Author: main-admin

ಉಡುಪಿ: ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಜಾರಿ ಬಿದ್ದು ಯುವಕ ನಾಪತ್ತೆಯಾಗಿರುವ ಘಟನೆ ಬೈಂದೂರು ತಾಲೂಕಿನ ಕೊಲ್ಲೂರು ಬಳಿ ಇರುವ ಅರಶಿನಗುಂಡಿ ಜಲಪಾತದಲ್ಲಿ ನಡೆದಿದೆ. ಭದ್ರಾವತಿ ಮೂಲದ ಶರತ್ ಕುಮಾರ್(23) ನಾಪತ್ತೆಯಾದ ಯುವಕ. ಜಾರಿ ಬೀಳ್ತಿರೋ ದೃಶ್ಯ ಸ್ನೇಹಿತನ ಮೊಬೈಲ್ ನಲ್ಲಿ ಸೆರೆಯಾಗಿದೆ. ಯುವಕನಿಗಾಗಿ ಅಗ್ನಿಶಾಮಕ ದಳ ಶೋಧ. ಮುಳುಗು ತಜ್ಙರಿಂದ ನಾಪತ್ತೆಯಾದ ಯುವಕನಿಗೆ ಶೋಧ ಕಾರ್ಯ ನಡೆದಿದೆ. ಕೊಲ್ಲೂರು ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ವಿಟ್ಲ : ಕೆದಿಲ ಗ್ರಾಮದ ಕಾಂತುಕೋಡಿಯ ಮುಳುಗು ಸೇತುವೆಯೊಂದರಲ್ಲಿ ಚಾಲಕ ಪಿಕಪ್ ಚಲಾಯಿಸಿ ನಡು ನೀರಿನಲ್ಲಿ ಸಿಲುಕಿ ಹಾಕಿಕೊಂಡಿರುವ ಘಟನೆ ನಡೆದಿದೆ. ಕೆದಿಲ ಬೀಟಿಗೆ ಹಾಲಿನ ಸೊಸೈಟಿ ಮೂಲಕ ಕಾಂತುಕೋಡಿ ಆಗಿ ಪಡೀಲಿಗೆ ಸಂಪರ್ಕ ಮಾಡುವ ರಸ್ತೆಯ ಕಾಂತುಕೋಡಿ ಎಂಬಲ್ಲಿನ ಸೇತುವೆಯೊಂದು ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಂಪೂರ್ಣ ಮುಳುಗಡೆಯಾಗಿದೆ. ಈ ಸೇತುವೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರೂ ಪಿಕ್ ಅಪ್ ಚಾಲಕರೋರ್ವರು ತಮ್ಮ ವಾಹನವನ್ನು ಚಲಾಯಿಸಿಕೊಂಡು ಬಂದಿದ್ದು, ಸೇತುವೆಯ ಮಧ್ಯದಲ್ಲಿ ಸಿಲುಕಿಕೊಂಡಿದೆ. ಕ್ಷಣದಿಂದ ಕ್ಷಣಕ್ಕೆ ನೀರಿನಮಟ್ಟ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯ ವಾಸಿಗಳು ಅದರೊಳಗಡೆ ಸಿಲುಕಿರುವವರನ್ನು ರಕ್ಷಣೆ ಮಾಡಿದ್ದಾರೆ. ಪಿಕ್ ಅಪ್ ವಾಹನವು ಪಡೀಲು ಬಾಗದಿಂದ ಕೆದಿಲ ಭಾಗಕ್ಕೆ ತೆರಳುತ್ತಿತ್ತು ಎನ್ನಲಾಗಿದೆ. ಪ್ರತೀ ವರ್ಷ ಮಳೆ ಬಂದಾಗ ಈ ಸೇತುವೆ ಮುಳುಗಡೆಯಾಗುತ್ತಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

Read More

ಉಳ್ಳಾಲ: ಸ್ಟೇಟ್ ಬ್ಯಾಂಕ್ ತಲಪಾಡಿ ನಡುವೆ ಚಲಿಸುವ ಸಿಟಿ ಬಸ್ ಚಾಲಕ ಚಾಲನೆ ವೇಳೆ ಮೊಬೈಲ್ ಉಪಯೋಗಿಸುತ್ತಿರುವುದನ್ನು ಪ್ರಯಾಣಿಕರೊಬ್ಬರು ಸೆರೆಹಿಡಿದಿರುವುದು, ಇದೀಗ ವೈರಲ್ ಆಗಿದೆ. ಸಾರ್ವಜನಿಕ ವಲಯದಿಂದ ಚಾಲಕನ ವಿರುದ್ಧ ಕ್ರಮಕ್ಕಾಗಿ ಆಗ್ರಹ ವ್ಯಕ್ತವಾಗಿದೆ. 42 ನಂಬರಿನ ಸೈಂಟ್ ಆಂಟನಿ ಬಸ್ ಚಾಲಕ ನಿರ್ಲಕ್ಷ್ಯ ರೀತಿಯಲ್ಲಿ ಬಸ್ ಚಲಾಯಿಸಿದ್ದಾನೆ. ನೇತ್ರಾವತಿ ಸೇತುವೆಯಿಂದ ಮೊಬೈಲ್ ನೋಡಲು ಆರಂಭಿಸಿದ ಚಾಲಕ ತೊಕ್ಕೊಟ್ಟು ವರೆಗೂ , ಒಂದು ಕೈಯಲ್ಲಿ ಸ್ಟೇರಿಂಗ್, ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಬೇಜವಾಬ್ದಾರಿಯುತ ವಾಗಿ ಬಸ್ಸನ್ನು ಚಲಾಯಿಸಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಬಸ್ಸಲ್ಲಿ ಅಧಿಕ ಪ್ರಯಾಣಿಕರೂ ಇದ್ದರು ಎಂಬುದನ್ನು ಪ್ರಯಾಣಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರಸ್ತೆಗಿಂತ ಹೆಚ್ಚಾಗಿ ಮೊಬೈಲನ್ನೇ ಚಾಲಕ ವೀಕ್ಷಿಸುತ್ತಿರುವುದು ಅನಾಹುತ ಆಹ್ವಾನಿಸುತ್ತಿದೆ. ಸಾರಿಗೆ ಅಧಿಕಾರಿಗಳು ಬಸ್ ಪರ್ಮಿಟ್ ರದ್ದುಗೊಳಿಸಬೇಕು ಹಾಗೂ ಸಂಚಾರಿ ಪೊಲೀಸರು ಚಾಲಕನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Read More

ಮುಂಬೈ:ಆನ್‍ಲೈನ್ ಗೇಮ್‌ನಲ್ಲಿ ಉದ್ಯಮಿಯೊಬ್ಬರು ಕೋಟ್ಯಾಂತರ ರೂ ಕಳೆದುಕೊಂಡ ಘಟನೆ ಮಹಾರಾಷ್ಟ್ರದ ನಾಗ್ಪುರದಿಂದ ವರದಿಯಾಗಿದೆ. ಮೊದಲು ಉದ್ಯಮಿ ಗೇಮ್ ನಲ್ಲಿ 5 ಕೋಟಿ ಗೆದ್ದಿದ್ದು ಬಳಿಕ ಸುಮಾರು 58 ಕೋಟಿ ರೂ.ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತು ಉದ್ಯಮಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆ ದೂರಿನ ಆಧಾರದ ಮೇಲೆ ಶಂಕಿತನ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.ಈ ವೇಳೆ 14 ಕೋಟಿ ರೂಪಾಯಿ ಹಣ, 4 ಕೆಜಿ ಚಿನ್ನ ಪತ್ತೆಯಾಗಿರುವುದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಂಚಿಸಿದ ಆರೋಪಿ ಅನಂತ್ ಅಲಿಯಾಸ್ ಸೊಂತು ನವರತನ್ ಜೈನ್ ಎಂದು ಗುರುತಿಸಲಾಗಿದೆ. ನಾಗ್ಪುರದಿಂದ 160 ಕಿಮೀ ದೂರದಲ್ಲಿರುವ ಈತನ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ನವರತನ್ ಜೈನ್ ದುಬೈಗೆ ಹಾರುವ ಮೂಲಕ ಎಸ್ಕೇಪ್‌ ಆಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಉದ್ಯಮಿಗೆ ಪರಿಚಯವಾದ ಜೈನ್ ಆನ್‍ಲೈನ್ ಗೇಮ್‌ನಲ್ಲಿ ಹಣ ಗಳಿಸಬಹುದೆಂದು ಪ್ರೇರೆಪಿಸಿದ್ದಾರೆ. ಉದ್ಯಮಿ ಅಂತಿಮವಾಗಿ ಜೈನ್ ಮನವೊಲಿಕೆಗೆ ಒಪ್ಪಿಕೊಂಡರು. ಅಲ್ಲದೆ ಹವಾಲಾ ವ್ಯಾಪಾರಿಯ ಮೂಲಕ 8 ಲಕ್ಷವನ್ನು…

Read More

ಬೆಂಗಳೂರು;ತಂದೆ-ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪರಾರಿಯಾಗಿದ್ದ ಆರೋಪಿ ಮಗನನ್ನು ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. 26 ವರ್ಷದ ಶರತ್ ಬಂಧಿತ ಆರೋಪಿಯಾಗಿದ್ದು, ರಾಡ್ ನಿಂದ ಹೊಡೆದು ಅಪ್ಪ-ಅಮ್ಮನನ್ನ ಹತ್ಯೆ ಮಾಡಿ ಈತ ಪರಾರಿಯಾಗಿದ್ದ. ಬ್ಯಾಟರಾಯನಪುರ ನಿವಾಸಿ ಭಾಸ್ಕರ್ ಹಾಗೂ ಶಾಂತಾ ಅವರನ್ನು ತಲೆಗೆ ರಾಡ್‌ನಿಂದ ಹೊಡೆದು ಜುಲೈ 17ರಂದು ಕೊಲೆ ಮಾಡಲಾಗಿತ್ತು. ಕೃತ್ಯ ಎಸಗಿ ಪರಾರಿಯಾಗಿದ್ದ ಶರತ್‌, ಮಂಗಳೂರು ಮೂಲಕ ಮಡಿಕೇರಿಗೆ ಹೋಗಿ ಅರಣ್ಯದಲ್ಲಿ ತಲೆಮರೆಸಿಕೊಂಡಿದ್ದ.ಈತನನ್ನು ಪತ್ತೆ ಮಾಡಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ ಎಂದು ವರದಿಯಾಗಿದೆ. ಮಂಗಳೂರಿನ ಮೂಲದ ಭಾಸ್ಕರ್-ಶಾಂತಾ, ಬ್ಯಾಟರಾಯನಪುರದಲ್ಲಿ 12 ವರ್ಷಗಳಿಂದ ವಾಸವಿದ್ದರು. ಭಾಸ್ಕರ್, ಹೋಟೆಲ್‌ವೊಂದರಲ್ಲಿ ಕ್ಯಾಷಿಯರ್ ಆಗಿದ್ದರು. ಶಾಂತಾ ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು. ಹಿರಿಯ ಮಗ ಸಜಿತ್, ಪದವೀಧರ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಎರಡನೇ ಮಗ ಶರತ್‌, ಪಿಯುಸಿ ಓದಿದ್ದು, ಕೆಲಸವಿಲ್ಲದೇ ಮನೆಯಲ್ಲಿರುತ್ತಿದ್ದ ಎಂದು ತಿಳಿಸಿವೆ. ಸೋಮವಾರ ಸಂಜೆ ತಂದೆ- ತಾಯಿ ಜೊತೆ ಜಗಳ ತೆಗೆದಿದ್ದ ಆರೋಪಿ ತಲೆಗೆ ರಾಡ್‌ನಿಂದ ಹೊಡೆದು…

Read More

ಬೆಂಗಳೂರು : ರಾಜ್ಯದಲ್ಲಿ ವರುಣಾರ್ಭಟ ಮುಂದುವರೆದಿದ್ದು, ಕರಾವಳಿ, ಮಲೆನಾಡು ಸೇರಿದಂತೆ ಹಲವಡೆ ಮುಂದಿನ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ರಾಜ್ಯದ ಕರಾವಳಿ, ಒಳನಾಡಿನಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಗುಡುಗು, ಮಿಂಚು ಸಹಿತ ಗಾಳಿ ಮಳೆಯಾಗುವ ಸಾಧ್ಯತೆಯಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಒಳನಾಡಿಗೆ ಇಂದು ಯೆಲ್ಲೋ ಅಲರ್ಟ್ ಘೋಷಿಸಿದ್ದು, ನಾಳೆ ಆರೆಂಜ್ ಅಲರ್ಟ್ ಅನ್ನು ಘೋಷಿಸಲಾಗಿದೆ. ಉತ್ತರ ಒಳನಾಡಿಗೆ ಇಂದು ಮತ್ತು ನಾಳೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ,ಉಡುಪಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ರಾಯಚೂರು, ಕಲಬುರಗಿ, ಬೀದರ್, ಯಾದಗಿರಿ, ಚಿಕ್ಕಮಗಳೂರು, ಕೊಡಗು, ಗದಗ, ಹಾಸನ, ಚಿತ್ರದುರ್ಗ, ಬಳ್ಳಾರಿ, ವಿಜಯನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ…

Read More

ಬೆಂಗಳೂರು: ನಗರದಲ್ಲಿ ಭಾರಿ ಬಾಂಬ್ ಸ್ಪೋಟಕ್ಕೆ ಸಂಚು ರೂಪಿಸಿ ಸಿಕ್ಕಿಬಿದ್ದಿರುವ ಐವರು ಶಂಕಿತ ಉಗ್ರರಿಂದ ವಶಕ್ಕೆ ಪಡೆಯಲಾಗಿರುವ 4 ಜೀವಂತ ಗ್ರೆನೇಡ್​ಗಳ ಹಿಂದಿನ ರಹಸ್ಯ ಭೇದಿಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಗ್ರೆನೇಡ್​ಗಳು ಎಲ್ಲಿ ಬಂದವು, ಶಂಕಿತರಿಗೆ ತಲುಪಿಸಿದ್ದು ಯಾರು, ಎಲ್ಲೆಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರೆಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಿದ್ಧತೆ ನಡೆಸಿದ್ದು, ನ್ಯಾಯಾಲಯದ ಅನುಮತಿ ಪಡೆದ ಬಳಿಕ ವಿಧಿ ವಿಜ್ಞಾನ ಪ್ರಯೋಗಾಲಯ, ರಾಷ್ಟ್ರೀಯ ಬಾಂಬ್ ಡೇಟಾ ಸೆಂಟರ್​ಗಳು ) ಪರಿಶೀಲನೆ ಆರಂಭಿಸಲಿವೆ. ಮೊದಲಿಗೆ ಗ್ರೆನೇಡ್​ಗಳನ್ನು ನಿಷ್ಕ್ರಿಯಗೊಳಿಸುವ ಕೆಲಸ ಮಾಡಲಾಗುತ್ತಿದ್ದು, ಅವುಗಳ ತಯಾರಿಕೆಗೆ ಬಳಕೆಯಾಗಿರುವ ಕಚ್ಚಾ ವಸ್ತುಗಳ ವಿಂಗಡಣೆ ಮಾಡಲಾಗುತ್ತದೆ. ಬಳಿಕ ಪ್ರತಿಯೊಂದು ಕಚ್ಚಾವಸ್ತು ಎಲ್ಲಿ ತಯಾರಾಗಿರಬಹುದು? ಎಂಬುದರ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ. ಗ್ರೆನೇಡ್ ಮಾದರಿಯನ್ನು ಬಳಿಕ ಎನ್.ಬಿ.ಡಿ.ಸಿ ಡಾಟಾಗಳ ಜತೆಗೆ ಅನಾಲಿಸಿಸ್ ಮಾಡಲಾಗುತ್ತದೆ. ದೇಶದಲ್ಲಿ ಸಂಭವಿಸುವ ಪ್ರತೀ ಸ್ಪೋಟಗಳ ಡಾಟಾ ನಿರ್ವಹಣೆ ಮಾಡುವ ಎನ್​ಬಿಡಿಸಿ ಈ ಮಾದರಿಯ ಗ್ರೆನೇಡ್ ಎಲ್ಲಿಯಾದರೂ ಬಳಕೆಯಾಗಿದೆಯಾ ಎಂಬುದರ ಕುರಿತು ಕೂಲಂಕಷವಾಗಿ…

Read More

ಮಂಗಳೂರು: ಪಣಂಬೂರು ಬೀಚ್ ಗೆ ಹೋಗಿದ್ದ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿ ನೈತಿಕ ಪೊಲೀಸ್ ಗಿರಿ ನಡೆಸಿದ ಇಬ್ಬರು ಆರೋಪಿಗಳನ್ನು ಮಂಗಳೂರು ಪೊಲೀಸರು ‌ಬಂಧಿಸಿದ್ದಾರೆ. ನಗರದ ಅಳಪೆ ಮಠದ ಬಳಿಯ ನಿವಾಸಿ ದೀಕ್ಷಿತ್ (32) ಮತ್ತು ಅಳಪೆ ಬಜಾಲ್ ನಿವಾಸಿ ಲಾಯ್ಡ್ ಪಿಂಟೋ (32) ಬಂಧಿತ ಆರೋಪಿಗಳು. ಮಂಗಳೂರಿನಲ್ಲಿ ಬ್ಯಾಚುಲರ್ ಆಫ್ ಹಾಸ್ಪಿಟಲ್ ಆ್ಯಡ್ಮೀಸ್ಟ್ರೇಷನ್ ವ್ಯಾಸಂಗ ಮಾಡುತ್ತಿದ್ದ ಆರು ಮಂದಿ ವಿದ್ಯಾರ್ಥಿಗಳು ಜುಲೈ 21ರಂದು ಪಣಂಬೂರು ಬೀಚ್ ಗೆ ಹೋಗಿ ವಾಪಸ್ ಆಗುವ ವೇಳೆ ಆರೋಪಿಗಳು ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಬಿಜೈ ಕಾಪಿಕಾಡ್ ನಲ್ಲಿ ವಿದ್ಯಾರ್ಥಿಗಳನ್ನು ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದರು. ಈ ಘಟನೆಗೆ ಸಂಬಂದಿಸಿದಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಸ್ಕೂಟರ್ ಮತ್ತು ಮೊಬೈಲ್ ಫೋನ್ ಗಳನ್ನು ವಶಪಡಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More

ಪಶ್ಚಿಮ ಬಂಗಾಳದ ಮಾಲ್ಡಾದಿಂದ ಇಬ್ಬರು ಮಹಿಳೆಯರನ್ನು ಥಳಿಸಿ ಅರೆಬೆತ್ತಲೆಯಾಗಿ ಮೆರವಣಿಗೆ ಮಾಡುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಈ ಘಟನೆ ಮೂರ್ನಾಲ್ಕು ದಿನಗಳ ಹಿಂದೆ ನಡೆದಿದೆ. ಮಾಲ್ಡಾದ ಪಕುಹತ್ ನಲ್ಲಿ ಸ್ಥಳೀಯರು ಕಳ್ಳತನದ ಅನುಮಾನದ ಮೇಲೆ ಇಬ್ಬರು ಮಹಿಳೆಯರನ್ನು ಹಿಡಿದು ಥಳಿಸಿದ್ದರು. ಇಬ್ಬರು ಮಹಿಳೆಯರ ಮೇಲೆ ಹಲವಾರು ಮಹಿಳೆಯರು ಹಲ್ಲೆ ನಡೆಸುತ್ತಿರುವುದನ್ನು ವೀಡಿಯೊ ತೋರಿಸಿದೆ. ಆದಾಗ್ಯೂ, ಘಟನೆಯ ಬಗ್ಗೆ ಪಶ್ಚಿಮ ಬಂಗಾಳ ಪೊಲೀಸರಿಗೆ ಯಾವುದೇ ದೂರು ದಾಖಲಾಗಿಲ್ಲ. ವೀಡಿಯೊ ತಮ್ಮ ಗಮನಕ್ಕೆ ಬಂದ ನಂತರವೇ ಘಟನೆಯ ಬಗ್ಗೆ ತಿಳಿದಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿದ ನಂತರ ಇಬ್ಬರು ಮಹಿಳೆಯರು ಕಳ್ಳತನ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ನಂತರ ಸ್ಥಳೀಯ ಮಹಿಳಾ ಅಂಗಡಿಯವರು ಥಳಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯ ನಂತರ ಈ ಕೃತ್ಯದಲ್ಲಿ ಸಿಕ್ಕಿಬಿದ್ದ ಮಹಿಳೆಯರು ಸಹ ಓಡಿಹೋಗಿದ್ದಾರೆ. ಪಶ್ಚಿಮ ಬಂಗಾಳ ಪೊಲೀಸರ ಪ್ರಕಾರ, ‘ಮಾಲ್ಡಾದ ಪಕುಹತ್ ಪ್ರದೇಶದಲ್ಲಿ 3-4 ದಿನಗಳ…

Read More

ಕಾಸರಗೋಡು: ಬಸ್ಸು ಚಾಲಕನ ಕೊಲೆಗೆತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಯ್ಯಾರಿನ ಚಂದು ( ೪೨) ಮತ್ತು ಮೇರ್ಕಳದ ಚಂದ್ರಹಾಸ (೫೦) ಬಂಧಿತರು. ಜೂನ್ ೧೮ ರಂದು ಕಯ್ಯಾರಿನ ಅಬ್ದುಲ್ ರಶೀದ್ ರ ಮೇಲೆ ಹಲ್ಲೆ ನಡೆಸಲಾಗಿತ್ತು. ರಾತ್ರಿ ಮನೆಗೆ ತೆರಳುತ್ತಿದ್ದ ರಶೀದ್ ಮೇಲೆ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂದ್ಯೋಡು ಅಡ್ಕದ ವಿಷ್ಣು ಎಂಬಾತನನ್ನು ಈ ಹಿಂದೆ ಬಂಧಿಸಲಾಗಿತ್ತು.

Read More