Author: main-admin

ಮಂಗಳೂರು: ವಿದ್ಯಾರ್ಥಿಯೋರ್ವ ಸೀಮೆಎಣ್ಣೆ ಸೇವಿಸಿ ಆಸ್ಪತ್ರೆಗೆ ದಾಖಲಾಗಿ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ನೈಮರ್ಮುಲಾ ತನ್ಸಿಯುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಉಮರ್ ಅಫ್ರಾಬುದ್ದೀನ್ (15) ಪೆರುಂಬಳ ಚಾಳ ಜೆಟ್ಟಿ ಅಶ್ರಫ್ ಹಾಗೂ ಫಾಮಿನಿಯಾ ದಂಪತಿಯ ಪುತ್ರ ಸಾವನ್ನಪ್ಪಿದ ವಿದ್ಯಾರ್ಥಿ. ಹಲವು ದಿನಗಳಿಂದ ತೀವ್ರ ಅಸ್ವಸ್ಥನಾಗಿದ್ದ ಉಮರ್ ಅಫ್ರಾಬುದ್ದೀನ್ ಸೀಮೆಎಣ್ಣೆ ಸೇವಿಸಿದ್ದಾಗಿ ಪತ್ತೆಯಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು. ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ ಕಷ್ಟ ಕಾಣಿಸಿಕೊಂಡ ಕಾರಣ ಬಾಲಕ ಸೀಮೆಎಣ್ಣೆ ಸೇವಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಸಾವಿನ ಕುರಿತು ತನಿಖೆ ನಡೆಸುತ್ತಿದ್ದಾರೆ.

Read More

ಬಾಗಲಕೋಟೆ : ರಾಜ್ಯದ ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಸಿಎಂ ಬೊಮ್ಮಾಯಿ ಸಿಹಿಸುದ್ದಿ ನೀಡಿದ್ದು, ಪಿಯುಸಿ, ಪದವಿ ವಿದ್ಯಾರ್ಥಿಗ’ಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಎಂದು ಘೋಷಣೆ ಮಾಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ ಈ ಬಾರಿ ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ . 4 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುತ್ತೇವೆ ಎಂದು ಹೇಳಿದರು. ಸರ್ಕಾರಿ ಪಿಯು, ಡಿಗ್ರಿ ಕಾಲೇಜಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಇನ್ನು ಮುಂದೆ ಶುಲ್ಕವಿಲ್ಲದೇ ಪ್ರವೇಶ ಪಡೆಯಬಹುದು ಎಂದು ಸಿಎಂ ಬೊಮ್ಮಾಯಿ ಬಜೆಟ್ ನಲ್ಲಿ ಘೋಷಿಸಿದ್ದರು. ಯಾವ ಮಕ್ಕಳು ಆರ್ಥಿಕ ಸ್ಥಿತಿಯಿಂದ ವಿದ್ಯಾಬ್ಯಾಸ ಸ್ಥಗಿತಗೊಳಿಸಬಾರದು ಎಂಬ ಹಿತದೃಷ್ಠಿಯಿಂದ ಈ ವರ್ಷದ ಬಜೆಟ್‍ನಲ್ಲಿ ಪಿಯುಸಿಯಿಂದ ಪದವಿವರೆಗೆ ಉಚಿತ ಶಿಕ್ಷಣ, ದುಡಿಯುವ ಹೆಣ್ಣು ಮಕ್ಕಳಿಗೆ ಉಚಿತ ಬಸ್‍ಪಾಸ್ ಸೌಲಭ್ಯ ಘೋಷಿಸಲಾಗಿದೆ. ದುಡಿಯುವ ವರ್ಗದಲ್ಲಿ, ಹೆಣ್ಣುಮಕ್ಕಳಲ್ಲಿ, ಯುವಕರಲ್ಲಿ ಶಕ್ತಿ ತುಂಬಿದಲ್ಲಿ ಅವರಲ್ಲಿರುವ ಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ ಇದು…

Read More

ಬಂಟ್ವಾಳ: ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಿಂದ ಸಾಲ ಪಡೆದು ಮರುಪಾವತಿಸದ ಆರೋಪಿಗೆ ಬಂಟ್ವಾಳ ನ್ಯಾಯಾಲಯ ಚೆಕ್‌ ಅಮಾನ್ಯ (ಬೌನ್ಸ್‌) ಪ್ರಕರಣದಲ್ಲಿ 5,69,500 ರೂ. ದಂಡ ವಿಧಿಸಿ ಆದೇಶ ನೀಡಿದೆ. ಪಂಜಿಕಲ್ಲು ನಿವಾಸಿ ಪದ್ಮನಾಭ ಮಡಿವಾಳ ಆರೋಪಿಯಾಗಿದ್ದು, ಬಂಟ್ವಾಳ ಪಿಎಲ್‌ಡಿ ಬ್ಯಾಂಕಿನಿಂದ ಸಾಲ ಪಡೆದು ಮರುಪಾವತಿಸಿರಲಿಲ್ಲ. ಬ್ಯಾಂಕಿಗೆ ಅವರು ನೀಡಿದ ಚೆಕ್‌ ಕೂಡ ಅಮಾನ್ಯಗೊಂಡಿದ್ದು, ಹೀಗಾಗಿ ಬ್ಯಾಂಕ್‌ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿತ್ತು. ಪ್ರಕರಣದ ವಿಚಾರಣೆ ನಡೆಸಿದ ಬಂಟ್ವಾಳ ಸಿವಿಲ್‌ ಜಡ್ಜ್ ಹಿರಿಯ ವಿಭಾಗ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಒಟ್ಟು ದಂಡದಲ್ಲಿ 5 ಸಾವಿರ ರೂ. ಸರಕಾರ ಹಾಗೂ ಉಳಿದ ಮೊತ್ತವನ್ನು ಬ್ಯಾಂಕಿಗೆ ಪಾವತಿಸಬೇಕು. ತಪ್ಪಿದಲ್ಲಿ ಒಂದು ವರ್ಷ ಸಾದಾ ಜೈಲು ಶಿಕ್ಷೆಗೆ ಗುರಿಯಾಗಬೇಕಿದೆ ಎಂದು ಆದೇಶಿಸಿದೆ. ಬ್ಯಾಂಕಿನ ಪರ ನ್ಯಾಯವಾದಿ ಶಿವಪ್ರಕಾಶ್‌ ಜೈನ್‌ ವಾದಿಸಿದ್ದರು.

Read More

ಬಂಟ್ವಾಳ: ಯುವಕನೋರ್ವನಿಗೆ ಚೂರಿಯಿಂದ ಕೊಲೆಗೆ ಪ್ರಯತ್ನಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ನಗರ ಪೋಲೀಸ್ ಠಾಣಾ ಇನ್ಸ್‌ಪೆಕ್ಟರ್ ವಿವೇಕಾನಂದ ಮತ್ತು ಎಸ್ ಐ.ರಾಮಕೃಷ್ಣ ಅವರ ನೇತ್ರತ್ವದ ತಂಡ ಬಂಧಿಸಿದೆ.ನರಿಕೊಂಬು ಗ್ರಾಮದ ಪಿತ್ತಲಗುಡ್ಡೆ ನಿವಾಸಿ ನಿಸಾರ್ ಯಾನೆ ನಿಸಾರ್ ಆಹಮ್ಮದ್ ಬಂಧಿತ ಆರೋಪಿ.ಫೆ.18 ರಂದು ಪಾಣೆಮಂಗಳೂರು ಜೈನರಪೇಟೆ ನಿವಾಸಿ ಸುಲೈಮಾನ್ ಎಂಬಾತನಿಗೆ ಕತ್ತರಿಯಿಂದ ಇರಿದು ಕೊಲೆಗೆ ಪ್ರಯತ್ನಿಸಿದ್ದ ಎಂದು ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆರೋಪಿ ನಿಸಾರ್ ಪ್ರಕರಣವೊಂದರಲ್ಲಿ ಆರೋಪಿಯಾಗಿ ಜೈಲಿಗೆ ಹೋಗಿ ಜೈಲಿನಿಂದ ಹೊರಬಂದಿದ್ದ.ಜೈಲಿನಿಂದ ಹೊರ ಬಂದ ಕೆಲ ದಿನಗಳಲ್ಲಿ ಯೇ ಮತ್ತೆ ಪರಿಚಯಸ್ಥನಿಗೆ ಕ್ಷುಲ್ಲಕ ಕಾರಣಕ್ಕಾಗಿ ಕತ್ತರಿಯಿಂದ ಇರಿದು ಪರಾರಿಯಾಗಿದ್ದ.ಇಂದು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ.

Read More

ಬೆಂಗಳೂರು: ನಗರದ ಕೆಎಸ್‌ ಆರ್‌ ರೈಲು ನಿಲ್ದಾಣಣದಲ್ಲಿ ಮಹಿಳೆಯೊಬ್ಬಳ ಪ್ರಯಾಣಿಕರಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ರೈಲ್ವೆಯ ಉಪ ಮುಖ್ಯ ಟಿಕೆಟ್ ಪರಿವೀಕ್ಷಕರೊಬ್ಬರನ್ನು ಬಂಧಿಸಲಾಗಿದೆ. ಸಂತೋಷ ಕುಮಾರ್‌ ಬಂಧಿತ ಆರೋಪಿ. ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಮಾರ್ಚ್ 14ರಂದು ಸಂತೋಷ್ ಎಂಬಾತಮಹಿಳೆಗೆ ಕಿರುಕುಳ ನೀಡಿದ್ದರು ಎಂದು ಕರ್ನಾಟಕ ರೈಲ್ವೆ ಪೊಲೀಸರು ತಿಳಿಸಿದ್ದಾರೆ. ಸಂತೋಷ್ ಮಹಿಳೆಗೆ ಕಿರುಕುಳ ನೀಡುತ್ತಿರುವ ದೃಶ್ಯವನ್ನು ಮತ್ತೊಬ್ಬ ಪ್ರಯಾಣಿಕ ವಿಡಿಯೋ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಮಹಿಳೆಯು ಡಿಸಿಟಿಐ ಜತೆ ನೊಂದು ಮಾತನಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ನೀವ್ಯಾಕೆ ನನ್ನನ್ನು ತಳ್ಳುತ್ತಿದ್ದೀರಿ, ನಿಧಾನವಾಗಿ ಮಾತನಾಡಿ. ಟಿಕೆಟ್ ಕಾಯ್ದಿರಿಸಿದ ಕಾರಣ ನಾನಿಲ್ಲಿಗೆ ಬಂದಿದ್ದೇನೆ ಎಂದು ಮಹಿಳೆ ಹೇಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ.ಟಿಕೆಟ್‌ ತೋರಿಸು ಅಂತ ಆವಾಗಿನಿಂದಲೂ ಕೇಳುತ್ತಾ ಇದ್ದೇನೆ. ಟಿಕೆಟ್ ಚೆಕ್ ಮಾಡುವುದು ನನ್ನ ಕೆಲಸ. ತೋರಿಸಿ ಹೋಗು ಎಂದು ನಿನಗೇ ಹೇಳುತ್ತಿದ್ದೇನೆ’ ಎಂದು ಆರೋಪಿ ಹೇಳಿದ್ದಾರೆ.ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಮಹಿಳೆ ಪಶ್ಚಿಮ ಬಂಗಾಳದವರಾಗಿದ್ದು ಉದ್ಯೋಗ ಅರಸುವುದಕ್ಕಾಗಿ ಬೆಂಗಳೂರಿಗೆ…

Read More

ಮಂಗಳೂರು:ಕಾರನ್ನು ರಿವರ್ಸ್ ತೆಗೆಯುವ ಸಂದರ್ಭ ಕಾರು ಚಾಲಕನ ನಿಯಂತ್ರಣ ತಪ್ಪಿ ಆಟೋ ಹಾಗೂ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಕೋರ್ಟ್ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಕಾರು ಪಲ್ಟಿಯಾಗಿದೆ ಸ್ಥಳೀಯರ ಮಾಹಿತಿ ಪ್ರಕಾರ ಇಳಿಜಾರಿನಲ್ಲಿ ಕಾರನ್ನು ರಿವರ್ಸ್ ತೆಗೆಯುವ ಸಂದರ್ಭ ಚಾಲಕನ ಚಪ್ಪಲ್ ಎಕ್ಸೆಲೇಟರ್ ಪೆಡಲ್ ಮಧ್ಯೆ ಸಿಕ್ಕಿಹಾಕಿಕೊಂಡು ಕಾರಿನ ವೇಗ ಹೆಚ್ಚಾಗಿ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಆಟೋ ಹಾಗೂ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿದೆ. ಕಾರಿನಲ್ಲಿ ಚಾಲಕನಿಗೆ ಅಲ್ಪ ಸ್ವಲ್ಪ ಗಾಯಗಳಾಗಿದ್ದರೆ, ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.

Read More

ಹಿಂದುತ್ವದ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ ಚೇತನ್ ಅವರ ವಿರುದ್ಧ ಐಪಿಸಿ ಸೆಕ್ಷನ್ 295A, 505B ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಶೇಷಾದ್ರಿಪುರ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಹಿಂದುತ್ವದ ಬಗ್ಗೆ ಚೇತನ್ ಕೆಟ್ಟದಾಗಿ ಪೋಸ್ಟ್ ಮಾಡಿದ್ದರು ಎನ್ನುವ ಆರೋಪ ಬಂತು. ಇದಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಹಿಂದುತ್ವದ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ ಚೇತನ್ ಅವರ ವಿರುದ್ಧ ಐಪಿಸಿ ಸೆಕ್ಷನ್ 295A, 505B ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಸದ್ಯ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಹಿಂದೂಪರ ಸಂಘಟನೆಗಳು ಚೇತನ್ ವಿರುದ್ಧ ದೂರು ನೀಡಿದ್ದವು. ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು.

Read More

ಮಂಗಳೂರು: ಮಂಗಳೂರು ಜಂಕ್ಷನ್‌ ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದ ರೈಲುಗಾಡಿಯ ಡಿ3 ಬೋಗಿಯ ಶೌಚಾಲಯದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಭಾನುವಾರ ಪತ್ತೆಯಾಗಿದೆ. ಮೃತ ವ್ಯಕ್ತಿ 40-45 ವರ್ಷ ಪ್ರಾಯದವರಾಗಿದ್ದು, 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದಾರೆ. ಸಿಮೆಂಟ್‌ ಬಣ್ಣದ ಜರ್ಸಿ, ಕೇಸರಿ ಬಣ್ಣದ ಟಿ-ಶರ್ಟ್‌ ಮತ್ತು ಕಪ್ಪು ಬಣ್ಣದ ಪ್ಯಾಂಟ್‌ ಅದರೊಳಗೆ ಕಪ್ಪು ಬಣ್ಣದ ಮಾಸಲು ಪ್ಯಾಂಟ್‌ ಧರಿಸಿದ್ದು, ಕುತ್ತಿಗೆಯಲ್ಲಿ ಮಣಿ ಸರವಿದೆ. ಈ ಕುರಿತು ಮಂಗಳೂರು ರೈಲ್ವೇ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾರಸುದಾರರು ಇದ್ದಲ್ಲಿ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Read More

ಮಂಗಳೂರು: ಚಿತ್ರ ನಟ ಹಾಗೂ ರಂಗಕರ್ಮಿ ನವೀನ್‌ ಡಿ ಪಡೀಲ್‌ ಅವರ ತಾಯಿ ಸೇಸಮ್ಮ ಕೋಟ್ಯಾನ್‌ (80) ನಗರದ ಆಸ್ಪತ್ರೆಯೊಂದರಲ್ಲಿ ಭಾನುವಾರ ನಿಧನರಾದರು. ಅವರು ನವೀನ್‌ ಡಿ.ಪಡೀಲ್‌ ಅವರ ಪಡೀಲ್‌ನ ಮನೆಯಲ್ಲೇ ವಾಸವಿದ್ದರು. ಅವರಿಗೆ ನಾಲ್ಕು ವರ್ಷಗಳ ಹಿಂದೆ ಅಪಘಾತದಲ್ಲಿ ಮೂಳೆ ಮುರಿತಕ್ಕೆ ಒಳಗಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆ ಬಳಿಕ ಅವರ ಆರೋಗ್ಯ ಸುಧಾರಿಸಿತ್ತು. ಎರಡು ತಿಂಗಳಿಂದ ಅವರ ಆರೋಗ್ಯ ಮತ್ತೆ ಹದಗೆಟ್ಟಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರಿಗೆ ಇಬ್ಬರು ಪುತ್ರರು ಹಾಗೂ ಒಬ್ಬ ಮಗಳು ಇದ್ದಾರೆ.

Read More

ಬೆಳಗಾವಿ : ವಿಧಾನಸಭೆ ಚುನಾವಣೆ ಹೊತ್ತಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಯುವ ಸಮಾವೇಶ ನಡೆಸುತ್ತಿದ್ದು, ಕಾಂಗ್ರೆಸ್ 4 ನೇ ಗ್ಯಾರೆಂಟಿ ಘೋಷಿಸಿದೆ. ಪದವೀಧರರಿಗೆ ಮಾಸಿಕ 3 ಸಾವಿರ ಹಣ, ಡಿಪ್ಲೋಮಾ ಪದವೀಧರರಿಗೆ ಮಾಸಿಕ 1500 ರೂ ನಿರುದ್ಯೋಗ ಭತ್ಯೆ ನೀಡುತ್ತೇವೆ ಎಂದು ರಾಹುಲ್ ಗಾಂಧಿ ಘೋಷಣೆ ಘೋಷಿಸಿದರು. ಬೆಳಗಾವಿಯಲ್ಲಿ ಯುವ ಕಾಂಗ್ರೆಸ್ ಸಮಾವೇಶ ನಡೆಸುತ್ತಿದ್ದು, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತಿತರರಿದ್ದಾರೆ. ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಯುವ ಕ್ರಾಂತಿ ಸಮಾವೇಶ ನಡೆಯುತ್ತಿದೆ. ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ರಾಜ್ಯಕ್ಕೆ ಭೇಟಿ ಭೇಟಿ ನೀಡಿದ್ದು, ವಿಶೇಷ ವಿಮಾನದ ಮೂಲಕ ದೆಹಲಿಯಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಬೆಳಗಾವಿಯಲ್ಲಿ ಇಂದು ಕಾಂಗ್ರೆಸ್ ಪಕ್ಷದಿಂದ ಯುವ ಕ್ರಾಂತಿ ಸಮಾವೇಶ ಆಯೋಜನೆಗೊಂಡಿದ್ದು, ಇದನ್ನು ರಾಹುಲ್ ಗಾಂಧಿ ಉದ್ಘಾಟಿಸಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಯುವ ಕ್ರಾಂತಿ ಸಮಾವೇಶಕ್ಕಾಗಿ ಬೆಳಗಾವಿ ನಗರದ ಸಿಪಿ ಇಡ್ ಮೈದಾನದಲ್ಲಿ ಬೃಹತ್…

Read More