Author: main-admin

ಧರ್ಮಸ್ಥಳ: ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಹಾಗು ಕೊಲೆ ಪ್ರಕರಣ ದಿನದಿಂದ ದಿನಕ್ಕೆ ತೀವ್ರತೆ ಪಡೆಯುತ್ತಿದೆ. ರಾಜ್ಯವ್ಯಾಪಿ ಹೋರಾಟದ ಕಿಚ್ಚು ಹೆಚ್ಚಾಗುತ್ತಿದೆ. ಇದೀಗ ಉಜಿರೆ ಯಿಂದ ಬೆಂಗಳೂರಿಗೆ ಸೌಜನ್ಯ ಪರ ನ್ಯಾಯಕ್ಕಾಗಿ ತ್ರಿಶುಲ್ ಸೇನೆ 305ಕಿ.ಮೀ ಪಾದಯಾತ್ರೆ ಕೈಗೊಂಡಿದೆ. ಬೆಳ್ತಂಗಡಿ ಪಾಂಗಳದ ಸೌಜನ್ಯ ಮನೆಯಿಂದ ಪಾದಯಾತ್ರೆ ಪ್ರಾರಂಭಗೊಂಡಿದೆ. ಸೌಜನ್ಯ ಪೋಷಕರು ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ. ನಿರಂತರವಾಗಿ 3ದಿನ ಪಾದಯಾತ್ರೆ ಕೈಗೊಂಡಿರುವ ತ್ರಿಶುಲ್ ಸೇನೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ದೊರಕಿಸಲು ತ್ರಿಶುಲ್ ಸೇನೆಯಿಂದ ಸರಕಾರಕ್ಕೆ ಹಕ್ಕೊತ್ತಾಯ ಮಾಡುತ್ತಿದ್ದಾರೆ. ಇನ್ನು ಇದೇ ಆಗಸ್ಟ್ 27ರಂದು ದ.ಕ ಹಾಗು ಉಡುಪಿ ಬಿಜೆಪಿ ವತಿಯಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಯಲಿದೆ. ಆಗಸ್ಟ್ 28ರಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೆಳ್ತಂಗಡಿ ಚಲೋ ನಡೆಯಲಿದೆ. ವಿವಿಧ ಜನ ಪ್ರತಿನಿಧಿಗಳು ಹಾಗು ಸಂಘಟನೆಗಳಿಂದ ಸರಕಾರಕ್ಕೆ ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸಲು ಆಗ್ರಹಿಸುತ್ತಿದ್ದಾರೆ.

Read More

ಬೆಂಗಳೂರು: ಚಂದ್ರಯಾನ-3ಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿದಂತ ಸ್ಥಳವನ್ನು ಶಿವಶಕ್ತಿ ಎಂಬುದಾಗಿ ಕರೆಯಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡಿದ್ದಾರೆ. ಇಂದು ಬೆಂಗಳೂರಿನ ಪೀಣ್ಯಾದಲ್ಲಿರುವಂತ ಇಸ್ರೋ ಕಮಾಂಡಿಂಗ್ ಸೆಂಟರ್ ಗೆ ಭೇಟಿ ನೀಡಿದ ಬಳಿಕ, ವಿಜ್ಞಾನಿಗಳ ಜೊತೆಗಿನ ಸಂವಾದದಲ್ಲಿ ಮಾತನಾಡಿದಂತ ಅವರು, ನಿಮ್ಮನ್ನು ಭೇಟಿಯಾಗಿದ್ದು ತುಂಬಾ ಸಂತೋಷ ತಂದಿದೆ. ಇಸ್ರೋ ವಿಜ್ಞಾನಿಗಳ ಸಾಧನೆ ಇಡೀ ವಿಶ್ವವೇ ಕೊಂಡಾಡಿದೆ. ವಿಜ್ಞಾನಿಗಳ ಸಾಧನೆ ನೆನೆದು ಪ್ರಧಾನಿ ಭಾವುಕರಾಗಿ ನುಡಿದರು. ನಿಮ್ಮ ಧೈರ್ಯ, ಶಕ್ತಿ, ಸಾಮರ್ಥ್ಯಗಳಿಗೆ ನನ್ನ ನಮನಗಳು. ದೇಶದ ಘನತೆಯನ್ನು ಉತ್ತುಂಗಕ್ಕೆ ಏರಿಸಿದ್ದಕ್ಕೆ ಧನ್ಯವಾದಗಳು ಎಂದರು. ವಿಶ್ವದ ದೊಡ್ಡ ದೊಡ್ಡ ಸಮಸ್ಯೆಗಳಿಗೆ ಭಾರತ ಪರಿಹಾರ ಕಂಡಿದೆ. ಪ್ರತಿಯೊಬ್ಬ ವಿಜ್ಞಾನಿಗೂ ನನ್ನದೊಂದು ಸಲ್ಯೂಟ್. ಸದ್ಯ ಭಾರತ ಚಂದ್ರನ ಮೇಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಭಾರತದ ವೈಜ್ಞಾನಿಕ ಸಾಧನೆಯನ್ನು ವಿಶ್ವವೇ ಕೊಂಡಾಡುತ್ತಿದೆ. ಇಸ್ರೋ ವಿಜ್ಞಾನಿಗಳ ಸಾಧನೆಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ. ನನ್ನ ತನು, ಮನ ಸಂತೋಷದಿಂದ ಕೂಡಿದೆ. ಸಮರ್ಪಣಾ ಮನೋಭಾವ,…

Read More

ಮಂಗಳೂರು: 8 ವರ್ಷ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮುಂಬೈ ನಲ್ಲಿ ಮಂಗಳೂರು ಪಾಂಡೇಶ್ವರ ಪೋಲಿಸರು ಬಂಧಿಸಿದ್ದರೆ. ಅಭಿಜಿತ್ @ಅಭಿ(30)s/o ಲೋಕನಾಥ್ ಮೋಹಿನಿ ಕಾಂಪೌಂಡ್ ಅರೇಕೆರೆ ಬೈಲ್ ಮುಳಿಹಿತ್ಲು ಬೋಳಾರ ಮಂಗಳೂರು ಈತನ ಮೇಲೆ ದಕ್ಷಿಣ ಪೊಲೀಸ್ ಠಾಣೆಯ CR no.82/15 ಕಲಂ 341.325.504.506.504.ನಂತೆ ಹಾಗೂ CR no 86/15 ಕಲಂ448. 395 ನಂತೆ ಪ್ರಕರಣ ದಾಖಲಾಗಿ ಆರೋಪಿಯು ದಸ್ತಗಿರಿಗೆ ಸಿಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕಾರಣ ಮಾನ್ಯ ನ್ಯಾಯಾಲಯವು LPC 04/2023 ರಂತೆ ಬಾಕಿಯಾದ ಪ್ರಕರಣವೆಂದು LPC ಮಾಡಿತ್ತು ಅದರಂತೆ ಆರೋಪಿಯ ಮೇಲೆ LOC ಹೊರಡಿಸಿ ದಿನಾಂಕ 23/09/2023 ರಂದು ಪಾಂಡೇಶ್ವರ ಪೊಲೀಸರು PSI ಮನೋಹರ ಮಾರ್ಗದರ್ಶನದಲ್ಲಿ ಹೆಡ್ ಕಾನ್ಸ್ಟೇಬಲ್ ಪುಟ್ಟರಾಮ್, ಪಿಸಿ ಯಶವಂತ್ , ರಾಥೊಡ್ ಪಿಸಿ ಅಕ್ಬರ್ ರ್ಕಾರ್ಯಾಚರಣೆ ನಡೆಸಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಆರೋಪಿಗೆ ಈಗ ನ್ಯಾಯಾಂಗ ಬಂಧನ ವಿಧಿಸಿದೆ.

Read More

ಮಂಗಳೂರು:ನಿಷೇಧಿಸಲ್ಪಟ್ಟಿರುವ ಇ-ಸಿಗರೇಟ್ ಮತ್ತು ಸರಕಾರದ ಎಚ್ಚರಿಕೆಯನ್ನು ಪ್ಯಾಕೆಟ್ ಮೇಲೆ ನಮೂದಿಸದ ವಿದೇಶಿ ಸಿಗರೇಟ್‌ಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ನಗರದ ಮೂರು ಅಂಗಡಿಗಳ ಟ್ರೇಡ್ ಲೈಸನ್ಸ್‌ ರದ್ದುಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳೂರು ಮಹಾನಗರ ಪಾಲಿಕೆಗೆ ಪೊಲೀಸರು ಪತ್ರ ಬರೆದಿದ್ದಾರೆ. ಬರ್ಕೆ ಪೊಲೀಸರು ಆ. 21ರಂದು ಲಾಲ್‌ಬಾಗ್ ಸಾಯಿಬಿನ್ ಕಾಂಪ್ಲೆಕ್ಸ್‌ನ ಮೂರು ಅಂಗಡಿಗಳಿಗೆ ದಾಳಿ ನಡೆಸಿ ಸುಮಾರು 2.70 ಲಕ್ಷರೂ. ಮೌಲ್ಯದ ಇ-ಸಿಗರೇಟ್ ಮತ್ತು ವಿದೇಶಿ ಸಿಗರೇಟ್‌ಗಳನ್ನು ವಶಪಡಿಸಿಕೊಂಡು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆರೋಪಿಗಳು ಈ ಹಿಂದೆ ಕೂಡ ಇದೇ ರೀತಿಯ ಕಾನೂನು ಬಾಹಿರ ವ್ಯವಹಾರ ನಡೆಸಿದ್ದ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು. ಪುನರಾವರ್ತಿತ ಪ್ರಕರಣ ಹಿನ್ನೆಲೆಯಲ್ಲಿ ಟ್ರೇಡ್ ಲೈಸನ್ಸ್‌ ರದ್ದತಿಗೆ ಪತ್ರ ಬರೆಯಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ

Read More

ಮಂಗಳೂರು: ಪುತ್ತೂರಿನಲ್ಲಿ ನಿನ್ನೆ ಕೊಲೆಯಾದ ಯುವತಿ ಗೌರಿ ಮತ್ತು ಕೊಲೆಗಾರ ಪದ್ಮರಾಜ್‌ ಅವರು ಕಳೆದ 6 ವರ್ಷಗಳಿಂದ ಪರಿಚಿತರಾಗಿದ್ದು, ಇದೀಗ ಯುವತಿಯ ಕೊಲೆಯೊಂದಿಗೆ ಅವರೊಳಗಿನ ಪರಿಚಯ ಮತ್ತು ಪ್ರೀತಿ ಸಹಿತ ಎಲ್ಲವೂ ಅವಸಾನಗೊಂಡಿದೆ. ಮೃತ ಯುವತಿ ಗೌರಿಯ ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ಇಂದು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯ ಶವಾಗಾರದಲ್ಲಿ ನಡೆಸಿ ಬಳಿಕ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ವೆನ್ಲಾಕ್‌ ಆಸ್ಪತ್ರೆಯ ಆವರಣದಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಸೇರಿದ್ದರು. ಪ್ರಕರಣದ ಕುರಿತಂತೆ ಜಿಲ್ಲಾ ಎಸ್.ಪಿ. ರಿಷ್ಯಂತ್‌ ಸಿ. ಬಿ. ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿ ಗೌರಿ ವಿಟ್ಲದ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿಯೇ ಪದ್ಮರಾಜನ ಪರಿಚಯವಾಗಿತ್ತು. ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿತ್ತು. ಈ 6 ವರ್ಷಗಳ ಅವಧಿಯಲ್ಲಿ ಮಧ್ಯದಲ್ಲೊಮ್ಮೆ ಅವರೊಳಗೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿತ್ತು. 2020 ರಲ್ಲಿ ಗೌರಿ ಆತನ ವಿರುದ್ಧ ವಿಟ್ಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದಳು. ಈ ಸಂದರ್ಭದಲ್ಲಿ ಪೊಲೀಸರು ಇಬ್ಭರನ್ನೂ ಠಾಣೆಗೆ ಕರೆಸಿ ಇನ್ನುಮುಂದೆ…

Read More

ಮೂಲ್ಕಿ: ಕ್ರಿಮಿನಲ್ ಪ್ರಕರಣದಲ್ಲಿ ನ್ಯಾಯಾಲಯದ ವಾರಂಟ್ ಆದೇಶದಂತೆ ಬಂಧಿಸಲು ಬಂದ ಸಂದರ್ಭದಲ್ಲಿ ಆರೋಪಿಯೋರ್ವ ಕೀಟನಾಶಕ ಸೇವಿಸಿ, ಬಂಧಿಸಿ ಠಾಣೆಗೆ ಕರೆದೊಯ್ಯುವ ಸಂದರ್ಭದಲ್ಲಿ ಅಸ್ವಸ್ಥನಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ2017 ರಲ್ಲಿ ನಡೆದ ಅಪರಾಧ ಪ್ರಕರಣ ಒಂದರ ಆರೋಪಿಯಾಗಿದ್ದ ಮಂಗಳೂರಿನ ಮುಚ್ಚೂರು ಗ್ರಾಮದ ಕರುಣಾಕರ ಶೆಟ್ಟಿ (44) ಎಂಬವರ ವಿರುದ್ದ ವಾರಂಟ್ ಕಾರ್ಯಗತಗೊಳಿಸುವಂತೆ ನ್ಯಾಯಲಯದ ಆದೇಶ ನೀಡಿತ್ತು. ಕರುಣಾಕರ ಶೆಟ್ಟಿ ಉಡುಪಿಯ ಶಿವಳ್ಳಿ ಯಲ್ಲಿರುವ ರಸಿಕ ಬಾರ್ ನಲ್ಲಿ ಕೆಲಸ ಮಾಡಿಕೊಂಡಿರುವ ಬಗೆಗಿನ ಖಚಿತ ಮಾಹಿತಿಯ ಮೇರೆಗೆ ಬಜಪೆ ಪೋಲಿಸ್ ಠಾಣಾ ಉಪನಿರೀಕ್ಷಕರಾದ ಗುರುವಪ್ಪ ಕಾಂತಿ ಮತ್ತು ಸಿಬ್ಬಂದಿಗಳು ಆಗಸ್ಟ್ 24 ರಂದು ಸಂಜೆ ವಾರಂಟ್ ಆದೇಶ ಕಾರ್ಯಗತಗೊಳಿಸಿ ಆರೋಪಿಯನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ಆರೋಪಿ ಕೆಲಸ ಮಾಡಿಕೊಂಡಿರುವ ಉಡುಪಿಯ ಶಿವಳ್ಳಿಯ ರಸಿಕ ಬಾರ್ ಗೆ ಬಂದಿದ್ದರು. ಪೊಲೀಸರು ಆಪಾದಿತನನ್ನು ವಶಕ್ಕೆ ಪಡೆಯುವ ಸಮಯ ತಾನು ಬಟ್ಟೆ ಹಾಕಿಕೊಂಡು ಬರುವುದಾಗಿ ಬಾರ್‌ನ…

Read More

ಮಂಗಳೂರು: ಆ್ಯಪ್ ಮೂಲಕ ಸಾಲ ಪಡೆದ ಯುವತಿಯಿಂದ ಹೆಚ್ಚಿನ ಹಣಕ್ಕೆ ಬೇಡಿಕೆ ಸಲ್ಲಿಸಿ ನಗ್ನ ಚಿತ್ರ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿ ಎ.15ರಂದು ಗೂಗಲ್ ಪ್ಲೇ ಸ್ಟೋರ್‌ನಿಂದ ‘ಕ್ವಿಕ್ ಮನಿ’ ಎಂಬ ಲೋನ್ ಆ್ಯಪ್ ಡೌನ್‌ಲೋಡ್ ಮಾಡಿ 10,000 ರೂ. ಸಾಲಕ್ಕೆ ಅರ್ಜಿ ಹಾಕಿದ್ದಳು . ತಕ್ಷಣ ಆಕೆಯ ಖಾತೆಗೆ 7,500 ರೂ. ಜಮೆಯಾಗಿತ್ತು. ಕೆಲವು ದಿನಗಳ ಬಳಿಕ ಸಾಲ ಮರುಪಾವತಿ ಮಾಡಿದ್ದಳು. ಬಳಿಕ ಹಲವು ವಾಟ್ಸ್‌ಆ್ಯಪ್ ಸಂಖ್ಯೆಗಳಿಂದ ಕರೆ ಮಾಡಿದ ಅಪರಿಚಿತರು ಪುನಃ ಸಾಲ ಪಡೆಯಬೇಕು ಎಂದು ಒತ್ತಾಯಿಸಿದರಲ್ಲದೆ ಆಕೆಯ ಖಾತೆಗೆ 14,000 ರೂ. ಜಮೆ ಮಾಡಿದ್ದರು. ಅದನ್ನು ಕೂಡ ತಾನು ಮರುಪಾವತಿ ಮಾಡಿದ್ದಳು.ಇದಾದ ನಂತರವೂ ಕರೆ ಮಾಡಿದ ಅಪರಿಚಿತರು ಹೆಚ್ಚಿನ ಹಣ ಪಾವತಿ ಮಾಡುವಂತೆ ಒತ್ತಾಯಿಸಿದರಲ್ಲದೆ ಆಕೆಯ ಖಾತೆಯಲ್ಲಿದ್ದ ಖಾತೆಯಿಂದ 51,000 ರೂ. ವರ್ಗಾಯಿಸಿಕೊಂಡರು. ಅಲ್ಲದೆ ಮತ್ತಷ್ಟು ಹಣ ನೀಡುವಂತೆ ಒತ್ತಾಯಿಸಿದರು.ಒಂದು ವೇಳೆ ಹಣ ನೀಡದಿದ್ದರೆ ಆಕೆಯ ಫೋಟೊವನ್ನು…

Read More

ಕಾಸರಗೋಡು: ಶಾಲಾ ವಾಹನದಡಿಗೆ ಬಿದ್ದು ನರ್ಸರಿ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಆ.24ರಂದು ಕಾಸರಗೋಡಿನ ಕಂಬಾರ್ ಸಿರಿಬಾಗಿಲು ಎಂಬಲ್ಲಿ ನಡೆದಿದೆ. ಸಿರಿ ಬಾಗಿಲಿನ ಮುಹಮ್ಮದ್ ಸುಬೈರ್ ಎಂಬವರ ಪುತ್ರಿ ಆಯಿಷಾ ಸೆಯಾ (4) ಮೃತ ವಿದ್ಯಾರ್ಥಿನಿ. ಶಾಲೆ ಬಿಟ್ಟು ಸ್ಕೂಲ್ ವಾಹನದಲ್ಲಿ ಮನೆ ಬಳಿ ಬಾಲಕಿಯನ್ನು ಇಳಿಸಿ ಬಸ್ಸನ್ನು ಹಿಂದಕ್ಕೆ ತೆಗೆಯುತ್ತಿದ್ದಾಗ ಅದೇ ಬಸ್ಸಿನಡಿಗೆ ಆಯಿಷಾ ಬಿದ್ದಿದ್ದಾಳೆ. ಈ ವೇಳೆ ಸ್ಥಳೀಯರು ಕೂಡಲೇ ವಿದ್ಯಾರ್ಥಿನಿಯನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲುಪಿಸಿದರಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ

Read More

ಹೈದರಾಬಾದ್: ತನ್ನ ಮದುವೆಗೆ ಸೂಕ್ತ ಜೋಡಿ ಸಿಗಲಿಲ್ಲ ಎಂಬ ಕಾರಣಕ್ಕೆ 45 ವರ್ಷದ ಮಹಿಳೆಯನ್ನು ಆಕೆಯ ಮಗ ಕೊಲೆ ಮಾಡಿರುವ ಘಟನೆ ಸಿದ್ದಿಪೇಟ್ ಜಿಲ್ಲೆಯಲ್ಲಿ ನಡೆದಿದೆ. ಬುಧವಾರ ಮತ್ತು ಗುರುವಾರ ಮಧ್ಯರಾತ್ರಿ ಜಿಲ್ಲೆಯ ಬಂಡಾ ಮೈಲಾರಂ ಗ್ರಾಮದ ಮಹಿಳೆಯ ನಿವಾಸದಲ್ಲಿ ಈ ಘಟನೆ ನಡೆದಿದೆ. ಕೊಲೆಗೆ ಸಂಬಂಧಿಸಿದಂತೆ ಮಹಿಳೆಯ ಮಗ ಮತ್ತು ಇನ್ನೊಬ್ಬ ಸಂಬಂಧಿಯನ್ನು ಬಂಧಿಸಲಾಗಿದೆ. ಮಹಿಳೆಯ ಮಗಳು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು ತನಿಖೆಯ ಸಂದರ್ಭದಲ್ಲಿ ಸಂತ್ರಸ್ತೆಯ ಮಗ ಮತ್ತು ಇನ್ನೊಬ್ಬ ಸಂಬಂಧಿ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದರು. ಮಹಿಳೆಯನ್ನು ಇಟ್ಟಿಗೆಯಿಂದ ಹೊಡೆದು ಕೊಂದರು. ಪೊಲೀಸರನ್ನು ದಾರಿ ತಪ್ಪಿಸುವ ಸಲುವಾಗಿ ಅವರು ಮಹಿಳೆಯ ಕತ್ತು ಸೀಳಿ ಕಾಲುಗಳನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಕಾಸರಗೋಡು: ಶಾಲಾ ವಾಹನದಡಿಗೆ ಬಿದ್ದು ನರ್ಸರಿ ವಿದ್ಯಾರ್ಥಿನಿ ಮೃತಪಟ್ಟ ದಾರುಣ ಘಟನೆ ಇಂದು ಮಧ್ಯಾಹ್ನ ಕಂಬಾರ್ ಸಿರಿಬಾಗಿಲು ಎಂಬಲ್ಲಿ ನಡೆದಿದೆ. ಸಿರಿಬಾಗಿಲಿನ ಮುಹಮ್ಮದ್ ಸುಬೈರ್ ರವರ ಪುತ್ರಿ ಆಯಿಷಾ ಸೆಯಾ (4) ಮೃತ ಪಟ್ಟವಳು.ಮನೆ ಸಮೀಪ ಈ ದುರಂತ ನಡೆದಿದೆ ಶಾಲೆ ಬಿಟ್ಟು ಮನೆ ಬಳಿ ಬಾಲಕಿಯನ್ನು ಇಳಿಸಿ ಬಸ್ಸನ್ನು ಹಿಂದಕ್ಕೆ ತೆಗೆಯು ತ್ತಿದ್ದಾ ಗ ಅದೇ ಬಸ್ಸಿನಡಿ ಸಿಲುಕಿ ಈ ಘಟನೆ ನಡೆದಿದೆ. ಸ್ಥಳೀಯರು ಧಾವಿಸಿ ಬಂದು ಕೂಡಲೇ ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತಪಟ್ಟಿದ್ದಳು. ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ಬಾಲಕಿ ನೆಲ್ಲಿಕುಂಜೆ ಖಾಸಗಿ ಶಾಲೆಯ ನರ್ಸರಿ ವಿದ್ಯಾರ್ಥಿನಿಯಾಗಿದ್ದಳು.

Read More