ಮಂಗಳೂರು: ಟೆಲಿಗ್ರಾಂ ಮೂಲಕ ಲಿಂಕ್ ಕಳುಹಿಸಿ, ಕಮಿಷನ್ ನೀಡುವುದಾಗಿ ನಂಬಿಸಿ ವಂಚಿಸಿರುವ ಘಟನೆ ನಡೆದಿದೆ. ಜೂ.7 ರಂದು ದೂರುದಾರರಿಗೆ ಅಪರಿಚಿತ ವ್ಯಕ್ತಿ ವಾಟ್ಸಪ್ ನಲ್ಲಿ ಸಂದೇಶ ಮತ್ತು ಟೆಲಿಗ್ರಾಂ ಮೂಲಕ ಲಿಂಕ್ ಕಳುಹಿಸಿದ್ದು ಈ ಮೂಲಕ ಟಾಸ್ಕ್ ಪೂರೈಸಿದರೆ ಕಮಿಷನ್ ನೀಡುವುದಾಗಿ ಹೇಳಿದ. ಇದನ್ನು ನಂಬಿದ ದೂರುದಾರರು ಹಂತಹಂತವಾಗಿ ಒಟ್ಟು 2.59 ಲ.ರೂ ಗಳನ್ನು ವರ್ಗಾಯಿಸಿದ್ದಾರೆ. ಆದರೆ ಅವರಿಗೆ ಹಣ ನೀಡದೆ ವಂಚಿಸಲಾಗಿದೆ. ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Author: main-admin
ಮಂಗಳೂರು: ಇತ್ತೀಚೆಗೆ ಗೃಹ ಸಚಿವರು ಮಂಗಳೂರಿಗೆ ಬಂದಾಗ ಆ್ಯಂಟಿ ಕಮ್ಯೂನಲ್ ವಿಂಗ್ ಘೋಷಣೆ ಮಾಡಿದ್ದರು. ಅವರ ಸೂಚನೆಯಂತೆ ಮಂಗಳೂರು ನಗರದಲ್ಲಿ ಆಯಂಟಿ ಕಮ್ಯೂನಲ್ ವಿಂಗ್ ಸ್ಥಾಪಿಸಲಾಗಿದೆ. ಸಿಟಿ ಸ್ಪೆಷಲ್ ಬ್ರಾಂಚ್ ( ಸಿ ಎಸ್ ಬಿ) ಇನ್ಸ್ ಪೆಕ್ಟರ್ ಶರೀಫ್ ಅವರ ನೇತೃತ್ವದಲ್ಲಿ ಈ ತಂಡ ರಚಿಸಲಾಗಿದೆ. ಸಿಎಸ್‌ಬಿ ಇನ್ಸ್ ಪೆಕ್ಟರ್ ಅವರು ಸಿಸಿಬಿ ಎಸಿಪಿ ಪಿ ಎ ಹೆಗ್ಡೆ ಇದರ ಮೇಲುಸ್ತುವಾರಿ ನೋಡಿಕೊಳ್ಳಲಿದ್ದು, ಅವರು ನೇರವಾಗಿ ಪೊಲೀಸ್ ಕಮೀಷನರ್ ಅವರಿಗೆ ವರದಿ ಸಲ್ಲಿಸಲಿದ್ದಾರೆ. ಆ್ಯಂಟಿ ಕಮ್ಯೂನಲ್ ವಿಂಗ್ ಎಲ್ಲಾ ರೀತಿಯ ಕೋಮು ಪ್ರಕರಣಗಳ ಬಗ್ಗೆ ನಿಗಾವಹಿಸಲಿದೆ. ಕೋಮು ಪ್ರಕರಣದ ಆರೋಪಿಗಳ ಮೇಲೆ ನಿಗಾ ವಹಿಸಲಿದ್ದು, ಅವರ ಕಾರ್ಯಾಚರಣೆ ಬಗ್ಗೆ ಗಮನಕೊಡಲಿದೆ. ಹಿಂದಿನ ಎಲ್ಲಾ ಪ್ರಕರಣಗಳ ಸಂಬಂಧ ನ್ಯಾಯಾಲಯದ ವಿಚಾರಣೆ ಗಳ ಬಗ್ಗೆ ನಿಗಾವಹಿಸಲಿದ್ದು, ಸಂತ್ರಸ್ತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಿದೆ. ಕಳೆದ 10 ವರ್ಷಗಳಿಂದ ನಡೆದ ಸುಮಾರು 200 ಪ್ರಕರಣಗಳ ಬಗ್ಗೆ ಈ ತಂಡ ನಿಗಾವಹಿಸಲಿದೆ ಎಂದು ಗುರುವಾರ ಸುದ್ದಿಗಾರರೊಂದಿಗೆ ಮಂಗಳೂರಿನಲ್ಲಿ ಸಿಟಿ…
ಬೆಂಗಳೂರು : ಉಜಿರೆಯಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಆರೋಪಿ ಸಂತೋಷ್ ರಾವ್ ದೋಷಮುಕ್ತ ಎಂದು ಹೇಳಿದ್ದು, ಬಿಡುಗಡೆಗೆ ಆದೇಶಿಸಿದೆ. ಸಾಕ್ಷ್ಯಾಧಾರ ಕೊರತೆ ಹಿನ್ನೆಲೆ ಸಂತೋಷ್ ರಾವ್ ಬಿಡುಗಡೆ ಮಾಡಲಾಗಿದ್ದು, ಸಿಬಿಐ ವಿಶೇಷ ಕೋರ್ಟ್ ಜಡ್ಜ್ ಸಿ.ಬಿ ಸಂತೋಷ್ ಈ ಆದೇಶ ಹೊರಡಿಸಿದ್ದಾರೆ. ಅಂದ್ಹಾಗೆ, 2012 ಅಕ್ಟೋಬರ್ 10ರಂದು ದಕ್ಷಿಣ ಕನ್ನಡ ಜಿಲ್ಲಡ ಬೆಳ್ತಂಗಡಿ ತಾಲೂಕಿನ ಉಜಿರೆ ಪಟ್ಟಣದ ಎಸ್‍ಡಿಎಂ ಕಾಲೇಜು ವಿದ್ಯಾರ್ಥಿಯಾಗಿದ್ದ ಸೌಜನ್ಯ ಶವ ಪತ್ತೆಯಾಗಿತ್ತು.
ಮಂಗಳೂರು: ದ.ಕ.ಜಿಲ್ಲಾಧಿಕಾರಿ ರವಿ ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ನೂತನ ಜಿಲ್ಲಾಧಿಕಾರಿಯಾಗಿ ಸ್ಮಾರ್ಟ್ ಗವರ್ನೆನ್ಸ್ ಬೆಂಗಳೂರು ಇದರ ಕಾರ್ಯನಿರ್ವಾಹಕ ನಿರ್ದೇಶಕ ಮುಲೈ ಮುಹಿಲನ್ ಅವರನ್ನು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇನ್ನು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣ ಅಧಿಕಾರಿಯಾಗಿದ್ದ ಡಾ.ಕುಮಾರ ಅವರನ್ನು ಮಂಡ್ಯ ಜಿಲ್ಲಾಧಿಕಾರಿಯಾಗಿ ನೇಮಕಗೊಳಿಸಲಾಗಿದೆ. ಮುಲ್ಲೈ ಮುಹಿಲನ್ ತಮಿಳುನಾಡು ಮೂಲದವರಾಗಿದ್ದು, ದಿಂಡಿಗಲ್ ಅಣ್ಣಾ ವಿಶ್ವವಿದ್ಯಾಲಯದ ಪಿಎಸ್‌ಎನ್‌ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿನಲ್ಲಿ ಓದಿ ಕಂಪ್ಯೂಟರ್ ವಿಷಯದಲ್ಲಿ ಪದವಿ ಪಡೆದಿದ್ದಾರೆ.1986 ರಲ್ಲಿ ಜನಿಸಿದ ಅವರು 2013ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದಾರೆ. ರವಿಕುಮಾರ್ ಅವರನ್ನು ಯಾವ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಕಾಸರಗೋಡು: ಐವರು ಅಪ್ರಾಪ್ತ ಬಾಲಕಿಯರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮದ್ರಸ ಶಿಕ್ಷಕನನ್ನು ಬಂಧಿಸಲಾಗಿದೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಇಳಂತಿಲ ಹೌಸ್ ನಿವಾಸಿ ಅಬ್ದುಲ್ ಹಮೀದ್ (55) ಆರೋಪಿಯಾಗಿದ್ದಾನೆ. ಮದ್ರಸ ಶಿಕ್ಷಕನಾಗಿದ್ದ ಅಬ್ದುಲ್ ಹಮೀದ್ ಏಳು ಮತ್ತು ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ಐವರು ಬಾಲಕಿಯರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಆರೋಪಿಸಲಾಗಿತ್ತು. ಆದೂರು ಪೊಲೀಸರು ಈತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸುರತ್ಕಲ್;ಯುವಕನೋರ್ವನಿಗೆ ಚೂರಿಯಿಂದ ಇರಿದ ಘಟನೆ ಜನತಾ ಕಾಲನಿಯಲ್ಲಿ ರಾತ್ರಿ ನಡೆದಿದೆ. ಮುಹಮ್ಮದ್ ಶಾಫಿ(35) ಚೂರಿ ಇರಿತಕ್ಕೊಳಗಾದವರು. ಅದೇ ಪರಿಸರದ ತ್ವಾಹಿರ್ (24) ಚೂರಿಯಿಂದ ಇರಿದ ಆರೋಪಿಯಾಗಿದ್ದಾನೆ. ಗುರುವಾರ ರಾತ್ರಿ ಕಾಲನಿ ಮಸೀದಿಯ ಬಳಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಡಿಕೊಂಡಿದ್ದಾರೆ.ಬಳಿಕ ತ್ವಾಹಿರ್ ಕಾರಿನಲ್ಲಿ ತಂದಿದ್ದ ಚೂರಿಯಿಂದ ತನಗೆ ಚುಚ್ಚಿದ್ದಾನೆ ಎಂದು ಹಲ್ಲೆಗೊಳಗಾದ ಶಾಫಿ ಆರೋಪಿಸಿದ್ದಾರೆ. ಚೂರಿ ಇರಿತದಿಂದ ಶಾಫಿಯ ಕೈ ಮತ್ತು ಬೆನ್ನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.
ಬೆಳ್ತಂಗಡಿ : ಚೆಕ್ ಪ್ರಕರಣದಲ್ಲಿ ತಲೆಮರೆಸಿದ ವಾರಂಟ್ ಆರೋಪಿ ಬಂಟ್ವಾಳ ಅರಳ ನಿವಾಸಿ ಸತೀಶ್ ದ್ರಾವಿಡ(37) ಎಂಬಾತನನ್ನು ಜೂನ್ 15 ರಂದು ಬೆಳ್ತಂಗಡಿ ವೃತ್ತ ನಿರೀಕ್ಷಕರು ಶಿವಕುಮಾರ್ ರವರ ನೇತೃತ್ವದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣಾ ಸಿಬ್ಬಂದಿ ವ್ರಷಭ ಹಾಗೂ ಬಸವರಾಜ್ ರವರು ಬಂಟ್ವಾಳದಿಂದ ವಶಕ್ಕೆ ಪಡೆದು ಮಾನ್ಯ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ಮಾನ್ಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಬೆಂಗಳೂರು: ಪೊಲೀಸ್ ಠಾಣೆಗೆ ( Police Station ) ಬರುವಂತ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ಠಾಣೆಗಳಲ್ಲಿ ದಾಖಲಾಗುವಂತ ದೂರುಗಳ ಸಂಬಂಧ ಯಾರನ್ನು ಸಂಪರ್ಕಿಸಬೇಕು ಎನ್ನುವ ಬಗ್ಗೆ ಬೋರ್ಡ್ ಗಳಲ್ಲಿ ಸಂಪರ್ಕ ಸಂಖ್ಯೆಯನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಡಿಜಿ ಮತ್ತು ಐಜಿಪಿ ಆದೇಶಿಸಿದ್ದಾರೆ. ಈ ಕುರಿತಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ( Dr Alok Mohan, IPS ) ಅವರು ಸೂಚನೆ ಹೊರಡಿಸಿದ್ದಾರೆ. ಅದರಲ್ಲಿ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳನ್ನು ಒಳಗೊಂಡ ನಾಮಫಲಕ ಅಳವಡಿಸುವುದನ್ನು ಕಡ್ಡಾಯಗೊಳಿಸಿದ್ದಾರೆ. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಸ್ಪಿ, ಎಎಸ್ ಪಿ, ಡಿವೈಎಸ್ ಗಳ ಸಂಪರ್ಕ ಸಂಖ್ಯೆ, ಕಮೀಷನರೇಟ್ ವ್ಯಾಪ್ತಿಯಲ್ಲಿ ಕಮೀಷನರ್, ಎಸಿಪಿ, ಡಿಸಿಪಿಗಳ ದೂರವಾಣಿ ಸಂಖ್ಯೆಗಳನ್ನು ಆಯ್ದ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಫಲಕದಲ್ಲಿ ಅಳವಡಿಸುವಂತೆ ಸೂಚಿಸಿದ್ದಾರೆ. ಇನ್ನೂ ಪೊಲೀಸ್ ಅಧಿಕಾರಿಗಳ ಸಂಪರ್ಕ ಸಂಖ್ಯೆಗಳನ್ನು ಕನ್ನಡ ಮತ್ತು ಇಂಗ್ಲೀಷನ್ ಎರಡು ಭಾಷೆಯಲ್ಲಿ…
ಮಂಗಳೂರು: ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆಗೆ ಗೃಹ ಸಚಿವ ಪರಮೇಶ್ವರ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಎಸಿಪಿ, ಸಿಸಿಬಿ ನೇತೃತ್ವದಲ್ಲಿ ವಿಂಗ್ ಸ್ಥಾಪನೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಜೈನ್ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ವಿಂಗ್ ಅನ್ನು ಸಿಎಸ್ಬಿ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಲಿದ್ದು, ಈ ತಂಡದಿಂದ ನಗರದಲ್ಲಿ ಆಗುವ ಕೋಮು ಪ್ರೇರಣೆ ಮೇಲೆ ನಿಗ ಇಡಲಿದ್ದು, ಯಾವುದೇ ರೀತಿಯ ದ್ವೇಷ ಭಾಷಣ ಇತರ ಕೋಮು ಸೂಕ್ಷ್ಮ ವಿಚಾರದ ಬಗ್ಗೆ ಗಮನ ಹರಿಸಲಿದೆ ಎಂದರು.ಇನ್ನು ಕೋಮು ಸೂಕ್ಷ್ಮ ಕೊಲೆ, ದನ ಕಳವು, ನೈತಿಕ ಪೊಲೀಸ್ ಗಿರಿ ಮೇಲೆ ನಿಗಾ ವಹಿಸಲಾಗಿದ್ದು, ಯಾವುದೇ ವಿಚಾರದ ಬಗ್ಗೆ ಎಸಿಪಿ ಸಿಸಿಬಿ ಕಮಿಷನರ್ ಗೆ ಮಾಹಿತಿ ನೀಡಲಿದ್ದಾರೆ. ಈ ವಿಂಗ್ ನಲ್ಲಿ ಕೋಮು ಸೂಕ್ಷ್ಮ ವಿಚಾರದ ಆರೋಪಿಗಳ ಮೇಲೆ ನಿಗಾ ಇಡಲಾಗುತ್ತದೆ. ಕಳೆದ ಹತ್ತು ವರ್ಷಗಳಲ್ಲಿ ನಡೆದ ಕೋಮು ಸೂಕ್ಷ್ಮ ಪ್ರಕರಣದ ಮೇಲೆ ಇಲಾಖೆಯಿಂದ ನಿಗಾ ಇಡಲಾಗುತ್ತಾದೆ ಎಂದಿದ್ದಾರೆ.ಕಳೆದ…
ಬಂಟ್ವಾಳ : ಮನೆಯಿಂದ ನಾಪತ್ತೆಯಾಗಿದ್ದ ಬಂಟ್ವಾಳದ ನಿವಾಸಿ ನೇಹಾ ಇದೀಗ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ಬೆಂಗಳೂರಿಗೆ ಹೋಗುವುದಾಗಿ ಮೆಸೇಜ್ ಮಾಡಿ ನಾಪತ್ತೆಯಾಗಿದ್ದ ನೇಹಾ ಕುರಿತಂತೆ ಬಂಟ್ವಾಳ ಠಾಣೆಯಲ್ಲಿ ಆಕೆಯ ಅಣ್ಣ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಬೈಪಾಸ್ ಬಿ.ಕಸಬಾ ಗ್ರಾಮದ ಲೆಕ್ಕಸಿರಿ ಪಾದೆ ನಿವಾಸಿ ದಿ.ರಮೇಶ್ ಸಾಲಿಯಾನ್ ಅವರ ಪುತ್ರಿ ಕುಮಾರಿ ನೇಹಾ ಅವರು ನಾಪತ್ತೆಯಾಗಿ ಇದೀಗ ಪತ್ತೆಯಾದ ಯುವತಿಯಾಗಿದ್ದಾಳೆ.ಆಕೆಯ ಅಣ್ಣ ನೀಡಿದ ದೂರಿನಂತೆ ನೇಹಾಗೆ ಮದುವೆ ಮಾಡುವ ಬಗ್ಗೆ ಸಂಬಂಧ ಹುಡುಕುವ ವೇಳೆ ನೇಹಾ ನಾನು ಸದ್ಯ ಮದುವೆ ಆಗುವುದಿಲ್ಲ ವಿದ್ಯಾಭ್ಯಾಸ ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದಳು. ಈಕೆ ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿಗೆ ಎಂದು ಮನೆಯಿಂದ ಹೋದವಳು ಮನೆಗೆ ವಾಪಾಸು ಬರದೆ ನಾಪತ್ತೆಯಾಗಿದ್ದಳು. ಅದೇ ದಿನ ಈಕೆಯ ಚಿಕ್ಕಮ್ಮಳ ಮೊಬೈಲ್ ಗೆ ಮೆಸೇಜ್ ಮಾಡಿ ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ನಾನು ಬೆಂಗಳೂರಿಗೆ ಹೋಗುವುದಾಗಿ ತಿಳಿಸಿದ್ದಳು. ಇದಾದ ಬಳಿಕ ಎರಡು…










