Author: main-admin

ಮಂಜೇಶ್ವರ: ಮನೆಗೆ ನುಗ್ಗಿದ ಕಳ್ಳರು ಸುಮಾರು 60 ಪವನ್ ಚಿನ್ನಾಭರಣ ಮತ್ತು 50 ಸಾವಿರ ರೂ.ನಗದು ಕಳವು ಮಾಡಿರುವುದಾಗಿ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ. ಮಂಜೇಶ್ವರ ರಾಗಂ ಜಂಕ್ಷನ್ ನ ಹಮೀದ್ ತಂಘಲ್ ರವರ ಮನೆಯಲ್ಲಿ ಈ ಕಳವು ನಡೆದಿದೆ. ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿ ಕಳ್ಳರು ಕಪಾಟನ್ನು ಮುರಿದು ಈ ಕೃತ್ಯ ನಡೆಸಿದ್ದಾರೆ.ಹಮೀದ್ ರವರ ಕುಟುಂಬ ಮನೆಗೆ ಬೀಗ ಹಾಕಿ ಎರಡು ದಿನಗಳ ಹಿಂದೆ ಏರ್ವಾಡಿಗೆ ತೆರಳಿದ್ದರು.ಗುರುವಾರ ಸಂಜೆ ಮರಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ.ಇನ್ನು ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

Read More

ಕಡಬ: ಸ್ವಂತ ಜ್ಯುವೆಲ್ಲರಿ ಉದ್ಘಾಟನೆಯ ಸಿದ್ದತೆಯಲ್ಲಿದ್ದ ಯುವಕನ ಮೃತದೇಹ ಗುಂಡ್ಯ ಸಮೀಪ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ಕಡಬ ನಿವಾಸಿ ನಾಗಪ್ರಸಾದ್ ಎಂದು ಗುರುತಿಸಲಾಗಿದೆ. ಮರ್ಧಾಳದ ಮಸೀದಿಯ ಕಟ್ಟಡ ಸಂಕೀರ್ಣದಲ್ಲಿ ‘ಐಶ್ವರ್ಯ ಗೋಲ್ಡ್’ ಹೆಸರಿನ ಚಿನ್ನದಂಗಡಿ ತೆರೆಯಲುದ್ದೇಶಿಸಿದ್ದು, ಅದು ಇಂದು ಉದ್ಘಾಟನೆಯಾಗಬೇಕಿತ್ತು, ಈ ಹಿನ್ನೆಲೆಯಲ್ಲಿ ತಯಾರಿ ನಡೆಸಿಕೊಂಡಿದ್ದ ನಾಗಪ್ರಸಾದ್ ಅವರ ಮೃತದೇಹ ಇಂದು ಬೆಳಗ್ಗೆ ಸಕಲೇಶಪುರ ಠಾಣಾ ವ್ಯಾಪ್ತಿಯ ಗುಂಡ್ಯ ಸಮೀಪ ಅಪಘಾತದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಘಟನೆಯ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದು, ತನಿಖೆಯ ನಂತರವಷ್ಟೇ ನಿಖರ ಕಾರಣ ತಿಳಿದುಬರಬೇಕಿದೆ.

Read More

ಬಂಟ್ವಾಳ: ಅಪರಿಚಿತ ಮಹಿಳೆಯ ಮೃತದೇಹ ಬಂಟ್ವಾಳದ ಕಂಚಿಕಾರ್ ಪೇಟೆಯ ಕೂಟೇಲು ಸೇತುವೆ ಬಳಿಯ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.

Read More

ಬಜ್ಪೆ : ಬೈಕ್ ಮತ್ತು ಖಾಸಗಿ ಬಸ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸಾವನಪ್ಪಿದ ಘಟನೆ ಗುರುಪುರದಲ್ಲಿ ನಡೆದಿದೆ. ಮೃತರನ್ನು ಪೊಳಲಿ ಕರಿಯಂಗಳ ನಿವಾಸಿ ದಿ.ಅಣ್ಣಿ ಪೂಜಾರಿ ಎಂಬವರ ಪುತ್ರ ಸಂತೋಷ್ (38) ಎಂದು ಗುರುತಿಸಲಾಗಿದೆ. ವಾಮಂಜೂರಿನ ಸಹಕಾರಿ ಬ್ಯಾಂಕ್ ಒಂದರಲ್ಲಿ ಉದ್ಯೋಗಿಯಾಗಿದ್ದ ಸಂತೋಷ್, ಇಂದು ಬೆಳಗ್ಗೆ ಮನೆಯಿಂದ ಎಂದಿನಂತೆ ಬೈಕಿನಲ್ಲಿ ಬ್ಯಾಂಕಿಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಗುರುಪುರ ಬ್ಯಾಂಕ್ ಬಳಿ ರಸ್ತೆಯ ಹಂಪ್ಸ್ ಬಳಿ ಬೈಕ್ ವೇಗ ಕಡಿಮೆಗೊಳಿಸಿದಾಗ ಮೂಡುಬಿದಿರೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಹಿಂದಿನಿಂದ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟ ಸಂತೋಷ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದರೆಂದು ತಿಳಿದುಂಬಂದಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು: ಅಪ್ರಾಪ್ತ ಮಲಮಗಳ ಮೇಳೆ ಅತ್ಯಾಚಾರಗೈದ ಆರೋಪಿಯ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ವಿಶೇಷ ಪೊಕ್ಸೊ ನ್ಯಾಯಾಲಯ 20 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ. ಆರೋಪಿ ಅಶ್ವತ್ಥ್ ಮಲ್ಲಿಕಾ ಎಂಬವರ ಎರಡನೇ ಪತಿಯಾಗಿದ್ದು, ಆಕೆ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. 2022ರ ಜುಲೈ 26ರಂದು ನಸುಕಿನ ವೇಳೆ 3.30ರ ವೇಳೆಗೆ ಅಶ್ವತ್ಥ್ ಪತ್ನಿಯ ಮೊದಲನೆಯ ಪತಿಯ ಪುತ್ರಿಯೊಂದಿಗೆ ಅನುಚಿತವಾಗಿ ವರ್ತಿಸಿ ಅತ್ಯಾಚಾರಗೈದಿದ್ದಾನೆ. ಅಲ್ಲದೆ ಯಾರಲ್ಲಾದರೂ ತಿಳಿಸಿದರೆ ಬಾಲಕಿಯನ್ನು ಕೊಲೆಗೈಯುವುದಾಗಿ ಬೆದರಿಕೆಯೊಡ್ಡಿದ್ದ. ಸಂತ್ರಸ್ತ ಬಾಲಕಿ ಈ ವಿಚಾರವನ್ನು ತನ್ನ ದೊಡ್ಡಮ್ಮನಲ್ಲಿ ತಿಳಿಸಿದ್ದಾರೆ. ಅವರು ತಕ್ಷಣ ಮಂಗಳೂರಿನ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪೊಕ್ಸೊ ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಮಹಿಳಾ ಠಾಣಾ ಪೊಲೀಸ್ ನಿರೀಕ್ಷಕ ಲೋಕೇಶ್ ಎ.ಸಿ. ಎಫ್ಎಸ್ಎಲ್ ವರದಿಯನ್ವಯ ಆರೋಪಿ ಅಶ್ವತ್ಥ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ವಿಶೇಷ…

Read More

ಉತ್ತರ ಪ್ರದೇಶ: ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಶವಪರೀಕ್ಷೆ ವೇಳೆ ಸತ್ತಿದ್ದಾಳೆ ಎನ್ನಲಾದ ಬಾಲಕಿ ಜೀವಂತವಾಗಿ ಎಚ್ಚರಗೊಂಡಿದ್ದಾಳೆ. ಕಾಲುವೆಗೆ ಬಿದ್ದು ಬಾಲಕಿ ಸತ್ತಿದ್ದಾಳೆ ಎಂದು ಭಾವಿಸಿ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆ ನಡೆದಿದೆ. ಇದೇ ವೇಳೆ ಮನೆಯವರು ಮೊದಲು ವೈದ್ಯರಿಗೆ ತೋರಿಸುತ್ತೇವೆ ಎಂದರು. ಈ ಬಗ್ಗೆ, ಪೊಲೀಸರು ಬಾಲಕಿಯನ್ನು ವೈದ್ಯರ ಬಳಿಗೆ ಕರೆದೊಯ್ದರು, ಅಲ್ಲಿ ತನಿಖೆಯ ಸಮಯದಲ್ಲಿ, ಆಕೆಯ ಹೃದಯ ಬಡಿತವು ಓಡುತ್ತಿರುವುದು ಕಂಡುಬಂದಿದೆ. ಮರಣೋತ್ತರ ಪರೀಕ್ಷೆ ಮಾಡಿಸಲು ಹೊರಟಿದ್ದ ಪೋಲೀಸರು ಮಾಹಿತಿ ತಿಳಿದ ಕೂಡಲೇ ಸಂತೆನಗರ ಪೊಲೀಸರು ಆಗಮಿಸಿ ಬಾಲಕಿಯನ್ನು ಹೊರಕ್ಕೆ ತೆಗೆದು ಮನೆಯವರಿಗೆ ಕರೆ ಮಾಡಿದ್ದಾರೆ. ಬಾಲಕಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆಕೆಯನ್ನು ಮರಣೋತ್ತರ ಪರೀಕ್ಷೆಗೆ ಕರೆದೊಯ್ಯಲು ಪೊಲೀಸರು ಸಿದ್ಧತೆ ನಡೆಸಿದ್ದರು. ಆದರೆ, ಮಗಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗುವುದಾಗಿ ಸಂಬಂಧಿಕರು ಹೇಳಿದ್ದಾರೆ. ಸಂಬಂಧಿಕರ ಒತ್ತಾಯದ ಮೇರೆಗೆ ಪೊಲೀಸರು ಪತೇರಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ವೈದ್ಯರು ಇಲ್ಲಿ ತನಿಖೆ ಆರಂಭಿಸಿದಾಗ ಹೃದಯ ಬಡಿತ ನಡೆಯುತ್ತಿರುವುದು…

Read More

ಮಂಗಳೂರು: ಜೂನ್.13ರಂದು ನರಿಕೊಂಬು ಗ್ರಾ.ಪಂಚಾಯತ್ ಕಚೇರಿಯ ಜಗಲಿಯಲ್ಲಿ ವ್ಯಕ್ತಿಯೋರ್ವ ಬಿದ್ದುಕೊಂಡ ಬಗ್ಗೆ ಗ್ರಾಮ ಪಂಚಾಯತ್ ನ ಅಧಿಕಾರಿಗಳ ಗಮನಕ್ಕೆ ಬರುತ್ತದೆ. ಜೂ.12ರಂದು ರಾತ್ರಿ ಈತ ಪಂಚಾಯತ್ ನ ಜಗುಲಿಗೆ ಪ್ರವೇಶ ಮಾಡಿದ್ದ.ಈ ವೇಳೆ ಈತನ‌ ಕೈಗೆ ಗಾಯವಾಗಿ ರಕ್ತಸ್ರಾವವಾಗಿತ್ತು. ಕುಡಿದ‌ ಮತ್ತಿನಲ್ಲಿ ಕಚೇರಿ ಬಳಿಯೇ ಮಲಗಿದ್ದ.ಶಿವಶಂಕರ ರಕ್ತದ ನಡುವೆ ಬಿದ್ದುಕೊಂಡಿದ್ದರಿಂದ ಜನರು ಹತ್ತಿರ ಹೋಗಲು ಹೆದರುತ್ತಿದ್ದರು. ಘಟನೆ ತಿಳಿದು ಸ್ಥಳಕ್ಕೆ ಬಂದ ಬಂಟ್ವಾಳ ನಗರ ಠಾಣಾ ಪೋಲೀಸರ ತಂಡ ಅಂಬ್ಯುಲೆನ್ಸ್ ಮೂಲಕ ಮಂಗಳೂರು ವೆನ್ಲಕ್ ಆಸ್ಪತ್ರೆಗೆ ದಾಖಲಿಸಿ ಅವರ ಮನೆಯವರಿಗೆ ಮಾಹಿತಿ ನೀಡಿದ್ದರು. ಆತ ನಿನ್ನೆ ಗುಣಮುಖನಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಕೂಡಲೇ ಮೊದಲು ಬಂಟ್ವಾಳ ನಗರ ಪೋಲಿಸ್ ಠಾಣೆಗೆ ಬಂದು ಧನ್ಯವಾದ ಹೇಳಿದ್ದಾನೆ ಎಂದು ವರದಿಯಾಗಿದೆ.

Read More

ಮೂಡುಬಿದಿರೆ: ಕ್ಷುಲ್ಲಕ ವಿಚಾರಕ್ಕೆ ಏಳು ಮಂದಿಯ ತಂಡವೊಂದು ಇಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಜೂನ್ 21 ಬುಧವಾರದಂದು ಮೂಡಬಿದಿರೆ ಲಾಡಿ ಬಳಿಯ ಮಂಗಳೂರು ರೆಸ್ಟೋರೆಂಟ್ ಬಳಿ ಈ ಘಟನೆ ನಡೆದಿದೆ. ಮೂಡಬಿದಿರೆ ನಿವಾಸಿ ಅಬೂಬಕ್ಕರ್ ( 57), ಅಝ್ಮಲ್ (23) ರವರಿಗೆ ಹಲ್ಲೆಗೊಳಗಾದವರು. ಸಿನಾನ್, ಸಿರಾಜ್, ಹಸೈನಾರ್ ಮತ್ತು ನೌಶಾದ್ ಅವರನ್ನೊಳಗೊಂಡ ತಂಡವು ಬೈಕ್ ಪಾರ್ಕಿಂಗ್ ವಿಚಾರವಾಗಿ ಜಗಳವಾಡಿ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಅಜ್ಮಲ್ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಆರಂಭದಲ್ಲಿ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದ ಮೂಡುಬಿದಿರೆ ಠಾಣೆ ಪೊಲೀಸರು, ಪೊಲೀಸ್ ಆಯುಕ್ತರ ಒತ್ತಡದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

Read More

ಮಂಡ್ಯ; ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿದ್ದ ಬಿ.ಎಸ್. ವೆಂಕಟೇಶ್ ವರ್ಗಾವಣೆಗೊಂಡಿದ್ದು ಅವರು ಠಾಣೆಯ ನೂತನ ಎಸ್‌ಐ ಬಿ.ವಿ.ವರ್ಷಾ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ವಿಶೇಷ ಏನೆಂದರೆ ಬಿ.ಎಸ್. ವೆಂಕಟೇಶ್ ಅವರ ಪುತ್ರಿಯಾಗಿದ್ದು ವರ್ಷಾ, ಇದೀಗ ಅಪ್ಪ- ಮಗಳಿಗೆ ಅಧಿಕಾರ ಹಸ್ತಾಂತರಿಸಿ ಸುದ್ದಿಯಾಗಿದ್ದಾರೆ‌. ತುಮಕೂರು ಜಿಲ್ಲೆ ಹುಲಿಯೂರುದುರ್ಗದವರಾದ ವೆಂಕಟೇಶ್ 16 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ನಂತರ ಮಾಜಿ ಸೈನಿಕರ ಕೋಟಾದಲ್ಲಿ 2010ರಲ್ಲಿ ಪಿಎಸ್‌ಐ ಆಗಿ ಆಯ್ಕೆಯಾಗಿದ್ದರು. ಬಳಿಕ ಅವರು ಮಂಡ್ಯ, ಮೈಸೂರು, ಕೊಡಗು, ಚಾಮರಾಜನಗರ ಜಿಲ್ಲೆಯ ಹಲವೆಡೆ ಕಾರ್ಯನಿರ್ವಹಿಸಿ ಮಂಡ್ಯ ಸೆಂಟ್ರಲ್ ಠಾಣೆಯಲ್ಲಿ ಒಂದೂವರೆ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದರು. ಅವರನ್ನು ಇದೀಗ ಮಂಡ್ಯ ಎಸ್.ಪಿ. ಕಚೇರಿಗೆ ವರ್ಗಾವಣೆ ಮಾಡಲಾಗಿದ್ದು, ಇದೇ ಠಾಣೆಗೆ ನೂತನ ಎಸ್‌ಐ ಆಗಿ ಬಂದಿರುವ ತಮ್ಮ ಪುತ್ರಿ ಬಿ.ವಿ. ವರ್ಷಾ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ವರ್ಷಾ 2022 ನೇ ಬ್ಯಾಚ್ ನ ಪಿಎಸ್ ಐ ಆಗಿದ್ದು ಕಲ್ಬುರ್ಗಿಯಲ್ಲಿ ತರಬೇತಿ ಮುಗಿಸಿ ಮಂಡ್ಯದಲ್ಲಿ ಒಂದು ವರ್ಷ…

Read More

ಮಂಗಳೂರು: ಮನೆಯವರ ಜೊತೆ ಜಗಳದ ಕೋಪಕ್ಕೆ ವಿಧ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾಲ್ದಾನೆ ಬಳಿ ಮಂಗಳವಾರ ನಡೆದಿದೆ. ನೀರುಮಾರ್ಗ ಸಮೀಪದ ಪಾಲ್ದಾನೆಯ ತೇಜತ್ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಎಸೆಸೆಲ್ಸಿ ಕಲಿಯುತ್ತಿದ್ದ ಈಕೆ ಮಂಗಳವಾರ ಸಂಜೆ ಶಾಲೆಯಿಂದ ಬಂದ ಬಳಿಕ ಕ್ಷುಲ್ಲಕ ಕಾರಣಕ್ಕೆ ಮನೆಯವರ ಜತೆ ಜಗಳ ಮಾಡಿದ್ದಳು ಎನ್ನಲಾಗಿದೆ. ಅದೇ ಕೋಪದಿಂದ ಕೋಣೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More