ಉಡುಪಿ: ದೇವಸ್ಥಾನದ ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ವತಃ ಬಾವಿಗಿಳಿದು ರಕ್ಷಣೆ ಮಾಡಿದ್ದಾರೆ. ಜೂ.18ರಂದು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಬೆಕ್ಕಿನ ಮರಿ 40 ಅಡಿ ಆಳದ ಬಾವಿಗೆ ಬಿದ್ದಿರುವುದನ್ನು ಕಂಡ ಸ್ವಾಮೀಜಿ ಹಗ್ಗಕ್ಕೆ ಬಕೆಟ್ ಕಟ್ಟಿ ಮೇಲೆತ್ತಲು ಪ್ರಯತ್ನಿಸಿದರಾದರೂ ಭಯಗೊಂಡ ಬೆಕ್ಕಿನ ಮರಿ ಬಕೆಟ್‌ನಲ್ಲಿ ಬರಲಿಲ್ಲ. ನಂತರ ಸ್ವಾಮೀಜಿಯವರೇ ಹಗ್ಗದ ಸಹಾಯದಿಂದ ಬಾವಿಗಿಳಿದು ಬೆಕ್ಕಿನ ಮರಿಯನ್ನು ಮೇಲೆತ್ತಿದರು. ಸ್ವಾಮೀಜಿಯವರ ಈ ನಡೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
Author: main-admin
ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ಅಲಂಗಾರಿನಲ್ಲಿ ಭಾನುವಾರ ಬೆಳಗ್ಗೆ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೂಡುಬಿದಿರೆ ಎಸ್.ಎನ್.ಎಂ ಪಾಲಿಟೆಕ್ನಿಕ್‌ನ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಸುರೇಶ್ ಭಂಡಾರಿ ಅವರ ಪುತ್ರ, ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿ ಸಾತ್ವಿಕ್ ಭಂಡಾರಿ(21) ಆತ್ಮಹತ್ಯೆ ಮಾಡಿಕೊಂಡಾತ. ಭಾನುವಾರ ಬೆಳಗ್ಗೆ ಸಾತ್ವಿಕ್‌ನನ್ನು ಆತನ ತಾಯಿ ಎಬ್ಬಿಸುವಾಗ ಕೋಪಗೊಂಡಿದ್ದು, ಕೆಲವು ನಿಮಿಷಗಳ ಬಳಿಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಉಳ್ಳಾಲ ಠಾಣೆಯ 14 ಸಿಬ್ಬಂದಿ ಹಾಗೂ ಕೊಣಾಜೆ ಠಾಣೆಯ 8 ಮಂದಿ ಸಿಬ್ಬಂದಿಯನ್ನು ದಿಢೀರ್ ವರ್ಗಾವಣೆ ಮಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ಆದೇಶಿಸಿದೆ. ಉಳ್ಳಾಲ ಠಾಣಾ ಹೆಡ್ ಕಾನ್ ಸ್ಟೇಬಲ್ ಪ್ರವೀಣ್ ಶೆಟ್ಟಿ ಡಿ.ಬಿ, ಹಾಗೂ ಸಿಪಿಸಿಗಳಾದ ಅಕ್ಬರ್ ಯಡ್ರಾಮಿ, ರವಿ ಬಿಲ್ಲೂರು, ಮಾಣೇಕ್, ಬಲವಂತು ,ಚಿದಾನಂದ, ಪ್ರವೀಣ್ ಸಲೊಟಗಿ, ಸುರೇಶ್ ನಗ್ರಾಲ್, ಸಿದ್ದಪ್ಪ ಹಿರೇಕುಂಬಿ, ಸತೀಶ್ ಕುಮಾರ್, ಹನುಮ ನಾಯ್ಕ್, ಕೆಂಪರಾಜು, ಸಾಗರ್ ದೇವರಕತ್ತಿ,ದಾಕ್ಷಾಯಿಣಿ ಹಾಗೂ ಕೊಣಾಜೆ ಠಾಣಾ ಹೆಡ್ ಕಾನ್ ಸ್ಟೇಬಲ್ ರವಿಚಂದ್ರ ಹಾಗೂ ಸಿಪಿಸಿಗಳಾದ ಅನಿಲ್ ಕುಮಾರ್, ಚಂದ್ರಕಾಂತ್, ಅನಿಲ ಕುಮಾರ್ ವೈ.ಎಂ, ರತ್ನವ್ವ, ಪ್ರಿಯಾ ಬಿರಾದಾರ್, ಬರಮಬಡಿಗೇರ್, ಪುರುಷೋತ್ತಮ್ ಇವರನ್ನು ಕಮೀಷನರೇಟ್ ವ್ಯಾಪ್ತಿಯ ವಿವಿಧ ಠಾಣೆಗಳಿಗೆ ವರ್ಗಾವಣೆಗೊಳಿಸಲಾಗಿದೆ.
ಮಂಗಳೂರು; ಸುರತ್ಕಲ್ ನಲ್ಲಿ ಯುವಕನಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗೆ ಜಾಮೀನು ಮಂಜೂರಾಗಿದೆ. ಸುರತ್ಕಲ್ ಜನತಾ ಕಾಲನಿಯಲ್ಲಿ ಗುರುವಾರ ರಾತ್ರಿ ಕಾನ ನಿವಾಸಿ ಮುಹಮ್ಮದ್ ಶಾಫಿ(35)ಎಂಬ ಯುವಕನಿಗೆ ಚೂರಿಯಿಂದ ಇರಿಯಲಾಗಿತ್ತು. ಸ್ಥಳೀಯ ನಿವಾಸಿ ಯುವಕ ತ್ವಾಹಿರ್ (24) ಎಂಬಾತ ಚೂರಿಯಿಂದ ಇರಿದು ಪರಾರಿಯಾಗಿದ್ದ. ಇದೀಗ ಆರೋಪಿಗೆ ಮಂಗಳೂರಿನ ಎರಡನೇ J M F C ಆರೋಪಿಗೆ ಷರತ್ತು ಬದ್ಧ ಜಾಮೀನನ್ನು ಶನಿವಾರ ನೀಡಿದೆ. ಆರೋಪಿ ಪರ ವಕೀಲರಾದ ಜೀಶಾನ್ ಅಲಿ ಸುರತ್ಕಲ್ ವಾದಿಸಿದ್ದು ತಾಜುದ್ದೀನ್ ಸಹಕರಿಸಿದ್ದರು.
ಮೂಡುಬಿದಿರೆ: ಮುಂಬೈ ಬಾಂದ್ರಾ ವೆಸ್ಟ್ ನ ಪಾಲಿ ಹಿಲ್‌ನ ಜನತಾ ಬಾರ್ ಆಯಂಡ್ ರೆಸ್ಟೋರೆಂಟ್ ಮಾಲಕ, ಮೂಡುಬಿದಿರೆ ಕಡಂದಲೆ ಪರಾರಿ ಮನೆತನದ ಲೋಕೇಶ್ ಶೆಟ್ಟಿ (67) ಶನಿವಾರ ನಿಧನ ಹೊಂದಿದರು. ಮೂಡುಬಿದಿರೆ ಶ್ರೀ ಮಹಾವೀರ ಕಾಲೇಜಿನಲ್ಲಿ ಬಿಎಸ್‌ಸಿ ಓದಿದ್ದ ಅವರು ಮುಂಬೈಯಲ್ಲಿ ತಂದೆ ಶಿಮಂತೂರು ಮಜಲಗುತ್ತು ಗೋಪಾಲ ಶೆಟ್ಟಿ ಅವರು ನಡೆಸುತ್ತಿದ್ದ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡು ಬಳಿಕ ಸ್ವಂತ ಹೋಟೆಲ್ ನಡೆಸುತ್ತಿದ್ದರು. ಮುಂಬೈನ ಖಾರ್ ವೆಸ್ಟ್ ನಲ್ಲಿ ವಾಸವಾಗಿದ್ದ ಅವರು ಮಹಾವೀರ ಕಾಲೇಜು ಬಳಿ ಕೃಷಿಯಲ್ಲೂ ತೊಡಗಿಸಿಕೊಂಡಿದ್ದರು. ಗುರು ಶ್ರೀ ಸತ್ಯಸಾಯಿಬಾಬಾ ಅವರ ಭಕ್ತನಾಗಿ, ಬಹಳ ಆಧ್ಯಾತ್ಮಿಕ ಜೀವಿಯಾಗಿ ಬದುಕಿದ್ದು , ದಾನಿಯಾಗಿ, ಬಹಳಷ್ಟು ಮಂದಿಗೆ ಉಪಕಾರಿಯಾಗಿದ್ದರು. ಮಹಾವೀರ ಕಾಲೇಜು ಹಳೆವಿದ್ಯಾರ್ಥಿ ಸಂಘ ಲೋಕೇಶ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.
ಮೈಸೂರು: ಖೋಖೋ ಆಟದ ವೇಳೆ ವಿದ್ಯಾರ್ಥಿಯೊರ್ವ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಶಾಂಕ್(13) ಮೃತ ವಿದ್ಯಾರ್ಥಿ. ಗ್ರಾಮದ ಎಚ್. ಎಸ್ ಪಾಪಣ್ಣ ಮತ್ತು ಕುಮಾರಿ ದಂಪತಿ ಪುತ್ರನಾದ ಮೃತ ಶಶಾಂಕ್ ಹರದನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ. ಇನ್ನು ಶಾಲಾ ಅವಧಿ ಮುಗಿದ ನಂತರ ವಿದ್ಯಾರ್ಥಿಗಳು ಖೋಖೋ ಅಭ್ಯಾಸ ಮಾಡುತ್ತಿದ್ದರು. ಈ ವೇಳೆ ಶಶಾಂಕ್ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನ ಹೆಚ್.ಡಿ ಕೋಟೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶಶಾಂಕ್ ಸಾವನ್ನಪ್ಪಿದ್ದಾನೆ. ಈ ಕುರಿತು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಕಾಂಗ್ರೆಸ್ ನ ಗ್ಯಾರೆಂಟಿಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ಪಡೆಯಲು ಇಂದಿನಿಂದಲೇ ಅರ್ಜಿ ಸಲ್ಲಿಕೆ ಆಂರಭಗೊಳ್ಳಲಿದೆ. ಗ್ರಾಹಕರು ಅರ್ಜಿ ಸಲ್ಲಿಕೆಗೆ ಸೈಬರ್ ಗಳಿಗೆ ಎಂದೇ ಹೋಗ ಬೇಕೆಂದಿಲ್ಲ,ಮೊಬೈಲ್, ಕಂಪ್ಯೂಟರ್, ಲ್ಯಾಪ್ ಟಾಪ್ ಗಳಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಗ್ರಾಹಕರು ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಕೂಡ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇದಲ್ಲದೇ ಗ್ರಾಮ ಪಂಚಾಯಿತಿ, ನಾಡಕಚೇರಿ ಅಥವಾ ಎಲ್ಲಾ ವಿದ್ಯುತ್ ಕಚೇರಿಗಳಲ್ಲಿ ಕೂಡ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಆಧಾರ್ ಕಾರ್ಡ್, ವಿದ್ಯುತ್ ಬಿಲ್ ಬೇಕು.ನೋಂದಣಿ ಮಾಡುವಾಗ ಆಧಾರ್ ಸಂಖ್ಯೆ, ವಿದ್ಯುತ್ ಬಿಲ್‌ನ ಖಾತೆ ಸಂಖ್ಯೆ ನೋಂದಾವಣಿ ಮಾಡಬೇಕಿದೆ. 200 ಯೂನಿಟ್ ಗಳವರೆಗೆ ಉಚಿತ ವಿದ್ಯುತ್ ಯೋಜನೆ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಸಮೀಪದ ವಿದ್ಯುತ್ ಕಚೇರಿಯನ್ನು ಸಂಪರ್ಕಿಸಬಹುದು. ಅಥವಾ ಸಹಾಯವಾಣಿ ಸಂಖ್ಯೆ 1912ಗೆ ಕರೆ ಮಾಡಿ ಪಡೆಯಬಹುದು. ಇದಲ್ಲದೆ ಮೊಬೈಲ್ ನಲ್ಲಿ ಸುಲಭವಾಗಿ ಅರ್ಜಿ…
ನೆಲ್ಯಾಡಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಿರು ಸೇತುವೆಯಿಂದ ಕೆಳಕ್ಕೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಆರು ಮಂದಿ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಎಂಜಿರ ಎಂಬಲ್ಲಿ ಶನಿವಾರದಂದು ನಡೆದಿದೆ. ಗಾಯಾಳುಗಳನ್ನು ಬೆಂಗಳೂರು ಆರ್.ಟಿ. ನಗರ ನಿವಾಸಿಗಳೆಂದು ಗುರುತಿಸಲಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಾರಿನಲ್ಲಿದ್ದ ಎರಡು ವರ್ಷದ ಮಗುವೊಂದು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.
ಕಾರ್ಕಳ: ತಾಲೂಕಿನ ಕುಕ್ಕುಂದೂರು ಗ್ರಾಮದ ಜೋಡುರಸ್ತೆಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಅಶೋಕ್ ಶೆಟ್ಟಿಯವರ ಮಗ ಅಮೃತ್ ಶೆಟ್ಟಿ(21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದ. ಮನನೊಂದು ಜೋಡುರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವಿದ್ಯಾರ್ಥಿ ತಂದೆ ಮತ್ತು ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ. ಕಾರ್ಕಳ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಉಡುಪಿ : ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ಕಾಲೇಜು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೇರಳ ಮೂಲದ ನಿಭೀಷ್ (23) ಅಮಲ್ (22) ಎಂದು ಗುರುತಿಸಲಾಗಿದೆ. ಮತ್ತೋರ್ವನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬಂಧಿತರು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಹೆರ್ಗಾ ಗ್ರಾಮದ ಈಶ್ವರ ನಗರದಲ್ಲಿ ಗಾಂಜಾ ಮಾರುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 35 ಸಾವಿರ ಮೌಲ್ಯದ ಮೆಥಾಂಪೆಟಮೆನ್ ಮಾದಕ ದ್ರವ್ಯ, 2 ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ . ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










