Author: main-admin

ಕೈಕೊಟ್ಟ ಮಳೆಯಿಂದ ಕರಾವಳಿ ದಿನೇ ದಿನೆ ಬಿಸಿ ಕಾವಲಿಯಂತಾಗುತ್ತಿದ್ದು ಕೃಷಿಕರನ್ನು, ಜನತೆಯನ್ನು ಈಗಾಗಲೇ ಚಿಂತೆಗೀಡುಮಾಡಿದೆ. ಎಕಾಏಕಿ ಮಾಯವಾದ ಮಳೆಯೇ ಮಧ್ಯೆ ಇದೀಗ ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿ ಬಿರುಗಾಳಿ ಎದ್ದಿದ್ದು ಈ ಬಾರಿಯ ಮೀನುಗಾರಿಕಾ ಋತು ಆರಂಭವಾಗುತ್ತಿರುವ ಸಂದರ್ಭದಲ್ಲೇ ಅನೇಕ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಮೀನುಗಾರರನ್ನು ಈ ಅನಿರೀಕ್ಷಿತ ವಿದ್ಯಮಾನ ಆತಂಕಕ್ಕೀಡು ಮಾಡಿದೆ.ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಭಾರಿ ನಿರೀಕ್ಷೆಗಳೊಂದಿಗೆ ಕಡಲಿಗೆ ಇಳಿದ ಬೋಟುಗಳು ಇದೀಗ ಅರ್ಧದಲ್ಲೇ ಬಂದರಿಗೆ ಮರಳತೊಡಗಿವೆ. ಆಳಸಮುದ್ರದಲ್ಲಿ ಭಾರಿ ಅಲೆಗಳು ಏಳುತ್ತಿವೆ. ಬಿರುಗಾಳಿ, ಮಳೆಯಿಂದಾಗಿ ಮೀನುಗಾರಿಕೆ ನಡೆಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅರ್ಧದಲ್ಲೇ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಬಂದರಿಗೆ ಮರಳಿದ್ದೇವೆ. ಇದರಿಂದ ಸಾಕಷ್ಟು ನಷ್ಟ ಉಂಟಾಗಿದೆ ಎಂದು ಮೀನುಗಾರರೊಬ್ಬರು ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನೀಗಾಗಲೇ 250 ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ದಡಕ್ಕೆ ಮರಳಿವೆ. ಎರಡು ದಿನಗಳಿಂದ ಬಿರುಗಾಳಿ, ಭಾರಿ ಪ್ರಮಾಣದ ಅಲೆಗಳು, ಮಳೆಯಿಂದಾಗಿ ಅರಬ್ಬಿ ಸಮುದ್ರ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಆತಂಕಗೊಂಡು ಬೋಟುಗಳನ್ನು ತೀರಕ್ಕೆ…

Read More

ಮಂಗಳೂರು : ಅನ್ಯಕೋಮಿನ ವ್ಯಕ್ತಿ ಮೇಲೆ ತಂಡದಿಂದ ತಲವಾರು ದಾಳಿ ನಡೆದ ಘಟನೆ ಮಂಗಳೂರಿನ ಕಾವೂರಿನ ಶಾಂತಿನಗರದಲ್ಲಿ ನಡೆದಿದೆ. ಮೂವರು ಆರೋಪಿ ಗಳನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಪಂಜಿಮೊಗರು ನಿವಾಸಿ ಚರಣ್(23), ಕುಳಾಯಿ ನಿವಾಸಿ ಸುಮಂತ್ (24), ಕೋಡಿಕಲ್ ನಿವಾಸಿ ಅವಿನಾಶ್ (24) ಬಂಧಿತರು, ಆಗಸ್ಟ್ 21ರಂದು ರಾತ್ರಿ ಕಾವೂರಿನ ಎಂವಿ ಶೆಟ್ಟಿ ಕಾಲೇಜು ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಅಡ್ಡಗಟ್ಟಿದ್ದ ತಂಡ, ತಲವಾರು ದಾಳಿಯಿಂದ ಮುಖಕ್ಕೆ ಗಾಯವಾಗಿದ್ದು ಯುವಕನನ್ನು ನಗರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Read More

ಉಡುಪಿ: ನಾಗರ ಪಂಚಮಿ ಹಬ್ಬದ ಸಂಭ್ರಮ ಇದೇ ವೇಳೆ ಕಾಪುವಿನಲ್ಲಿ ಜೀವಂತ ಹಾವಿಗೆ ಪೂಜೆ, ಜಲಾಭಿಷೇಕ ನಡೆದಿದ್ದು ಭಕ್ತರು ಪುಳಕಗೊಂಡಿದ್ದಾರೆ. ಕಾಪು ತಾಲೂಕಿನ ಮಜೂರಿನಲ್ಲಿರುವ ಗೋವರ್ಧನ ಭಟ್ ಮನೆಯಲ್ಲಿ ಈ ಪೂಜೆ ನಡೆಯಿತು. ಕಳೆದ 20 ವರ್ಷಗಳಿಂದ ಅಪಘಾತದಿಂದ ಗಾಯಗೊಂಡ ನಾಗರ ಹಾವುಗಳ ರಕ್ಷಣೆ ಮಾಡುತ್ತಿರುವ ಭಟ್ , ಅವುಗಳಿಗೆ ಆರೈಕೆ ಮಾಡಿ ಕಾಡಿಗೆ ಬಿಡುತ್ತಿದ್ದಾರೆ. ಇವತ್ತು ತಮ್ಮ ಆರೈಕೆಯಿಂದ ಗಾಯಗೊಂಡು ಗುಣಮುಖವಾದ ನಾಗರಹಾವಿಗೆ ಭಟ್ಟರ ಮನೆಯಲ್ಲಿ ಜಲಾಭಿಷೇಕ ಮಾಡಿ, ದೀಪ ಬೆಳಗಲಾಯಿತು. ಗೋವರ್ಧನ ಭಟ್ ಅವರು ಕಾಪು ಭಾಗದಲ್ಲಿ ನಾಗರ ಹಾವಿನ ವೈದ್ಯರೆಂದೇ ಪ್ರಸಿದ್ದಿ ಪಡೆದಿದ್ದಾರೆ.

Read More

ಮಂಗಳೂರು : ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಜಗಳವಾಡುತ್ತಿದ್ದ ಇಬ್ಬರನ್ನು ಬಜ್ಪೆ ಠಾಣೆ ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ. ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪುರ ಕೈಕಂಬ ಬಸ್ ನಿಲ್ದಾಣದ ಸಮೀಪ ಘಟನೆ ನಡೆದಿದೆ. ಬಂಧಿತರನ್ನು ಬಂಟ್ವಾಳ ತಾಲೂಕು ತೆಂಕಬೆಳ್ಳೂರು ಗ್ರಾಮದ ನಿವಾಸಿ ಶಿವಪ್ರಸಾದ್ (39) ಮತ್ತು ಶಕ್ತಿನಗರ ಕಾರ್ಮಿಕ ಕಾಲನಿ‌ ನಿವಾಸಿ ಷಡ್ರಕ್ ಇಮ್ಯಾನುವಲ್ ಯಾನೆ ಮನು (39) ಎಂದು ತಿಳಿದು ಬಂದಿದೆ. ಆರೋಪಿಗಳು ಗುರುಪುರ ಕೈಕಂಬ ಬಸ್ ನಿಲ್ದಾಣದಲ್ಲಿ ವೈಯಕ್ತಿಕ ವಿಚಾರವಾಗಿ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿ ಸುತ್ತಾ ಹೊಡೆದಾಡಿಕೊಂಡಿದ್ದಾರೆ.ಈ ಬಗ್ಗೆ ಸ್ಥಳೀಯರು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ತೆರಳಿದ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Read More

ಮಂಗಳೂರು: ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಆ. 6ರಿಂದ 20ರವರೆಗೆ ಸಂಚಾರ ಪೊಲೀಸರು ನಡೆಸಿದ ತಪಾಸಣೆಯ ಸಂದರ್ಭ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ 298 ಮಂದಿ ಚಾಲಕ-ಸವಾರರ ಚಾಲನಾ ಪರವಾನಿಗೆ (ಡಿಎಲ್) ರದ್ದತಿಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ (ಆರ್‌ಟಿಒ) ಶಿಫಾರಸು ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಮಿತ ವೇಗ ಮತ್ತು ನಿರ್ಲಕ್ಷ್ಯದ 71, ಮದ್ಯಪಾನಗೈದ 20, ಗೂಡ್ಸ್ ವಾಹನಗಳಲ್ಲಿ ಜನರ ಸಾಗಾಟ 42, ವಾಹನ ಸಂಚಾರ/ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿರುವ 4, ಕೆಂಪು ದೀಪ ಉಲ್ಲಂಘಿಸಿದ 10, ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಗ್‌ನ 7, ಹೆಲ್ಮೆಟ್ ಧರಿಸದ 128, ಸೀಟ್ ಬೆಲ್ಟ್ ಹಾಕದ 16 ಪ್ರಕರಣ ಹೀಗೆ ಒಟ್ಟು 298 ಪ್ರಕರಣಗಳಿಗೆ ಸಂಬಂಧಿಸಿದಂತೆ ಡಿಎಲ್ ಅಮಾನತಿಗೆ ಶಿಫಾರಸು ಮಾಡಲಾಗಿದೆ.ಇನ್ನು ಕಳೆದ 15 ದಿನಗಳ ಅವಧಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ಅನಧಿಕೃತವಾಗಿ ಪಾರ್ಕ್ ಮಾಡಲಾದ 593, ಕರ್ಕಶ ಹಾರ್ನ್ ಬಳಸುತ್ತಿದ್ದ 106, ಟಿಂಟ್…

Read More

ಮಂಗಳೂರು: ಸುರತ್ಕಲ್ ಠಾಣಾ ವ್ಯಾಪ್ತಿಯ ಜನತಾ ಕಾಲನಿಯಲ್ಲಿ ಇಬ್ಬರಿಗೆ ನಡೆಸಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಡ್ಯಾ ಗ್ರಾಮದ ಆಶ್ರಯ ಕಾಲನಿ ನಿವಾಸಿ ಚೆನ್ನಪ್ಪ ಅಲಿಯಾಸ್ ಮುತ್ತು(18) ಬಂಧಿತ ಆರೋಪಿ. 2023ರ ಜುಲೈ 16ರಂದು ಸಂಜೆ 4.30ಕ್ಕೆ ರೋಜ‌ ಡಿಕೋಸ್ಟಾ ಎಂಬವರು ತಮ್ಮ ಪರಿಚಯದ ಜಾರ್ಖಂಡ್ ನಿವಾಸಿ ಶಾಹಿಲ್ ನೊಂದಿಗೆ ಮಳೆ ಬಂದ ಹಿನ್ನೆಲೆಯಲ್ಲಿ ಜನತಾ ಕಾಲನಿಗೆ ಹೋಗುವ ರಸ್ತೆ ಬದಿಯಲ್ಲಿರುವ ಪಾಳು ಬಿದ್ದ ಮನೆಯ ಬಳಿ ನಿಂತುಕೊಂಡಿದ್ದರು‌. ಈ ವೇಳೆ ಆರೋಪಿಗಳಾದ ಪ್ರಶಾಂತ್ ಭಂಡಾರಿ ಹಾಗೂ ಆತನ ಸಹಚರರು ಹಲ್ಲೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಭಂಡಾರಿ ಹಾಗೂ ಬಸವರಾಜ್ ನನ್ನು ಜುಲೈ 17ರಂದು ದಸ್ತಗಿರಿ ಮಾಡಿದ್ದರು. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಇದೀಗ ಮತ್ತೋರ್ವ ಆರೋಪಿ ಚೆನ್ನಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು : ಹಳೇ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯನ್ನು ಉಳ್ಳಾಲದ ಕೊಣಾಜೆ ಬೆಳ್ಮದಿಂದ ಮಂಗಳೂರು ನಗರದ ಬಂದರು ಪೊಲೀಸರು ಬಂಧಿಸಿದ್ದಾರೆ. ಕೊಣಾಜೆ ಬೆಳ್ಮದ ಸಿರಾಜ್ ಮಂಝಿಲ್ ನ ಇಮ್ಮಿಯಾಜ್ ಬಂಧಿತ ಆರೋಪಿಯಾಗಿದ್ದಾರೆ. ಕೊಣಾಜೆ ಪೊಲೀಸರ ಸಹಕಾರದಿಂದ ಮಂಗಳೂರು ನಗರ ಉತ್ತರ ಠಾಣಾ ಪೊಲೀಸರು ಆರೋಪಿ ಇಮ್ತಿಯಾಜ್‌ನನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರು ಪಡಿಸಿದ್ದಾರೆ. 2017 ರ ಪ್ರಕರಣದಲ್ಲಿ ಇಮ್ತಿಯಾಜ್ ಪೊಲೀಸರಿಗೆ ಬೇಕಾಗಿದ್ದು ಆತ ತಲೆ ಮರೆಸಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Read More

ಕುಂದಾಪುರ: ಮಹಿಳೆಯೊಬ್ಬರು ಕುಂದಾಪುರ ಪೊಲೀಸ್ ಠಾಣೆಯ ಉಪನಿರೀಕ್ಷಕ ವಿನಯ್ ಎಂ.ಕೊರ್ಲಹಳ್ಳಿ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ರವಿವಾರ ನಡೆದಿದೆ. ಬೀಜಾಡಿ ಗ್ರಾಮದ ಕೋಟೇಶ್ವರ ಎಂಬಲ್ಲಿರುವ ಫ್ಯಾಶನ್ ಡಿಸೈನ್ ಟೈಲರ್ ಮತ್ತು ಫ್ಯಾನ್ಸಿ ಸ್ಟೋರ್ಸ್ ಎಂಬ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ಸಾಮಗ್ರಿಗಳನ್ನು ಇಟ್ಟು ಸಾರ್ವಜನಿಕರಿಗೆ ತೊಂದರೆ ಮಾಡುತ್ತಿರುವುದಾಗಿ ಕರೆ ಬಂದ ಹಿನ್ನೆಲೆಯಲ್ಲಿ ಎಸ್ಸೈ ವಿನಯ್ ಕೊರ್ಲಹಳ್ಳಿ ಸ್ಥಳಕ್ಕೆ ತೆರಳಿ ಅಂಗಡಿಯಲ್ಲಿದ್ದ ಸರೋಜ ದಾಸ್(43) ಎಂಬವರನ್ನು ವಿಚಾರಿಸಿದರು. ಆಗ ಮಹಿಳೆ ಉದ್ದಟತನದಿಂದ ಮಾತನಾಡಿ ಎಸ್ಸೈಗೆ ಹೊಡೆ ಯಲು ಬಂದಿರುವುದಾಗಿ ದೂರಲಾಗಿದೆ. ಬಳಿಕ ಏಕಾಏಕಿ ಬಾಟಲಿಯಿಂದ ಸೀಮೆ ಎಣ್ಣೆಯನ್ನು ಮೈಗೆ ಎರಚಲು ಬಂದಾಗ ಎಸ್ಸೈ ತಪ್ಪಿಸಿಕೊಂಡಿದ್ದಾರೆನ್ನಲಾಗಿದೆ. ನಂತರ ಆಕೆ ಸೀಮೆಎಣ್ಣೆಯನ್ನು ಅಲ್ಲಿಯೇ ಕೆಳಗೆ ಹಾಕಿ ಬೆಂಕಿ ಹಾಕಿದ್ದು, ಆಗ ಎಸ್ಸೈ ಮತ್ತು ಸಿಬ್ಬಂದಿ ನಂದಿಸಲು ಮುಂದಾದಾಗ ಆಕೆಯು ಸಮವಸ್ತ್ರಕ್ಕೆ ಕೈ ಹಾಕಿ ಎಳೆದು ದೂಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ…

Read More

ಮಂಗಳೂರು : ಮಂಗಳೂರು ಹೊರವಲಯದ ಸುರತ್ಕಲ್‌ನಲ್ಲಿ ಜೆಸಿಬಿ ಯಂತ್ರ ಬಳಸಿ ನಡೆಸಲು ಯತ್ನಿಸಿದ್ದ ಎಟಿಎಂ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ಕೃತ್ಯಕ್ಕೆ ಬಳಸಿದ ಜೆಸಿಬಿ ಸಹಿತ 15.50 ಲಕ್ಷದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ದೇವರಾಜ್ @ದೇವ್ (24), ಭರತ್ ಹೆಚ್(20), ನಾಗರಾಜ ನಾಯ್ಕ @ನಾಗು (21), ಮ,ತ್ತು ಧನ ಸಹಾಯ ಮಾಡಿದ ಧನರಾಜ್ ನಾಯ್ಕ್@ಧನು(22) ಬಂಧಿತ ಆರೋಪಿಗಳಾಗಿದ್ದಾರೆ, ಆರೋಪಿಗಳಿಂದ 50 ,000 ಮೌಲ್ಯದ ಸ್ಪ್ಲೆಂಡರ್ ಬೈಕ್, 2 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕ್ರಮಿನಲ್ ಹಿನ್ನೆಲೆ ಉಳ್ಳವರಾಗಿದ್ದು ಈ ಹಿಂದೆ ಕೂಡ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದು ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಗಸ್ಟ್ 4 ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾದಾಯಿನಿ ಸ್ಕೂಲ್ ಶಾಲೆ ಪಕ್ಕದ ರಾಜಶ್ರೀ ಕಟ್ಟಡದಲ್ಲಿನ ದಿ ಸೌತ್ ಇಂಡಿಯನ್ ಬ್ಯಾಂಕಿನ ಎಟಿಎಂ ಗಾಜನ್ನು ಒಡೆದು ಹಾಕಿ…

Read More

ಮಂಗಳೂರು: ನರ್ಸಿಂಗ್ ಕಾಲೇಜು ವಿದ್ಯಾರ್ಥಿಯೊಬ್ಬ ಏನೆಲ್ಲ ಕಳ್ಳಾಟಗಳನ್ನು ನಡೆಸಿ ಜನರನ್ನು ವಂಚಿಸಿದ್ದಾನೆ ನೋಡಿ. ತಾನು ಪೊಲೀಸ್ ಹಾಗೂ ‘ರಾ’ ಅಧಿಕಾರಿ ಎಂದು ಹೇಳಿಕೊಂಡು ವಂಚಿಸುತ್ತಿದ್ದ ವಿದ್ಯಾರ್ಥಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಕೇರಳದ ಇಡುಕಿ ಮೂಲದ ಬೆನೆಡಿಕ್ಟ್ ಸಾಬು ಬಂಧಿತ ಆರೋಪಿ. ಮಂಗಳೂರಿನ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈತ ಕೆಲವರ ಬಳಿ ತಾನು RAW ಅಧಿಕಾರಿ ಎಂದು ಹೇಳುತ್ತಿದ್ದ, ಇನ್ನು ಕೆಲವರ ಬಳಿ ತಾನು ಸಬ್ ಇನ್ಸ್ ಪೆಕ್ಟರ್ ಎಂದು ಹೇಳಿ ವಂಚಿಸುತ್ತಿದ್ದ. 6 ತಿಂಗಳ ಹಿಂದೆ ಜಿಎನ್ ಎಂ ಕೋರ್ಸ್ ಗೆ ಸೇರಿದ್ದ ಬೆನೆಡಿಕ್ ಸಾಬು ತಾನು ಕೇರಳದ ಕೃಷಿ ಅಧಿಕಾರಿ ಎಂದು ಪ್ರಾಂಶುಪಲರ ಬಳಿ ಹೇಳಿದ್ದನಂತೆ. ಸಧ್ಯ ತಾನು ‘ರಾ’ ಫೀಲ್ಡ್ ಏಜೆಂಟ್ ಆಗಿರುವುದಾಗಿ ಹೇಳುತ್ತಿದ್ದ ಎನ್ನಲಾಗಿದೆ. ಕಾಲೇಜಿನಲ್ಲಿ ಡ್ರಗ್ಸ್ ಅವೇರ್ ನೆಸ್ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯ ಕಳ್ಳಾಟ ಬೆಳಕಿಗೆ ಬಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Read More