ಮಂಗಳೂರು : ಅಮೆರಿಕದ ಪ್ರತಿಷ್ಠಿತ ‘ಪ್ರಿನ್ಸೆಸ್ ಕ್ರೂಸ್ ಲೈನ್ಸ್’ ಹಡಗಿನಲ್ಲಿ ಬಾರ್ಟೆಂಡರ್ ಕೆಲಸ ಕೊಡಿಸುವುದಾಗಿ ನಂಬಿಸಿ ನಗರದ 21 ವರ್ಷದ ಯುವತಿಯೊಬ್ಬರಿಗೆ ಸೈಬರ್ ಚೋರರು ಬರೋಬ್ಬರಿ ₹4,12,850 ವಂಚಿಸಿದ್ದಾರೆ. ಪಿರ್ಯಾದಿದಾರ ಯುವತಿಯು ಏಪ್ರಿಲ್ 13ರಂದು ಇನ್‌ಸ್ಟಾಗ್ರಾಮ್ ವೀಕ್ಷಿಸುತ್ತಿದ್ದಾಗ ‘Recruiting Agency’ ಹೆಸರಿನ ಜಾಹೀರಾತೊಂದು ಕಾಣಿಸಿಕೊಂಡಿದೆ. ಅದನ್ನು ಕ್ಲಿಕ್ ಮಾಡಿದ ಕೂಡಲೇ ಅಪರಿಚಿತ ವಾಟ್ಸಾಪ್ ನಂಬರ್‌ನಿಂದ ಸಂದೇಶ ಬಂದಿದೆ. ತನ್ನನ್ನು ಕ್ಯಾಲಿಫೋರ್ನಿಯಾದ ಹೈರಿಂಗ್ ಮ್ಯಾನೇಜರ್ ‘ಜಾನಿ ಫೆವೆಲೆನ್’ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಹಡಗಿನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದಾನೆ. ಹಂತ ಹಂತವಾಗಿ ಹಣ ವಸೂಲಿ: ನಂತರ ನೋಂದಣಿ ಶುಲ್ಕ, ವರ್ಕ್ ಪರ್ಮಿಟ್, ಐಇಎಲ್‌ಟಿಎಸ್ (IELTS) ಪರೀಕ್ಷೆ ಮತ್ತು ವೀಸಾ ಪ್ರಕ್ರಿಯೆಯ ನೆಪವೊಡ್ಡಿ ಯುವತಿಯಿಂದ ಹಂತ ಹಂತವಾಗಿ ಹಣ ಪೀಕಲಾಗಿದೆ. ಏಪ್ರಿಲ್ 14 ರಿಂದ ಮೇ 8 ರವರೆಗೆ ವಿವಿಧ ಬ್ಯಾಂಕ್ ಖಾತೆಗಳು ಹಾಗೂ ಕ್ಯೂಆರ್ ಕೋಡ್‌ಗಳ (QR Code) ಮೂಲಕ ಒಟ್ಟು ₹4,12,850 ಹಣವನ್ನು ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ. ವೀಸಾ ಪ್ರಕ್ರಿಯೆ ಹೆಸರಿನಲ್ಲಿ ಮೇಲ್ ಮತ್ತು…
Author: main-admin
ದುಡ್ಡು ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ, ದುಡ್ಡಿನ ಮಹಿಮೆಯೇ ಅಂತಹದ್ದು. ಕೆಲವರು ಹಣ ಮಾಡಲು ಕಳ್ಳ ದಾರಿಯನ್ನು ಹಿಡಿಯುವುದನ್ನು ನೀವು ನೋಡಿರುತ್ತೀರಿ. ಆದರೆ ಇದೀಗ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿನಲ್ಲಿ ಪ್ರಯಾಣಿಕರೊಬ್ಬರಿಗೆ ಅಧಿಕೃತ ದರಕ್ಕಿಂತ ಕಡಿಮೆ ದರಕ್ಕೆ ಟಿಕೆಟ್ ಮಾರುತ್ತಿದ್ದ ವೇಳೆ ಟಿಟಿಇ ಸಿಕ್ಕಿ ಬಿದ್ದಿದ್ದಾನೆ. ತಕ್ಷಣವೇ ಕ್ರಮ ಕೈಗೊಂಡ ರೈಲ್ವೆ ಇಲಾಖೆಯೂ ಟಿಟಿಇಯನ್ನು ಕೆಲಸದಿಂದ ಅಮಾನತುಗೊಳಿಸಿದೆ. ಘರ್ ಕೆ ಕಲೇಷ್ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, ಟಿಟಿಇ ಹಾಗೂ ಪ್ರಯಾಣಿಕರ ನಡುವಿನ ಸಂಭಾಷಣೆ ನೀವು ಗಮನಿಸಬಹುದು. 700 ರೂಪಾಯಿ ವಂದೇ ಭಾರತ್ ಟಿಕೆಟ್ ನ್ನು ಕೇವಲ 380 ರೂಪಾಯಿಗಳಿಗೆ ಕೊಡುವುದಾಗಿ ಟಿಟಿಇ ಹೇಳುತ್ತಿರುವುದನ್ನು ಕಾಣಬಹುದು. ಟಿಟಿಇ ಇದು ನಿಯಮಕ್ಕೆ ವಿರುದ್ಧ ಎಂದು ಹೇಳುತ್ತಲೇ, ಕಡಿಮೆ ಹಣಕ್ಕೆ ಪ್ರಯಾಣದ ವ್ಯವಸ್ಥೆ ಮಾಡುವುದಾಗಿ ಹೇಳುತ್ತಿರುವುದನ್ನು ನೀವು ಕಾಣಬಹುದು. ವಿಡಿಯೋ ವೈರಲ್ ಆಗುತ್ತಿದ್ದಂತೆ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣವೇ ಕ್ರಮ ಕೈಗೊಂಡಿದ್ದಾರೆ. ದಾನಾಪುರ ವಿಭಾಗದ ರೈಲ್ವೆ ವ್ಯವಸ್ಥಾಪಕರು, ಸಂಬಂಧಿತ…
ಮಂಗಳೂರು: ಸ್ಪೀಕರ್ ಯು.ಟಿ.ಖಾದರ್ ಗೆ ಘೆರಾವ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಭದ್ರತಾ ಸಿಬ್ಬಂದಿ ದೂರಿನ ಹಿನ್ನಲೆಯಲ್ಲಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮಂಗಳೂರು ಹೊರವಲಯದ ಕುತ್ತಾರಿನಲ್ಲಿ ನಿರ್ಮಿಸಲು ಉದ್ಧೇಶಿಸಿರುವ ವೃತ್ತಕ್ಕೆ ಕೊರಗಜ್ಕನ ಹೆಸರು ಇಡಬಾರದೆಂದು ಒತ್ತಾಯಿಸಿ ಗುಂಪೊಂದು ಸ್ಪೀಕರ್ ಗೆ ಉಳ್ಳಾಲದಲ್ಲಿ ಘೇರಾವ್ ಹಾಕಿತ್ತು. ಘಟನೆ ಬಗ್ಗೆ ಪೊಲೀಸ್ ದೂರು ನೀಡಿದ್ದ ಸ್ಪೀಕರ್ ಭದ್ರತಾ ಸಿಬ್ಬಂದಿ ಮೊಹಮ್ಮದ್ ಯಾಸಿನ್ ಇನಾಮದಾರ ಉಳ್ಳಾಲ ಪೋಲೀಸ್ ಠಾಣೆಗೆ ದೂರು ನೀಡಿದ ಹಿನ್ನಲೆ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಮದನಿನಗರ ನಿವಾಸಿ ಜುನೈದ್ ಸೇರಿದಂತೆ 10 ಜನರ ಪ್ರಕರಣ ದಾಕಲಾಗಿದ್ದು,ಪೋಲೀಸರು ತನಿಖೆ ಆರಂಭಿಸಿದ್ದಾರೆ.
ನವದೆಹಲಿ: ಮಧ್ಯಪ್ರಾಚ್ಯದಲ್ಲಿನ ಯುದ್ಧ ಪರಿಸ್ಥಿತಿ ಹಾಗೂ ಜಾಗತಿಕ ಆರ್ಥಿಕ ಅನಿಶ್ಚಿತತೆಗಳ ನಡುವೆ ದೇಶದ ಜನತೆಗೆ ಚಿನ್ನ ಖರೀದಿ ಕಡಿಮೆ ಮಾಡಲು ಮತ್ತು ಇಂಧನ ಮಿತವಾಗಿ ಬಳಸಲು ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಇದೀಗ ತಮ್ಮದೇ ಭದ್ರತಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಆರಂಭಿಸಿದ್ದಾರೆ. ಪ್ರಧಾನಿ ಕಚೇರಿ ಎಸ್‌ಪಿಜಿ ಭದ್ರತಾ ಪಡೆಯ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಶೇ.50 ರಷ್ಟು ಕಡಿತಗೊಳಿಸಲು ಸೂಚನೆ ನೀಡಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ. ಇದರ ಜೊತೆಗೆ, ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ವಾಹನಗಳ ಬದಲಿಗೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ.ಭಾರತವು ಕಚ್ಚಾ ತೈಲ, ಚಿನ್ನ ಹಾಗೂ ಅಡುಗೆ ಎಣ್ಣೆ ಸೇರಿದಂತೆ ಹಲವು ಅಗತ್ಯ ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಇದರಿಂದ ದೇಶದ ವಿದೇಶಿ ವಿನಿಮಯ ಸಂಗ್ರಹದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ ಎಂದು ಪ್ರಧಾನಿ ಮೋದಿ ಇತ್ತೀಚೆಗೆ ಜನತೆಗೆ ನೀಡಿದ ಸಂದೇಶದಲ್ಲಿ ಉಲ್ಲೇಖಿಸಿದ್ದರು. ಈ ಹಿನ್ನೆಲೆ, ಜನರು ಅನಗತ್ಯ ಖರೀದಿ ಹಾಗೂ ಇಂಧನ ಬಳಕೆಯನ್ನು…
ಕಾಸರಗೋಡು: ದಿಢೀರ್ ಬೀಸಿದ ಬೇಸಿಗೆಯ ಅಕಾಲಿಕ ಗಾಳಿ ಮಳೆಗೆ ಮರವೊಂದು ಮುರಿದು ವಿದ್ಯುತ್ ಕಂಬ ಸಹಿತ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದ್ದು, ಕಾರು ಚಲಾಯಿಸುತ್ತಿದ್ದ ಪೆರ್ಲದ ವೈದ್ಯರೋರ್ವರು ಅದೃಷ್ಠವಶಾತ್ ಭಾರೀ ಅಪಾಯದಿಂದ ಪಾರಾದ ಘಟನೆ ಮಂಗಳವಾರ ಸಂಜೆ ಬಾಡೂರು-ಪೆರ್ಲ ರಸ್ತೆಯ ಮಣಿಯಂಪಾರೆ ಮಸೀದಿ ಬಳಿ ಸಂಭವಿಸಿದೆ. ಸಂತ್ರಸ್ತ ವೈದ್ಯರು ಸೀತಾಂಗೋಳಿ ಹಾಗೂ ಬಾಡೂರುಪದವಿನಲ್ಲಿ ಕ್ಲಿನಿಕ್ ನಡೆಸುತ್ತಿದ್ದಾರೆ. ಮಂಗಳವಾರ ಸಂಜೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಅವರು ತಮ್ಮ ಕ್ಲಿನಿಕ್ ಅನ್ನು ಬೇಗನೇ ಮುಚ್ಚಿ ಮನೆಗೆ ಮರಳುತ್ತಿದ್ದರು. ಅವರು ಬಾಡೂರು-ಪೆರ್ಲ ರಸ್ತೆಯಲ್ಲಿ ಚಲಿಸುತ್ತಿದ್ದಾಗ, ಭೀಕರ ಗಾಳಿಗೆ ಬೃಹತ್ ಮರವೊಂದು ಬೇರು ಸಮೇತ ಅವರ ಕಾರಿನ ಮೇಲೆ ಉರುಳಿ ಬಿದ್ದಿದೆ. ಮರದ ಜೊತೆಗೆ ಪಕ್ಕದಲ್ಲಿದ್ದ ವಿದ್ಯುತ್ ಕಂಬವೂ ಕಾರಿನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ವೈದ್ಯರು ಯಾವುದೇ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದು, ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಮರ ಮತ್ತು ಕಂಬ ಬಿದ್ದ ರಭಸಕ್ಕೆ ವಿದ್ಯುತ್ ತಂತಿಗಳು ತುಂಡಾಗಿ ರಸ್ತೆಯುದ್ದಕ್ಕೂ ಹರಡಿಕೊಂಡಿದ್ದವು. ಇದರಿಂದ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಅಪಾಯಕಾರಿ…
ನವದೆಹಲಿ: ಮೇ 3 ರಂದು ನಡೆದ ನೀಟ್-ಯುಜಿ 2026 ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಅನ್ನು ಪೊಲೀಸರು ಬಂಧಿಸಿದ್ದಾರೆ. 2026 ರ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯ ತನಿಖೆ ಮತ್ತಷ್ಟು ಚುರುಕುಗೊಳಿಸಿರುವ ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಸಂಘಟಿತ ಅಂತರರಾಜ್ಯ ಜಾಲವನ್ನು ಪತ್ತೆಹಚ್ಚಲಾಗಿದೆ. ಪ್ರಕರಣದ ಹಿಂದಿನ ಮಾಸ್ಟರ್ ಮೈಂಡ್ ಮನೀಶ್ ಯಾದವ್ ಎಂಬಾತನನ್ನು ಜೈಪುರದಲ್ಲಿ ಅರೆಸ್ಟ್ ಮಾಡಲಾಗಿದೆ ಎಂದು ತಿಳಿಸಿದೆ.ಪರೀಕ್ಷಾ ಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಜಾಲವನ್ನು ಸಂಘಟಿಸುವಲ್ಲಿ ಯಾದವ್ ಪ್ರಮುಖ ಪಾತ್ರ ವಹಿಸಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಮತ್ತೊಬ್ಬ ಆರೋಪಿ ರಾಕೇಶ್ ಮಾಂಡವಾರಿಯಾನನ್ನು ಸಹ ಬಂಧಿಸಲಾಗಿದ್ದು, ಸೋರಿಕೆಯಾದ ಪ್ರಶ್ನೆ ಪತ್ರಿಕೆ ಪ್ರಸರಣ ಜವಾಬ್ದಾರಿ ಹೊತ್ತಿದ್ದ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ರಾಜಸ್ಥಾನ ಪೊಲೀಸ್ ವಿಶೇಷ ಕಾರ್ಯಾಚರಣೆ ತಂಡ ಮತ್ತು ಬಹು ರಾಜ್ಯಗಳ ಪೊಲೀಸ್ ತಂಡಗಳ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಇದುವರೆಗೆ ಐದು ರಾಜ್ಯಗಳಲ್ಲಿ ಸುಮಾರು ಒಂಬತ್ತು ಜನರನ್ನು ಬಂಧಿಸಲಾಗಿದೆ. ಸುಮಾರು 45…
ಅಹಲ್ಯಾನಗರ: ಚಲಿಸುತ್ತಿದ್ದ ರೈಲಿನ ಜನರಲ್ ಕಂಪಾರ್ಟ್‌ಮೆಂಟ್‌ನ ಜನದಟ್ಟಣೆಯ ನಡುವೆಯೇ ಉತ್ತರ ಪ್ರದೇಶ ಮೂಲದ ಮಹಿಳೆಯೊಬ್ಬರು ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಿದ್ದಾರೆ. ರೈಲ್ವೆ ರಕ್ಷಣಾ ಪಡೆಯ (RPF) ‘ಆಪರೇಷನ್ ಮಾತೃಶಕ್ತಿ’ ಮತ್ತು ಸಹ ಪ್ರಯಾಣಿಕರ ತ್ವರಿತ ಸ್ಪಂದನೆಯಿಂದಾಗಿ ಅನಾಹುತವೊಂದು ತಪ್ಪಿದಂತಾಗಿದೆ. ಉತ್ತರ ಪ್ರದೇಶದ 28 ವರ್ಷದ ರುಖ್ಸಾನಾ ಖಾತುನ್ ಮತ್ತು ಅವರ ಪತಿ ಜಮೀಲ್ ಬೆಲಾವರ್ ಶನಿವಾರ ಸಂಜೆ ಪುಣೆ-ಸುಪೌಲ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಪುಣೆಯಿಂದ ಬಿಹಾರದ ಸುಪೌಲ್ ಜಿಲ್ಲೆಯ ಕಡೆಗೆ ಸಾಗುತ್ತಿತ್ತು. ಅಹಲ್ಯಾನಗರ ನಿಲ್ದಾಣ ಸಮೀಪಿಸುತ್ತಿದ್ದಂತೆ ರುಖ್ಸಾನಾಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತು. ಜನರಲ್ ಕೋಚ್‌ನಲ್ಲಿ ಕಾಲಿಡಲೂ ಜಾಗವಿಲ್ಲದಷ್ಟು ಜನದಟ್ಟಣೆ ಇದ್ದುದರಿಂದ ದಂಪತಿಗಳು ದಿಕ್ಕುತೋಚದಂತಾಗಿದ್ದರು. ರಕ್ಷಣೆಗೆ ಧಾವಿಸಿದ ಆರ್‌ಪಿಎಫ್: ವಿಷಯ ತಿಳಿಯುತ್ತಿದ್ದಂತೆಯೇ ಮಧ್ಯ ರೈಲ್ವೆಯ ಆರ್‌ಪಿಎಫ್ ಕಾನ್‌ಸ್ಟೆಬಲ್ ಸೋಮನಾಥ್ ಪಠಾಡೆ ಮತ್ತು ಹೆಡ್ ಕಾನ್‌ಸ್ಟೆಬಲ್ ವಿಶ್ವಜೀತ್ ಕಾಕ್ಡೆ ಅವರು ತಕ್ಷಣವೇ ಕೋಚ್‌ಗೆ ಧಾವಿಸಿದರು. ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಸಮಯವಿಲ್ಲದ ಕಾರಣ, ರೈಲಿನಲ್ಲೇ ಹೆರಿಗೆ ಮಾಡಿಸಲು ನಿರ್ಧರಿಸಲಾಯಿತು. ಮಹಿಳಾ ಪ್ರಯಾಣಿಕರ ನೆರವಿನೊಂದಿಗೆ ಬಟ್ಟೆಗಳ…
ಯಾದಗಿರಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಮನೆಯ ಗೋಡೆ ಕುಸಿದು ಎಂಟು ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ಸೋಮವಾರ ನಡೆದಿದೆ. ಗ್ರಾಮದ ಅಕ್ಷತಾ (8) ಮೃತಪಟ್ಟ ದುರ್ದೈವಿ. ಬಾಲಕಿ ಮನೆಯ ಅಂಗಳದಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಅಡುಗೆ ಮನೆಯ ಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಗೋಡೆಯ ಅವಶೇಷಗಳ ಅಡಿಯಲ್ಲಿ ಸಿಲುಕಿದ ಅಕ್ಷತಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ. ಘಟನೆಯಲ್ಲಿ ಇತರ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಯಾದಗಿರಿಯ ‘ಯೀಮ್ಸ್’ (YIMS) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಜಮಖಂಡಿ: ಜೈಲಿನಲ್ಲಿ ನಡೆಯುತ್ತಿದ್ದ ಕೈದಿಗಳ ನಡುವಿನ ಗದ್ದಲವನ್ನು ನಿಯಂತ್ರಿಸಲು ಹೋದ ಜೈಲರ್ ಮೇಲೆ ಕೈದಿಗಳೇ ಹಿಗ್ಗಾಮುಗ್ಗಾ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ಜಮಖಂಡಿ ಹೊರವಲಯದ ಕಾರಾಗೃಹದಲ್ಲಿ ನಡೆದಿದೆ. ಹಲ್ಲೆಯಿಂದಾಗಿ ಜೈಲರ್ ವಿ.ಡಿ. ಕುಂಬಾರ ಅವರ ಎಡಗೈ ಮೂಳೆ ಮುರಿತವಾಗಿದ್ದು , ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪಡಿತರ ಅಕ್ಕಿ ಅಕ್ರಮ ಸಾಗಾಟ ಪ್ರಕರಣದಲ್ಲಿ ಮಹಾಲಿಂಗಪುರ ಪೊಲೀಸರಿಂದ ಬಂಧಿತರಾಗಿದ್ದ ಜಾಕೀರ್ ಹುಸೇನ್ ಮಕಾಂದಾರ್ ಮತ್ತು ಗ್ಯಾಂಗ್ ಜಮಖಂಡಿ ಜೈಲಿನಲ್ಲಿದ್ದರು. ನಿನ್ನೆ ಸಂಜೆ ಇದೇ ಗ್ಯಾಂಗ್‌ನ ಸದಸ್ಯರ ನಡುವೆ ಜೈಲಿನಲ್ಲಿ ಗಲಾಟೆ ಆರಂಭವಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಜಗಳ ಬಿಡಿಸಲು ಜೈಲರ್ ವಿ.ಡಿ. ಕುಂಬಾರ ಅವರು ಮಧ್ಯಪ್ರವೇಶಿಸಿದ್ದರು. ಈ ವೇಳೆ ಕೆರಳಿದ ಕೈದಿಗಳು ಜೈಲರ್ ಮೇಲೆಯೇ ಎರಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಆರೋಪಿಗಳನ್ನು ಜಾಕೀರ್ ಹುಸೇನ್ ಮಕಾಂದಾರ್, ಫಯಾಜ್ ಮಕಾಂದಾರ್, ಅಶೋಕ ನಾಯ್ಕೊಡಿ, ಅರ್ಫಾತ್ ತಾಳಿಕೋಟಿ ಎಂದು ಗುರುತಿಸಲಾಗಿದೆ. ಜೈಲರ್ ಅವರ ಮೇಲೆ ಗುಂಪು ದಾಳಿ ನಡೆಸಿದ ಕೈದಿಗಳು ಅವರನ್ನು ಮನಬಂದಂತೆ ಥಳಿಸಿದ್ದಾರೆ. ಸದ್ಯ ಗಾಯಾಳು…
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಸೇರಿದಂತೆ ರಾಜ್ಯದ ಕಾರಾಗೃಹಗಳಲ್ಲಿ ಸರಣಿ ಅಕ್ರಮಗಳು ಬಯಲಾದ ಬೆನ್ನಲ್ಲೇ, ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಜೈಲಿನಲ್ಲಿ ಕೈದಿಗಳು ಮತ್ತು ಸಿಬ್ಬಂದಿಯ ಪ್ರತಿಯೊಂದು ಚಲನವಲನವನ್ನು ಪತ್ತೆಹಚ್ಚಲು ‘ಪ್ರಿಸನರ್ಸ್ ಟ್ರ್ಯಾಕಿಂಗ್ ಮೂವ್‌ಮೆಂಟ್’ ಮತ್ತು ಬಯೋಮೆಟ್ರಿಕ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಪ್ರಾಯೋಗಿಕವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಈ ತಂತ್ರಜ್ಞಾನ ಆಧಾರಿತ ಕಣ್ಗಾವಲು ವ್ಯವಸ್ಥೆ ಜಾರಿಗೆ ಬಂದಿದ್ದು, ಇನ್ನು ಮುಂದೆ ಜೈಲಿನೊಳಗೆ ಯಾರು, ಎಲ್ಲಿ ಹೋಗುತ್ತಿದ್ದಾರೆಂಬುದು ಸೆಕೆಂಡ್ ಟು ಸೆಕೆಂಡ್ ದಾಖಲಾಗಲಿದೆ. ಅಕ್ರಮಗಳಿಗೆ ತಂತ್ರಜ್ಞಾನದ ಮದ್ದು ಪರಪ್ಪನ ಅಗ್ರಹಾರ ಜೈಲಿನಲ್ಲಿ ಈ ಹಿಂದೆ ನಡೆದಿದ್ದ ಆತಂಕಕಾರಿ ಘಟನೆಗಳು ಈ ಕಠಿಣ ನಿರ್ಧಾರಕ್ಕೆ ಪ್ರೇರಣೆಯಾಗಿವೆ. ಇತ್ತೀಚೆಗಷ್ಟೇ ಜೈಲಿನ ಮೇಲೆ ದಾಳಿ ನಡೆದಾಗ ಕೈದಿಗಳು ಅಧಿಕಾರಿಗಳ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿತ್ತು. ಅಲ್ಲದೆ, ದಾಳಿಯ ವೇಳೆ 200ಕ್ಕೂ ಹೆಚ್ಚು ಮೊಬೈಲ್‌ಗಳು ಪತ್ತೆಯಾಗಿ ಜೈಲಿನ ಭದ್ರತೆಯನ್ನು ಅಣಕಿಸಿದ್ದವು. ಮಗದೊಂದು ಪ್ರಕರಣದಲ್ಲಿ ಕೈದಿಗಳು ಮೊಬೈಲ್ ಮೂಲಕ ವಿಡಿಯೋ ಚಿತ್ರೀಕರಿಸಿ ಡಿಜಿಪಿ ಹೆಸರನ್ನೇ…










