗೊಳಗಾದ ವಿದ್ಯಾರ್ಥಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಉಪ್ಪಳದ ಇಬ್ರಾಹಿಂ ಫಾಹಿಂ(18) ಎಂದು ತಿಳಿದುಬಂದಿದೆ. ಸದ್ಯ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಫಾಹಿಂಗೆ ಚಿಕಿತ್ಸೆ ಪಡೆಯುತ್ತಿದ್ದಾನೆ. ಎಸ್ಡಿಪಿಐ ಮುಖಂಡ ಅನ್ವರ್ ಸಾದತ್ ಪುತ್ರನ ನೇತೃತ್ವ ದಲ್ಲಿ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಬಂದರು ಠಾಣೆ ಪೊಲೀಸರು ಓರ್ವನನ್ನು…
ಮಂಗಳೂರು: ಪರಿಚಿತ ವ್ಯಕ್ತಿ ಹಾಗೂ ಆತನ ಕುಟುಂಬವನ್ನು ಕಿಡ್ನ್ಯಾಪ್ ಮಾಡಿ ಪಿಸ್ತೂಲ್ ತೋರಿಸಿ ಸುಲಿಗೆಗೈದ ಮೌಲ್ಯಯುತ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೇ 12ರಂದು ನಗರದ ಅತ್ತಾವರ ಸ್ಟರಕ್ ರಸ್ತೆಯಲ್ಲಿರುವ ಮ್ಯಾಕ್ ಅಪಾರ್ಟ್ ಮೆಂಟ್ ನಲ್ಲಿ ನಿವಾಸಿ ಮಜೀಬ್ ಸೈಯದ್ ರನ್ನು ಪರಿಚಿತರಾದ ನೌಪಾಲ್ ಮತ್ತು ಪುಚ್ಚ ಎಂಬವರು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಅವರಿಗೆ ಪಿಸ್ತೂಲ್ ತೋರಿಸಿ 5 ಲಕ್ಷ ರೂ ಹಣ ಹಾಗೂ ಕಾರು ನೀಡುವಂತ ಒತ್ತಡವೇರಿದ್ದಾರೆ. ಕೊಡಲು ನಿರಾಕರಿಸಿದಾಗ ಅವರು ಉಪಯೋಗಿಸುತ್ತಿದ್ದ ಕಾರು, ಮೊಬೈಲ್ ಮತ್ತು 18000 ರೂ. ಹಾಗೂ ಮುಜೀಬ್ ಸೈಯದ್ ಪುತ್ರಿಯ ಮೊಬೈಲ್ ಅನ್ನು ಸುಲಿಗೆ ಮಾಡಿದ್ದಾರೆ. ಬಳಿಕ ಅವರನ್ನು ವಿವಿಧೆಡೆ ಸುತ್ತಾಡಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಪಿಸ್ತೂಲ್ ತೋರಿಸಿ ವಾಪಾಸ್ 5 ಲಕ್ಷ ಮತ್ತು ಕಾರು ನೀಡುವಂತೆ ಒತ್ತಡವೇರಿದ್ದಾರೆ. ಬಳಿಕ ಮುಜೀಬ್ ಸೈಯದ್ ರವರ ಮನೆಯತ್ತ ಹೋಗಿ ಅವರ ಪತ್ನಿ – ಮಕ್ಕಳನ್ನು ಕಾರಿನ ಹತ್ತಿರಕ್ಕೆ ಬರಮಾಡಿಸಿ ಅವರನ್ನು ಕೂಡ ಕಾರಿನಲ್ಲಿ ಕುಳಿತುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಈ…










